Tag: Padma Awards 2025

  • ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಟ ಅಜಿತ್ ಕುಮಾರ್ (Ajith Kumar), ಬಾಲಯ್ಯ, ಸಿಂಗರ್ ಅರಿಜಿತ್ ಸಿಂಗ್, ಶೇಖರ್ ಕಪೂರ್ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು (ಏ.28) ಪದ್ಮ ಪ್ರಶಸ್ತಿ ಪ್ರದಾನ (Padma Awards 2025) ಮಾಡಿದ್ದಾರೆ. ಇದನ್ನೂ ಓದಿ:ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

    ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ತಮಿಳು ನಟ ಅಜಿತ್ ಕುಮಾರ್ ಮತ್ತು ತೆಲುಗು ನಟ ಬಾಲಯ್ಯ (Balayya) ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

    ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:

    ದಿವಂಗತ ಗಾಯಕ ಪಂಕಜ್ ಉದಾಸ್- ಪದ್ಮಭೂಷಣ

    ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್-ಪದ್ಮಭೂಷಣ

    ಕನ್ನಡದ ನಟ ಅನಂತ್ ನಾಗ್- ಪದ್ಮಭೂಷಣ

    ನಟ ಅಶೋಕ್ ಲಕ್ಷ್ಮಣ್ ಸರಾಫ್- ಪದ್ಮಶ್ರೀ

    ನಟನಾ ತರಬೇತುದಾರ, ರಂಗ ನಿರ್ದೇಶಕ ಬ್ಯಾರಿ ಗಾಡ್ಫ್ರೇ ಜಾನ್-ಪದ್ಮಶ್ರೀ

    ಗಾಯಕ ಜಸ್ಪಿಂದರ್ ನರುಲಾ- ಪದ್ಮಶ್ರೀ

    ಗಾಯಕಿ ಅಶ್ವಿನಿ ಭಿಡೆ-ದೇಶಪಾಂಡೆ-ಪದ್ಮಶ್ರೀ

    ಸಂಗೀತ ಸಂಯೋಜಕ ರಿಕಿ ಗ್ಯಾನ್ ಕೇಜ್-ಪದ್ಮಶ್ರೀ

    ಜಾನಪದ ಗಾಯಕ ಭೇರು ಸಿಂಗ್ ಚೌಹಾಣ್-ಪದ್ಮಶ್ರೀ

    ಭಕ್ತಿ ಗಾಯಕ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ-ಪದ್ಮಶ್ರೀ

    ಜಾನಪದ ಸಂಗೀತಗಾರ ಜೋಯ್ನಾಚರಣ್ ಬಠಾರಿ-ಪದ್ಮಶ್ರೀ

    ಶಾಸ್ತ್ರೀಯ ಗಾಯಕಿ ಕೆ ಓಮನಕುಟ್ಟಿ ಅಮ್ಮ-ಪದ್ಮಶ್ರೀ

    ಗಾಯಕ ಮಹಾಬೀರ್ ನಾಯಕ್ – ಪದ್ಮಶ್ರೀ

    ಮಮತಾ ಶಂಕರ್ – ಪದ್ಮಶ್ರೀ

  • 139 ಸಾಧಕರಿಗೆ ಪದ್ಮ ಪ್ರಶಸ್ತಿ – ಕರ್ನಾಟಕದ ನವತಾರೆಗಳಿಗೂ ಗೌರವ

    139 ಸಾಧಕರಿಗೆ ಪದ್ಮ ಪ್ರಶಸ್ತಿ – ಕರ್ನಾಟಕದ ನವತಾರೆಗಳಿಗೂ ಗೌರವ

    ನವದೆಹಲಿ: 76ನೇ ಗಣರಾಜ್ಯೋತ್ಸವಕ್ಕೆ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು(Padma awards 2025) ಕೇಂದ್ರ ಸರ್ಕಾರ ಪ್ರಕಟಿಸಲಾಗಿದೆ. ತೆರೆಮರೆಯಲ್ಲಿದ್ದ 30 ಸಾಧಕರೂ ಸೇರಿ 139 ಸಾಧಕರ ಪಟ್ಟಿಯನ್ನು ಪಟ್ಟಿಯನ್ನು ಪ್ರಕಟಿಸಲಾಗಿದೆ.

    ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌ ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಮಾಜಿ ಕ್ರಿಕೆಟಿಗ ಆರ್‌. ಅಶ್ವಿನ್‌ ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 7 ಜನರಿಗೆ ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಶಸ್ತಿ ಪಟ್ಟಿ ಹೊಂದಿದೆ.

    ಭಾರತಕ್ಕೆ ಮಾರುತಿ ಸುಝುಕಿ ಕಾರು ಪರಿಚಯಿಸಿದ ಜಪಾನ್‌ ಉದ್ಯಮಿ ಒಸಾಮು ಸುಜುಕಿ, ಮಲಯಾಳಂ ಸಾಹಿತ್ಯದ ದಂತಕಥೆ ಎಂ.ಟಿ ವಾಸುದೇವನ್ ನಾಯರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.

    30 ತೆರೆಮರೆ ಸಾಧಕರಿಗೆ ಪದ್ಮಶ್ರೀ
    2025ರ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಎಲೆಮರೆ ಕಾಯಿಯಂತಿದ್ದ 30 ಮಂದಿ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ರೆಜಿಲ್‌ನ ಹಿಂದೂ ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ, ಭಾರತದ ಪರಂಪರೆಯ ಬಗ್ಗೆ ಸಾಹಿತ್ಯ ಕೃಷಿ ಮಾಡಿರುವ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ದಂಪತಿಗಳು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಭಕ್ತಿ ಗಾಯಕ ಭೇರು ಸಿಂಗ್ ಚೌಹಾಣ್, ಪತ್ರಕರ್ತ ಭೀಮ್ ಸಿಂಗ್ ಭವೇಶ್, ಕಾದಂಬರಿಕಾರ ಜಗದೀಶ್ ಜೋಶಿಲಾ, ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನೀರ್ಜಾ ಭಟ್ಲಾ ಮತ್ತು ಕುವೈತ್‌ನ ಯೋಗಪಟು ಶೈಖಾ ಎಜೆ ಅಲ್ ಸಬಾ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ 100 ವರ್ಷದ ಲಿಬಿಯಾ ಲೋಬೋ, ಪುರುಷ ಪ್ರಧಾನವಾಗಿದ್ದ ಢಾಕ್ ವಾದ್ಯದಲ್ಲಿ 150 ಮಹಿಳೆಯರಿಗೆ ತರಬೇತಿ ನೀಡಿ ಕ್ರಾಂತಿ ಮಾಡಿದ ಪಶ್ಚಿಮ ಬಂಗಾಳದ ಢಾಕ್ ವಾದಕ ಗೋಕುಲ ಚಂದ್ರ ಡೇ (57), ಅಳಿವಿನಂಚಿನಲ್ಲಿದ್ದ ಮಾಹೇಶ್ವರಿ ಕ್ರಾಫ್ಟ್ ಅನ್ನು ಉಳಿಸುವುದಕ್ಕೋಸ್ಕರ ಮಧ್ಯಪ್ರದೇಶದ ಮಹೇಶ್ವರದಲ್ಲಿ ಕೈಮಗ್ಗ ಶಾಲೆಯನ್ನು ಪ್ರಾರಂಭಿಸಿ, ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದ ಸೈಲಿ ಹೋಳ್ಕರ್ (82) ಅವರು ಸಹ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಕರ್ನಾಟಕದ ನವತಾರೆಗಳಿಗೆ ಪ್ರಶಸ್ತಿ
    ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ್ದು, ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

    ಪದ್ಮವಿಭೂಷಣ: ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ.

    ಪದ್ಮಭೂಷಣ: ಸ್ಯಾಂಡಲ್‌ವುಡ್‌ ಹಿರಿಯ ನಟ ಅನಂತನಾಗ್‌, ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಎ.ಸೂರ್ಯಪ್ರಕಾಶ್‌ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ

    ಪದ್ಮಶ್ರೀ: ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ವೈದ್ಯಕೀಯ ಕ್ಷೇತ್ರದ ವಿಜಯಲಕ್ಷ್ಮಿ ದೇಶಮಾನೆ, ಕಲಾ ಕ್ಷೇತ್ರದಲ್ಲಿ ವೆಂಕಪ್ಪ ಅಂಬಾಜಿ, ಹಾಸನ ರಘು, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಶಾಂತ್‌ ಪ್ರಕಾಶ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

  • ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

    ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

    ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

    ಪದ್ಮವಿಭೂಷಣ
    ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ.

    ಪದ್ಮಭೂಷಣ
    ಸ್ಯಾಂಡಲ್‌ವುಡ್‌ ಹಿರಿಯ ನಟ ಅನಂತನಾಗ್‌, ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಎ.ಸೂರ್ಯಪ್ರಕಾಶ್‌ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪದ್ಮಶ್ರೀ
    ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ವೈದ್ಯಕೀಯ ಕ್ಷೇತ್ರದ ವಿಜಯಲಕ್ಷ್ಮಿ ದೇಶಮಾನೆ, ಕಲಾ ಕ್ಷೇತ್ರದಲ್ಲಿ ವೆಂಕಪ್ಪ ಅಂಬಾಜಿ, ಹಾಸನ ರಘು, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಶಾಂತ್‌ ಪ್ರಕಾಶ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.