Tag: Pailwaan

  • ವಿಶ್ವಾದ್ಯಂತ ಪೈಲ್ವಾನ್ ರಿಲೀಸ್ – 3 ಸಾವಿರ ಥಿಯೇಟರ್‌ಗಳಲ್ಲಿ ಕಿಚ್ಚನ ಹವಾ

    ವಿಶ್ವಾದ್ಯಂತ ಪೈಲ್ವಾನ್ ರಿಲೀಸ್ – 3 ಸಾವಿರ ಥಿಯೇಟರ್‌ಗಳಲ್ಲಿ ಕಿಚ್ಚನ ಹವಾ

    – ಚಿತ್ರಮಂದಿರದ ಎದುರು 101 ತೆಂಗಿನಕಾಯಿ ಒಡೆದ ಅಭಿಮಾನಿ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ.

    ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ.

    ಸುದೀಪ್ ಅವರ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅಲ್ಲದೆ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಪೈಲ್ವಾನ್ ತನ್ನ ತಾಕತ್ತನ್ನು ಪ್ರದರ್ಶಿಸುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

    ಪೈಲ್ವಾನ್ ಚಿತ್ರವನ್ನು ಎಸ್. ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಪೈಲ್ವಾನ್: ಮುಂಗಡ ಟಿಕೆಟ್ ಬುಕ್ಕಿಂಗ್‍ಗೆ ಮುಗಿಬಿದ್ದ ಪ್ರೇಕ್ಷಕರು!

    ಪೈಲ್ವಾನ್: ಮುಂಗಡ ಟಿಕೆಟ್ ಬುಕ್ಕಿಂಗ್‍ಗೆ ಮುಗಿಬಿದ್ದ ಪ್ರೇಕ್ಷಕರು!

    ಬೆಂಗಳೂರು: ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ತೆರೆಗಾಣಲು ದಿನಗಳಷ್ಟೇ ಬಾಕಿ ಉಳಿದಿವೆ. ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಷ್ಟೂ ನಿರೀಕ್ಷೆಗಳ ಕಾವೇರಿಕೊಳ್ಳುವಂತೆಯೇ ನೋಡಿಕೊಂಡಿದ್ದ ನಿರ್ದೇಶಕ ಕೃಷ್ಣ ಪಾಲಿಗಿದು ಮಹತ್ವಾಕಾಂಕ್ಷೆಯ ಚಿತ್ರ. ಈ ಹಿಂದೆ ಕನ್ನಡಕ್ಕೆ ಮಾತ್ರವೇ ಸೀಮಿತವಾಗಿದ್ದ ಹೆಬ್ಬುಲಿ ಮೂಲಕ ದೊಡ್ಡ ಗೆಲುವು ಕಂಡಿದ್ದ ಕೃಷ್ಣ ಮತ್ತು ಸುದೀಪ್ ಜೋಡಿಯ ಪೈಲ್ವಾನ್ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದೆ.

    ಆರಂಭ ಕಾಲದಿಂದಲೂ ಪೋಸ್ಟರ್ ಗಳ ಮೂಲಕವೇ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾ ಸಾಗಿ ಬಂದಿದ್ದ ಚಿತ್ರ ಪೈಲ್ವಾನ್. ಇಂಥಾ ಸ್ಟಾರ್ ಸಿನಿಮಾಗಳು ಅಭಿಮಾನಿ ವಲಯಕ್ಕಷ್ಟೇ ಸೀಮಿತವಾಗೋದಿದೆ. ಆದರೆ ಪೈಲ್ವಾನ್ ಬಗೆಗಿನ ನಿರೀಕ್ಷೆಯೀಗ ಸಾರ್ವತ್ರಿಕವಾಗಿ ಬಿಟ್ಟಿದೆ. ಸುದೀಪ್ ಈ ಸಿನಿಮಾದಲ್ಲಿ ಪೈಲ್ವಾನ್ ಲುಕ್ಕಿನಲ್ಲಿ ಅಖಾಡಕ್ಕಿಳಿದಿರೋ ರೀತಿಯೇ ಅಂಥಾದ್ದಿದೆ. ಹೀಗೆ ಸಾಗಿ ಬಂದಿರೋ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಎಂಥಾ ಕಾತರ ಇದೆ ಎಂಬುದಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್‍ಗಾಗಿ ಜನ ಮುಗಿಬಿದ್ದಿರೋ ರೀತಿಯೇ ಸಾಕ್ಷಿಯಂತಿದೆ.

    ನಿನ್ನೆಯಿಂದಷ್ಟೇ ಸಿಂಗಲ್ ಸ್ಕ್ರೀನ್‍ಗಳಲ್ಲಿ ಪೈಲ್ವಾನ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಈಗಾಗಲೇ ಕೆಲವೆಡೆಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗೋ ಹಂತದಲ್ಲಿದೆ!

    ಕಿಚ್ಚ ಸುದೀಪ್ ಅವರಿಗೆ ಬಾಹುಬಲಿ ಮುಂತಾದ ಚಿತ್ರಗಳ ಮೂಲಕ ದೇಶಾದ್ಯಂತ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಆದರೆ ಇದುವರೆಗೂ ಕನ್ನಡ ಚಿತ್ರದ ಮೂಲಕ ಅಂಥಾ ಅಭಿಮಾನಿಗಳನ್ನು ಮುಟ್ಟುವ ಅವಕಾಶ ಕಿಚ್ಚನಿಗೆ ಸಿಕ್ಕಿರಲಿಲ್ಲ. ಇದೀಗ ಕೃಷ್ಣ ಸಾರಥ್ಯದಲ್ಲಿ ಪೈಲ್ವಾನ್ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಈವತ್ತಿಗೆ ಕರ್ನಾಟಕದಲ್ಲಿ ಪೈಲ್ವಾನ್ ಬಗ್ಗೆ ಕ್ರೇಜ್ ಸೃಷ್ಟಿಯಾಗಿದೆಯಲ್ಲಾ? ಅಂಥಾದ್ದೇ ಕ್ರೇಜ್ ದೇಶಾದ್ಯಂತ ಹಬ್ಬಿಕೊಂಡಿದೆ. ಬಿಡುಗಡೆ ವಿಚಾರದಲ್ಲಿಯೂ ಪೈಲ್ವಾನ್ ಈಗಾಗಲೇ ದಾಖಲೆ ಬರೆದಿದೆ. ಮೂರು ಸಾವಿರದಷ್ಟು ಚಿತ್ರ ಮಂದಿರಗಳಲ್ಲಿ ತೆರೆಗಾಣುತ್ತಿರೋ ಈ ಚಿತ್ರ ಅದ್ಧೂರಿ ಗೆಲುವಿನ ರೂವಾರಿಯಾಗೋ ಲಕ್ಷಣಗಳೇ ದಟ್ಟವಾಗಿವೆ.

  • ನಿಮ್ಮ ಪ್ರಶ್ನೆಗೆ ಪೈಲ್ವಾನ್ ಉತ್ತರ

    ನಿಮ್ಮ ಪ್ರಶ್ನೆಗೆ ಪೈಲ್ವಾನ್ ಉತ್ತರ

    ಬೆಂಗಳೂರು: ಅಭಿಮಾನಿಗಳ ಪ್ರಶ್ನೆಗಳಿಗೆ ಪೈಲ್ವಾನ್ ಕಿಚ್ಚ ಸುದೀಪ್ ಇಂದು ಉತ್ತರ ನೀಡಲಿದ್ದಾರೆ.

    ಕಿಚ್ಚ ಸುದೀಪ್ ಇಂದು ಟ್ವಿಟ್ಟರ್ ನಲ್ಲಿ ಲೈವ್ ಬರಲಿದ್ದು, ಅಭಿಮಾನಿಗಳು ಪೈಲ್ವಾನ್ ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿಮ್ಮ ನೆಚ್ಚಿನ ನಟನಿಗೆ ನೇರವಾಗಿ ಕೇಳಬಹುದು. ಈ ಕುರಿತು ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಶನಿವಾರ ಸಂಜೆ ಟ್ವಿಟ್ಟರ್ ನಲ್ಲಿ ಲೈವ್ ಬರಲಿದ್ದೇನೆ. ಪೈಲ್ವಾನ್ ಚಿತ್ರಕ್ಕೆ ಸಂಬಂಧಿಸಿದ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ನಿಮ್ಮ ಎಲ್ಲ ಪ್ರಶ್ನೆಗಳನ್ನು #AskPailwaan ಎಂದು ಬಳಸಿ ಕಳುಹಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೈಲ್ವಾನ್ ಸಿನಿಮಾಗಾಗಿ ಕಿಚ್ಚನ ತಯಾರಿ ಹೇಗಿತ್ತು?

    ಪೈಲ್ವಾನ್ ಕೇವಲ ಚಂದನವನದಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಸಿನಿ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೇ ಸೆಪ್ಟೆಂಬರ್ 12ರಂದು ತೆರೆಯ ಮೇಲೆ ಪೈಲ್ವಾನ್ ಅಬ್ಬರಿಸಲು ಸಿದ್ಧಗೊಂಡಿದೆ. ಚಿತ್ರದ ಹಾಡುಗಳು, ಟ್ರೈಲರ್ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿವೆ. ಬಾಲಿವುಡ್ ನಟ, ಕುಡ್ಲದ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಪೈಲ್ವಾನ್ ಟ್ರೈಲರ್ ಔಟ್- ರಣಾಂಗಣದಲ್ಲಿ ಕಿಚ್ಚನ ಅಬ್ಬರಕ್ಕೆ ಎದುರಾಳಿಗಳು ಉಡೀಸ್

    ತೀವ್ರ ಕುತೂಹಲವನ್ನು ಹುಟ್ಟು ಹಾಕಿರುವ ಪೈಲ್ವಾನ್ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹೇಗೆ ಸಿಗುತ್ತೆ ಎಂದು ಗೊಂದಲದಲ್ಲಿ ಮುಳುಗಿರುತ್ತಾರೆ. ಹಾಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳಿಗಾಗಿ ಲೈವ್ ಬರುತ್ತಿದ್ದಾರೆ. ಇದನ್ನೂ ಓದಿ: `ಪೈಲ್ವಾನ್’ ಬಾಕ್ಸಿಂಗ್ ಲುಕ್‍ಗೆ ಫ್ಯಾನ್ಸ್ ಫಿದಾ – ನಂಬಿದವರಿಗೆ ಥ್ಯಾಂಕ್ಸ್ ಹೇಳಿದ ಕಿಚ್ಚ

  • ಕಿಚ್ಚನ ಹುಟ್ಟುಹಬ್ಬಕ್ಕೆ ಸೈಕಲ್ ಏರಿ ಬರುತ್ತಿರುವ ಅಭಿಮಾನಿ

    ಕಿಚ್ಚನ ಹುಟ್ಟುಹಬ್ಬಕ್ಕೆ ಸೈಕಲ್ ಏರಿ ಬರುತ್ತಿರುವ ಅಭಿಮಾನಿ

    ಬೆಂಗಳೂರು: ತಮ್ಮ ನೆಚ್ಚಿನ ಹುಟ್ಟುಹಬ್ಬ ಬಂದ್ರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಮಧ್ಯರಾತ್ರಿಯೇ ನೆಚ್ಚಿನ ನಟನ ನಿವಾಸಕ್ಕೆ ಆಗಮಿಸಿ ಕೇಕ್ ಕತ್ತರಿಸಿ, ಕಟೌಟ್ ಗಳಿಗೆ ಹಾಲಿನ ಅಭಿಷೇಕ್ ಮಾಡಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ದಸರಾ, ದೀಪಾವಳಿಗೆ ಕೆಲ ದಿನಗಳ ಮುಂಚೆಯೇ ಸಿದ್ಧತೆ ಮಾಡಿಕೊಂಡಂತೆ ನಟನ ಹಬ್ಬಕ್ಕೆ ಏನು ತೆಗೆದುಕೊಂಡು ಹೋಗಬೇಕು ಎಂಬುದರ ಕುರಿತು ಅಭಿಮಾನಿಗಳು ಮೊದಲೇ ಪ್ಲಾನ್ ಮಾಡಿಕೊಳ್ಳುತ್ತಾರೆ. ಇದೇ ಸೆಪ್ಟೆಂಬರ್ 2ರಂದು ಕರುನಾಡಿನ ಮಾಣಿಕ್ಯ, ಸ್ವಾತಿಮುತ್ತು ಸುದೀಪ್ ಅವರ ಹುಟ್ಟುಹಬ್ಬದ ದಿನ. ಕಿಚ್ಚನ ಅಭಿಮಾನಿ ಬಾಗಲಕೋಟೆ ಜಿಲ್ಲೆಯ ಮುಧೋಳದಿಂದ ಸೈಕಲ್ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ.

    ಮುಧೋಳದ ಯಲ್ಲಪ್ಪ ಸೈಕಲ್ ಮೂಲಕ 550 ಕಿ.ಮೀ. ಕ್ರಮಿಸಿ ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯಲ್ಲಪ್ಪ ಈಗಾಗಲೇ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಯಲ್ಲಪ್ಪ ಸೈಕಲ್ ಮುಂದೆ ನಿಂತಿರುವ ಫೋಟೋವನ್ನು ಸುದೀಪ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳ ಅಭಿಮಾನಕ್ಕೆ ಮಿತಿ ಇಲ್ಲ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಸೆಪ್ಟೆಂಬರ್ 12ರಂದು ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಬಿಡುಗಡೆಯಾಗಲಿದೆ. ಗಜಕೇಸರಿ ಖ್ಯಾತಿಯ ಕೃಷ್ಣ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಆಕಾಂಕ್ಷ ಸಿಂಗ್ ಮೊದಲ ಬಾರಿಗೆ ಕಿಚ್ಚನಿಗೆ ಜೊತೆಯಾಗಿ ನಟಿಸಿದ್ದಾರೆ. ಬಾಲಿವುಡ್ ನಟರಾದ ಕಬೀರ್, ಸುನೀಲ್ ಶೆಟ್ಟಿ ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದಾರೆ.

  • ಪೈಲ್ವಾನ್ ಸಿನಿಮಾಗಾಗಿ ಕಿಚ್ಚನ ತಯಾರಿ ಹೇಗಿತ್ತು?

    ಪೈಲ್ವಾನ್ ಸಿನಿಮಾಗಾಗಿ ಕಿಚ್ಚನ ತಯಾರಿ ಹೇಗಿತ್ತು?

    ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿಯೇ ಕನ್ನಡದ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆ ಮುನ್ನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮುನ್ಸೂಚನೆಯನ್ನ ನೀಡಿದೆ. ಪ್ರತಿ ಸಿನಿಮಾಗಳಲ್ಲಿ ಖಡಕ್ ಅಧಿಕಾರಿ, ರಫ್ ಆ್ಯಂಡ್ ಟಫ್ ಲುಕ್, ಲವ್ವರ್ ಬಾಯ್ ಪಾತ್ರದಲ್ಲಿ ಮಿಂಚುತ್ತಿದ್ದ ಸುದೀಪ್ ಮೊದಲ ಬಾರಿಗೆ ಕುಸ್ತಿಪಟುವಾಗಿ ಸಿನಿಮಾ ಅಂಗಳಕ್ಕೆ ಇಳಿದಿದ್ದಾರೆ. ಒಂದು ಕಾಲದಲ್ಲಿ ಜಿಮ್ ಅಂದ್ರೆ ದೂರ ಓಡ್ತಿದ್ದ ಸುದೀಪ್, ಪೈಲ್ವಾನನಿಗಾಗಿ ಮೈಯನ್ನು ಹುರಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಸಿನಿಮಾ ಒಪ್ಪಿಕೊಂಡ ಮೇಲೆ ಸುದೀಪ್ ಚಿತ್ರದ ತಯಾರಿ ನಡೆಸಿದ್ದ ರೀತಿಯನ್ನು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

    ಸಿನಿಮಾ ತಯಾರಿ ಬಗ್ಗೆ ಸುದೀಪ್ ಹೇಳಿದ್ದು ಹೀಗೆ: ಪೈಲ್ವಾನ್ ಸಿನಿಮಾಗೂ ಮುನ್ನ ನನ್ನ ಮುಂದೆ ಜಿಮ್ ಬಗ್ಗೆ ಮಾತಾಡಿದ್ರೆ ತಲೆ ಕೆಡುತ್ತಿತ್ತು. ಪೈಲ್ವಾನ್ ಕಥೆ ಒಪ್ಪಿಕೊಂಡ ಮೇಲೆ ಎರಡ್ಮೂರು ತಿಂಗಳು ಹಾಗೆ ಜಿಮ್ ಗೆ ಹೋಗದೇ ಕಾಲ ಕಳೆದೆ.

    ಒಂದು ಸಾರಿ ನಿರ್ದೇಶಕ ಕೃಷ್ಣ ಮುಂದೆ ನಾವ್ ಯಾವಾಗ ಸುಲ್ತಾನ್ ಮತ್ತು ದಂಗಲ್ ರೀತಿ ಸಿನಿಮಾ ಮಾಡೋದು ಅಂತಾ ಸಹಜವಾಗಿಯೇ ಹೇಳಿದ್ದೆ. ನನ್ನ ಮಾತನ್ನು ತುಂಬಾ ಸೀರಿಯಸ್ ಆಗಿಯೇ ತೆಗೆದುಕೊಂಡ ಕೃಷ್ಣ ಎರಡ್ಮೂರು ತಿಂಗಳಲ್ಲಿ ಸುಂದರವಾದ ಕಥೆಯನ್ನು ಸಿದ್ಧಪಡಿಸಿಕೊಂಡು ಬಂದರು. ಕಥೆ ಕೇಳಿ ಮೊದಲು ಬೇಡ ಎಂದುಸ ನಂತರ ಒಪ್ಪಿಕೊಂಡೆ. ತರಬೇತಿ ವೇಳೆ ಮೊದಲಿಗೆ ತುಂಬಾನೇ ಕಷ್ಟ ಆಯ್ತು. ಹೆಬ್ಬುಲಿ ಸಿನಿಮಾದಲ್ಲಿ ನಟಿಸಿರುವ ಕಬೀರ್ ಅವರಿಗೂ ಪೈಲ್ವಾನ್‍ದಲ್ಲಿ ಒಂದು ಪ್ರಮುಖ ಪಾತ್ರವನ್ನು ಕೃಷ್ಣ ಹಂಚಿಕೆ ಮಾಡಿದ್ರು.

    ಕಥೆ ಒಪ್ಪಿಕೊಂಡ ಬಳಿಕ ನಾನು ಒಂದೆರೆಡು ತಿಂಗಳು ಜಿಮ್ ಟ್ರೈನಿಂಗ್ ಪಡೆಯದೇ ಓಡಾಡಿಕೊಂಡಿದ್ದೆ. ಒಂದು ದಿನ ಕಬೀರ್ ಸಿನಿಮಾಗಾಗಿ ಬಾಡಿ ಮಾಡಿಕೊಂಡಿರುವ ಫೋಟೋ ವಾಟ್ಸಪ್ ಗೆ ಬಂತು. ಕಬೀರ್ ಫೋಟೋ ನೋಡಿ ನನಗೆ ಸುಸ್ತಾಯ್ತು. ಚಿತ್ರಕ್ಕಾಗಿಯೇ ಕಬೀರ್ ಕ್ರಮಬದ್ಧವಾಗಿ ಜಿಮ್ ಮಾಡಿ ಸಿನಿಮಾಗೆ ಬೇಕಾದಂತೆ ತಮ್ಮ ದೇಹವನ್ನು ಹುರಿ ಮಾಡಿಕೊಂಡಿದ್ದರು.

    ಕಬೀರ್ ಶೂಟಿಂಗ್ ಗೆ ಬಂದಾಗ ನಾನು ಅವರ ಮುಂದೆ ಶರ್ಟ್ ತೆಗೆಯಬೇಕಲ್ವಾ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿತು. ಶೂಟಿಂಗ್ ಸ್ಪಾಟ್ ನಲ್ಲಿ ಕಲಾವಿದರು ಸೇರಿದಂತೆ ತುಂಬಾ ಜನ ಇರ್ತಾರೆ. ಎಲ್ಲರ ಮುಂದೆ ಮಾನ ಮರ್ಯಾದೆ ಹೋಗುತ್ತೆ ಅಂತಾ ತಲೆ ಕೆಟ್ಟು ಹೋಗಿತ್ತು. ಆ ಒಂದು ಚಿಂತೆ ನನ್ನನ್ನ ಬೆಳಗ್ಗೆ 4 ಗಂಟೆಗೆ ಎಬ್ಬಿಸಲು ಆರಂಭಿಸಿತು.

    ಅದಾದ ಬಳಿಕ ನಿರಂತರವಾಗಿ 8 ತಿಂಗಳು ಜಿಮ್‍ಗೆ ಹೋಗುತ್ತಿದೆ. ಆರಂಭದ ಎರಡ್ಮೂರು ತಿಂಗಳು ಉಪ್ಪು, ಹಾಲು, ಸಕ್ಕರೆ ಸಹ ತಿನ್ನಲಿಲ್ಲ. ತರಬೇತಿಗಾಗಿ ಇಷ್ಟವಾದ ಎಲ್ಲ ಆಹಾರವನ್ನು ತ್ಯಜಿಸಿ ಇಂದು ನಾನು ನಾನಾಗಿದ್ದೇನೆ ಎಂಬ ಖುಷಿ ನನಗಿದೆ. ಟ್ರೈನಿಂಗ್ ಆರಂಭದಲ್ಲಿ ತುಂಬಾನೇ ಸಿಟ್ಟು ಬರುತ್ತಿತ್ತು. ನಿರ್ದೇಶಕ ಕೃಷ್ಣ ನನಗೆ ದೊಡ್ಡ ವಿಲನ್ ರೀತಿಯಲ್ಲಿ ಕಾಣಿಸುತ್ತಿದ್ರು. ಇದೀಗ ನನ್ನ ಬಗ್ಗೆ ನನಗೆ ಹೆಮ್ಮೆ ಆಗುತ್ತದೆ ಎಂದಿದ್ದರು.

    ಪೈಲ್ವಾನ್ ಚಿತ್ರದ ಟೀಸರ್, ಟ್ರೈಲರ್, ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ತುಳುನಾಡಿನ ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಹ ಪೈಲ್ವಾನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನನಿಗೆ ಜೊತೆಯಾಗಿ ಮುದ್ದು ಚೆಲುವೆ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಚಿತ್ರದ ಸೆಪ್ಟೆಂಬರ್ 12ರಂದ ತೆರೆಗೆ ಅಪ್ಪಳಿಸಲಿದೆ.

  • ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ – ಸುದೀಪ್

    ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ – ಸುದೀಪ್

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದೀಪ್ ಬಹಳ ಅರ್ಥಗರ್ಭಿತವಾದ ವಾಕ್ಯವನ್ನು ಟ್ವೀಟ್ ಮಾಡಿದ್ದಾರೆ.

    “ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ” ಎಂದು ಬರೆದಿರುವ ಸಾಲನ್ನು ನಾನು ಓದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ತಮ್ಮ ಚಿತ್ರವಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ “ನಾನು ಹೋರಾಟ ಮಾಡಬೇಕು ಎನ್ನುವ ಕಾರಣಕ್ಕೆ ಹೋರಾಟ ಮಾಡುವುದಿಲ್ಲ. ಎದುರಾಳಿಯೊಬ್ಬ ಅರ್ಹನಿದ್ದರೆ ಮಾತ್ರ ಅಖಾಡಕ್ಕೆ ಇಳಿಯುತ್ತೇನೆ” ಎನ್ನುವ ವಾಕ್ಯವಿದೆ. ಇಂದು ಮಧ್ಯಾಹ್ನ 1:48ಕ್ಕೆ ಸುದೀಪ್ ಪೈಲ್ವಾನ್ ಕಿಚ್ಚಾ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಿನ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ನಿಜವಾದ ಗಂಡಸಿಗೆ ಅಲ್ಕೋಹಾಲ್ ಬೇಕಿಲ್ಲ. ಯಾಕೆಂದರೆ ಕಿಚ್ಚನ ಅಭಿಮಾನಿಗಳು ಕಿಚ್ಚನ ವ್ಯಸನಿಗಳಾಗಿದ್ದೇವೆ. ಈಗ ಪೈಲ್ವಾನ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ಬರೆದು ಪ್ರತಿಕ್ರಿಯಿಸಿದ್ದಾರೆ.

    ಪೈಲ್ವಾನ್ ಆಗಸ್ಟ್ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಈ ಹಿಂದೆ `ಪೈಲ್ವಾನ್’ ಸಿನಿಮಾ ಆಗಸ್ಟ್ 8 ಅಂದರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಅದೇ ದಿನ ನಟ ದರ್ಶನ್ ಅಭಿನಯದ `ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದರು. ಹೀಗಾಗಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಸಮಸ್ಯೆಯಾಗುತ್ತದೆ ಎಂದು `ಕುರುಕ್ಷೇತ್ರ’ ಸಿನಿಮಾವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿತ್ತು. ಪೈಲ್ವಾನ್ ಸಿನಿಮಾ ನಟ ಸುದೀಪ್, ಕಬೀರ್ ಸಿಂಗ್ ದುಹಾನ್, ಆಕಾಂಕ್ಷ ಸಿಂಗ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

  • ಪತಿಯ ಕಟ್ಟು ಮಸ್ತಿನ ದೇಹ ನೋಡಿ ಸುದೀಪ್ ಪತ್ನಿ ಹೇಳಿದ್ದು ಹೀಗೆ!

    ಪತಿಯ ಕಟ್ಟು ಮಸ್ತಿನ ದೇಹ ನೋಡಿ ಸುದೀಪ್ ಪತ್ನಿ ಹೇಳಿದ್ದು ಹೀಗೆ!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪೈಲ್ವಾನ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಸುದೀಪ್ ಲುಕ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇತ್ತ ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣ ಅವರು ಕೂಡ ಪತಿಯ ಲುಕ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾ ಅವರು, ಸುದೀಪ್ ಅವರನ್ನು ಈ ಲುಕ್‍ನಲ್ಲಿ ನೋಡುತ್ತೆನೆಂದು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಅವರ ಶ್ರದ್ಧೆ, ಆತ್ಮಸ್ಥೈರ್ಯ, ಅವರಲ್ಲಿರುವ ಶಕ್ತಿ ಇಂದು ಪೈಲ್ವಾನ್‍ನಲ್ಲಿ ನಾವು ಕಾಣುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಪೈಲ್ವಾನ್ ಸಿನಿಮಾ ನಿರ್ಮಾಪಕರಾದ ಕೃಷ್ಣ ಅವರ ಟ್ವೀಟ್‍ನ್ನು ರಿಟ್ವೀಟ್ ಮಾಡಿರುವ ಪ್ರಿಯಾ ಅವರು, ಪತಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದ್ದು, ಜೊತೆಗೆ ಕುತೂಹಲವನ್ನು ಹೆಚ್ಚಿಸಿದೆ.

    ಸುದೀಪ್ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಅಲ್ಲದೇ ಇತ್ತೀಚೆಗೆ ತೆರೆಕಂಡಿದ್ದ ವಿಲನ್ ಲುಕ್‍ನ್ನು ಕೂಡ ಹಲವು ಅಭಿಮಾನಿಗಳು ಫಾಲೋ ಮಾಡಿದ್ದರು. ಇತ್ತ ಪೈಲ್ವಾನ್ ಸಿನಿಮಾ ಹೊಸ ದಾಖಲೆಗಳನ್ನು ಬರೆಯಲು ಮುಂದಾಗಿದ್ದು, ಎಂಟು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಒಟ್ಟು 30 ರಿಂದ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.  ಇದನ್ನು ಓದಿ: ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಧಗ ಧಗಿಸುವ ಪೈಲ್ವಾನನ ಹೊಸ ಲುಕ್ ಔಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ನಟನೆಯ ಪೈಲ್ವಾನ ಚಿತ್ರದ ಹೊಸ ಲುಕ್ ರಿವೀಲ್ ಆಗಿದೆ. ಪೈಲ್ವಾನ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ರನ್ನನ ಹೊಸಫೋಟೋ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಇಂದು ಸುದೀಪ್ ತಮ್ಮ ಟ್ವಟ್ಟರ್ ಖಾತೆಯಲ್ಲಿ ಫೋಟೋ ಹಾಕಿಕೊಂಡಿದ್ದು, ಅಭಿಮಾನಿಗಳು ವಾವ್, ಸೂಪರ್ ಎಂದು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ.

    ಕಟ್ಟುಮಸ್ತಾದ ಕುಸ್ತಪಟುವಿನ ಪಾತ್ರದಲ್ಲಿರುವ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲಿ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರು ಕಿಚ್ಚನ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಮಾಂಸಾಹಾರವನ್ನ ತ್ಯಜಿಸಿ ಮೈಕಟ್ಟನ್ನು ಹುರಿಗೊಳಿಸಿದ್ದಾರೆ. ಮೊದಲ ಬಾರಿಗೆ ಪೈಲ್ವಾನನಾಗಿ ಕಾಣಿಸಿಕೊಳ್ಳುತ್ತಿರುವ ಮಾಣಿಕ್ಯ ಚಿತ್ರದಲ್ಲಿ ಕುಸ್ತಿ ದೃಶ್ಯಗಳು ಇರಲಿವೆ. ಈ ಹಿಂದೆ ಪೈಲ್ವಾನ್ ಸೆಟ್ ಚಿತ್ರದ ಒಂದು ಫೋಟೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆ ಕುತೂಹಲವನ್ನು ಹೆಚ್ಚು ಮಾಡಿತ್ತು. ಈಗ ಕುಸ್ತಿ ಅಖಾಡದ ಫೋಟೋಗಳು ರಿವೀಲ್ ಆಗಿವೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಕುಸ್ತಿ ಅಖಾಡದ ಸೆಟ್ ನಿರ್ಮಾಣ ಮಾಡಿದೆ.

    ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

    ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸುದೀಪ್ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ದಿ ವಿಲನ್’ ಸಿನಿಮಾದಲ್ಲಿ ಭಿನ್ನ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದರು. ದಿ ವಿಲನ್ ಫಸ್ಟ್ ಲುಕ್ ಔಟ್ ಆದಾಗಲೇ ಅಭಿಮಾನಿಗಳು ಕಿಚ್ಚನ ಹೇರ್ ಸ್ಟೈಲ್ ಫಾಲೋ ಮಾಡಲಾರಂಭಿಸಿದ್ದರು. ದಿ ವಿಲನ್ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆದ್ಮೇಲೆಯೂ ಸುದೀಪ್ ಹೇರ್ ಸ್ಟೈಲ್ ಬಹುತೇಕರು ಅನುಸರಿಸುತ್ತಿದ್ದಾರೆ.

    https://www.youtube.com/watch?v=SjnO6D0JtJc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews