Tag: Pailwaan

  • ಪೈಲ್ವಾನ್ ನಟಿಯ ಲಿಪ್‍ಲಾಕ್ ಫೋಟೋ ವೈರಲ್

    ಪೈಲ್ವಾನ್ ನಟಿಯ ಲಿಪ್‍ಲಾಕ್ ಫೋಟೋ ವೈರಲ್

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯ ‘ಪೈಲ್ವಾನ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ಆಕಾಂಕ್ಷ ಸಿಂಗ್ ಅವರ ಲಿಪ್‍ಲಾಕ್ ಫೋಟೋವೊಂದು ವೈರಲ್ ಆಗುತ್ತಿದೆ.

    ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ತಮ್ಮ ಪತಿ ಕುನಾಲ್ ಸೇನ್ ಜೊತೆ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲದೆ ಮಾಲ್ಡೀವ್ಸ್‌ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

     

    View this post on Instagram

     

    You are my favourite place to go when my mind searches for peace ???? #kunalsain

    A post shared by Aakanksha Singh (@aakankshasingh30) on

    ಇತ್ತೀಚೆಗೆ ಆಕಾಂಕ್ಷ ಬೀಚ್ ಬಳಿ ಕುಳಿತಿರುವ ಹಾಟ್ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಆಕಾಂಕ್ಷ ಸೈಕಲ್ ಮೇಲೆ ಕುಳಿತುಕೊಂಡು ಪತಿಯನ್ನು ಹಿಡಿದುಕೊಂಡು ಚುಂಬಿಸುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

    ಈ ಫೋಟೋ ಪೋಸ್ಟ್ ಮಾಡಿ ಅದಕ್ಕೆ, “ನನ್ನ ಮನಸ್ಸು ನೆಮ್ಮದಿಗಾಗಿ ಹುಡುಕುವಾಗ ನಾನು ಹೋಗಲು ಇಷ್ಟಪಡುವ ಸ್ಥಳ ಎಂದರೆ ಅದು ನೀನು” ಎಂದು ಬರೆದುಕೊಂಡಿದ್ದಾರೆ. ಆಕಾಂಕ್ಷ ಈ ಫೋಟೋ ಜೊತೆಗೆ ಹಲವು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    Food is as much about the moment, the Occasion, the location and the company as it is about the taste????& breakfast is my favourite meal of the day , having my first #floatingbreakfast with my favourite person in the world ♥️ #kunalsain Our first #floatingbreakfast with some #vitamind & #vitaminsea #overlooking the beautiful #maldivian ocean .. ???? ???? #kandimamaldives #kandima_maldives #luxurytravel #mykindofplace #maldives #beach #sunandsand #waterbaby #ocean #beauty #heaven #travelgram #instatravel #travelblogger #influencer #travelmaldives #blogging #beachbody #explorer #instagramblogger #travellover @kandima_maldives you beauty ???? #visitmaldives #floatingbreakfast #firstexperience

    A post shared by Aakanksha Singh (@aakankshasingh30) on

    ಕಿಚ್ಚ ಸುದೀಪ್ ಅಭಿನಯದ `ಪೈಲ್ವಾನ್’ ಸಿನಿಮಾ ಪೈರಸಿ ನಡುವೆಯೂ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸದ್ಯ ಸಿನಿಮಾ ಯಶಸ್ವಿ ಆಗಿರುವ ಖುಷಿಯಲ್ಲಿರುವ ಆಕಾಂಕ್ಷ ಅವರು ತಮ್ಮ ಪತಿ ಕುನಾಲ್ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  • ಪೈರಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ನಾನು ಸುಮ್ಮನಿರಲ್ಲ: ಸುದೀಪ್

    ಪೈರಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ನಾನು ಸುಮ್ಮನಿರಲ್ಲ: ಸುದೀಪ್

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ‘ಪೈರಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ನಾನು ಸುಮ್ಮನಿರಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

    ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪೈರಸಿ ಹಾಗೂ ಬಂಧನದ ಬಗ್ಗೆ ಮಾಹಿತಿ ಕೇಳುತ್ತಿದ್ದವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಅಥವಾ ನಮ್ಮ ಬೆಂಬಲದಲ್ಲಿ ಎಂಎಲ್‍ಸಿಯಿಂದ ಕರೆ ಅನಿವಾರ್ಯವೇ? ನನಗೆ ಇದರ ಅವಶ್ಯಕತೆ ಇಲ್ಲ ಎಂದು ನನಗೆ ಎನಿಸುತ್ತೆ. ಏಕೆಂದರೆ ನನ್ನ ಜೊತೆ ನನ್ನ ಸ್ನೇಹಿತರು ಇದ್ದಾರೆ. ನಾನು ಸುಮ್ಮನಿರಲ್ಲ. ಮತ್ತೆ ಧ್ವನಿ ಎತ್ತುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ವಾರ ಪೈಲ್ವಾನ್ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು ಬರೆದುಕೊಂಡಿದ್ದರು.

    ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಎಲ್ಲಿ ಹೋದ್ರೂ ಜನ ಪ್ರೀತಿಸ್ತಾರೆ, ನನಗಷ್ಟೇ ಸಾಕು- ಸ್ಟಾರ್‌ಡಮ್ ಬಗ್ಗೆ ಕಿಚ್ಚನ ಮಾತು

    ಎಲ್ಲಿ ಹೋದ್ರೂ ಜನ ಪ್ರೀತಿಸ್ತಾರೆ, ನನಗಷ್ಟೇ ಸಾಕು- ಸ್ಟಾರ್‌ಡಮ್ ಬಗ್ಗೆ ಕಿಚ್ಚನ ಮಾತು

    – ನನ್ನ ಕೆಲಸವನ್ನು ಇಷ್ಟಪಡುತ್ತೇನೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಎಲ್ಲಿ ಹೋದರೂ ಜನ ನನ್ನನ್ನು ಪ್ರೀತಿಸುತ್ತಾರೆ. ನನಗೆ ಅಷ್ಟೇ ಸಾಕು ಎಂದು ಹೇಳುವ ಮೂಲಕ ಸ್ಟಾರ್‌ಡಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರೀತಿಗೂ ಸ್ಟಾರ್‌ಡಮ್ ಗೂ ಬಹಳ ವ್ಯತ್ಯಾಸ ಇದೆ. ನಾನು ಎಲ್ಲಿಯೇ ಹೋದರು ಜನರು ಪ್ರೀತಿಯಿಂದ ನನ್ನನ್ನು ನೋಡುತ್ತಾರೆ. ನನಗೆ ಅಷ್ಟೇ ಸಾಕು. ನನಗೆ ಸ್ಟಾರ್‌ಡಮ್ ಮೇಲೆ ನಂಬಿಕೆ ಇಲ್ಲ. ನಾವೆಲ್ಲರೂ ಫ್ಲಾಪ್ ಸಿನಿಮಾ ಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ಲಾಸ್ ಆಗಿದೆ. ಹೀಗಿರುವಾಗ ಸ್ಟಾರ್‌ಡಮ್ ಹೇಗೆ ಆಗುತ್ತದೆ ಎಂದಿದ್ದಾರೆ.  ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಅಲ್ಲದೆ ನಮ್ಮ ಸಿನಿಮಾ ಕೈ ಹಿಡಿದಿದೆ, ಅದನ್ನು ಅನುಭವಿಸೋಣ. ಎಷ್ಟೋ ಜನ ಒಂದು ಚಿತ್ರದಲ್ಲಿ ಕಲಾವಿದ ಆಗೋಣ ಎಂದು ಪರದಾಡುತ್ತಿರುವಾಗ ಇಷ್ಟು ವರ್ಷ ನಮಗೆ ಚಿತ್ರರಂಗ ಕರೆದುಕೊಂಡು ಬಂದಿದೆ ಅಂದರೆ ಅದನ್ನು ನಾವು ಅನುಭವಿಸಬೇಕು. ಅದನ್ನು ಬಿಟ್ಟು ಸ್ಟಾರ್‌ಡಮ್ ಇಟ್ಟುಕೊಂಡು ಏನೂ ಮಾಡೋಣ. ಇಡೀ ದೇಶಕ್ಕೆ ನಮ್ಮ ಗುರುತು ಸಿಕ್ಕಿದೆ ಅಂದರೆ ಅದು ನಮ್ಮ ಅದೃಷ್ಟ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಬೇರೆ ಭಾಷೆಯಲ್ಲಿ ಪೋಷಕ ನಟನಾಗಿ ಜನರ ಮುಂದೆ ಹೋಗಿದ್ದೇನೆ. ‘ಈಗ’ ಸಿನಿಮಾದಲ್ಲಿ ಖಳನಾಯಕನಾಗಿ, ‘ಸೈರಾ’ ಸಿನಿಮಾದಲ್ಲಿ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ಒಳ್ಳೆಯ ಪಾತ್ರ ಅಥವಾ ಒಳ್ಳೆಯ ವ್ಯಕ್ತಿ ಜೊತೆ ನಟಿಸಲು ಅವಕಾಶ ಸಿಕ್ಕರೆ ನಾನು ಮಾಡುತ್ತೇನೆ. ನಾನು ನನ್ನ ಕೆಲಸವನ್ನು ಇಷ್ಟಪಡುತ್ತೇನೆ. ನಾನು ಸುದೀಪ್, ನಾನು ಈ ಪಾತ್ರ ಮಾಡಲ್ಲ ಎಂದರೆ ಆಗ ತೊಂದರೆ ಆಗುತ್ತದೆ. ಈಗ ‘ದಬಾಂಗ್’ ಚಿತ್ರದಲ್ಲಿ ಫೈಟ್ ಸೀನಿನಲ್ಲಿ ಅವರು ಹೊಡೆಯುತ್ತಾರೆ, ನಾನು ಹೊಡೆಸಿಕೊಳ್ಳುತ್ತೇನೆ. ಇಲ್ಲಿ ನಾವು ಎರಡೇಟು ಹೆಚ್ಚು ಹೊಡೆಯುತ್ತೇವೆ ಎಂದರು. ಇದನ್ನೂ ಓದಿ: ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಹಿಂದಿಯಲ್ಲಿ ಜೀವನಚರಿತ್ರೆಯಲ್ಲಿ ನಟಿಸಲು ಅವಕಾಶ ಬರುತ್ತಿದೆ. ಸದ್ಯ ಈ ಬಗ್ಗೆ ಈಗ ಮಾತುಕತೆ ನಡೆಯುತ್ತಿದೆ. ಹಲವು ಸಿನಿಮಾಗಳ ಅವಕಾಶಗಳು ಬರುತ್ತಿದೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಒಂದು ಸಿನಿಮಾ ಮುಗಿದ ಮೇಲೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

  • ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಬೆಂಗಳೂರು: ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾ ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಿಚ್ಚ, ಎಲ್ಲದಕ್ಕೂ ಒಂದು ನ್ಯಾಯ ಇದೆ. ನ್ಯಾಯ ಆಗಬೇಕು, ಆದರೆ ಅನ್ಯಾಯ ಆಗಬಾರದು. ಅನ್ಯಾಯವಾಗಿ ಯಾರು ಸಿಕ್ಕಿಹಾಕಿಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರು ತಪ್ಪಿಸಿಕೊಳ್ಳಬಾರದು. ಅಡುಗೆ ಮಾಡಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಕಾಲು ಎಡವಿ ಅನ್ನ ಚೆಲ್ಲಿದ್ದರೆ, ಬಡಿಸುವುದಕ್ಕೆ ಆಗಿಲ್ಲ ಎನ್ನುವ ನೋವು ಇರುತ್ತದೆ. ಹಾಗಂತ ಇನ್ನೊಬ್ಬರು ಮಾಡಿದ ಅಡುಗೆ ಹಾಳಾಗಬಾರದು ಎಂದರು.  ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಕನ್ನಡ ಚಿತ್ರರಂಗದಲ್ಲಿ ಈಗ ಕೆಲವರು ದೊಡ್ಡ ಸಿನಿಮಾ ಎಂದು ಮಾಡಿದಾಗ ಕೆಲವೊಂದು ವಿಷಯಗಳನ್ನು ತಡೆದುಕೊಳ್ಳಬಹುದು. ಆದರೆ ಕಳ್ಳತನ ಎಂಬುದು ಅಭ್ಯಾಸವಾದರೆ ಅದಕ್ಕೆ ಈಗಾಗಲೇ ಒಂದು ದಾರಿ ಇರುತ್ತದೆ. ಈ ದಾರಿಯಲ್ಲೂ ಮಾಡಬಹುದು ಎಂದು ನಮ್ಮವರೇ ಹೇಳಿಕೊಟ್ಟರೆ, ನಾಳೆ ಚಿಕ್ಕಪುಟ್ಟ ನಿರ್ಮಾಪಕರು ತುಂಬಾ ಕಷ್ಟದಿಂದ ಸಿನಿಮಾ ಮಾಡಿರುತ್ತಾರೆ. ಮೊದಲ ದಿನವೇ ಸಿನಿಮಾ ಪೈರಸಿಯಾದರೆ ಅವರ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಇದು ನನ್ನ ಹೋರಾಟ ಅಲ್ಲ. ಬೇರೆಯವರಿಗೆ ಈ ರೀತಿ ಆಗಬಾರದು. ಇದರಲ್ಲಿ ಜಿದ್ದುಗಿದ್ದು ಬರುವುದಿಲ್ಲ. ತಪ್ಪು ಮಾಡದೇ ಇರುವವರು ಹೆದರುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಬಿಡುಗಡೆ ಆಗಬೇಕಿದೆ. ಜೊತೆಯಲ್ಲಿ ಮನೆ ಅಡಯಿಟ್ಟು ಮಾಡಿದ ಸಿನಿಮಾಗಳು ಕೂಡ ಬಿಡುಗಡೆಗೆ ತಯಾರಿದೆ. ಈ ರೀತಿ ಯಾರಿಗೂ ಆಗುವುದು ಬೇಡ. ಆದರೆ ಈ ಉದ್ದೇಶ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

    ಅಭಿಮಾನಿಗಳಿಗೆ ಏನೂ ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಯಾರಿಗೂ ಏನೂ ಹೇಳುವುದಿಲ್ಲ. ತಪ್ಪು ಮಾಡಬೇಡಿ. ಇನ್ನೊಬ್ಬರ ಹೊಟ್ಟೆಗೆ ಹೊಡೆಯಬೇಡಿ. ನಿಮ್ಮಿಂದ ಒಳ್ಳೆಯದು ಮಾಡಲು ಆಗಲ್ಲ ಎಂದರೆ ತಪ್ಪು ಮಾಡಬೇಡಿ. ಏನಾದರೂ ಹೆಚ್ಚುಕಮ್ಮಿ ಆಗಿ ಅವರು ಹಣ ಕಳೆದುಕೊಂಡರೆ ಅವರ ಪಾಲಿಗೆ ಯಾರು ಬರುತ್ತಾರೆ. ಅವರಿಗೆ ಸಹಾಯ ಮಾಡೋಣ ಎಂದರೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ನನಗೆ ಒಂದು ವರ್ಷ ಬೇಕು. ನಮಗೆ ಮಗು ಬೇರೆ ಅಲ್ಲ, ಸಿನಿಮಾ ಬೇರೆ ಅಲ್ಲ. ಎರಡು ಒದ್ದಾಡುತ್ತಿದೆ. ನೋಡಿಕೊಂಡು ಯಾರು ಸುಮ್ಮನೆ ಇರಬಾರದು. ಯಾಕೆ ಎಲ್ಲವನ್ನು ಸುಮ್ಮನೆ ಅನುಭವಿಸಿಕೊಂಡು ಇರಬೇಕು ಎಂದು ಸುದೀಪ್ ಉತ್ತರಿಸಿದ್ದಾರೆ.

  • ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    – ಯಾವುದೇ ವ್ಯಕ್ತಿ ಜೊತೆ ನನ್ನ ಹೋರಾಟ ಅಲ್ಲ
    – ತಪ್ಪು ಮಾಡಿದ್ರೆ ಅನುಭವಿಸಿಯೇ ಹೋಗೋದು

    ಬೆಂಗಳೂರು: ಪೈರಸಿ ಮಾಡುವುದಕ್ಕೆ ಜನರು ತುಂಬಾ ಶ್ರಮಪಟ್ಟಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. ಆದರೆ ಎಲ್ಲದಕ್ಕೂ ಒಂದು ಅಂತ್ಯ ಇದೆ. ಕಾಲವೇ ಅವರಿಗೆ ಉತ್ತರ ಕೊಡುತ್ತದೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಪೈರಸಿ ವಿರುದ್ಧ ಹೋರಾಟ ಮಾಡಬಹುದು. ಆದರೆ ಕೆಟ್ಟ ಉದ್ದೇಶದ ಬಗ್ಗೆ ಹೇಗೆ ಹೋರಾಟ ಮಾಡುತ್ತೀರಾ ಎಂದು ಪ್ರಶ್ನಿಸಿದ ಕಿಚ್ಚ, ನನ್ನ ಹೋರಾಟ ಯಾವುದೇ ವ್ಯಕ್ತಿ ಜೊತೆ ಅಲ್ಲ. ಬದಲಿಗೆ ಕೆಟ್ಟ ಉದ್ದೇಶದ ಬಗ್ಗೆ ನಾನು ಹೋರಾಟ ಮಾಡುತ್ತಿದ್ದೇನೆ. ಸಿನಿಮಾ ಹಾಳು ಮಾಡಬೇಕು ಎಂಬ ವಿಷಯ ಅವರಿಗೆ ಬಿಟ್ಟಿದ್ದು, ಪೈರಸಿ ಇಂದಿನಿಂದ ಇಲ್ಲ, ತುಂಬಾ ದಿನದಿಂದ ಇದೆ. ಆದರೆ ಈ ಬಾರಿ ಪೈರಸಿ ಜಾಸ್ತಿಯಾಗಿದೆ. ಪೈರಸಿ ಮಾಡುವುದಕ್ಕೆ ಜನರು ತುಂಬಾ ಶ್ರಮಪಟ್ಟಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. ಆದರೆ ಎಲ್ಲದಕ್ಕೂ ಒಂದು ಅಂತ್ಯ ಇದೆ. ಕಾಲ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಅವರು ಪೂಜಿಸೋ ದೇವರನ್ನೇ ನಾವು ಪೂಜಿಸುತ್ತಿರುವುದು. ಅವರಿಗೆ ಇರುವ ನ್ಯಾಯವೇ ನಮಗೆ ಇರುವುದು. ಯಾವ ದೇವರು ಹೇಗೆ ಆಟ ಆಡುತ್ತಿದ್ದಾರೆ. ಯಾರಿಗೆ ಕೊನೆಯದಾಗಿ ಏನು ಸಿಗುತ್ತದೆ ಎಂದು ನೋಡಬೇಕಿದೆ. ಈ ನಡುವೆ ನಾನು ಆ ಜನರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಫೋನಿನಲ್ಲಿ ನೋಡಿದೆ ಹಾಗೂ ಥಿಯೇಟರ್ ನಲ್ಲಿ ನೋಡಿದೆ ಎಂದು ಹೇಳುತ್ತಾರೋ ಅದು ಅವರ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. ಆ ರೀತಿಯ ಜನರನ್ನು ಕೂಡ ನಾನು ಸಂಪಾದಿಸಿದ್ದೇನೆ ಎಂದು ನನಗೆ ಖುಷಿ ಆಗುತ್ತಿದೆ. ನಿಮ್ಮ ಒಳ್ಳೆತನನೇ ನಿಮ್ಮನ್ನು ಕಾಪಾಡಬೇಕು. ನೀವು ಏನು ತಪ್ಪು ಮಾಡಿದ್ದೀರೋ ಅದು ನೀವು ಅನುಭವಿಸಿಯೇ ಇಲ್ಲಿಂದ ಹೋಗುವುದು. ನಾವೆಲ್ಲಾ ಇಲ್ಲಿ ವೀಕ್ಷಕರು. ನನ್ನಿಂದ ತಪ್ಪು ಆದರೆ ನಾನು ಕೂಡ ಅನುಭವಿಸುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ.

    ಇದೇ ವೇಳೆ ಪೈಲ್ವಾನ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ನನಗೆ ತುಂಬಾ ಖುಷಿ ಇದೆ. ಏಕೆಂದರೆ ಸಿನಿಮಾ ನೋಡಿದವರು ಉಪಯೋಗಿಸುತ್ತಿರುವ ಪದಗಳು, ಅಕ್ಷರಗಳು ಹೊಗಳಿಕೆಯಾಗಿ ಬರುತ್ತಿರುವುದನ್ನು ಕೇಳುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಶ್ರಮ ತುಂಬಾ ಇದೆ. ಎಲ್ಲರದರ ನಡುವೆ ಜನರು ಚಿತ್ರಮಂದಿರ ಮುಂದೆ ಹೋಗಿ ಸೆಲೆಬ್ರೇಶನ್ ಮಾಡಿದಾಗ ಅದನ್ನು ನೋಡುವುದಕ್ಕೆ ನನಗೆ ಖುಷಿ ಹಾಗೂ ಹೆಮ್ಮೆ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಚೆನ್ನಾಗಿದೆ. ಆದರೆ ಇನ್ನೂ ಚೆನ್ನಾಗಿ ಆಗಬೇಕಿತ್ತು. ಕೆಲವು ಅಡಚಣೆಗಳು ಆಗುತ್ತಿರುತ್ತಿವೆ. ಈಗ ಮನೆಯಲ್ಲಿಯೇ ಕುಳಿತುಕೊಂಡು ಸಿನಿಮಾ ನೋಡುವಂತೆ ಆಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿರುವ ಜನರ ಬಗ್ಗೆ ನನಗೆ ಖುಷಿಯಾಗುತ್ತದೆ. ಬ್ಯುಸಿನೆಸ್ ಪ್ರಕಾರ ಸಿನಿಮಾ ಇನ್ನೂ ಚೆನ್ನಾಗಿ ಆಗಬೇಕಿತ್ತು. ಈಗ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ ಎಂದರು.

  • ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪೈಲ್ವಾನ್

    ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪೈಲ್ವಾನ್

    ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ ಸುದೀಪ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು ಬರೆದುಕೊಂಡಿದ್ದರು.

    ಪೈಲ್ವಾನ್ ಸಿನಿಮಾದ ಲಿಂಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ದಾಬಸ್‍ಪೇಟೆಯ ರಾಕೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯಲ್ಲಿ ತಾನೋರ್ವ ದರ್ಶನ್ ಅಭಿಮಾನಿ. ನೆಚ್ಚಿನ ನಟನ ಮೇಲಿನ ಅಭಿಮಾನದಿಂದಾಗಿ ಸಿನಿಮಾ ಲಿಂಕ್ ಶೇರ್ ಮಾಡಿದ್ದೇನೆ ಹೊರತು ಹಣಕ್ಕಾಗಿ ಅಲ್ಲ ಎಂದು ತಪ್ಪೊಪ್ಪಿಕೊಂಡಿದ್ದನು. ರಾಕೇಶ್ ಗೆ ಸಿನಿಮಾದ ಲಿಂಕ್ ಹೇಗೆ ಸಿಕ್ಕಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

  • ಪೈಲ್ವಾನ್ ಅಸಲಿ ಆಟ ಶುರು- ಪೈರಸಿ ಬಗ್ಗೆ ಸುದೀಪ್ ಖಡಕ್ ಮಾತು

    ಪೈಲ್ವಾನ್ ಅಸಲಿ ಆಟ ಶುರು- ಪೈರಸಿ ಬಗ್ಗೆ ಸುದೀಪ್ ಖಡಕ್ ಮಾತು

    ಬೆಂಗಳೂರು: ತಮ್ಮ ಅಭಿಯನದ ‘ಪೈಲ್ವಾನ್’ ಸಿನಿಮಾ ಪೈರಸಿ ಬಗ್ಗೆ ನಟ ಕಿಚ್ಚಾ ಸುದೀಪ್ ಖಡಕ್ ಸಂದೇಶ ರವಾನಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಪೈರಸಿ ಮೂಲವನ್ನು ತಿಳಿಯುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ನಮ್ಮ ಕಠಿಣ ಶ್ರಮವನ್ನ ಹಾಳು ಮಾಡಲು ನಾನು ಬಿಡುವುದಿಲ್ಲ. ಪೈರಸಿ ಮಾಡಿದವರಿಗಿಂತ ಪೈರಸಿ ಬಗ್ಗೆ ನಾನು ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು  ಬರೆದುಕೊಂಡಿದ್ದಾರೆ.

    ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ.

    ವಿಚಾರಣೆ ವೇಳೆ ರಾಕೇಶ್, ನಾನು ದರ್ಶನ್ ಅಭಿಮಾನಿ. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ಲೀಕ್ ಮಾಡಿದೆ. ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟ್. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದು ಹೇಳಿದ್ದರು.

    ಇದಕ್ಕೂ ಮುನ್ನ ನಟ ಸುದೀಪ್ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿದ್ದರು. ಕಿಚ್ಚನ ಮನೆಗೆ ಭಾಸ್ಕರ್ ರಾವ್ ದಿಢೀರ್ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಭಾಸ್ಕರ್ ರಾವ್, ಸುದೀಪ್ ಮತ್ತು ಕುಟುಂಬದ ಜೊತೆ ಕೆಲವು ಸಮಯ ಕುಳಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಹಾಗೂ ಅವರ ತಂದೆ ಜೊತೆಗೆ ಫೋಟೋ ಕ್ಲಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?:
    ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

    ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ: ಆರೋಪಿ ರಾಕೇಶ್

    ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ: ಆರೋಪಿ ರಾಕೇಶ್

    ಬೆಂಗಳೂರು: ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ ಎಂದು ಆರೋಪಿ ರಾಕೇಶ್ ಪೈಲ್ವಾನ್ ಸಿನಿಮಾ ಪೈರಸಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ. ಇದನ್ನೂ ಓದಿ: ಪೈಲ್ವಾನ್ ಪೈರಸಿ ಮಾಡಿದ ಆರೋಪಿ ಬಂಧನ

    ವಿಚಾರಣೆ ವೇಳೆ ರಾಕೇಶ್, ನಾನು ದರ್ಶನ್ ಅಭಿಮಾನಿ. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ಲೀಕ್ ಮಾಡಿದೆ. ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟು. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

    ಸೋಮವಾರ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

    ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಪೈಲ್ವಾನ್ ಪೈರಸಿ ಮಾಡಿದ ಆರೋಪಿ ಬಂಧನ

    ಪೈಲ್ವಾನ್ ಪೈರಸಿ ಮಾಡಿದ ಆರೋಪಿ ಬಂಧನ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಪೈಲ್ವಾನ್’ ಚಿತ್ರವನ್ನು ಪೈರಸಿ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರಾಕೇಶ್ ಅಲಿಯಾಸ್ ವಿರಾಟ್ ಬಂಧಿತ ಆರೋಪಿ. ರಾಕೇಶ್ ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದನು. ಹೀಗಾಗಿ ಸಿಸಿಬಿ ಪೊಲೀಸರು ನೆಲಮಂಗಲದ ಹಿಮಚೇನಹಳ್ಳಿಯಲ್ಲಿ ಆರೋಪಿ ರಾಕೇಶ್‍ನನ್ನು ಬಂಧಿಸಿದ್ದಾರೆ.

    ಸೋಮವಾರ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

    ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ದೇಸಿ ಕಥೆಯೊಂದಿಗೆ ಅಖಾಡಕ್ಕಿಳಿದ ಜಬರ್ಧಸ್ತ್ ಪೈಲ್ವಾನ್!

    ದೇಸಿ ಕಥೆಯೊಂದಿಗೆ ಅಖಾಡಕ್ಕಿಳಿದ ಜಬರ್ಧಸ್ತ್ ಪೈಲ್ವಾನ್!

    ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಸಾದ್ಯಂತ ಅಗಾಧ ಕಾತರಕ್ಕೆ ಕಾರಣವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ತೆರೆ ಕಂಡಿದೆ. ಈ ಬಾರಿ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಜೋಡಿ ಬೆರಗಾಗಿಸುವಂಥಾ ಕಮಾಲ್ ಸೃಷ್ಟಿಸುತ್ತಾರೆಂಬ ಭರವಸೆಯೂ ಎಲ್ಲಡೆ ಮೂಡಿಕೊಂಡಿತ್ತು. ಅದಕ್ಕೆ ಎಲ್ಲ ದಿಕ್ಕಿನಲ್ಲಿಯೂ ಪೂರಕವಾಗಿರುವಂತೆಯೇ ಪೈಲ್ವಾನ್ ಪ್ರೇಕ್ಷಕರ ಮುಂದೆ ಬಂದಿದ್ದಾನೆ. ಎಲ್ಲಿಯೂ ಬಿಗುವು ಕಳೆದುಕೊಳ್ಳದ ಕಥೆ, ಪ್ರತೀ ಫ್ರೇಮಿನಲ್ಲಿಯೂ ಕಣ್ಣಿಗೆ ಹಬ್ಬ ಅನ್ನಿಸೋ ದೃಷ್ಯ ವೈಭವ, ಮೈ ನವಿರೇಳಿಸೋ ಸಾಹಸ ಸನ್ನಿವೇಶ ಮತ್ತು ಆಹ್ಲಾದಕರ ಪ್ರೇಮ… ಇವಿಷ್ಟು ಅಂಶಗಳೊಂದಿಗೆ ನಿರ್ದೇಶಕ ಕೃಷ್ಣ ಪೈಲ್ವಾನನನ್ನು ಪೊಗದಸ್ತಾಗಿಯೇ ಅಖಾಡಕ್ಕಿಳಿದಿದ್ದಾರೆ.

    ನಿರ್ದೇಶಕ ಕೃಷ್ಣ ಹಲವಾರು ಕೊಂಬೆ ಕೋವೆಗಳ ಸಂಕೀರ್ಣ ಕಥೆಯನ್ನು ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ, ಕ್ಷಣ ಕ್ಷಣವೂ ಕುತೂಹಲ ಕೊತಗುಡುವಂತೆ ಕಟ್ಟಿಕೊಟ್ಟಿದ್ದಾರೆ. ಕಿಚ್ಚಾ ಸುದೀಪ್ ಅನಾಥ ಹುಡುಗನಾಗಿ, ಅಖಾಡಕ್ಕಿಳಿಯೋ ಜಟ್ಟಿಯಾಗಿ, ಅಪ್ರತಿಮ ಪ್ರೇಮಿಯಾಗಿಯೂ ಕೃಷ್ಣನ ಪಾತ್ರದಲ್ಲಿ ಮುದ ನೀಡಿದ್ದಾರೆ. ಈ ಕಥೆ ತೆರೆದುಕೊಳ್ಳೋದೇ ಓರ್ವ ಅನಾಥ ಹುಡುಗನಿಂದ. ಚಿಕ್ಕಂದಿನಲ್ಲಿಯೇ ಎಲ್ಲ ಬಂಧಗಳನ್ನೂ ಕಳೆದುಕೊಂಡು ತಬ್ಬಲಿಯಾಗಿದ್ದ ಹುಡುಗ ಕೃಷ್ಣನಿಗೆ ಆಶ್ರಯ ನೀಡುವಾತ ಸರ್ಕಾರ್. ಈ ಸರ್ಕಾರ್‍ನದ್ದು ಪೈಲ್ವಾನರ ಮನೆತನ. ಕಟ್ಟುಮಸ್ತಾದ ಕೃಷ್ಣನನ್ನು ಮಗನಂತೆಯೇ ಪೊರೆಯೋ ಸರ್ಕಾರ್ ಪಾಲಿಗೆ ಆತನನ್ನು ಪೈಲ್ವಾನನಾಗಿ ರೂಪಿಸೋದೊಂದೇ ಗುರಿಯಾಗುತ್ತದೆ.

    ತನ್ನ ತಂದೆಯಂಥಾ ಸರ್ಕಾರ್ ಮತ್ತು ಪೈಲ್ವಾನನಾಗೋ ಕನಸುಗಳೇ ಕೃಷ್ಣನ ಜಗತ್ತಾಗಿ ಬಿಡುತ್ತದೆ. ಈ ಸರ್ಕಾರ್ ಮತ್ತು ಕೃಷ್ಣ ಇಬ್ಬರೂ ಸೇರಿ ಒಂದೇ ಕನಸು ಕಂಡು ಮುಂದುವರೆಯುವಾಗಲೇ ಕಿಚ್ಚನ ಬಾಳಲ್ಲಿ ಪ್ರೀತಿಯ ಬೆಳಕು ಮೂಡಿಕೊಳ್ಳುತ್ತೆ. ರುಕ್ಮಿಣಿ ಎಂಬ ಬ್ಯಸಿನೆಸ್‍ಮನ್ ಮಗಳ ಮೋಹಕ್ಕೆ ಬೀಳೋ ಕಿಚ್ಚನ ಗಮನ ಕುಸ್ತಿಯಿಂದ ಬೇರೆಡೆಗೆ ಹೊರಳಿಕೊಂಡಿದ್ದ ಸರ್ಕಾರ್ ಮನಸು ಕೆಡಿಸುತ್ತೆ. ಇದುವೇ ಜಗತ್ತೇ ಆಗಿದ್ದ ಸಾಕುತಂದೆಯಿಂದಲೂ ಕಿಚ್ಚನನ್ನು ದೂರಾಗಿಸುತ್ತೆ. ಆ ನಂತರದಲ್ಲಿ ಏನಾಗುತ್ತದೆ ಅನ್ನೋದನ್ನು ಥೇಟರಿನಲ್ಲಿಯೇ ನೋಡಿದರೆ ಚೆನ್ನ.

    ಇಡೀ ಸಿನಿಮಾ ಒಂದೇ ವೇಗದಲ್ಲಿ ಚಲಿಸುತ್ತದೆ ಅನ್ನೋದು ನಿಜವಾದ ಪ್ಲಸ್ ಪಾಯಿಂಟ್. ಕಿಚ್ಚ ಸುದೀಪ್ ಈ ಸಿನಿಮಾಗಾಗಿ ಅದೆಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದು ಕುಸ್ತಿ ಅಖಾಡದಲ್ಲಿ, ಬಾಕ್ಸಿಂಗ್ ರಿಂಗ್‍ನೊಳಗೆ ಸ್ಪಷ್ಟವಾಗಿಯೇ ಗೊತ್ತಾಗುವಂತಿದೆ. ಸಾಮಾನ್ಯವಾಗಿ ಪರಭಾಷಾ ನಾಯಕಿಯರು ಗ್ಲಾಮರ್‍ಗಷ್ಟೇ ಸೀಮಿತವಾಗುತ್ತಾರೆ. ಆದರೆ ನಾಯಕಿ ಆಕಾಂಕ್ಷಾ ಸಿಂಗ್ ಗಟ್ಟಿತನ ಹೊಂದಿರೋ ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಸುನೀ ಶೆಟ್ಟಿ ತಮ್ಮ ಪಾತ್ರಕ್ಕೆ ಪೈಲ್ವಾನ್ ಮನೆತನದ ಗತ್ತು ಗೈರತ್ತುಗಳನ್ನು ಆವಾಹಿಸಿಕೊಂಡಂತೆ ಜೀವ ತುಂಬಿದ್ದಾರೆ. ಎಲ್ಲ ಪಾತ್ರಗಳೂ ಕೂಡಾ ಇಂಥಾದ್ದೇ ಅಮೋಘ ನಟನೆಯಿಂದ ಕಥೆಗೆ ಜೊತೆಯಾಗಿ ಸಾಗಿವೆ.

    ಪೈಲ್ವಾನ್ ಕೃಷ್ಣ ಪೈಲ್ವಾನನನ್ನು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಕಾಲೂರಿ ಕಾದಾಡುವಷ್ಟು ಶಶಕ್ತವಾಗಿ ಕಟ್ಟಿ ಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳನ್ನೇ ಮೀರಿಸುವ ದೃಷ್ಯ ವೈಭವ, ನಿರೂಪಣೆಯಲ್ಲಿನ ಕಲಾತ್ಮಕತೆ ಮತ್ತು ಸುದೀಪ್ ಅವರ ನಟನೆಯ ಖದರ್‍ನಿಂದ ಪೈಲ್ವಾನ್ ಕಳೆಗಟ್ಟಿಕೊಂಡಿದೆ. ಅವರು ಜಟ್ಟಿಯಾಗಿ ಕಣಕ್ಕಿಳಿದು ಮೈನವಿರೇಳಿಸುತ್ತಾರೆ, ಭಾವನಾತ್ಮಕ ದೃಷ್ಯಗಳಲ್ಲಿ ಮನಸು ತೊಯ್ದಾಡುವಂತೆ ಮಾಡುತ್ತಾರೆ. ಒಟ್ಟಾರೆಯಾಗಿ ಎಲ್ಲ ಶೇಡುಗಳಲ್ಲಿಯೂ ಸುದೀಪ್ ಅದ್ಭುತವೆಂಬಂಥಾ ನಟನೆಯನ್ನೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಪೈಲ್ವಾನ್ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಚಿತ್ರ.

    ರೇಟಿಂಗ್: 4/5