Tag: Painter

  • ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನರಾಗಿದ್ದಾರೆ. ಆರೋಗ್ಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 8.20ಕ್ಕೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    76ರ ವಯಸ್ಸಿನ ವರ್ಮಾ ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಭುವನೇಶ್ವರಿ, ವೃಕ್ಷದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಹಲವು ಚಿತ್ರಗಳು ಇವರಿಗೆ ಹೆಚ್ಚೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಅನೇಕ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಅವರು ಚಿತ್ರ ಕಲಾವಿದರನ್ನು ತಯಾರಿ ಮಾಡಿದ್ದರು. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಬಿಕೆಸ್ ವರ್ಮಾ ಕಲೆಯನ್ನು ಅರಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅವರ ಸಾಧನೆಗೆ ಲಲಿತಾ ಅಕಾಡೆಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು, ತಾಯಿ ಜಯಲಕ್ಷ್ಮೀ ಚಿತ್ರಕಲಾವಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಲಾಟರಿಯ ಮೊದಲ ಬಹುಮಾನವಾದ 12 ಕೋಟಿ ರೂ. ಗೆದ್ದಿದ್ದಾರೆ.

    ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರು ಕ್ರಿಸ್‍ಮಸ್ ನ್ಯೂ ಇಯರ್ ಬಂಪರ್ 12 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    Kerala: ₹12 crore lottery brings splash of color in painting worker's life

    ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಆದರೆ ಈಗ ಟಿಕೆಟ್ ಗೆ ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಲಾಟರಿಯಿಂದ ಬಂದ ಹಣವನ್ನು ತನ್ನ ಮಕ್ಕಳಾದ ಸನೀಷ್ ಮತ್ತು ಸಂಜಯ್ ಅವರಿಗಾಗಿ ಬಳಸುತ್ತೇನೆ ಎಂದು ಹೇಳಿದ್ದಾರೆ. ಸದಾನಂದನ್ ಅವರು 50 ವರ್ಷಗಳಿಂದ ಪೇಂಟಿಂಗ್ ಅನ್ನು ವೃತ್ತಿ ಜೀವನವಾಗಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

  • ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ನೆಲಮಂಗಲ: ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ರಕ್ಷಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಒಟ್ಟು ಒಬ್ಬರು ಪೇಂಟರ್ಸ್ ಸಂಪ್‍ಗೆ ಇಳಿದಿದ್ದರು. ಒಬ್ಬರು ಹೇಗೋ ಮೇಲಕ್ಕೆ ಬಂದಿದ್ದಾರೆ. ಆದರೆ ಓರ್ವ ಸಂಪ್‍ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಪೇಂಟರ್ ಅಸ್ವಸ್ಥರಾಗಿದ್ದಾರೆ. ಪೇಂಟರ್ ರಕ್ಷಣೆ ಮಾಡಲು ಇಬ್ಬರು ಸಂಪ್‍ಗೆ ಇಳಿದಿದ್ದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಹ ರಕ್ಷಣೆಗಾಗಿ ಇಳಿದಿದ್ದ ಇಬ್ಬರ ಪೈಕಿ ಒಬ್ಬರು ಸಂಪ್ ನಲ್ಲಿ ಸಿಲುಕಿದ್ದರು. ಮತ್ತೊಬ್ಬರು ಮೇಲಕ್ಕೆ ಬಂದಿದ್ದರು.

    ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ನೀರಿನ, ಸಂಪ್‍ಗೆ ಹಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಿರಿದಾದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಹೀರೋ ಹಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೇವಣ್ಣ, ಆಕ್ಸಿಜನ್ ಅಳವಡಿಸಿಕೊಂಡು ಧೈರ್ಯದಿಂದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

    ರಕ್ಷಿಸಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡ್ದ- ನಶೆಯಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ

    ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡ್ದ- ನಶೆಯಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ

    ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಯುವಕ ಮದ್ಯದ ಅಮಲಿನಲ್ಲಿ ನಾಲ್ಕನೇ ಮಹಡಿ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂಬೋರ್ಡ್ ನಲ್ಲಿ ನಡೆದಿದೆ.

    ರಾಜಶೇಖರ್ (22) ಮೃತ ದುರ್ದೈವಿ. ಮೃತ ರಾಜಶೇಖರ್ ಬೆಂಗಳೂರಿನ ಬಯ್ಯಪ್ಪನಹಳ್ಳಿ ನಿವಾಸಿಯಾಗಿದ್ದು, ಪೇಂಟರ್ ಕೆಲಸ ಮಾಡಿಕೊಂಡು ಸ್ಲಂ ಬೋರ್ಡ್ ನಲ್ಲಿ ನೆಲೆಸಿದ್ದ ಎನ್ನಲಾಗಿದೆ.

    ಇಂದು ಬೆಳಗ್ಗೆ ಕೆಲಸದ ನಿಮಿತ್ತ ಚೆನ್ನೈಗೆ ತೆರಳಬೇಕಿದ್ದ ರಾಜಶೇಖರ್ ಭಾನುವಾರ ರಾತ್ರಿ ಸ್ನೇಹಿತರ ಜೊತೆ ಗುಂಡು ಪಾರ್ಟಿ ಮಾಡಿದ್ದು, ಸ್ನೇಹಿತರು ವಾಪಸ್ ತೆರಳಿದ ಮೇಲೆ ಕಾಡುಗುಡಿ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂ ಬೋರ್ಡನ ಕಟ್ಟಡದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

     

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಡುಗುಡಿ ಪೊಲೀಸರು ಪರಿಶೀಲನೆ ನಡೆಸಿದಾಗ ಕಟ್ಟಡದ ಮೇಲಿನ ಭಾಗದಲ್ಲಿ ಮೃತನ ಚಪ್ಪಲಿ ಹಾಗೂ ಇತರೆ ವಸ್ತುಗಳು ದೊರೆತಿದ್ದು, ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ರಾಜಶೇಖರ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಗದಗ: 10 ವರ್ಷಗಳ ಹಿಂದೆ ಜಿಲ್ಲೆಯ ಯುವಕ ಅದ್ಭುತ ಕಲಾವಿದ ಹಾಗೂ ಫೇಮಸ್ ಪೇಂಟರ್ ಆಗಿದ್ದ. ಅವರ ಕೈ ಕುಂಚದ ಬರಹಗಳ ನೆನಪುಗಳನ್ನ ಇಂದಿಗೂ ಮರೆಯುವಂತಿಲ್ಲ. ಆದ್ರೆ ಬಡತನ ಕುಟುಂಬದ ಏಳು ಬೀಳಿನ ತೊಳಲಾಟ ದಿಂದ ಬರಹದ ಕೈ ಕುಂಚ ಅವನ ಹಣೆಯ ಬರಹವನ್ನೆ ವಿಧಿ ಅಳುಕಿಸಿ ಅರೆ ಹುಚ್ಚನಂತೆ ಮಾಡಿದೆ. ಆ ಫೇಮಸ್ ಪೇಂಟರ್ ಕೈಗೆ ಮತ್ತೆ ಕುಂಚಕೊಡಲು ಸ್ಥಳೀಯರು ಒಟ್ಟಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆಹೊಗಿದ್ದಾರೆ.

    ಹೌದು. 33 ವರ್ಷದ ಈ ವ್ಯಕ್ತಿಯ ಹೆಸರು ಅರುಣ್ ಸೋಮಪ್ಪ ಟಪಾಲಿ. ಇವರು ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ. ಸುಮಾರು 10 ವರ್ಷಗಳ ಹಿಂದೆ ರೋಣ ಸುತ್ತಮುತ್ತಲಿನ ಭಾಗದಲ್ಲಿ ಈ ಅರುಣ್ ಟಪಾಲಿ ಫೇಮಸ್ ಪೇಂಟರ್ ಎಂದೆ ಪ್ರಖ್ಯಾತಿಯಾಗಿದ್ದರು. ಈ ಪೇಂಟರ್ ಅರುಣ್ ಕಡೆಯಿಂದ ಶಾಲೆ, ಕಚೇರಿಗಳು, ಅಂಗಡಿಗಳು ಸೇರಿದಂತೆ ಅನೇಕ ಬೋರ್ಡ್ ಗಳು, ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ಝಗಮಗಿಸುತ್ತಿದ್ದವು.

    ಶಾಲೆಗಳಲ್ಲಿ ನಕಾಶೆ ಬಿಡಿಸುವುದು, ವಾಹನಗಳ ನಂಬರ್ ಪ್ಲೇಟ್ ಬರೆಸಲು, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಕಲಾ ಚತುರನಾಗಿದ್ದರು. 10 ವರ್ಷಗಳ ಹಿಂದೆ ಇವರ ಕೈ ಕುಂಚದಿಂದ ಬಿಡಿಸಿದ ಚಿತ್ರಗಳು, ಬೋರ್ಡ್ ಗಳ ಛಾಯೆ ಇನ್ನೂ ಮಾಸಿಲ್ಲ. ಅಷ್ಟೊಂದು ಫೇಮಸ್ ಪೇಂಟರ್ ಆಗಿದ್ದರು. ಇವರು ಈ ಹಂತಕ್ಕೆ ತರಲು ಕಾರಣ ಕುಟುಂಬದ ಬಡತನದ ಅಸಹಾಯಕತೆ ಜೊತೆಗೆ ಪ್ರೀತಿ ಮಾಯೇ ಇವರನ್ನು ಅರೆ ಹುಚ್ಚನಂತೆ ಆಗಿರುವುದನ್ನ ಕಂಡು ಸ್ಥಳಿಯರು ಮಮ್ಮಲ ಮರಗುವಂತಾಗಿದೆ.

    ಪೇಂಟರ್ ಅರುಣ್ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಬಾಲ್ಯದಲ್ಲಿರುವಾಗಲೇ ತಾಯಿ ತೀರಿಕೊಂಡರು. ನಂತರ ಹಿರಿಯ ಸಹೋದರ, ನಂತರ ಸ್ವಲ್ಪ ವರ್ಷಗಳಲ್ಲಿ ಹಿರಿಯ ಸಹೋದರಿ ಮೃತರಾದರು. ಇದೇ ಸಂರ್ಭದಲ್ಲಿ ಪ್ರೀತಿಸಿದ ಹುಡುಗಿಯೂ ಇವರಿಂದ ದೂರವಾದ್ರು. ಹೀಗಾಗಿ ಇವರು ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಾಗಿ ಇಂದಿಗೂ ಬೀದಿ ಬೀದಿ ಅಲೆಯುತ್ತಿದ್ದಾರೆ.

    ಸುಮಾರು 80 ವರ್ಷದ ತಂದೆ ಸೋಮಪ್ಪ ಹರಕು ಮುರುಕಲಿನ ಜೋಪಿಡಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲೂ ತಂದೆಯನ್ನು ನೋಡಿಕೊಳ್ಳಲಾಗದಷ್ಟು ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದಾರೆ. ಇವರಿಗೆ ನನ್ನವರು ತನ್ನವರು ಎಂಬ ಯಾರ ಅರಿವಿಲ್ಲದೆ ಹಸಿದಾಗ ಭಿಕ್ಷೆ ಬೇಡಿ ತಿಂದು, ಬಸ್ ನಿಲ್ದಾಣ, ಯಾವುದಾದರೂ ಅಂಗಡಿ ಮುಂಭಾಗ, ಶಾಲಾ ಮೈದಾನ ಹೀಗೆ ಎಲ್ಲಂದರಲ್ಲಿ ಮಲಗುತ್ತಾ ದಿನಕಳೆಯುತ್ತಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದು, ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಇವರ ನೇರವಿಗೆ ಸದ್ಯ ಯಾರು ಇಲ್ಲದಂತಾಗಿದೆ. ಇನ್ನು ಇವರ ಸ್ಥಿತಿನೋಡಿ ಸ್ಥಳಿಯರೆಲ್ಲಾ ಸೇರಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ನೆರವು ಬಯಸಿದ್ದಾರೆ.

    ಬೆಳಕು ಕಾರ್ಯಕ್ರಮ ಮೂಲಕ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ರೆ, ಖಂಡಿತ ಮೊದಲಿನಂತೆಯೇ ಅರುಣ್ ಫೇಮಸ್ ಪೇಂಟರ್ ಆಗುತ್ತಾನೆ ಅಂತಿದ್ದಾರೆ. ಈ ಕಲಾವಿದನ ಬಾಳಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬೆಳಕಾಗಿ ಕಲಾ ಸೌಂದರ್ಯ ಮತ್ತೆ ಅರಳುವಂತೆ ಮಾಡಬೇಕು ಎಂಬುದು ಸ್ಥಳಿಯ ಭಿನ್ನವಾಗಿದೆ. ಅರುಣ್ ಟಪಾಲಿ ಅವರ ಮಾನಸಿಕ ಸುಧಾರಣೆ ಆಗುವವರೆಗೆ ಚಿಕಿತ್ಸೆ ಹಾಗೂ ಇರುವಿಕೆ ನೋಡಿಕೊಳ್ಳಲು ಗಜೇಂದ್ರಗಢ ಪಟ್ಟಣದ `ಬಾಪೂಜಿ ವಿದ್ಯಾಸಂಸ್ಥೆ ಮಂಧಮತಿ ಮಕ್ಕಳ ವಸತಿಯೂತ ವಿಶೇಷ ಶಾಲೆ’ ಯ ಕಾರ್ಯದರ್ಶಿ ರಾಜು ಸೂರ್ಯವಂಶಿ ಎಂಬವರು ಮುಂದಾಗಿರುವುದು ಹೆಮ್ಮೆಯ ಸಂಗತಿ.

    https://www.youtube.com/watch?v=gF9wvwOOZts

  • ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಲಾಹೋರ್: ಪ್ರಸಿದ್ಧರಾಗಲು ಬಯಸುವ ಜನರಿಗೆ ಹಣ ಮಹತ್ತರ ಪ್ರೇರಣೆ ನೀಡುತ್ತದೆ ಎಂದರೆ ತಪ್ಪಾಗಲಾರದು. ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂಬ ನಾಣ್ಣುಡಿಯೇ ಪ್ರಚಲಿತದಲ್ಲಿರುವುದು ಈ ಕಾರಣದಿಂದಲೇ. ಹಣ ಗಳಿಸಲು ಜನರು ಯಾವ ಹಾದಿಯಲ್ಲೂ ತುಳಿಯಲು ಹೇಸುವುದಿಲ್ಲ. ಕೆಲವರು ಇಂಥದ್ದೇ ಉದ್ಯೋಗ ಮಾಡಿಯೇ ಹಣ ಗಳಿಸುತ್ತೇನೆ ಎನ್ನುವ ಒಳ್ಳೆಯವರೂ ಇದ್ದಾರೆ. ಕೆಲವೊಮ್ಮೆ ದುರಾದೃಷ್ಟ ಕೈ ಹಿಡಿದಿದ್ದರೆ ಉನ್ನತ ಸ್ಥಾನದಲ್ಲಿದ್ದವರೂ ತಳಮಟ್ಟಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಈ ಪಾಕಿಸ್ತಾನಿ ನಟನ ಉದಾಹರಣೆ ಉತ್ತಮವಾಗಿದೆ.

    ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿ ಮಿಂಚಿ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದ ಈ ನಟ ಅದನ್ನು ಪಡೆದುಕೊಂಡಿರುವಾಗಲೇ ಕಳೆದುಕೊಂಡ. ಈ ನಟನೇ ಶಾಹಿದ್ ನಸೀಬ್, ಕೆಲಸದ ಕೊರತೆಯಿಂದಾಗಿ ಪೈಂಟರ್ ವೃತ್ತಿಗೆ ಇಳಿದಿದ್ದಾರೆ.

    ಇತ್ತೀಚಿನ ಸಿನಿಮಾ ನಾಟಕ ವಿಸಿಲ್ ನಲ್ಲಿ ಖಳ ನಟನಾಗಿದ್ದ ಇವರು ಹಲವಾರು ದೂರದರ್ಶನ ಧಾರಾವಾಹಿಗಳಾದ ದುಲ್ಲಾರಿ, ಜಬ್ ಉಸೆ ಮೊಹಬ್ಬತ್ ಹುಯಿ ಮತ್ತು ಇಲ್ಟಾಜಾನಲ್ಲಿ ನಟಿಸಿದ್ದಾರೆ. ಆಗ ಅದೃಷ್ಟವಿತ್ತು ಈಗ ದುರಾದೃಷ್ಟ ಕೈ ಹಿಡಿದಿದ್ದರಿಂದ ಕಾರ್ಮಿಕನಾಗಿದ್ದಾರೆ.

    “ನಾನು ಎರಡು ನಾಟಕ ಧಾರವಾಹಿ ಮತ್ತು ಟೆಲಿಫಿಲ್ಮ್ ಗಳಲ್ಲಿ ಉತ್ತಮ ಪಾತ್ರವನ್ನು ಹೊಂದಿದ್ದೆನೆ. ಆದರೆ ಕಳೆದ ಹತ್ತು ವರ್ಷಗಳು ನನಗೆ ತುಂಬಾ ಕಠಿಣವಾದ ದಿನಗಳಾಗಿವೆ. ದಿ ವಿಸಿಲ್ ನನಗೆ ದೊಡ್ಡ ಅವಕಾಶವನ್ನು ಕೊಟ್ಟಿದೆ ಹಾಗೂ ಅವಕಾಶಗಳ ಬಾಗಿಲನ್ನು ತೆರೆಸಿದೆ. ಆದರೆ ಈಗ ದುರಾದೃಷ್ಟವಶಾತ್ ಯಾವ ಪಾತ್ರಗಳೂ ದೊರಕುತ್ತಿಲ್ಲ. ನಾನು ಹಣ ಗಳಿಸಲು ಪೈಂಟರ್ ಆಗಿದ್ದೇನೆ” ಎಂದು ಅವರು ಹೇಳಿದರು.

    ನಾನು ನಟನಾಗಲು ಆಶಿಸಿ ಹತ್ತು ವರ್ಷಗಳ ಹಿಂದೆ ನನ್ನ ಗ್ರಾಮವನ್ನು ಬಿಟ್ಟೆ. ಅಲ್ಲಿಂದೀಚೆಗೆ ನಾನು ಇಸ್ಲಾಮಾಬಾದ್, ಕರಾಚಿ, ಪೇಶಾವರ್‍ಗಳಲ್ಲಿ ಅಲೆದಾಡಿದ್ದೇನೆ ಈಗ ಲಾಹೋರ್‍ನಲ್ಲಿ ಕೆಲಸ ಹುಡುಕುತ್ತಿದ್ದೇನೆ. ಆದರೆ ಅದೃಷ್ಟ ನನ್ನ ಕಡೆಗಿಲ್ಲ” ಎಂದು ಶಾಹಿದ್ ಮುಂದುವರಿಸಿದರು. “ನಾನೀಗ ನನ್ನ ಗ್ರಾಮಕ್ಕೆ ಮರಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ನನ್ನ ವೈಫಲ್ಯವನ್ನು ನೋಡಿ ನಗುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡುವವರೂ ಸಹ ‘ಶಾಹಿದ್ ರಂಗ್ವಾಲಾ’ ನಂತಹ ಹೆಸರುಗಳ ಮೂಲಕ ನನ್ನನ್ನು ಹಂಗಿಸುತ್ತಿದ್ದಾರೆ ಇದರಿಂದ ನನಗೆ ತುಂಬಾ ದುಖಃವಾಗಿದೆ” ಎಂದು ಬೇಸರ ಹಂಚಿದ್ದಾರೆ.

    ಅನೇಕ ನಿರ್ಮಾಪಕರು ಕೆಲಸಕ್ಕೆ ಬದಲಾಗಿ ತಮ್ಮ ಮನೆಗಳಲ್ಲಿ ಚಿತ್ರಿಸಲು ಬಳಸಿಕೊಂಡಿದ್ದಾರೆ. ಇಂದು ಮನರಂಜನಾ ಮಾಧ್ಯಮದಲ್ಲಿ ಯಾರೊಂದಿಗೂ ನಿಜವಾದ ಸಂಬಂಧ ಹೊಂದಲು ಸಾಧ್ಯವಿಲ್ಲ. ನಾನು ಕಳಪೆ ಕಲಾವಿದನಾಗಿದ್ದರಿಂದ ವಿಸಿಲ್ ನಿರ್ಮಾಪಕರು ಚಿತ್ರದ ಕ್ರೆಡಿಟ್‍ಗಳಲ್ಲಿ ನನ್ನ ಹೆಸರನ್ನು ಸೇರಿಸಿಲ್ಲ. ಆದರೆ ಇಡೀ ಸ್ಕ್ರಿಪ್ಟ್ ನ್ನು ನಾನು ಬರೆದಿದ್ದೇನೆ” ಎಂದು ಅವರು ನೋವು ಹಂಚಿಕೊಂಡರು.

    ಈಗ ದಿನವೂ ರಾತ್ರಿ ನಾನು ದುಖಿಃಸುತ್ತಿದ್ದೇನೆ. ನನ್ನ ಸಂಪಾದನೆ ಈಗ ಕೇವಲ 20 ಸಾವಿರ ರೂ.. ಇದರಲ್ಲಿಯೂ ಸ್ವಲ್ಪ ಹಣವನ್ನು ನಾನು ಉಳಿಸಲು ಪ್ರಯತ್ನಿಸುತಿದ್ದೇನೆ. ಈ ಹಣದಲ್ಲಿ ನನ್ನ ಹಾಡುಗಳನ್ನು ಬಿಡುಗಡೆ ಗೊಳಿಸುವದು ನನ್ನ ಉದ್ದೇಶ. ನಾನು ಕೆಲವು ಸಂಗೀತಗಾರರನ್ನು ಭೇಟಿಯಾಗಿದ್ದೇನೆ ಅವರು ಟ್ರಾಕ್ ಬಿಡುಗಡೆಗೊಳಿಸಲು 10 ಸಾವಿರ ರೂ. ಕೇಳುತ್ತಿದ್ದಾರೆ. ಇನ್ನು ಹೆಚ್ಚು ಹಣ ಗಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪೈಟಿಂಗ್ ಜೊತೆಗೆ ಶಾಹಿದ್ ಕೆಲವು ಖಾಸಗಿ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ. “ನಾನು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತೇನೆ. ಹೆಚ್ಚು ಹಣ ನೀಡುವ ಯಾವುದೇ ಕೆಲಸವನ್ನು ನಾನೀಗ ಮಾಡುತ್ತಿಲ್ಲ. ನನ್ನ ರಾತ್ರಿಗಳನ್ನು ನಾನು ರಸ್ತೆಗಳಲ್ಲಿ ಕಳೆಯುತ್ತಿದ್ದೇನೆ. ಈ ದಿನಗಳು ನನಗೆ ತುಂಬಾ ಕಠಿಣವಾಗಿವೆ ಆದರೆ ಲಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇಂತಹ ದಿನಗಳನ್ನು ಅನೇಕರು ಎದುರಿಸಿದ್ದಾರೆ ಎಂದು ನನಗೆ ಗೊತ್ತು” ಎಂದು ಹೇಳಿದರು.