Tag: Pakistan Advertising

  • ಇಂಡೋ, ಪಾಕ್ ಹೈವೋಲ್ಟೇಜ್ ಕದನ – ಪಂದ್ಯ ರದ್ದಾದರೆ ಆಗಲಿದೆ ಭಾರೀ ನಷ್ಟ

    ಇಂಡೋ, ಪಾಕ್ ಹೈವೋಲ್ಟೇಜ್ ಕದನ – ಪಂದ್ಯ ರದ್ದಾದರೆ ಆಗಲಿದೆ ಭಾರೀ ನಷ್ಟ

    ಲಂಡನ್: 2019ರ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತ್ತಿದ್ದು, ಪಂದ್ಯಕ್ಕೆ ಮಳೆ ಭೀತಿ ಇರುವುದರಿಂದ ಹಲವರು ಮಳೆ ಬರದಿರಲೆಂದು ಆಶಿಸಿದ್ದಾರೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಪಂದ್ಯದ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಭಾರೀ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

    ಮೂಲಗಳ ಪ್ರಕಾರ ಭಾರತ, ಪಾಕಿಸ್ತಾನ ನಡುವಿನ ಇಂದಿನ ಪಂದ್ಯ ರದ್ದಾದರೆ ಸುಮಾರು 137.5 ಕೋಟಿ ರೂ. ನಷ್ಟ ಆಗಲಿದೆ ಎನ್ನಲಾಗಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಇಂದಿನ ಪಂದ್ಯಕ್ಕೆ ಕೋಕಾ ಕೋಲಾ, ಉಬರ್, ಒನ್ ಪ್ಲಸ್ ಹಾಗೂ ಎಂಆರ್ ಎಫ್ ಸೇರಿದಂತೆ ಇತರೆ ಸಂಸ್ಥೆಗಳು ಜಾಹೀರಾತು ನೀಡಿವೆ.

    ವಿಶ್ವಕಪ್ ಟೂರ್ನಿಯ ಇತರೆ ಪಂದ್ಯಗಳಿಗಿಂತ ಈ ಪಂದ್ಯಕ್ಕೆ ಶೇ.50 ರಷ್ಟು ಹೆಚ್ಚಿನ ದರ ವಿಧಿಸಲಾಗಿದ್ದು, ಆದರೂ ಸಂಸ್ಥೆಗಳು ಜಾಹೀರಾತು ನೀಡಲು ಮುಗಿಬಿದ್ದಿವೆ ಎಂದು ಹೇಳಲಾಗುತ್ತಿದೆ. ಪಂದ್ಯದಲ್ಲಿ ಒಟ್ಟಾರೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಗೆ 5,500 ಸೆಕೆಂಡ್ ಜಾಹೀರಾತು ನೀಡಲು ಅವಕಾಶವಿದೆ.

    ವಿಶ್ವಕಪ್ ಕ್ರಿಕೆಟ್ ಪಂದ್ಯಗಳಿಗೆ ಸಾಮಾನ್ಯವಾಗಿ ಪ್ರತಿ ಸೆಕೆಂಡ್ ಜಾಹೀರಾತಿಗೆ 1.6 ರಿಂದ 1.8 ಲಕ್ಷ ರೂ. ಇದ್ದರೆ ಇಂಡೋ-ಪಾಕ್ ಕದನಕ್ಕೆ 2.5 ಲಕ್ಷ ರೂ.ಗಳನ್ನು ಪ್ರತಿ ಸೆಕೆಂಡಿಗೆ ನಿಗದಿ ಮಾಡಲಾಗಿದೆ. ಈಗಾಗಲೇ ಪಂದ್ಯದ ಟಿಕೆಟ್ ಮಾರಾಟ ಕೆಲವೇ ಗಂಟೆಗಳಲ್ಲಿ ಅಂತ್ಯವಾಗಿದ್ದು, ರೀಸೇಲ್ ಕೂಡ ಭಾರೀ ಮಟ್ಟದಲ್ಲಿ ನಡೆದಿರುವುದು ಸುದ್ದಿಯಾಗಿತ್ತು. ಇತ್ತ ಮ್ಯಾಂಚೆಸ್ಟರ್ ಹವಾಮಾನ ವರದಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಮುನ್ಸೂಚನೆ ನೀಡಿದೆ.