Tag: padma

  • ಟಿಡಿಪಿ ಪಕ್ಷದ ರಾಜಕಾರಣಿ ಮೊಮ್ಮಗಳ ಜೊತೆ ಶರ್ವಾನಂದ ಎಂಗೇಜ್‌ಮೆಂಟ್

    ಟಿಡಿಪಿ ಪಕ್ಷದ ರಾಜಕಾರಣಿ ಮೊಮ್ಮಗಳ ಜೊತೆ ಶರ್ವಾನಂದ ಎಂಗೇಜ್‌ಮೆಂಟ್

    ಟಾಲಿವುಡ್‌ನ (Tollywood)  ಯಂಗ್ ಹೀರೋ ಶರ್ವಾನಂದ (Sharwanand) ಮನೆಯಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸದ್ದಿಲ್ಲದೇ ಹಸೆಮಣೆ ಏರಲು ನಟ ರೆಡಿಯಾಗಿದ್ದಾರೆ. ಸದ್ಯ ಎಂಗೇಜ್‌ಮೆಂಟ್ (Engagement) ಡೇಟ್ ಕೂಡ ಫಿಕ್ಸ್ ಆಗಿದ್ದು, ತೆರೆಮರೆಯಲ್ಲಿ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಶರ್ವಾನಂದ ತಮ್ಮ 38ನೇ ವಯಸ್ಸಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಟಿಡಿಪಿ ಪಕ್ಷದ (Tdp Party) ರಾಜಕಾರಣಿ ಬೊಜ್ಜಲ ಗೋಪಾಲ ಕೃಷ್ಣಾ ರೆಡ್ಡಿ (Gopal Krishna Reddy) ಮೊಮ್ಮಗಳು ಪದ್ಮಾ (Padma) ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ

    ಇದೇ ಜನವರಿ 26ರಂದು ಹೈದರಾಬಾದ್‌ನ ಪಾರ್ಕ್ ಹಯಾತ್‌ನಲ್ಲಿ ಶರ್ವಾನಂದ್ ಮತ್ತು ಪದ್ಮಾ ಎಂಗೇಜ್‌ಮೆಂಟ್ ನಡೆಯಲಿದೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಶರ್ವಾನಂದ್ ಅವರದ್ದು, ಗುರುಹಿರಿಯರು ನಿಗದಿಪಡಿಸಿರುವ ಅರೇಂಜ್ ಮ್ಯಾರೇಜ್ ಆಗಿದೆ.

    ನೂರಾರು ಕೋಟಿಗಳ ಒಡತಿಯಾಗಿರುವ ಪದ್ಮಾ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. 2023ರ ಜುಲೈನಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ

    ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಮನೆಯಲ್ಲಿ ನೀರವಮೌನ ಆವರಿಸಿದೆ. ಮಗನನ್ನು ಕಳೆದುಕೊಂಡು ಹರ್ಷ ಕುಟುಂಬ ಕಣ್ಣೀರಾಕುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ತಾಯಿ ಪದ್ಮಾ, ನನ್ನ ಮಗ ಕೇಸರಿ ಶಾಲು, ಕುಂಕುಮವನ್ನು ಮಾತ್ರ ಬಿಟ್ಟು ಹೋಗಿದ್ದಾನೆ. ಪ್ರತಿ ಮನೆಯಲ್ಲಿ ಕೂಡ ನನ್ನ ಮಗ ಹರ್ಷ ಹುಟ್ಟಲಿ. ನಿನ್ನೆ ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಬಂದವರೇ ನನ್ನ ಮಕ್ಕಳು. ಅವರಲ್ಲಿಯೇ ಹರ್ಷನನ್ನು ನೋಡುತ್ತೇನೆ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: ಶಿವಮೊಗ್ಗ ಒಳ್ಳೆಯ ನಾಡು, ಯಡಿಯೂರಪ್ಪ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ: ಡಿಕೆಶಿ

    ನನ್ನ ತಮ್ಮ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದಾನೆ ಎಂದು ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ಚಿಕ್ಕ ಮಗು ಎಂದುಕೊಂಡಿದ್ದೆ. ಈ ರೀತಿಯಾಗಿ ಪ್ರೀತಿಯನ್ನು, ಸ್ನೇಹವನ್ನು ಪಡೆದಿದ್ದಾನೆ ಎಂದರೆ ನಮಗೂ ಗೊತ್ತಿರಲ್ಲಿಲ್ಲ. ಈ ಮನೆಯಲ್ಲಿ ಕೇವಲ ಕೇಸರಿ, ಕುಂಕುಮ ಮಾತ್ರ ಇದೆ. ನಿನ್ನೆ ಮಣ್ಣು ಮಾಡಿ ಬಂದಾಗ ನನ್ನ ಮಡಿಲಲ್ಲಿ ಕೇವಲ ಕುಂಕುಮ ಮಾತ್ರ ಇತ್ತು. ಅದೇ ನನ್ನ ತಮ್ಮ ಎಂದು ನೋಡಿಕೊಳ್ಳುತ್ತೇನೆ ಎಂದು ಹರ್ಷ ಸಹೋದರಿ ಅಶ್ವಿನಿ ದುಃಖಿತರಾದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಭಾನುವಾರ ರಾತ್ರಿ ಐವರು ದುಷ್ಕರ್ಮಿಗಳು ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹರ್ಷ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ. ಬೈಕಿಗೆ ಬೆಂಕಿ ಹಚ್ಚಿರುವ ಮೂಲಕ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು, ಸದ್ಯ ಶಿವಮೊಗ್ಗದಲ್ಲಿ ಸೆಕ್ಷನ್ 144 ಅನ್ನು ನಾಳೆವರೆಗೂ ಜಾರಿ ಮಾಡಲಾಗಿದೆ.

  • ನನ್ನ ಮಗನನ್ನು ಕಂಡರೆ ಮುಸ್ಲಿಮರಿಗೆ ಆಗುತ್ತಿರಲಿಲ್ಲ- ಹರ್ಷ ತಾಯಿಯಿಂದ ಎಫ್‍ಐಆರ್

    ನನ್ನ ಮಗನನ್ನು ಕಂಡರೆ ಮುಸ್ಲಿಮರಿಗೆ ಆಗುತ್ತಿರಲಿಲ್ಲ- ಹರ್ಷ ತಾಯಿಯಿಂದ ಎಫ್‍ಐಆರ್

    ಶಿವಮೊಗ್ಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಹರ್ಷ ತಾಯಿ ಪದ್ಮಾ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ

    ನನ್ನ ಮಗನಿಗೆ ಆಲಿಫ್, ಪಠಾಣ್ ಸಹಚರರಿಂದ ಬೆದರಿಕೆ ಇತ್ತು. ಕೊಲೆ ಮಾಡ್ತೇವೆ ಅಂತಾ ಆಗಾಗ ಹೇಳ್ತಾ ಇದ್ದರು. ನನ್ನ ಮಗನನ್ನು ಮುಸ್ಲಿಮರಿಗೆ ಕಂಡರೆ ಆಗುತ್ತಿರಲಿಲ್ಲ. ಆಗ ನಾನು ಯಾರ ತಂಟೆಗೂ ಹೋಗಬೇಡ, ನಿನ್ನಷ್ಟಕ್ಕೆ ನೀನಿರು ಎಂದಿದ್ದೆ. ನನ್ನ ಪಾಡಿಗೆ ಇರುತ್ತೇನೆಂದು ಮಾತು ಕೊಟ್ಟಿದ್ದ ಎಂದು ಹೇಳುತ್ತಾ ಮಗನ ನೆನೆದು ಕಣ್ಣೀರು ಹಾಕಿದರು.

    ನಿನ್ನೆ ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.  ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಅರೆಸ್ಟ್ ಆಗಿರುವ ಮೂರು ಜನ, ಎಲ್ಲಿಯವರು ಅಂತಾ ಹೇಳಲ್ಲ. ಐದು ಜನ ಕೊಲೆ ಮಾಡಿದ್ದಾರೆ. ಇದರ ಹಿಂದೆ ಏನಾಗಿದೆ ಅಂತಾ ನೋಡಬೇಕು. ಶಿವಮೊಗ್ಗದಿಂದ ಸ್ಪ್ರೆಡ್ ಆಗೋಕೆ ಬಿಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷನ ಕೊಲೆ ಸಂಬಂಧ ಸಿಎಂ ಭೇಟಿ ಮಾಡಿದ ಮುತಾಲಿಕ್!