Tag: paddu

  • ಟೇಸ್ಟಿಯಾಗಿ ಮಾಡಿ ಸಂಡೇ ಸ್ಪೆಷಲ್ ಎಗ್ ಪಡ್ಡು..

    ಟೇಸ್ಟಿಯಾಗಿ ಮಾಡಿ ಸಂಡೇ ಸ್ಪೆಷಲ್ ಎಗ್ ಪಡ್ಡು..

    ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೋಸೆ, ಇಡ್ಲಿ, ಪಡ್ಡು ಮಾಡುತ್ತಾರೆ. ಅದರಲ್ಲೂ ವಿವಿಧ ಬಗೆಯ ದೋಸೆ, ಇಡ್ಲಿ ಮಾಡುವುದು ಸಾಮಾನ್ಯ. ಜೊತೆಗೆ ವಿಶೇಷವಾಗಿ ಸ್ಟಫ್ಡ್ ಪಡ್ಡು ಕೂಡ ಮಾಡುತ್ತಾರೆ. ಇನ್ನು ಹೊರಗಡೆ ತಿನ್ನುವುದಾದರೆ 99 ವಿವಿಧ ಬಗೆಯ ದೋಸೆ, ಆಮ್ಲೆಟ್ ಹೀಗೆ ವಿವಿಧ ರೀತಿಯಲ್ಲಿ ಮಾಡುತ್ತಾರೆ. ಇದೆಲ್ಲದಕ್ಕೂ ವಿಭಿನ್ನವಾಗಿ ಸಂಡೇ ಸ್ಪೆಷಲ್ ಎಗ್ ಪಡ್ಡು ಮಾಡಿ.

     

    ಆಮ್ಲೆಟ್ ಮಾಡುವಾಗ ಅದಕ್ಕೆ ವಿವಿಧ ಮಸಾಲೆಗಳನ್ನು ಸೇರಿಸಿ ಬೇರೆ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ಎಗ್ ಪಡ್ಡು ಮಾಡಬಹುದು. ಇದೇ ರೀತಿ ಎಗ್‌ ಪಡ್ಡನ್ನು ಮಕ್ಕಳಿಗೆ ಬೇರೆ ರೀತಿಯಲ್ಲಿಯೂ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    ಮೊಟ್ಟೆ
    ಈರುಳ್ಳಿ
    ಮೆಣಸಿನ ಕಾಯಿ ಅಥವಾ ಖಾರದಪುಡಿ
    ಕೊತ್ತಂಬರಿ
    ಈರುಳ್ಳಿ
    ಟೊಮೆಟೊ
    ಉಪ್ಪು
    ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ನೀವು ಪಡ್ಡು ಮಾಡುವ ಆಧಾರದ ಮೇಲೆ ಅಥವಾ ಎಷ್ಟು ಜನರಿಗೆ ಪಡ್ಡು ಮಾಡುತ್ತೀರಾ ಎನ್ನುವ ಆಧಾರದ ಮೇಲೆ ಮೊಟ್ಟೆಯನ್ನು ನಿರ್ಧರಿಸಬೇಕು. ಒಂದು ಪಾತ್ರೆಗೆ ಮೊಟ್ಟೆಗಳನ್ನು ಒಡೆದುಕೊಳ್ಳಬೇಕು. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಉಪ್ಪು, ಖಾರದಪುಡಿ ಅಥವಾ ಹೆಚ್ಚಿದ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಬಳಿಕ ಕಾದ ಪಡ್ಡಿನ ಹಂಚಿಗೆ ಎಣ್ಣೆ ಹಾಕಿ ಮೊಟ್ಟೆ ಮಿಶ್ರಣವನ್ನು ಹಾಕಿಕೊಳ್ಳಬೇಕು. ಸ್ವಲ್ಪ ಹೊತ್ತಿನ ಬಳಿಕ ಬಿಸಿ ಬಿಸಿಯಾದ ಪಡ್ಡು ತಯಾರಾಗುತ್ತದೆ.

    ಇದನ್ನು ನೀವು ಹಾಗೆಯೆ ಅಥವಾ ಸಾಸ್, ಚಟ್ನಿ ಜೊತೆಗೆ ತಿನ್ನಬಹುದು. ಮಕ್ಕಳಿಗೆ ಮಾಡುವುದಾದರೆ ಮೊಟ್ಟೆ ಒಡೆದ ನಂತರ ಕೇವಲ ಉಪ್ಪು ಹಾಕಿ ಕೂಡ ತಯಾರಿಸಬಹುದು.

  • ಜೋಳದ ಪಡ್ಡು ಮಾಡಿ ರುಚಿ ನೋಡಿ

    ಜೋಳದ ಪಡ್ಡು ಮಾಡಿ ರುಚಿ ನೋಡಿ

    ನೀವು ಇಡೀ ದಿನ ಉಲ್ಲಾಸದಿಂದ ಕಳೆಯಬೇಕೆಂದರೆ ಅಂದು ನೀವು ತಿನ್ನುವ ಉಪಾಹಾರ ಉತ್ತಮವಾಗಿರಬೇಕು. ನೀವು ಸೇವಿಸುವ ಬೆಳಗ್ಗಿನ ತಿಂಡಿ ರುಚಿಕರ ಹಾಗೂ ಆರೋಗ್ಯಕರವಾಗಿದ್ದರೆ ನಿಮ್ಮ ಇಡೀ ದಿನವೂ ಉಲ್ಲಾಸಭರಿತವಾಗಿರುತ್ತದೆ. ನೀವು ಅಡುಗೆಮನೆಯಲ್ಲಿ ಹೊಸದೇನಾದರೂ ಪ್ರಯೋಗ ಮಾಡಲು ಬಯಸುತ್ತೀರಾದರೆ ನಾವಿಂದು ಸ್ಪೆಷಲ್ ಅಡುಗೆ ಹೇಳಿಕೊಡುತ್ತೇವೆ. ರುಚಿಕರವಾದ ಜೋಳದ ಪಡ್ಡು (Jowar Paddu) ನೀವೂ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಜೋಳದ ಹಿಟ್ಟು – 1 ಕಪ್
    ಉದ್ದಿನ ಬೇಳೆ – ಅರ್ಧ ಕಪ್
    ಮೆಂತ್ಯ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಒಗ್ಗರಣೆಗೆ:
    ಎಣ್ಣೆ – 1 ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ತುರಿದ ಶುಂಠಿ – 1 ಇಂಚು
    ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಸುಮಾರು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    * ಬಳಿಕ ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಸ್ವಲ್ಪ ನೀರು ಸೇರಿಸಿ, ನುಣ್ಣನೆ ಹಿಟ್ಟಾಗಿ ರುಬ್ಬಿಕೊಳ್ಳಿ.
    * ರುಬ್ಬಿದ ಹಿಟ್ಟಿಗೆ ಜೋಳದ ಹಿಟ್ಟು ಹಾಗೂ ಉಪ್ಪು ಹಾಕಿ, ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
    * ಈ ಹಿಟ್ಟನ್ನು ನೀವು ರಾತ್ರಿ ತಯಾರಿಸಿ, ಮುಚ್ಚಿ, ಬೆಳಗ್ಗಿನವರೆಗೆ ವಿಶ್ರಾಂತಿ ನೀಡಿ.
    * ಬೆಳಗ್ಗೆ ನೀವು ಹಿಟ್ಟು ಹುದುಗಿರುವುದನ್ನು ಕಾಣಬಹುದು. ಈಗ ಹಿಟ್ಟಿಗೆ ಸ್ಥಿರತೆ ಹೊಂದುವಂತೆ ನೀರು ಸೇರಿಸಿ, ಮಿಶ್ರಣ ಮಾಡಿ.
    * ಈಗ ಒಗ್ಗರಣೆ ತಯಾರಿಸಲು ಒಂದು ಬಾಣಲೆ ತೆಗೆದುಕೊಳ್ಳಿ. ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಉದ್ದಿನಬೇಳೆ ಹಾಗೂ ಕಡಲೆ ಬೇಳೆ ಹಾಕಿ ಸಿಡಿಸಿ.
    * ಬಳಿಕ ಕರಿಬೇವಿನ ಎಲೆ, ಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿ ಸೇರಿಸಿ, 2-3 ನಿಮಿಷ ಹುರಿಯಿರಿ.
    * ಈಗ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ, ಮಿಶ್ರಣ ಮಾಡಿ.
    * ಬಳಿಕ ಪಡ್ಡು ತಯಾರಿಸುವ ಗುಳಿಯಿರುವ ಪ್ಯಾನ್ ಅನ್ನು ಬಿಸಿ ಮಾಡಿ. ಗುಳಿಗಳಿಗೆ ಎಣ್ಣೆ ಸವರಿ, ಬ್ಯಾಟರ್ ಅನ್ನು ಸುರಿಯಿರಿ.
    * ಪ್ಯಾನ್ ಅನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ ಪಡ್ಡುಗಳನ್ನು ಬೇಯಿಸಿ.
    * ಪಡ್ಡು ಮೇಲ್ಭಾಗ ಬೆಂದಿದೆ ಎನಿಸಿದರೆ ತಳಭಾಗ ಗೋಲ್ಡನ್ ಬ್ರೌನ್ ಬಣ್ಣವಾಗಿರುತ್ತದೆ. ನೀವು ಈಗ ಪಡ್ಡುಗಳನ್ನು ಮಗುಚಿ ಹಾಕಿ, ಈ ರೀತಿ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಬೇಯಿಸಿಕೊಳ್ಳಿ.
    * ಇದೀಗ ಜೋಳದ ಪಡ್ಡು ತಯಾರಾಗಿದ್ದು, ಬಿಸಿಬಿಸಿಯಾಗಿ ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ಮಾಡಿ ಬಾಳೆಕಾಯಿ ದೋಸೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯಕರವಾದ ‘ಗೋಧಿ ನುಚ್ಚಿನಿಂದ ಪಡ್ಡು’ ಮಾಡಿ ಸವಿಯಿರಿ

    ಆರೋಗ್ಯಕರವಾದ ‘ಗೋಧಿ ನುಚ್ಚಿನಿಂದ ಪಡ್ಡು’ ಮಾಡಿ ಸವಿಯಿರಿ

    ತಾಯಿಯಂದಿರಿಗೆ ಬೆಳಗ್ಗೆಯಾದರೆ ಏನು ತಿಂಡಿ ಮಾಡಬೇಕು ಎಂಬ ಯೋಚನೆ ಬಂದೆ ಬರುತ್ತೆ. ಅದಕ್ಕೆ ಸರಳ ಮತ್ತು ಆರೋಗ್ಯಕರವಾದ ಮಸಾಲ ಪಡ್ಡು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ.

    ಬೇಕಾಗಿರುವ ಸಾಮಾಗ್ರಿಗಳು:
    * ಗೋಧಿ ನುಚ್ಚು – 250 ಗ್ರಾಂ
    * ಕತ್ತರಿಸಿದ ಈರುಳ್ಳಿ – 1 ಕಪ್
    * ಕತ್ತರಿಸಿದ ಸಬ್ಸಿಗೆ ಸೊಪ್ಪು – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು


    * ಹಸಿ ಮೆಣಸಿನಕಾಯಿ – 4
    * ನೆನೆಸಿಟ್ಟ ಉದ್ದಿನ ಬೆಳೆ – 1 ಕಪ್
    * ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು – 1/2 ಕಪ್
    * ಎಣ್ಣೆ

    ಮಾಡುವ ವಿಧಾನ:
    * ಗೋಧಿ ನುಚ್ಚನ್ನು ನೀರಿಗೆ ಹಾಕಿ 2 ರಿಂದ 4 ಬಾರಿ ಚೆನ್ನಾಗಿ ತೋಳೆದುಕೊಳ್ಳಬೇಕು. ನಂತರ ಅದಕ್ಕೆ ನೀರು ಹಾಕಿ 20 ನಿಮಿಷ ನೆನೆಸಬೇಕು.
    * ನೆನೆಸಿಟ್ಟ ಉದ್ದಿನ ಬೆಳೆಯನ್ನು ರುಬ್ಬಿಕೊಳ್ಳಿ. ಇದಕ್ಕೆ ಗೋಧಿ ನುಚ್ಚಿನ ನೀರನ್ನು ಸಂಪೂರ್ಣವಾಗಿ ತೆಗೆದು ಅದನ್ನು ಉದ್ದಿನ ಹಿಟ್ಟಿಗೆ ಸೇರಿಸಿ ಅದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ತುಂಬಾ ಗಟ್ಟಿಯಿದೆ ಎಂದು ಅನಿಸಿದರೆ ಅದಕ್ಕೆ ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ. ಈ ಮಿಶ್ರಣವನ್ನು 5 ರಿಂದ 8 ಗಂಟೆಗಳ ಕಾಲ ಬಿಡಿ.

    * ನಂತರ ಈ ಮಿಶ್ರಣಕ್ಕೆ ಕೊತ್ತಂಬರಿ, ಕರಿಬೇವು, ಸಬ್ಸಿಗೆ ಸೊಪ್ಪು ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಪಡ್ಡು ಹೆಂಚನ್ನು 10 ನಿಮಿಷ ಕಾಯಿಸಿ ಅದಕ್ಕೆ ಎಣ್ಣೆಯನ್ನು ಸವರಿ. ಹೆಂಚು ಕಾದ ನಂತರ ಅದಕ್ಕೆ ಪಡ್ಡು ಮಿಶ್ರಣವನ್ನು ಹಾಕಿ, ಅದರ ಮೇಲೆ ಮುಚ್ಚಳವನ್ನು ಮುಚ್ಚಿಡಿ.
    * ಒಂದು ಕಡೆ ಬೆದ್ದ ನಂತರ ಮತ್ತೊಂದು ಕಡೆ ಪಡ್ಡನ್ನು ಬೇಯಿಸಿ. ಎರಡು ಕಡೆ ಗರಿಗರಿಯಾಗುವವರೆಗೂ ಬೇಯಿಸಿಕೊಳ್ಳಿ.