ನಮ್ಮ ವಿಶ್ವದಲ್ಲಿ ಇರೋದು ಒಂದೇ ಹಿಂದೂಸ್ಥಾನ. ನಮ್ಮ ಹಿಂದುಸ್ಥಾನದಲ್ಲಿ ನಮಗೇ ಸ್ಥಾನ ಇಲ್ಲ ಅನ್ನುವಂತಹ ಪರಿಸ್ಥಿತಿ ಎದುರಾಗಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಅನುಕಂಪ, ವಾತ್ಸಲ್ಯ ಭಾರತ ಮಣ್ಣಿಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಬೇರೆ ಮಣ್ಣಿಗೆ ಅದು ಗೊತ್ತಿಲ್ಲ. ದೇಶದ ಪರಿಸ್ಥಿತಿ ನೋಡಿದ್ರೆ, ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ. ಅದನ್ನು ಅಲ್ಲೇ ಸರಿ ಮಾಡಬೇಕು. ಈ ಸೆಕ್ಯೂರಿಟಿನ ನಾವೇ ಸರಿ ಮಾಡಿಕೊಳ್ಳಬೇಕು ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಾಗಚೈತನ್ಯ
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಅಂದಹಾಗೆ, ಸಂತ್ರಸ್ಥರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 10 ಲಕ್ಷ ರೂ. ಘೋಷಿಸಿದ್ದಾರೆ.
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ತನಿಖೆ ಶುರು ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ (Baisaran) ಪ್ರವಾಸಿಗರಿಗಾಗಿ ರೀಲ್ಸ್ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೌದು. ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್ ಅಫ್ರಿದಿ
ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ:
ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು. ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ವಿಚಾರಣೆ
ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಐಎ ತಂಡ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಉಗ್ರರ ಕ್ರಿಯಾಯೋಜನೆಯ ಬಗ್ಗೆ ಸುಳಿವು ಪಡೆಯಲು ಎಂಟ್ರಿ, ಎಕ್ಸಿಟ್ ಸ್ಥಳಗಳನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆದು: ಜಗದೀಶ್ ಶೆಟ್ಟರ್
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terrorist Attack) ಬಗ್ಗೆ ನಟ ಶ್ರೀಮುರಳಿ (Srimurali) ಕೆಂಡಕಾರಿದ್ದಾರೆ. ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು ಎಂದು ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?
ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ನೋವಾಗ್ತಿದೆ. ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದರೆ ಉಗ್ರರ ದಾಳಿ ವಿಷ್ಯ ಕೇಳಿ ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರ ಸಂಹಾರ ಆಗೋವರೆಗೂ ನಮಗೆ ನೆಮ್ಮದಿಯಿಲ್ಲ. ಅಮಯರ ಜೀವ ತೆಗೆದಿದ್ದಾರೆ. ಅದಕ್ಕೆ ಉಗ್ರರ ಅಂತ್ಯ ಆಗಲೇಬೇಕು ಎಂದು ಶ್ರೀಮುರಳಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ತನಿಖೆಗೆ ನಿಯೋಜಿಲ್ಪಟ್ಟ ಎನ್‌ಐಎ ತಂಡ ಈಗಾಗಲೇ ಪಹಲ್ಗಾಮ್ ತಲುಪಿದೆ, ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್‌ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು NIA ಮುಂದಾಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ
ಉಗ್ರರ ದಾಳಿಗೆ 26 ಮಂದಿ ಬಲಿ
ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು, ವಿದೇಶಿಯರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಮಂದಿ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿನಡೆಸಿದ ಭೀಕರ ದಾಳಿ ಇದಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ – ಬುಸುಗುಟ್ಟಿದ ಪಾಕ್ ಗೃಹ ಸಚಿವ
ನವದೆಹಲಿ: ಪಾಕಿಸ್ತಾನದ (Pakistan) ಜೊತೆಗೆ ಭಾರತ ಕ್ರಿಕೆಟ್ (Cricket) ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಒತ್ತಾಯಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ಖಂಡಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿಯೂ ಆಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ನೆಲೆಸಿದ್ದ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಬಂಧನ
ಪ್ರತಿ ವರ್ಷವೂ ಭಾರತದ ನೆಲದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು. ಖಂಡಿತವಾಗಿಯೂ ಭಾರತ ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುವುದು ತಮಾಷೆಯಾಗಿ ಮಾರ್ಪಟ್ಟಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: Uttar Pradesh| ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಮೂವರು ಕಾರ್ಮಿಕರು ದುರ್ಮರಣ
ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಕುರಿತು ನಟ ಧ್ರುವ ಸರ್ಜಾ (Dhruva Sarja) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಾಳಿ ನಡೆದ ಸ್ಥಳದಲ್ಲೇ ಮಾರ್ಟಿನ್ ಚಿತ್ರೀಕರಣ ನಡೆದಿತ್ತು. ಆದರೆ ಆಗ ಸೆಕ್ಯೂರಿಟಿ ಚೆನ್ನಾಗಿತ್ತು. ಈಗ ಈ ದಾಳಿ ನಡೆಸಿರೋ ಬಾಸ್ಟರ್ಡ್‌ಗಳ ಬಗ್ಗೆ ಏನು ಮಾತಾಡೋದು? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ
ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದು ಬೈದು ಮಾತನಾಡಿದ ಅವರು, ಆ ಬಾಸ್ಟರ್ಡ್‌ಗಳ ಬಗ್ಗೆ ಮಾತಾಡೋಕೆ ಏನಿದೆ? ಅವರಿಗೆ ಅರ್ಥ ಆಗುವ ಭಾಷೆಯಲ್ಲೇ ನಮ್ಮ ಭಾರತೀಯ ಸೇನೆ ಉತ್ತರ ಕೊಟ್ಟೆ ಕೊಡುತ್ತಾರೆ. ಈಗ ಸಿಂಧೂ ನೀರನ್ನು ಬಂದ್ ಮಾಡಿದ್ದಾರೆ. ನಮ್ಮ ಭಗವತ್ ಗೀತೆಯಲ್ಲೇ ಇದೆ ತಾಳ್ಮೆಯಿಂದ ಇರಬೇಕು ಅಂತ, ಬೇಗ ಉತ್ತರ ಕೊಡುತ್ತಾರೆ, ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ ಎಂದಿದ್ದಾರೆ.
ಈ ಕುರಿತು ಮೋದಿಯವರು ಮುಂದೆ ಯಾವ ನಿರ್ಧಾರ ತೆಗೆದುಕೊಳಬಹುದು ಎಂದ ಪ್ರಶ್ನೆಗೆ, ನಾನು ಮೋದಿಯವರ ಪಿಎ ನಾ? ಫ್ಯಾಮಿಲಿ ನೋಡುತ್ತಿರುತ್ತಾರೆ, ನಮ್ಮ ಬಾಯಲ್ಲಿ ಬೇರೆ ರೀತಿ ಮಾತು ಬಂದರೆ ತಪ್ಪಾಗುತ್ತದೆ. ಇದನ್ನು ಡೈವರ್ಟ್ ಮಾಡೋದು ಬೇಡ, ಯಾವತ್ತಿದ್ದರೂ ಜಮ್ಮು ಮತ್ತು ಕಾಶ್ಮೀರ ನಮ್ಮ ಕಿರೀಟ. ನಾವು ಇನ್ನು ಯುದ್ಧ ಪ್ರಾರಂಭ ಮಾಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ಪ್ರಜೆಗಳನ್ನು ಕಳುಹಿಸಲು ಕೇಂದ್ರದಿಂದ ಅಡ್ವೈಸರಿ, ಪತ್ತೆಹಚ್ಚಲು ಎಸ್‌ಪಿಗಳಿಗೆ ಸೂಚನೆ: ಪರಮೇಶ್ವರ್
ಬೆಂಗಳೂರು: ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ (CM Siddaramaiah) ಇಂದು ನಮ್ಮ ಮುಂದೆ ಇದ್ದಾರೆ, ದೇಶಕ್ಕೆ ಏನಾದರೂ ಪರವಾಗಿಲ್ಲ, ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಸಿಎಂ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಪಹಲ್ಗಾಮ್ (Pahalgam) ಉಗ್ರರ ದಾಳಿ ಪ್ರಕರಣದಲ್ಲಿ ಯುದ್ಧದ ಅನಿವಾರ್ಯತೆ ಇಲ್ಲವೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಪೂರ್ತಿ ಮುಸ್ಲಿಮರ ಮತದ ಬಗ್ಗೆಯೇ ಯೋಚಿಸುವ ರೀತಿ ಆಗಿರುವುದು ದುರದೃಷ್ಟಕರ. ಹಾಗಾದರೆ ಸತ್ತಿರುವವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಹಮಾಸ್ ಉಗ್ರರು ಬಂದು ತರಬೇತಿ ನೀಡಿ ಕಳುಹಿಸಿದ್ದರು ಎಂಬುದು ಮಾಹಿತಿಗಳ ಮೂಲಕ ಹೊಂದಾಣಿಕೆ ಆಗುತ್ತಿದೆ. ಅದನ್ನು ಸಿದ್ದರಾಮಯ್ಯ ಅವರು ಮಾತ್ರ ಕ್ಷಮಿಸಬಹುದಷ್ಟೇ. ದೇಶಕ್ಕೆ ಏನು ಆದರೂ ಪರವಾಗಿಲ್ಲ, ತಮಗೆ ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ ಇಂದು ನಮ್ಮ ಮುಂದೆ ಇದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ
ನಿಮ್ಮ ಮನೆಯಲ್ಲಿ ಈ ರೀತಿ ಉಗ್ರರು ಬಂದು ಹೊಡೆದು ಹಾಕಿರುತ್ತಿದ್ದರೆ ಈ ರೀತಿ ಹೇಳುತ್ತಿದ್ದರಾ? ಹಾಗಾದರೆ ಸತ್ತವರ ಮನೆ ಬಾಗಿಲಿಗೆ ಹಾರ ಹಾಕಲು ಯಾಕೆ ಹೋಗಿದ್ರಿ? ಇಲ್ಲಿ ಬಂದು ಸತ್ತವರು ಸತ್ತರು ಎನ್ನುವುದು ನಾಚಿಕೆಗೇಡಿನ ಸಂಗತಿ. ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಮನೆ ಮುರಿಯುವ ಮಾತಾಡಿದ್ದಾರೆ. ಯಾವುದೇ ಪಾಕಿಸ್ತಾನಿ ಭಾರತದಲ್ಲಿ ಇರಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಭಟ್ಕಳದಲ್ಲಿ 10ಕ್ಕಿಂತ ಹೆಚ್ಚು ಪಾಕಿಸ್ತಾನದವರು ಇದ್ದಾರೆ. ಆದರೆ ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯರನ್ನು ಹೊರ ಹಾಕಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ. ಕೂಡಲೇ ಭಟ್ಕಳದಲ್ಲಿರುವ ಪಾಕಿಸ್ತಾನದವರನ್ನು ಒದ್ದು ಹೊರ ಹಾಕಬೇಕು. ಮೀರ್ ಸಾಧಿಕ್‌ನಂತವರು ನಮ್ಮಲ್ಲೇ ಇದ್ದಾರೆ ಎಂದು ಆರೋಪಿಸಿದರು.
ಕಾಶ್ಮೀರದಲ್ಲಿ ಇರುವುದು ಐಎನ್‌ಡಿಐ ಮೈತ್ರಿ ಸರ್ಕಾರ, ಯಾವುದೇ ಸೆಕ್ಯುರಿಟಿ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರ ಕೊಡುವ ಸಲಹೆ ಮೇರೆಗೆ ಆಗುತ್ತದೆ. ರಾಮೇಶ್ವರಂ ಕೆಫೆ, ಕುಕ್ಕರ್ ಬಾಂಬ್ ಸ್ಫೋಟ ಆದಾಗ ಏನು ಮಣ್ಣು ತಿನ್ನುತ್ತಿದ್ರಾ? ದೇಶದ ಪ್ರಶ್ನೆ ಬಂದಾಗ ಎಲ್ಲರೂ ಒಂದೇ ವಾಯ್ಸ್‌ನಲ್ಲಿ ಮಾತಾಡಬೇಕು. ಆದರೆ ಸಿದ್ದರಾಮಯ್ಯ ವೋಟ್ ವಾಯ್ಸ್‌ನಲ್ಲಿ ಮಾತಾಡುತ್ತಾರೆ. ಕಲಬುರ್ಗಿಯ ರಸ್ತೆಯಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದರೆ ಮುಸ್ಲಿಂ ಮಹಿಳೆಯರು ಅದಕ್ಕೆ ಗೌರವ ತೋರಿಸಿದ್ದಾರೆ. ದೇಶದ ಒಳಗೆ ಇರುವ ದೇಶ ದ್ರೋಹಿಗಳನ್ನು ಮಟ್ಟ ಹಾಕಬೇಕು. ಸಿದ್ದರಾಮಯ್ಯ ಹೇಳಿಕೆ ಮೃತಪಟ್ಟವರಿಗೆ ಅವಮಾನವಾಗುವಂತಹದ್ದು, ಕೂಡಲೇ ಸಿದ್ದರಾಮಯ್ಯ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಗುಪ್ತಚರ ವ್ಯವಸ್ಥೆ ವೈಫಲ್ಯ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಂತೋಷ್ ಲಾಡ್ (Santosh Lad) ಇನ್ನಷ್ಟು ಮೆಚ್ಯೂರ್ ಆಗಬೇಕು. ಸೈನ್ಯದ ಬಗ್ಗೆಯೇ ಅನುಮಾನ ಪಡುತ್ತಾರಲ್ಲಾ? ಸೈನಿಕರು ಅಲ್ಲಿ ಪ್ರಾಣದ ಹಂಗು ತೊರೆದು ಇರುವುದರಿಂದ ಇಲ್ಲಿ ಸಂತೋಷ್ ಲಾಡ್ ಆರಾಮಾಗಿ ಮಜಾ ಹೊಡೆದುಕೊಂಡು ಇದ್ದಾರೆ. ಇದೇ ರೀತಿ ಪಕ್ಷಗಳು ಪಾಕಿಸ್ತಾನದಲ್ಲೂ (Pakistan) ಮಾಡುತ್ತಿದ್ದಾರಾ? ದೇಶಕ್ಕೆ ಸಂಕಷ್ಟ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಲಿಯಬೇಕು. ಸಿದ್ದರಾಮಯ್ಯ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಇವರೆಲ್ಲರ ಹೇಳಿಕೆಗೆ ಜನ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದರು.ಇದನ್ನೂ ಓದಿ: ನಡು ರಸ್ತೆಯಲ್ಲೇ ಕಾರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿ ಮಹಿಳೆಯ ದರ್ಪ
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿರೋದು ಆಮೀರ್ ಖಾನ್‌ಗೆ (Aamir Khan) ಆಘಾತವಾಗಿದೆ. ಈ ಹಿನ್ನೆಲೆ 30 ವರ್ಷಗಳ ಬಳಿಕ ಮರುಬಿಡುಗಡೆಯಾಗುತ್ತಿರುವ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ಪ್ರೀಮಿಯರ್ ಶೋಗೆ ಆಮೀರ್ ಗೈರಾಗಿದ್ದಾರೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡೋದಾಗಿ ಘೋಷಿಸಿದ ಆಮೀರ್ ಖಾನ್
ಸಲ್ಮಾನ್ ಖಾನ್ ಜೊತೆ ಆಮೀರ್ ನಟಿಸಿದ್ದ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ಏ.25ರಂದು ಮರುಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷ ಪ್ರದರ್ಶನಕ್ಕೆ ಇಡೀ ಚಿತ್ರತಂಡಕ್ಕೆ ಆಹ್ವಾನ ನೀಡಲಾಗಿತ್ತು. ಈ ಚಿತ್ರದ ಪ್ರೀಮಿಯರ್ ಶೋಗೆ ಆಮೀರ್ ಖಾನ್ ಗೈರಾಗಿದ್ದಾರೆ. ಅದರ ಗೈರಾಗಿದ್ದರ ಅಸಲಿ ಕಾರಣವನ್ನು ಆಮೀರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ತಾವು ಸಿನಿಮಾ ವಿಶೇಷ ಪ್ರದರ್ಶನಕ್ಕೆ ಬರುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಏನಾಯ್ತು ಎಂದು ತಿಳಿದು ನೋವಾಗಿದೆ. ಅಮಾಯಕರ ಹತ್ಯೆಯಿಂದ ನನಗೆ ತೀವ್ರ ಆಘಾತವಾಗಿದೆ. ಈ ಸಂದರ್ಭದಲ್ಲಿ ನಾನು ನನ್ನ ಸಿನಿಮಾ ನೋಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಈ ವಾರದ ಕೊನೆಯಲ್ಲಿ ಸಿನಿಮಾ ನೋಡೋದಾಗಿ ತಿಳಿಸಿದ್ದಾರೆ ಆಮೀರ್ ಖಾನ್.
ಅಂದಹಾಗೆ, ಉಗ್ರರ ದಾಳಿ ಬಗ್ಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಂಗನಾ ರಣಾವತ್ ಸೇರಿದಂತೆ ಅನೇಕರು ಕೆಂಡಕಾರಿದ್ದಾರೆ. ದುಷ್ಟರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಚಿತ್ರ (Abir Gulal) ಬಿಡುಗಡೆಗೆ ಅನುಮತಿ ನೀಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಚಿತ್ರದ ಹಾಡುಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ:ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ
ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ‘ಅಬೀರ್ ಗುಲಾಲ್’ ಮೇ 9ರಂದು ರಿಲೀಸ್ ಆಗಬೇಕಿತ್ತು. ಈ ಸಿನಿಮಾವನ್ನು ಬಿಡುಗಡೆಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಪಾಕ್ ಕಲಾವಿದರು, ಗಾಯಕರು ತಂತ್ರಜ್ಞರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಲು ನಿಷೇಧಿಸಲಾಗಿದೆ. ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಸಿನಿಮಾದ ನಾಯಕಿ ವಾಣಿ ಕಪೂರ್ ಅವರು ಬಾಲಿವುಡ್‌ನ ‘ಬೇಫಿಕ್ರೆ’, ‘ವಾರ್’, ತಮಿಳಿನ `ಆಹಾ ಕಲ್ಯಾಣಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವಿವಾದಕ್ಕೆ ಸಿಲುಕಿರುವ ‘ಅಬೀರ್ ಗುಲಾಲ್’ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ.
‘ಉರಿ’ ದಾಳಿ ಬಳಿ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಲ್ಲಿ ನಟಿಸಲು ನಿಷೇಧ ಹೇರಲಾಗಿತ್ತು. ವರ್ಷಗಳ ಬಳಿಕ ಪರಿಸ್ಥಿತಿ ತಿಳಿಯಾದಂತೆ ಮತ್ತೆ ಪಾಕ್ ಕಲಾವಿದರು ಬಾಲಿವುಡ್‌ನಲ್ಲಿ ನಟಿಸಲು ಶುರು ಮಾಡಿದರು.
ನವದೆಹಲಿ: ಪಹಲ್ಗಾಮ್ ಪೈಶಾಚಿಕ ಕೃತ್ಯಕ್ಕೆ ಭಾರತ ಪ್ರತೀಕಾರದ ಪಣ ತೊಟ್ಟಿದೆ. ಕಾಶ್ಮೀರದಲ್ಲಿ ರಕ್ತಪಾತ ಹರಿಸಿದ ಉಗ್ರರನ್ನು ಹುಡುಕಿ ಹುಡುಕಿ ಯಾವ ಬಿಲದಲ್ಲಿ ಅಡಗಿದ್ದರೂ ಹೊರಗೆಳೆದು ಹೊಡೆಯುತ್ತೇವೆ. ಉಗ್ರರು ಊಹೆಯೂ ಮಾಡದಂತ ಶಿಕ್ಷೆ ಅನುಭವಿಸ್ತಾರೆ ಅಂತ ಪ್ರಧಾನಿ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ.
ಬಿಹಾರದ ಮಣ್ಣಿನಲ್ಲಿ ನಿಂತು ಇಡೀ ಪ್ರಪಂಚಕ್ಕೆ ಸಾರಿ ಹೇಳ್ತಿದ್ದೇನೆ. ಪ್ರತಿಯೊಬ್ಬ ಭಯೋತ್ಪಾದಕ, ಸಂಚುಕೋರರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸ್ತೇವೆ ಅಂದಿದ್ದಾರೆ. ಅಲ್ಲದೆ, ಸಾರ್ವಜನಿಕ ರ‍್ಯಾಲಿ ಆರಂಭಕ್ಕೆ ಮುನ್ನ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು, ಮೋದಿ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಎಂಐಎಂ ಮುಖ್ಯಸ್ಥ ಓವೈಸಿ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡ್ಬೇಕು ಅಂದಿದ್ದಾರೆ. ಈ ಮಧ್ಯೆ, ಉಗ್ರರ ಪಾಲಿನ ಸ್ವರ್ಗ ಪಾಕಿಸ್ತಾನಕ್ಕೆಕ್ಕೆ ಭಾರತ ರಾಕೆಟ್ ವಾರ್ನಿಂಗ್ ಕೂಡ ರವಾನಿಸಿದೆ.
ಅರಬ್ಬೀ ಸಮುದ್ರದಲ್ಲಿ ಐಎನ್‌ಎಸ್ ಸೂರತ್ ನೌಕೆಯಿಂದ ಸಮರಾಭ್ಯಾಸ ಆರಂಭಿಸಿದೆ. ಜೊತೆಗೆ `ಆಕ್ರಮಣ್’ ಹೆಸರಿನಲ್ಲಿ ಸುಖೋಯ್, ರಫೇಲ್ ಜೆಟ್‌ಗಳ ಸಮೇತ ಡ್ರಿಲ್ ಮಾಡಿವೆ. ಪಾಕಿಸ್ತಾನ ಬೆಳಗ್ಗೆ ಕ್ಷಿಪಣಿ ಪ್ರಯೋಗ ಮಾಡಿದ್ದ ಒಂದೇ ಗಂಟೆಯಲ್ಲಿ ಭಾರತ ಕೂಡ ಯುದ್ಧಭ್ಯಾಸ ಮಾಡಿ ಮುಯ್ಯಿಗೆ ಮುಯ್ಯಿ ಕೊಡಲು ನಾವೂ ಸನ್ನದ್ಧರಿದ್ದೇವೆ ಅಂತ ಸಂದೇಶ ರವಾನಿಸಿದೆ.
ದೇಶಿಯವಾಗಿ ನಿರ್ಮಿಸಲಾದ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯನ್ನು ಯುದ್ಧನೌಕೆ ʻಐಎನ್‌ಎಸ್ ಸೂರತ್ʼನಿಂದ ಅರಬ್ಭಿ ಸಮುದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.