Tag: Padayatre

  • ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 8ನೇ ವರ್ಷದ ಪಾದಯಾತ್ರೆ

    ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 8ನೇ ವರ್ಷದ ಪಾದಯಾತ್ರೆ

    ಉಜಿರೆ: ಕಷ್ಟಕಾಲದಲ್ಲಿ ನಂಬಿದವರಿಗೆ ಇಂಬು ಕೊಟ್ಟು ಅಭಯದಾನ ನೀಡುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಅನಿರೀಕ್ಷಿತವಾಗಿ, ಅಪಾಯದ ಮಟ್ಟವನ್ನು ಅಳತೆ ಮಾಡಲೂ ಸಾಧ್ಯವಾಗದ ಕೊರೋನಾ ಭೀತಿಯಿಂದಾಗಿ ಜನರೆಲ್ಲ ಭಯ ಮತ್ತು ಆತಂಕದಿಂದ ಸೋತಿದ್ದಾರೆ. ಭೀತಿಯ ವಾತಾವರಣ ನಿವಾರಿಸಿ ಅವರಲ್ಲಿ ಪ್ರೀತಿ, ಭಕ್ತಿ, ವಿಶ್ವಾಸದೊಂದಿಗೆ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಧರ್ಮಸ್ಥಳದಿಂದ ಅಭಯದಾನ ನೀಡಲಾಗಿದೆ. ಸಹಸ್ರಾರು ಫಲಾನುಭವಿಗಳಿಂದ ನಮಗೆ ದೊರಕಿದ ಧನ್ಯತೆಯ ಮೌನ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

    ಗುರುವಾರ ಉಜಿರೆಯಿಂದ ಧರ್ಮಸ್ಥಳಕ್ಕೆ 8ನೇ ವರ್ಷದ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಕೊರೋನಾದಿಂದಾಗಿ ಧರ್ಮಸ್ಥಳದಲ್ಲಿ ಕಳೆದ ವರ್ಷ ದೇವರ ಅಪ್ಪಣೆಯಂತೆ ಜಾತ್ರೆ, ಉತ್ಸವಗಳನ್ನು ರದ್ದು ಮಾಡಲಾಗಿದೆ. ಆದರೆ ಶ್ರೀ ಸ್ವಾಮಿಯ ಸೇವೆಯ ಜೊತೆಗೆ ಭಕ್ತರ ಸೇವೆಯನ್ನು ಮುಂದುವರಿಸಲಾಗಿದೆ. ಇದರಿಂದ ನಮಗೆ ಧನ್ಯತೆ ಮೂಡಿಬಂದಿದೆ. ದಾನ-ಧರ್ಮಾದಿ ಸತ್ಕಾರ್ಯಗಳು ಅವಿರತವಾಗಿ ಇಲ್ಲಿ ನಡೆಯುತ್ತವೆ. ದೇವರ ಸೇವೆಯೊಂದಿಗೆ ಭಕ್ತರ ಭಯ, ಆಪತ್ತು ನಿವಾರಿಸುವುದು ಕೂಡಾ ನಮ್ಮ ಉದ್ದೇಶವಾಗಿದೆ. ಭಕ್ತಿ, ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

    ಹಿತ-ಮಿತ ಆಹಾರ ಸೇವನೆಯೊಂದಿಗೆ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟನಿಟ್ಟಾಗಿ ಎಲ್ಲರೂ ಪಾಲಿಸಿ ಆರೋಗ್ಯ ರಕ್ಷಣೆಯೊಂದಿಗೆ ಆಯುಷ್ಯ ವೃದ್ಧಿ ಮಾಡಿಕೊಳ್ಳಬೇಕು. ಕೊರೋನಾ ಬಗ್ಗೆ ಭಯ, ಆತಂಕ ಬೇಡ. ಆದರೆ, ಮುನ್ನೆಚ್ಚರಿಕೆ ಇರಲಿ. ಸದ್ಯ ಜನ ಜೀವನ ಸಹಜ ಸ್ಥಿತಿಯತ್ತ ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಎಲ್ಲರೂ ಭಯ ಮುಕ್ತ ವಾತಾವರಣದಲ್ಲಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಹೆಗ್ಗಡೆಯವರು ಪ್ರಾರ್ಥಿಸಿದರು.

    ಡಿ. ಹರ್ಷೇಂದ್ರಕುಮಾರ್, ಉಜಿರೆಯ ಶರತ್‍ಕೃಷ್ಣ ಪಡ್ವೆಟ್ನಾಯ, ಡಾ. ಬಿ.ಯಶೋವರ್ಮ ಮತ್ತು ರಾಜೇಶ್ ಪೈ ಉಪಸ್ಥಿತರಿದ್ದರು.

  • ಬೆಂಗ್ಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್

    ಬೆಂಗ್ಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್

    ಬೆಳಗಾವಿ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಿಂದ ತಿರುಪತಿವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಶನಿವಾರ ಬೆಳಗ್ಗೆ ಆರಂಭಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಶಾಸಕಿ ನಿಂಬಾಳ್ಕರ್ ಅವರು, ಸಶಕ್ತ ವರ್ತಮಾನ, ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ನಡಿಗೆ. ನಮ್ಮ ಖಾನಾಪುರಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಪತಿ, ಪೋಲಿಸ್ ಅಧಿಕಾರಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ತಮ್ಮ ಸಹೋದರರಾದ ಮಿಲಿಂದ್ ಮತ್ತು ಸುರೇಶ್ ಅವರೊಂದಿಗೆ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಗ್ಗೆ ಈ ಸದ್ಭಾವನಾ ಪಾದಯಾತ್ರೆ ಪ್ರಾರಂಭಿಸಿದ ಶಾಸಕಿ ಅಂಜಲಿ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಜನತೆಯ ಸುಖ ಶಾಂತಿ, ನೆಮ್ಮದಿಯ ಬದುಕಿಗಾಗಿ ತಿಮ್ಮಪ್ಪನ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲ್ಲಿದ್ದಾರೆ.

  • ಸೋತ ಮಂಡ್ಯದಲ್ಲೇ ಗೆಲುವು ಕಾಣಲು ನಿಖಿಲ್ ಪ್ರತಿಜ್ಞೆ

    ಸೋತ ಮಂಡ್ಯದಲ್ಲೇ ಗೆಲುವು ಕಾಣಲು ನಿಖಿಲ್ ಪ್ರತಿಜ್ಞೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದು, ಕಳೆದುಕೊಂಡಲ್ಲೇ ಪಡೆಯುವುದಕ್ಕೆ ಸಿಎಂ ಪುತ್ರ ಮೆಗಾ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ನಿಖಿಲ್ ಕುಮಾರಸ್ವಾಮಿ ಸೋತ ಮಂಡ್ಯ ನೆಲದಲ್ಲೇ ಗೆಲುವು ಕಾಣಲು ಪ್ರತಿಜ್ಞೆ ಮಾಡಿದ್ದು, ಈ ಬಗ್ಗೆ ತಾತ ದೇವೇಗೌಡರ ಬಳಿ ಹೇಳಿಕೊಂಡಿದ್ದಾರೆ. ನಿಖಿಲ್ ತಮ್ಮ ನೇತೃತ್ವದಲ್ಲಿ ಜೆಡಿಎಸ್ ಪಾದಯಾತ್ರೆಗೆ ಚಿಂತನೆ ಮಾಡಿದ್ದು, ಆಂಧ್ರ ಪ್ರದೇಶದಲ್ಲಿ ನಡೆದ ಜಗನ್ ಮಾದರಿ ಪಾದಯಾತ್ರೆಗೆ ನಿಖಿಲ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡಿದ್ದು, ಹೀಗಾಗಿ ಸೋಲು ಕಂಡ ಸ್ಥಳದಲ್ಲಿಯೇ ಎದ್ದು ಬರಲು ನಿಖಿಲ್‍ಗೆ ಯುವರಾಜನ ಪಟ್ಟ ಕಟ್ಟಿ ಪಕ್ಷ ಸಂಘಟನೆಯತ್ತ ಗೌಡರು ಮುಖ ಮಾಡಲು ತಂತ್ರ ರೂಪಿಸಿದ್ದಾರೆ. ಮೊಮ್ಮಗ ನಿಖಿಲ್‍ಗೆ ದೇವೇಗೌಡರು ಸಾಥ್ ನೀಡಿದ್ದು, ನಿಖಿಲ್ ಬೆನ್ನ ಹಿಂದೆ ತಾತ ನಿಲ್ಲುವ ಸಾಧ್ಯತೆಗಳಿವೆ. ಮಂಡ್ಯದಿಂದಲೇ ಪಾದಯಾತ್ರೆಯನ್ನ ಆರಂಭಿಸಿ ಪಕ್ಷ ಸಂಘಟನೆಗೂ ಪ್ಲಾನ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ದೇವೇಗೌಡರು ಕುಟುಂಬದವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಂದೆಡೆ ಅಪ್ಪ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಇನ್ನೊಂದು ಕಡೆ ಮಗ ನಿಖಿಲ್ ಪಾದಯಾತ್ರೆಯೊಂದಿಗೆ ದೇವೇಗೌಡರು ಮತ್ತೆ ತಮ್ಮ ಪಕ್ಷ ಕಟ್ಟಲು ಶುರು ಮಾಡಲಿದ್ದಾರೆ. ಜೊತೆಗೆ ಎರಡು ಕಾರ್ಯಕ್ರಮಗಳೊಂದಿಗೆ ಜೆಡಿಎಸ್‍ಗೆ ಶಕ್ತಿ ತುಂಬಲು ದೇವೇಗೌಡರಿಂದ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

    ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಬೆಂಗಳೂರು ನಗರ, ರಾಯಚೂರು ಜಿಲ್ಲೆಗಳಲ್ಲಿ ಮೊದಲ ಹಂತದ ಪಾದಯಾತ್ರೆ ಮಾಡುವ ಸಾಧ್ಯತೆಗಳಿವೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಜರ್ನಾದನ ರೆಡ್ಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್..!- ಪಾದಯಾತ್ರೆ ಉದ್ದಕ್ಕೂ ಸೆಲ್ಫಿಗಾಗಿ ನೂಕುನುಗ್ಗಲು

    ಜರ್ನಾದನ ರೆಡ್ಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್..!- ಪಾದಯಾತ್ರೆ ಉದ್ದಕ್ಕೂ ಸೆಲ್ಫಿಗಾಗಿ ನೂಕುನುಗ್ಗಲು

    ಬಾಗಲಕೋಟೆ: ಜಿಲ್ಲೆಯ ಬೆನಕಟ್ಟಿಯಲ್ಲಿ ನಡೆಯುತ್ತಿರುವ ಹೇಮ-ವೇಮ ರಥೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜರ್ನಾದನ ರೆಡ್ಡಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದ ದೃಶ್ಯ ಕಂಡುಬಂದಿದೆ.

    ಇಂದು ವೇಮನ ಜಯಂತಿ ಅಂಗವಾಗಿ ಜಿಲ್ಲೆಯ ಬೆನಕಟ್ಟಿಯಲ್ಲಿ ಹೇಮ-ವೇಮ ರಥೋತ್ಸವ ನಡೆಯುತ್ತಿದೆ. ಆದರಿಂದ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 8.5 ಕಿ.ಮೀ ಪಾದಯಾತ್ರೆಯಲ್ಲಿ ಜರ್ನಾದನ ರೆಡ್ಡಿ ಅವರು ಭಾಗಿಯಾಗಿದ್ದರು. ಈ ವೇಳೆ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದರು. ಪಾದಯಾತ್ರೆ ಉದ್ದಕ್ಕೂ ಜನಾರ್ದನ ರೆಡ್ಡಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮದಲ್ಲಿ ನೂಕುನುಗ್ಗಲೇ ಸೃಷ್ಟಿಯಾಗಿತ್ತು.

    ಕೂಡಲಸಂಗಮ ಕ್ರಾಸ್‍ನಿಂದ ಬೆನಕಟ್ಟಿವರೆಗೂ ಜನಾರ್ದನ ರೆಡ್ಡಿಯವರು ಭಕ್ತಾದಿಗಳೊಂದಿಗೆ ಪಾದಯಾತ್ರೆ ನಡೆಸಿದ್ದಾರೆ. ಕಳೆದ 50 ವರ್ಷಗಳಿಂದ ಬೆನಕಟ್ಟಿಯಲ್ಲಿ ಈ ರಥೋತ್ಸವ ನಡೆದುಕೊಂಡು ಬಂದಿದೆ. ಆದ್ರೆ ಇದೇ ಮೊದಲ ಬಾರಿಗೆ ರಥೋತ್ಸವಕ್ಕೆ ಜನಾರ್ದನ ರೆಡ್ಡಿ ಆಗಮಿಸಿದ್ದು, ಅವರನ್ನು ನೋಡಿ ಜನರಿಗೆ ಖುಷಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv