Tag: Padmaja Rao

  • ಅಪರ್ಣಾ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟ ಪದ್ಮಜಾ ರಾವ್

    ಅಪರ್ಣಾ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟ ಪದ್ಮಜಾ ರಾವ್

    ನ್ನಡದ ನಟಿ, ನಿರೂಪಕಿ ಅಪರ್ಣಾ (Aparna) ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪರ್ಣಾ ಅಂತಿಮ ದರ್ಶನ ಪಡೆದಿರುವ ಪದ್ಮಜಾ ರಾವ್, ಅವರ ಜೊತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಟಿಯ ನಿಧನಕ್ಕೆ ಹಿರಿಯ ನಟಿ ಪದ್ಮಜಾ ರಾವ್ (Actress Padmaja Rao) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ:ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಪರ್ಣಾ ಅಂತ್ಯಕ್ರಿಯೆ

    ಅಪರ್ಣಾ ಜೊತೆ ಇದ್ದಾಗ ನಾವು ತುಂಬಾ ನಕ್ಕಿದ್ದೇವೆ. ಕೆಲವು ಸಂಬಂಧಗಳು ವೃತ್ತಿಯಲ್ಲಿ ಸಹಕಲಾವಿದರಾಗಿ ಉಳಿದುಕೊಳ್ಳುತ್ತೇವೆ. ಆದರೆ ಕೆಲವರು ಅದನ್ನು ದಾಟಿ ಮುಂದೆ ಹೋಗುತ್ತಾರೆ. ‘ಮೂಡಲ ಮನೆ’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಸೀರಿಯಲ್‌ನಲ್ಲಿ ಅಪರ್ಣಾ ಜೊತೆ ಕೆಲಸ ಮಾಡಿದ್ದೇನೆ. 20 ವರ್ಷಗಳ ಗೆಳೆತನ ನಮ್ಮದು. ಕೆಲಸ ಬಿಟ್ಟು ಪ್ರತ್ಯೇಕವಾಗಿ ಸಿಕ್ಕಿದ್ದೇವೆ. ಶಾಪಿಂಗ್ ಮಾಡಿದ್ದೇವೆ, ಜೊತೆಯಾಗಿ ಕಾಲ ಕಳೆದಿದ್ದೇವೆ ಎಂದು ಅಪರ್ಣಾ ನೆನೆದು ಪದ್ಮಜಾ ರಾವ್ ಭಾವುಕರಾಗಿದ್ದಾರೆ.

     

    View this post on Instagram

     

    A post shared by Padmaja Rao (@padmajarao.official)

    ಅಪರ್ಣಾ ನನ್ನ ತಂಗಿ ಹಾಗೆಯೇ ಆದರೆ ಅವಳ ಕೊನೆಯ ದಿನಗಳ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ನನಗೂ ಈ ವಿಚಾರ ತಿಳಿದಿರಲಿಲ್ಲ. ಈಗ ಅನಿಸುತ್ತೆ ಅದರಲ್ಲೂ ಅಪರ್ಣಾದು ದೊಡ್ಡ ಗುಣವಿದೆ. ಹೇಳಿಕೊಂಡರೆ ನಾವು ನೊಂದುಕೊಳ್ಳುತ್ತೇವೆ. ಅವಳ ಸಮಸ್ಯೆಯಂತೂ ನಾವು ಬಗೆಹರಿಸೋಕೆ ಸಾಧ್ಯವಿಲ್ಲ. ಯಾರ ನೋವು ಯಾರು ತೆಗೆದುಕೊಳ್ಳೋಕೆ ಆಗೋದಿಲ್ಲ. ಪಾಪ ಅದಕ್ಕೆ ಅವಳು ಈ ವಿಚಾರ ಯಾರಿಗೂ ತಿಳಿಸಲಿಲ್ಲ ಎಂದು ಪದ್ಮಜಾ ರಾವ್ ಮಾತನಾಡಿದ್ದಾರೆ. ನನ್ನ ಮತ್ತು ಅಪರ್ಣಾ ಸಂಬಂಧದಲ್ಲಿ ಇವತ್ತೇ ನಾನು ಇಷ್ಟು ಕಣ್ಣೀರು ಹಾಕ್ತಿರೋದು. ನಾವು ಯಾವತ್ತು ಅತ್ತು ಕರೆದು ಮಾಡಿಲ್ಲ ಎಂದಿದ್ದಾರೆ ಪದ್ಮಜಾ ರಾವ್.


    ನನಗೆ ಮೆಟ್ರೋದಲ್ಲಿ ಅಪರ್ಣಾ ವಾಯ್ಸ್ ಕೊಟ್ಟಿದ್ದಾರೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಹೇಳಿದಕ್ಕೆ ನಾನು ಮೆಟ್ರೋದಲ್ಲಿ ಓಡಾಡಿದೆ. ಬಳಿಕ ಅವಳಿಗೆ ಕಾಲ್ ಮಾಡಿದ್ದೆ. ನನಗೆ ಯಾಕೆ ಹೇಳಿಲ್ಲ. ಮೆಟ್ರೋಗೆ ವಾಯ್ಸ್ ಕೊಟ್ಟಿದ್ಯಾ ಅಂತ ಎಂದೆ. ಅದಕ್ಕೆ, ಅದರಲ್ಲಿ ಹೇಳೋಕೆ ಏನಿಲ್ಲ ಪದ್ದು ಅಂದರು. ಅಷ್ಟು ಸರಳ ವ್ಯಕ್ತಿ ಅಪರ್ಣಾ ಎಂದು ಪದ್ಮಜಾ ರಾವ್ ಗಳಗಳನೆ ಅತ್ತಿದ್ದಾರೆ.

  • ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ. ಅಂತಹ ರವಿಕೆಯ ಕುರಿತಾದ  ‘ರವಿಕೆ ಪ್ರಸಂಗ’ (Ravike Prasanga) ಎಂಬ  ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

    ನಮ್ಮ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ನನ್ನ ಪತ್ನಿ ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.  ‘ಬ್ರಹ್ಮ ಗಂಟು’ ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್ (Geeta Bharati Bhatt), ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್,  ಪದ್ಮಜಾರಾವ್ (Padmaja Rao) ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ “ರವಿಕೆ ಪ್ರಸಂಗ” ಚಿತ್ರದ ಮೊದಲ ಪ್ರತಿ ಸದ್ಯದಲ್ಲೇ ಬರಲಿದೆ. ವಿಭಿನ್ನ ಕಥೆಯ ಈ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದು ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಕೊಡೆಂಕೆರಿ (Santhosh Kodenkeri) ಮಾಹಿತಿ ನೀಡಿದರು.

    ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜೊತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿರುತ್ತದೆ. ಎಲ್ಲರ ಮನಸ್ಸಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಚಿತ್ರ ಪ್ರಿಯವಾಗಲಿದೆ ಎಂದರು ನಾಯಕಿ ಗೀತಾಭಾರತಿ ಭಟ್.

    ನಾನು ಇಪ್ಪತ್ತೈದು ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ನನ್ನ ಮನಸ್ಸಿಗೆ ಹತ್ತಿತವಾದ ಚಿತ್ರಗಳು ಕೆಲವು ಮಾತ್ರ. ಅದರಲ್ಲಿ ಈ ಚಿತ್ರ ಕೂಡ ಒಂದು ಎಂದರು ನಟಿ ಪದ್ಮಜಾರಾವ್. ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್, ಛಾಯಾಗ್ರಾಹಕ ಮುರಳಿಧರ್ ಎನ್, ಸಂಗೀತ ನಿರ್ದೇಶಕ ವಿನಯ್ ಶರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • ಅಕ್ಕ ತಂಗಿ ಬಾಂಧವ್ಯದ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಗೆ ಸುಷ್ಮಾ ನಾಯಕಿ

    ಅಕ್ಕ ತಂಗಿ ಬಾಂಧವ್ಯದ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಗೆ ಸುಷ್ಮಾ ನಾಯಕಿ

    ಸೀರಿಯಲ್ (Serial) ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಚ್ಚ ಹೊಸ ಧಾರಾವಾಹಿಯೊಂದು ಹೊಸ ಕಥೆಯೊಂದಿಗೆ ಮನೆ ಮಂದಿಗೆಲ್ಲ ಮನರಂಜನೆ ನೀಡಲು ರೆಡಿಯಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ (Bhagyalakshmi) ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿದೆ.  ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾಬಳಗವನ್ನು ಹೊಂದಿದ್ದು, ಇಡೀ ತಂಡ ಇಂದು ಮಾಧ್ಯಮದೆದುರು ಹಾಜರಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

    ಅಕ್ಕತಂಗಿಯ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ (Sushma) ಕಥಾ ನಾಯಕಿಯಾಗಿ  ನಟಿಸುತ್ತಿದ್ದು,  ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ (Shamanth Gowda)(ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್ (Padmaja Rao), ಭೂಮಿಕ, ತಾಂಡವ ಸೂರ್ಯವಂಶಿ  ತಾರಾಬಳಗದಲ್ಲಿದ್ದಾರೆ. ಈ ಧಾರಾವಾಹಿ ಮೂಲಕ ಬಿಗ್ ಬಾಸ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಸುಷ್ಮಾ ಮಾತನಾಡಿ ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷದ ನಂತರ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರು ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತಮುತ್ತಲಿನವರನ್ನು ಖುಷಿಯಿಂದ ಇಡುವುದು, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರೋ ಹೆಣ್ಣು ಮಗಳ ಪಾತ್ರ. ತನ್ನ ಪ್ರೀತಿಯ ತಂಗಿಗೆ ಒಳ್ಳೆಯ ವರನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕು ಆಕೆ ಖುಷಿಯಿಂದ ಇರಬೇಕು ಎಂಬ ಉದ್ದೇಶ ಇರುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ತಿಳಿಸಿಕೊಟ್ರು.

    ಹಿರಿಯ ಕಲಾವಿದೆ ಪದ್ಮಜಾ ರಾವ್ ಮಾತನಾಡಿ ಈ ಧಾರಾವಾಹಿಯಲ್ಲಿ ನನ್ನದು ಅತ್ತೆ ಪಾತ್ರ. ಇಲ್ಲಿ ನಾನು ಗಟ್ಟಿಗಿತ್ತಿಯಾದ ಅತ್ತೆ ಪಾತ್ರ ನಿರ್ವಹಿಸುತ್ತಿದ್ದೇನೆ. ಜೋರು ಮಾಡುವ, ಗದರುವ ಪಾತ್ರ ನನ್ನದು. ಇಲ್ಲಿವರೆಗೂ ಸಾಪ್ಟ್ ಕ್ಯಾರೆಕ್ಟರ್ ಮಾಡಿದ್ದ ನನಗೂ ಬದಲಾವಣೆ ಬೇಕಿತ್ತು ಈ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ. ಆರಂಭದಲ್ಲಿ  ಪಾತ್ರಕ್ಕೆ ಒಗ್ಗಿಕೊಳ್ಳಲು ಮುರ್ನಾಲ್ಕು ದಿನ ಬೇಕಾಯಿತು ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದ್ರು. ಕಲರ್ಸ್ ಫಿಕ್ಷನ್ ಹೆಡ್ ಜೆಡಿ ಮಾತನಾಡಿ ಭಾಗ್ಯಲಕ್ಷ್ಮೀ ಸಂಬಂಧಗಳ ಬೆಲೆಯನ್ನು ಸಾರುವ ಧಾರಾವಾಹಿ. ನಾವು ಯಾವಾಗಲೂ ಒಂದೇ ಜಾನರ್ ಧಾರಾವಾಹಿ ಮಾಡೋದಿಲ್ಲ. ಪ್ರತಿ ಭಾರೀ ಹೊಸತನ್ನು ಕೊಡಲು ನಮ್ಮ ತಂಡ ಪ್ರಯತ್ನಿಸುತ್ತಿರುತ್ತೇವೆ. ಸಂಬಂಧಗಳ ಮೇಲೆ ಬರೆದಿರುವ  ಅಕ್ಕತಂಗಿಯರ ಕಥೆ ಇದು. ವಿಭಿನ್ನ ಕಥಾಹಂದರವಿದೆ. ಖಂಡಿತ ಒಂದು ಹೊಸ ಅನುಭವವನ್ನು ವೀಕ್ಷಕರಿಗೆ ಇದು ನೀಡಲಿದೆ ಎಂದು ಸೀರಿಯಲ್ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    Live Tv
    [brid partner=56869869 player=32851 video=960834 autoplay=true]

  • ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

    ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

    ಮಂಗಳೂರು: ಚಂದನವನದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.

    ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ವಾರಂಟ್‍ನ್ನು ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದ್ದು, ಪದ್ಮಜಾ ರಾವ್ ರವರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

    ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‍ನಿಂದ ಪದ್ಮಜಾ ರಾವ್ ಹಂತ ಹಂತವಾಗಿ ಸುಮಾರು ನಲವತ್ತೊಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಯ ಮೂಲಕ ಸಾಲ ಪಡೆದುಕೊಂಡಿದ್ದು, ಈ ಸಾಲದ ಭದ್ರತೆಗಾಗಿ ನಲ್ವತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿದ್ದರು.