Tag: Padma Award

  • ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    – ಪ್ರಶಸ್ತಿ ಪಡೆದ ಕನ್ನಡದ ಸಾಧಕರಿವರು..

    ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್‌ ನಾಗ್‌‌ (Anant Nag), ರಿಕಿ ಕೇಜ್‌ (Ricky Kej), ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.

    ಕನ್ನಡದ ಹಿರಿಯ ನಟ ಅನಂತ ನಾಗ್‌, ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್‌, ಉದ್ಯಮಿ ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

    ಅನಂತ್ ನಾಗ್
    ಕನ್ನಡ ಚಲನಚಿತ್ರ ರಂಗದ ಹಿರಿಯ ನಟರಾಗಿ ಅನಂತ್‌ ನಾಗ್‌ ಖ್ಯಾತಿ ಗಳಿಸಿದ್ದಾರೆ. ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಮತ್ತು ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಧನೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿತು.

    ರಿಕಿ ಕೇಜ್‌
    ಡಾ. ರಿಕಿ ಗ್ಯಾನ್‌ ಕೇಜ್ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿ. ಅವರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ನಾಲ್ಕು ಬಾರಿ ಗ್ರ್ಯಾಮಿ ನಾಮನಿರ್ದೇಶಿತರು.

    ಪ್ರಶಾಂತ್‌ ಪ್ರಕಾಶ್‌
    90ರ ದಶಕದ ಮಧ್ಯಭಾಗದಿಂದ ಭಾರತದ ಉದ್ಯಮಶೀಲತೆ ಮತ್ತು ಲೋಕೋಪಕಾರಿ ಭೂದೃಶ್ಯವನ್ನು ವ್ಯಾಖ್ಯಾನಿಸುವಲ್ಲಿ ಪ್ರಶಾಂತ್ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ನವೋದ್ಯಮ ಕ್ಷೇತ್ರದಲ್ಲಿನ ಕಾರ್ಯತಂತ್ರದ ಮಧ್ಯಪ್ರವೇಶಗಳಿಗೆ ಹೆಸರುವಾಸಿಯಾಗಿದ್ದಾರೆ. ಇಂದು ಶತಕೋಟಿ ಮೌಲ್ಯದ ಸ್ವದೇಶಿ, ಉನ್ನತ-ಬೆಳವಣಿಗೆಯ ಉದ್ಯಮಗಳನ್ನು ಬೆಂಬಲಿಸುತ್ತಿದ್ದಾರೆ.

    ಡಾ. ವೆಂಕಪ್ಪ ಅಂಬಾಜಿ ಸುಗಟೇಕರ್
    ಡಾ.ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಕರ್ನಾಟಕದ ವಿಶಿಷ್ಟ ಗೋಂಧಳಿ ಜಾನಪದ ಕಲಾವಿದರು. ಅವರು ಏಳು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಗೊಂಧಳಿ ಜಾನಪದ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನೀಡಿದ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಅಸಾಧಾರಣ ಸ್ಮರಣ ಶಕ್ತಿಯನ್ನು ಹೊಂದಿದ್ದಾರೆ. ದಾಸರ ಪದ, ಸಂತ ಶಿಶುನಾಳ ಶರೀಫರ ಪದ, ವಚನ ಸಾಹಿತ್ಯ, ದೇವಿ ಪದ ಸೇರಿದಂತೆ ಸಾವಿರಾರು ಜಾನಪದ ಹಾಡುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉರ್ದುಗೆ 100 ಕೋಟಿ – ಕನ್ನಡಕ್ಕೆ ಬರೀ 32 ಕೋಟಿನಾ..? – ಬಿಜೆಪಿ ಪೋಸ್ಟರ್ ತಂತ್ರಕ್ಕೆ ಸಿಎಂ ಕೆಂಡ

  • ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ

    ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ

    ನವದೆಹಲಿ: ರಾಷ್ಟ್ರಪತಿ ಭವನದಲ್ಲಿಂದು ನಡೆದ‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ (R Ashwin) ಹಾಗೂ ಒಲಿಂಪಿಕ್ಸ್‌ ಪದಕ ವಿಜೇತರೂ ಆಗಿರುವ ಮಾಜಿ ಹಾಕಿ ಆಟಗಾರ ಪಿ.ಆರ್‌ ಶ್ರೀಜೇಶ್‌ಗೆ (PR Sreejesh) 2025ನೇ ಸಾಲಿನ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು, ರವಿಚಂದ್ರನ್ ಅಶ್ವಿನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ಪಿ.ಆರ್ ಶ್ರೀಜೇಶ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಮೇಜರ್ ಧ್ಯಾನ್ ಚಂದ್ ನಂತರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ 2ನೇ ಭಾರತೀಯ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ – ಯಾರಿಗೆ ಎಷ್ಟು ಕೋಟಿ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಭಾರತದ ಕ್ರಿಕೆಟ್‌ ದಂತಕಥೆಗಳಲ್ಲಿ ಒಬ್ಬರಾದ ಅಶ್ವಿನ್‌, ಭಾರತ ಕ್ರಿಕೆಟ್‌ ತಂಡ 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗ ಟೀಂ ಇಂಡಿಯಾದ ಭಾಗವಾಗಿದ್ದರು. ಆಲ್‌ರೌಂಡರ್‌ ಪ್ರದರ್ಶನ ನೀಡುತ್ತಿದ್ದ ಅಶ್ವಿನ್‌ ತಮ್ಮ ಸ್ಪಿನ್‌ ಬೌಲಿಂಗ್‌ನಿಂದಲೇ ಮೋಡಿ ಮಾಡಿದ್ದರು. ಇದನ್ನೂ ಓದಿ: SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!

    ಭಾರತ ಕ್ರಿಕೆಟ್‌ ತಂಡಕ್ಕಾಗಿ ಆಡಿದ 106 ಪಂದ್ಯಗಳಲ್ಲಿ 537 ವಿಕೆಟ್‌ ಪಡೆಯುವ ಮೂಲಕ ಭಾರತದ 2ನೇ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಬರೆದಿದ್ದಾರೆ. ಅಲ್ಲದೇ ಅಶ್ವಿನ್ 3,503 ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಶತಕ ಸಿಡಿಸಿದ್ದಾರೆ. ಏಕದಿನ ಪದ್ಯದಲ್ಲಿ 156 ವಿಕೆಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 72 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ಇನ್ನೂ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಶ್ರೀಜೇಶ್, ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸತತ ಎರಡು ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಟೋಕಿಯೊ ಕ್ರೀಡಾಕೂಟದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತ ತಂಡವು ಜರ್ಮನಿಯನ್ನ ಸೋಲಿಸಿತ್ತು. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ ವಿರುದ್ಧ ಗೆದ್ದಿತ್ತು.

  • ‘ಮೆಗಾಸ್ಟಾರ್’ಗೆ ಪದ್ಮವಿಭೂಷಣ: ಅಭಿನಂದಿಸಿದ ಸಂಸದೆ ಸುಮಲತಾ

    ‘ಮೆಗಾಸ್ಟಾರ್’ಗೆ ಪದ್ಮವಿಭೂಷಣ: ಅಭಿನಂದಿಸಿದ ಸಂಸದೆ ಸುಮಲತಾ

    ಭಾರತದ ಅತ್ಯುನ್ನತ ನಾಗರೀಕ ಗೌರವ ಪದ್ಮ ಪ್ರಶಸ್ತಿಗಳು ನಿನ್ನೆ ಪ್ರಕಟಗೊಂಡಿವೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದ್ದು ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ.

    ಈ ಗೌರವಕ್ಕೆ ನೀವು ಅರ್ಹವಾದ ವ್ಯಕ್ತಿ. ಪ್ರಶಸ್ತಿ ಪ್ರಕಟಗೊಂಡಿದ್ದು ಕೇಳಿ ಅತ್ಯಂತ ಹೆಮ್ಮೆ ಅನಿಸಿತು. ನಿಮ್ಮೊಂದಿಗೆ ಸುಂದರವಾದ ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕೆ ಮತ್ತು ಸಾಕಷ್ಟು ಕ್ಷಣಗಳನ್ನು ಒಟ್ಟಿಗೆ ಕಳೆದಿದ್ದಕ್ಕೆ ಹೆಮ್ಮೆ ಅನಿಸುತ್ತದೆ. ಅದೊಂದು ಅದ್ಭುತವಾದ ಜರ್ನಿ. ನಿಮ್ಮ ಮುಂದಿನ ಜೀವನಕ್ಕೆ ಈ ಪ್ರಶಸ್ತಿ ಒಂದು ಗರಿ ಎಂದು ಅವರು ಬರೆದುಕೊಂಡಿದ್ದಾರೆ.

    ಗಣರಾಜ್ಯೋತ್ಸವದ ಮುನ್ನಾ ದಿನ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ. ಸಾಧಕರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಅದರಂತೆ ಹಲವು ವರ್ಷಗಳಿಂದ ಕಲಾ ಸೇವೆ ಮಾಡಿರುವ ಅನೇಕ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

    ಕಲೆ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಭಾಜನರಾದವರು

    1.ವೈಜಯಂತಿಮಾಲಾ ಬಾಲಿ (ತಮಿಳುನಾಡು)

    2.ಮೆಗಾಸ್ಟಾರ್ ಚಿರಂಜೀವಿ (ಆಂಧ್ರಪ್ರದೇಶ)

    3.ಪದ್ಮ ಸುಬ್ರಹ್ಮಣ್ಯಂ (ತಮಿಳುನಾಡು)

    ಕಲೆ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಭಾಜನರಾದವರು

    ಮಿಥುನ್ ಚಕ್ರವರ್ತಿ

    ದತ್ತಾತ್ರೇಯ ಅಂಬಾದಾಸ್ ಮೇಲು

    ಉಷಾ ಉತ್ತುಪ್

    ತಮಿಳಿನ ನಟ ವಿಜಯಕಾಂತ್

  • ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲ

    ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ಇದೀಗ ಈ ಕೂಗಿಗೆ ರಾಕಿಂಗ್ ಸ್ಟಾರ್ ಯಶ್ ಕೂಡ ದನಿಗೂಡಿಸಿದ್ದಾರೆ.

    ಹೌದು. ನಟ ಯಶ್ ಅವರು, ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಕೈಜೋಡಿಸಿದ್ದಾರೆ. ಈ ಸಂಬಂಧ ಅನಂತ್ ನಾಗ್ ಜೊತೆಗಿರುವ ತಮ್ಮ ಫೋಟೋದೊಂದಿಗೆ ಬರೆದುಕೊಂಡು ಟ್ವೀಟ್ ಮಾಡಿ ನಟನಿಗೆ ಪದ್ಮಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ #AnanthNagForPadma ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

    ಟ್ವೀಟ್‍ನಲ್ಲೇನಿದೆ..?
    ಅನಂತ್ ನಾಗ್ ಅವರು ಒಂದು ಬಾರಿ ನನಗೆ “ಆಕ್ಟಿಂಗ್ ಈಸ್ ಬಿಹೇವಿಂಗ್” ಅಂತ ಹೇಳಿದ್ದರು. ಅವರು ಹೇಳಿರುವ ಈ ಮಾತು ನನ್ನ ಮನಸ್ಸಲ್ಲಿ ಈಗಲೂ ಇದೆ. ಅನಂತ್ ನಾಗ್ ಅವರ ಸಿನಿಮಾಗಳನ್ನು ನೋಡಿ ನಾನು ಬೆಳೆದವನು. ಸಿನಿಮಾದಲ್ಲಿ ಅವರ ಹಾಸ್ಯಗಳನ್ನು ನೋಡಿ ನಕ್ಕಿದ್ದೇನೆ, ಹಾಗೆಯೇ ಅವರು ಕಣ್ಣೀರು ಹಾಕಿದಾಗ ನಾನು ಅತ್ತಿದ್ದೇನೆ. ಅಲ್ಲದೆ ಅವರು ನಟಿಸಿರುವ ಹಾರರ್ ದೃಶ್ಯಗಳನ್ನು ನೋಡಿ ಭಯಪಟ್ಟಿದ್ದೇನೆ ಕೂಡ. ಅನಂತ್ ನಾಗ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಮಹದಾಸೆ ನನ್ನದಾಗಿತ್ತು. ಇದನ್ನೂ ಓದಿ: ಸ್ಪೆಷಲ್ ಕೇಕ್ ಚಪ್ಪರಿಸಿ ತಿಂದು ಅಜಯ್ ಪತ್ನಿಗೆ ರಚಿತಾ ಧನ್ಯವಾದ

    ಎವರ್‌ಗ್ರೀನ್ ಅನ್ನೋದಕ್ಕೆ ಅವರೇ ಉತ್ತಮ ನಿದರ್ಶನ. ಅವರ ಚಿತ್ರಗಳು, ಅವರ ನಟನೆ ಮತ್ತು ಸೃಜನಶೀಲತೆ ಇಂದಿಗೂ ಪ್ರಸ್ತುತ. ಅವರೊಂದಿಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು. ಅವರಲ್ಲಿರುವ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಎಂದೆಂದಿಗೂ ಕರ್ನಾಟಕದ ಹೆಮ್ಮೆ. ಅನಂತ್ ನಾಗ್ ಬರೀ ನಟ ಮಾತ್ರ ಅಲ್ಲ. ಭಾರತೀಯ ಚಿತ್ರರಂಗದ ಅಭಿಜ್ಞಾ. ಹೀಗಾಗಿಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು? ಎಂದು ಯಶ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟ ಶರಣ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವು ಮಂದಿ ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಇದೇ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈಜೋಡಿಸಿರುವುದು ಮತ್ತಷ್ಟು ಬಲ ಬಂದಿದೆ. ಇದನ್ನೂ ಓದಿ: ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

  • ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

    ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು 2022ರ ಸಾಲಿನಲ್ಲಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಜನರೇ ತಮ್ಮ ನಡುವಿನ ಸಾಧಕರನ್ನು, ಪ್ರತಿಭಾವಂತರ ಹೆಸರನ್ನು ಶಿಫಾರಸು ಮಾಡಬಹುದು ಎಂದು ಮನವಿ ಮಾಡಿದ್ದರು.

    ಈ ಮನವಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ‘#PeoplesPadma’ ಹ್ಯಾಷ್‍ಟ್ಯಾಗ್‍ನಲ್ಲಿ ಅಭಿಯಾನವೊಂದು ಆರಂಭವಾಗಿದ್ದು, ಇದಕ್ಕೆ ಕನ್ನಡ ಖ್ಯಾತ ನಟ ಅನಂತ್ ನಾಗ್ ಅವರಿಗೆ ಈ ವರ್ಷದ ಪದ್ಮ ಪ್ರಶಸ್ತಿಯನ್ನು ನೀಡಬೇಕೆಂದು ಅಭಿಯಾನ ಪ್ರಾರಂಭವಾಗಿದೆ. #AnanthnagforPadma ಎಂಬ ಹ್ಯಾಷ್‍ಟ್ಯಾಗ್‍ನಡಿ ಅಭಿಯಾನ ಪ್ರಾರಂಭವಾಗಿದೆ.

    ಚಿತ್ರರಂಗದ ಮಹನ್ ಪ್ರತಿಭೆಗಳಲ್ಲೊಬ್ಬರಾದ ಅನಂತ್ ನಾಗ್ ಅವರು ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಕೇಳೋಣ. ನಮ್ಮ ನಾಡಿನ ಪರವಾಗಿ ಅನಂತ್ ನಾಗ್ ಅವರನ್ನು #PeoplesPadma  ಪ್ರಶಸ್ತಿಗೆ ಹೆಸರನ್ನು ಸೂಚಿಸಿ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

    ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ಮರಣೇಯ ಪಾತ್ರಗಳನ್ನು ಮಾಡಿದ್ದಾರೆ. ಇವರಿಗೆ ಅತ್ಯುತ್ತಮ ನಟ, ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿಗಳು ದೊರಕಿದೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಭಾರತದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿದ್ದಾರೆ. ಅವರನ್ನು ದೇಶದ ಮುಂದೆ ತಂದು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ತೆರೆಯ ಹಿಂದೆ ಇರುವ ಸಾಧಕರನ್ನು ಜನರೇ ಶಿಫಾರಸು ಮಾಡಲಿ ಎಂದು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. #PeoplesPadma ಹ್ಯಾಷ್‍ಟ್ಯಾಗ್ ನಡಿ ಜನರೆ ತಮ್ಮ ನಡುವಿನ ಸಾಧಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಸೆಪ್ಪೆಂಬರ್ 15ರವರೆಗೆ ಈ ಹ್ಯಾಷ್ ಟ್ಯಾಗ್‍ನಡಿ ನಾಮಿನೇಟ್ ಮಾಡಲು ಅವಕಾಶವಿದೆ. ಇದರಲ್ಲಿ ಅತ್ಯುತ್ತಮವಾದವರನ್ನು ಆಯ್ಕೆ ಮಾಡಿ ಪದ್ಮ ಪ್ರಶಸ್ತಿಯನ್ನು ನೀಡಲಾಗುತ್ತದೆ.

  • ಚಂದ್ರಶೇಖರ್ ಕಂಬಾರ ಅವರಿಗೆ ಸಿಎಂ ಬಿಎಸ್‍ವೈ ಸನ್ಮಾನ

    ಚಂದ್ರಶೇಖರ್ ಕಂಬಾರ ಅವರಿಗೆ ಸಿಎಂ ಬಿಎಸ್‍ವೈ ಸನ್ಮಾನ

    ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಭಿನಂದಿಸಿ ಸನ್ಮಾನಿಸಿದರು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ರಾಜ್ಯದ 5 ಮಂದಿ ಸೇರಿದಂತೆ ಒಟ್ಟು 119 ಮಂದಿಗೆ ಪದ್ಮ ಪ್ರಶಸ್ತಿ ಸಿಗಲಿದೆ. ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಮರಣೋತ್ತರ ಪದ್ಮ ವಿಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿಎಂ ಹೆಗ್ಡೆ ಅವರಿಗೆ ಪದ್ಮವಿಭೂಷಣ ಸಾಹಿತ್ಯ ರಂಗದಲ್ಲಿ ಚಂದ್ರಶೇಖರ್ ಕಂಬಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಎಸ್‍ಪಿಬಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

    ಮಂಜಮ್ಮ ಜೋಗತಿ(ಕಲೆ), ರಂಗಸ್ವಾಮಿ ಲಕ್ಷ್ಮಿ ನಾರಾಯಣ ಕಶ್ಯಪ( ಸಾಹಿತ್ಯ ಮತ್ತು ಶಿಕ್ಷಣ), ಕೆವೈ ವೆಂಕಟೇಶ್(ಕ್ರೀಡೆ ) ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಪ್ರಶಸ್ತಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ. ಒಟ್ಟು 7 ಮಂದಿಗೆ ಪದ್ಮ ವಿಭೂಷಣ, 10 ಮಂದಿಗೆ ಪದ್ಮಭೂಷಣ, 102 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಿ ಗೌರವಿಸಲಿದ್ದಾರೆ.

  • ನಡೆದಾಡುವ ಅರಣ್ಯ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ

    ನಡೆದಾಡುವ ಅರಣ್ಯ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ

    ಬೆಂಗಳೂರು: ಕಳೆದ ವರ್ಷ ಕರ್ನಾಟಕ ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಪರಿಸರ ಸಂರಕ್ಷಣೆ ಪಣತೊಟ್ಟ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ತುಳಸಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

    ಈ ಬಾರಿ ರಾಜ್ಯದ ಇಬ್ಬರಿಗೆ ಪದ್ಮ ಗೌರವ ಸಿಕ್ಕಿದೆ. ಸಾಮಾಜಿಕ ಸೇವೆಯಲ್ಲಿ ತುಳಸಿ ಗೌಡ ಮತ್ತು ದಕ್ಷಿಣ ಕನ್ನಡದ ಕೊಣಾಜೆ ವಿಶ್ವವಿದ್ಯಾಲಯ ಸಮೀಪ ಇರುವ ಹರೇಕಳದಲ್ಲಿ ಶಾಲೆ ತೆರೆದ ಹಾಜಬ್ಬ ಅವರಿಗೆ ಈ ಶ್ರೇಷ್ಠ ಗೌರವ ಒಲಿದು ಬಂದಿದೆ.  ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

    ಯಾರು ಈ ತುಳಸಿ ಗೌಡ?
    ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ 82 ವರ್ಷದ ವೃದ್ಧೆ ತುಳಸಿಗೌಡ ಅವರು ಸದ್ದಿಲ್ಲದೇ ಪ್ರಕೃತಿ ರಕ್ಷಣೆ ನಿಂತಿದ್ದಾರೆ.  72 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದ್ದಾರೆ. ಬಾಲ್ಯದಲ್ಲೇ ಅಪ್ಪ, ಮದುವೆಯಾದ ಬಳಿಕ ಗಂಡನ ಕಳೆದುಕೊಂಡ್ರೂ ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡ್ರು. ಈ ವೇಳೆ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಸೇರಿಕೊಂಡರು.

     

    72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ತುಳಸಿ ಗೌಡ ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ.

    ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ. ಮರಗಳ ವಿಜ್ಞಾನಿ ಎಂದೇ ಉತ್ತರ ಕನ್ನಡದಲ್ಲಿ ಇವರನ್ನು ಕರೆಯಲಾಗುತ್ತದೆ.

    ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ವಯಸ್ಸಾದರೂ ಈಗಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ.

    ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೋಷಿಸ ತೊಡಗಿದರು.  ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು. 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

    ಇವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಅ.ನಾ.ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯವನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ಹೀಗೆ ಈಕೆಯ ಜೀವಮಾನದಲ್ಲಿ ಲಕ್ಷಗಟ್ಟಲೇ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಇವರ ಸಾಧನೆ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

    2018ರ ಜೂನ್ ತಿಂಗಳಲ್ಲಿ ತುಳಸಿ ಗೌಡ ಅವರು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.