Tag: Paine

  • ಹೆಂಡ್ತಿ ಜೊತೆ ಫಿಲ್ಮ್ ಹೋದ್ರೆ ನನ್ನ ಮಗು ನೋಡ್ಕೊ – ಆಸೀಸ್ ನಾಯಕನ ಉದ್ಧಟತನ

    ಹೆಂಡ್ತಿ ಜೊತೆ ಫಿಲ್ಮ್ ಹೋದ್ರೆ ನನ್ನ ಮಗು ನೋಡ್ಕೊ – ಆಸೀಸ್ ನಾಯಕನ ಉದ್ಧಟತನ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನಾಯಕ ಪೈನೆ ಮತ್ತೆ ತಮ್ಮ ಉದ್ಧಟತನವನ್ನು ಮೆರೆದಿದ್ದು, ರಿಷಬ್ ಪಂತ್ ವಿರುದ್ಧ ತಮ್ಮ ಸ್ಲೆಡ್ಜಿಂಗ್ ಮುಂದುವರೆಸಿದ್ದಾರೆ.

    ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾರನ್ನು ಕೆಣಕಿದ್ದ ಪೈನೆ ಇಂದು ಒಂದು ಹೆಜ್ಜೆ ಮುಂದೆ ಹೋಗಿ ರಿಷಬ್ ಪಂತ್ ಕಾಲೆಳೆದಿದ್ದಾರೆ. 3ನೇ ದಿನದಾಟದ 26ನೇ ಓವರಿನ ಲಯನ್ ಬೌಲಿಂಗ್ ವೇಳೆ ಘಟನೆ ನಡೆದಿದೆ. ಎಂಎಸ್ ಧೋನಿ ಆಸೀಸ್ ವಿರುದ್ಧ ಏಕದಿನ ಟೂರ್ನಿಗೆ ವಾಪಸ್ ಆಗಿದ್ದು, ಟೆಸ್ಟ್ ಸರಣಿ ಮುಗಿದ ಬಳಿಕ ಆಸೀಸ್ ಬಿಗ್ ಬ್ಯಾಶ್ ಲೀಗ್ ಆಡು. ಆಸೀಸ್‍ನ ಹೋಬಾರ್ಡ್ ಪ್ರದೇಶ ಸುಂದರ ತಾಣವಾಗಿದ್ದು, ಆದ್ದರಿಂದ ನೀನು ಹೋಬಾರ್ಟ್ ಹರಿಕೇನ್ಸ್ ತಂಡದ ಪರ ಆಡು. ಅಲ್ಲದೇ ಆಸ್ಟ್ರೇಲಿಯದಲ್ಲೇ ರಜೆ ದಿನಗಳನ್ನು ಮಜಾ ಮಾಡಿ ಎಂದಿದ್ದಾರೆ.

    ಕ್ರೀಡಾ ಸ್ಫೂರ್ತಿಯನ್ನು ಮರೆತಿರುವ ಪೈನೆ ತಮ್ಮ ಮಾತನ್ನು ಮುಂದುವರೆಸಿ, ಆಸ್ಟ್ರೇಲಿಯಾದ ಅದ್ಭುತವಾದ ಜಾಗಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ. ಊಟಕ್ಕೆ ನಮ್ಮ ಮನೆಗೆ ಬಂದು. ನಾನು ನನ್ನ ಹೆಂಡತಿ ಫಿಲ್ಮ್ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿಕೊಂಡು ಇರು ಎಂದು ಹೇಳಿದ್ದಾರೆ. ಪೈನೆ ಸಂಭಾಷಣೆ ಸಂಪೂರ್ಣ ಧ್ವನಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂಬೈ ತಂಡಕ್ಕೆ ಖರೀದಿಸುತ್ತೇನೆ – ಪೈನೆ ಸ್ಲೆಡ್ಜಿಂಗ್‍ಗೆ ಟಾಂಗ್ ಕೊಟ್ಟ ರೋಹಿತ್!

    ಮುಂಬೈ ತಂಡಕ್ಕೆ ಖರೀದಿಸುತ್ತೇನೆ – ಪೈನೆ ಸ್ಲೆಡ್ಜಿಂಗ್‍ಗೆ ಟಾಂಗ್ ಕೊಟ್ಟ ರೋಹಿತ್!

    ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ವಿರುದ್ಧ ಸ್ಲೆಡ್ಜಿಂಗ್ ನಡೆಸಿದ್ದ ಆಸೀಸ್ ನಾಯಕ ಪೈನೆ ಮಾತಿಗೆ ಶರ್ಮಾ ತಿರುಗೇಟು ನೀಡಿದ್ದು, ಮುಂಬೈ ತಂಡಕ್ಕೆ ಪೈನೆರನ್ನು ಖರೀದಿ ಮಾಡುವುದಾಗಿ ಹೇಳಿದ್ದಾರೆ.

    3ನೇ ದಿನದಾಟದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಬ್ಯಾಟಿಂಗ್ ವೇಳೆ ಪೈನೆ ಹಾಗೂ ಫಿಂಚ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೆ. ಆದರೆ ಆ ಸಂದರ್ಭದಲ್ಲಿ ನನ್ನ ಆಟದ ಬಗ್ಗೆ ಮಾತ್ರ ಗಮನ ಹರಿಸಿದ್ದೆ. ಆದರೆ ಈ ಪಂದ್ಯದಲ್ಲಿ ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಪೈನೆರನ್ನು ಖರೀದಿ ಮಾಡಲು ತಂಡದ ಮೆಂಟರ್ ಅವರೊಂದಿಗೆ ಮಾತನಾಡುತ್ತೇನೆ. ಪೈನೆ ಮುಂಬೈ ತಂಡದ ಅಭಿಮಾನಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

    2ನೇ ದಿನದಾಟ ವೇಳೆ ಪೈನೆ ವಿಕೆಟ್ ಹಿಂದೆ ನಿಂತು ರೋಹಿತ್ ಶರ್ಮಾರನ್ನು ಕೆಣಕುವಂತೆ ಮಾತನಾಡಿದ್ದರು. ನೀನು ಸಿಕ್ಸರ್ ಸಿಡಿಸಿದರೆ ನಾನು ಮುಂಬೈ ತಂಡಕ್ಕೆ ಬೆಂಬಲ ನೀಡುತ್ತೇನೆ. ನಾನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬಗ್ಗೆ ಗೊಂದಲದಲ್ಲಿದ್ದು, ಈಗ ನೀನು ಸಿಕ್ಸರ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸ್ಟ್ರೈಕ್ ನಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡದ ರಹಾನೆ ಮತ್ತೊಂದು ಬದಿಯಲ್ಲಿ ಇದ್ದರು.

    ಆಸೀಸ್ ನಾಯಕ ಪೈನೆ ಅವರು ಸ್ಲೆಡ್ಜಿಂಗ್ ಬಗ್ಗೆ ಟೀಂ ಇಂಡಿಯಾ ಅಭಿಮಾನಿಗಳು ಟ್ರೋಲ್ ಮಾಡಿ ಕಾಲೆಳೆದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಡುವ ವೇಳೆ ಮೌನವಾಗಿರುವ ಪೈನೆ, ಕೊಹ್ಲಿ ಔಟಾಗುತ್ತಿದಂತೆ ಮಾತನಾಡಲು ಆರಂಭಿಸುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಪೈನೆ ಅವರ ವರ್ತನೆ ಇಂದು ಕೂಡ ಅಭಿಮಾನಿಗಳ ಟ್ರೋಲ್ ನಂತೆಯೇ ಇದ್ದು, ಕೊಹ್ಲಿ ಶೂನ್ಯಕ್ಕೆ ಔಟಾಗುವ ವರೆಗೂ ಸುಮ್ಮನಿದ್ದ ಪೈನೆ ಬಳಿಕ ರಿಷಬ್ ಪಂತ್ ರನ್ನು ಕಾಲೆಳೆಯಲು ಯತ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಕ್ಸರ್ ಸಿಡಿಸಿದ್ರೆ ಮುಂಬೈ ಇಂಡಿಯನ್ಸ್‌ಗೆ ಬೆಂಬಲ – ರೋಹಿತ್ ಶರ್ಮಾ ಕೆಣಕಿದ ಆಸೀಸ್ ನಾಯಕ

    ಸಿಕ್ಸರ್ ಸಿಡಿಸಿದ್ರೆ ಮುಂಬೈ ಇಂಡಿಯನ್ಸ್‌ಗೆ ಬೆಂಬಲ – ರೋಹಿತ್ ಶರ್ಮಾ ಕೆಣಕಿದ ಆಸೀಸ್ ನಾಯಕ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಆಸೀಸ್ ನಾಯಕ ಪೈನೆ, ರೋಹಿತ್ ಶರ್ಮಾರನ್ನು ಕೆಣಕಲು ಯತ್ನಿಸಿದ ಘಟನೆ ನಡೆದಿದೆ.

    ಆಸೀಸ್ ತನ್ನ ಸ್ಲೆಡ್ಜಿಂಗ್ ಅಸ್ತ್ರವನ್ನು 3ನೇ ಟೆಸ್ಟ್ ಪಂದ್ಯದಲ್ಲೂ ಪ್ರಯೋಗಿಸಿದ್ದು, ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ರನ್ನು ಪೈನೆ ಈ ಬಾರಿ ಕೆಣಕಿದ್ದಾರೆ.

    ಆಸೀಸ್ ಸ್ಪಿನ್ನರ್ ಲಯನ್ ಬೌಲಿಂಗ್ ವೇಳೆ ಪೈನೆ ವಿಕೆಟ್ ಹಿಂದೆ ನಿಂತು ರೋಹಿತ್ ಶರ್ಮಾರನ್ನು ಕೆಣಕುವಂತೆ ಮಾತನಾಡಿದ್ದು, ನೀನು ಸಿಕ್ಸರ್ ಸಿಡಿಸಿದರೆ ನಾನು ಮುಂಬೈ ತಂಡಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಾನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬಗ್ಗೆ ಗೊಂದಲದಲ್ಲಿದ್ದು, ಈಗ ನೀನು ಸಿಕ್ಸರ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿ ಕೆಣಕುವ ಪ್ರಯತ್ನ ಮಾಡಿದ್ದಾರೆ.

    ಪೈನೆ ವಿಕೆಟ್ ಹಿಂದೆ ನಿಂತು ಮಾತನಾಡುತ್ತಿರುವ ಸಂಭಾವಣೆ ದಾಖಲಾಗಿದ್ದು, ಪೈನೆ ಮಾತಿಗೆ ಯಾವುದೇ ರೀತಿ ತಲೆ ಕೆಡೆಸಿಕೊಳ್ಳದ ರೋಹಿತ್ ತಮ್ಮ ಬ್ಯಾಂಟಿಂಗ್ ಮುಂದುವರಿಸಿದರು. ಪಂದ್ಯದಲ್ಲಿ 114 ಎತಸೆಗಳನ್ನು ಎದುರಿಸಿದ ರೋಹಿತ್ 5 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿ ಅಜೇಯರಾಗಿ ಉಳಿದರು.

    ಪಾರ್ಥ್ ಟೆಸ್ಟ್ ವೇಳೆಯೂ ಸ್ಲೆಡ್ಜಿಂಗ್ ಅಸ್ತ್ರವನ್ನೇ ಪ್ರಯೋಗ ಮಾಡಿದ್ದ ಪೈನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮುಖಾಮುಖಿಯಾಗಿ ನಿಂತಿದ್ದರು. ಅಲ್ಲದೇ ಇದೇ ಪಂದ್ಯದಲ್ಲಿ ಮುರಳಿ ವಿಜಯ್ ರನ್ನು ಸ್ಲೆಂಡ್ಜ್ ಮಾಡಿ ಆಟದ ಮೇಲಿನ ಏಕಾಗ್ರತೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv