Tag: Pahalgam Terrorist Attack

  • ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?

    ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?

    ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಹೆಚ್ಚಾಗುತ್ತಿರುವ ಉದ್ವಿಗ್ನತೆ ನಡುವೆ ಇದೀಗ ಕೇಂದ್ರ ಗೃಹ ಸಚಿವಾಲಯದ ಸೂಚನೆ ಅನ್ವಯ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ (ಮೆ 07) ಮಾಕ್ ಡ್ರಿಲ್ ನಡೆಯಲಿದೆ.

    ಮಾಕ್ ಡ್ರಿಲ್ (Mock Drill) ಮೂಲಕ ನಾಗರಿಕರಿಗೆ ತುರ್ತು ಪರಿಸ್ಥಿತಿಯ ಕಾಲ್ಪನಿಕತೆಯನ್ನು ಕಟ್ಟಿಕೊಡಲಾಗುತ್ತದೆ. ಈ ವೇಳೆ ರಕ್ಷಣಾ ಕ್ರಮದ ತರಬೇತಿ, ವಾಯುದಾಳಿಯ ಸೈರನ್‌ಗಳಿಗೆ ಹೇಗೆ ಪ್ರತಿಕ್ರಿಯಿಸುವುದು, ವಿದ್ಯುತ್ ಕಡಿತ ಹಾಗೂ ಇನ್ನಿತರ ಮೂಲಭೂತ ವಸ್ತುಗಳ ನಿಯಂತ್ರಣಗಳ ಕುರಿತು ತಿಳುವಳಿಕೆ ನೀಡಲಾಗುತ್ತದೆ.ಇದನ್ನೂ ಓದಿ: ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್‌!

    ಏ.22ರಂದು ಮಹಲ್ಗಾಮ್‌ನ (Pahalgam Terrorist Attack) ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿವಿಧ ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಸಿದ್ಧಗೊಳಿಸುವ ಉದ್ದೇಶದಿಂದಾಗಿ ನಾಳೆ ಅಣಕು ಭದ್ರತಾ ಕವಾಯತು ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ .

    ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ನಾಗರಿಕರಿಗೆ ತರಬೇತಿ ನೀಡುವುದು ಈ ಕವಾಯತುಗಳ ಪ್ರಮುಖ ಅಂಶವಾಗಿರುತ್ತದೆ. ವಾಯುದಾಳಿ ಸೈರನ್ ಮತ್ತು ವಿದ್ಯುತ್ ಕಡಿತದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದರ ಮೇಲೆ ಈ ಕವಾಯತುಗಳು ಗಮನಹರಿಸಲಿವೆ. ಈ ವೇಳೆ ನಾಗರಿಕರು ಅವಶ್ಯ ಸಾಮಗ್ರಿಗಳನ್ನು ಹೆಚ್ಚು ಇರಿಸಿಕೊಳ್ಳುವುದು, ಟಾರ್ಚ್, ಕ್ಯಾಂಡಲ್ ಮತ್ತು ವೈದ್ಯಕೀಯ ಸಲಕರಣೆಗಳನ್ನು ಇರಿಸಿಕೊಳ್ಳುವಂತೆ ಸೂಚನೆ ನೀಡಲಾಗುವುದು. ಜೊತೆಗೆ ಮೊಬೈಲ್ ಮತ್ತು ಡಿಜಿಟಲ್ ವಹಿವಾಟುಗಳ ವಿಫಲಗೊಳ್ಳುವ ಸಂದರ್ಭ ಉಂಟಾದರೆ ನಗದು ಹಣವನ್ನು ಕೈಯಲ್ಲಿ ಇರಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಇನ್ನೂ ಮಾಕ್ ಡ್ರಿಲ್ ನಡೆಸಲಾಗುವ 244 ಜಿಲ್ಲೆಗಳ ಪೈಕಿ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಅತ್ಯಂತ ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ಹೀಗಾಗಿ ಈ ಅಣಕು ಕವಾಯತು ಕೆಲವು ನಿರ್ಣಾಯಕ ಕ್ರಮಗಳನ್ನು ಒಳಗೊಂಡಿರಲಿದೆ.ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ – ‘ತಮ್ಮ’ನ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ

  • ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ

    ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ

    – ಕಾಶ್ಮೀರ ವಿಚಾರ ಮುಂದಿಟ್ಟು ಸಿಂಪಥಿ ಗಿಟ್ಟಿಸಲು ಮಾಡಿದ್ದ ಪ್ಲ್ಯಾನ್‌ ವಿಫಲ

    ನ್ಯೂಯಾರ್ಕ್: ಪಾಕಿಸ್ತಾನದ ಕೋರಿಕೆಯ ಮೇರೆಗೆ ಕರೆಯಲಾಗಿದ್ದ ವಿಶ್ವಸಂಸ್ಥೆಯ (United Nations) ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಪಾಕ್ ಬೆವರಿಳಿಸಿಕೊಂಡಿದೆ. ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ (Pakistan) ವಿಶ್ವಸಂಸ್ಥೆ ಹಿಗ್ಗಾಮುಗ್ಗಾ ಜಾಡಿಸಿದೆ.

    ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕ್ ಮನವಿಯ ಮೇರೆಗೆ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಪಾಕಿಸ್ತಾನ ಪಹಲ್ಗಾಮ್ ವಿಚಾರವನ್ನು ಬದಿಗೆ ಸರಿಸಿ ಕಾಶ್ಮೀರದ ವಿಚಾರವನ್ನು ಮುಂದಿಟ್ಟು ಭಾರತ ಮಿಲಿಟರಿ ಪಡೆಯನ್ನು ಸಿದ್ಧವಾಗಿಟ್ಟುಕೊಂಡಿರುವ ಬಗ್ಗೆ ಸಿಂಪಥಿ ಗಿಟ್ಟಿಸಲು ಪ್ಲ್ಯಾನ್‌ ಮಾಡಿತ್ತು. ಆದರೆ ಪಾಕ್ ನಾಟಕಕ್ಕೆ ವಿಶ್ವಸಂಸ್ಥೆ ಸೊಪ್ಪು ಹಾಕದೇ ಛೀಮಾರಿ ಹಾಕಿದೆ.ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಮುಖಭಂಗ

    ಇದೇ ವೇಳೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಪಹಲ್ಗಾಮ್ ಹತ್ಯಾಕಾಂಡದ ಹಿಂದೆ ಲಷ್ಕರ್ ನಂಟಿನ ಬಗ್ಗೆಯೂ ಪ್ರಸ್ತಾಪಿಸಿ ಹಾಗೂ ಬಹಿರಂಗವಾಗಿ ನ್ಯೂಕ್ಲಿಯರ್ ಬಾಂಬ್ ದಾಳಿಯ ಹೇಳಿಕೆ, ಕ್ಷಿಪಣಿ ಪ್ರಯೋಗದ ಬಗ್ಗೆ ಪ್ರಶ್ನಿಸಿ ಬೆವರಿಳಿಸಿದೆ.

    ಸಭೆಯಲ್ಲಿ ಭಯೋತ್ಪಾದಕ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೆಲವು ಸದಸ್ಯರು ನಿರ್ದಿಷ್ಟವಾಗಿ ತಮ್ಮ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿ ಟೀಕಿಸಿತು. ಕೊನೆಗೆ ಭಾರತದೊಂದಿಗೆ ನೀವೇ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಚಿಸಲಾಯಿತು.

    ಯಾವೆಲ್ಲ ದೇಶಗಳು ಭಾಗಿ?
    ಚೀನಾ, ಫ್ರಾನ್ಸ್, ರಷ್ಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ಶಾಶ್ವತ ಸದಸ್ಯ ದೇಶಗಳ ಜೊತೆ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ 10 ದೇಶಗಳ ಪ್ರತಿನಿಧಿಗಳು ಭದ್ರತಾ ಸಮಿತಿಯ ಸಭೆಯಲ್ಲಿ ಭಾಗಿಯಾದರು. ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮ, ಕೊರಿಯಾ ಗಣರಾಜ್ಯ, ಸಿಯೆರಾ ಲಿಯೋನ್, ಸ್ಲೊವೇನಿಯಾ, ಸೊಮಾಲಿಯಾ ಭಾಗಿಯಾಗಿತ್ತು.ಇದನ್ನೂ ಓದಿ: ಕಾಶ್ಮೀರದಲ್ಲಿ ಮದ್ದುಗುಂಡುಗಳ ಸಹಿತ ಇಬ್ಬರು ಉಗ್ರರು ಅರೆಸ್ಟ್‌

  • ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ – ಚೀನಾ

    ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ – ಚೀನಾ

    ಇಸ್ಲಾಮಾಬಾದ್: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ನಡೆಯುತ್ತಿರುವ ಕಾದಾಟದ ನಡುವೆ ಇದೀಗ ಪಾಕ್‌ಗೆ ಚೀನಾ (China) ಬೆಂಬಲ ನೀಡುವುದಾಗಿ ತಿಳಿಸಿದೆ.

    ಏ.22ರಂದು ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಭಾರತಕ್ಕೆ ರಷ್ಯಾ, ಜಪಾನ್ ಬೆಂಬಲಿ ನೀಡಿದರೆ, ಇನ್ನೊಂದು ಕಡೆ ನೆರೆ ರಾಷ್ಟ್ರ ಚೀನಾ ಪಾಕ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ ಎಂದು ಹೇಳಿದೆ.ಇದನ್ನೂ ಓದಿ: ಯೆಮೆನ್‌ ಬಂದರು ಮೇಲೆ ಇಸ್ರೇಲ್‌ ದಾಳಿ- ಉಂಡೆಗಳಂತೆ ಮೇಲಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ

    ಸೋಮವಾರ ಪಾಕ್ ಅಧ್ಯಕ್ಷ ಅಲಿ ಜರ್ದಾರಿ ಅವರನ್ನು ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಚೀನಾ ಮತ್ತು ಪಾಕಿಸ್ತಾನದ ಸ್ನೇಹ ಶಾಶ್ವತವಾಗಿದೆ. ಕಾಲ ಕಾಲಕ್ಕೆ ಪರೀಕ್ಷೆಗೆ ಒಳಗಾಗಿದ್ದರೂ ಯಾವಾಗಲೂ ಸವಾಲಿನ ಸಮಯದಲ್ಲಿ ಪರಸ್ಪರ ಬೆಂಬಲಿಸಿದ ಸ್ನೇಹ ನಮ್ಮದಾಗಿದೆ. ಹೀಗಾಗಿ ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.

    ಪಾಕ್ ಬೆಂಬಲಿಸುವುದಾಗಿ ತಿಳಿಸಿ ಮಾತನಾಡಿದ ಜರ್ದಾರಿ, ಭಾರತವು ಬೇಜಾವಾಬ್ದಾರಿ ಮತ್ತು ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

  • ಕಷ್ಟದ ಸಮಯದಲ್ಲಿ ಜೊತೆಗಿರುತ್ತೇವೆ – ಪಾಕ್‌ಗೆ ಚೀನಾ ಬೆಂಬಲ

    ಕಷ್ಟದ ಸಮಯದಲ್ಲಿ ಜೊತೆಗಿರುತ್ತೇವೆ – ಪಾಕ್‌ಗೆ ಚೀನಾ ಬೆಂಬಲ

    – ಇತ್ತ ಭಾರತಕ್ಕೆ ರಷ್ಯಾ ಬೆಂಬಲ

    ಇಸ್ಲಾಮಾಬಾದ್‌/ಬೀಜಿಂಗ್‌: ಪಹಲ್ಗಾಮ್‌ನಲ್ಲಿ (Pahalgam) ಹಿಂದೂಗಳ ನರಮೇಧ ನಡೆದ ಬಳಿ ಭಾರತದ ಪ್ರತಿಕ್ರಮಕ್ಕೆ ಪಾಕಿಸ್ತಾನ ತತ್ತರಿಸಿದೆ. ಈ ನಡುವೆ ಚೀನಾ, ಪಾಕಿಸ್ತಾನಕ್ಕೆ ತನ್ನ ಬೆಂಬಲವನ್ನು ಮತ್ತೊಮ್ಮೆ ಖಚಿತಪಡಿಸಿದೆ. ಪಾಕಿಸ್ತಾನದಲ್ಲಿರುವ (Pakistan) ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್ (Jiang Zaidong), ಸಂಕಷ್ಟ ಸಮಯದಲ್ಲಿ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (Asif Ali Zardari) ಅವರನ್ನು ಭೇಟಿಯಾದ ಜೈಡಾಂಗ್‌, ಭಾರತದೊಂದಿಗೆ ನಡೆಯುತ್ತಿರುವ ಪರಿಸ್ಥಿತಿಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಇದೇ ವೇಳೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು ಚೀನಾ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ ಎಂದು ಅಭಯ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್

    ಭಾರತದ ಕ್ರಮಕ್ಕೆ ತತ್ತರಿಸಿದ ಪಾಕ್:‌
    ಇದೇ ವೇಳೆ ಪಾಕ್‌ನಲ್ಲಿರುವ ಚೀನಾ ರಾಯಭಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರತ ತೆಗೆದುಕೊಂಡ ಇತ್ತೀಚಿನ ಕ್ರಮಗಳ ಬಗ್ಗೆ ಆಸಿಫ್‌ ಅಲಿ ಜರ್ದಾರಿ ಕಳವಳ ವ್ಯಕ್ತಪಡಿಸಿದರು. ಭಾರತದ ಕ್ರಮಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅಪಾಯ ಉಂಟುಮಾಡಬಹುದು ಎಂದು ಆತಂಕಪಟ್ಟರು. ಇದನ್ನೂ ಓದಿ: ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

    ಇದಕ್ಕೂ ಮೊದಲು, ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು ಮತ್ತು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಆಗಲೂ ಚೀನಾ ಪಾಕ್‌ ನಡೆಗೆ ಬೆಂಬಲ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಭಾರತಕ್ಕೆ ರಷ್ಯಾ ಬೆಂಬಲ:
    ಪಾಕ್‌ ವಿರುದ್ಧ ತೆಗೆದುಕೊಳ್ಳುವ ಕ್ರಮಕ್ಕೆ ಭಾರತಕ್ಕೆ ಜಾಗತಿಕವಾಗಿ ಭಾರೀ ಬೆಂಬಲ ವ್ಯಕ್ತವಾಗ್ತಿದೆ. ಮಿತ್ರರಾಷ್ಟ್ರವಾಗಿರುವ ರಷ್ಯಾದಿಂದಲೂ ಉಗ್ರರ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಪಹ್ಲಗಾಮ್ ಉಗ್ರರ ದಾಳಿಯನ್ನು ಪುಟಿನ್ ಬಲವಾಗಿ ಖಂಡಿಸಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪುಟಿನ್ ಹೇಳಿದ್ದಾರೆಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

  • ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

    ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

    ನವದೆಹಲಿ: ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತದ ಮೂರು ಸೇನೆಗೆ ಸಮರಭ್ಯಾಸವನ್ನು ಶುರು ಮಾಡಿದ್ದು ಈ ನಡುವೆ ಪಾಕಿಸ್ತಾನವು ಫತಾಹ್ ಕ್ಷಿಪಣಿಯನ್ನು (Pakistan Missile) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ವರದಿಗಳು ತಿಳಿಸಿವೆ. ಈ ಕ್ಷಿಪಣಿಯು 120 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.

    ಪಾಕಿಸ್ತಾನದ ಸೇನೆಯು (Pakistan Army) ಈ ಕ್ಷಿಪಣಿಯನ್ನು ಗೌಪ್ಯ ಸ್ಥಳದಿಂದ ಉಡಾಯಿಸಿದೆ. ಫತಾಹ್ ಕ್ಷಿಪಣಿಯು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಶತ್ರು ಗುರಿಗಳನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಪರೀಕ್ಷೆಯು ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು – ಪಾಕ್‌ನಲ್ಲಿರುವ ಪಶ್ತೂನ್‌ ಮುಸ್ಲಿಮರಿಗೆ ಕರೆ

    s 400 triumf india 1

    ಈ ಕ್ಷಿಪಣಿ ಪರೀಕ್ಷೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಮತ್ತು ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಡೆದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಎರಡೂ ದೇಶಗಳು ತಮ್ಮ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯು ಪ್ರಾದೇಶಿಕ ಭದ್ರತೆಯ ಬಗ್ಗೆ ಹೊಸ ಆತಂಕಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಪಾಕಿಸ್ತಾನದ ಸೇನಾ ವಕ್ತಾರರೊಬ್ಬರು ಈ ಪರೀಕ್ಷೆಯನ್ನು ರಕ್ಷಣಾತ್ಮಕ ಕಾರ್ಯತಂತ್ರದ ಭಾಗ ಎಂದು ವಿವರಿಸಿದ್ದಾರೆ. ಈ ಕ್ಷಿಪಣಿಯು ದೇಶದ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈ ಪರೀಕ್ಷೆಯ ಸಮಯವು ಭಾರತದೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆ ಜೋರಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ – ಮುಂದಿನ ಸಿಜೆಐ ಪೀಠಕ್ಕೆ ಅರ್ಜಿ ವರ್ಗಾವಣೆ

  • ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    – ಪಾಕ್, ಬಾಂಗ್ಲಾ ಗಡಿಯಲ್ಲಿ ಪ್ರಾದೇಶಿಕ ಕಚೇರಿ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಇದೀಗ ಭಾರತದ ಗಡಿ ಭದ್ರತಾ ಪಡೆಗೆ (BSF) ಇನ್ನುಷ್ಟು ಬಲ ಬಂದಿದ್ದು, 16 ಹೊಸ ಬೆಟಾಲಿಯನ್‌ಗಳು (battalions) ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

    ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದು, ಬಿಎಸ್‌ಎಫ್‌ಗೆ 16 ಹೊಸ ಬೆಟಾಲಿಯನ್‌ಗಳು ಮತ್ತು ಭಾರತ ಪಾಕ್ ಮತ್ತು ಭಾರತ ಬಾಂಗ್ಲಾ ಗಡಿಯಲ್ಲಿ ಒಂದೊಂದರಂತೆ ಎರಡು ಹೊಸ ಪ್ರಾದೇಶಿಕ ಪ್ರಧಾನ ಕಚೇರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡಲಿದೆ. ಜೊತೆಗೆ ಬೆಟಾಲಿಯನ್‌ಗಳಲ್ಲಿ ಸುಮಾರು 17,000 ಹೊಸ ಸೈನಿಕರನ್ನು ನೇಮಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತು 2020-21ರಲ್ಲಿ ಬಿಎಸ್‌ಎಫ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಇದನ್ನೂ ಓದಿ: 30 ನಿಮಿಷ ಲೈಟ್ ಆಫ್ – ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್

    ಈ ಕುರಿತು ಭದ್ರತಾ ಪಡೆ ಮಾಹಿತಿ ನೀಡಿದ್ದು, ಪ್ರಸ್ತುತ ಈ ಅರೆಸೇನಾಪಡೆಯು 193 ಬೆಟಾಲಿಯನ್‌ಗಳನ್ನು ಹೊಂದಿದ್ದು, ಒಂದು ಬೆಟಾಲಿಯನ್ 1,000 ಮಂದಿಗೂ ಹೆಚ್ಚು ಯೋಧರನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡುತ್ತಿದ್ದಂತೆ ಬಿಎಸ್‌ಎಫ್ ಮಹಿಳಾ ಹಾಗೂ ಪುರುಷ ಸಿಬ್ಬಂದಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ.

    ಕಳೆದ ವರ್ಷ ಬಾಂಗ್ಲಾದೇಶದಲ್ಲಿ (Bangladesh) ಶೇಖ್ ಹಸೀನಾ ಸರ್ಕಾರದ ಪತನ ಹಾಗೂ ಏ.22ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ಬಿಎಸ್‌ಎಫ್‌ಗೆ ಬಲ ಹೆಚ್ಚಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆ ಸೇರಿದಂತೆ ಕೆಲವು ಅಂತಿಮ ಅನುಮೋದನೆಗಳು ಬಾಕಿಯಿದ್ದು, ಶೀಘ್ರದಲ್ಲೇ ಮಂಜೂರಾಗುವ ನಿರೀಕ್ಷೆಯಿದೆ.

    ಜಮ್ಮು ಮತ್ತು ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಲು ಜಮ್ಮುವಿನಲ್ಲಿ ಒಂದು ವಲಯ ಹಾಗೂ ಬಾಂಗ್ಲಾದೇಶ ಗಡಿಯ ಉತ್ತಮ ಕಣ್ಗಾವಲುಗಾಗಿ ಎರಡನೇ ವಲಯ ಮಿಜೋರಾಂನಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತ: ತಸ್ಲಿಮಾ ನಸ್ರೀನ್‌

  • ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ರಜೆ ರದ್ದು – ಅತ್ತ DRDOದಿಂದ ಏರ್‌ಶಿಪ್‌ ಪ್ರಯೋಗ ಯಶಸ್ವಿ

    ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ರಜೆ ರದ್ದು – ಅತ್ತ DRDOದಿಂದ ಏರ್‌ಶಿಪ್‌ ಪ್ರಯೋಗ ಯಶಸ್ವಿ

    ನವದೆಹಲಿ: ಗಡಿಯಲ್ಲಿ ದಿನೇ ದಿನೇ ಉದ್ವಿಗ್ನ ಹೆಚ್ಚಾಗ್ತಿರೋ ಕಾರಣ ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದುಗೊಳಿಸಲಾಗಿದೆ. ದೇಶದಲ್ಲಿರುವ 12 ಶಸ್ತ್ರಾಸ್ತ್ರ ಕಾರ್ಖಾನೆಗಳ (Arms Factory) ಸಮೂಹ ಎಂಐಎಲ್ ಸಿಬ್ಬಂದಿಗೆ ಸುದೀರ್ಘ ರಜೆಗೆ ಬ್ರೇಕ್ ಹಾಕಲಾಗಿದೆ.

    ಕಾರ್ಖಾನೆಯ ಸಿಬ್ಬಂದಿ ಮುಂದಿನ 2 ತಿಂಗಳವರೆಗೆ 2 ದಿನಗಳಿಗಿಂತ ಹೆಚ್ಚು ರಜೆ ತೆಗೆದುಕೊಳ್ಳುವಂತಿಲ್ಲ. ಯುದ್ಧದ ಸನ್ನಿವೇಶ ಇರೋ ಹಿನ್ನೆಲೆ ಹೆಚ್ಚು ಶಸ್ತ್ರಾಸ್ತ್ರ ತಯಾರಿಕೆ & ದೇಶದ ಭದ್ರತೆ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಇನ್ನು ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಡಿಆರ್‌ಡಿಓದಿಂದ ಏರ್‌ಶಿಪ್ (Airship) ಯಶಸ್ವಿ ಪ್ರಯೋಗ ನಡೆಸಿದೆ. ಇದನ್ನೂ ಓದಿ: ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    ಇದು 17 ಕಿಲೋ ಮೀಟರ್ ಎತ್ತರಕ್ಕೆ ವಾಯುನೌಕೆ ಮೊದಲ ಹಾರಾಟ ನಡೆಸಿದೆ. ಭೂಮಿಯ ವೀಕ್ಷಣೆ, ಗುಪ್ತಚರ, ಕಣ್ಗಾವಲು, ಶತ್ರುಗಳ ಹುಡುಕಿ ಹೊಡೆಯಲು ಏರ್‌ಶಿಪ್ ಸಹಕಾರಿಯಾಗಲಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

    ಅತ್ತ ಭಾರತದ ದಾಳಿ ಆತಂಕದಲ್ಲಿರುವ ಪಾಕಿಸ್ತಾನ ಕೂಡ ಅಬ್ದಾಲಿ ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ನಡೆಸಿದೆ.

  • ಭಾರತ ತನ್ನ ಶತ್ರುಗಳಿಗೆ ತಕ್ಕ ಉತ್ತರ ನೀಡುತ್ತೆ – ಭದ್ರತೆಯ ಜವಾಬ್ದಾರಿ ನನ್ನದು ಎಂದ ರಾಜನಾಥ್ ಸಿಂಗ್

    ಭಾರತ ತನ್ನ ಶತ್ರುಗಳಿಗೆ ತಕ್ಕ ಉತ್ತರ ನೀಡುತ್ತೆ – ಭದ್ರತೆಯ ಜವಾಬ್ದಾರಿ ನನ್ನದು ಎಂದ ರಾಜನಾಥ್ ಸಿಂಗ್

    – ಮೋದಿ ಅವಧಿಯಲ್ಲಿ ನೀವು ಬಯಸಿದ್ದೆಲ್ಲವೂ ನಡೆಯುತ್ತೆ
    – 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದ ಸಚಿವ

    ನವದೆಹಲಿ: ಭಾರತದ ಮೇಲೆ ವಕ್ರದೃಷ್ಟಿ ಬೀರುವವರಿಗೆ ತಕ್ಕ ಉತ್ತರ ಕೊಡೋದು ನನ್ನ ಜವಾಬ್ದಾರಿ. ನಾನು ನಿಮಗೆ ಭರವಸೆ ನೀಡುತ್ತೇನೆ ಮೋದಿ (Modi) ಅವಧಿಯಲ್ಲಿ ನೀವು ಬಯಸಿದ್ದೆಲ್ಲವೂ ನಡೆಯುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪಾಕ್‌ ವಿರುದ್ಧ ಮತ್ತೆ ಗುಡುಗಿದ್ದಾರೆ.

    ದೆಹಲಿಯ ಬಕ್ಕರ್ವಾಲಾ ಆನಂದ್ ಧಾಮ್ ಆಶ್ರಮದಲ್ಲಿ ಸನಾತನ ಸಂಸ್ಕೃತಿ ಜಾಗರಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ (Pakistan) ಎಚ್ಚರಿಕೆ ನೀಡಿದರು ಮತ್ತು ರಕ್ಷಣಾ ಸಚಿವರಾಗಿ, ನನ್ನ ಸೈನಿಕರೊಂದಿಗೆ ದೇಶದ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಏನು ಬೇಕಾದರೂ ಆಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಭಾರತದ ಮೇಲೆ ವಕ್ರದೃಷ್ಟಿ ಬೀರುವವರಿಗೆ ತಕ್ಕ ಉತ್ತರ ಕೊಡೋದು ನನ್ನ ಜವಾಬ್ದಾರಿ. ನೀವೆಲ್ಲರೂ ನಮ್ಮ ಪ್ರಧಾನಿಯನ್ನ ಚೆನ್ನಾಗಿ ತಿಳಿದಿದ್ದೀರಿ, ಅವರ ಕಾರ್ಯಶೈಲಿ, ದೃಢಸಂಕಲ್ಪದ ಬಗ್ಗೆಯೂ ನಿಮಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ನಿಮಗೆ ಭರವಸೆ ನೀಡುತ್ತೇನೆ, ಮೋದಿ ಅವಧಿಯಲ್ಲಿ ನೀವು ಬಯಸಿದ್ದೆಲ್ಲವೂ ನಡೆಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್

    2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ:
    ಮುಂದುವರಿದು ಮಾತನಾಡಿದ ರಕ್ಷಣಾ ಸಚಿವರು, 2047ರ ವೇಳೆಗೆ ಭಾರತವನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಇದು ಸಾಮಾನ್ಯ ಗುರಿಯಲ್ಲ. ಆದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಾಗಿದೆ ಎಂಬ ಸತ್ಯವನ್ನು ನೀವೆಲ್ಲರೂ ಒಪ್ಪಿಕೊಳ್ಳೋದ್ರಿಂದ ಈ ಗುರಿ ಸಾಧಿಸಬಹುದು. ಭಾರತದ ದುರ್ಬಲ ದೇಶ, ಬಡವರ ದೇಶ ಅನ್ನುತ್ತಿದ್ದ ದೇಶಗಳೆಲ್ಲವು ಇಂದು ಭಾರತದ ಮಾತನ್ನು ಕಿವಿಗೊಟ್ಟು ಕೇಳುತ್ತವೆ ಎಂದು ಹೇಳಿದರು.

    25 ಟೂರಿಸ್ಟ್‌ ಗೈಡ್‌ಗಳ ವಿಚಾರಣೆ:
    ಸದ್ಯ ಪಹಲ್ಗಾಮ್‌ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಅನಂತನಾಗ್‌ನಲ್ಲಿ 25ಕ್ಕೂ ಹೆಚ್ಚು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳನ್ನು ವಿವಾರಣೆಗೆ ಒಳಪಡಿಸಿದೆ. ಜೊತೆಗೆ ಉಗ್ರರಿಗೆ ಸಹಾಯ ಮಾಡಿದ ಭೂಗತ ಕಾರ್ಮಿಕರನ್ನು ಪತ್ತೆಹಚ್ಚು ಕೆಲಸಕ್ಕೂ ಎನ್‌ಐಎ ಮುಂದಾಗಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

  • ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    – ಭಾರತದಲ್ಲಿ ಪಾಕ್‌ ಮಾಜಿ ಪ್ರಧಾನಿ ಬಾಯಿಗೆ ಬೀಗ

    ನವದೆಹಲಿ/ಇಸ್ಲಾಮಾಬಾದ್‌: ಪಹಲ್ಗಾಮ್ ದಾಳಿ (Pahalgam Terrorist Attack) ನಡೆದು ಎರಡು ವಾರ ಆಗ್ತಾ ಬಂತು. ಉಗ್ರರ ದಾಳಿಗೆ ಪಾಕ್ ವಿರುದ್ಧ ಭಾರತ (India) ಪ್ರತೀಕಾರದ ನಡೆ ಇಟ್ಟಿದೆ. ಉಗ್ರರ ದಾಳಿಯಲ್ಲಿ ತಮ್ಮ ಕೈವಾಡ ಇದ್ದರೂ ಪಾಕಿಸ್ತಾನ ಸಾಕ್ಷ್ಯ ಕೇಳುತ್ತಿದೆ.

    ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲ. ದಾಳಿಗೆ ಭಾರತ ಯಾವುದೇ ಆಧಾರ ನೀಡಿಲ್ಲ. ಪಾಕ್ ಪಾತ್ರದ ಆರೋಪ ನಿರಾಧಾರ ಅಂತ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮತ್ತೆ ಉದ್ಧಟತನ ಮೆರೆದಿದ್ದಾರೆ. ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, ಪಾಕ್ ಮೇಲೆ ದಾಳಿ ಮಾಡಿದ್ರೆ ಪರಮಾಣು ದಾಳಿ ಪ್ರಯೋಗ ಮಾಡಬೇಕಾಗುತ್ತೆ ಅಂತ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

    ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಸಿಂಧೂ ನದಿ ನೀರು ತಡೆಯಲು ಡ್ಯಾಂ ನಿರ್ಮಿಸಿದ್ರೆ ನಾಶಪಡಿಸ್ತಿವಿ ಅಂತ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತದೇ ಗೊಡ್ಡು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಪಾಕ್ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್, ಭಾರತ ಯುದ್ಧ ಮಾಡಿದ್ರೆ ನಾನು ಇಂಗ್ಲೆಂಡ್‌ಗೆ ಪಲಾಯನ ಮಾಡ್ತೇನೆ ಎಂದಿದ್ದಾರೆ. ಪಾಕ್ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿರೋದು ಪಾಕಿಸ್ತಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ನಾಳೆ ಪಾಕಿಸ್ತಾನ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದೆ.

    ಇಮ್ರಾನ್‌ ಖಾನ್‌ ಬಾಯಿಗೆ ಬೀಗ:
    ಉಗ್ರ ಬೆಂಬಲಿತ ಪಾಕಿಸ್ತಾನದ ವಿರುದ್ಧ ಭಾರತದ ಪ್ರತೀಕಾರದ ಕ್ರಮಗಳು ಹೆಚ್ಚಾಗ್ತಿವೆ. ಪಾಕ್ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್‌ ಸಾರಿದೆ. ಭಾರತದ ಯುದ್ಧ ಭೀತಿ ಬಗ್ಗೆ ಪೋಸ್ಟ್ ಮಾಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಕ್ಸ್ ಖಾತೆಯನ್ನು ಭಾರತ ನಿರ್ಬಂಧಿಸಿದೆ. ಅಲ್ಲದೇ ಭಾರತದ ವಿರುದ್ಧ ರಕ್ತ ಕಾರಿದ್ದ ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ಎಕ್ಸ್ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ.

    ಈ ನಡುವೆ ಪಾಕಿಸ್ತಾನದ ವಿರುದ್ಧ ಅನೇಕ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಬಂದರುಗಳು, ಹಡಗು ಸಾಗಣೆ, ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಕೂಡ ಭಾರತೀಯ ಧ್ವಜ ವಾಹಕ ನೌಕೆಗಳು ತನ್ನ ಬಂದರು ಬಳಸುವುದನ್ನು ನಿಷೇಧಿಸಿದೆ.

  • 2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು

    2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು

    – 56 ಇಂಚಿನ ಎದೆಗಾರಿಕೆ ಅದೇನ್ ಕ್ರಮ ತೆಗೆದುಕೊಳ್ಳುತ್ತದೆ? ಅಂತ ಲೇವಡಿ

    ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರು 26 ಜನರ ಕೊಂದು ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಸಂಸದ, ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಚನ್ನಿ (Charanjit Singh Channi) 2019ರ ಬಾಲಾಕೋರ್ಟ್ ಸರ್ಜಿಕಲ್ ಸ್ಟ್ರೈಕ್‌ (Surgical Strikes) ಬಗ್ಗೆ ಸಾಕ್ಷ್ಯ ಕೇಳಿದ್ದಾರೆ.

    56 ಇಂಚಿನ ಎದೆಗಾರಿಕೆ (56-inch chest) ಅದೇನ್ ಕ್ರಮ ತೆಗೆದುಕೊಳ್ಳುತ್ತದೆ ಅಂತ ಇಡೀ ದೇಶವೇ ಎದುರು ನೋಡ್ತಿದೆ. ಪಾಕಿಸ್ತಾನದ ವಿರುದ್ಧ ನಾವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲೇಬೇಕು. ಒಂದು ದೇಶದಲ್ಲಿ ಬಾಂಬ್ ಹಾಕಿದರೆ ಅದು ಅಲ್ಲಿನ ಜನರಿಗೆ ಗೊತ್ತಾಗೋದಿಲ್ವೇ…? ಸರ್ಜಿಕಲ್ ಸ್ಟ್ರೈಕ್‌ಗೆ ಯಾವುದೇ ದಾಖಲೆ ಇಲ್ಲದಂತಾಗಿದೆ. ನಾನು ನನ್ನ ದೇಶವನ್ನು ನಂಬುತ್ತೇನೆ ಅಂದರೆ ಸುಮ್ಮನೆ ಕುರುಡನಂತೆ ನಂಬಬಾರದು ಅಲ್ವಾ..? ಬಾಲಾಕೋಟ್ ದಾಳಿ ಬಗ್ಗೆ ಅಂತಾರಾಷ್ಟ್ರೀಯವಾಗಿಯೂ ಏರ್‌ಸ್ಟ್ರೈಕ್‌ನಿಂದ ಸಾಧಿಸಿದ್ದೇನು ಅಂತ ಯಾರಿಗೂ ಏನೂ ಗೊತ್ತಾಗಿಲ್ಲ ಅಂತ ಹೇಳಿದ್ದಾರೆ.

    ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಟಕ್ಕರ್ ಕೊಟ್ಟಿದೆ. ಚನ್ನಿ ಆರೋಪಕ್ಕೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿದ್ದು, ನೀವು ರಾಹುಲ್ ಗಾಂಧಿ ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಪ್ರೂಫ್ ನೋಡ್ಕೊಂಡು ಬನ್ನಿ ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಬಳಿಕ ಫಸ್ಟ್‌ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ

    ನೀವು ಸೈನಿಕರ ನೈತಿಕತೆಗೆ ಆಘಾತ ತರುತ್ತಿದ್ದೀರಿ. ಕಾಂಗ್ರೆಸ್‌ನದ್ದು ಪಾಕಿಸ್ತಾನ ವರ್ಕಿಂಗ್ ಕಮಿಟಿ ಆಗಿದ್ದು, ಪಾಕಿಸ್ಥಾನಕ್ಕೆ ಆಕ್ಸಿಜನ್ ಸರಬರಾಜು ಮಾಡ್ತಿದ್ದೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸಭೆ