Tag: pakistan flood

  • ಪಾಕಿಸ್ತಾನ | ಪ್ರವಾಹದಲ್ಲಿ ಕೊಚ್ಚಿ ಹೋದ 9 ಜನ – 18 ಸದ್ಯಸರ ಕುಟುಂಬದ ದುರಂತ ಪ್ರವಾಸ

    ಪಾಕಿಸ್ತಾನ | ಪ್ರವಾಹದಲ್ಲಿ ಕೊಚ್ಚಿ ಹೋದ 9 ಜನ – 18 ಸದ್ಯಸರ ಕುಟುಂಬದ ದುರಂತ ಪ್ರವಾಸ

    ಇಸ್ಲಾಮಾಬಾದ್: ದಿಢೀರ್ ಪ್ರವಾಹದಿಂದಾಗಿ ಪ್ರವಾಸಕ್ಕೆಂದು ಹೋಗಿದ್ದ 18 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಘಟನೆ ಖೈಬರ್ ಪಖ್ತುಂಖ್ವಾ (Pakhtunkhwa) ಪ್ರಾಂತ್ಯದ ಸ್ವಾತ್ ನದಿಯಲ್ಲಿ (Swat River) ನಡೆದಿದೆ.

    18 ಸದಸ್ಯರನ್ನೊಳಗೊಂಡ ಕುಟುಂಬವು ಪ್ರವಾಸಕ್ಕೆಂದು ಸ್ವಾತ್ ನದಿಗೆ ತೆರಳಿದ್ದರು. ನದಿಯ ದಡದಲ್ಲಿ ಊಟ ಮಾಡುತ್ತಾ, ಆನಂದಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತಿನ ಮೇಲೆ ಕಾಲಿಟ್ಟು ಹತ್ಯೆಗೈದ ಪತ್ನಿ!

    ಘಟನೆ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಮಾತನಾಡಿ, ಮಕ್ಕಳು ತೀರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ನದಿಯಲ್ಲಿ ತುಂಬಾ ಕಡಿಮೆ ನೀರಿತ್ತು. ಇದ್ದಕ್ಕಿದ್ದಂತೆ ಪ್ರವಾಹದ ನೀರು ಬಂದು ಮಕ್ಕಳು ಕೊಚ್ಚಿಕೊಂಡು ಹೋದರು. ಯಾವುದೋ ಆಣೆಕಟ್ಟು ಒಡೆದು ಹೋದ ರೀತಿಯಲ್ಲಿ ನೀರು ಬಂದಿತ್ತು. ಆದರೆ ನಾವು ಎರಡು ಗಂಟೆಗಳಿಂತ ಹೆಚ್ಚು ಕಾಯುತ್ತಿದ್ದೆವು, ಯಾರು ಸಹಾಯಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.

    ಈ ಕುರಿತು ಅಧಿಕಾರಿಗಳು ಮಾತನಾಡಿ, ಜನ ಸಿಲುಕಿರುವ ಕುರಿತು ಬೆಳಿಗ್ಗೆ 9 ಗಂಟೆಗೆ ಮಾಹಿತಿ ಬಂದಿದೆ. ಪ್ರವಾಸಕ್ಕೆಂದು ತೆರಳಿದ್ದ ಜನರಿಗೆ ನೀರು ಬಿಡುಗಡೆಯಾಗುವ ಮಾಹಿತಿ ಇರಲಿಲ್ಲ. ಹೀಗಾಗಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ತಲುಪುವ ವೇಳೆಗೆ ನಾಲ್ಕು ಜನರು ಕೊಚ್ಚಿ ಹೋಗಿದ್ದರು.

    ಅವಘಡದ ವಿಡಿಯೋ ವೈರಲ್ ಆಗಿದ್ದು, ದಡದಲ್ಲಿ ನಿಂತ ಜನರ ಸುತ್ತಲೂ ನೀರು ಆವರಿಸಿತ್ತು. ಆ ಜನರಿಗೆ ಯಾವ ಕಡೆಗೂ ಹೋಗುವ ಅವಕಾಶವೇ ಇರಲಿಲ್ಲ ಎಂದು ಗೊತ್ತಾಗುತ್ತದೆ.

    ಕಳೆದ 36 ಗಂಟೆಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ 16 ಮಕ್ಕಳು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರು ಪೈಕಿ 13 ಜನರು ಪಂಜಾಬ್ ಪ್ರಾಂತ್ಯದವರು ಹಾಗೂ 19 ಜನರು ವಾಯುವ್ಯ ಖೈಬರ್ ಪಖ್ತುಂಖ್ವಾದವರು ಎಂದು ತಿಳಿದುಬಂದಿದೆ. ಘಟನೆಯ ಸಂಬAಧ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕೇಂದ್ರ ಮಾಹಿತಿ ಕಾರ್ಯದರ್ಶಿ ಶೇಖ್ ವಕಾಸ್ ಅಕ್ರಮ್, ಸ್ವಾತ್ ಆಡಳಿತ ಮತ್ತು ತುರ್ತು ರಕ್ಷಣಾ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಇದನ್ನೂ ಓದಿ: 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ

     

  • ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದಾಗಿ (pakistan flood) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡುವ ಮೂಲಕ ಹಿಂದೂ ಸಮುದಾಯವೊಂದು ಧಾರ್ಮಿಕ ಸೌಹಾರ್ದತೆ ಮೆರೆದಿದೆ.

    ಭೀಕರ ಪ್ರವಾಹವು ಪಾಕಿಸ್ತಾನದ 80 ಜಿಲ್ಲೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೇಶದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ ಸುಮಾರು 1,200 ತಲುಪಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ

    ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಎಂಬ ಪುಟ್ಟ ಗ್ರಾಮವು ಪ್ರವಾಹದಿಂದಾಗಿ ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ದೇಶದಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ನಾಶವಾಗಿವೆ. ಸ್ಥಳೀಯರಿಗೆ ಆಶ್ರಯ ಒದಗಿಸಲು ಬಾಬಾ ಮಧುದಾಸ್ ಮಂದಿರದ ಬಾಗಿಲು ತೆರೆಯಲಾಗಿದೆ.

    ಪಾಕಿಸ್ತಾನದಲ್ಲಿ ದಾಖಲೆಯ ಮಳೆ ಹಾಗೂ ಭಾರೀ ಪ್ರವಾಹವು ಹಸಿವು ಮತ್ತು ವಿವಿಧ ಕಾಯಿಲೆಗಳಿಗೆ ಕಾರಣವಾಗಿದೆ. ಇದು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಪ್ರವಾಹ ಪೀಡಿತರು ಅಗತ್ಯ ಸಂಪನ್ಮೂಲಗಳಿಂದ ವಂಚಿತರಾಗಿ ದುಸ್ತರ ಬದುಕು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ದೇಶದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇನ್ನೂ ಜನಜೀವನ ಸಹಜ ಸ್ಥಿತಿಗೆ ಬಾರದಂತಾಗಿದೆ. ಜನರು ಅನಿವಾರ್ಯವಾಗಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಗಿದೆ.

    Live Tv
    [brid partner=56869869 player=32851 video=960834 autoplay=true]