ನವದೆಹಲಿ/ಇಸ್ಲಾಮಾಬಾದ್: ಭಾರತ (India) ಸರ್ಕಾರ ಇನ್‌ಸ್ಟಾ ಖಾತೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಪಾಕ್ ಸೇನಾ ಮುಖ್ಯಸ್ಥ ಮುನೀರ್ (Asif Munir) ವಿರುದ್ಧ ಪಾಕಿಸ್ತಾನದ ಖ್ಯಾತ ನಟಿ ಹನಿಯಾ ಆಮಿರ್ (Hania Aamir) ಕೆಂಡ ಕಾರಿದ್ದಾರೆ.
ಪಹಲ್ಗಾಮ್ ದಾಳಿಗೆ ಅಸಿಮ್ ಮುನೀರ್ ಕಾರಣ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ (Pakistan Army) ಮತ್ತು ಇಸ್ಲಾಮಿಕ್ ಭಯೋತ್ಪಾದಕರು (Islamist Terrorists) ಇದ್ದಾರೆ ಎಂದು ನೇರಾನೇರವಾಗಿ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ
ಪೋಸ್ಟ್‌ನಲ್ಲಿ ಏನಿದೆ?
ಕಾಶ್ಮೀರದಲ್ಲಿ ಜನರಲ್ ಅಸಿಮ್ ಮುನೀರ್ ಅವರ ಕ್ರಮಗಳಿಂದಾಗಿ ಭಾರತದಲ್ಲಿ ಇಡೀ ಪಾಕಿಸ್ತಾನಿ ಮನರಂಜನಾ ಉದ್ಯಮವನ್ನು ನಿಷೇಧಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ
ಭಾರತದ ಪ್ರಧಾನ ಮಂತ್ರಿಯವರಲ್ಲಿ ನಾನು ಗೌರವದಿಂದ ವಿನಂತಿ ಮಾಡುತ್ತಿದ್ದೇನೆ. ಪಾಕಿಸ್ತಾನದ ಸಾಮಾನ್ಯ ಜನರಾದ ನಾವು ಭಾರತಕ್ಕೆ ಯಾವುದೇ ತಪ್ಪು ಮಾಡಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ ಮತ್ತು ಇಸ್ಲಾಮಿಕ್ ಭಯೋತ್ಪಾದಕರು ಇದ್ದಾರೆ.
ನೀವು ಸಾಮಾನ್ಯ ಪಾಕಿಸ್ತಾನಿ ಜನರನ್ನು ಯಾಕೆ ಶಿಕ್ಷಿಸುತ್ತಿದ್ದೀರಿ? ದಯವಿಟ್ಟು ಪಾಕಿಸ್ತಾನಿ ಸೈನ್ಯ ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ, ಅಮಾಯಕ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ಮಂಗಳವಾರ ಪಾಕಿಸ್ತಾನ ಮಾಧ್ಯಮಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿತ್ತು. ಮುಂದುವರಿದ ಭಾಗವಾಗಿ ಪಾಕ್ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿದೆ.
ಇನ್‌ಸ್ಟಾದಲ್ಲಿ ಸುಮಾರು 1.8 ಕೋಟಿ ಫಾಲೋವರ್ಸ್ ಹೊಂದಿರುವ ಮಹಿರಾ ಖಾನ್ 2017 ರಲ್ಲಿ ಶಾರುಖ್ ಖಾನ್ ಅಭಿನಯದ ರಯೀಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಪಾಕಿಸ್ತಾನ ಬಹುತೇಕ ಯೂಟ್ಯೂಬ್ ಖಾತೆಗಳಿಗಳಿಗೆ, ಸೆಲೆಬ್ರೆಟಿಗಳಿಗೆ ಆದಾಯ ಭಾರತದ ವೀಕ್ಷಕರಿಂದ ಬರುತ್ತಿದೆ. ಇವರಿಗೆ ಬರುವ ಆದಾಯವನ್ನು ನಿಲ್ಲಿಸಬೇಕಾದರೆ ಈ ಖಾತೆಗಳನ್ನು ಭಾರತದಲ್ಲಿ ನಿರ್ಬಂಧ ವಿಧಿಸಬೇಕೆಂದು ನೆಟ್ಟಿಗರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಇಸ್ಲಾಮಾಬಾದ್: ಭಾರತದ (India) ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತಿರುವ ಪಾಕಿಸ್ತಾನ ಸೇನೆಗೆ (Pakistan Army) ಅಲ್ಲಿನ ಪೊಲೀಸರೇ (Police) ಶಾಕ್ ನೀಡಿದ್ದಾರೆ.
ಖೈಬರ್ ಪಖ್ತುಂಖ್ವಾದ ಲಕಿ ಮಾರ್ವಾತ್‌ನಲ್ಲಿ ಪಾಕಿಸ್ತಾನ ಸೇನೆ ಮತ್ತು ಪಶ್ತೂನ್ ಪೊಲೀಸರು (Pashtun Police) ಮುಖಾಮುಖಿಯಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಪಶ್ತೂನ್ ಪೊಲೀಸರು ಸೈನಿಕರನ್ನು ಅಡ್ಡ ಹಾಕಿ, ಇಲ್ಲಿಗೆ ನೀವು ಯಾಕೆ ಬಂದಿದ್ದೀರಿ. ನಿಮಗೆ ಹುಚ್ಚು ಹಿಡಿದಿದ್ಯಾ? ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮ ಜನರಲ್ ಬಂದರೂ ಸಹ ನೀವು ಇನ್ನೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗದರಿದ್ದಾರೆ.
ಪಾಕ್ ಸೈನಿಕರನ್ನು ಪೊಲೀಸರು ಕೆಣಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ಸೇನೆ ಮಧ್ಯೆ ನಡೆಯವ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್!
🚨 EXPLOSIVE! Pakistan Army vs Pashtun Police face-off in Laki Marwat — Police openly abuse and challenge Army generals.
ಕಿತ್ತಾಟಕ್ಕೆ ಮೂಲ ಕಾರಣ ಏನು?
ಪಶ್ತೂನ್‌ಗಳು ಇರಾನಿನ ಜನಾಂಗೀಯ ಗುಂಪಾಗಿದ್ದು ಇವರನ್ನು ಪಖ್ತೂನ್‌ಗಳು ಅಥವಾ ಪಠಾಣ್‌ಗಳು ಎಂದೂ ಕರೆಯುತ್ತಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪಶ್ತೂನ್‌ಗಳು ಪೂರ್ವ ಇರಾನಿನ ಭಾಷೆಯಾದ ಪಾಷ್ಟೋವನ್ನು ಮಾತನಾಡುತ್ತಾರೆ ಮತ್ತು ಸುನ್ನಿ ಮುಸ್ಲಿಮರಾಗಿದ್ದಾರೆ. ಇದನ್ನೂ ಓದಿ: Haveri | ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್
ಪಶ್ತೂನ್‌ಗಳು ಪಾಕಿಸ್ತಾನವನ್ನು ವಿರೋಧಿಸಲು ಮುಖ್ಯ ಕಾರಣ ಡುರಾಂಡ್ ಗಡಿ (Durand Line) ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್ ಮಧ್ಯೆ 2,670 ಕಿ.ಮೀ ಉದ್ದದ ಗಡಿ ರೇಖೆ ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ.
ಇತ್ತೀಚಿನ ದಿನಗಳಲ್ಲಿ ಕಿತ್ತಾಟ ಜಾಸ್ತಿಯಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್ ಬಳಿ ಇರಲಿಲ್ಲ. 2018ರಲ್ಲಿ ಪಾಕ್ ಸಂಸತ್ತು ಮಸೂದೆ ಪಾಸ್ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್ ಮತ್ತು ಪಶ್ತೂನ್ ಜನಾಂಗದವರನ್ನು ಕೆರಳಿಸಿದ್ದು ಈ ವಿಚಾರದ ಬಗ್ಗೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ.
– ಮೆಲ್ಬರ್ನ್ ಸೇರಿ ವಿದೇಶದ ಹಲವೆಡೆ ಪಹಲ್ಗಾಮ್ ಘಟನೆ ಖಂಡಿಸಿ ಪ್ರತಿಭಟನೆ
ಲಂಡನ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ, ಖಂಡನೆಗಳು ವ್ಯಕ್ತವಾಗ್ತಿವೆ. ಬೇರೆ ದೇಶಗಳಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗೆಯೇ ಲಂಡನ್ (London) ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ಮಾಡುವಾಗ ಪಾಕ್ ರಾಯಭಾರಿ ಅಧಿಕಾರಿ ತೈಮೂರ್ ರಾಹತ್ ಪ್ರಚೋದನೆ ನೀಡಿದ್ದಾನೆ.
50 shades of Hafiz Saeed:
From Mullah-General Asim Munir to Pak Defence Attache in London.
The mask is off: reality of #Pakistan for the world to see…
Eye opener for the #amankiasha wallahs…
* Not our job to strengthen democratic forces in Pak.
* Ek Naagnath
Ek SaanpNath pic.twitter.com/Fvlyv8jAGy
ಮತ್ತೊಂದು ಭಯಾನಕ ವಿಡಿಯೋ ವೈರಲ್
ಈ ಮಧ್ಯೆ, ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ಮತ್ತೊಂದು ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಗೆ ಉಗ್ರ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡಿ, ಬಳಿಕ ಜನಸಮುದಾದತ್ತ ತೆರಳಿ ಅಲ್ಲಿ ರಕ್ತಪಾತ ನಡೆಸಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ
ಆ ಉಗ್ರ ಮತ್ತೆ ಮುಂದೆ ಹೋಗಿ ಅಲ್ಲಿದ್ದ ಜನಸಮೂಹದ ಮೇಲೆ ಗುಂಡಿನ ದಾಳಿ ಮಾಡುತ್ತಾನೆ. ದಾಳಿ ವೇಳೆ ಕೆಲ ಮಕ್ಕಳು ಆಟವಾಡುತ್ತಿರುವುದು, ಚೀರಾಟ, ಕೂಗಾಟದ ಸದ್ದು ಕೇಳಿಬರುತ್ತದೆ. ಉಗ್ರರು ದಟ್ಟ ಕಾನನ ಮಧ್ಯೆ ಬಂದು ಗಿಡಗಳಿಂದ ಇಳಿದು ದಾಳಿ ನಡೆಸಿರೋದು ಗೊತ್ತಾಗಿದೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಇನ್ನೂ ಶಂಕಿತ ಉಗ್ರ ಆದಿಲ್ 2018ರಲ್ಲಿ ಪಾಕಿಸ್ಥಾನಕ್ಕೆ ಸ್ಟೂಡೆಂಟ್ ವೀಸಾದಲ್ಲಿ ಹೋಗಿ, 2024ಕ್ಕೆ ನಾಲ್ವರು ಉಗ್ರರೊಂದಿಗೆ ವಾಪಸ್ಸಾಗಿ ಈ ದಾಳಿ ನಡೆಸಿರೋದು ಗೊತ್ತಾಗಿದೆ. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.
– ನಿಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸ ಹೇಳಿಕೊಡಿ ಎಂದ ಮುನೀರ್
ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ (Asim Munir) ತಮ್ಮ ಇತ್ತೀಚಿನ ಭಾಷಣವೊಂದರಲ್ಲಿ ಎರಡು ರಾಷ್ಟ್ರದ ಸಿದ್ಧತಾಂತಗಳನ್ನ ಪ್ರತಿಪಾದಿಸಿ ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದಿದ್ದಾರೆ.
Ugh! I thought General Musharraf was the worst, but this COAS takes the cake. The whole bakery. General Asim Munir. pic.twitter.com/t8eVYukQqG
ಪಾಕಿಸ್ತಾನ ಹುಟ್ಟಿದ ಕಥೆಯನ್ನು ಮಕ್ಕಳಿಗೆ ಹೇಳಿ
ಓವರ್‌ಸೀಸ್ ಪಾಕಿಸ್ತಾನಿ (Pakistani) ಕನ್ವೆನ್ಷನ್‌ನಲ್ಲಿ ಭಾಷಣ ಮಾಡಿದ ಮುನೀರ್, ಪಾಕಿಸ್ತಾನಿಯರು ಹಿಂದೂ ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ರಾಷ್ಟ್ರ ಹೇಗೆ ಹುಟ್ಟಿತು ಎಂಬ ಕಥೆಯನ್ನು ಹೇಳಬೇಕು. ಈ ವ್ಯತ್ಯಾಸವೇ ಪಾಕಿಸ್ತಾನ ರಚನೆಗೆ ಮೂಲ ಆಧಾರವಾಗಿದ್ದು, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದ ಮಹತ್ವವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್ ಆಯ್ಕೆ
ನಮ್ಮ ಆಲೋಚನೆ, ಸಿದ್ಧಾಂತ ಬೇರೆ
ಹಿಂದೂಗಳು ಮತ್ತು ಮುಸ್ಲಿಮರ (Hindu-Muslims) ನಡುವೆ ದೊಡ್ಡ ವ್ಯತ್ಯಾಸವಿದೆ ಅಂತ ನಮ್ಮ ಮಕ್ಕಳಿಗೆ ತಿಳಿಸಬೇಕು. ನಮ್ಮ ಧರ್ಮ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ, ಅಲ್ಲಿಯೇ ಎರಡು ರಾಷ್ಟ್ರ ಸಿದ್ಧಾಂತದ ಬುನಾದಿ ಹಾಕಲಾಯಿತು. ನಾವು ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ ಎಂದು ನಮ್ಮ ಮಕ್ಕಳಿಗೆ ತಿಳಿಸಿ. ಇಸ್ಲಾಮಿಕ್ ಗಣರಾಜ್ಯದ ಸೃಷ್ಟಿಗೆ ಇದು ಮುಖ್ಯ ಕಾರಣ ಎಂಬ ಸತ್ಯ ಅವರಿಗೆ ಗೊತ್ತಾಗಲಿ. 1947ರಲ್ಲಿ ಪಾಕಿಸ್ತಾನ ರಚನೆಗೆ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವೇ ಕಾರಣ ಎಂಬುದನ್ನು ನಮ್ಮ ಭವಿಷ್ಯದ ಪೀಳಿಗೆ ಮರೆಯಬಾರದು ಎಂದು ಮುನೀರ್ ಹೇಳಿಕೆ ನೀಡಿದ್ದು, ಮತ್ತೆ ಭಾರತದ ವಿರುದ್ಧ ಕ್ಯಾತೆ ತೆಗೆಯುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ
ಹಿಂದೂ-ಮಸ್ಲಿಂ ನಡುವಿನ ವ್ಯತ್ಯಾಸ ಹೇಳಿಕೊಡಿ
ನಮ್ಮ ಪೂರ್ವಜರು ನಾವು ಹಿಂದೂಗಳಿಗಿಂತ ಪ್ರತಿಯೊಂದು ವಿಷಯದಲ್ಲೂ ಭಿನ್ನರಾಗಿದ್ದೇವೆ ಎಂದು ನಂಬಿದ್ದರು. ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಆದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್
ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯಿಂದ (Baloch Liberation Army) ಹೈಜಾಕ್ ಆಗಿದ್ದ ಪಾಕಿಸ್ತಾನದ (Pakistan) ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಪುಲ್ವಾಮ ಮಾದರಿ ದಾಳಿಯಲ್ಲಿ ಪಾಕ್‌ನ 90 ಮಂದಿ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.
ರೈಲು ಹೈಜಾಕ್ ಬಳಿಕ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಬೇಡಿಕೆಗಳನ್ನು ಈಡೇರಿಸಲು 48 ಗಂಟೆಗಳ ಸಮಯ ನೀಡಲಾಗಿತ್ತು. ಪಾಕಿಸ್ತಾನವು (Pakistan) ಮಾತುಕತೆಗೆ ನಿರಾಕರಿಸಿ ಮೊಂಡುತನ ಪ್ರದರ್ಶಿಸಿದ್ದಕ್ಕೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಬಿಎಲ್‌ಎ ವಕ್ತಾರ ಜೀಯಂಡ್ ಬಲೂಚ್ ಹೇಳಿದ್ದರು. ಇನ್ನೂ ಕಾರ್ಯಾಚರಣೆಯಲ್ಲಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ 12 ಸಾವನ್ನಪ್ಪಿದ್ದರು. ಈ ಬಲೂಚಿಸ್ತಾನ್ ಎಲ್ಲಿದೆ? ಬಲೂಚಿಸ್ತಾನ್ ಹಾಗೂ ಪಾಕ್ ನಡುವಿನ ಸಂಘರ್ಷವೇನು? ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ಉದ್ದೇಶವೇನು ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬಲೂಚಿಸ್ತಾನ್ ಎಲ್ಲಿದೆ?
ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನವನ್ನು ಈ ಹಿಂದೆ ಕಲಾತ್ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ 11, 1947 ರಂದು ಬ್ರಿಟಿಷ್ ಮೇಲ್ವಿಚಾರಣೆಯಲ್ಲಿ ಕಲಾತ್ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದಕ್ಕೆ ಸಹಿ ಹಾಕಿ, ಕಲಾತ್‌ನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲಾಯಿತು. ಆದರೆ ಅದರ ಸ್ವಾತಂತ್ರ್ಯವು ಅತ್ಯಂತ ಅಲ್ಪಕಾಲಿಕವಾಗಿತ್ತು. ಮಾರ್ಚ್ 27, 1948 ರಂದು, ಪಾಕಿಸ್ತಾನವು ಬಲೂಚಿಸ್ತಾನವನ್ನು ಆಕ್ರಮಿಸಿಕೊಂಡಿತು.
ಪಾಕ್ ಜೊತೆ ವಿಲೀನಕ್ಕೆ ಏಕೆ ವಿರೋಧ?
ಏಕೀಕರಣದ ನಂತರ ಪಾಕ್ ತೆಗೆದುಕೊಂಡ ಮಿಲಿಟರಿ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಬಲೂಚಿಸ್ತಾನ ಕಡಿಮೆ ಪ್ರಭಾವವನ್ನು ಹೊಂದಿದೆ. ಅದರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಲೂಚ್‌ನ ಜನ ಪಾಕ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಏನಿದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ?
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು, ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸ್ಥಾಪನೆಗೊಳ್ಳುವ ಮುನ್ನವೇ ಪ್ರತ್ಯೇಕ ಬಲೂಚಿಸ್ತಾನ ಬೇಕು ಎಂಬ ಬೇಡಿಕೆ ಇತ್ತು. 2000ನೇ ಇಸವಿಯಲ್ಲಿ ಪಾಕ್ ಆಡಳಿತದ ವಿರುದ್ಧ ಸರಣಿ ಬಾಂಬ್ ಸ್ಪೋಟಿಸಿ ಬಲೂಚಿಸ್ತಾನದ ಬೇಡಿಕೆ ಮುಂದಿರಿಸಿದಾಗ ಬಿಎಲ್‌ಎ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಿತ್ತು.
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸುತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯವು ಭೌಗೋಳಿಕವಾಗಿ ಸ್ವಲ್ಪ ದೊಡ್ಡ ಗಾತ್ರ ಹೊಂದಿದ್ದು,ಈ ಪ್ರಾಂತ್ಯವು ಅನಿಲ, ಖನಿಜ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿ, ಬಿಎಲ್‌ಎ ಹೊರತಾಗಿ ಇನ್ನೂ ಕೆಲವು ಜನಾಂಗೀಯ ಬಂಡುಕೋರ ಸಂಘಟನೆಗಳೂ ಇವೆ. ಬಲೂಚಿಸ್ತಾನದ ಬೆಟ್ಟ, ಪವರ್ತ ಪ್ರದೇಶಗಳು ಬಂಡುಕೋರರಿಗೆ ಸುರಕ್ಷಿತ ತಾಣವಾಗಿವೆ.
ಸಕ್ರಿಯವಾಗಿರುವ ಬಿಎಲ್‌ಎ ಆಜಾದ್ ಬಣ
ಬಿಎಲ್‌ಎ ಬಂಡುಕೋರ ಸಂಘಟನೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಕ್ರಿಯವಾಗಿದೆ. 2022ರಲ್ಲಿ ಪಾಕ್ ಸೇನೆ ಮತ್ತು ನೌಕಾ ನೆಲೆಗಳ ಮೇಲೆ ದಾಳಿ ನಡೆಸಿ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿತ್ತು. ಅಲ್ಲದೇ ಕರಾಚಿಯ ವಿವಿಯಲ್ಲಿ ಚೀನೀಯರ ಮೇಲೆ ದಾಳಿ ನಡೆಸಿತ್ತು. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಭದ್ರತಾ ಪಡೆ ಹಾಗೂ ಇತರೆ ಸೇನಾ ನೆಲೆಗಳ ಮೇಲೆ ಬಿಎಲ್‌ಎ ಪದೇಪದೆ ದಾಳಿ ನಡೆಸುತ್ತಿರುತ್ತದೆ. ಕರಾಚಿ ಬಂದರನ್ನೂ ಗುರಿಯಾಗಿಟ್ಟುಕೊಂಡು ಬಿಎಲ್‌ಎ ದಾಳಿ ನಡೆಸಿದ್ದು ಇದೆ. ಮುಂದುವರೆದು ಈಗ ಮಹಿಳಾ ಸೂಸೈಡ್ ಬಾಂಬರ್‌ಗಳನ್ನೂ ಬಿಎಲ್‌ಎ ಕಣಕ್ಕಿಳಿಸಿದೆ.
ಪಾಕ್ ಚೀನಾ ಸಂಬಂಧಕ್ಕೆ ಬಿಎಲ್‌ಎ ಅಸಮಾಧಾನ
ಪಾಕಿಸ್ತಾನ ಸೇನೆ ಹಾಗೂ ಚೀನಾ ಹಿತಾಸಕ್ತಿ ವಿಚಾರದಲ್ಲಿ ಬಲೂಚ್ ಬಂಡುಕೋರರಿಗೆ ಸಹಮತ ಇಲ್ಲ. ಪಾಕಿಸ್ತಾನದ ಗ್ವಾದರ್‌ನ್ನು ಚೀನಾಕ್ಕೆ ಬಿಟ್ಟುಕೊಟ್ಟ ವಿಚಾರದಲ್ಲಿ ಬಲೂಚ್ ಬಂಡುಕೋರರ ವಿರೋಧ ಇದೆ. ಇಲ್ಲಿ ಬಂದರು ನಿರ್ಮಾಣ ನಡೆಯುತ್ತಿದ್ದು, ಆ ಭಾಗದಲ್ಲಿ ಅವರು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇನ್ನೂ ಬಿಎಲ್‌ಎ ಬಂಡುಕೋರರು ಇರಾನ್ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಬಲೂಚಿಸ್ತಾನ್ ಖನಿಜ ಸಂಪತ್ತಿಗೆ ಹೆಸರುವಾಸಿ
ಪಾಕಿಸ್ತಾನದ ಮಟ್ಟಿಗೆ ಬಲೂಚಿಸ್ತಾನ ಉತ್ತಮ ಆದಾಯ ತರುವ ಪ್ರದೇಶವಾಗಿದೆ. ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಮೂಲಕ ಚೀನಾ ಈ ಪ್ರದೇಶದಲ್ಲಿ 65 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬೆಲ್ಸ್ ಆಂಡ್ ರೋಡ್ ಉಪಕ್ರಮದ ಭಾಗವಾಗಿ ಜಾರಿಯಾಗಿದೆ. ಈ ಪ್ರಾಂತ್ಯದಲ್ಲಿ ಬ್ಯಾರಿಕ್ ಗೋಲ್ಡ್‌ಗೆ ಸೇರಿದ ರೇಕೊ ಡಿಕ್ ಸೇರಿ ಹಲವು ಗಣಿಗಾರಿಕೆ ಯೋಜನೆಗಳಿವೆ. ಈ ಪ್ರಾಂತ್ಯದಲ್ಲೇ ಜಗತ್ತಿನ ಅತಿದೊಡ್ಡ ಚಿನ್ನ ಹಾಗೂ ತಾಮ್ರದ ಗಣಿ ಇದೆ. ಚೀನಾ ಕೂಡ ಇಲ್ಲಿಂದ ಚಿನ್ನ ಹಾಗೂ ತಾಮ್ರದ ಗಣಿಗಾರಿಕೆ ನಡೆಸುತ್ತಿದೆ.
ಬಲೂಚಿಸ್ತಾನ್ ಸ್ವಾತಂತ್ರ್ಯಕ್ಕೆ ಬಿಎಲ್‌ಎ ಪಣ
ಕಳೆದುಹೋದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಬಲೂಚಿಸ್ತಾನ ಇನ್ನೂ ಹೋರಾಡುತ್ತಿದೆ. ರಾಜಕುಮಾರ ಅಬ್ದುಲ್ ಕರೀಮ್‌ನಿಂದ ನವಾಬ್ ಖೈರ್ ಬುಕ್ಷ್ ಮರ್ರಿ ಸೇರಿದಂತೆ ಹಲವಾರು ಬಲೂಚಿಸ್ತಾನದ ನಾಯಕರು ಬಲೂಚಿಸ್ತಾನವನ್ನು ಪಾಕಿಸ್ತಾನದೊಂದಿಗೆ ವಿಲೀನ ಮಾಡಿರುವುದನ್ನು ʻಆಕ್ರಮಣʼ ಎಂದು ಕರೆದಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಈ ಸ್ವಾಧೀನವನ್ನು ಇಸ್ಲಾಮಿಕ್ ಸಹೋದರತ್ವದ ವಿಲೀನ ಎಂದು ಹೇಳಿಕೊಳ್ಳುತ್ತದೆ.
1948 ರಿಂದ ವಿಲೀನ ಮಾಡಿರುವುದರ ವಿಚಾರಕ್ಕೆ ಹಿಂಸಾಚಾರಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಬಲೂಚಿಸ್ತಾನದಲ್ಲಿ ಐದು ವಿಭಿನ್ನ ದಂಗೆಗಳು ನಡೆದಿವೆ. 1948 ರಲ್ಲಿ ಆರಂಭಿಕ ದಂಗೆಯ ನಂತರ, ಬಲೂಚಿಸ್ತಾನದವರು ಕ್ರಮವಾಗಿ 1958, 1963-69, 1973-77 ರಲ್ಲಿ ಮೂರು ಬಾರಿ ಪಾಕ್ ವಿರುದ್ಧ ದಂಗೆಗಳು ನಡೆದಿವೆ. 1990 ರ ದಶಕದ ಅಂತ್ಯದಲ್ಲಿ, ದಿ.ನವಾಬ್ ಖೈರ್ ಬುಕ್ಷ್ ಮಾರಿ ನಿರ್ದೇಶನದ ಮೇರೆಗೆ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನದ ಐದನೇ ಹೋರಾಟ ಆರಂಭವಾಯಿತು. ಆಗಸ್ಟ್ 2006 ರಲ್ಲಿ ಹಿರಿಯ ಬಲೂಚ್ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಹತ್ಯೆಯ ನಂತರ, ಹಿಂಸಾಚಾರವು ಬಲೂಚಿಸ್ತಾನದಾದ್ಯಂತ ವ್ಯಾಪಿಸಿತು. ಬುಗ್ತಿ ಅವರ ಮರಣದ ನಂತರ, ಸ್ವತಂತ್ರ ರಾಜ್ಯಕ್ಕಾಗಿ ಬೆಂಬಲದ ಅಲೆ ಹೆಚ್ಚಾಯಿತು.
ದಂಗೆ ನಿಯಂತ್ರಣಕ್ಕೆ ಪಾಕ್‌ನಿಂದ ಕೊಂದು ಎಸೆಯಿರಿ ನೀತಿ
2009 ರಲ್ಲಿ ದಂಗೆ ನಿಯಂತ್ರಣಕ್ಕೆ ಪಾಕಿಸ್ತಾನ ಸರ್ಕಾರವು ʻಕೊಂದು ಎಸೆಯಿರಿʼ ಎಂಬ ನೀತಿಯನ್ನು ಜಾರಿಗೆ ತಂದಿತು. 2009 ರಿಂದ ಹಲವಾರು ರಾಜಕೀಯ ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ನ್ಯಾಯಾಲಯದ ಹೊರಗೆ ಕೊಲ್ಲಲಾಗಿದೆ. 2014ರ ಅಂತ್ಯದ ವೇಳೆಗೆ, ಸರ್ಕಾರದ ದೌರ್ಜನ್ಯಗಳನ್ನು ಟೀಕಿಸಲು ಪ್ರಯತ್ನಿಸಿದವರನ್ನು ಪಾಕಿಸ್ತಾನಿ ಸೈನಿಕರು ಬೇಟೆಯಾಡಿದ್ದರು. ಇದಾದ ಬಳಿಕ ಹೋರಾಟದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು.
ಬಲೂಚಿಸ್ತಾನದ ಮಾನವ ಹಕ್ಕುಗಳ ಆಯೋಗದ 2021 ರ ವಾರ್ಷಿಕ ವರದಿ ಪ್ರಕಾರ, ಪಾಕ್ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಬಲೂಚಿಸ್ಥಾನದಲ್ಲಿ 47 ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿದ್ದು, 366 ಜನರು ಸಾವನ್ನಪ್ಪಿದ್ದಾರೆ. 442 ಜನರು ಕಾಣೆಯಾಗಿದ್ದಾರೆ. ಅವರಲ್ಲಿ 170 ಜನರನ್ನು ಚಿತ್ರಹಿಂಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದೆಲ್ಲದರ ವಿರುದ್ಧ ತಿರುಗಿ ಬಿದ್ದಿರುವ ಬಿಎಲ್‌ಎ ಈಗ ಪಾಕ್‌ನ್ನು ಸೆದೆ ಬಡಿಯಲು ಮುಂದಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ದಾಳಿಗಳಿಂದ ಪಾಕ್‌ನ ಸೈನಿಕರು ಸಹ ಸೇನೆಯನ್ನು ತೊರೆಯುತ್ತಿದ್ದಾರೆ. ಒಂದೇ ವಾರದಲ್ಲಿ ಸುಮಾರು 2500 ಜನ ಯೋಧರು ಸೇನೆ ತೊರೆದಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್: ಬಲೂಚಿಸ್ತಾನ (Balochistan) ಸೇರಿದಂತೆ ಪಾಕಿಸ್ತಾನದ (Pakistan) ಅನೇಕ ಕಡೆಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿಯಿಂದ ಪಾಕ್ ಯೋಧರು (Pakistan Army) ಸೇನೆಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರದ ಬಗ್ಗೆ ಪಾಕ್ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ.
ಬಲೂಚಿಸ್ತಾನ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ – ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಈ ದಾಳಿಗಳಿಂದ ಭಾರೀ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿರುವುದೇ ಇತರರು ರಾಜೀನಾಮೆ ನೀಡಲು ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್ ದಾಳಿ – ಪಾಕ್ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ
ಮಾ.16ರಂದು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಪುಲ್ವಾಮಾ ಮಾದರಿಯ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 90 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಿಎಲ್‌ಎ ಹೇಳಿಕೊಂಡಿತ್ತು. ಪಾಕಿಸ್ತಾನದಲ್ಲಿ ಭದ್ರತಾ ವ್ಯವಸ್ಥೆ ಬಹಳ ಕಳಪೆಯಾಗಿದೆ. ಇದಕ್ಕಾಗಿ ಸೇನೆ ತೊರೆಯುತ್ತಿರುವ ಯೋಧರು ತಮ್ಮ ಜೀವ ಕಳೆದುಕೊಳ್ಳುವ ಬದಲಿಗೆ ಸೇನೆ ತೊರೆದು ವಿದೇಶಗಳಲ್ಲಿ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ
– 100ಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸುವ ಎಚ್ಚರಿಕೆ ನೀಡಿದ ಉಗ್ರರು
ಇಸ್ಲಾಮಾಬಾದ್: 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು (Jaffar Express Train) ಬಲೂಚಿಸ್ತಾನ್ (Balochistan) ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಬೋಲಾನ್ ಪ್ರದೇಶದಲ್ಲಿ ಇಂದು (ಮಂಗಳವಾರ) ಹೈಜಾಕ್ ಮಾಡಿದೆ ಎಂದು ವರದಿಯಾಗಿದೆ.
ಬಲೂಚ್ ಲಿಬರೇಶನ್ ಆರ್ಮಿ (BLA) ಭಯೋತ್ಪಾದಕ ಗುಂಪು ದಾಳಿ ಹೊಣೆ ಹೊತ್ತುಕೊಂಡಿದೆ. ಘಟನೆಯಲ್ಲಿ 6 ಮಂದಿ ಸೈನಿಕರು ಹತ್ಯೆಗೀಡಾಗಿದ್ದು, ರೈಲು ಚಾಲಕ ಗಾಯಗೊಂಡಿದ್ದಾರೆ. ಸುಮಾರು 120 ಮಂದಿಯನ್ನು ಉಗ್ರರ ಗುಂಪು ಒತ್ತೆಯಾಳಾಗಿರಿಸಿಕೊಂಡಿದೆ. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ
ಮೊದಲಿಗೆ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಬೋಲಾನ್‌ನ ಧದರ್‌ನ ಮಶ್ಕಾಫ್‌ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಅಳಿಯನ್ನು ಉಗ್ರರು ಸ್ಫೋಟಿಸಿದ್ದಾರೆ. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಅಳಿ ತಪ್ಪಿದ್ದು, ದಾಳಿ ನಡೆಸಿದ ನಮ್ಮ ಉಗ್ರರು ರೈಲನ್ನು ಹೈಜಾಕ್ ಮಾಡಿದ್ದಾರೆ ಎಂದು ಉಗ್ರರ ಗುಂಪು ಹೇಳಿಕೊಂಡಿದೆ. ಇದನ್ನೂ ಓದಿ: ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!
ಸದ್ಯ ಉಗ್ರರು ಸೆರೆ ಹಿಡಿದಿರುವ ಒತ್ತೆಯಾಳುಗಳಲ್ಲಿ ಪಾಕಿಸ್ತಾನಿ ಮಿಲಿಟರಿ, ಪೊಲೀಸ್, ಭಯೋತ್ಪಾದಕ ನಿಗ್ರಹ ದಳ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಕರ್ತವ್ಯ ನಿರತ ಸಿಬ್ಬಂದಿಯೂ ಸೇರಿದ್ದಾರೆ. ಇವರೆಲ್ಲರೂ ರಜೆಯ ಮೇಲೆ ಪಂಜಾಬ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕೆಲವರು ಪಾಕಿಸ್ತಾನಿ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಆದ್ರೆ ಸೆರೆ ಸಿಕ್ಕ ಮಹಿಳೆಯರು ಮಕ್ಕಳು ಮತ್ತು ಬಲೂಚಿಸ್ತಾನದ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದೇವೆ ಎಂದು ಉಗ್ರರ ಗುಂಪು ಹೇಳಿದೆ.
ರಕ್ತಪಾತದ ಎಚ್ಚರಿಕೆ ನೀಡಿದ ಉಗ್ರರ ಗುಂಪು!
ನಾವು ರೈಲನ್ನು 100ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದೇವೆ. ನಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೂ ಅದರ ಪರಿಣಾಮ ತೀವ್ರವಾಗಿರುತ್ತದೆ. 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಗಲ್ಲಿಗೇರಿಸಲಾಗುವುದು. ಈ ರಕ್ತಪಾತದ ಸಂಪೂರ್ಣ ಜವಾಬ್ದಾರಿ ಸೇನೆಯೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
– ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು?
– ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ
ಇಸ್ಲಾಮಾಬಾದ್: ಕಾರ್ಗಿಲ್ ಯುದ್ಧ (1999 Kargil War) ನಡೆದ 25 ವರ್ಷದ ನಂತರ ಭಾರತದೊಂದಿಗೆ ಮಾರಣಾಂತಿಕ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ತನ್ನ ಪಾತ್ರದ ಬಗ್ಗೆ ಒಪ್ಪಿಕೊಂಡಿದೆ. ಈ ಕುರಿತು ಖುದ್ದು ಅಲ್ಲಿನ ಸೇನಾಧಿಕಾರಿಯೇ ಬಹಿರಂಗ ಹೇಳಿಕೆ ನೀಡಿದ್ದಾರೆ.
First time ever #PakistaniArmy accepts involvement in #KargilWar. Pakistan Army Chief General #AsimMunir confirms Pakistan Army’s involvement in #KargilWar. Pakistan Army Chief General Asim Munir in a defence day speech on Friday said, “1948, 1965, 1971 or Kargil war between… pic.twitter.com/Um83MwSrwM
ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನೆಯ (Pakistan Army) ಪ್ರಧಾನ ಕಚೇರಿಯಲ್ಲಿ ನಡೆದ ʻರಕ್ಷಣಾ ದಿನʼ ಕಾರ್ಯಕ್ರಮದ ಭಾಷಣದಲ್ಲಿ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಪಾಕ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಭಾರತ-ಪಾಕ್ ಮಧ್ಯೆ ನಡೆದ 1948, 1965, 1971ರ ಯುದ್ಧ, ಕಾರ್ಗಿಲ್ ಯುದ್ಧ, ಸಿಯಾಚಿನ್ ಘರ್ಷಣೆಯಲ್ಲಿ ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ.
• After 25 years, the Pakistan Army has admitted it was directly involved in the Kargil War.
• This is the first time they’ve done so, as they previously said it was just “Mujahideen” fighters. Pakistan had also refused to accept the bodies of its officers who… https://t.co/BFNQIW8HAVpic.twitter.com/CDjZDvAW8L
ಮೇ ಮತ್ತು ಜುಲೈ 1999ರ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನಿ ಪಡೆಗಳು ನುಸುಳಿದವು. ಆಗ ಭಾರತೀಯ ಸೇನೆ ʻಆಪರೇಷನ್ ವಿಜಯ್ʼ ಅಡಿಯಲ್ಲಿ ಅವರನ್ನು ಹಿಮ್ಮೆಟ್ಟಿಸಿತ್ತು. ಹಿಂದೆ, ಇಸ್ಲಾಮಾಬಾದ್ ನುಸುಳುಕೋರರನ್ನು ʻಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರುʼ ಅಥವಾ ʻಮುಜಾಹಿದೀನ್‌ಗಳುʼ ಉಲ್ಲೇಖಿಸುತ್ತಾ ನೇರವಾಗಿ ಸೇನಾ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದರು.
ಸೇನಾ ಮುಖ್ಯಸ್ಥ ಮುನೀರ್ ಅವರ ಈ ಹೇಳಿಕೆಯು ಸೋಷಿಯಲ್ ಮೀಡಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಭಾರತ್ ಸ್ಪೆಕ್ಟ್ರಮ್ ಎಂಬ ಎಕ್ಸ್ ಖಾತೆಯಲ್ಲಿ ಅಂದು ಖಾರ್ಗಿಲ್ ಯುದ್ಧದಲ್ಲಿ ಮಡಿದ ಅಧಿಕಾರಿಗಳ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನದ ಸೇನೆಯು ನಿರಾಕರಿಸಿದ ವರದಿಗಳನ್ನು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು
ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್!
ಆಸೀಮ್ ಮುನೀರ್ ಕಾರ್ಗಿಲ್ ಯುದ್ಧದ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದನೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಪಾತ್ರವು ಬಹಿರಂಗವಾಗಿದೆ. ಈಗ ಪಾಕಿಸ್ತಾನವೇ ಅದನ್ನು ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಇನ್ನೂ ಪಾಕಿಸ್ತಾನದೊಂದಿಗೆ ಮಾತುಕತೆಗೆ ಪ್ರತಿಪಾದಿಸುತ್ತಿವೆ. ಅವರು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ಪ್ರಶ್ನಿಸುತ್ತಾರೆ, ಮೋದಿಯನ್ನು ವಿರೋಧಿಸುವ ನೆಪದಲ್ಲಿ, ನಿಜವಾಗಿಯು ಭಾರತವನ್ನು ಭಾರತ್ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇಸ್ಲಾಮಾಬಾದ್: ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ (Faiz Hameed) ಅವರನ್ನು ಸೇನೆ ಬಂಧಿಸಿದೆ.
ಪಾಕಿಸ್ತಾನ ಸೇನೆಯ (Pak Army) ಸಾರ್ವಜನಿಕ ಸಂಪರ್ಕ ವಿಭಾಗವು, ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶ ಅನುಸರಿಸಿ, ಲೆಫ್ಟಿನೆಂಟ್ ವಿರುದ್ಧ ಮಾಡಿದ ಟಾಪ್ ಸಿಟಿ ಕೇಸ್‌ನಲ್ಲಿನ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸೇನೆಯು ತನಿಖೆ ಕೈಗೊಂಡಿದೆ. ಪಾಕಿಸ್ತಾನ ಸೇನಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸುಳ್ಳು ವರದಿ ಪ್ರಕಟಿಸಿದ್ರೆ ಮಾಧ್ಯಮಗಳನ್ನು ಮುಚ್ಚುತ್ತೇವೆ: ಬಾಂಗ್ಲಾ ಸರ್ಕಾರ ಬೆದರಿಕೆ
ಪಾಕಿಸ್ತಾನದ ಖಾಸಗಿ ವಸತಿ ಯೋಜನೆಯಾದ ಟಾಪ್ ಸಿಟಿ, ಹಮೀದ್ ವಿರುದ್ಧ ಆರೋಪಗಳನ್ನು ಮಾಡಿದೆ. ಟಾಪ್ ಸಿಟಿ ಮಾಲೀಕ ಮೊಯೀಜ್ ಖಾನ್ ಅವರ ಕಚೇರಿಗಳು ಮತ್ತು ನಿವಾಸದ ಮೇಲೆ ಹಮೀದ್ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇಸ್ಲಾಮಾಬಾದ್: ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2024) ಟೂರ್ನಿಗಾಗಿ ಪಾಕ್ ಕ್ರಿಕೆಟ್ ತಂಡ (Pakistan Cricket Team) ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ. ಈ ಬಾರಿ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಪಾಕ್ ತಂಡಕ್ಕೆ ಸೇನೆಯಿಂದ ಕಠಿಣ ತರಬೇತಿ ಕೊಡಿಸಲಾಗುತ್ತಿದೆ. ಕ್ರಿಕೆಟ್ ಆಟಗಾರರಿಗೆ ಗನ್ ತರಬೇತಿ (Gun Training) ನೀಡಲಾಗುತ್ತಿದೆ.
ಪಾಕಿಸ್ತಾನ ಕ್ರಿಕೆಟಿಗರು ವಿಶ್ವಕಪ್ ಟೂರ್ನಿಗಾಗಿ ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲು ಹೊತ್ತು ನಡೆಯುವುದು, ಸೈನಿಕರನ್ನ ಬೆನ್ನ ಮೇಲೆ ಹೊತ್ತುಕೊಂಡು ಮುಂದೆ ಸಾಗುವ ಅಭ್ಯಾಸಗಳನ್ನ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟ್ ಫ್ಯಾನ್ಸ್ (Team India Cricket Fans) ಪಾಕ್ ಕ್ರಿಕೆಟಿಗರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅಲ್ಲದೇ ನೆಟ್ಟಿಗರು ಇದೆಲ್ಲಾ ಬೇಕಿತ್ತಾ? ಅನಗತ್ಯ ತರಬೇತಿ ನೀಡಿ ಆಟಗಾರರ ಸಮಯವನ್ನೂ ವ್ಯರ್ಥಮಾಡಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದ್ರೆ ಪಾಕ್ ಸೇನೆಯು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ. ಆದರೆ ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿ ಇಂತಹ ಸಾಮಾನ್ಯ ಜ್ಞಾನವನ್ನೂ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಆಟಗಾರರಿಗೆ ಅಸಾಧಾರಣ ಸವಾಲು ನೀಡಿದೆ ಎಂದು ದೂರಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಎಲ್ಲಿ-ಯಾವಾಗ?
2024ರ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್ 1 ರಿಂದ ಜೂನ್ 29ರ ವರೆಗೆ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಯ್ಕೆಗೆ ಡೆಡ್‌ಲೈನ್ ಫಿಕ್ಸ್