Tag: Pahalgam Terrorist Attack

  • ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    – 3 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಉದ್ಯಮಿ

    ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾನ್ಪುರ (Kanpur) ಜಿಲ್ಲೆಯ ಉದ್ಯಮಿ (Businessman)  ಉಗ್ರರ ಗುಂಡಿಗೆ ಬಲಿಯಾಯಾಗಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದವ (Marriage) ಉದ್ಯಮಿ ಶಂಭು ದ್ವಿವೇದಿ (31) ಪತ್ನಿಯೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇಂದು (ಬುಧವಾರ) ಕಾನ್ಪುರದಲ್ಲಿರುವ ತಮ್ಮ ಮನೆಗೆ ಹಿಂದಿರುಗಬೇಕಿತ್ತು. ದುರದೃಷ್ಟವಶಾತ್‌ ಉಗ್ರರ ಗುಂಡಿಗೆ ಬಲಿಯಾಗಿ ಶಂಭು ದ್ವಿವೇದಿ ಅವರ ಶವ ಮನೆಗೆ ಹಿಂದಿರುಗುತ್ತಿದೆ. ಹೀಗಾಗಿ ಕಾನ್ಪುರ ಜಿಲ್ಲೆಯ ಮಹಾರಾಜಪುರ ಪ್ರದೇಶದಲ್ಲಿರುವ ಹಾಥಿಪುರ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಕಾನ್ಪುರ ಪೊಲೀಸ್ ಆಯುಕ್ತರಾದ ಜಿತೇಂದ್ರ ಪ್ರತಾಪ್ ಸಿಂಗ್, ಗ್ರಾಮಕ್ಕೆ ತಲುಪಿ, ದ್ವಿವೇದಿ ಅವರ ಕುಟುಂಬವನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಭರವಸೆಯನ್ನೂ ನೀಡಿದ್ದಾರೆ. ಸಿಎಂ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲದೇ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ಸಿಗುವಂತೆ ನೋಡಿಕೊಳ್ಳಲು ನಮಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ನೆನೆದು ಸಿಎಂ ಯೋಗಿ ಆದಿತ್ಯನಾಥ್‌ ಸಹ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಕಳೆದ ವಾರವಷ್ಟೇ ದ್ವಿವೇದಿ ತಮ್ಮ ಪತ್ನಿ ಹಾಗೂ ಇತರ 9 ಮಂದಿ ಕುಟುಂಬ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಬುಧವಾರ (ಇಂದು) ಹಿಂದಿರುಗಬೇಕಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕುದುರೆ ಸವಾರಿ ಮಾಡಲು ಮುಂದಾಗಿದ್ದರು, ಅಷ್ಟರಲ್ಲೇ ಅಲ್ಲಿಗೆ ಬಂದ ಉಗ್ರರು ಪತ್ನಿಯ ಮುಂದೆಯೇ ದ್ವಿವೇದಿ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು

  • ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    – ಉಗ್ರರ ವಿರುದ್ಧ ಹೋರಾಟದಲ್ಲಿ ಕೇಂದ್ರದ ಪರ ಇರುತ್ತೇವೆ; ಎಐಸಿಸಿ ಅಧ್ಯಕ್ಷ

    ನವದೆಹಲಿ: ಇದು ರಾಜಕೀಯ ಮಾಡುವ ಸಮಯವಲ್ಲ. ಮೃತಪಟ್ಟ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಹೇಳಿದ್ದಾರೆ.

    ಪಹಲ್ಗಾಮ್‌ನಲ್ಲಿ (Pahalgam) ನಡೆದ ದಾಳಿಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ್ದಾರೆ. ಉಗ್ರರು ಪ್ರವಾಸಿಗರನ್ನು ಹತ್ಯೆ ಮಾಡಿರುವ ದುರದೃಷ್ಟಕರ ಘಟನೆ ನಡೆದಿದೆ. ಉಗ್ರರು ಅಮಾಯಕರನ್ನ ಕೊಂದಿದ್ದಾರೆ. ಇದು ತುಂಬಾ ದುಃಖಕರ ಸಂಗತಿ, ಕಾಂಗ್ರೆಸ್ (Congress) ಪಕ್ಷ ಉಗ್ರರ ಈ ಕೃತ್ಯವನ್ನ ಉಗ್ರವಾಗಿ ಖಂಡಿಸುತ್ತದೆ. ಈ ಘಟನೆ ದೇಶದ ಒಗ್ಗಟ್ಟು, ಐಕ್ಯತೆ ಮೇಲಿನ ದಾಳಿ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಬುಧವಾರ ರಾತ್ರಿ ನಾನು ಅಮಿತ್ ಶಾ (Amit Shah) ಜೊತೆ ಹಾಗೂ ಒಮರ್ ಅಬ್ದುಲ್ಲಾರೊಂದಿಗೆ ಮಾತನಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ನಾಯಕರ ಜೊತೆಯೂ ಮಾತಾಡಿದ್ದೇನೆ. ಯಾರು ಈ ಕೃತ್ಯದ ಹಿಂದಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಮಿತ್ ಶಾ ನನಗೆ ಹೇಳಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ. ಮೃತರಾದ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ. ಹಾಗಾಗಿ ಈ ವಿಚಾರದಲ್ಲಿ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

    ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಮೃತರಾಗಿದ್ದಾರೆ. ಅವರ ಪತ್ನಿಯರಾದ ಪಲ್ಲವಿ, ಸುಜಾತ ಅವರೊಂದಿಗೆ ಮಾತನಾಡಿದ್ದೇನೆ. ಘಟನಾ ಸ್ಥಳಕ್ಕೆ ಸಂತೋಷ್ ಲಾಡ್ ಕೂಡ ಹೋಗಿದ್ದಾರೆ. ಅವರ ಜೊತೆಯೂ ಮಾತನಾಡಿದ್ದೇನೆ. ಕರ್ನಾಟಕದಿಂದ 200 ಟೂರಿಸ್ಟ್ ಹೋಗಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.

    ಘಟನೆಯ ಬಗ್ಗೆ ಓಮರ್ ಅಬ್ದುಲ್ಲಾ ಅವರ ಜೊತೆಯೂ ಮಾತಾಡಿದ್ದೇನೆ. ಕೇಂದ್ರ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ. ಉಗ್ರರನ್ನ ಬಗ್ಗುಬಡಿಯಬೇಕು. ಮೃತರಿಗೆ ಸಂತಾಪ ಸೂಚಿಸುತ್ತೇವೆ. ಕಾಂಗ್ರೆಸ್ ಪಕ್ಷ ಕುಟುಂಬದವರ ಜೊತೆ ಇದೆ. ಇದು ಭಾರತದ ಮೇಲಿನ ನೇರ ದಾಳಿಯಾಗಿದೆ. ಪಾಕಿಸ್ತಾನಿ ಪ್ರಾಯೋಜಿತ ಉಗ್ರ ಚಟುವಟಿಕೆಗಳನ್ನ ಬಗ್ಗು ಬಡಿಯಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ

    ಕಾಶ್ಮೀರದಲ್ಲಿ ಟೂರಿಸ್ಟ್‌ಗಳಿಗೆ ರಕ್ಷಣೆ ಒದಗಿಸಬೇಕು. ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಮರನಾಥ ಯಾತ್ರೆಯ ಸೆಕ್ಯೂರಿಟಿ ಕೂಡಾ ಟೈಟ್ ಮಾಡಬೇಕು. ಉಗ್ರರ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಇರುತ್ತೇವೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಲಿ. ಇದು ರಾಜಕೀಯ ಮಾಡಲು ಅಲ್ಲ. ಆದರೆ ಎಲ್ಲರಿಂದಲೂ ಸಲಹೆ ಪಡೆಯಿರಿ. ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಎಂದಿದ್ದಾರೆ. ಇದನ್ನೂ ಓದಿ: Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

    ಸಂಪುಟದಲ್ಲಿ ನಾವು ಒಟ್ಟಾಗಿದ್ದೇವೆ. ನಾಳೆ ಕಾಂಗ್ರೆಸ್ ವಿಶೇಷ ಸಿಡಬ್ಲೂಸಿ ಸಭೆ ನಡೆಸಲಿದೆ. ನಾಳೆ 11ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್ ಸಿಡಬ್ಲೂಸಿ ಸಭೆ ನಡೆಯಲಿದ್ದು, ಉಗ್ರರ ಕೃತ್ಯ, ಭದ್ರತೆ ಸೇರಿದಂತೆ ಅನೇಕ ವಿಚಾರಗಳು ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.

  • ಭಾರತಾಂಬೆಯ ಕಳಶದಂತಿರುವ ಜಮ್ಮು, ಕಾಶ್ಮೀರ ಎಂದಿಗೂ ನಮ್ಮದೆ: ಉಗ್ರರ ದಾಳಿ ಖಂಡಿಸಿದ ಧ್ರುವ ಸರ್ಜಾ

    ಭಾರತಾಂಬೆಯ ಕಳಶದಂತಿರುವ ಜಮ್ಮು, ಕಾಶ್ಮೀರ ಎಂದಿಗೂ ನಮ್ಮದೆ: ಉಗ್ರರ ದಾಳಿ ಖಂಡಿಸಿದ ಧ್ರುವ ಸರ್ಜಾ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ಅಟ್ಟಹಾಸಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅವರ ನೀಚ ಕ್ರೌರ್ಯದ ಬಗ್ಗೆ ಸಿನಿಮಾ ಸ್ಟಾರ್‌ಗಳು ಖಂಡಿಸಿದ್ದಾರೆ. ಇದೀಗ ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ ಎಂದು ನಟ ಧ್ರುವ ಸರ್ಜಾ (Dhruva Sarja) ಎಂದು ಉಗ್ರರ ದಾಳಿ ಬಗ್ಗೆ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್‌ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು, ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ ಎಂದು ಧ್ರುವ ಸರ್ಜಾ (Dhruva Sarja) ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜೈ ಹಿಂದ್, ಜೈ ಭಾರತ, ಜೈ ಆಂಜನೇಯ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ (Sudeep) ಮಾಡಿದ್ದಾರೆ.

    ಯಶ್ (Yash) ಎಕ್ಸ್‌ನಲ್ಲಿ ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟçದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಮುಗ್ಧ ಜೀವಗಳು ಪಹಲ್ಗಾಮ್‌ನಲ್ಲಿ ಬಲಿಯಾಗಿರೋದು ಕೇಳಿ ಆಘಾತವಾಗಿದೆ. ಈ ದುರಂತದಲ್ಲಿ ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಶಿವಣ್ಣ (Shivanna) ಪ್ರತಿಕ್ರಿಯೆ ನೀಡಿದ್ದಾರೆ.

    ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ರಿಯಾಕ್ಟ್ ಮಾಡಿ, ನನ್ನ ಹೃದಯ ಒಡೆದಿದೆ ಎಂದು ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ.

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನೋವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ ಎಂದು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

  • ಸೌದಿಯಿಂದ ಬರೋವಾಗ ಪಾಕ್ ವಾಯುಸೀಮೆ ಬಳಸದೇ ದೆಹಲಿಗೆ ಬಂದ ಮೋದಿ

    ಸೌದಿಯಿಂದ ಬರೋವಾಗ ಪಾಕ್ ವಾಯುಸೀಮೆ ಬಳಸದೇ ದೆಹಲಿಗೆ ಬಂದ ಮೋದಿ

    ನವದೆಹಲಿ: ಸೌದಿಯಿಂದ ಬರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಏರ್‌ ಇಂಡಿಯಾ ಒನ್‌ ವಿಮಾನ ಪಾಕ್ ವಾಯುಸೀಮೆ ಬಳಸದೇ ಭಾರತದ ವಾಯುಸೀಮೆ ಬಳಸಿ ದೆಹಲಿಯಲ್ಲಿ ಲ್ಯಾಂಡ್‌ ಆಗಿದೆ.

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಹಿಂದೂಗಳ ನರಮೇಧ ಕೃತ್ಯದ ಬಳಿಕ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿದ ಪ್ರಧಾನಿ ಮೋದಿ ಇಂದು ಮುಂಜಾನೆ ದೆಹಲಿಗೆ ಆಗಮಿಸಿ ವಿಮಾನ ನಿಲ್ದಾಣದಲ್ಲೇ ಸಭೆ ನಡೆಸಿದ್ದರು. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌ 

    ಸೌದಿ ಅರೇಬಿಯಾಕ್ಕೆ ಹೊರಡುವಾಗ ಪಾಕಿಸ್ತಾನ ವಾಯು ಸೀಮೆ ಬಳಸಿದ್ದ ಮೋದಿ ಪಹಲ್ಗಾಮ್‌ ದಾಳಿಯ ನಂತರ ಭಾರತಕ್ಕೆ ಮರಳುವಾಗ ಮಾರ್ಗ ಬದಲಾಯಿಸಿರುವುದು ಟ್ರಾವೆಲ್‌ ಹಿಸ್ಟರಿಯಿಂದ ಕಂಡುಬಂದಿದೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು

    ಸೌದಿಗೆ ಪ್ರವಾಸ ಹೊರಡುವಾಗ ಪ್ರಧಾನಿ ಮೋದಿ ಅವರ IAF ಬೋಯಿಂಗ್ 777-300 (K7067) ವಿಮಾನವು ಪಾಕಿಸ್ತಾನ ವಾಯುಪ್ರದೇಶದಿಂದ ಒಮನ್‌ ತಲುಪಿದ್ದು, ಅಲ್ಲಿಂದ ಜೆಡ್ಡಾಗೆ ತಲುಪಿತ್ತು. ಆದ್ರೆ ಭಯೋತ್ಪಾದಕ ದಾಳಿಯ ಬಳಿಕ ತುರ್ತಾಗಿ ದೆಹಲಿಗೆ ಹಿಂತಿರುಗುವಾಗ ಪಾಕಿಸ್ತಾನ ವಾಯುಪ್ರದೇಶ ಬಳಸದೇ ಭಾರತಕ್ಕೆ ಮರಳಿತು. ಇದಕ್ಕೆ ಸಂಬಂಧಿಸಿದ ಮ್ಯಾಪ್‌ ಚಿತ್ರಗಳು ಲಭ್ಯವಾಗಿದೆ.

    ದೆಹಲಿಗೆ ಮರಳಿದ ಬಳಿಕ ವಿಮಾನ ನಿಲ್ದಾಣದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೇ ಇಂದು ಸಂಜೆ 6 ಗಂಟೆಗೆ ಭದ್ರತೆ ಕುರಿತಂತೆ ಸಂಪುಟ ಸಭೆ ನಡೆಯಲಿದೆ.  ಇದನ್ನೂ ಓದಿ: Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

    ಶಾಗೆ ಸೂಚನೆ ನೀಡಿದ್ದ ಮೋದಿ:
    ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಕರೆ ಮಾಡಿದ್ದ ಮೋದಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಮಂಗಳವಾರ ರಾತ್ರಿಯೇ ಶ್ರೀನಗರಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಅಮಿತ್‌ ಶಾ ಸಭೆ ನಡೆಸಿದ್ದರು. ಅಲ್ಲದೇ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಮೋದಿ, ಈ ಹತ್ಯಾಕಾಂಡದ ಹಿಂದೆ ಯಾರೇ ಇದ್ದರೂ ಬಿಡೋದಿಲ್ಲ ಎಂದು ಶಪಥ ಮಾಡಿದ್ದರು. ಇದನ್ನೂ ಓದಿ: Pahalgam Terror Attack | ಹಿಂದೂಗಳೇ ಭಯೋತ್ಪಾದಕರ ಟಾರ್ಗೆಟ್!

  • ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ

    ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ

    ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನ ಉಗ್ರರ ದಾಳಿಯ (Pahalgam Terrorist Attack) ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ ಹಾಗೂ ಉಗ್ರರ ದಾಳಿಯ ಮಾಹಿತಿ ಕೊರತೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಕಾಶ್ಮೀರದಲ್ಲಿ (Kashmir) ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬವರು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಕಾಶ್ಮೀರಕ್ಕೆ ತೆರಳಿರುವ 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದರು. ಇದನ್ನೂ ಓದಿ: ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿಯೂ ಗುಪ್ತಚರ ಮಾಹಿತಿಯ ವೈಫಲ್ಯವಿದೆ ಎಂದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ದೇಶದ ಜನರಿಗೆ ಕೇಂದ್ರ ಭದ್ರತೆ ಒದಗಿಸಬೇಕು:
    ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ, ಸಕಾರಾತ್ಮಕವಾಗಿ ಚಿಂತಿಸಿ ಪರಿಶೀಲಿಸಲಿದೆ. ಪೆಹಲ್ಗಾಮಿನ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಶ್ರೀನಗರಕ್ಕೆ ಹೆಚ್ಚುವರಿ ವಿಮಾನ ಸೇವೆ ನೀಡುವಂತೆ ಕಂಪನಿಗಳಿಗೆ DGCA ಸೂಚನೆ

  • ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಹಲ್ಗಾಮ್‌ನಲ್ಲಿ (Pahalgam Terrorist Attack) ಹಿಂದೂಗಳ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಶಿವಣ್ಣ, ಯಶ್ (Yash), ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಟ ಸುದೀಪ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ, ಉಗ್ರರ ಹೀನ ಕೃತ್ಯಕ್ಕೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸುದೀಪ್ (Sudeep) ಮನವಿ ಮಾಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ಉಗ್ರರ ಹೇಯ ಕೃತ್ಯ ಖಂಡಿಸಿದ ಶಿವಣ್ಣ, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ ಮಾಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

  • ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್

    ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam TerroristAttack) 27 ಹಿಂದೂಗಳನ್ನು ಕೊಂದಿರುವ ಉಗ್ರರ ನೀಚತನದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ (Yash) ರಿಯಾಕ್ಟ್ ಮಾಡಿದ್ದಾರೆ. ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ಹೇಯ ಕೃತ್ಯ ಖಂಡಿಸಿದ ಶಿವಣ್ಣ, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ

    ಯಶ್ ಎಕ್ಸ್‌ನಲ್ಲಿ ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಮುಗ್ಧ ಜೀವಗಳು ಪಹಲ್ಗಾಮ್‌ನಲ್ಲಿ ಬಲಿಯಾಗಿರೋದು ಕೇಳಿ ಆಘಾತವಾಗಿದೆ. ಈ ದುರಂತದಲ್ಲಿ ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು ಎಂದು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಭಯೋತ್ಪಾದಕರ ದಾಳಿಯಲ್ಲಿ 27 ಮಂದಿ ಮೃತಪಟ್ಟಿರೋ ಬಗ್ಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ವಿಷಾದ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕರಿಗೆ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಹಾಗೇ ಪಾಠ ಕಲಿಸಬೇಕು ಎಂದು ಅನುಪಮ್ ಖೇರ್ (Anupam Kher) ಉಗ್ರರ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ಉಗ್ರರ ಹೇಯ ಕೃತ್ಯ ಖಂಡಿಸಿದ ಶಿವಣ್ಣ, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ

    ಈ ಬಗ್ಗೆ ಅನುಪಮ್‌ ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ. ಇದನ್ನೂ ಓದಿ:ಮುಗ್ಧರನ್ನು ಕೊಲ್ಲುವುದು ದುಷ್ಟತನ- ಪಹಲ್ಗಾಮ್‌ ದಾಳಿ ಖಂಡಿಸಿದ ನಟ ಅಕ್ಷಯ್ ಕುಮಾರ್

     

    View this post on Instagram

     

    A post shared by Anupam Kher (@anupampkher)

    ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದು ಹಿಂದೂ ಕಾಶ್ಮೀರಿ ಪಂಡಿತ್‌ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅನುಪಮ್‌ ಖೇರ್‌ ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅದಷ್ಟೇ ಅಲ್ಲ, ಉಗ್ರರ ಈ ನೀಚ ಕೃತ್ಯದ ಬಗ್ಗೆ ಕಲಾವಿದರಾದ ಶಿವಣ್ಣ, ರಶ್ಮಿಕಾ ಮಂದಣ್ಣ, ರಾಮ್‌ ಚರಣ್‌, ರವೀನಾ ಟಂಡನ್‌, ಸೋನು ಸೂದ್‌, ಸಂಜಯ್‌ ದತ್‌, ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ.

  • ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ

    ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ

    ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ (Shivamogga) ಮಂಜುನಾಥ್ ಮೃತಪಟ್ಟಿದ್ದು, ಮನೆಯಲ್ಲಿ ನೀರವ ಮೌನ ಆವರಿಸಿದೆ. ಮಂಜುನಾಥ್ ಪುತ್ರ ದ್ವಿತೀಯ ಪಿಯುಸಿಯಲ್ಲಿ 97% ಅಂಕ ಪಡೆದಿದ್ದ ಹಿನ್ನೆಲೆ ಸಂಭ್ರಮಾಚರಣೆಗೆಂದು ಮಂಜುನಾಥ್ ತಮ್ಮ ಪತ್ನಿ, ಮಗನ ಜೊತೆ ಕಾಶ್ಮೀರಕ್ಕೆ ತೆರಳಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

    ಮೃತ ಮಂಜುನಾಥ್ ತಾಯಿ, ಪತ್ನಿ, ಪುತ್ರನೊಂದಿಗೆ ನಗರದ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಐದು ದಿನಗಳ ಹಿಂದೆ ಮಂಜುನಾಥ್ ತನ್ನ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮೊದಲು ರಾಜಸ್ಥಾನ ಪ್ರವಾಸಕ್ಕೆ ಯೋಜಿಸಿದ್ದ ಮಂಜುನಾಥ್ ಬಳಿಕ ಪ್ಲ್ಯಾನ್ ಬದಲಾಯಿಸಿ ಕಾಶ್ಮೀರಕ್ಕೆ ತೆರಳಿದ್ದರು. ಇದನ್ನೂ ಓದಿ: ಕನ್ನಡಿಗರ ರಕ್ಷಣೆಗಾಗಿ ಜಮ್ಮುವಿನತ್ತ ಹೊರಟ ಸಚಿವ ಸಂತೋಷ ಲಾಡ್

    ದೆಹಲಿಯ ಇಂಡಿಯನ್ ಟೂರಿಸ್ಟ್ ಸಂಸ್ಥೆಯಿಂದ ಟೂರ್ ಆಯೋಜನೆಗೊಂಡಿತ್ತು. ಮಂಜುನಾಥ್ ಆನ್‌ಲೈನ್‌ನಲ್ಲಿ ಟೂರ್ ಆಯೋಜಿಸಿಕೊಂಡಿದ್ದರು. ದುರಾದೃಷ್ಟವಶಾತ್ ಮಂಜುನಾಥ್ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾಗಿದ್ದಾರೆ. ಉಗ್ರರು ಮಂಜುನಾಥ್ ಅವರ ಧರ್ಮ ಕೇಳಿ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಮೂವರು ಭಯೋತ್ಪಾದಕರು ಬಿಟ್ಟು ಕಳುಹಿಸಿದ್ದು, ‘ಜಾವೋ ಮೋದಿ ಕೋ ಬೋಲೋ’ ಎಂದು  ಹೇಳಿ ಸ್ಥಳದಿಂದ ತೆರಳಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿದ ಮೋದಿ

    ಸದ್ಯ ಮೃತ ಮಂಜುನಾಥ್ ತಾಯಿ ಸುಮತಿಗೆ ಇನ್ನೂ ಕೂಡ ಮಗನ ಹತ್ಯೆಯಾಗಿರುವ ವಿಚಾರ ತಿಳಿದಿಲ್ಲ. ಮಂಜುನಾಥ್ ಉಗ್ರರಿಂದ ಹತ್ಯೆಯಾಗಿದ್ದಾನೆಂದು ಕುಟುಂಬಸ್ಥರು ತಿಳಿಸಿಲ್ಲ. ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಷ್ಟೇ ಕುಟುಂಬಸ್ಥರು ತಾಯಿಗೆ ತಿಳಿಸಿದ್ದಾರೆ. ಇದನ್ನೂ ಓದಿ: Pahalgam Attack | ಉಗ್ರರ ಗುಂಡಿಗೆ ವಾರದ ಹಿಂದೆಯಷ್ಟೇ ಮದ್ವೆಯಾಗಿದ್ದ ನೌಕಾಪಡೆ ಅಧಿಕಾರಿ ಬಲಿ

  • ಕನ್ನಡಿಗರ ರಕ್ಷಣೆಗಾಗಿ ಜಮ್ಮುವಿನತ್ತ ಹೊರಟ ಸಚಿವ ಸಂತೋಷ ಲಾಡ್

    ಕನ್ನಡಿಗರ ರಕ್ಷಣೆಗಾಗಿ ಜಮ್ಮುವಿನತ್ತ ಹೊರಟ ಸಚಿವ ಸಂತೋಷ ಲಾಡ್

    ಧಾರವಾಡ: ಕಳೆದ ಎರಡು ದಿನಗಳಿಂದ ಧಾರವಾಡದಲ್ಲಿ ಅಧಿಕಾರಿಗಳ ಸಭೆ ಮಾಡುತಿದ್ದ ಸಚಿವ ಸಂತೋಷ ಲಾಡ್ (Santosh Lad), ಸಿಎಂ ಸೂಚನೆ ಮೇರೆಗೆ ತುರ್ತಾಗಿ ಜಮ್ಮುಕಾಶ್ಮೀರದತ್ತ ಹೊರಟಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಬಲಿಯಾದ ಹಾಗೂ ಗಾಯಗೊಂಡವರನ್ನ ಕರೆ ತರಲು ಲಾಡ್ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ನಾಳೆ ಧಾರವಾಡದಲ್ಲಿ ಇದ್ದ ಎಲ್ಲ ಕಾರ್ಯಕ್ರಮ ರದ್ದು ಮಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಹೋಗಲಿದ್ದಾರೆ. ನಂತರ ದೆಹಲಿಯಿಂದ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಲಾಡ್, ಸಾಹೇಬ್ರ ಸೂಚನೆ ಮೇರೆಗೆ ಹೊರಟಿದ್ದೆನೆ ಹೊರಟಿದ್ದೆನೆ ಎಂದು ಹೇಳಿದರು.‌ ಇದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ.