Tag: pakistan government

  • ಭಾರತ ಚಂದ್ರನನ್ನು ತಲುಪಿದೆ, ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ: ಪಾಕ್ ಸಂಸದ ಕಿಡಿ

    ಭಾರತ ಚಂದ್ರನನ್ನು ತಲುಪಿದೆ, ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ: ಪಾಕ್ ಸಂಸದ ಕಿಡಿ

    ಇಸ್ಲಾಮಾಬಾದ್: ಭಾರತ (India) ಚಂದ್ರನನ್ನು ತಲುಪಿದೆ. ಆದರೆ ನಮ್ಮ ಮಕ್ಕಳು ಇಲ್ಲಿ ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದು ಪಾಕ್ ಆಡಳಿತ ವ್ಯವಸ್ಥೆ ಬಗ್ಗೆ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (MQM-P) ಸಂಸದ ಸೈಯದ್ ಮುಸ್ತಫಾ ಕಮಾಲ್ (Syed Mustafa Kamal) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಾಕ್ (Pakistan) ಆಡಳಿತ ವ್ಯವಸ್ಥೆಗೆ ಸಂಸತ್‌ನಲ್ಲೇ ಕೆಂಡವಾದ ಸಂಸದ, ಭಾರತದ ಬೆಳವಣಿಗೆ ಶ್ಲಾಘಿಸುತ್ತಾ ಪಾಕ್ ದುರಾಡಳಿತದ ಬಗ್ಗೆ ಟೀಕೆ ಮಾಡಿದ್ದಾರೆ. ಭಾರತವು ಚಂದ್ರನನ್ನು ತಲುಪಿದೆ ಎಂಬ ಸುದ್ದಿಯನ್ನು ನಾವು ಟಿವಿ ಪರದೆಗಳಲ್ಲಿ ನೋಡಿದ ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ತೆರೆದ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂಬ ಸುದ್ದಿ ಬರುತ್ತದೆ. ಕರಾಚಿಯಲ್ಲಿನ ಶುದ್ಧ ನೀರಿನ ಕೊರತೆಯನ್ನು ಉಲ್ಲೇಖಿಸಿ, ಕರಾಚಿಯು ಪಾಕಿಸ್ತಾನ ಆದಾಯದ ಎಂಜಿನ್ ಆಗಿದೆ. ದೇಶದಲ್ಲಿ ಎರಡು ಬಂದರುಗಳಿವೆ, ಎರಡೂ ಕರಾಚಿಯಲ್ಲಿವೆ. ಒಂದು ರೀತಿಯಲ್ಲಿ ಇದು ದೇಶದ ಹೆಬ್ಬಾಗಿಲು. ಆದರೆ ಕರಾಚಿಗೆ 15 ವರ್ಷಗಳಿಂದ ಶುದ್ಧ ನೀರು ಸಿಕ್ಕಿಲ್ಲ. ನೀರು ಬಂದಾಗಲೆಲ್ಲ ಟ್ಯಾಂಕರ್ ಮಾಫಿಯಾ ವಶವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ವೀಡಿಯೋ ಕಾಲ್‍ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ನೇಣಿಗೆ ಬಲಿಯಾದ ಜಿಮ್ ಟ್ರೈನರ್

    ಸಿಂಧ್ ಪ್ರಾಂತ್ಯದಲ್ಲಿ ಸುಮಾರು 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಸುಮಾರು 2.6 ಕೋಟಿಯಾಗಿದೆ. ಒಟ್ಟು 48 ಸಾವಿರ ಶಾಲೆಗಳಿವೆ. ಆದರೆ ಈ ಪೈಕಿ 11 ಸಾವಿರ ಶಾಲೆಗಳು ಖಾಲಿ ಇವೆ ಎಂದು ವರದಿ ತೋರಿಸುತ್ತದೆ. ದೇಶದಲ್ಲಿ 2.62 ಕೋಟಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮನೆಯ ಬಾತ್‌ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

  • ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ವಿನಾಶ ಖಚಿತ – ಇಮ್ರಾನ್ ಖಾನ್

    ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ವಿನಾಶ ಖಚಿತ – ಇಮ್ರಾನ್ ಖಾನ್

    ಇಸ್ಲಾಮಾಬಾದ್: ಸರ್ಕಾರ ನನ್ನ ಹಾಗೂ ಪಿಟಿಐ ಬೆಂಬಲಿಗರ ವಿರುದ್ಧ ಸೇನೆಯನ್ನು ಎತ್ತಿಕಟ್ಟಿದೆ. ಪಾಕಿಸ್ತಾನ (Pakistan) ದುರಂತ ಅಂತ್ಯದತ್ತ ದಾಪುಗಾಲಿಡುತ್ತಿದ್ದು, ಇಬ್ಭಾಗವಾಗುವ ಸನಿಹದಲ್ಲಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಎಚ್ಚರಿಸಿದ್ದಾರೆ.

    ಆಡಳಿತಾರೂಢ ಸರ್ಕಾರದ ಕಾರ್ಯವೈಖರಿ ವಿರುದ್ಧ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಲೆದೋರಿರುವ ರಾಜಕೀಯ ಅಸ್ಥಿರತೆ ಪಾಕಿಸ್ತಾನವನ್ನ ಅಪಾಯಕ್ಕೆ ದೂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಿನಾಶ ಖಚಿತ. ಚುನಾವಣೆ ನಡೆಸಿ ರಾಜಕೀಯ ಅನಿಶ್ಚಿತತೆ ಹೋಗಲಾಡಿಸದಿದ್ದರೆ ದೇಶ ವಿಭಜನೆಯ ಹಾದಿ ಹಿಡಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಸೃಷ್ಟಿಯಾದಂತೆ ಮತ್ತೊಂದು ಪಾಕಿಸ್ತಾನ ಉದಯವಾಗಬಹುದು. ಪ್ರಸ್ತುತ ಎದುರಾಗಿರುವ ಎಲ್ಲಾ ಸಮಸ್ಯೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವುದೊಂದೇ ಪರಿಹಾರ ಎಂದಿದ್ದಾರೆ. ಇದನ್ನೂ ಓದಿ: ಹೆಚ್ಚು ಮಕ್ಕಳನ್ನ ಹೆರಲು ಚೀನಾ ಪ್ರೋತ್ಸಾಹ – 20ಕ್ಕೂ ಹೆಚ್ಚು ನಗರಗಳಲ್ಲಿ ಹೊಸ ಯೋಜನೆ ಜಾರಿಗೆ ಪ್ಲ್ಯಾನ್

    ಹಾಗಾಗಿ, ಆಡಳಿತಾರೂಢ ಸರ್ಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸುತ್ತಿದೆ. ಅಧಿಕಾರದಲ್ಲಿರುವ ನಾಯಕರು ಲೂಟಿ ಮಾಡಿದ ಸಂಪತ್ತನ್ನು ರಕ್ಷಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದಾರೆ. ರಾಜಕೀಯ ಎದುರಾಳಿಗಳ ವಿರುದ್ಧ ಸೇನೆಯನ್ನ ಛೂ ಬಿಡುವ ಮೂಲಕ ಅದಕ್ಕೂ ಕೆಟ್ಟ ಹೆಸರು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

  • ಪಾಕ್ ಮಾಜಿ ಪ್ರಧಾನಿ ವಿರುದ್ಧ ಸೆಕ್ಸ್ ಕಾಲ್ ಆಡಿಯೋ ಬಾಂಬ್

    ಪಾಕ್ ಮಾಜಿ ಪ್ರಧಾನಿ ವಿರುದ್ಧ ಸೆಕ್ಸ್ ಕಾಲ್ ಆಡಿಯೋ ಬಾಂಬ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ (Election) ಕೆಲವೆ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imran Khan) ಮತ್ತೊಂದು ಸಂಕಷ್ಟ ಬಂದೊದಗಿದೆ. ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಬ್ಬರ ಜೊತೆ ಇಮ್ರಾನ್ ಖಾನ್ ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದರು ಎನ್ನುವ ಆಡಿಯೋ ತುಣುಕೊಂದು ಸೋರಿಕೆಯಾಗಿದೆ (Audio Viral).

    ಪಾಕಿಸ್ತಾನದ ಪತ್ರಕರ್ತ (Pakistan Journalist) ಸಯ್ಯದ್ ಅಲಿ ಹೈದರ್, ಯೂಟ್ಯೂಬ್‌ನಲ್ಲಿ (Youtube) ಈ ಆಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಆಡಿಯೋ ಪಾಕಿಸ್ತಾನ ಪ್ರಧಾನಿ ಕಚೇರಿಯಿಂದಲೇ ಸೃಷ್ಟಿಯಾಗಿದೆ ಎಂದು ಕೆಲವು ವರದಿಗಳು ಆರೋಪಿಸಿವೆ. ಇದನ್ನೂ ಓದಿ: ಇಂಗ್ಲೆಂಡ್ ರಾಜನ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ

    ಸದ್ಯ ಇಮ್ರಾನ್ ಖಾನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇಮ್ರಾನ್ ಖಾನ್ ಈ ವರ್ಷದ ಆರಂಭದಲ್ಲಿ ಅಧಿಕಾರ ಕಳೆದುಕೊಂಡ ನಂತರ ಈ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ. ಇದು ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್- ಇ- ಇನ್ಸಾಫ್ (PTI) ಪಕ್ಷಕ್ಕೆ ತೀವ್ರ ಕಸಿವಿಸಿ ಉಂಟುಮಾಡಿದೆ. ಆದ್ರೆ ಪಿಟಿಐ ಪಕ್ಷದ ಪ್ರಮುಖರು ಇದು ನಕಲಿ ಆಡಿಯೋ ಎಂದು ಪ್ರತಿಪಾದಿಸಿದ್ದಾರೆ. ಪಕ್ಷದ ಮುಖ್ಯಸ್ಥರನ್ನು ಟಾರ್ಗೆಟ್ ಮಾಡಲು ಸರ್ಕಾರವು ನಕಲಿ ವೀಡಿಯೋ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.

    ಇಮ್ರಾನ್ ಖಾನ್ ಹಾಗೂ ಮಹಿಳೆ (Women) ಜತೆ ದೂರವಾಣಿಯಲ್ಲಿ ಆಪ್ತ ಮಾತುಕತೆ ನಡೆದಿದೆ ಎಂದು ಆಡಿಯೋ ಕ್ಲಿಪ್‌ಗಳ ಮೂಲಕ ಆರೋಪಿಸಲಾಗಿದೆ. ಇದರಲ್ಲಿ ಇಮ್ರಾನ್ ಖಾನ್, ತಾವಿಬ್ಬರೂ ಭೇಟಿಯಾಗಬೇಕು ಎಂದು ಒತ್ತಾಯಿಸಿದ್ದು, ಅಶ್ಲೀಲ ಪದಗಳನ್ನು ಬಳಸಿರುವುದು ದಾಖಲಾಗಿದೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಇಮ್ರಾನ್ ಖಾನ್ ಅವರ ಧ್ವನಿಯನ್ನು ಹೋಲುವ ಆಡಿಯೋದಲ್ಲಿ ಭೇಟಿಯ ಕುರಿತಂತೆ ಚರ್ಚೆ ನಡೆದಿದೆ. ಮರುದಿನ ಭೇಟಿಯಾಗುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಆದರೆ ತನ್ನ ಕುಟುಂಬದವರನ್ನು ಭೇಟಿ ಮಾಡಿಬೇಕಿರುವುದರಿಂದ ಅದನ್ನು ನಂತರ ಖಚಿತಪಡಿಸುವುದಾಗಿ ಧ್ವನಿ ಹೇಳಿದೆ. ನನ್ನ ಕುಟುಂಬ ಹಾಗೂ ಮಕ್ಕಳು ಬರುತ್ತಿದ್ದಾರೆ. ಅವರು ತಡವಾಗಿ ಬರುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಿನಗೆ ನಾಳೆ ಭೇಟಿಯಾಗುವ ಬಗ್ಗೆ ತಿಳಿಸುತ್ತೇನೆ’ ಎಂಬ ಸಂಭಾಷಣೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

    ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸರ್ಕಾರ ಪತನವಾಗುವ ಮುನ್ಸೂಚನೆಗಳು ವ್ಯಕ್ತವಾಗುತ್ತಿವೆ. ಇಮ್ರಾನ್‌ ಖಾನ್‌ ಅವರು ನೂರಕ್ಕೆ ನೂರರಷ್ಟು ತೊಂದರೆಗೆ ಸಿಲುಕಿದ್ದಾರೆ ಎಂದು ಮಿತ್ರ ಪಕ್ಷದವರು ಹೇಳುತ್ತಿದ್ದಾರೆ.

    ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರು ಪ್ರಮುಖ ಮಿತ್ರಪಕ್ಷಗಳು ಅವರ ಸಂಪುಟದಿಂದ ಹೊರಬರಲಿರುವುದರಿಂದ ಸಂಸತ್ತಿನಲ್ಲಿ ಸರ್ಕಾರ ಬಹುಮತ ಕಳೆದುಕೊಳ್ಳುವ ಅಂಚಿನಲ್ಲಿದೆ ಎಂದು ಸರ್ಕಾರವನ್ನು ಬೆಂಬಲಿಸುವ ಪಕ್ಷದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    PAK

    ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಅವಿಶ್ವಾಸ ಮತದಲ್ಲಿ ವಿರೋಧ ಗುಂಪಿಗೆ ಬೆಂಬಲವನ್ನು ಹೆಚ್ಚಿಸುತ್ತದೆ ಎಂದು ಸಂದರ್ಶನವೊಂದರಲ್ಲಿ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವೈಡ್ ಪಕ್ಷದ ಚೌಧರಿ ಪರ್ವೇಜ್ ಇಲಾಹಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಮಿತ್ರ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಉಳಿಯುವಂತೆ ಮನವರಿಕೆ ಮಾಡುವ ಜವಾಬ್ದಾರಿ ಈಗ ಇಮ್ರಾನ್ ಖಾನ್ ಅವರ ಮೇಲಿದೆ. ಒಟ್ಟಾರೆ ಇಮ್ರಾನ್‌ ಖಾನ್‌ ಶೇ.100ರಷ್ಟು ತೊಂದರೆಯಲ್ಲಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಖಾನ್ ಅವರು ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅವಿಶ್ವಾಸ ಮತವನ್ನು ಕರೆಯುವಂತೆ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್‌ಗೆ ಕೇಳಿಕೊಂಡಿವೆ. ಮಾರ್ಚ್ 28, 30 ರ ನಡುವೆ ಶಾಸಕರು ಮತ ಚಲಾಯಿಸಬಹುದು ಎಂದು ಸರ್ಕಾರದ ಕೆಲವು ಸಚಿವರು ಹೇಳಿದ್ದಾರೆ.

    ಬಲೂಚಿಸ್ತಾನ್ ಅವಾಮಿ ಪಕ್ಷ 5 ಸ್ಥಾನಗಳನ್ನು ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನದ ಏಳು ಸದಸ್ಯರು ಪ್ರತಿಪಕ್ಷವನ್ನು ಬೆಂಬಲಿಸಬೇಕೇ ಅಥವಾ ಸರ್ಕಾರದಲ್ಲಿ ಉಳಿಯಬೇಕೇ ಎಂಬುದರ ಕುರಿತು ಜಂಟಿ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ.