Tag: Pain

  • ‘ಆ ದಿನಗಳ’ ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತ ಹೆಗ್ಡೆ

    ‘ಆ ದಿನಗಳ’ ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತ ಹೆಗ್ಡೆ

    ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಬೋಲ್ಡ್ ಫೋಟೋಗಳನ್ನು ಹಾಕುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದ ನಟಿ ಸಂಯುಕ್ತ ಹೆಗ್ಡೆ (Samyuktha Hegde), ಇದೇ ಮೊದಲ ಬಾರಿಗೆ ಕಣ್ಣೀರು ಹಾಕುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಗಂಭೀರವಾಗಿ ಪೆಟ್ಟು ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ದಿನಗಳು ನರಕವನ್ನು ತೋರಿಸಿಬಿಟ್ಟವು ಅಂದಿದ್ದಾರೆ.

    ಕಳೆದ ವರ್ಷ ‘ಕ್ರೀಮ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಕಾಲಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿತ್ತು. ಆ ಸಮಯದಲ್ಲಿ ತುಂಬಾ ನೋವನ್ನು ಅನುಭವಿಸಿದರಂತೆ ನಟಿ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಶೂಟಿಂಗ್ ವೇಳೆ ಕಾಲಿಗೆ ಗಂಭೀರವಾಗಿಯೇ ಪೆಟ್ಟು ಬಿದ್ದಿತ್ತು. ಹಾಗಾಗಿ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಯಿತು. ಸರ್ಜರಿ ಯಶಸ್ವಿಯಾಗಿ ನಡೆದು ಎಂಟು ವಾರಗಳ ಕಾಲ ರೆಸ್ಟ್ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದರು. ಅಲ್ಲದೇ, ಫಿಸಿಯೋಥೆರಪಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದರು.

    ಕ್ರೀಮ್ ಸಿನಿಮಾದ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಡ್ಯೂಪ್ ಬಳಸುವಂತೆ ಹೇಳಿದರೂ, ಸಂಯುಕ್ತ ಹೆಗ್ಡೆ ಅತ್ಯುತ್ಸಾಹದಿಂದ ಡ್ಯೂಪ್ ಇಲ್ಲದೇ ತಾವೇ ಪಾಲ್ಗೊಂಡಿದ್ದರು, ಆಗ ಕಾಲು ಟ್ವಿಸ್ಟ್ ಆಗಿತ್ತು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆಯನ್ನೂ ನೀಡಲಾಯಿತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದುಕೊಂಡು ಟ್ರೀಟ್ಮೆಂಟ್ ಪಡೆದರು. ಆದರೂ, ನೋವು ಕಡಿಮೆ ಆಗಿರಲಿಲ್ಲ. ಕೊನೆಗೂ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾ ಮಂದಣ್ಣ ‘ಥ್ಯಾಂಕ್ಯೂ ಮೈ ಲವ್ಸ್’ ಅಂತ ಹೇಳಿದ್ದು ಯಾರಿಗೆ?

    ರಶ್ಮಿಕಾ ಮಂದಣ್ಣ ‘ಥ್ಯಾಂಕ್ಯೂ ಮೈ ಲವ್ಸ್’ ಅಂತ ಹೇಳಿದ್ದು ಯಾರಿಗೆ?

    ಮ್ಮ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ಇದೇ ಮೊದಲ ಬಾರಿಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು ನಟಿ ರಶ್ಮಿಕಾ ಮಂದಣ್ಣ. ನೆಗೆಟಿವ್ ಕಾಮೆಂಟ್ ಮಾಡುವುದಲ್ಲದೇ, ತಮ್ಮ ವಿರುದ್ಧ ಅಪಮಾನ ಮಾಡುವಂತಹ ಪಿತೂರಿ ನಡೆಯುತ್ತಲೇ ಇದೆ ಎಂದು ಹೇಳಿಕೊಂಡಿದ್ದರು. ರಶ್ಮಿಕಾ ಮಾತಿಗೆ ರಮ್ಯಾ ಕೂಡ ಧ್ವನಿಗೂಡಿಸಿದ್ದರು. ಯಾರೂ ಯಾರ ಬಗ್ಗೆಯೂ ಜಡ್ಜ್ ಮಾಡುವಂತಹ ಅಧಿಕಾರ ಇಲ್ಲವೆಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ, ರಶ್ಮಿಕಾ ಮಂದಣ್ಣಗೆ ಈ ವಿಷಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿತ್ತು. ಹಾಗಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ರಶ್ಮಿಕಾ. ‘ಥ್ಯಾಂಕ್ಯೂ ಮೈ ಲವ್ಸ್’ ಎಂದು ಬೆಂಬಲಿಸಿದವರಿಗೆ ಹೇಳಿದ್ದಾರೆ.

    ತಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೊಡ್ಮನೆ ಕುಡಿ ಯುವ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ರು ಸಂತೋಷ್ ಆನಂದ್‌ರಾಮ್

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

    ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ಟ್ರೋಲ್: ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ರಶ್ಮಿಕಾ ಮಂದಣ್ಣ ಟ್ರೋಲ್: ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna)  ಕುರಿತಾದ ಟ್ರೋಲ್ ವಿಚಾರ ಎರಡು ದಿನಗಳಿಂದ ವಿಪರೀತ ಸುದ್ದಿಯಲ್ಲಿದೆ. ತಾವು ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಈವರೆಗೂ ರಶ್ಮಿಕಾ ಕುರಿತು ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೇ, ಸಲ್ಲದ ಆರೋಪಗಳನ್ನೂ ಹೊರಿಸಲಾಗುತ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಇದೀಗ ರಶ್ಮಿಕಾ ಪರ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಬ್ಯಾಟಿಂಗ್ ಮಾಡಿದ್ದಾರೆ. ಯಾರನ್ನೂ ಯಾರೂ ಜಡ್ಜ್ ಮಾಡಬಾರದು ಎಂದು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ಯಾರೂ ಯಾರನ್ನೂ ಜಡ್ಜ್ ಮಾಡಬಾರದು. ಅವರ ಜೀವನ ಅವರಿಗೆ ಮಾತ್ರ ಗೊತ್ತಿರುತ್ತದೆ. ಟ್ರೋಲಿಂಗ್ ನಿಲ್ಲದ ಸಂಗತಿಯಾದರೂ, ಬೇರೆಯವರನ್ನು ನೀವು ಜಡ್ಜ್ ಮಾಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಅವರ ಪಾಡಿಗೆ ಅವರನ್ನು ಬದುಕುವುದಕ್ಕೆ ಬಿಡಿ ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ಪರವಾಗಿ ರಮ್ಯಾ ನಿಂತಿದ್ದಾರೆ.

    ತಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

    ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ (Rashmika Mandanna) ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    ಡೆಹ್ರಾಡೂನ್: 205 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರಾಖಂಡದ ಸಾರಿಗೆ ನಿಗಮಕ್ಕೆ ಸೇರಿದ್ದ ಬಸ್ ಇದಾಗಿದ್ದು, ಉತ್ತರ ಕಾಶಿಯಿಂದ ಹರಿದ್ವಾರಕ್ಕೆ ಹೊರಟಿತ್ತು. ದಾರಿ ಮಧ್ಯದಲ್ಲಿ ಜಾರ್ಜ್ ಸಮೀಪದ ಸುಲೀಧರ್ ಪ್ರದೇಶದ ಎತ್ತರ ಪರ್ವತ ಶ್ರೇಣಿಯ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ 14 ಜನರು ಮೃತಪಟ್ಟರೇ, 16 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ 6 ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.

    ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಹಾಗೂ ಎಸ್‌ಡಿಆರ್‌ಎಫ್ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಗಾಯಾಳುಗಳನ್ನು ಹೃಷಿಕೇಶದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಪಘಾತದಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ.

  • ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ಬೆಂಗಳೂರು: ಮುಂಗಾರು ಮಳೆ ಈ ಬಾರಿ ರಾಜ್ಯಕ್ಕೆ ಖುಷಿ ತಂದಿದೆ. ಮುಂಗಾರು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಆವರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದು ಸಂತಸ ಅಂದರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗುತ್ತಿವೆ.

    ಪ್ರತಿ ವರ್ಷವೂ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಈಗ ಬಾಯಿ ಬಂದ್ ಮಾಡಿಕೊಂಡಿದೆ. ಕಾರಣ ಅಷ್ಟರ ಮಟ್ಟಿಗೆ ಕೆಆರ್‌ಎಸ್ ನಿಂದ ನೀರು ಹರಿದು ಹೋಗುತ್ತಿದೆ. ಇನ್ನೂ ಎರಡು ದಿನ ಮಳೆಯಾಗಲಿದ್ದು ಇವತ್ತು ಸಹ ರಾಜ್ಯದ ಹಲವೆಡೆ ಬಿಟ್ಟೂ ಬಿಡದೆ ಮಳೆಯಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಕಳಸ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಭಾಗದಲ್ಲಿ ವರುಣ ರುದ್ರನರ್ತನ ಮಾಡುತ್ತಿದ್ದಾನೆ. 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 8-10 ವರ್ಷಗಳಿಂದ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 15 ವರ್ಷಗಳಲ್ಲೇ ದಾಖಲೆ ಮಟ್ಟದ ಮಳೆಯಾಗಿದೆ. ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಖುಷಿ ಜೊತೆಗೆ ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಶುರುವಾಗಿದ್ದರಿಂದ ಆತಂಕದಲ್ಲಿದ್ದಾರೆ. ಕಂಬಿಹಳ್ಳಿಯಲ್ಲಿ ಗೋಡೆ ಕುಸಿದು ವನಜಾ (48) ಎನ್ನುವವರು ಮೃತಪಟ್ಟಿದ್ದಾರೆ.

    ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಕಾವೇರಿ ನದಿಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಮತ್ತಷ್ಟು ನೆಲಕ್ಕೆ ಉರುಳುತ್ತಿವೆ. ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ವರ್ಷಧಾರೆ ಆಗುತ್ತಿದೆ. ಉಪ್ಪಿನಂಗಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮತ್ತೆ ಮತ್ತೆ ಮುಳುಗಡೆ ಆಗುತ್ತಿದೆ. ಹಾಗಾಗಿ, ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಕೆರೆಕಟ್ಟೆಗಳು ನೀರು ತುಂಬಿ ತುಳುಕುತ್ತಿವೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಕಾರವಾರದಲ್ಲಿ ಮಳೆಯ ಆರ್ಭಟ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದೆ.

    ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕೊಯ್ನಾ ದಡದಲ್ಲಿ ನಿರಂತರ ಮಳೆಯಿಂದಾಗಿ, ಕೃಷ್ಣಾ ನದಿ ಮೈದುಂಬಿದೆ. ನೀರಿನ ಹರಿವು ಹೆಚ್ಚಾಳದಿಂದ ನದಿ ತೀರದ ಜಮಖಂಡಿಯ ಮತ್ತೂರು, ಮೈಗೂರು, ಕಂಕನವಾಡಿ, ಶೂರ್ಪಾಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸಿಲುಕುವ ಸಾಧ್ಯತೆ ಇದೆ. ಜಮಖಂಡಿಯ ಹಿಪ್ಪರಿಗೆ ಬ್ಯಾರೇಜ್‍ನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ. ಕೃಷಿ, ಕೂಲಿ, ಸಂತೆ ಜಾನುವಾರುಗಳಿಗೆ ಮೇವು ಸಾಗಾಟಕ್ಕೆ ಜನ ಬೋಟ್ ಅವಲಂಬಿಸುತ್ತಿದ್ದಾರೆ.

    ಧಾರವಾಡ: ಧಾರವಾಡದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದರಿಂದ ನಗರದ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡಬೇಕಾಯಿತು.

    ಯಾದಗಿರಿ: ಜಿಲ್ಲೆಯ ಶಹಾಪೂರ, ಸುರಪುರಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ, ದಟ್ಟವಾದ ಮೋಡಗಳು ಆವರಿಸಿದ್ದವು.

    ಕೋಲಾರ: ಕರಾವಳಿ, ಮಲೆನಾಡು ಮಾತ್ರವಲ್ಲ ಬರದ ನಾಡು ಕೋಲಾರದಲ್ಲೂ ವರ್ಷಧಾರೆ ಇದೆ. 3 ದಿನಗಳಿಂದ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಯಿತು. ರೈತರು ಈಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

    ಬೆಂಗಳೂರು: ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಆನೇಕಲ್ ಗಳಲ್ಲೂ ಮಳೆಯಾಯಿತು. ಮಧ್ಯಾಹ್ನವೇ ಮಳೆಯ ಅರ್ಭಟ ಶುರುವಾಗಿ ಅರ್ಧ ಗಂಟೆ ಬಿರುಗಾಳಿ ಸಹಿತ ಮಳೆಯಾಯಿತು. ನೆಲಮಂಗಲದ ನಿಡುವಂದ ಬಳಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿ ಹೊರವಲಯದಲ್ಲಿ ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ರವಾನೆ ಆಗುತ್ತಿದ್ದ ಹೆಟೆನ್ಷನ್ ವಿದ್ಯುತ್ ಟವರ್ ಕಳಪೆ ಕಾಮಗಾರಿಯಿಂದಾಗಿ ಬಿರುಗಾಳಿಗೆ ಮುರಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ಅಳವಡಿಸದ ಕಾರಣ ಅನಾಹುತ ತಪ್ಪಿದೆ.