Tag: Pakistan Army

  • ಸ್ನೈಪರ್‌ ಬಳಸಿ ಅಟ್ಯಾಕ್‌ – ಪಾಕ್‌ನಲ್ಲಿ ಉಗ್ರರ ದಾಳಿಗೆ 10 ಮಂದಿ ಪೊಲೀಸ್‌ ಅಧಿಕಾರಿಗಳು ಬಲಿ

    ಸ್ನೈಪರ್‌ ಬಳಸಿ ಅಟ್ಯಾಕ್‌ – ಪಾಕ್‌ನಲ್ಲಿ ಉಗ್ರರ ದಾಳಿಗೆ 10 ಮಂದಿ ಪೊಲೀಸ್‌ ಅಧಿಕಾರಿಗಳು ಬಲಿ

    ಇಸ್ಲಾಮಾಬಾದ್‌: ಪಾಕಿಸ್ತಾನದ ದೇರಾ ಇಸ್ಮಾಯಿಲ್ ಖಾನ್‌ನಗರದಲ್ಲಿರುವ ಚೋಡ್ವಾನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಉಗ್ರರಿಂದ ಭೀಕರ ಗುಂಡಿನ ದಾಳಿ (Terror Attack) ನಡೆದಿದ್ದು, 10 ಮಂದಿ ಪೊಲೀಸ್‌ ಅಧಿಕಾರಿಗಳು (Pakistan Cops) ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಸೋಮವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಉಗ್ರರು ಪೊಲೀಸ್‌ ಠಾಣೆ ಮೇಲೆ ಸ್ನೈಪರ್‌ಗಳಿಂದ ಗುಂಡಿನ ದಾಳಿ ನಡೆಸಿ ಠಾಣೆಯೊಳಗೆ ನುಗ್ಗಿದ್ದಾರೆ. ಪೊಲೀಸ್‌ ಠಾಣೆ ನುಗ್ಗಿದ ಬಳಿಕ ಹ್ಯಾಂಡ್ ಗ್ರೆನೇಡ್‌ಗಳನ್ನು (Hand Grenades) ಬಳಸಿ ದಾಳಿ ನಡೆಸಿದ್ದಾರೆ ಇದರಿಂದ 10 ಮಂದಿ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

    ಪೊಲೀಸ್‌ ಠಾಣೆಯಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ. ಇದೇ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ (National Elections) ನಡೆಯಲಿದ್ದು, ಅದಕ್ಕೂ ಮುನ್ನವೇ ಉಗ್ರರ ದಾಳಿ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಇದನ್ನೂ ಓದಿ: ಜೈಲು ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಬಾಂಬ್‌ ಬ್ಲಾಸ್ಟ್‌ – ಇಮ್ರಾನ್‌ ಖಾನ್‌ ಪಕ್ಷದ ಮೂವರ ದುರ್ಮರಣ

    ಇತ್ತೀಚೆಗೆ ಖೈಬರ್ ಪಖ್ತುಂಖ್ವಾ ಪ್ರದೇಶ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಿವೆ. ಕಳೆದ ಜನವರಿ 31ರಂದು ಅಫ್ಘಾನಿಸ್ತಾನ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ರೆಹಾನ್ ಝೆಬ್ ಖಾನ್ ಅವರನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು. ಈತನನ್ನು ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಬೆಂಬಲಿಗನಾಗಿದ್ದ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಆಸ್ಟ್ರೇಲಿಯಾಕ್ಕೆ 600 ಕೋಟಿ ಮೌಲ್ಯದ ಕೊಕೇನ್ ಅಕ್ರಮ ರಫ್ತು – ಭಾರತೀಯ ಮೂಲದ ದಂಪತಿಗೆ ಶಿಕ್ಷೆ

    ಅಲ್ಲದೇ ಪ್ರಕರಣವೊಂದರಲ್ಲಿ ಇಮ್ರಾನ್‌ ಖಾನ್‌ಗೆ ಜೈಲು ಶಿಕ್ಷೆ ವಿಧಿಸಿದ ಅದೇ ದಿನ (ಜ.30) ಬಲೂಚಿಸ್ತಾನ ಪ್ರದೇಶದಲ್ಲಿ ಬಾಂಬ್‌ ಬ್ಲಾಸ್ಟ್‌ ನಡೆದಿತ್ತು. ಮೂವರು ನಾಗರಿಕರು ದುರ್ಮರಣ ಹೊಂದಿದ್ದರು. ಈ ನಡುವೆ ಪಾಕಿಸ್ತಾನ ಸೇನೆ ಮತ್ತು ಭದ್ರತಾ ಏಜೆನ್ಸಿಗಳ ಸಹಾಯದಿಂದ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ಹೇಳಿದೆ. ಇದನ್ನೂ ಓದಿ: ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು

  • ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

    ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

    ಶ್ರೀನಗರ: 2 ವಾರಗಳ ಹಿಂದೆ ಭಾರತದ ಗಡಿ ಪ್ರವೇಶಕ್ಕೆ ಯತ್ನಿಸಿ, ಬಂಧಿತನಾಗಿದ್ದ ಭಯೋತ್ಪಾದಕ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಗುಂಡು ತಗುಲಿಸಿಕೊಂಡು ಬಂಧಿತನಾಗಿದ್ದ ಭಯೋತ್ಪಾದಕ ತಬ್ರಕ್ ಹುಸೇನ್ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನಿಗೆ ಪಾಕಿಸ್ತಾನಿ ಸೇನೆ ಇಲ್ಲಿ ಆತ್ಮಾಹುತಿ ಕಾರ್ಯಾಚರಣೆ ನಡೆಸಲು 30,000 ರೂ. ನೀಡಿದ್ದಾಗಿಯೂ, ತನ್ನೊಂದಿಗೆ 4-5 ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದ್ದಾಗಿಯೂ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಇದನ್ನೂ ಓದಿ: ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ

    ಪಾಕ್ ಆಕ್ರಮಿತ ಕಾಶ್ಮೀರದ ಸಬ್ಜ್‌ಕೋಟ್ ಗ್ರಾಮದ ನಿವಾಸಿ ಹುಸೇನೆ ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಒಪ್ಪಿಕೊಂಡಿದ್ದ. ಆತ ಕಳೆದ ತಿಂಗಳು ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವೇಳೆ ಗುಂಡಿನ ದಾಳಿಗೆ ಗಾಯಗೊಂಡಿದ್ದ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತನ್ನನ್ನು ಪಾಕ್ ಸೇನೆ ಕಳುಹಿಸಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಯೋತ್ಪಾದಕ ಹಲವು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟು ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಇಮ್ರಾನ್ ಖಾನ್ ಆರೋಪವನ್ನು ತಳ್ಳಿ ಹಾಕಿದ ಪಾಕ್ ಸೇನೆ

    ಇಮ್ರಾನ್ ಖಾನ್ ಆರೋಪವನ್ನು ತಳ್ಳಿ ಹಾಕಿದ ಪಾಕ್ ಸೇನೆ

    ಇಸ್ಲಾಮಾಬಾದ್: ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶಿ ಸಂಚು ರೂಪಿಸಲಾಗಿದೆ ಎಂದು ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಪಾಕ್ ಸೇನೆ ತಳ್ಳಿಹಾಕಿದೆ.

    ಇಮ್ರಾನ್ ಖಾನ್ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೂ ಮೊದಲು ತಮ್ಮ ಸರ್ಕಾರವನ್ನು ಉರುಳಿಸಲು ಅಮೆರಿಕ ಪಿತೂರಿ ನಡೆಸಿದೆ ಎಂದು ಆರೋಪ ಹೊರಿಸಿದ್ದರು. ಆದರೆ ಈ ಆರೋಪವನ್ನು ಸೇನೆ ತಿರಸ್ಕರಿಸಿದೆ. ಇದನ್ನೂ ಓದಿ: ಮಹಿಳಾ ರೋಗಿಗಳಿಗೆ ಕಿಸ್‌, ಹಗ್‌ ಮಾಡಿ ಲೈಂಗಿಕ ಅಪರಾಧ- ಭಾರತ ಮೂಲದ ವೃದ್ಧ ವೈದ್ಯನಿಗೆ ಶಿಕ್ಷೆ

    ಕಳೆದ ತಿಂಗಳು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಬಳಿಕ ನೀಡಿದ ಹೇಳಿಕೆಯಲ್ಲಿ ಪಿತೂರಿ ಎಂಬ ಪದವನ್ನು ಬಳಸಲಾಗಿಲ್ಲ. ಪತ್ರದಲ್ಲೂ ಪಿತೂರಿಯಂತಹ ಯಾವುದೇ ಅಂಶಗಳಿಲ್ಲ ಎಂದು ಪಾಕಿಸ್ತಾನಿ ಮಾಧ್ಯಮ ವಿಭಾಗದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್‌ನ ಮಹಾನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಗುರುವಾರ ತಿಳಿಸಿದ್ದಾರೆ.

    ಇಮ್ರಾನ್ ಖಾನ್ ಮಾರ್ಚ್ 27ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ತಮ್ಮ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ವಿರೋಧಿಸಿ ಮಾತನಾಡಿದ್ದರು. ತಾನು ರಷ್ಯಾಗೆ ಅಮೆರಿಕದ ಅನುಮತಿ ಇಲ್ಲದೇ ಭೇಟಿ ನೀಡಿದ್ದರಿಂದ, ತಮ್ಮನ್ನು ಪ್ರಧಾನಿ ಸ್ಥಾನದಿಂದ ತೆಗೆದು ಹಾಕಲು ಪಿತೂರಿ ನಡೆಸಲಾಗಿದೆ ಎಂದು ನೇರವಾಗಿ ಅಮೆರಿಕವನ್ನು ದೂಷಿಸಿದ್ದರು. ಆದರೆ ಈ ಆರೋಪವನ್ನು ಅಮೆರಿಕ ನಿರಾಕರಿಸಿತ್ತು. ಇದನ್ನೂ ಓದಿ: ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ಇದೀಗ ಇಮ್ರಾನ್ ಖಾನ್ ಅಮೆರಿಕದ ಮೇಲೆ ಹೊರಿಸಿದ್ದ ಆರೋಪವನ್ನು ಸೇನಾ ವಕ್ತಾರ ಜನರಲ್ ಬಾಬರ್ ಇಫ್ತಿಕರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇಮ್ರಾನ್ ಖಾನ್ ಆರೋಪದ ಬಳಿಕ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಕೂಡಾ ಅಮೆರಿಕದೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸುವ ಬಗ್ಗೆ ಮಾತನಾಡಿ ಸಮಸ್ಯೆಗಳನ್ನು ನಿಭಾಯಿಸಲು ಪ್ರಯತ್ನಿಸಿದ್ದರು.

    2018ರಲ್ಲಿ ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗುವಲ್ಲಿ ಸೇನೆ ಬಹು ದೊಡ್ಡ ಕೊಡುಗೆ ನೀಡಿತ್ತು. ಆದರೂ ಇದೀಗ ಇಬ್ಬರೂ ಪರಸ್ಪರ ವಿರೋಧಿಗಳಾಗಿದ್ದಾರೆ.

  • ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜಕೀಯ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದ ಸೇನಾನೆಲೆಯಲ್ಲಿ ಭಾರೀ ಸ್ಪೋಟ ಕಂಡುಬಂದಿದ್ದು, ಸಂಚಲನ ಸೃಷ್ಟಿಸಿದೆ.

    ಉತ್ತರ ಪಾಕಿಸ್ತಾನದ ಭಾಗದ ಸಿಯಾಲ್ಕೋಟ್ ನಗರದಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದ್ದು, ಸದ್ಯ ಸ್ಪೋಟಗೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಪಂಜಾಬ್ ಪ್ರಾಂತ್ಯದ ನಿಷೇಧಿತ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಉತ್ತರ ಪಾಕಿಸ್ತಾನದ ಸಿಯಾಲ್‍ಕೋಟ್ ಸೇನಾ ನೆಲೆಯಲ್ಲಿ ಬಹು ಸ್ಫೋಟ ಉಂಟಾಗಿದ್ದು, ಪ್ರಾಥಮಿಕ ಮಾಹಿತಿಗಳು ಇದು ಮದ್ದುಗುಂಡುಗಳ ಸಂಗ್ರಹ ಪ್ರದೇಶವಾಗಿದೆ. ದೊಡ್ಡ ಬೆಂಕಿ ಹೊತ್ತಿ ಉರಿಯುತ್ತಿದೆ. ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

  • ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಸೈನಿಕನನ್ನ ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಇಂದು ತನ್ನ ಪಾಕಿಸ್ತಾನಿ ಸಹವರ್ತಿಯನ್ನು ಕೇಳಿದೆ.

    ಮೇಜರ್ ಜನರಲ್ ಎಎಸ್ ಪೆಂಧಾರ್ಕರ್ ಘಟನೆ ಕುರಿತು ಮಾಹಿತಿ ನೀಡಿದ್ದು, ಕೆರಾನ್ ಸೆಕ್ಟರ್‌ನಲ್ಲಿ ಬಿಎಟಿ(ಪಾಕ್ ಸೇನೆಯ ಗಡಿ ಕಾರ್ಯಾಚರಣೆ ತಂಡ)ಯ ಸೈನಿಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದನು. ಇದನ್ನು ಎಲ್‍ಒಸಿಯಲ್ಲಿನ ಪಡೆಗಳು ಕಂಡುಹಿಡಿದಿದ್ದು, ಆತನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.

    ಮೃತ ಸೈನಿಕನ ಬಳಿಯಿದ್ದ ಗುರುತಿನ ಚೀಟಿಯಿಂದ ಈತ ಒಬ್ಬ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ. ಈತನ ಹೆಸರು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಪಾಕ್ ಸೈನಿಕರು ಈ ರೀತಿ ಹೊಂಚು ಹಾಕಿ ಒಳನುಸುಳಲು ಪ್ರಯತ್ನಿಸುತ್ತಾರೆ ಎಂದು ನಾವು ಮೊದಲೇ ಗುರುತಿಸಿದ್ದೆವು. ಅದಕ್ಕೆ ಈ ಬಗ್ಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು. ಈ ಪರಿಣಾಮ ಪಾಕ್ ಸೈನಿಕ ಭಾರತದ ಒಳನುಸುತ್ತಿದ್ದಂತೆ ಆತನನ್ನು ಹತ್ಯೆ ಮಾಡಲಾಯಿತು. ಈ ವೇಳೆ ಒಂದು ಎಕೆ ರೈಫಲ್, ಮದ್ದುಗುಂಡುಗಳು ಮತ್ತು ಏಳು ಗ್ರೆನೇಡ್‍ಗಳೊಂದಿಗೆ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

    ಪಾಕ್ ಎಷ್ಟೇ ಪ್ರಯತ್ನ ಪಟ್ಟರು ಗಡಿಭಾಗದಲ್ಲಿ ಕಣ್ಗಾವಲು ಇನ್ನೂ ಪ್ರಗತಿಯಲ್ಲಿದೆ. ನಾವು ಪಾಕಿಸ್ತಾನ ಸೇನೆಗೆ ಹಾಟ್‍ಲೈನ್ ಸಂಪರ್ಕವನ್ನು ಮಾಡಲಾಗಿದ್ದು, ಹತ್ಯೆಗೀಡಾದ ವ್ಯಕ್ತಿಯ ದೇಹವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ ಎಂದರು.

    ಆತನ ಶವವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶದ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಾರ್ಡ್‍ನಲ್ಲಿರುವ ಫೋಟೋದಲ್ಲಿ ಮೃತ ವ್ಯಕ್ತಿ ಪಾಕ್ ಸಶಸ್ತ್ರ ಪಡೆಗಳ ಸಮವಸ್ತ್ರ ಧರಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಎಂದು ಘೋಷಿಸಲಾಗಿತ್ತು. ಆದರೆ ಈ ಪ್ರಯತ್ನದಿಂದ ಆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ ಎಂದರು.

  • ಪಾಕ್‍ನಿಂದ ಅಪ್ರಚೋದಿತ ಗುಂಡಿನ ದಾಳಿ- ಭಾರತದ ಪ್ರತಿ ದಾಳಿಗೆ ಐವರು ಪಾಕ್ ಸೈನಿಕರ ಸಾವು

    ಪಾಕ್‍ನಿಂದ ಅಪ್ರಚೋದಿತ ಗುಂಡಿನ ದಾಳಿ- ಭಾರತದ ಪ್ರತಿ ದಾಳಿಗೆ ಐವರು ಪಾಕ್ ಸೈನಿಕರ ಸಾವು

    – ಗುಂಡು, ಶೆಲ್‍ದಾಳಿ ನಡೆಸಿದ ಪಾಕ್

    ಶ್ರೀನಗರ: ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಪಾಕಿಸ್ತಾನದ ಐವರು ಯೋಧರು ಸಾವನ್ನಪ್ಪಿದ್ದಾರೆ. ಅಲ್ಲದೆ ಮೂವರು ಗಾಯಗೊಂಡಿದ್ದಾರೆ.

    ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಎಸಿ)ಯುದ್ದಕ್ಕೂ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಸಹ ಗುಂಡು ಹಾರಿಸಿದ್ದಾರೆ. ಈ ವೇಳೆ ಐವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

    ಪೂಂಚ್ ಜಿಲ್ಲೆಯ ಎಲ್‍ಒಸಿಯ ಮಂಕೋಟೆ ಸೆಕ್ಟರ್ ನಲ್ಲಿ ಸಾರ್ವಜನಿಕ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿದೆ. ಪಾಕ್ ಸೇನೆಯ ದಾಳಿಗೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗಳು ಹಾನಿಗೀಡಾಗಿವೆ. ಹೀಗಾಗಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಪಾಕ್‍ನ ಐವರು ಸೈನಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮಾತ್ರವಲ್ಲದೆ ಪಾಕ್‍ನ ಹಲವು ಬಂಕರ್ ಗಳು ಸಹ ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

    ಸುಮಾರು 2 ಗಂಟೆಗಳ ಎರಡೂ ಕಡೆಯವರಿಂದ ಗುಂಡಿನ ಚಕಮಕಿ ನಡೆದಿದೆ. 1999ರಲ್ಲಿ ಉಭಯ ದೇಶಗಳು ಸಹಿ ಹಾಕಿದ್ದ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ನಿರ್ಭಯದಿಂದ ಈ ವರ್ಷದ ಆರಂಭದಿಂದ ಹಲವು ಬಾರಿ ಉಲ್ಲಂಘಿಸಿದೆ.

    ಜನವರಿ 2020ರಿಂದ ಈ ವರೆಗೆ ಜಮ್ಮು ಕಾಶ್ಮೀರದ ಎಲ್‍ಒಸಿಯಲ್ಲಿ 3,200 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದರಿಂದ 100 ಜನರಿಗೆ ಗಾಯಗಳಾಗಿವೆ. 30 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ ಶೆಲ್ಲಿಂಗ್ ದಾಳಿಯಿಂದಾಗಿ ಎಲ್‍ಒಸಿ ಬಳಿಯ ಜನ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

  • ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯ(ಎಲ್‍ಒಸಿ) ಬಳಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಎಲ್‍ಒಸಿ ಉದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಹಳ್ಳಿಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿದೆ.

    ಇಂದು ಬೆಳಗ್ಗೆ 11:30ರ ವೇಳೆಗೆ ರಜೌರಿ ಜಿಲ್ಲೆಯ ಸುಂದರ್‍ಬಾನಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಸುಂದರ್‌ಬಾನಿ ವಲಯದಲ್ಲಿ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ಮಾಡಲು ಪಾಕ್ ಆರಂಭಿಸಿತು. ಇದಕ್ಕೆ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡಿದೆ. ಆದರೆ ಈ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ನ. 17ರಂದು ಅಖ್ನೂರ್ ಸೆಕ್ಟರ್ ಬಳಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ವೇಳೆ ಅಲ್ಲಿ ಟ್ರಕ್‍ನಲ್ಲಿ ತೆರೆಳುತ್ತಿದ್ದ ಓರ್ವ ಯೋಧ ಹುತಾತ್ಮರಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು. ಅವರನ್ನು ಉಧಂಪುರ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಹಾಗೆಯೇ ನ.16ರಂದು ಪಾಕಿಸ್ತಾನವು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಪಡೆಗಳು ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದವು.

  • ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಗಡಿ ನಿಯಂತ್ರಣ ರೇಖೆ ಬಳಿ ಬಿದ್ದಿದ್ದ ಪಾಕಿಸ್ತಾನ ಸೇನೆಯ ಸ್ಫೋಟಕವನ್ನು ಭಾರತೀಯ ಯೋಧರು ನಾಶಗೊಳಿಸಿರುವ ವಿಡಿಯೋ ವೈರಲ್ ಆಗಿದೆ.

    ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದಾರೆ.

    ಇಬ್ಬರು ಸೈನಿಕರು ಸ್ಫೋಟಕವನ್ನು ನಾಶ ಮಾಡಿದ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು ಯೋಧರ ಧೈರ್ಯ, ಶೌರ್ಯಕ್ಕೆ ಭಾರತೀಯರು ಸಲಂ ಹೊಡೆದಿದ್ದಾರೆ.

    ಪಾಕಿಸ್ತಾನ ಪಡೆಗಳು ಶನಿವಾರ ಬಾಲಕೋಟ್ ಸೇರಿ ವಿವಿಧ ಕಡೆಗಳಲ್ಲಿ ಗ್ರಾಮಗಳನ್ನು ಗುರಿಯಾಗಿಸಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡಾ ಪ್ರತಿದಾಳಿ ನಡೆಸಿದೆ. ಆ ಬಳಿಕ ಭಾರತೀಯ ಶಿಬಿರವನ್ನು ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಸೇನೆ ಭಾನುವಾರ ರಾತ್ರಿ 10:30ರ ಹೊತ್ತಿಗೆ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಭದ್ರತಾ ಪಡೆಗಳೂ ಕೂಡ ತಕ್ಕ ಪ್ರತ್ಯುತ್ತರ ಕೊಟ್ಟಿದೆ.

    ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ಈ ವರ್ಷ ಪಾಕಿಸ್ತಾನ 2,050 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದಾರೆ. ಈ ದಾಳಿಗಳಲ್ಲಿ 21 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    2003 ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಲು ಮತ್ತು ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಕರೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಹೀಗೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಉದ್ಧಟತನ ಪ್ರದರ್ಶಿಸಿದರೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ತಯಾರಾಗಿದೆ ಎಂದು ಎಚ್ಚರಿಸಿದ್ದಾರೆ.

  • ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್

    ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್

    ನವದೆಹಲಿ: ಪಾಕಿಸ್ತಾನ ಭಾರತದ ವಿಚಾರ ಬಂದಾಗ ಹೇಳುವುದೇ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಮತ್ತೊಂದು ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ.

    ಇಂದು ಬೆಳಗ್ಗೆ ಪಾಕಿಸ್ತಾನ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ನಮ್ಮ ಬಳಿ ಇಬ್ಬರು ಭಾರತದ ವಾಯು ಸೇನಾ ಪೈಲಟ್ ಗಳು ಇದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ:  ಭಾರತ V/S ಪಾಕಿಸ್ತಾನ: ಭೂ, ವಾಯು, ನೌಕಾ ಸೇನೆಯ ಸಾಮರ್ಥ್ಯ ಏನು?

    ಗಫೂರ್ ಟ್ವೀಟ್ ಬೆನ್ನಲ್ಲೇ ರೇಡಿಯೋ ಪಾಕಿಸ್ತಾನದ ಇಬ್ಬರು ಭಾರತದ ಪೈಲಟ್‍ಗಳನ್ನು ನಾವು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇಬ್ಬರನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಒಬ್ಬರಿಗೆ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಫೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.

    ಮಧ್ಯಾಹ್ನ ಭಾರತ ಸುದ್ದಿಗೋಷ್ಠಿ ನಡೆಸಿ, ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಭಾರತದಿಂದ ಅಧಿಕೃತ ಹೇಳಿಕೆ ಬಂದಲ್ಲೇ ಪಾಕಿಸ್ತಾನ ಸಂಜೆ ಉಲ್ಟಾ ಹೊಡೆದಿದ್ದು ನಮ್ಮ ಬಳಿ ಒಬ್ಬರು ಪೈಲಟ್ ಕಸ್ಟಡಿಯಲ್ಲಿ ಇದ್ದಾರೆ ಎಂದು ಮೇಜರ್ ಜನರಲ್ ಗಫೂರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನು ಓದಿ: ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್

    ಆರಂಭದ ಟ್ವೀಟ್ ನಲ್ಲಿ ಅಸಿಫ್ ಗಫೂರ್, ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಭಾರತೀಯ ವಾಯು ಪಡೆಯ ಎರಡು ಯುದ್ಧ ವಿಮಾನಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು. ಆದರೆ ಭಾರತ ಪಾಕಿಸ್ತಾನದ ವಿಮಾನ ಭಾರತದ ಗಡಿ ದಾಟಿ ಬರುವ ವೇಳೆ ನಡೆದ ದಾಳಿ ವೇಳೆ ಒಂದು ಮಿಗ್ ವಿಮಾನ ಪತನಗೊಂಡಿದೆ. ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿತ್ತು.

    ಪಾಕಿಸ್ತಾನ ಸೇನೆಯ ಜೊತೆ ಅಲ್ಲಿನ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ಹಳೆಯ ಫೋಟೋ ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಿ ಮಿಗ್ ವಿಮಾನವನ್ನು ಹೊಡೆದಿದ್ದೇವೆ ಎಂದು ವರದಿ ಮಾಡಿವೆ. ಈ ವರದಿಯಲ್ಲಿ ಏರ್ ಶೋ ಅಭ್ಯಾಸದ ವೇಳೆ ಸೂರ್ಯ ಕಿರಣ್ ವಿಮಾನ ಪತನಗೊಂಡ ಬಳಿಕ ಬೆಂಗಳೂರಿನ ಜನತೆ ಪೈಲಟ್ ಅವರನ್ನು ರಕ್ಷಿಸುವ ವಿಡಿಯೋವನ್ನು ಸಹ ಪ್ರಸಾರ ಮಾಡಿ ನಮ್ಮ ಸೇನೆ ಹೇಗೆ ಸಾಹಸ ಮಾಡಿದೆ ಎಂದು ಹೇಳಿ ಬೊಗಳೆಯನ್ನು ಬಿಟ್ಟಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಕರ್‌ಗಳನ್ನು ನಿರ್ಮಿಸಿ – ಎಲ್‍ಒಸಿ ನಿವಾಸಿಗಳಿಗೆ ಪಾಕ್ ಸೂಚನೆ

    ಬಂಕರ್‌ಗಳನ್ನು ನಿರ್ಮಿಸಿ – ಎಲ್‍ಒಸಿ ನಿವಾಸಿಗಳಿಗೆ ಪಾಕ್ ಸೂಚನೆ

    – ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಹಾಸಿಗೆ ಸೈನಿಕರಿಗೆ ಮೀಸಲಿಡಿ
    – ಗುಂಪಾಗಿ ಚರ್ಚೆ ನಡೆಸಬೇಡಿ, ರಾತ್ರಿ ಲೈಟ್ ಹಾಕಬೇಡಿ
    – ಗ್ರಾಮಸ್ಥರಿಗೆ ಪಾಕ್ ಅಧಿಕಾರಿಗಳಿಗಳಿಂದ ಎಚ್ಚರಿಕೆ

    ಶ್ರೀನಗರ: ಯಾವುದೇ ಕ್ಷಣದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಬಹುದು ಎನ್ನುವ ಭೀತಿಗೆ ಒಳಗಾಗಿರುವ ಪಾಕಿಸ್ತಾನ ಈಗ ಪಾಕ್ ಆಕ್ರಮಿತ ಕಾಶ್ಮೀರದ ಜನತೆಗೆ ಬಂಕರ್ ನಿರ್ಮಿಸುವಂತೆ ಸೂಚನೆ ನೀಡಿದೆ.

    ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಗ್ರಾಮಸ್ಥರಿಗೆ ಪಾಕಿಸ್ತಾನದ ಅಧಿಕಾರಿಗಳು ಸುರಕ್ಷಿತ ಜಾಗಗಳಲ್ಲಿ ಸಂಚರಿಸಿ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಗುಂಪಾಗಿ ಚರ್ಚೆ ನಡೆಸಬೇಡಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರಾತ್ರಿಯ ವೇಳೆ ಅನಾವಶ್ಯಕವಾಗಿ ಲೈಟ್ ಹಾಕಬೇಡಿ. ಗಡಿ ನಿಯಂತ್ರಣ ರೇಖೆಯ ಬಳಿ ಪ್ರಾಣಿಗಳನ್ನು ತೆಗೆದುಕೊಂಡು ಹೋಗಬೇಡಿ. ಇದರ ಜೊತೆಗೆ ಯಾರ ಮನೆಯಲ್ಲಿ ಬಂಕರ್ ಗಳು ನಿರ್ಮಾಣವಾಗಿಲ್ಲವೋ ಅವರೆಲ್ಲ ಅದಷ್ಟು ಶೀಘ್ರವೇ ಬಂಕರ್ ಗಳನ್ನು ನಿರ್ಮಿಸಿ ಎನ್ನುವ ಸೂಚನೆಯನ್ನು ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರಿಗೆ ನೀಡಿದ್ದಾರೆ.

    ಒಂದು ವೇಳೆ ಯುದ್ಧ ನಡೆದರೆ ಅದಕ್ಕೂ ಸಿದ್ಧವಾಗಿರುವಂತೆ ಪಾಕಿಸ್ತಾನ ಸೇನೆ ಆಸ್ಪತ್ರೆಗಳಿಗೆ ಸೂಚಿಸಿದೆ. ಯುದ್ಧ ಆರಂಭವಾದರೆ ವೈದ್ಯಕೀಯ ಸಹಕಾರಕ್ಕೆ ಹೇಗೆ ಸಿದ್ಧವಾಗಿದ್ದೀರಿ. ನಿಮ್ಮಲ್ಲಿ ಎಷ್ಟು ಹಾಸಿಗೆಗಳಿವೆ ಎನ್ನುವುದನ್ನು ತಿಳಿಸಿ ಹೆಡ್‍ಕ್ವಾರ್ಟರ್ಸ್ ಕ್ವೆಟ್ಟಾ ಲಾಜಿಸ್ಟಿಕ್ಸ್ ಏರಿಯಾ( ಎಚ್‍ಕ್ಯೂಎಲ್‍ಎ) ಕಾಂಟೋನ್ಮೆಂಟ್ ಜಿಲಾನಿ ಆಸ್ಪತ್ರೆಗೆ ಫೆ.20 ರಂದು ಪತ್ರ ಬರೆದಿದೆ.  ಇದನ್ನೂ ಓದಿ: ಭಾರತ ಕೊಟ್ಟ ಶಾಕ್‍ಗೆ ತಲೆಬಾಗಿ ಉಗ್ರ ಸಂಘಟನೆ ನಿಷೇಧಿಸಿದ ಪಾಕ್

    ಒಂದು ವೇಳೆ ಪೂರ್ವ ಭಾಗದಲ್ಲಿ ಯುದ್ಧ ಆರಂಭವಾದರೆ ಕ್ವೆಟ್ಟಾ ಲಾಜಿಸ್ಟಿಕ್ಸ್ ಏರಿಯಾ ಸಿಂಧ್ ಮತ್ತು ಪಂಜಾಬ್ ಪ್ರದೇಶದಲ್ಲಿ ಗಾಯಗೊಂಡ ಸೈನಿಕರನ್ನು ರಕ್ಷಿಸಬೇಕಾಗುತ್ತದೆ. ಸೈನಿಕರಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಬಲೂಚಿಸ್ತಾನಕ್ಕೆ ಶಿಫ್ಟ್ ಮಾಡಲು ಪಾಕ್ ಸೇನೆ ನಿರ್ಧರಿಸಿದೆ. ಅಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆಗಳು ಶೇ.25 ರಷ್ಟು ಹಾಸಿಗೆಗಳನ್ನು ಗಾಯಗೊಂಡ ಸೈನಿಕರಿಗೆ ಮೀಸಲಿಡಬೇಕು ಎಂದು ಪಾಕ್ ಸೇನೆ ಪತ್ರದ ಮೂಲಕ ಈಗಲೇ ಸೂಚನೆ ನೀಡಿದೆ.

    ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಿತ್ತು. ಈಗ ಪುಲ್ವಾಮಾ ದಾಳಿ ಬಳಿಕ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎನ್ನುವ ಭೀತಿಯಿಂದ ಪಾಕ್ ಗ್ರಾಮಸ್ಥರಿಗೆ ಈಗಲೇ ಎಚ್ಚರಿಕೆ ನೀಡಿ ಎಲ್ಲ ದಾಳಿಗಳನ್ನು ಎದುರಿಸಲು ಸಿದ್ಧವಾಗಿರಿ ಎಂದು ಸೂಚಿಸಿದೆ.

    https://twitter.com/KashmirPivot/status/1098482610127466498

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv