Tag: pakistan actor

  • ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಇಸ್ಲಾಮಾಬಾದ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 WorldCup) ಟೂರ್ನಿ ಅತ್ಯಂತ ರೋಚಕತೆಯಿಂದ ಕೂಡಿದೆ. `ಬಿ’ ಗುಂಪಿನಲ್ಲಿ ಯಾವ ತಂಡ ಸೆಮಿಗೆ ಹೋಗಲಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಆದರೆ ಪಾಯಿಂಟ್ಸ್ ಟೇಬಲ್‌ನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಬಹುತೇಕ ಸೆಮಿ ಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡಿದೆ.

    ಭಾನುವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ (MCG) ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ ಟೀಂ ಇಂಡಿಯಾ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ. ಈ ನಡುವೆಯೇ ಪಾಕಿಸ್ತಾನದ (Pakistan) ನಟಿ ಸೆಹಾರ್ ಶಿನ್ವಾರಿ (Sehar Shinwari) ಜಿಂಬಾಬ್ವೆಗೆ (Zimbabwe) ಬಂಪರ್ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

    ಸೆಪ್ಟೆಂಬರ್ 6 ರಂದು ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾವನ್ನು ಅದ್ಭುತವಾಗಿ ಸೋಲಿಸಿದರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ನಟಿ ಸೆಹಾರ್ ಶಿನ್ವಾರ್ ಟ್ವೀಟ್ ಮಾಡಿದ್ದಾರೆ. ಪಾಕ್ ನಟಿಯ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದು, ನಿಮ್ಮ ಇಡೀ ಜೀವನ ನೀವು ಹೀಗೆ ಏಕಾಂಗಿಯಾಗಿಯೇ ಬದುಕುತ್ತೀರಿ, ಅದಕ್ಕಾಗಿ ವಿಷಾದಿಸುತ್ತೇನೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಈಗಾಗಲೇ 4 ಪಂದ್ಯಗಳನ್ನಾಡಿರುವ ಪಾಕಿಸ್ತಾನ (Pakistan) 2 ಪಂದ್ಯಗಳಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 4 ಅಂಕಗಳನ್ನು ಪಡೆದಿರುವ ಬಾಂಗ್ಲಾದೇಶ (Bangladesh) ತನ್ನ ಸೆಮಿಸ್ ಹಾದಿ ಕಠಿಣವಾಗಿಸಿಕೊಂಡಿದೆ. ಅಕ್ಟೋಬರ್ 6ರಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದ್ದು, ಗೆದ್ದ ತಂಡಗಳು ಸೆಮಿಸ್ ರೇಸ್‌ನಲ್ಲಿ ಉಳಿಯಲಿವೆ. ಇನ್ನೂ ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಲ್ಲಿರುವ ಭಾರತ (India), ಜಿಂಬಾಬ್ವೆ (Zimbabwe) ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿವೆ.

    ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ಸೋಲಬೇಕೆಂಬುದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಆಶಯವಾಗಿದೆ. ಈ ನಡುವೆ ಪಾಕ್ ನಟಿ ಜಿಂಬಾಬ್ವೆಗೆ ಆಫರ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾನ್ ಫೆಸ್ಟಿವಲ್‌ನಲ್ಲಿ ಪಾಕಿಸ್ತಾನದ ತೃತೀಯ ಲಿಂಗಿ ಕಲಾವಿದೆ

    ಕಾನ್ ಫೆಸ್ಟಿವಲ್‌ನಲ್ಲಿ ಪಾಕಿಸ್ತಾನದ ತೃತೀಯ ಲಿಂಗಿ ಕಲಾವಿದೆ

    ವಿಶ್ವದ ಗಮನ ಇದೀಗ ಕಾನ್ ಸಿನಿಮೋತ್ಸವದಲ್ಲಿದೆ. ಎಲ್ಲಾ ಚಿತ್ರರಂಗದ ಸ್ಟಾರ್‌ಗಳು ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಈಗ ವಿಶೇಷವೆಂದರೆ ಪಾಕಿಸ್ತಾನದ ತೃತಿಯ ಲಿಂಗಿ ಕಲಾವಿದೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ, ಎಲ್ಲರ ಗಮನ ಸೆಳೆದಿದ್ದಾರೆ.

    ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾನ್ ಫೆಸ್ಟಿವಲ್‌ನಲ್ಲಿ ಹಾಲಿವುಡ್, ಭಾರತೀಯ ಚಿತ್ರರಂಗ ಸೇರಿದಂತೆ ವಿಶ್ವದ ಖ್ಯಾತ ತಾರೆಯರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಮೊದಲ ಬಾರಿಗೆ ಪಾಕಿಸ್ತಾನದ ಚಿತ್ರವೊಂದು ಅವಕಾಶ ಪಡೆದಿದೆ. ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ `ಜಾಯ್‌ಲ್ಯಾಂಡ್’ ಚಿತ್ರದ ತೃತಿಯ ಲಿಂಗಿ ನಟಿ ಅಲಿನಾ ಖಾನ್ ಕೂಡ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ರೆಡ್ ಕಾರ್ಪೆಟ್‌ನಲ್ಲಿ ತೃತಿಯ ಲಿಂಗಿ ಪಾಕಿಸ್ತಾನ ನಟಿಯೊಬ್ಬರು ಹೆಜ್ಜೆ ಹಾಕಿದ್ದು, ಈ ವಿಚಾರ ವಿಶ್ವದೆಲ್ಲೆಡೆ ಸುದ್ದಿಯಾಗಿದೆ.

    ಸೈಮ್ ಸಾದಿಕ್ ನಿರ್ದೇಶನದ `ಜಾಯ್‌ಲ್ಯಾಂಡ್’ ಚಿತ್ರದಲ್ಲಿ ಅಲಿನಾ ಖಾನ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಭಿನ್ನ ಕಥೆಯನ್ನ ಸಿನಿಪ್ರಿಯರು ನೋಡಿ ಇಷ್ಟಪಟ್ಟಿದ್ದರು. ಇದೀಗ ಕಾನ್ ಫೆಸ್ಟಿವಲ್‌ಗೂ ಈ ಸಿನಿಮಾ ಸೆಲೆಕ್ಟ್ ಆಗಿ ಅಲಿಯಾ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತೃತಿಯ ಲಿಂಗಿ ಕಥೆಯನ್ನ ಒಳಗೊಂಡಿರೋ `ಜಾಯ್‌ಲ್ಯಾಂಡ್’ ಕಥೆ ಕಾನ್ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಲಿದೆ. ಇದನ್ನೂ ಓದಿ: ನಟಿ ಚೈತ್ರಾ ಹಳ್ಳಿಕೇರಿ 25 ಕೋಟಿ ಬೇಡಿಕೆ ಇಟ್ಟರಾ? ನಟಿಯ ಆರೋಪಕ್ಕೆ ತಿರುಗೇಟು ನೀಡಿದ ಪತಿ ಬಾಲಾಜಿ

    ಕಾನ್ ಫೆಸ್ಟಿವಲ್ ಮೇ 17ರಂದು ಆರಂಭವಾಗಿದ್ದು, ಮೇ 28ಕ್ಕೆ ಮುಕ್ತಾಯಗೊಳ್ಳಲಿದೆ. ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡ್ರೆ, ಪೂಜಾ ಹೆಗ್ಡೆ, ತಮನ್ನಾ, ಐಶ್ವರ್ಯ ರೈ, ಊರ್ವಶಿ ಇನ್ನು ಮುಂತಾದ ತಾರೆಯರು ಕಾನ್ ಫಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ.