Tag: Pakistan Defence Minister

  • ಭಾರತದಿಂದ ದಾಳಿ ಭೀತಿ – ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು: ಪಾಕ್ ರಕ್ಷಣಾ ಸಚಿವ

    ಭಾರತದಿಂದ ದಾಳಿ ಭೀತಿ – ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು: ಪಾಕ್ ರಕ್ಷಣಾ ಸಚಿವ

    – ಭಾರತ & ಪಾಕ್ ನಡುವೆ ಸಂಘರ್ಷ ಸಾಧ್ಯತೆ ಹೆಚ್ಚಾಗ್ತಿದೆ ಎಂದ ಆಸೀಫ್

    ಇಸ್ಲಾಮಾಬಾದ್: ಭಾರತ ಮತ್ತು ಪಾಕ್ (India-Pakistan) ನಡುವಿನ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ. ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ (Khawaja Asif) ಹೇಳಿಕೆ ನೀಡಿದ್ದಾರೆ.

    ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇತರ ದೇಶಗಳು ಪ್ರಯತ್ನಗಳನ್ನು ಮಾಡಿದರೂ, ಕಾಲ ಕಳೆದಂತೆ ಭಾರತದೊಂದಿಗೆ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದಿನ ‘ನೀನು ಹಿಂದೂನಾ’ ಅಂತ ಒಬ್ಬ ನನಗೆ ಕೇಳಿದ್ದ – ಉಗ್ರನ ಬಗ್ಗೆ ಪ್ರವಾಸಿಗರೊಬ್ಬರ ಸ್ಫೋಟಕ ಹೇಳಿಕೆ

    ಇತ್ತೀಚಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ, ಕಾಲ ಕಳೆದಂತೆ ಸಂಘರ್ಷದ ಸಾಧ್ಯತೆ ಹೆಚ್ಚುತ್ತಿದ್ದು, ಕಡಿಮೆಯಾಗುತ್ತಿಲ್ಲ. ಆದರೂ ಅನೇಕ ದೇಶಗಳು ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.

    ಒಂದು ವೇಳೆ ಪಾಕಿಸ್ತಾನ ದಾಳಿ ಎದುರಿಸಿದರೆ ಸೂಕ್ತ ಪ್ರತಿಕ್ರಿಯೆ ನೀಡುವುದು ನಿಶ್ಚಿತ. ಭಾರತದಿಂದ ಉಲ್ಲಂಘನೆಯಾದರೆ, ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ಪ್ರತಿಕ್ರಿಯೆಯ ಸ್ವರೂಪವು ಭಾರತದ ಕ್ರಮದಿಂದ ನಿರ್ಧರಿಸಲ್ಪಡುತ್ತದೆ. ನಮ್ಮ ಪ್ರತಿಕ್ರಿಯೆಯ ಬಗ್ಗೆ ಯಾವುದೇ ಸಂದೇಹ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ

    ಸಂಘರ್ಷದ ಪರಿಸ್ಥಿತಿಯನ್ನು ತಪ್ಪಿಸಲು ದೇವರು ಸಹಾಯ ಮಾಡಲಿ. ಪಾಕಿಸ್ತಾನದ ಪ್ರತಿಕ್ರಿಯೆಯ ಬಗ್ಗೆ ನಾನು ಊಹಿಸಲು ಬಯಸುವುದಿಲ್ಲ. ಆದರೆ ಅದು ಭಾರತದ ಕ್ರಮಕ್ಕಿಂತ ದೊಡ್ಡದಾಗಿರುತ್ತದೆ ಎಂದು ತಿಳಿಸಿದ್ದಾರೆ.

  • ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!

    ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!

    ನವದೆಹಲಿ: ಕೇಂದ್ರ ಸರ್ಕಾರವು ಪಾಕಿಸ್ತಾನದ 16 ನ್ಯೂಸ್ ಚಾನಲ್ ಸೇರಿ ಯುಟ್ಯೂಬ್ ಬ್ಲಾಕ್ ಮಾಡಿದ ಬೆನ್ನಲ್ಲೇ ಇಂದು ಪಾಕ್ ರಕ್ಷಣಾ ಸಚಿವ (Pakistan Defence Minister) ಖವಾಜಾ ಆಸಿಫ್ (Khawaja Asif) ಅವರ ಎಕ್ಸ್ ಖಾತೆಯನ್ನು ನಿರ್ಬಂಧಿಸಿದೆ.

    ಖವಾಜಾ ಆಸಿಫ್ ಖಾಸಗಿ ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಬಹಿರಂಗ ಹೇಳಿಕೆ ನೀಡಿದ ನಂತರ ಭಾರತದಲ್ಲಿ ಅವರ ಎಕ್ಸ್ ಖಾತೆಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ

    ಪಾಕ್‌ನ 16 ಯೂಟ್ಯೂಬ್ ಚಾನಲ್ ಬ್ಯಾನ್
    ಪಹಲ್ಗಾಮ್‌ನ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ವಿರುದ್ಧ ಪ್ರಚೋದನಕಾರಿ ಹಾಗೂ ನಕಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಸೋಮವಾರ ಬ್ಯಾನ್ ಮಾಡಿದೆ. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ಡಾನ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ವಾಹಿನಿಗಳನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿಷೇಧಿಸಲಾಗಿದೆ. ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಸೇರಿದಂತೆ ಇತರ ಖಾತೆಗಳನ್ನು ಕೇಂದ್ರ ಗೃಹಸಚಿವಾಲಯದ ಶಿಫಾರಸ್ಸಿನ ಮೇಲೆ ನಿರ್ಬಂಧಿಸಿತ್ತು. ಇದನ್ನೂ ಓದಿ: ಚೀನಾದ ಹೋಟೆಲ್‌ನಲ್ಲಿ ಭಾರೀ ಬೆಂಕಿ – 22 ಮಂದಿ‌ ಸಾವು, ಮೂವರಿಗೆ ಗಾಯ

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವಹಿಸಿದೆ ಎಂದು ಶಂಕಿಸಿ ಭಾರತ ಪಾಕ್ ವಿರುದ್ಧ ತೀವ್ರ ಕ್ರಮ ಕೈಗೊಂಡಿದೆ. ನವದೆಹಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್ ಕೂಡಾ ಶಿಮ್ಲಾ ಗಡಿ ಒಪ್ಪಂದ ಸೇರಿ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.

  • ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಇಸ್ಲಾಮಾಬಾದ್: ಭಾರತೀಯ ವಾಯು ಪಡೆ ಏರ್‌ ಸ್ಟ್ರೈಕ್ ದಾಳಿ ನಡೆಸಿದಾಗ ಕತ್ತಲಾಗಿತ್ತು. ಹೀಗಾಗಿ ಪ್ರತಿದಾಳಿ ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ್ ತಿಳಿಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯಿಂದ ತತ್ತರಿಸಿದ್ದ ಪಾಕಿಸ್ತಾನ ಇಂದು ಸುದ್ದಿಗೋಷ್ಠಿ ಕರೆದು ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದೆ. ಈ ವೇಳೆ ಮಾಧ್ಯಮದವರು, ದಾಳಿಯ ವೇಳೆ ಪಾಕಿಸ್ತಾನ ವಾಯು ಪಡೆಯ ಏನು ಮಾಡುತ್ತಿತ್ತು? ಯಾಕೆ ಪ್ರತಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.

    ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದಾಳಿಯು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಡೆದಿದೆ. ಭಾರತೀಯ ವಾಯು ಪಡೆಯು ಗಡಿಯನ್ನು ದಾಟಿ 5 ರಿಂದ 6 ಕಿ.ಮೀ. ಒಳಗಡೆ ಪ್ರವೇಶಿಸಿ, ಬಾಂಬ್ ಹಾಕಿದ್ದಾರೆ. ರಾತ್ರಿ ದಾಳಿ ನಡೆದಿದ್ದರಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದಿಲ್ಲ. ಈ ವೇಳೆ ನಮ್ಮ ಏರ್‍ಫೋರ್ಸ್ ಸಿದ್ಧವಾಗಿತ್ತು. ಆದರೆ ಕತ್ತಲಾಗಿದ್ದರಿಂದ ಯುದ್ಧ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಹೇಲಿದ್ದಾರೆ.

    https://twitter.com/justgtin/status/1100385235928199170

    ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ವಾಯು ಪಡೆ ಸಿದ್ಧವಾಗಿದ್ದು, ನಮ್ಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯದಲ್ಲಿಯೇ ಭಾರತೀಯ ವಾಯುಪಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಪಕ್ಕದಲ್ಲೇ ಕುಳಿತಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಮಾತನಾಡಿ, ದಾಳಿಯ ಕುರಿತು ರಕ್ಷಣಾ ಸಚಿವಾಲಯದ ಜೊತೆಗೆ ಚರ್ಚೆ ಮಾಡಿದ್ದೇನೆ. ಪಾಕಿಸ್ತಾನ ವಾಯು ಪಡೆ ಪ್ರತಿದಾಳಿಗೆ ಸಿದ್ಧವಾಗಿದ್ದು, ಇದು ಬಹುರೂಪದ ದಾಳಿಯಾಗಿರುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv