Tag: Pajavar Shri

  • ಹೆಗಡೆ ಹೇಳಿಕೆ ಬಳಸಿ ಪೇಜಾವರ ಶ್ರೀಗೆ ನಿಂದನೆ: ಸ್ಟೇಟಸ್ ಹಾಕಿದವರ ವಿರುದ್ಧ ಸಚಿವರಿಂದ ದೂರು

    ಹೆಗಡೆ ಹೇಳಿಕೆ ಬಳಸಿ ಪೇಜಾವರ ಶ್ರೀಗೆ ನಿಂದನೆ: ಸ್ಟೇಟಸ್ ಹಾಕಿದವರ ವಿರುದ್ಧ ಸಚಿವರಿಂದ ದೂರು

    ಕಾರವಾರ: ಪೇಜಾವರ ಶ್ರೀ ಒಬ್ಬ ಹುಚ್ಚ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ ಎಂಬುದಾಗಿ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಹಾಕಿದ ಇಬ್ಬರ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.

    ಉಡುಪಿ ಮೂಲದ ರಾಜೇಶ್ ಅಡಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಮಹೇಶ್ ಗೌಡ ಎಂಬವರು ಫೇಸ್ ಬುಕ್ ನಲ್ಲಿ, “ಪ್ರಧಾನಿ ಮೋದಿ ವಿರುದ್ಧ ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಪೇಜಾವರ ಶ್ರೀ ಒಬ್ಬ ಹುಚ್ಚ ಎಂದಿದ್ದಾರೆ” ಎನ್ನುವ ಸ್ಟೇಟಸ್ ಹಾಕಿದರು. ಈಗ ಇವರಿಬ್ಬರ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಅವರು ಶಿರಸಿ ನಗರ ಠಾಣೆಯಲ್ಲಿ ಜೂನ್ 2 ರಂದು ದೂರು ದಾಖಲಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕುರಿತು ಅಭಿಪ್ರಾಯ ತಿಳಿಸಿದ್ದ ಸುದ್ದಿ ಹಾಗೂ ಪೇಜಾವರ ಶ್ರೀಗಳ ಫೋಟೋ  ಬಳಕೆ ಮಾಡಿದ್ದು, ಅದರ ಮೇಲೆ, “ಪೇಜಾವರ ಶ್ರೀಗಳು ಒಬ್ಬ ಹುಚ್ಚರಾಗಿದ್ದಾರೆ. ಅವರು ಈ ಹೇಳಿಕೆಯ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಬರೆದಿದ್ದು, ಇದನ್ನು ಸಚಿವ ಅನಂತ್ ಕುಮಾರ್ ಹೆಗಡೆ ಅವರೇ ಹೇಳಿದ್ದಾರೆ ಎನ್ನುವಂತೆ ಬಿಂಬಿಸಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿತ್ತು.

    ಸಚಿವರು ಈ ರೀತಿಯ ಹೇಳಿಕೆ ನೀಡಿಲ್ಲ. ಪೇಜಾವರ ಶ್ರೀಗಳ ಹಾಗೂ ಸಚಿವರ ಸಾಮರಸ್ಯ ಹಾಳು ಮಾಡಲು ಸದ್ಯ ರಾಜೇಶ್ ಅಡಿ ಹಾಗೂ ಮಹೇಶ್ ಗೌಡ ಈ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಶಿರಸಿ ನಗರ ಠಾಣೆಯಲ್ಲಿ 504 ಕಾಲಂ ಅಡಿ ಪ್ರಕರಣ ದಾಖಲಾಗಿದೆ.

  • ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಪೇಜಾವರ ಶ್ರೀ

    ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಪೇಜಾವರ ಶ್ರೀ

    ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರು ಸಂಪರ್ಕ ಮಾಡಿದ್ದಾರೆ. ಅವರಿಗೆ ಸಮಾಧಾನವೂ ಇಲ್ಲ, ವಿರೋಧವೂ ಇಲ್ಲ ಎಂದಿದ್ದಾರೆ. ಹಿಂದೂಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ. ಈ ಬಗ್ಗೆ ಅರಿವಿದ್ದೇ ಹೇಳಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ ಮತ್ತು ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್  

    ರಾಮ ಮಂದಿರ ವಿಚಾರದಲ್ಲಿ ನಡೆದ ಸಂಧಾನದಲ್ಲಿ ಮಂದಿರದೊಳಗೆ ವಾರಕ್ಕೊಮ್ಮೆ ನಮಾಜಿಗೆ ಅವಕಾಶ ನೀಡಲು ತೀರ್ಮಾನವಾಗಿತ್ತು. ಮಂದಿರದೊಳಗೆ ನಮಾಜು ಮಾಡಬಹುದು ಅಂತಾದ್ರೆ, ಕೃಷ್ಣಮಠದ ಹೊರ ಆವರಣದಲ್ಲಿ ನಮಾಜಿಗೆ ಅವಕಾಶ ಕೊಟ್ಟದ್ದು ತಪ್ಪಾಗುತ್ತಾ? ಎಂದು ಪೇಜಾವರ ಸ್ವಾಮಿಗಳು ಪ್ರಶ್ನಿಸಿದ್ದಾರೆ.

    ಇದನ್ನೂ ಒದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್  

    ದಶಕಗಳ ಹಿಂದೆ ಎರಡು ಧರ್ಮೀಯರ ನಡುವೆ ಈ ಸಂಧಾನ ನಡೆದಿತ್ತು. ಆಗ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ರು, ನನಗೂ ಆಹ್ವಾನವಿತ್ತು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಒಪ್ಪಿದ್ರು, ಆದರೆ ವಾರದಲ್ಲಿ ಒಂದು ದಿನ ಮಂದಿರದೊಳಗೆ ನಮಾಜಿಗೆ ಅವಕಾಶ ಕೋರಿದ್ರು, ಮುಸ್ಲಿಂರ ಪ್ರಾರ್ಥನೆ ಮಾಡಿದ್ರೆ ಹಿಂದೂ ನಿಂದನೆಯಾಗುತ್ತಾ ಎಂದು ಪೇಜಾವರ್ ಶ್ರೀಗಳು ಹೇಳಿದ್ದಾರೆ.

    https://www.youtube.com/watch?v=-E0LxTH_kIM