Tag: Pakistan citizenship

  • ಪಾಕ್ ಪೌರತ್ವಕ್ಕೆ ಮುಂದಾದ ಸನ್‍ರೈಸರ್ಸ್ ಮಾಜಿ ಆಲ್‍ರೌಂಡರ್ ಡ್ಯಾರೆಲ್ ಸ್ಯಾಮಿ

    ಪಾಕ್ ಪೌರತ್ವಕ್ಕೆ ಮುಂದಾದ ಸನ್‍ರೈಸರ್ಸ್ ಮಾಜಿ ಆಲ್‍ರೌಂಡರ್ ಡ್ಯಾರೆಲ್ ಸ್ಯಾಮಿ

    – ಕಳಪೆ ಆಟದಿಂದ ಐಪಿಎಲ್‍ನಿಂದ ಹೊಬಿದ್ದಿದ್ದ ವಿಂಡೀಸ್ ಆಟಗಾರ
    – ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಮಿಂಚಿದ ಸ್ಯಾಮಿ

    ಇಸ್ಲಾಮಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಮಾಜಿ ಆಟಗಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಸ್ಯಾಮಿ ಪಾಕಿಸ್ತಾನದ ಪ್ರಜೆಯಾಗಲು ಸಜ್ಜಾಗಿದ್ದು, ಅವರಿಗೆ ಗೌರವ ಪೌರತ್ವ ನೀಡುವ ಅರ್ಜಿಯನ್ನು ಪಾಕ್ ಅಧ್ಯಕ್ಷರಿಗೆ ರವಾನಿಸಲಾಗಿದೆ.

    ಇಂಡಿಯನ್ ಪ್ರಿಮಿಯರ್ ಲೀಗ್‍ನಲ್ಲಿ ಕಳಪೆ ಪದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದ ಡ್ಯಾರೆಲ್ ಸ್ಯಾಮಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಸೇರಿ ಮಿಂಚಿದ್ದಾರೆ. ಉದ್ಯಮಿ ಪಿಎಸ್‍ಎಲ್‍ನ ಫ್ರ್ಯಾಂಚೈಸ್ ಜಾವೆದ್ ಅಫ್ರಿದಿ ಮಾಲೀಕತ್ವದ ಪೇಶ್ವರ್ ಜಲ್ಮಿ ತಂಡದಲ್ಲಿ ಡ್ಯಾರೆನ್ ನಾಯಕರಾಗಿದ್ದಾರೆ.

    ಡ್ಯಾರೆನ್‍ಗೆ ಗೌರವ ಪೌರತ್ವ ಕೊಡಿಸುವ ಇಡೀ ಪ್ರಕ್ರಿಯೆಯನ್ನು ಜಾವೆದ್ ಅಫ್ರಿದಿ ಆರಂಭಿಸಿದರು. ಜೊತೆಗೆ ವಿಂಡೀಸ್ ಕ್ರಿಕೆಟಿಗರ ಅರ್ಜಿಯನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ಕೂಡ ವ್ಯಕ್ತಪಡಿಸಿದ್ದಾರೆ.

    ‘ನಾವು ಡೇರೆನ್ ಸ್ಯಾಮಿ ಅವರಿಗೆ ಪಾಕಿಸ್ತಾನದ ಗೌರವ ಪೌರತ್ವಕ್ಕಾಗಿ ವಿನಂತಿಸಿದ್ದೇವೆ. ಈ ಸಂಬಂಧ ಅರ್ಜಿಯನ್ನು ಪಾಕಿಸ್ತಾನ ಅಧ್ಯಕ್ಷರಿಗೆ ನೀಡಿದ್ದೇವೆ. ಸ್ಯಾಮಿ ಪರ ಒಳ್ಳೆಯ ಮಾತುಗಳನ್ನು ಹೇಳಬೇಕೆಂದು ಪಿಸಿಬಿ ಅಧ್ಯಕ್ಷರಿಗೆ ವಿನಂತಿಸಿದ್ದೇನೆ. ಆದ್ದರಿಂದ ಗೌರವ ಪೌರತ್ವವನ್ನು ಅಧ್ಯಕ್ಷರು ಅನುಮೋದಿಸುತ್ತಾರೆ ಎಂಬ ಭರವಸೆ ಇದೆ. ಲಾಹೋರ್‍ನಲ್ಲಿ ಪಿಎಸ್‍ಎಲ್ ಸೀಸನ್ 2ರ ಅಂತಿಮ ಪಂದ್ಯವನ್ನು ನಡೆಸಲು ಪಿಸಿಬಿ ಪ್ರಯತ್ನಿಸುತ್ತಿದ್ದಾಗ ಸ್ಯಾಮಿ ಅವರ ಹೇಳಿಕೆಯಿಂದ ನಾವು ತುಂಬಾ ಭಾವುಕರಾಗಿದ್ದೇವು ಎಂದು ಜಾವೆದ್ ಅಫ್ರದಿ ಹೇಳಿದರು.

    ಡ್ಯಾರೆನ್ ಸ್ಯಾಮಿಗೆ ಪಾಕಿಸ್ತಾನದ ಪ್ರೀತಿ:
    ಸ್ಯಾಮಿ ಎಲ್ಲಾ ಐದು ಆವೃತ್ತಿಗಳಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್)ನ ಭಾಗವಾಗಿದ್ದಾರೆ. ಜೊತೆಗೆ ದೇಶ ಮತ್ತು ಅದರ ಜನರ ಮೇಲಿನ ಪ್ರೀತಿಯನ್ನು ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ತವರಿನಲ್ಲಿ ಮತ್ತೆ ಟೂರ್ನಿ ಆರಂಭಿಸಿದಾಗ ಸಾಥ್ ನೀಡಿದ ವಿದೇಶಿ ಆಟಗಾರರಲ್ಲಿ ಡ್ಯಾರೆನ್ ಸ್ಯಾಮಿ ಕೂಡ ಒಬ್ಬರು.

    ‘ಪಾಕಿಸ್ತಾನ ಬಗ್ಗೆ ಅಪಾರ ಪ್ರೀತಿ ಇದೆ. ಇದು ನನ್ನ ಭಾವನೆ. ನನ್ನ ಬಳಿ ಪಾಸ್‌ಪೋರ್ಟ್ ಇದೆಯೋ ಇಲ್ಲವೋ, ಈ ದೇಶಕ್ಕೆ ನನ್ನ ಕೊಡುಗೆ ಎಲ್ಲವನ್ನೂ ಒದಗಿಸುತ್ತದೆ ಎಂದು ಭಾವಿಸುತ್ತೇನೆ. ಈ ದೇಶದೊಂದಿಗೆ ನನ್ನನ್ನು ಸೇರಿಸಿಕೊಳ್ಳಲು ಪಾಸ್‌ಪೋರ್ಟ್ ಅಗತ್ಯವಿಲ್ಲ’ ಎಂದು ಸ್ಯಾಮಿ ಹೇಳಿದ್ದಾರೆ.

    ಪಿಎಸ್‍ಎಲ್ ಟ್ರೋಲ್:
    ಪಿಎಸ್‍ಎಲ್ 5ನೇ ಆವೃತ್ತಿಯಲ್ಲಿ ಒಟ್ಟು 6 ತಂಡಗಳಿದ್ದು, ಫೆಬ್ರವರಿ 20ರಿಂದ ಆರಂಭಗೊಂಡಿದೆ. ಆದರೆ ಚಾಂಪಿಯನ್‍ಶಿಪ್ ತಂಡಕ್ಕೆ 3.5 ಕೋಟಿ ರೂ. ನೀಡಲಾಗುತ್ತಿದೆ. ಇದೇ ವಿಚಾರವನ್ನು ಎತ್ತಿಕೊಂಡ ನೆಟ್ಟಿಗರು ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ.