Tag: Paddehuli

  • ಪಡ್ಡೆ ಹುಲಿ ಹುಡುಗಿ ನಿಶ್ವಿಕಾ

    ಪಡ್ಡೆ ಹುಲಿ ಹುಡುಗಿ ನಿಶ್ವಿಕಾ

     ಬೆಂಗಳೂರು: ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಮೊದಲ ಬಾರಿಗೆ ನಟಿಸುತ್ತಿರುವ ಪಡ್ಡೆ ಹುಲಿ ಚಿತ್ರಕ್ಕೆ ನಾಯಕಿ ಯಾರು ಅನ್ನೋ ಕುತೂಹಲ ಎಲ್ಲರದ್ದಾಗಿತ್ತು. ಶ್ರೇಯಸ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ತೀರಾ ಹಳೇ ಹೀರೋಯಿನ್‍ಗಳು ಸರಿಹೊಂದೋದಿಲ್ಲ ಅಂತಾ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಪಡ್ಡೆ ಹುಲಿಗೆ ಕಡೆಗೂ ನಾಯಕಿ ನಿಕ್ಕಿಯಾಗಿದ್ದಾಳೆ.

    `ವಾಸು ನಾನು ಪಕ್ಕಾ ಕಮರ್ಷಿಯಲ್’ ಮತ್ತು ಚಿರಂಜೀವಿ ಸರ್ಜಾ ನಟಿಸುತ್ತಿರುವ ತಮಿಳಿನ ಪಿಚ್ಚೈಕಾರನ್ ಚಿತ್ರದ ರಿಮೇಕ್ ಆಗಿರುವ `ಅಮ್ಮಾ ಐ ಲವ್ ಯೂ’ ಸಿನಿಮಾಗಳಲ್ಲಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು `ಪಡ್ಡೆ ಹುಲಿ’ ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ. ಮೊದಲ ಎರಡು ಚಿತ್ರಗಳು ಇನ್ನೂ ನಿರ್ಮಾಣ ಹಂತದಲ್ಲಿರುವಾಗಲೇ ಮೂರನೇ ಸಿನಿಮಾ ಈಕೆಗೆ ಒಲಿದಿರುವುದು ಈಕೆಯ ಅದೃಷ್ಟ ಅನ್ನಬೇಕೋ ಅಥವಾ ಪ್ರತಿಭಾವಂತೆ ಅನ್ನಬೇಕೋ ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಆದರೆ, ಒಂದಂತೂ ನಿಜ. ನಿರ್ದೇಶಕ ಗುರು ದೇಶಪಾಂಡೆ ತಮ್ಮ ಈ ಹಿಂದಿನ ಚಿತ್ರಗಳಲ್ಲಿ ನಾಯಕಿಯರ ಆಯ್ಕೆಯ ವಿಚಾರದಲ್ಲಿ ಭಾಳಾ ಚೂಸಿ ಆಗಿದ್ದವರು. ಗುರುಗಳು ನಾಯಕಿಯನ್ನು ಆಯ್ಕೆ ಮಾಡಿದ್ದಾರೆಂದರೆ, ಆಕೆ ನಿಜಕ್ಕೂ ಪ್ರತಿಭಾವಂತೆ ಅನ್ನೋದರಲ್ಲಿ ಡೌಟಿರೋದಿಲ್ಲ. ಇದನ್ನೂ ಓದಿ: ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ಇದಲ್ಲದೆ ರವಿವರ್ಮ ಗುಬ್ಬಿ ನಿರ್ದೇಶನದ ಹೊಸ ಚಿತ್ರದಲ್ಲೂ ಇದೇ ನಿಶ್ವಿಕಾ ಹೀರೋಯಿನ್ ಅಂತೆ. ನಿಶ್ವಿಕಾ ಮೇಲಿಂದ ಮೇಲೆ ಸಿನಿಮಾಗಳಿಗೆ ಬುಕ್ ಆಗುತ್ತಿರೋದನ್ನು ನೋಡಿದರೆ ಈ ವರ್ಷ ರಶ್ಮಿಕಾಳನ್ನೇ ಹಿಂದಿಕ್ಕುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ.

    `ಪಡ್ಡೆಹುಲಿ’ ಸಿನಿಮಾ ತೇಜಸ್ವಿನಿ ಎಂಟರ್ಪ್ರೈಸಸ್  ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಎಂ ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  • ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ಬೆಂಗಳೂರು: `ಪಡ್ಡೆಹುಲಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿರುವ ಪಡ್ಡೆಹುಲಿ ಫಸ್ಟ್ ಲುಕ್ ಟ್ವಿಟ್ಟರ್ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.

    ಅದೆಷ್ಟೇ ಒತ್ತಡವಿದ್ದರೂ ಹೊಸ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವವರು ಸುದೀಪ್. ಅವರಿಂದು ಆಕರ್ಷಕವಾದ ಪಡ್ಡೆ ಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆಗೊಳಿಸಿದ್ದಾರೆ. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಅಂತ ಶುಭ ಹಾರೈಸಿದ್ದಾರೆ.

    ಎಂ ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಮಗನನ್ನು ಲಾಂಚ್ ಮಾಡುವ ಸಲುವಾಗಿ ಗುರು ದೇಶಪಾಂಡೆ ಚೇತೋಹಾರಿಯಾದ ಕಥೆಯನ್ನು ಸಿದ್ಧಪಡಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಮಗನನ್ನು ಲಾಂಚ್ ಮಾಡೋ ವಿಚಾರದಲ್ಲಿ ಸಂಯಮದಿಂದಲೇ ವರ್ತಿಸಿ, ಅಳೆದೂ ತೂಗಿ ಈ ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಮಂಜು, ಈ ಚಿತ್ರದ ಮೂಲಕವೇ ಮಗನನ್ನು ನೆಲೆ ನಿಲ್ಲಿಸುವ ಪಣ ತೊಟ್ಟಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಬಿಡುಗಡೆ ಮಾಡಿರುವ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಡ್ಡೆಹುಲಿಯ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.