Tag: Pakistan Cricket Team

  • `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    ಇಸ್ಲಮಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ವೇಗದ ಬೌಲಿಂಗ್ ದಾಖಲೆ ಬರೆದ ಪಾಕ್ ತಂಡದ ಆಟಗಾರ ಶೊಯೇಬ್ ಅಖ್ತರ್ (Shoaib Akhtar) ಅವರು ಭಗವದ್ಗೀತೆಯಲ್ಲಿ (Bhagavad Gita) ಉಲ್ಲೇಖಿಸಲಾದ `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ ಎಂಬ ಸಂದೇಶವನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

    ಅವರು ಹಂಚಿಕೊಂಡ ಸ್ಟೋರಿಯಯಲ್ಲಿ, ವಿಷ್ಣುವಿನ ಅವತಾರವಾದದ ಚಿತ್ರದೊಂದಿಗೆ, ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು ಎಂಬ ಸಂದೇಶ ಬರೆಯಲಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಲೋಕಸಭೆಯಿಂದ ಅಭಿನಂದನೆ

    ಈ ಸಂದೇಶ ಹಂಚಿಕೊಂಡಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ನಡೆದರೂ ಅವರು ತಮ್ಮ ಸ್ಟೋರಿಯನ್ನು ಡಿಲೀಟ್ ಮಾಡಿಲ್ಲ. ಇತ್ತೀಚೆಗೆ ಅವರು ಭಾರತ ವಿಶ್ವಕಪ್ ಗೆಲ್ಲಬೇಕು ಎಂದು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    2002 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಖ್ತರ್ ಬರೋಬ್ಬರಿ ಗಂಟೆ 161.3 ವೇಗದಲ್ಲಿ ಚೆಂಡೆಸೆದು ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆ ನಿರ್ಮಾಣವಾಗಿ 2 ದಶಕಗಳು ಕಳೆದರೂ ಇದನ್ನು ಮೀರುವಂತೆ ಯಾರಿಂದಲೂ ಬೌಲಿಂಗ್ ಮಾಡಲು ಇದುವರೆಗೂ ಯಾವ ಬೌಲರ್‌ಗಳಿಗೂ ಸಾಧ್ಯವಾಗಿಲ್ಲ.

    ಪಾಕ್ ಪರ 46 ಟೆಸ್ಟ್ ಪಂದ್ಯಗಳನ್ನಾಡಿರುವ ಶೊಯೇಬ್ ಅಖ್ತರ್ 178 ವಿಕೆಟ್ ಕಬಳಿಸಿದ್ದಾರೆ. 163 ಏಕದಿನ ಪಂದ್ಯಗಳಿಂದ 247 ವಿಕೆಟ್ ಪಡೆದರೆ, 15 ಟಿ20 ಪಂದ್ಯಗಳಿಂದ 19 ವಿಕೆಟ್ ಉರುಳಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

  • ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    – ಹಿಗ್ಗಾಮುಗ್ಗಾ ಜಾಡಿಸಿದ ಟೀಂ ಇಂಡಿಯಾ ಫ್ಯಾನ್ಸ್‌

    ಇಸ್ಲಾಮಾಬಾದ್‌: ಜೂನ್‌‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗಾಗಿ ಪಾಕ್‌ ಕ್ರಿಕೆಟ್‌ ತಂಡ (Pakistan Cricket Team) ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ. ಈ ಬಾರಿ ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಪಾಕ್‌ ತಂಡಕ್ಕೆ ಸೇನೆಯಿಂದ ಕಠಿಣ ತರಬೇತಿ ಕೊಡಿಸಲಾಗುತ್ತಿದೆ. ಕ್ರಿಕೆಟ್‌ ಆಟಗಾರರಿಗೆ ಗನ್ ತರಬೇತಿ (Gun Training) ನೀಡಲಾಗುತ್ತಿದೆ.

    ಪಾಕಿಸ್ತಾನ ಕ್ರಿಕೆಟಿಗರು ವಿಶ್ವಕಪ್‌ ಟೂರ್ನಿಗಾಗಿ ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲು ಹೊತ್ತು ನಡೆಯುವುದು, ಸೈನಿಕರನ್ನ ಬೆನ್ನ ಮೇಲೆ ಹೊತ್ತುಕೊಂಡು ಮುಂದೆ ಸಾಗುವ ಅಭ್ಯಾಸಗಳನ್ನ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟ್‌ ಫ್ಯಾನ್ಸ್‌ (Team India Cricket Fans) ಪಾಕ್‌ ಕ್ರಿಕೆಟಿಗರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅಲ್ಲದೇ ನೆಟ್ಟಿಗರು ಇದೆಲ್ಲಾ ಬೇಕಿತ್ತಾ? ಅನಗತ್ಯ ತರಬೇತಿ ನೀಡಿ ಆಟಗಾರರ ಸಮಯವನ್ನೂ ವ್ಯರ್ಥಮಾಡಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಟಿ20 ವಿಶ್ವಕಪ್​​ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದ್ರೆ ಪಾಕ್‌ ಸೇನೆಯು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್​ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ. ಆದರೆ ಪಾಕಿಸ್ತಾನ ಕ್ರಿಕೆಟ್​​ ಆಡಳಿತ ಮಂಡಳಿ ಇಂತಹ ಸಾಮಾನ್ಯ ಜ್ಞಾನವನ್ನೂ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಆಟಗಾರರಿಗೆ ಅಸಾಧಾರಣ ಸವಾಲು ನೀಡಿದೆ ಎಂದು ದೂರಿದ್ದಾರೆ.

    ಸೈನಿಕರಿಗೆ ಕೊಡುವ ತರಬೇತಿಯನ್ನು ಆಟಗಾರರಿಗೆ ಕೊಟ್ಟರೆ ಅವರು ಗಾಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಅವರಿಗೆ ಬೇರೆ ರೀತಿಯ ತರಬೇತಿ ನೀಡಬೇಕು ಎಂಬುದಾಗಿ ಕ್ರಿಕೆಟ್​ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

    ಟಿ20 ವಿಶ್ವಕಪ್‌ ಟೂರ್ನಿ ಎಲ್ಲಿ-ಯಾವಾಗ?
    2024ರ ಟಿ20 ವಿಶ್ವಕಪ್‌ ಟೂರ್ನಿಯು ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್‌ 1 ರಿಂದ ಜೂನ್‌ 29ರ ವರೆಗೆ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

    ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಯ್ಕೆಗೆ ಡೆಡ್‌ಲೈನ್‌ ಫಿಕ್ಸ್‌