Tag: padma priya

  • ಕೊನೆಗೂ ರಿವೀಲ್ ಆಯ್ತು ನಿತ್ಯಾ ಮೆನನ್- ಪಾರ್ವತಿ ಪ್ರೆಗ್ನೆನ್ಸಿ ಸೀಕ್ರೆಟ್‌

    ಕೊನೆಗೂ ರಿವೀಲ್ ಆಯ್ತು ನಿತ್ಯಾ ಮೆನನ್- ಪಾರ್ವತಿ ಪ್ರೆಗ್ನೆನ್ಸಿ ಸೀಕ್ರೆಟ್‌

    ಹುಭಾಷಾ ನಟಿ ಪಾರ್ವತಿ(Parvathy) ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ(Pregancy) ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇದೇ ರೀತಿ ನಿತ್ಯಾ ಮೆನನ್(Nithya Menon) ಕೂಡ ಪೋಸ್ಟ್ ಮಾಡಿದ್ದರು. ಇದೀಗ ಈ ಬಗ್ಗೆ ಇಬ್ಬರೂ ನಟಿಯರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Parvathy Thiruvothu (@par_vathy)

    ಕನ್ನಡದ `ಮಿಲನ'(Milana) ಮತ್ತು `ಮೈನಾ’ (Myna) ಚಿತ್ರದ ನಾಯಕಿಯರಾದ ನಿತ್ಯಾ ಮೆನನ್(Nithya Menon) ಮತ್ತು ಪಾರ್ವತಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇಬ್ಬರೂ ಪ್ರೆಗ್ನೆನ್ಸಿ ಪೋಸ್ಟ್ ಹಾಕಿದ ಮೇಲಂತೂ ಇವರದ್ದೇ ಸಮಾಚಾರ. ಮದುವೆಯಾಗದೇ ಗರ್ಭಿಣಿಯಾದ್ರಾ ಎಂಬ ಚರ್ಚೆ ಕೂಡ ನಡೆದಿತ್ತು. ಇದೀಗ ಈ ಗಾಸಿಪ್‌ಗೂ ತೆರೆ ಬಿದ್ದಿದೆ. ನಿತ್ಯಾ ಮತ್ತು ಪಾರ್ವತಿ `ವಂಡರ್ ವುಮೆನ್’ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

     

    View this post on Instagram

     

    A post shared by Nithya Menen (@nithyamenen)

    ಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ(Wonder Women) ನಿತ್ಯಾ, ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಳೆಯರು ಎದುರಿಸುವ ಸವಾಲಿನ ಬಗ್ಗೆ ತೆರೆಯ ಮೇಲೆ ತೋರಿಸಲು ಚಿತ್ರತಂಡ ರೆಡಿಯಾಗಿದ್ದಾರೆ.

     

    View this post on Instagram

     

    A post shared by Nithya Menen (@nithyamenen)

    `ವಂಡನ್ ವುಮೆನ್’ ಗರ್ಭಿಣಿಯರ ಕುರಿತ ಈ ಕಥೆ,  ನವೆಂಬರ್ 18ರಂದು ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]