Tag: Padde Hulli

  • ದಾಖಲೆ ಮೊತ್ತಕ್ಕೆ ಸೇಲಾಯ್ತು ಪಡ್ಡೆಹುಲಿಯ ಹಿಂದಿ ಡಬ್ಬಿಂಗ್ ಹಕ್ಕು!

    ದಾಖಲೆ ಮೊತ್ತಕ್ಕೆ ಸೇಲಾಯ್ತು ಪಡ್ಡೆಹುಲಿಯ ಹಿಂದಿ ಡಬ್ಬಿಂಗ್ ಹಕ್ಕು!

    ಬೆಂಗಳೂರು: ಹೊಸಾ ಹೀರೋ ಎಂಟ್ರಿ ಕೊಡುತ್ತಿರುವ ಚಿತ್ರವೊಂದು ಈ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಲು ಹೇಗೆ ಸಾಧ್ಯ ಅಂತೊಂದು ಅಚ್ಚರಿಗೆ ಕಾರಣವಾಗಿರೋ ಚಿತ್ರ ಪಡ್ಡೆಹುಲಿ. ಹಾಡುಗಳ ಮೂಲಕ ಭರ್ಜರಿಯಾಗೇ ಸೌಂಡ್ ಮಾಡುತ್ತಿರೋ ಈ ಸಿನಿಮಾ ಡಬ್ಬಿಂಗ್ ರೈಟ್ಸ್ ಸೇಲಾದ ಮೊತ್ತ ನೋಡಿದರೆ ಯಾರಾದರೂ ಬೆರಗಾಗದೆ ಬೇರೆ ದಾರಿಗಳಿಲ್ಲ.

    ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 2.36 ಕೋಟಿಗೆ ಮಾರಾಟವಾಗಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಈ ಚಿತ್ರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ಚೆನ್ನೈ ಮೂಲದ ಸಂಸ್ಥೆಯೊಂದು ಖರೀದಿಸಿದೆ. ಎಸ್ಪಿಎಂ ಆಟ್ರ್ಸ್ ಎಲ್ ಎಲ್ ಬಿ ಎಂಬ ಸಂಸ್ಥೆ ಪಡ್ಡೆಹುಲಿ ಬಿಡುಗಡೆಪೂರ್ವದಲ್ಲಿಯೇ ಸೃಷ್ಟಿಸಿರೋ ಹವಾ ಕಂಡು ಇಂಥಾ ಡಬ್ಬಿಂಗ್ ಹಕ್ಕನ್ನು ಖರೀದಿ ಮಾಡಿದೆ.

    ಈ ವಿಚಾರವನ್ನು ಖುದ್ದು ನಿರ್ದೇಶಕ ಗುರು ದೇಶಪಾಂಡೆ ಅವರೇ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳು ಹೀಗೆ ಭಾರೀ ಮೊತ್ತಕ್ಕೆ ಸೇಲ್ ಆಗೋದಿದೆ. ಆದರೆ ಹೊಸಾ ನಟರ ಚಿತ್ರಗಳ ಡಬ್ಬಿಂಗ್ ರೈಟ್ಸ್, ಟಿವಿ ರೈಟ್ಸ್ ಗೂ ಅಲೆದಾಡುವ ವಾತಾವರಣವಿದೆ. ಆದರೆ ಪಡ್ಡೆಹುಲಿ ಚಿತ್ರದ ಡಬ್ಬಿಂಗ್ ರೈಟ್ಸ್ ಸ್ಟಾರ್ ನಟರ ಸಿನಿಮಾಗಳಿಗೆ ಸರಿಸಮನಾದ ಮೊತ್ತಕ್ಕೆ ಮಾರಾಟವಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಹೊಸಾ ಹುಡುಗ ನಾಯಕನಾಗಿರೋ ಚಿತ್ರವೊಂದು ಇಂಥಾ ಬ್ಯುಸಿನೆಸ್ ಮಾಡಿರೋದು ಇದೇ ಮೊದಲು. ಇದು ಪಡ್ಡೆಹುಲಿಯ ಗೆಲುವಿನ ಮುನ್ಸೂಚನೆ. ಈ ಸಿನಿಮಾದ ಪ್ರಭೆ ರಾಜ್ಯದ ಗಡಿ ದಾಟಿ ಎಲ್ಲ ಚಿತ್ರರಂಗಗಳಿಗೂ ತಲುಪಿಕೊಂಡಿರೋ ಸೂಚನೆಯೂ ಹೌದು.

  • ಪಡ್ಡೆ ಹುಲಿ ಬರ್ತ್ ಡೇಗೆ ಸಾಂಗ್ ರಿಲೀಸ್

    ಪಡ್ಡೆ ಹುಲಿ ಬರ್ತ್ ಡೇಗೆ ಸಾಂಗ್ ರಿಲೀಸ್

    ಬೆಂಗಳೂರು: ನಟ ಶ್ರೇಯಸ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬುಧವಾರ ಪಡ್ಡೆ ಹುಲಿ ಚಿತ್ರತಂಡ ಸಾಂಗ್ ರಿಲೀಸ್ ಮಾಡಿದೆ.

    ಹುಲಿ ಹುಲಿ ಎಂಬ ಹಾಡಿನಲ್ಲಿ ಆಕ್ಷನ್ ಸೀನ್‍ಗಳೇ ಹೊಂದಿದ್ದು, ವಿಭಿನ್ನ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಹಾಡು ನಟ ಶ್ರೇಯಸ್ ಇಂಟ್ರಡಕ್ಷನ್ ಹಾಡು ಆಗಿದ್ದು, ಹಾಡಿನಲ್ಲಿ ವಿಲನ್‍ಗಳ ಜೊತೆ ಸೆಣಸಾಡಿ ಜೊತೆಗೆ ಡ್ಯಾನ್ಸ್ ಕೂಡ ಹಾಡುತ್ತಿರುತ್ತಾರೆ. ಈ ಟೈಟಲ್ ಹಾಡಿಗಾಗಿ ಅದ್ಧೂರಿ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

    ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರ ಶ್ರೇಯಸ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ನಿರ್ದೇಶನವಿದೆ.

    ಈ ಹಾಡಿಗೆ ಬಹದ್ದೂರ್ ಚೇತನ್ ಅವರ ಸಾಹಿತ್ಯವಿದ್ದು, ಅಜನೀಷ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇತ್ತ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ. ಸಿನಿಮಾದಲ್ಲಿ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.

    ಪಡ್ಡೆ ಹುಲಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದೆ. ಸಿನಿಮಾದ ಫೋಟೋಶೂಟ್ ನಿಂದ ಹಿಡಿದು ಇಂದಿನವರೆಗೂ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಈ ಮೂಲಕ ಆರಂಭದಿಂದಲೂ ತಾನು ಎಲ್ಲರಗಿಂತ ಡಿಫರೆಂಟ್ ಎಂಬುದನ್ನು ಪಡ್ಡೆ ಹುಲಿ ತೋರಿಸುತ್ತಾ ಬರುತ್ತಿದೆ.