Tag: pakistan

  • ಪಾಕ್‌ ಜೊತೆಗಿನ ಸಂಬಂಧ ಭಾರತದ ಸ್ನೇಹಕ್ಕೆ ಧಕ್ಕೆ ತರುವುದಿಲ್ಲ – ಮಾರ್ಕೊ ರೂಬಿಯೊ

    ಪಾಕ್‌ ಜೊತೆಗಿನ ಸಂಬಂಧ ಭಾರತದ ಸ್ನೇಹಕ್ಕೆ ಧಕ್ಕೆ ತರುವುದಿಲ್ಲ – ಮಾರ್ಕೊ ರೂಬಿಯೊ

    ವಾಷಿಂಗ್ಟನ್‌: ಪಾಕಿಸ್ತಾನದ (Pakistan) ಜೊತೆಗಿನ ಸಂಬಂಧ ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದ್ರೆ ಇದು ಭಾರತದೊಂದಿಗಿನ ಸ್ನೇಹಕ್ಕೆ, ಐತಿಹಾಸಿಕ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

    ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭೇಟಿಯ ನಂತರ ಈ ಬೆಳವಣಿಗೆ ನಡೆದಿದೆ. ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದನ್ನು ಭಾರತ ತಿರಸ್ಕರಿಸಿದ್ದರೆ, ಪಾಕಿಸ್ತಾನವು ಸಂಘರ್ಷ ಕೊನೆಗೊಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷರಿಗೆ ಮಣೆ ಹಾಕಿದೆ. ಇದನ್ನೂ ಓದಿ: ಅರ್ಧಗಂಟೆ ಅಂತರದಲ್ಲಿ 2 ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

    ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮುನ್ನ ಮಾತನಾಡಿದ ರುಬಿಯೋ, ಪಾಕಿಸ್ತಾನ ಜೊತೆಗಿನ ಸಂಬಂಧ ಬಲಪಡಿಸುವಿಕೆಯೂ ಭಾರತದ ಜೊತೆಗಿನ ಐತಿಹಾಸಿಕ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ. ಆದ್ರೆ ಅಮೆರಿಕಕ್ಕೆ ಎಲ್ಲ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದುವುದು ಅನಿವಾರ್ಯ. ಭಾರತ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ.

    ರಕ್ಷಣಾ ಸಂಬಂಧ ವೃದ್ಧಿಗಾಗಿ ನಾವು ಪಾಕಿಸ್ತಾನದ ಜೊತೆ ಸಂಬಂಧ ಬೆಳೆಸುತ್ತಿದ್ದೇವೆ. ಭಾರತೀಯರು ರಾಜತಾಂತ್ರಿಕತೆ ಮತ್ತು ಅಂತಹ ವಿಷಯಗಳಲ್ಲಿ ಬಹಳ ಪ್ರಬುದ್ಧರಾಗಿದ್ದಾರೆ. ನಾವು ಸಂಬಂಧ ಹೊಂದಿರದಂತಹ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಬಾಂಧವ್ಯ ಈಗಾಗಲೇ ಹೊಂದಿದೆ. ಹೀಗಾಗಿ ಇವೆಲ್ಲ ಪ್ರಬುದ್ಧತೆಯಿಂದ ಕೂಡಿದ ವಿದೇಶಾಂಗ ನೀತಿಯ ಭಾಗ ಎಂದಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಭಾರತೀಯ ಮೂಲದ 20ರ ಯುವತಿ ಮೇಲೆ ಅತ್ಯಾಚಾರ

    ಪಾಕ್‌ ಜೊತೆಗೆ ಸ್ನೇಹ ಬೆಳೆಸಬೇಕು
    ಪಾಕಿಸ್ತಾನ ಜೊತೆಗಿನ ಪಾಲುದಾರಿಕೆ, ವ್ಯಾಪಾರ ಸಂಬಂಧ ಮತ್ತಷ್ಟು ಹೆಚ್ಚಿಸಲು ಅಮೆರಿಕ ಬಯಸುತ್ತದೆ. ಆದರೆ, ಇಲ್ಲಿಯವರೆಗೂ ಭಾರತದೊಂದಿಗೆ ಇರುವ ಐತಿಹಾಸಿಕ ಸಂಬಂಧಕ್ಕೆ ಧಕ್ಕೆಯನ್ನುಂಟು ಮಾಡಿಕೊಂಡು, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಳೆಸಲು ಇಷ್ಟಪಡುವುದಿಲ್ಲ ಅಂತಲೂ ರುಬಿಯೋ ಹೇಳಿದ್ದಾರೆ.

  • ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಇಸ್ಲಾಮಾಬಾದ್: ಬಲೂಚಿಸ್ತಾನ್‌ ಪರ ಮಾತನಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಪಾಕಿಸ್ತಾನವು ‘ಭಯೋತ್ಪಾದಕ’ ಎಂಬ ಹಣಪಟ್ಟಿ ಕಟ್ಟಿದೆ.

    ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾರತೀಯ ಸಿನಿಮಾದ ಜಾಗತಿಕ ವ್ಯಾಪ್ತಿಯ ಬಗ್ಗೆ ಮಾತನಾಡುವಾಗ, ಬಲೂಚಿಸ್ತಾನ್ (Balochistan) ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರು. ಹೀಗಾಗಿ, ಪಾಕಿಸ್ತಾನ (Pakistan) ಸರ್ಕಾರ ಅವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಸಲ್ಮಾನ್ ಅವರನ್ನು ಪಾಕಿಸ್ತಾನದ 1997 ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ 4ನೇ ವೇಳಾಪಟ್ಟಿಯ ಅಡಿಯಲ್ಲಿ ಸೇರಿಸಲಾಗಿದೆ. ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕಟ್ಟುನಿಟ್ಟಿನ ನಿಗಾದಲ್ಲಿರುವ ವ್ಯಕ್ತಿಗಳಿಗೆ ಈ ವರ್ಗವನ್ನು ಕಾಯ್ದಿರಿಸಲಾಗಿದೆ.

    ‘ಈಗ ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ಗಳಿಸುತ್ತದೆ. ಏಕೆಂದರೆ ಇಲ್ಲಿ ಹಲವಾರು ದೇಶಗಳ ಜನರು ವಾಸಿಸುತ್ತಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್‌ ಖಾನ್‌ ಸಮಾರಂಭದಲ್ಲಿ ಮಾತನಾಡಿದ್ದರು.

    ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸುವ ಅವರ ಹೇಳಿಕೆಯು ಪಾಕ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ಪಾಕಿಸ್ತಾನ ಆ ಪ್ರಾಂತ್ಯವನ್ನು ದೇಶದ ಅವಿಭಾಜ್ಯ ಅಂಗವೆಂದು ನೋಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಅವರ ಮಾತುಗಳನ್ನು ಶ್ಲಾಘಿಸಿದ್ದಾರೆ. ಬಲೂಚ್ ಸ್ವಾತಂತ್ರ್ಯದ ಪ್ರಮುಖ ವಕೀಲರಾದ ಮೀರ್ ಯಾರ್ ಬಲೂಚ್, ‘ನಟ ಆರು ಕೋಟಿ ಬಲೂಚ್ ಜನರಿಗೆ ಸಂತೋಷ ತಂದಿದ್ದಾರೆ’ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ: ಟ್ರಂಪ್ ಅದೇ ರಾಗ

    ಪಾಕಿಸ್ತಾನದ ಅತಿದೊಡ್ಡ ಆದರೆ ಕಡಿಮೆ ಅಭಿವೃದ್ಧಿ ಹೊಂದಿದ ಪ್ರಾಂತ್ಯವಾದ ಬಲೂಚಿಸ್ತಾನ್, ದೀರ್ಘಕಾಲದಿಂದ ಆರ್ಥಿಕ ನಿರ್ಲಕ್ಷ್ಯ, ರಾಜಕೀಯ ದಮನ ಮತ್ತು ಮಿಲಿಟರಿ ದಮನಗಳನ್ನು ಎದುರಿಸುತ್ತಿದೆ. ಅಪಾರ ಖನಿಜ ಸಂಪತ್ತಿನ ಹೊರತಾಗಿಯೂ, ಈ ಪ್ರದೇಶವು ಬಡತನದಿಂದ ಬಳಲುತ್ತಿದೆ. ಅದರ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಬಡತನ ರೇಖೆಯ ಕೆಳಗಿದ್ದಾರೆ.

  • ಭಾರತದ ವಿರುದ್ಧ ಯುದ್ಧದಿಂದ ಪ್ರಯೋಜನವಿಲ್ಲ, ಯಾಕಂದ್ರೆ ಪಾಕಿಸ್ತಾನಿಗಳೇ ಸೋಲುತ್ತಾರೆ: ಪಾಕ್‌ ಕಾರ್ಯಾಚರಣೆಗಳ ಮಾಜಿ ಸಿಐಎ

    ಭಾರತದ ವಿರುದ್ಧ ಯುದ್ಧದಿಂದ ಪ್ರಯೋಜನವಿಲ್ಲ, ಯಾಕಂದ್ರೆ ಪಾಕಿಸ್ತಾನಿಗಳೇ ಸೋಲುತ್ತಾರೆ: ಪಾಕ್‌ ಕಾರ್ಯಾಚರಣೆಗಳ ಮಾಜಿ ಸಿಐಎ

    ಇಸ್ಲಾಮಾಬಾದ್: ಭಾರತದ ವಿರುದ್ಧ ಯುದ್ಧ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಪಾಕ್ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿಕೆ ನೀಡಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ. ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ನಿರಂತರವಾಗಿ ಭಾರತೀಯರನ್ನು ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    2016 ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019 ರಲ್ಲಿ ಬಾಲಾಕೋಟ್ ದಾಳಿ ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ 26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಗೆ ಭಾರತ ನಿರ್ಣಾಯಕವಾಗಿ ಪ್ರತ್ಯುತ್ತರ ನೀಡಿದೆ.

    2001 ರ ಸಂಸತ್ತಿನ ದಾಳಿಯ ನಂತರ, ಆಪರೇಷನ್ ಪರಾಕ್ರಮ್‌ ಕಾರ್ಯಾಚರಣೆ ನಡೆಯಿತು. ಭಾರತ-ಪಾಕಿಸ್ತಾನದ ಉದ್ವಿಗ್ನತೆಗಳು ಯುದ್ಧಕ್ಕೆ ಕಾರಣವಾಗಬಹುದೆಂದು ಅಮೆರಿಕವು ನಿರೀಕ್ಷಿಸಿತ್ತು. ಆಗ ಪಾಕಿಸ್ತಾನ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿತ್ತು ಎಂದು ಕಿರಿಯಾಕೌ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    ಪಾಕಿಸ್ತಾನದ ಪರಮಾಣು ಬಾಂಬ್ ವಿನ್ಯಾಸಗೊಳಿಸಿದ ಅಬ್ದುಲ್ ಖದೀರ್ ಖಾನ್ ಅವರನ್ನು ಅಮೆರಿಕ ನಿರ್ಮೂಲನೆ ಮಾಡಬಹುದಿತ್ತು. ಆದರೆ ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ಅವರನ್ನು ಉಳಿಸಿತು ಎಂದು ಕಿರಿಯಾಕೌ ತಿಳಿಸಿದ್ದಾರೆ.

    ನಾವು ಇಸ್ರೇಲಿ ವಿಧಾನವನ್ನು ಅಳವಡಿಸಿಕೊಂಡಿದ್ದರೆ, ಅವನನ್ನು ಕೊಲ್ಲುತ್ತಿದ್ದೆವು. ಅವನು ಎಲ್ಲಿ ವಾಸಿಸುತ್ತಿದ್ದಾನೆಂಬ ಬಗ್ಗೆ ನಮಗೆ ತಿಳಿದಿತ್ತು. ಆದರೆ, ಅವನಿಗೆ ಸೌದಿ ಸರ್ಕಾರದ ಬೆಂಬಲವಿತ್ತು. ಸೌದಿಗಳು ನಮ್ಮ ಬಳಿಗೆ ಬಂದು, ‘ದಯವಿಟ್ಟು ಅವನನ್ನು ಬಿಟ್ಟುಬಿಡಿ. ನಮಗೆ ಎಕ್ಯೂ ಖಾನ್ ಇಷ್ಟ. ನಾವು ಎಕ್ಯೂ ಖಾನ್ ಜೊತೆ ಕೆಲಸ ಮಾಡುತ್ತಿದ್ದೇವೆ. ಅವನನ್ನು ಬಿಟ್ಟುಬಿಡಿ’ ಎಂದು ಕೇಳಿಕೊಂಡಿತ್ತೆಂದು ತಿಳಿಸಿದ್ದಾರೆ.

  • ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    – ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತದೊಂದಿಗೆ ಇಬ್ಬಗೆಯ ಆಟ

    ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರ ಆಡಳಿತದ ಸಂದರ್ಭದಲ್ಲಿ ಅಮೆರಿಕ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಮೇಲೆ ನಿಯಂತ್ರಣ ಹೊಂದಿತ್ತು ಎಂದು ಮಾಜಿ ಕೇಂದ್ರ ಗುಪ್ತಚರ ಸಂಸ್ಥೆ (CIA) ಏಜೆಂಟ್ ಜಾನ್ ಕಿರಿಯಾಕೌ (John Kiriakou) ಗಂಭೀರ ಆರೋಪ ಮಾಡಿದ್ದಾರೆ.

    CIA ಯಲ್ಲಿ ವಿಶ್ಲೇಷಕರಾಗಿ, ನಂತರ ಭಯೋತ್ಪಾದನಾ ನಿಗ್ರಹ ಘಟಕದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಾನ್ ಕಿರಿಯಾಕೌ, ಪರ್ವೇಜ್ ಮುಷರಫ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಂದು ಕಾಲದಲ್ಲಿ ಪರ್ವೇಜ್ ಮುಷರಫ್‌ ಸರ್ಕಾರವನ್ನ ಖರೀದಿಸಲು ಅಮೆರಿಕ ಹೇಗೆ ಪಾಕಿಸ್ತಾನಕ್ಕೆ ಲಕ್ಷಾಂತರ ರೂಪಾಯಿ ನೆರವು ನೀಡಿತ್ತು ಅನ್ನೋ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಪಾಕಿಸ್ತಾನವು (Pakistan) ಭ್ರಷ್ಟಾಚಾರದ ಅಡಿಯಲ್ಲಿ ಹೂತುಹೋಗಿದೆ. ಅಲ್ಲಿನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತಹ ನಾಯಕರು ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇತ್ತ ದೇಶದ ಸಾಮಾನ್ಯ ನಾಗರಿಕರು ಬಳಲುತ್ತಿದ್ದರು ಎಂದು ಬೇಸರ ಹೊರಹಾಕಿದ್ದಾರೆ.

    ನಾನು 2002 ರಲ್ಲಿ ಪಾಕಿಸ್ತಾನದಲ್ಲಿದ್ದಾಗ ಅಮೆರಿಕದ ಪೆಂಟಗನ್ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನ ನಿಯಂತ್ರಿಸುತ್ತಿದೆ ಎಂದು ನನಗೆ ಅನಧಿಕೃತ ಮೂಲಗಳಿಂದ ಗೊತ್ತಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ, ಪಾಕಿಸ್ತಾನಿಯರು ಇದನ್ನ ನಿರಾಕರಿಸಿದ್ದಾರೆ. ಪಾಕಿಸ್ತಾನಿ ಜನರಲ್‌ಗಳು ನಿಯಂತ್ರಣದಲ್ಲಿದ್ದರೆ, ರಾಜಕೀಯವಾಗಿ ಯಾರು ಉಸ್ತುವಾರಿ ವಹಿಸುತ್ತಾರೆ ಎಂಬುದರ ಬಗ್ಗೆ ನನಗೆ ತುಂಬಾ ಚಿಂತೆಯಾಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಮುಷರಫ್ ಸರ್ಕಾರದೊಂದಿಗೆ ಅಮೆರಿಕವು ಉತ್ತಮ ಸಂಬಂಧ ಹೊಂದಿತ್ತು. ಆ ಸಂದರ್ಭದಲ್ಲಿ ನಮ್ಮ ಸಂಬಂಧಗಳೂ ಕೂಡ ಪಾಕ್‌ ಸರ್ಕಾರದೊಂದಿಗೆ ಚೆನ್ನಾಗಿತ್ತು. ಆದ್ರೆ ಅಮೆರಿಕ ಸರ್ವಾಧಿಕಾರಿಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತದೆ. ಏಕೆಂದ್ರೆ ಆಗ ನೀವು ಜನಾಭಿಪ್ರಾಯದ ಬಗ್ಗೆ ಚಿಂತಿಸಬೇಕಾಗಿಲ್ಲ, ಮಾಧ್ಯಮಗಳಿಗೂ ಹೆದರಬೇಕಿಲ್ಲ. ಆದ್ದರಿಂದ ಅಮೆರಿಕ ಮುಷರಫ್‌ ಅವರನ್ನ ಖರೀದಿ ಮಾಡಿತ್ತು. ಜೊತೆಗೆ ತನ್ನ ಭದ್ರತಾ ಆದ್ಯತೆಗಳನ್ನ ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಪರಮಾಣು ಶಸ್ತ್ರಗಾರದ ಮೇಲೆ ಹಿಡಿತ ಸಾಧಿಸಿತು ಅಂತ ಹೇಳಿದ್ದಾರೆ.

    ಮಿಲಿಟರಿ ಹಾಗೂ ಆರ್ಥಿಕವಾಗಿಯೂ ಅಮೆರಿಕ ಪಾಕಿಸ್ತಾನಕ್ಕೆ ಮಿಲಿಯನ್‌ ಡಾಲರ್‌ಗಟ್ಟಲೇ ಸಹಾಯ ನೀಡಿತು. ಆಗ ಮುಷರಫ್ ಪೆಂಟಗನ್‌ಗೆ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಅಧಿಕಾರ ನೀಡಿದರು.

    ಭಾರತದ ವಿರುದ್ಧ ಉಗ್ರ ಕೃತ್ಯಕ್ಕೂ ಸಾಥ್‌
    ಮುಂದುವರಿದು ಮಾತನಾಡಿದ ಕಿರಿಯಾಕೌ, ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವ ವಿಚಾರದಲ್ಲಿ ಅವರು ಇಬ್ಬಗೆಯ ನೀತಿ ಹೊಂದಿದ್ದರು. ಒಂದು ಕಡೆ ಭಾರತದ ಬಗ್ಗೆ ಕಾಳಜಿ ವಹಿಸಿದಂತೆ ನಡೆದುಕೊಳ್ಳುತ್ತಿದ್ದರು. ಮತ್ತೊಂದು ಕಡೆ ಪಾಕ್‌ ಸೈನ್ಯ ಹಾಗೂ ಕೆಲವು ಉಗ್ರರನ್ನ ತೃಪ್ತಿಪಡಿಸಲು ಭಾರತದ ವಿರುದ್ಧದ ಭಯೋತ್ಪಾದನೆ ಕೃತ್ಯಗಳಿಗೆ ಸಾಥ್‌ ನೀಡುತ್ತಿದ್ದರು. ಈ ವಿಚಾರದಲ್ಲಿ ಅಮೆರಿಕನ್ನರೊಂದಿಗೆ ಸಹಕರಿಸುತ್ತಿರುವುದಾಗಿಯೂ ನಟಿಸುತ್ತಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ನವದೆಹಲಿ: ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ (Human Rights Violation) ಎಂದು ಭಾರತ (India) ಖಂಡಿಸಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ (Parvathaneni Harish), ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಕ್ರೌರ್ಯವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

    80ನೇ ವಿಶ್ವಸಂಸ್ಥೆಯ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಹರೀಶ್, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮತ್ತು ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕೆಂದು ನಾವು ಪಾಕಿಸ್ತಾನವನ್ನು ಒತ್ತಾಯಿಸುತ್ತೇವೆ. ಪಾಕಿಸ್ತಾನದ ಮಿಲಿಟರಿ ಆಕ್ರಮಣ, ದಬ್ಬಾಳಿಕೆ, ಕ್ರೂರತೆ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಜನಸಂಖ್ಯೆಯು ಬಹಿರಂಗ ದಂಗೆಯಲ್ಲಿ ತೊಡಗಿದೆ ಎಂದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ ಮತ್ತು ಇಲ್ಲಿನ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಆನಂದಿಸುತ್ತಾರೆ. ಅಂತಹ ಸ್ವಾತಂತ್ರ‍್ಯಗಳು ಪಾಕಿಸ್ತಾನದಲ್ಲಿ ಪರಕೀಯ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು | ಸಿಲಿಂಡರ್‌ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು

    ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವಾಗಲೂ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಕಾಲ-ಪರೀಕ್ಷಿತ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಅನುಸಾರವಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಾರೆ. ಇವು ಪಾಕಿಸ್ತಾನಕ್ಕೆ ಅನ್ಯವಾದ ಪರಿಕಲ್ಪನೆಗಳು ಎಂದು ನಮಗೆ ತಿಳಿದಿದೆ ಎಂದರು. ಇದನ್ನೂ ಓದಿ: ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದ ನಂತರ ಹಲವಾರು ನಾಗರಿಕರು ಸಾವನ್ನಪ್ಪಿದರು. ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ನಂತರ ಅಶಾಂತಿ ಭುಗಿಲೆದ್ದಿತು. ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸಾರಿಗೆ ಸೇವೆಗಳು ಹಲವಾರು ದಿನಗಳವರೆಗೆ ಈ ಪ್ರದೇಶದಾದ್ಯಂತ ಮುಚ್ಚಲ್ಪಟ್ಟವು. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಳಪೆ ಅಂಕ ಬಂತೆಂದು MBBS ವಿದ್ಯಾರ್ಥಿನಿ ಆತ್ಮಹತ್ಯೆ

  • ಭಾರತದ ಬಳಿಕ ಪಾಕ್‌ಗೆ ನೀರಿನ‌ ಹರಿವು ತಡೆಯಲು ಪ್ಲ್ಯಾನ್‌ – ಅಣೆಕಟ್ಟು ನಿರ್ಮಿಸಲು ಮುಂದಾದ ಅಫ್ಘಾನ್

    ಭಾರತದ ಬಳಿಕ ಪಾಕ್‌ಗೆ ನೀರಿನ‌ ಹರಿವು ತಡೆಯಲು ಪ್ಲ್ಯಾನ್‌ – ಅಣೆಕಟ್ಟು ನಿರ್ಮಿಸಲು ಮುಂದಾದ ಅಫ್ಘಾನ್

    – ರಕ್ತ, ನದಿ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ – ಅಫ್ಘಾನ್‌ ಸರ್ಕಾರ ಪ್ರತಿಪಾದನೆ

    ಕಾಬೂಲ್: ಭಾರತದ ನಂತರ ತಾಲಿಬಾನ್ (Taliban) ಆಳ್ವಿಕೆಯ ಅಫ್ಘಾನಿಸ್ತಾನವು ತನ್ನ ಭೂಪ್ರದೇಶದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ (Pakistan) ನೀರಿನ ಹರಿವು ತಡೆಯಲು ಯೋಜಿಸುತ್ತಿದೆ.

    ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ (Taliban Supreme Hibatullah Akhundzada) ಅವರು, ಕುನಾರ್‌ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವಂತೆ ಆದೇಶಿಸಿದ್ದಾರೆ. ಕುನಾರ್‌ನಲ್ಲಿ ಅಣೆಕಟ್ಟುಗಳ ನಿರ್ಮಾಣವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು. ವಿದೇಶಿ ಕಂಪನಿಗಳಿಗೆ ಕಾಯದೇ ಆಂತರಿಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಾಲಿಬಾನ್ ಜಲ ಸಚಿವ ಅಬ್ದುಲ್ ಲತೀಫ್ ಮನ್ಸೂರ್ ತಿಳಿಸಿದ್ದಾರೆ.

    ಅಲ್ಲದೇ ಆಫ್ಘನ್ನರು (Afghans) ತಮ್ಮದೇ ಆದ ಜಲ ಸಂಪನ್ಮೂಲಗಳನ್ನ ನಿರ್ವಹಿಸುವ ಹಕ್ಕು ಹೊಂದಿದ್ದಾರೆ. ನೀರು ಮತ್ತು ನದಿ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಅಂತ ಮನ್ಸೂರ್‌ ಪ್ರತಿಪಾದಿಸಿದ್ದಾರೆ.

    ಕಳೆದ ಮೇ ತಿಂಗಳಲ್ಲಿ ತಾಲಿಬಾನ್ ಆಡಳಿತದ ಸೇನಾ ಜನರಲ್ ಮುಬಿನ್, ಕುನಾರ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ಬಳಿಕ ಹಣ ಸಂಗ್ರಹಿಸಿ ಅಣೆಕಟ್ಟು ನಿರ್ಮಿಸಲು ತಾಲಿಬಾನ್‌ ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಕುನಾರ್‌ ನದಿಯ ಮಹತ್ವ ಏನು?
    ಕುನಾರ್ ಪಾಕಿಸ್ತಾನದ ಚಿತ್ರಾಲ್ ಪ್ರದೇಶದಿಂದ (Chitral Area) ಉಗಮವಾಗುವ 480 ಕಿಮೀ ಉದ್ದದ ನದಿಯಾಗಿದೆ. ಇದು ಅಫ್ಘಾನಿಸ್ತಾನದ ನಂಗಹಾರ್ ಮತ್ತು ಕುನಾರ್ ಪ್ರಾಂತ್ಯಗಳ ಮೂಲಕ ಹಾದುಹೋಗಲಿದ್ದು, ಸಿಂಧೂ ನದಿ ಸೇರುತ್ತದೆ. ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಹರಿಯುವ ಕಾಬೂಲ್ ಮತ್ತು ಕುನಾರ್ ನದಿಗಳು ಪಾಕಿಸ್ತಾನಕ್ಕೆ ಅತಿದೊಡ್ಡ ನೀರಿನ ಮೂಲಗಳಾಗಿವೆ.

    ಅಫ್ಘಾನ್‌ ವಾಟರ್‌ ಬಾಂಬ್‌ ಹಾಕ್ತಿರೋದೇಕೆ?
    ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪಾಕ್‌ – ಅಫ್ಘಾನ್‌ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಆದ್ರೆ ಕದನ ವಿರಾಮ ಉಲ್ಲಂಘಿಸಿ ಪಾಕ್‌ ದಾಳಿ ನಡೆಸುತ್ತಿದೆ. ತನ್ನ ನಾಗರಿಕರ ಮೇಲಿನ ದಾಳಿಗೆ ಮಿಲಿಟರಿ ಬಲವನ್ನು ಬಳಸುತ್ತಿದೆ. ಹಾಗಾಗಿ ಪಾಕ್‌ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ತಪ್ಪಿಸಲು ʻನೀರುʼ ತನ್ನ ಏಕೈಕ ಮಿಲಿಟರಿಯೇತರ ಅಸ್ತ್ರವೆಂಬುದು ಅಫ್ಘಾನ್‌ ನಂಬಿಕೆ. ಇದರೊಂದಿಗೆ ಹೆಲ್ಮಂಡ್‌, ಕಾಬೂಲ್‌ ಹಾಗೂ ಕುನಾರ್‌ ನಂತಹ ನದಿಗಳ ಮೇಲೆ ತನ್ನ ಹಕ್ಕು ಸಾಧಿಸಲು ಅಫ್ಘಾನ್‌ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದೆ. ಅದರಂತೆ ಪಾಕ್‌ಗೆ ಹರಿಯುವ ಮೊದಲು ಅಫ್ಘಾನ್‌ನ ಕೃಷಿ ಮತ್ತು ವಿದ್ಯುತ್‌ ಚಟುವಟಿಕೆಗಳಿಗೆ ನೀರಿನ ಪ್ರಯೋಜನ ಪಡೆದುಕೊಳ್ಳಲು ತಯಾರಿ ನಡೆಸಿದೆ.

  • ಐಸಿಸ್‌ ಮಾಡ್ಯೂಲ್‌ ಭೇದಿಸಿದ ದೆಹಲಿ ಪೊಲೀಸ್‌ – ಇಬ್ಬರು ಶಂಕಿತ ಭಯೋತ್ಪಾದಕರು ಅರೆಸ್ಟ್‌

    ಐಸಿಸ್‌ ಮಾಡ್ಯೂಲ್‌ ಭೇದಿಸಿದ ದೆಹಲಿ ಪೊಲೀಸ್‌ – ಇಬ್ಬರು ಶಂಕಿತ ಭಯೋತ್ಪಾದಕರು ಅರೆಸ್ಟ್‌

    – ದೆಹಲಿಯ ಹಲವೆಡೆ ಭಯೋತ್ಪಾದಕ ದಾಳಿಗೆ ಪ್ಲ್ಯಾನ್‌
    – ಆತ್ಮಹತ್ಯಾ ದಾಳಿಗೆ ತರಬೇತಿ ಪಡೆಯುತ್ತಿದ್ದ ಶಂಕಿತರು

    ನವದೆಹಲಿ: ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದು, ದೆಹಲಿಯ ವಿವಿಧೆಡೆ ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನ (Suspected Terrorists) ದೆಹಲಿ ಪೊಲೀಸ್‌ ವಿಶೇಷ ಘಟಕ ಬಂಧಿಸಿದೆ.

    ಗುಪ್ತಚರ ಸಂಸ್ಥೆ ಹಾಗೂ ದೆಹಲಿ ಪೊಲೀಸ್‌ ವಿಶೇಷ ಘಟಕ (Delhi Police Speical Unit) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್‌ ಮಾಡ್ಯೂಲ್‌ (ISIS Module) ಭೇದಿಸಿದ್ದು, ಇಬ್ಬರನ್ನ ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬನನ್ನ ಅದ್ನಾನ್‌ ಎಂದು ಗುರುತಿಸಲಾಗಿದೆ. ಈತ ಮೂಲತಃ ಮಧ್ಯಪ್ರದೇಶದ ಭೋಪಾಲ್ ಮೂಲದವನು, ಮತ್ತೊಬ್ಬ ಶಂಕಿತನನ್ನ ದೆಹಲಿಯ ಸಾದಿಕ್ ನಗರದಲ್ಲಿ ಬಂಧಿಸಲಾಗಿದೆ. ಈ ಇಬ್ಬರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ದೆಹಲಿಯಲ್ಲಿ ಪ್ರಮುಖ ದಾಳಿ ನಡೆಸಲು ಪ್ಲ್ಯಾನ್‌ ಮಾಡುತ್ತಿದ್ದರು. ಇಬ್ಬರು ಫಿದಾಯೀನ್ (ಆತ್ಮಹತ್ಯಾ) ದಾಳಿಗಳಿಗೆ ತರಬೇತಿ ಪಡೆದಿದ್ದರು. ಸದ್ಯ ಇಬ್ಬರನ್ನ ಬಂಧಿಸಿದ್ದು, ಅವರ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ತಾಪುರ ಆರ್‌ಎಸ್‌ಎಸ್ ಫೈಟ್‌ – ಕ್ರೈಸ್ತ ಸಂಘಟನೆ ಸೇರಿ ಐವರಿಂದ ಅರ್ಜಿ

    ಇನ್ನೂ ಕಾರ್ಯಾಚರಣೆ ಮುಂದುವರಿಸಿರುವ ಅಧಿಕಾರಿಗಳು ಸಂಪೂರ್ಣ ಜಾಲ ಪತ್ತೆಹಚ್ಚಲು ಮುಂದಾಗಿದ್ದಾರೆ. ಐಸಿಸ್‌ ಜಾಲದಲ್ಲಿ ಇನ್ನು ಎಷ್ಟು ಮಂದಿ ಇದ್ದಾರೆ? ಭಾರತದಲ್ಲಿ ಬೇರೆ ಎಲ್ಲೆಲ್ಲಿ ದಾಳಿಗೆ ಯೋಜನೆ ರೂಪಿಸಲಾಗಿದೆ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನೆಲಮಂಗಲ ಹೈವೇಯಲ್ಲಿ ಲಾರಿ, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಬಲಿ

  • ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಮುಂಬೈ: ಹ್ಯಾಂಡ್‌ಶೇಕ್‌, ಏಷ್ಯಾ ಕಪ್‌ (Asia Cup) ವಿವಾದದ ಬೆನ್ನಲ್ಲೇ ಮತ್ತೆ ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಕ್ರಿಕೆಟ್‌ ಪಂದ್ಯ ನಡೆಯಲಿದೆ.

    ಇದೇ ನ. 7 ರಿಂದ 9 ರವರೆಗೆ ಈ ಟೂರ್ನಿ ಹಾಂಕಾಂಗ್‌ನಲ್ಲಿ ನಡೆಯಲಿದೆ. ಹಾಂಕಾಂಗ್‌ ಕ್ರಿಕೆಟ್‌ ಸಿಕ್ಸಸ್‌ (Hong Kong Cricket Sixes) ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಕುವೈತ್‌ ಒಂದೇ ಗುಂಪಿನಲ್ಲಿದೆ.

    ಹಾಂಕಾಂಗ್‌ ಸಿಕ್ಸಸ್ ಆರು ಓವರ್‌ ಪಂದ್ಯಾವಳಿಯಾಗಿದ್ದು, ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಭಾರತವನ್ನು ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಕಾರ್ತಿಕ್‌ ಅಲ್ಲದೇ ಮಾಜಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಕೂಡ ತಂಡದ ಭಾಗವಾಗಿದ್ದಾರೆ.

    ಮೂರು ದಿನಗಳ ಈ ಪಂದ್ಯಾವಳಿಯಲ್ಲಿ ಆಫ್ರಿಕಾ, ಅಫ್ಘಾನಿಸ್ತಾನ, ನೇಪಾಳ, ಆಸ್ಟ್ರೇಲಿಯಾ, ಇಂಗ್ಲೆಂಡ್, ಯುಎಇ, ಭಾರತ, ಪಾಕಿಸ್ತಾನ, ಕುವೈತ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಹಾಂಕಾಂಗ್‌ ತಂಡಗಳು ಭಾಗವಹಿಸಲಿವೆ. ಇದನ್ನೂ ಓದಿ:  ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    ಯಾವ ರೀತಿ ಪಂದ್ಯ?
    ಹಾಂಕಾಂಗ್‌ ಸಿಕ್ಸಸ್ ತಲಾ ಆರು ಓವರ್‌ಗಳ ಪಂದ್ಯಾವಳಿಯಾಗಿದ್ದು, ಪ್ರತಿಯೊಬ್ಬ ಆಟಗಾರ (ವಿಕೆಟ್ ಕೀಪರ್ ಹೊರತುಪಡಿಸಿ) ಕನಿಷ್ಠ ಒಂದು ಓವರ್ ಬೌಲ್ ಮಾಡಬೇಕು ಮತ್ತು ಒಬ್ಬ ಆಟಗಾರನಿಗೆ ಮಾತ್ರ ಸತತವಾಗಿ ಎರಡು ಓವರ್‌ಗಳನ್ನು ಬೌಲ್ ಮಾಡುವ ಅವಕಾಶ ಸಿಗುತ್ತದೆ.

    5 ಓವರ್‌ಗಳು ಪೂರ್ಣಗೊಳ್ಳುವ ಮೊದಲು ಐದು ವಿಕೆಟ್‌ಗಳು ಪತನಗೊಂಡರೆ ಉಳಿದಿರುವ ಕೊನೆಯ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡುತ್ತಾನೆ ಮತ್ತು ಐದನೇ ಬ್ಯಾಟ್ಸ್‌ಮನ್ ರನ್ನರ್ ಆಗಿ ಕಾರ್ಯನಿರ್ವಹಿಸುತ್ತಾನೆ. ಕೊನೆಯ ಬ್ಯಾಟರ್‌ ಯಾವಾಗಲೂ ಸ್ಟ್ರೈಕ್ ತೆಗೆದುಕೊಳ್ಳುತ್ತಾನೆ. ಆರನೇ ವಿಕೆಟ್ ಪತನಗೊಂಡರೆ ಇನ್ನಿಂಗ್ಸ್ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ:  ಏಪ್ಯಾ ಕಪ್ ಗೆದ್ದ ಭಾರತಕ್ಕೆ ವಿಶ್, ಬಳಿಕ ಟ್ವಿಸ್ಟ್ ಕೊಟ್ಟ ನಖ್ವಿ!

    ಹಾಂಕಾಂಗ್‌ನಲ್ಲಿ ಕ್ರಿಕೆಟ್‌ ಜನಪ್ರಿಯಗೊಳಿಸಲು ಈ ಚುಟುಕು ಕ್ರಿಕೆಟ್ ಪಂದ್ಯಾವಳಿಯನ್ನು ಕ್ರಿಕೆಟ್‌ ಹಾಂಕಾಂಗ್‌ ಆಯೋಜಿಸುತ್ತಿದೆ.
  • ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

    ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

    ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದ ಬ್ರಹ್ಮೋಸ್ ಕ್ಷಿಪಣಿ (BrahMos Supersonic Cruise Missile) ಬದ್ಧವೈರಿಯ ನಿದ್ದೆಗೆಡಿಸಿತ್ತು. ಇದೀಗ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಶೀಘ್ರದಲ್ಲೇ ದುಪ್ಪಟ್ಟಾಗಲಿದೆ.

    ಮುಂದುವರಿದ ದರ್ಜೆಯ ಕ್ಷಿಪಣಿ ಸದ್ಯದಲ್ಲೇ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. 800 ಕಿಮೀ ದೂರ ಕ್ರಮಿಸಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಪರೀಕ್ಷೆಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದೆ. 2027ರ ಒಳಗೆ ಈ ಪ್ರಬಲ ಕ್ಷಿಪಣಿಗಳು ಸೇನೆಗೆ ನಿಯೋಜನೆಗೊಳ್ಳಲಿವೆ. ಇದನ್ನೂ ಓದಿ: ರಾಜ್ಯದಲ್ಲಿ ಎತ್ತರದ ಗ್ರಾನೈಟ್ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣ – ಮುತ್ತಯ್ಯ ಮುರಳೀಧರನ್ ಕಂಪನಿ ಸಾಥ್

    ಇದ್ರ ಜೊತೆಗೆ 200 ಕಿಮೀ ದೂರ ಕ್ರಮಿಸಿ ಟಾರ್ಗೆಟ್ ಹೊಡೆಯಬಲ್ಲ ಏರ್ ಟು ಏರ್ `ಅಸ್ತ್ರ’ ಕ್ಷಿಪಣಿಯೂ ಇನ್ನೊಂದು ವರ್ಷದಲ್ಲಿ ನಿಯೋಜನೆಗೆ ಸಿದ್ಧ ಇರಲಿವೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಬ್ರಹ್ಮೋಸ್ ವೇಗವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ನಿಖರ ದಾಳಿಗಳು ಜಗತ್ತನ್ನು ಬೆರಗುಗೊಳಿಸಿವೆ. ಹಲವಾರು ದೇಶಗಳು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿವೆ. ಇದನ್ನೂ ಓದಿ: ಪಂಜಾಬ್ ಮಾಜಿ ಡಿಜಿಪಿ, ಪತ್ನಿ ಮಾಜಿ ಸಚಿವೆ ವಿರುದ್ಧ ಪುತ್ರನನ್ನೇ ಹತ್ಯೆಗೈದ ಕೇಸ್‌

    ಸದ್ಯದ ಬ್ರಹ್ಮೋಸ್‌ ವಿಶೇಷತೆ ಏನು?
    * ಈಗಿರುವ ಬ್ರಹ್ಮೋಸ್ ಮಿಸೈಲ್ 450 ಕಿಮೀ ಶ್ರೇಣಿ ಹೊಂದಿದೆ.
    * 4,000 ಕಿ.ಮೀ. ವೇಗದಲ್ಲಿ ಸಾಗಿ ವೈರಿಗಳನ್ನು ಉಡಾಯಿಸಬಲ್ಲದು.
    * ಇದೀಗ ಈ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.
    * ಹೊಸ ಕ್ಷಿಪಣಿ ದೂರ ಕ್ರಮಿಸುವ ಸಾಮರ್ಥ್ಯ 800 ಕಿ.ಮೀ.ಗೆ ಹೆಚ್ಚಿದೆ.
    * ಬ್ರಹ್ಮೋಸ್‌ನ ರಾಮ್‌ಜೆಟ್ ಎಂಜಿನ್‌ನಲ್ಲಿ ಮಾರ್ಪಾಡು.
    * ನ್ಯಾವಿಗೇಶನ್ ಸಿಸ್ಟಂಗಳ ಸಂಯೋಜನೆ ಬಗ್ಗೆ ಪರೀಕ್ಷೆ.
    * ಇದು ಯಶಸ್ವಿಯಾದಲ್ಲಿ ಮತ್ತಷ್ಟು ಪ್ರಖರ ಅಸ್ತ್ರವಾಗಲಿದೆ.
    * ನೌಕಾಪಡೆಯ ಅಗತ್ಯಕ್ಕೆ ಬೇಕಾಗದಂತೆ ಅಪ್‌ಗ್ರೇಡ್ ಸಾಧ್ಯತೆ.

  • ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

    ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

    ಮುಂಬೈ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI), ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿಗೆ (Mohsin Naqvi) ಅಧಿಕೃತವಾಗಿ ಇ-ಮೇಲ್‌ ಪತ್ರ ಬರೆದಿದೆ.

    ಕಳೆದ ಸೆಪ್ಟೆಂಬರ್‌ 28ರಂದು ನಡೆದ ಟಿ20 ಏಷ್ಯಾಕಪ್‌ (Asia Cup ) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ, ಪಾಕ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ಆದ್ರೆ ನಖ್ವಿ ಅವರಿಂದ ಟ್ರೋಫಿ ಪಡೆಯಲು ಟೀಂ ಇಂಡಿಯಾ ನಿರಾಕರಿಸಿತು. ಹೀಗಾಗಿ ನಖ್ವಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಹೊರಟರು ಜೊತೆಗೆ ಟ್ರೋಫಿಯನ್ನ ತೆಗೆದುಕೊಂಡು ಹೋದರು. ಹೀಗಾಗಿ ಭಾರತ ತಂಡ ಗೆದ್ದಿರುವ ಟ್ರೋಫಿಯನ್ನ ಹಿಂದಿರುಗಿಸುವಂತೆ ಹೇಳಿದೆ.

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ನಖ್ವಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಅವರ ಕಡೆಯಿಂದ ಯಾವುದೇ ಉತ್ತರ ಬರದಿದ್ದರೆ, ಐಸಿಸಿಗೆ (ICC) ದೂರು ನೀಡುವುದಾಗಿ ಎಚ್ಚರಿಸಿದೆ.

    ಟ್ರೋಫಿ ಎಲ್ಲಿದೆ?
    ಸದ್ಯ ಭಾರತ ಗೆದ್ದಿರುವ ಏಷ್ಯಾಕಪ್‌ ಟ್ರೋಫಿ ದುಬೈನ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಕಚೇರಿಯಲ್ಲೇ ಇದೆ. ತಮ್ಮ ಅನುಮತಿಯಿಲ್ಲದೇ ಯಾರೋ ಟ್ರೋಫಿಯನ್ನ ಹಸ್ತಾಂತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ನಖ್ವಿಯವರ ಆಪ್ತ ಮೂಲದ ಪ್ರಕಾರ, ಟ್ರೋಫಿ ದುಬೈನ ಎಸಿಸಿ ಕಚೇರಿಯಲ್ಲಿದೆ. ತನ್ನ ಅನುಮತಿಯಿಲ್ಲದೇ ಯಾರಿಗೂ ಟ್ರೋಫಿ ಹಸ್ತಾಂತರಿಸಬಾರದು. ಒಂದು ವೇಳೆ ಹಸ್ತಾಂತರಿಸಬೇಕಿದ್ರೆ, ನಾನೇ ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿ ಹಸ್ತಾಂತರಿಸೋದಾಗಿ ಹೇಳಿದ್ದಾರೆ.