Tag: Pak Minister

  • ಸಂಗೀತ ಲೋಕವನ್ನು ದಶಕಗಳ ಕಾಲ ಆಳಿದ ರಾಣಿ ಲತಾ ಮಂಗೇಶ್ಕರ್‌: ಪಾಕ್‌ ಸಚಿವ

    ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್‌ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌದರಿ ಸಂತಾಪ ಸೂಚಿಸಿದ್ದಾರೆ.

    ಸಂಗೀತ ಲೋಕದ ದಂತಕಥೆ ಇನ್ನಿಲ್ಲ. ಸಂಗೀತ ಜಗತ್ತನ್ನು ದಶಕಗಳ ಕಾಲ ಆಳಿದ ಸುಮಧುರ ಕಂಠದ ರಾಣಿ ಲತಾ ಮಂಗೇಶ್ಕರ್‌. ಅವರು ಸಂಗೀತ ಕಿರೀಟವಿಲ್ಲದ ರಾಣಿಯಾಗಿದ್ದರು. ಅವರ ಧ್ವನಿಯು ಎಲ್ಲಾ ಕಾಲಕ್ಕೂ ಜನರ ಹೃದಯವನ್ನು ಆಳುತ್ತಿರುತ್ತದೆ ಎಂದು ಟ್ವೀಟ್‌ ಮಾಡಿ ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎರಡು ದಿನ ಶೋಕಾಚರಣೆ

    ಫವಾದ್‌ ಚೌದರಿ ಅವರು ಉರ್ದು ಹಾಗೂ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿ ಲತಾ ಮಂಗೇಶ್ಕರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಲತಾ ಮಂಗೇಶ್ಕರ್‌ ಅವರು ಭಾರತದ ಗಡಿಯಾಚೆಗೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಪಾಕಿಸ್ತಾನ ಸರ್ಕಾರಿ ಟೆಲಿವಿಷನ್‌ ಕೂಡ ಲತಾ ಅವರ ಜೀವನ, ಸಾಧನೆ ಸುದ್ದಿಯನ್ನು ಪ್ರಸಾರ ಮಾಡಿದೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಶೇಷ ನಮನ

    ಕೊರೊನಾ ಸೋಂಕು ಹಾಗೂ ಅಂಗಾಂಗ ವೈಫಲ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಕೊನೆಯುಸಿರೆಳೆದರು. ಮುಂಬೈನ ಕ್ಯಾಂಡಿ ಆಸ್ಪತ್ರೆಯ ತ್ರೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

  • ಭಾರತದ ಮುಸಲ್ಮಾನರಿಂದಲೂ ಪಾಕಿಸ್ತಾನ ತಂಡಕ್ಕೆ ಬೆಂಬಲ: ಪಾಕ್ ಸಚಿವ

    ಭಾರತದ ಮುಸಲ್ಮಾನರಿಂದಲೂ ಪಾಕಿಸ್ತಾನ ತಂಡಕ್ಕೆ ಬೆಂಬಲ: ಪಾಕ್ ಸಚಿವ

    ಇಸ್ಲಾಮಾಬಾದ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಜಯ ಸಾಧಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸಚಿವರೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗಿದೆ.

    ಪಾಕಿಸ್ತಾನ ಗೆಲುವನ್ನು ಸ್ಮರಿಸಿರುವ ಸಚಿವ ಶೇಖ್ ರಶೀದ್, “ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಇರುವ ಮುಸಲ್ಮಾನರು ಪಾಕಿಸ್ತಾನ ಕ್ರಿಕೆಟ್ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದರು” ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ! 

    ಭಾರತದ ವಿರುದ್ಧ ಪಾಕಿಸ್ತಾನ ಸಾಧಿಸಿದ ಗೆಲುವು ಇಸ್ಲಾಂನ ಜಯವಾಗಿದೆ. ವಿಶ್ವಾದ್ಯಂತ ಇರುವ ಮುಸಲ್ಮಾನರು ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಎಂಬ ಸಚಿವರ ಹೇಳಿಕೆಯ ವಿಡಿಯೋ ಟ್ವಿಟರ್‍ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

    ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಸಾಧಿಸಿತು. ಇದು ಟೂರ್ನಿಯ ಅಂತಿಮ ಪಂದ್ಯದಂತಿತ್ತು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

    ಉಳಿದ ಪಂದ್ಯಗಳಿಂದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತು. ಸೋಲಿನ ಆಘಾತವನ್ನು ಭಾರತ ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಚಂದ್ರಯಾನವನ್ನು ಟೀಕಿಸಿದ ಪಾಕ್ ಸಚಿವನ ಚಳಿ ಬಿಡಿಸಿದ ನೆಟ್ಟಿಗರು

    ಚಂದ್ರಯಾನವನ್ನು ಟೀಕಿಸಿದ ಪಾಕ್ ಸಚಿವನ ಚಳಿ ಬಿಡಿಸಿದ ನೆಟ್ಟಿಗರು

    ಇಸ್ಲಾಮಾಬಾದ್: ಚಂದ್ರಯಾನ-2 ಹಿನ್ನಡೆಯಾದ ಪರಿಣಾಮ ಭಾರತವನ್ನು ಲೇವಡಿ ಮಾಡಿರುವ ಪಾಕಿಸ್ತಾನ ರಾತ್ರಿಯೇ ಫೇಲ್ ಇಂಡಿಯಾ ಎಂದು ಟ್ವೀಟ್ ಮಾಡಿದೆ.

    ತಡ ರಾತ್ರಿ ಎಚ್ಚರವಾಗಿದ್ದು ಸರಣಿ ಟ್ವೀಟ್ ಮಾಡಿರುವ ಪಾಕಿಸ್ತಾನದ ಫೆಡರಲ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಎಂಬ ಮಹಾನುಭಾವ ಯಾವ ಕೆಲಸ ಮಾಡಲು ಬರುವುದಿಲ್ಲವೋ ಅದನ್ನು ಮಾಡುವ ಸಹಾಸ ಮಾಡಬಾರದು ಡಿಯರ್ ಇಂಡಿಯಾ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾನೆ.

    ಈ ವಿಚಾರವಾಗಿ ನಾಲ್ಕು ಟ್ವೀಟ್ ಮಾಡಿರುವ ಪಾಕ್ ಸಚಿವ ಮಹಾಶಯ ಚಂದ್ರನಲ್ಲಿ ಇಳಿಯಬೇಕಿದ್ದ `ಆಟಿಕೆ’ ಮುಂಬೈ ಮೇಲೆ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದಾನೆ. ಫವಾದ್ ಹುಸೇನ್ ನ ಈ ರೀತಿಯ ವರ್ತನೆಗೆ ಭಾರತೀಯ ನೆಟ್ಟಿಗರು ಅವನನ್ನು ತರಾಟೆಗೆ ತೆಗೆದುಕೊಳ್ಳತ್ತಿದ್ದಂತೆ ಭಯಬಿದ್ದ ಆತ. ಅವನ ಟ್ವೀಟ್‍ಗಳನ್ನು ಸಮರ್ಥನೆಯ ಮಾಡಿಕೊಳ್ಳಲು ಒಂದು ಅದ್ಭುತ ಘಟನೆಯನ್ನು ತಪ್ಪಿಸಿಕೊಂಡೆ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾನೆ.

    ಇಷ್ಟಕ್ಕೆ ತನ್ನ ಹುಚ್ಚಾಟದ ಮಾತುಗಳನ್ನು ನಿಲ್ಲಿಸದ ಪಾಕ್ ಸಚಿವ, ಕೆಲಸಕ್ಕೆ ಬಾರದವರಿಗಾಗಿ 900 ಕೋಟಿ ಖರ್ಚು ಮಾಡಿ ಎಂದು ನಾವು ಹೇಳಿದ್ದೆವಾ.? ಉಪಗ್ರಹ ಸಂವಹನದ ಬಗ್ಗೆ ಮೋದಿ ಭಾಷಣ ಮಾಡುತ್ತಿದ್ದಾರೆ. ಅವರು ರಾಜಕಾರಣಿಯಲ್ಲ, ಗಗನಯಾತ್ರಿ ಎಂದು ಲೇವಡಿ ಮಾಡಿದ್ದಾನೆ. ಬಡ ರಾಷ್ಟ್ರವೊಂದು 900 ಕೋಟಿ ರೂ. ವ್ಯರ್ಥ ಮಾಡಿದ್ದೇಕೆ ಎಂದು ಲೋಕಸಭೆಯಲ್ಲಿ ಪ್ರಶ್ನಿಸಬೇಕು ಎಂದು ಉಪದೇಶವನ್ನೂ ಕೊಟ್ಟಿದ್ದಾನೆ. ಇದನ್ನು ಓದಿ:ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್

    ಈ ರೀತಿ ಟ್ವೀಟ್ ಮಾಡಿದ ಪಾಕ್ ಸಚಿವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಭಾರತೀಯರು, ತಾತ 900 ಕೋಟಿ ನಮಗೆ ಲೆಕ್ಕಾ ಇಲ್ಲ. ಭಾರತಕ್ಕೆ ಅವಶ್ಯಕತೆ ಬಿದ್ದರೆ 9000 ಕೋಟಿ ಹೂಡಿಕೆ ಮಾಡುತ್ತೇವೆ. ಆದರೆ ನಿಮ್ಮ ದೇಶದಲ್ಲಿ ನಾವು ಖರ್ಚು ಮಾಡಿರುವಷ್ಟು ದುಡ್ಡು ಇಲ್ಲ. ನಮಗೆ ಗೊತ್ತು ನಿಮ್ಮ ದೇಶದಲ್ಲಿ ಎಲ್ಲಾ ಮನೆಗಳಲ್ಲಿ ಬಾಂಬ್ ತಯಾರಿ ಮಾಡುವ ವಿಜ್ಞಾನಿಗಳು ಇದ್ದಾರೆ ಎಂದು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ನಮ್ಮನ್ನು ಕೆಲಸಕ್ಕೆ ಬಾರದವರು ಎನ್ನುತ್ತೀಯ. ನೀವು ಬಿಕಾರಿಗಳು, ನೀವು ಬಾಂಬ್ ತಯಾರಿಸಿ ಖುಷಿ ಪಡುತ್ತೀರಾ. ಆದರೆ ನಾವು ಚಂದ್ರನ ಹತ್ತಿರ ಹೋಗುವ ಸಾಹಸ ಮಾಡಿದ್ದೇವೆ. ಆದರೆ ನಿಮಗೆ ಇನ್ನೂ ಕಾಶ್ಮೀರವನ್ನು ತಲುಪಲು ಆಗುತ್ತಿಲ್ಲ ಎಂದು ಕೆಲವರು ಕಮೆಂಟ್ ಮಾಡಿ ಫವಾದ್‍ಗೆ ಚಳಿ ಬಿಡಿಸಿದ್ದಾರೆ.

    ಬರೋಬ್ಬರಿ 47 ದಿನಗಳ ನಂತರ ಇಂದು ಮುಂಜಾನೆ 1 ಗಂಟೆ 37 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲ್ಮೈನತ್ತ ಲ್ಯಾಂಡರ್ ತನ್ನ ಪಯಣ ಆರಂಭಿಸಿತ್ತು. ಈ ಘಟ್ಟ ಅತ್ಯಂತ ಸೂಕ್ಷ್ಮ ಘಟ್ಟ ಎಂಬುದಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದರು. ಹೀಗಿದ್ದರೂ ಲ್ಯಾಂಡರ್ ಚಂದ್ರನತ್ತ ಯೋಜನೆಯಂತೆ ತನ್ನ ಚಲನೆ ಆರಂಭಿಸಿದ್ದರಿಂದ ಇಸ್ರೋ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಲ್ಯಾಂಡರ್ ನಲ್ಲಿದ್ದ ಎಂಜಿನ್‍ಗಳನ್ನು ಚಾಲನೆಗೊಳಿಸಿ, ಅದರ ವೇಗವನ್ನೂ ಹಂತ ಹಂತವಾಗಿ ಯಶಸ್ವಿಯಾಗಿ ತಗ್ಗಿಸಲಾಗಿತ್ತು. ಆದರೆ ಇನ್ನೇನು ಚಂದ್ರನ ಮೇಲ್ಮೈನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಇದೆ ಎನ್ನುವಾಗ ಲ್ಯಾಂಡರ್ ಇಸ್ರೋದ ಸಂಪರ್ಕ ಕಡಿದುಕೊಂಡಿತು. ಇದನ್ನು ಓದಿ:ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ