Tag: Pak vs Aus

  • ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ಕ್ಯಾನ್ಬೆರಾ: ಇಲ್ಲಿನ ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಜೊತೆಗೆ ಕಳೆದ 22 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಾಕ್‌, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ. ಇದು ನೂತನ ಕ್ಯಾಪ್ಟನ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಆಗಿದೆ. ಕೊನೆಯದ್ದಾಗಿ 2002ರಲ್ಲಿ ಪಾಕ್‌ ಆಸೀಸ್‌ ನೆಲದಲ್ಲಿ ಸರಣಿ ಗೆದ್ದಿತ್ತು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ ‌84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್‌ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಆಜಂ ಜೋಡಿ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಪಾಕ್‌ ಪರ ಸೈಮ್‌ ಅಯೂಬ್‌ 42 ರನ್‌, ಅಬ್ದುಲ್ಲಾ ಶಫಿಕ್‌ 37 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹಾಗೂ ಬಾಬರ್‌ ಆಜಂ (Babar Azam) 28 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇನ್ನೂ ಆಸ್ಟ್ರೇಲಿಯಾ ಪಾರ ಲ್ಯಾನ್ಸ್‌ ಮೊರಿಸ್‌ 6 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಆಸೀಸ್‌ ತಂಡವು 31.5 ಓವರ್‌ಗಳಲ್ಲಿ ಕೇವಲ 140 ರನ್​ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲಕಚ್ಚಿದರು. ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಸಂಘಟಿತ ದಾಳಿಯೊಂದಿಗೆ ಆಸ್ಟ್ರೇಲಿಯನ್ನರ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಆತಿಥೇಯರನ್ನು 31.5 ಓವರ್​ಗಳಲ್ಲಿ 140 ರನ್​ಗಳಿಗೆ ಆಲೌಟ್ ಮಾಡಿದರು.

    ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 32 ರನ್ ನೀಡಿ 3 ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಹ್ಯಾರಿಸ್ ರೌಫ್ 24 ರನ್​ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 10 ವಿಕೆಟ್‌ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಸರಣಿಶೇಷ್ಠ ಪ್ರಶಸ್ತಿಗೂ ಪಾತ್ರರಾದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ  

  • ಗೋ ಬ್ಯಾಕ್ ರಿಜ್ವಾನ್; ಬೆಂಗ್ಳೂರಲ್ಲಿ ಪಾಕ್ ಕ್ರಿಕೆಟಿಗರ ವಿರುದ್ಧ ಹಿಂದೂ ಕಾರ್ಯಕರ್ತರ ಪ್ರತಿಭಟನೆ

    ಗೋ ಬ್ಯಾಕ್ ರಿಜ್ವಾನ್; ಬೆಂಗ್ಳೂರಲ್ಲಿ ಪಾಕ್ ಕ್ರಿಕೆಟಿಗರ ವಿರುದ್ಧ ಹಿಂದೂ ಕಾರ್ಯಕರ್ತರ ಪ್ರತಿಭಟನೆ

    ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ನಡೆಯುತ್ತಿದೆ. ಆಸ್ಟ್ರೇಲಿಯಾ (Australia) ಮತ್ತು ಪಾಕಿಸ್ತಾನದ ನಡುವೆ ಮೊದಲ ಪಂದ್ಯ ನಡೆಯುತ್ತಿದ್ದು, ಪಾಕ್ ಆಟಗಾರರ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರು (Hindu Activists) ಪ್ರತಿಭಟನೆ ನಡೆಸಿದ್ದಾರೆ.

    ಶುಕ್ರವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಎದುರು ಜಮಾಯಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು `ಗೋ ಬ್ಯಾಕ್ ರಿಜ್ವಾನ್’ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಕ್ಕೆ ಮತ್ತೆ ಆಘಾತ – ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಔಟ್‌

    ಶ್ರೀಲಂಕಾ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ (Mohammad Rizwan), ತಮ್ಮ ಶತಕವನ್ನು ಪ್ಯಾಲೆಸ್ತೀನಿಯರಿಗೆ ಅರ್ಪಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಗೆಟ್ ಔಟ್ ರಿಜ್ವಾನ್, ರಿಜ್ವಾನ್ ಹಠಾವೋ ಕ್ರಿಕೆಟ್ ಬಚಾವೋ, ಗೋ ಬ್ಯಾಕ್ ರಿಜ್ವಾನ್ ಹೀಗೆ ಘೋಷಣಾ ಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ.

    ಬಳಿಕ ವಿವೇಕನಗರ ನಗರದ ಪೊಲೀಸರು ಹಿಂದೂ ಕಾರ್ಯಕರ್ತರಿಂದ ಘೋಷಣಾ ಫಲಕಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    ಶುಕ್ರವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸುವ ಮೂಲಕ ಎದುರಾಳಿ ಪಾಕ್ ತಂಡಕ್ಕೆ 368 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಒಣಗ್ತಿರೋ ಬೆಳೆ- ಸರ್ಕಾರದ ವಿರುದ್ಧ ರೈತ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]