Tag: Padubidri

  • ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಉಡುಪಿ: ಹಳಿಯ ಕಬ್ಬಿಣ ಕದ್ದ ಆರೋಪದಲ್ಲಿ ಬಾಲಕರಿಗೆ ಸ್ಥಳದಲ್ಲೇ ಏಟು ನೀಡಿದ್ದಕ್ಕೆ ಕೊಂಕಣ ರೈಲ್ವೇ ಸಿಬ್ಬಂದಿ (Konkan Railway Employee) ವಿರುದ್ಧ ಕೇಸ್‌ ದಾಖಲಾಗಿದೆ.

    ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಹೋಗಿದ್ದನು. ಫೆ.15ರಂದು ಮಧ್ಯಾಹ್ನದ ವೇಳೆಗೆ ಇವರಿಬ್ಬರು ರೈಲು ಹಳಿಯ (Railway Track) ಕಬ್ಬಿಣದ ಲಾಕ್ ಮತ್ತು ತುಂಡುಗಳನ್ನು ಕದಿಯುತ್ತಿದ್ದರು.

    ಎಂದಿನಂತೆ ಪರೀಕ್ಷೆ ಮಾಡಲು ಹಳಿಯಲ್ಲಿ ಬರುತ್ತಿದ್ದಾಗ ರೈಲ್ವೇ ಗ್ಯಾಂಗ್‌ಮ್ಯಾನ್‌ ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕರನ್ನು ನೋಡಿದ್ದಾರೆ. ಸ್ಥಳದಲ್ಲಿ ಕಬ್ಬಿಣದ ತುಂಡುಗಳನ್ನು ನೋಡಿ ಶಾಕ್‌ ಆಗಿ “ಇಲ್ಲಿ ಏನು ಮಾಡುತ್ತಿದ್ದೀರಿ? ಹಳಿಯ ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದೀರಾ? ಯಾವ ಶಾಲೆಯಲ್ಲಿ ಓದುತ್ತಿದ್ದೀರಿ? ನಿಮ್ಮ ತಂದೆ ತಾಯಿ ಯಾರು” ಎಂದು ಪ್ರಶ್ನಿಸಿ ಕೋಲಿನಿಂದ ಒಬ್ಬನ ತಲೆಗೆ ಹಾಗೂ ಮತ್ತೋರ್ವನ ಕಾಲಿಗೆ ಹೊಡೆದಿದ್ದರು. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರ ಶವ ಪತ್ತೆ – I Am Sorry ಎಂದು ಬರೆದು ಪ್ರಾಣಬಿಟ್ಟ ಕುಟುಂಬ!

    ಇಬ್ಬರು ಬಾಲಕರಿಗೆ ಗದರಿಸುತ್ತಿರುವ ದೃಶ್ಯವನ್ನು ಗ್ಯಾಂಗ್‌ಮ್ಯಾನ್‌ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಈಗ ಕರಾವಳಿ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಕೇಸ್‌ ದಾಖಲು:
    ಇಡೀ ಘಟನೆಯ ವೀಡಿಯೋವನ್ನು ಮಾಡಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿ ಓರ್ವ ಬಾಲಕನ ತಂದೆ ರೈಲ್ವೇ ಸಿಬ್ಬಂದಿ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು ಈಗ ಪ್ರಕರಣ ದಾಖಲಾಗಿದೆ. ಪಡುಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ಅಪಘಾತದಲ್ಲಿ ಸಿಲುಕಿಕೊಂಡ ಕಾರನ್ನು ಕಿ.ಮೀ ಗಟ್ಟಲೆ ಎಳೆದುಕೊಂಡು ಹೋದ ಟಿಪ್ಪರ್ ಚಾಲಕ

    ಅಪಘಾತದಲ್ಲಿ ಸಿಲುಕಿಕೊಂಡ ಕಾರನ್ನು ಕಿ.ಮೀ ಗಟ್ಟಲೆ ಎಳೆದುಕೊಂಡು ಹೋದ ಟಿಪ್ಪರ್ ಚಾಲಕ

    – ಬೆನ್ನಟ್ಟಿ ಬೈದ ನಂತರ ಗೊತ್ತಾಯ್ತು ವಿಚಾರ

    ಉಡುಪಿ: ಅಪಘಾತವೊಂದರಲ್ಲಿ ಟಿಪ್ಪರ್ ಲಾರಿ (Tipper Lorry) ಹಿಂಭಾಗದಲ್ಲಿ ಸಿಲುಕಿಕೊಂಡಿದ್ದ ಕಾರನ್ನು (Car) ಕಿಲೋಮೀಟರ್ ಗಟ್ಟಲೆ ಎಳೆದೊಯ್ದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟಿಪ್ಪರ್ ಚಾಲಕನ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಮತ್ತು ಟಿಪ್ಪರ್ ಡಿಕ್ಕಿಯಾಗಿದೆ. ಉಡುಪಿ ಜಿಲ್ಲೆ ಬೆಳ್ಮಣ್‌ನಿಂದ ದಕ್ಷಿಣ ಕನ್ನಡ ಜಿಲ್ಲೆ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದೆ ಎಂಬುದು ಪ್ರಾಥಮಿಕ ಮಾಹಿತಿ. ಅಪಘಾತವಾಗುತ್ತಿದ್ದಂತೆ ವಾಹನದ ವೇಗ ಹೆಚ್ಚಿಸಿದ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕಾರು ಟಿಪ್ಪರ್ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ವಿಚಾರ ಚಾಲಕನ ಗಮನಕ್ಕೆ ಬಂದಿರಲಿಲ್ಲ.

    ಅಪಘಾತವಾಯ್ತು, ಸ್ಥಳೀಯರು, ಸಾರ್ವಜನಿಕರು ತನ್ನನ್ನು ಟಿಪ್ಪರ್‌ನಿಂದ ಇಳಿಸಿ ಎಳೆದಾಡಿ ಹೊಡೆಯಬಹುದು ಎಂಬ ಆತಂಕದಲ್ಲಿ ವೇಗವಾಗಿ ಚಾಲಕ ಟಿಪ್ಪರ್ ಓಡಿಸಿದ್ದಾನೆ. ಈ ವೇಳೆ ಸ್ಥಳೀಯರು ಟಿಪ್ಪರ್ ಅನ್ನು ಹಿಂಬಾಲಿಸಿಕೊಂಡು ಬಂದು ಬೈದು ಹೇಳಿದ ನಂತರ ಚಾಲಕ ಲಾರಿಯನ್ನು ನಿಲ್ಲಿಸಿದ್ದಾನೆ. ಟಿಪ್ಪರ್‌ನ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ತನಗೆ ಗೊತ್ತಿರಲಿಲ್ಲ ಎಂದು ಚಾಲಕ ಹೇಳಿದ್ದಾನೆ. ಟಿಪ್ಪರ್ ಅನ್ನು ಪಡುಬಿದ್ರಿ ಪೊಲೀಸರು (Padubidri Police) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ – ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಘಟನೆಯಲ್ಲಿ ಕಾರಿನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದೆ. ಗಾಯಾಳುಗಳನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದು ಕೇಸ್ ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Mobile Ban – ಇನ್ನು ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಸುವಂತಿಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನರ್ಸ್‍ಗೆ ಜೀವ ಬೆದರಿಕೆ ಹಾಕಿದ ಪುಂಡರು

    ನರ್ಸ್‍ಗೆ ಜೀವ ಬೆದರಿಕೆ ಹಾಕಿದ ಪುಂಡರು

    ಉಡುಪಿ: ಕೋವಿಡ್-19ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ನರ್ಸ್‍ಗಳಿಗೆ ವಿದೇಶದಲ್ಲಿ ವಿಭಿನ್ನ ರೀತಿಯ ಧನ್ಯವಾದ, ಶುಭಾಶಯ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಕೆಲವು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಡಾಕ್ಟರ್‌ಗಳಿಗೆ ಧಮ್ಕಿ ಹಾಕುವ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

    ಕಾಪು ತಾಲೂಕಿನ ಪಡುಬಿದ್ರೆಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಧಮ್ಕಿ ಹಾಕಲಾಗಿದೆ. ನಿನ್ನನ್ನು ಫೀಲ್ಡ್ ನಲ್ಲಿ ನೋಡಿಕೊಳ್ಳುತ್ತೇನೆ. ಹೇಗೆ ಕೆಲಸ ಮಾಡುತ್ತೀಯಾ ನೋಡ್ಕೋತೇವೆ ಎಂದು ಮಮ್ತಾಜ್ ಮತ್ತು ಮನ್ಸೂರ್ ಎಂಬ ಕಿಡಿಗೇಡಿಗ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಶ್ಯಾಮಲಾ ಅವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಮ್ತಾಜ್ ಮತ್ತು ಮನ್ಸೂರ್ ನನ್ನು ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಮಮ್ತಾಜ್ ಮತ್ತು ಶ್ಯಾಮಲಾ ಅಕ್ಕಪಕ್ಕದ ಮನೆಯವರಾಗಿದ್ದು, ಮನ್ಸೂರು ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹತ್ತಾರು ಜನ ಬಂದು ತಂಗುತ್ತಿದ್ದರು. ಮನೆಗೆ ಕಳೆದ ಕೆಲ ದಿನಗಳಿಂದ ನೆಂಟರು ಬರುವ ಸಂಖ್ಯೆ ಜಾಸ್ತಿಯಾಗಿತ್ತು. ಶ್ಯಾಮಲಾ ಮತ್ತು ಆಶಾ ಕಾರ್ಯಕರ್ತೆಯರು ಈ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದರು. ಇದನ್ನು ಅವಮಾನ ಎಂದು ಪರಿಗಣಿಸಿದ ಮಮ್ತಾಜ್, ಶ್ಯಾಮಲಾರಿಗೆ ಧಮ್ಕಿ ಹಾಕಿದ್ದಾರೆ. ಆತಂಕಕಾರಿ ಬೆಳವಣಿಗೆ ಇದಾಗಿದ್ದು, ಪೊಲೀಸರು ರಕ್ಷಣೆ ನೀಡಬೇಕೆಂದು ಶ್ಯಾಮಲಾ ವಿನಂತಿ ಮಾಡಿದ್ದಾರೆ.

  • ಹೈವೇ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಿದ್ದಕ್ಕೆ ಪಡುಬಿದ್ರೆ, ಸಾಸ್ತಾನದಲ್ಲಿ ಪ್ರತಿಭಟನೆ

    -ಮುಂಜಾಗ್ರತ ಕ್ರಮವಾಗಿ ಗೇಟ್ 2 ಕಿಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿ

    ಉಡುಪಿ: ಜಿಲ್ಲೆಯ ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದೆ. ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ ಟೋಲ್ ಗೇಟ್ ವ್ಯಾಪ್ತಿಯ 2 ಕಿಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಉಡುಪಿಯಲ್ಲಿ ಹೈವೇ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆಯೇ ಟೋಲ್ ಸಂಗ್ರಹ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ವಿರುದ್ಧ ಸ್ಥಳೀಯ ಹೋರಾಟಗಾರರು ಸಿಡಿದೆದ್ದಿದ್ದಾರೆ. ಪರಿಸ್ಥಿತಿ ಕೈಮೀರಬಹುದು ಎಂಬ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ಮತ್ತು ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನಲ್ಲಿ ಫೆಬ್ರವರಿ 9 ರಿಂದ ಟೋಲ್ ಸಂಗ್ರಹ ಮಾಡಲು ಆರಂಭಿಸಿದ್ದು, ಈ ಸಂಬಂಧ ಪ್ರತಿಭಟನೆ, ಮುಷ್ಕರ, ಬಂದ್ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸೆಕ್ಷನ್ ಹಾಕಿರುವುದಾಗಿ ಹೇಳಿದ್ದಾರೆ.

    ಕುಂದಾಪುರ ಸಮೀಪದ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 10 ರ ಬೆಳಿಗ್ಗೆ 6 ರಿಂದ ಫೆಬ್ರವರಿ 15 ರ ಮಧ್ಯರಾತ್ರಿ 12 ಗಂಟೆಯವರಗೆ ಸೆಕ್ಷನ್ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೆಗೊಳಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿಗಳ ಮನವಿಯಂತೆ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಆಸ್ತಿ ಕಾಪಾಡುವ ಅವಶ್ಯಕತೆ ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಎಸ್.ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ.