Tag: Padayatre

  • ಬ್ರಹ್ಮಚಾರಿಗಳ ಪಾದಯಾತ್ರೆಗೆ ಚಾಲನೆ ನೀಡಿದ ನಟ ಧನಂಜಯ

    ಬ್ರಹ್ಮಚಾರಿಗಳ ಪಾದಯಾತ್ರೆಗೆ ಚಾಲನೆ ನೀಡಿದ ನಟ ಧನಂಜಯ

    ಯಸ್ಸು ಏರುತ್ತಿದೆ ಹೀಗಾಗಿ ರೈತರ ಮಕ್ಕಳಿಗೆ ವಿವಾಹವಾಗಲು ಹುಡುಗಿ ಸಿಗುತ್ತಿವೆಂದು ಬ್ರಹ್ಮಚಾರಿಗಳ ತಂಡ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ (Padayatre) ಹೊರಟಿರುವ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆಗೆ ನಟ ಡಾಲಿ (Actor Dali) ಚಾಲನೆ ನೀಡಿದ್ದಾರೆ.

    ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಇದರಿಂದ ನೊಂದ ಯುವಕರು ವಧು ಸಿಗಲಿ ಎಂದು ಪ್ರಾರ್ಥನೆ ಮಾಡಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಹೊರಟಿದ್ದಾರೆ. ಮಂಡ್ಯದ ಕೆ.ಎಂ ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಬ್ರಹ್ಮಚಾರಿ ಯುವಕರ ಗುಂಪು ಸೇರಿಕೊಂಡು ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಹೊರಟಿದ್ದಾರೆ.

    ಅವಿವಾಹಿತರ ಯುವಕರ ಪಾದಾಯಾತ್ರೆ ನಟ ಡಾಲಿ ಚಾಲನೆ ನೀಡಿ ಸ್ವಲ್ಪ ದೂರ ಪಾದಯಾತ್ರಿಗಳೊಂದಿಗೆ ನಟ ಧನಂಜಯ ಹೆಜ್ಜೆ ಹಾಕಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾಲಿ, ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನಿಸ್ತು. ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದರು. ಇದು ನಿಜಕ್ಕೂ ಗಂಭೀರವಾದ ವಿಚಾರವಾಗಿದೆ. ನಾನು ಕೂಡ ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನ ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳುತ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದ್ರೆ ಲಿಂಗಾನುಪಾತ ಗೊತ್ತಾಗುತ್ತೆ. ನಾವು ಚಿಕ್ಕವನಿದ್ದಾಗನಿಂದಲೂ ಗಂಡು ಮಕ್ಕಳೇ ಬೇಕು ಅಂತಿದ್ದರು. ಹೆಣ್ಣು ಮಕ್ಕಳು ಹುಟ್ಟಿದ್ರೆ ತಾತ್ಸಾರದಿಂದ ನೋಡ್ತಿದ್ದರುಅದರ ರಿಸಲ್ಟ್ ಈಗ ಗೊತ್ತಾಗುತ್ತಿದೆ. ಹೆಣ್ಣು-ಗಂಡಿನ ನಡುವೆ ಲಿಂಗಾನುಪಾತ ಏರುಪೇರಾಗಿದೆ ಅನ್ನೋದು ತಿಳಿಯುತ್ತದೆ. ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮವಾಗಿದೆ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸಿದ್ದಾರೆ. ಈ ವೇಳೆ ನಟ ನಾಗಭೂಷಣ ಸಾಥ್ ನೀಡಿದ್ದಾರೆ.

    ಇನ್ನೂ ಈ ಪಾದಾಯಾತ್ರೆಯಲ್ಲಿ ಭಾಗವಹಿಸುವವರಿಗೆ 3 ಷರತ್ತುಗಳಿವೆ. ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ. ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟ ಹೆಚ್‍ಡಿಕೆ

    ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟ ಹೆಚ್‍ಡಿಕೆ

    ಬೆಂಗಳೂರು: ಕೆಲ ದಿನಗಳಿಂದ ಅಶಾಂತಿ ಬೇಗುದಿಯಲ್ಲಿ ಬೇಯುತ್ತಿರುವ ಕರ್ನಾಟಕ ರಾಜ್ಯವು ಒಂದು ತಿಂಗಳ ಒಳಗಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಹಾಗೂ ಸಾಮರಸ್ಯ ಕರ್ನಾಟಕದ ಪುನರ್ ಸ್ಥಾಪನೆಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

    ಬೆಂಗಳೂರಿನ ಗಾಂಧಿ ಭವನದಲ್ಲಿ ಜೆಪಿ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಸರ್ವ ಜನಾಂಗದ ಶಾಂತಿಯ ತೋಟ – ಕರ್ನಾಟಕ ಒಂದು ಭಾವೈಕ್ಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಶಾಂತಿ, ಸಹನೆ, ಸೌಹಾರ್ದ, ಸಾಮರಸ್ಯದ ತಾಣವಾಗಿದ್ದ ಕರ್ನಾಟಕವೂ ಈಗ ಹಿಂಸೆ, ಅಸಹನೆ, ಕೋಮು ದ್ವೇಷದ ದಳ್ಳುರಿಯಲ್ಲಿ ಉರಿಯುತ್ತಿದೆ. ಈ ಕಾರಣಕ್ಕಾಗಿಯೇ ನಾನು ಸರ್ಕಾರಕ್ಕೆ ಗಡುವು ಕೊಡುತ್ತಿದ್ದೇನೆ. ಒಂದು ತಿಂಗಳಲ್ಲಿ ಈ ವಾತಾವರಣವನ್ನು ತಿಳಿಗೊಳಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಅವರನ್ನು ಬಡಿದೆಬ್ಬಿಸುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ರಾಜ್ಯದಲ್ಲಿ ಸೃಷ್ಟಿ ಆಗಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ನಾಡಿನ ಮಕ್ಕಳನ್ನು ಇಂತದ್ದರಿಂದ ಪಾರು ಮಾಡಬೇಕು. ಪಾದಯಾತ್ರೆ ಮುಖಾಂತರ ಎಲ್ಲರನ್ನೂ ಭೇಟಿಯಾಗಿ ಮಾತನಾಡುತ್ತೇನೆ. ಸಮಾನ ಮನಸ್ಕರ ಜತೆ ಚರ್ಚೆ ನಡೆಸಿ ಮುಂದುವರಿಯುತ್ತೇನೆ ಎಂದರು.

    ರಾಜ್ಯದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಅವರು ಕಿಡಿಗೇಡಿ, ತಿಳಿಗೇಡಿ, ಸಮಾಜಘಾತಕರು ಈ ದೇಶವನ್ನೂ ಛಿದ್ರಗೊಳಿಸಲು ಹೊರಟಿದ್ದಾರೆ. ಯಾರ ಹೃದಯವನ್ನು ಸ್ವಚ್ಛ ಮಾಡುವುದು ಕಾಣುತ್ತಿಲ್ಲ. ಅದರ ವಿರುದ್ಧ ದನಿ ಎತ್ತಲು ಹೋದರೆ ಅಂತವರನ್ನು ಸಂಪೂರ್ಣ ನಿಗ್ರಹ ಮಾಡಲು ಕೆಲ ಸಂಸ್ಥೆಗಳನ್ನು ದಾಳಿಗೆ ಬಿಡುತ್ತಾರೆ. ವಿಹೆಚ್‍ಪಿ, ಭಜರಂಗದಳಕ್ಕಿಂತ ಇಡಿ, ಐಟಿ ಸಂಸ್ಥೆಗಳು ಭಯೋತ್ಪಾದಕ ಕೆಲಸ ಮಾಡುತ್ತಿವೆ ಎಂದು ಕೆಲ ಮಾಧ್ಯಮಗಳು ಬರೆದಿವೆ ಎಂದು ಹೇಳಿದರು.

    ಕರ್ನಾಟಕದಲ್ಲಿ ಇಂಥದ್ದಕ್ಕೆ ಅವಕಾಶ ಕೊಡುವ ಪ್ರಶ್ನೆ ಇಲ್ಲ. ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ ಎನ್ನುವುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರಿಗೂ ಹೆದರುವ ಪೈಕಿ ಅಲ್ಲ. ಹೋರಾಟ ನಡೆಸಿಯೇ ಸಿದ್ಧ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

  • ಹಿಂದೂ ಸಮಾಜದ ಐಕ್ಯತೆಗಾಗಿ ಹಿಂದೂಗಳ ಬೃಹತ್ ಪಾದಯಾತ್ರೆ

    ಹಿಂದೂ ಸಮಾಜದ ಐಕ್ಯತೆಗಾಗಿ ಹಿಂದೂಗಳ ಬೃಹತ್ ಪಾದಯಾತ್ರೆ

    ಮಂಗಳೂರು: ರಾಜ್ಯ ಕರಾವಳಿಯಲ್ಲಿ ಹಿಜಬ್ ವಿವಾದದ ಬಳಿಕ ಗೊಂದಲದ ವಾತವರಣ ನಿರ್ಮಾಣವಾಗಿದೆ. ಈ ನಡುವೆ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆ ನಡೆದಿದೆ. ಕರಾವಳಿಯ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಹದಿನೈದು ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ.

    ಹಿಜಬ್ ಕುರಿತು ಬಂದ ಕೋರ್ಟ್ ತೀರ್ಪು ವಿರೋಧಿಸಿ ಎರಡು ದಿನಗಳ ಹಿಂದೆ ಮುಸ್ಲಿಂ ಸಮುದಾಯದವರು ಒಂದು ದಿನದ ಬಂದ್ ಆಚರಿಸಿದ್ದರು. ಈ ಬಂದ್ ಬಳಿಕ ಸೋಷಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದೆ. ಹಿಂದೂ ಸಮಾಜ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜದ ಐಕ್ಯತೆಗಾಗಿ ಭಾನುವಾರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಕುರಾನ್,ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ:  ಕಲ್ಲಡ್ಕ ಪ್ರಭಾಕರ ಭಟ್

    ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಮಂಗಳೂರು ಹೊರವಲಯದ ಕುತ್ತಾರು ಬಳಿ ಇರುವ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ ಕದ್ರಿ ಶ್ರೀಮಂಜುನಾಥ ದೇವಸ್ಥಾನದಿಂದ ಪಾದಯಾತ್ರೆ ನಡೆಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು 15 ಕಿ.ಮೀ. ದೂರ ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದರು. ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಸಮಾರೋಪದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಜಾಗೃತಿ ಭಾಷಣ ಮಾಡಿದರು ಹಾಗೂ ಪ್ರತ್ಯೇಕವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಮುಂದೆ ಒಂದಲ್ಲಾ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಬಹುದು ಎಂಬ ವಿಶ್ವಾಸವನ್ನು ಪ್ರಭಾಕರ್ ಭಟ್ ವ್ಯಕ್ತಪಡಿಸಿದರು. ಆಕ್ರಮಣ ಆದಾಗ ಹಿಂದೂ ಸಮಾಜ ಪ್ರತಿರೋಧ ತೋರಿಸುತ್ತದೆ. ಶಾಂತಿ, ಸಾಮರಸ್ಯದ ಜೀವನ ದೌರ್ಬಲ್ಯ ಅಂದುಕೊಂಡರೆ ಅದು ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಮುಸಲ್ಮಾನರು ಹಿಜಬ್ ಹೆಸರಿನಲ್ಲಿ ಕೋರ್ಟ್ಗೆ ಹೋದರು. ತೀರ್ಪು ಬಂದ ಬಳಿಕ ಅದನ್ನು ಅವರು ಒಪ್ಪಲಿಲ್ಲ. ಅದು ಬಿಟ್ಟು ಪ್ರತಿಭಟನೆ ಮತ್ತು ನ್ಯಾಯಾಂಗ ನಿಂದನೆ ಮಾಡಿದರು. ಮುಸಲ್ಮಾನ ಸಾಮ್ರಾಜ್ಯ ನಿರ್ಮಾಣವೇ ಅವರ ಗುರಿ. ಇದಕ್ಕಾಗಿ ಹಿಂದೂ ಸಮಾಜ ಒಗ್ಗಟ್ಟಾಗಲು ಈ ನಡಿಗೆ ಎಂದು ಪ್ರಭಾಕರ್ ಭಟ್ ಹೇಳಿದರು.

    ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಭಟ್, ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಹಿಂದೂಗಳಾದ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

  • ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ಜೇಮ್ಸ್ ಚಿತ್ರದ ವಿಶ್ವದಾಖಲೆಗಾಗಿ ಪುಟಾಣಿಗಳ ಜೊತೆಗೆ 525 ಕಿಮೀ ಸಾಗಿದ ಕುಟುಂಬ

    ನೆಲಮಂಗಲ: ಅಪ್ಪು ಕೊನೆಯ ಸಿನಿಮಾ ಜೇಮ್ಸ್ ವಿಶ್ವದಾಖಲೆ ಮಾಡಲೆಂದು 7 ಮಕ್ಕಳ ಜೊತೆಗೆ ಇಲ್ಲೊಂದು ಕುಟುಂಬ ಕಾಲ್ನಡಿಗೆ ಮೂಲಕ ವಿಜಯಪುರದಿಂದ ಬೆಂಗಳೂರು ನಗರಕ್ಕೆ ಬರುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ. ವಿಜಯಪುರದ ಧರೆಪ್ಪ ಅರ್ದಾವೂರ್ ಮತ್ತು ವಿದ್ಯಾರಾಣಿ ದಂಪತಿ ಏಳು ಮಕ್ಕಳ ಜೊತೆಗೆ ಸುಮಾರು 525 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

    ಫೆಬ್ರವರಿ 25ರಂದು ಆರಂಭ ಮಾಡಿದ ಪಾದಯಾತ್ರೆ ಇಂದು ನೆಲಮಂಗಲ ಮೂಲಕ ಕಂಠೀರವ ಸ್ಟುಡಿಯೋ ತಲುಪಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಕುಟುಂಬವು ಪಾದಯಾತ್ರೆ ಜೊತೆಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:  ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ರಸ್ತೆಯದ್ದಕ್ಕೂ ಪುನೀತ್ ಅಭಿನಯದ ಚಲನಚಿತ್ರ ಗೀತೆಗಳ ಸಾರದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಪುನೀತ್ ರಾಜ್‍ಕುಮಾರ್ ಕನಸಿನಂತೆ ಕನ್ನಡ ಶಾಲೆಗಳ ಅಭಿವೃದ್ಧಿ ಜಾಗೃತಿ ಜಾಥಾ, ಅಂಗಾಂಗಗಳ ದಾನ ಮತ್ತು ನೇತ್ರದಾನ ಕುರಿತು ಜನಜಾಗೃತಿ ಪಾದಯಾತ್ರೆಯುದ್ದಕೂ ಅಭಿಮಾನವನ್ನು ವ್ಯಕ್ತಪಡಿಸಿದ ಕುಟುಂಬ ಇದಾಗಿದೆ. ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿರೋ ಉಕ್ರೇನ್ ರಿಟರ್ನ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ..?

  • ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ಹುಬ್ಬಳ್ಳಿ: ಸಿಬ್ಬಂದಿ ವೇತನ ಅನುದಾನಕ್ಕೆ ಒತ್ತಾಯಿಸಿ ಖಾಸಗಿ ಐಟಿಐ ಸಂಘಟನೆಯಿಂದ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.

    ಸಂಘಟನೆ ನೂರಾರು ಸದಸ್ಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನಗರದ ಮೂರುಸಾವಿರ ಮಠದಿಂದ ಆರಂಭಗೊಂಡಿರುವ ಈ ಪಾದಯಾತ್ರೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಮಾರ್ಗ ಮಧ್ಯೆ ವಿವಿಧ ಜಿಲ್ಲೆಯ ಸಿಬ್ಬಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಈ ಬಗ್ಗೆ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ಪ್ರದೀಪ್, ಸರ್ಕಾರ ಈ ಹಿಂದೆ ಐಟಿಐ ಕಾಲೇಜುಗಳಿಗೆ ಹಾಗೂ ಸಿಬ್ಬಂದಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಈ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗಾಗಿ ಸರ್ಕಾರ ನಮ್ಮ ಬೇಡಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒ ಪುತ್ರ ನಿಧನ!

  • ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡ ಪ್ರಜ್ವಲ್, ನಿಖಿಲ್

    ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡ ಪ್ರಜ್ವಲ್, ನಿಖಿಲ್

    ಹಾಸನ/ಚಾಮರಾಜನಗರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

    ಇಂದು ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಹೋಳೆನರಸಿಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಹುಟ್ಟೂರು ಹರದನಹಳ್ಳಿಗೂ ಹೋಗಿ ಮನೆದೇವರಿಗೆ ಪೂಜೆ ನೆರವೇರಿಸಿದರು. ಇವರು ಹಾಸನ, ಆಲೂರು, ಸಕಲೇಶಪುರ, ಶಿರಾಡಿಘಾಟ್ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

    ಎಲ್ಲಾ ತಾಲೂಕುಗಳಿಂದಲೂ ಬರುವ ಭಕ್ತರೊಟ್ಟಿಗೆ ಪಾದಯಾತ್ರೆ ನಡೆಸುತ್ತಾರೆ. ಪಾದಯಾತ್ರೆ ಮೂಲಕವಾಗಿಯೇ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪಕ್ಷದ ಜಲಧಾರೆ ಸೇರಿದಂತೆ ಜನಪರ ಕಾರ್ಯಗಳಿಗೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ಮಲೆ ಮಹದೇಶ್ವರ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ: ಇತ್ತ ಮಹದೇಶ್ವರ ಬೆಟ್ಟಕ್ಕೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾಳೆ ಹನೂರು ತಾಲೂಕು ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು 21 ಕಿಮೀ ಕಾಲ್ನಡಿಗೆ ಮೂಲಕ ತೆರಳಲಿದ್ದಾರೆ.  ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮೊದಲ ವ್ಯಕ್ತಿ ಡಿ.ಕೆ ಶಿವಕುಮಾರ್: ಕೆ.ಎಸ್ ಈಶ್ವರಪ್ಪ

    ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ವೇಳೆಯಲ್ಲೇ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಶಿವರಾತ್ರಿ ಪಾದಯಾತ್ರೆ ಕೈಗೊಂಡಿದ್ದಾರೆ. ಇದು ಕಾಂಗ್ರೆಸ್ ಪಾದಯಾತ್ರೆಗೆ ಪರ್ಯಾಯವಾಗಿ ಜೆಡಿಎಸ್ ಯುವ ನಾಯಕರ ಶಿವರಾತ್ರಿ ಪಾದಯಾತ್ರೆಯಾಗಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಪ್ರಜ್ವಲ್, ನಿಖಿಲ್ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಬುಲೆಟ್ ಬೈಕ್‍ಗೆ ಗುದ್ದಿದ ಕಾರ್ – ಇಬ್ಬರು ಯುವ ಟೆಕ್ಕಿಗಳು ದುರ್ಮರಣ

  • ಅಧಿಕಾರದ ಆಸೆಗೆ ಬಿಜೆಪಿ ಬಗ್ಗೆ ಮಾತನಾಡುವುದು ಸಿದ್ದರಾಮಯ್ಯ, ಡಿಕೆಶಿಗೆ ಶೋಭೆಯಲ್ಲ: ಮುನೇನಕೊಪ್ಪ

    ಅಧಿಕಾರದ ಆಸೆಗೆ ಬಿಜೆಪಿ ಬಗ್ಗೆ ಮಾತನಾಡುವುದು ಸಿದ್ದರಾಮಯ್ಯ, ಡಿಕೆಶಿಗೆ ಶೋಭೆಯಲ್ಲ: ಮುನೇನಕೊಪ್ಪ

    ರಾಯಚೂರು: ಚುನಾವಣೆ ಮುಂದಿಟ್ಟುಕೊಂಡು ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಉತ್ಸಾಹದಲ್ಲಿ ಕಾಂಗ್ರೆಸ್‍ನವರು ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಮಾತನಾಡುತ್ತಿದ್ದಾರೆ. ಅಧಿಕಾರದ ಆಸೆಗೆ ಈ ರೀತಿ ಮಾತನಾಡುವುದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಶೋಭೆ ತರುವಂತದಲ್ಲ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‍ನಿಂದ ಗೆದ್ದ ಶಾಸಕರು, ಸಚಿವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್‍ನಿಂದ ಬಂದವರು ಮತ್ತೆ ಕಾಂಗ್ರೆಸ್‍ಗೆ ಹೋಗುತ್ತಾರೆ ಎನ್ನವುದು ಕೇವಲ ರಾಜಕೀಯ ಹೇಳಿಕೆ ಅದಕ್ಕೆ ಅರ್ಥವಿಲ್ಲ ಎಂದರು.

    ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಆರಂಭವಾಗಿಲ್ಲ. ನಮ್ಮ ಹಿರಿಯರು ಅನುಭವಿಗಳಿದ್ದಾರೆ. ನಮ್ಮ ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದ ಅವರು, ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿರುವ ರಮೇಶ್ ಜಾರಕಿಹೊಳಿ ಹೇಳಿಕೆ ಸತ್ಯಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ನಾನು ಯಾರ ಸಂಪರ್ಕದಲ್ಲೂ ಇಲ್ಲ, ಬಿಜೆಪಿ ಸಂಪರ್ಕದಲ್ಲಿದ್ದೇನೆ: ಎಂಟಿಬಿ ನಾಗರಾಜ್

    ನಮ್ಮ ಸರ್ಕಾರ ಬರೋದಕ್ಕೆ ರಮೇಶ ಜಾರಕಿಹೊಳಿಯವರು ಪ್ರಮುಖರು. ತುಂಬಾ ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸಜವಾಗಿಯೇ ಆ ಪಕ್ಷದಲ್ಲಿ ಅವರಿಗೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಅವರು ಹೇಳಿದ ಮಾತು ಸತ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊರೊನಾ ನಿಯಂತ್ರಣದಲ್ಲಿ ಸರ್ಕಾರದಿಂದ ಅತ್ಯುತ್ತಮ ಸಾಧನೆ: ಗೆಹ್ಲೋಟ್

    ಕಾಂಗ್ರೆಸ್‍ನಿಂದ ಮಹಾದಾಯಿ ಹಾಗೂ ಕಳಸಾಬಂಡೂರಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಅವರು ಮೊದಲು ಸೋನಿಯಾ ಗಾಂಧಿ ಅವರ ಅಭಿಪ್ರಾಯ ತಿಳಿದುಕೊಂಡು ಮಾತನಾಡಲಿ. ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ನೀರು ಕೊಡಲ್ಲ ಎಂದು ಹೇಳಿದ್ದಾರೆ. ಕಳಸಾಬಂಡೂರಿ ಹಾಗೂ ಮಹಾದಾಯಿಗೆ ಒಂದು ಹನಿ ನೀರು ಕೊಡಲ್ಲ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಅವರು ಈಗಾಗಲೇ ಮೇಕೆದಾಟು ಪಾದಯಾತ್ರೆ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದಲ್ಲೇ ಪಾದಯಾತ್ರೆಗೆ ಮುಂದಾದಾಗ ಕೋರ್ಟ್ ಛೀಮಾರಿ ಹಾಕಿದೆ. ಕೇವಲ ರಾಜಕಾರಣಕ್ಕೋಸ್ಕರ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುತ್ತಾರೆ ಎಂದು ಟೀಕಿಸಿದರು.

  • ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

    ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

    ಬೆಂಗಳೂರು: ಮೇಕೆದಾಟು ಪಾದಯಾತ್ರೆ ಅಡೆತಡೆಯ ರಿವೆಂಜ್ ಗೆ ಕೈ ಪಾಳಯ ಮುಂದಾಯ್ತಾ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧ ರೂಲ್ಸ್ ಬ್ರೇಕ್ ಅಸ್ತ್ರ ಬಳಸಿದ್ದ ಬಿಜೆಪಿಗೆ ಅದನ್ನೇ ಪ್ರತ್ಯಾಸ್ತ್ರವಾಗಿ ಹೂಡಲು ಮುಂದಾಯ್ತಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ಹೌದು. ಕಮಲ ಪಾಳಯದ ರೂಲ್ಸ್ ಬ್ರೇಕ್ ವಿರುದ್ಧ ಕೈ ಪಾಳಯ ಕೋರ್ಟ್‍ಗೆ ಹೋಗಲು ನಿರ್ಧಾರ ಮಾಡಿದೆ. ಈ ಮೂಲಕ ಪಾದಯಾತ್ರೆ ಕೇಸ್ ಗೆ ಕೌಂಟರ್ ಅಟ್ಯಾಕ್ ಗೆ ಕೈ ಪಾಳಯ ಅಲರ್ಟ್ ಆಗಿದ್ದು, ನಾವು ದಾಖಲೆ ಸಹಿತ ಕೊಟ್ಟ ಅಷ್ಟೂ ದೂರಿಗೆ ಎಫ್ ಐಆರ್ ದಾಖಲಾಗಲಾಗಲೇಬೇಕು ಎಂದು ಕಿಡಿಕಾರಿದೆ.

    ಸಿಎಂ ಮುಂದೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಕಚೇರಿ ಧರಣಿಗೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನೊಂದು ಕಡೆ ಕೋರ್ಟ್ ಮೆಟ್ಟಿಲೇರಲು ಕೈ ನಾಯಕರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರ ಮೇಲೆ ಕೇಸ್‌ ಹಾಕಿ – ಸಿಎಂ ಮನೆ ಮುಂದೆ ಪ್ರತಿಭಟಿಸಲಿದ್ದಾರೆ ಡಿಕೆಶಿ, ಸಿದ್ದು

    ದಾಖಲೆ ಸಹಿತ ಕೋರ್ಟ್ ಮೆಟ್ಟಿಲೇರಿ ಅಷ್ಟು ಜನರ ವಿರುದ್ಧ ಎಫ್ ಐ ಆರ್ ದಾಖಲಿಗೆ ಸೂಚನೆ ಕೊಡುವಂತೆ ಕೈ ಪಾಳಯ ತೀರ್ಮಾನಿಸಿದೆ. ಅಲ್ಲದೆ ಯಾವ್ಯಾವ ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಕೇಸು ದಾಖಲಿಸಿಲ್ಲ. ಅಲ್ಲಿನ ಡಿಸಿ, ಎಸ್‍ಪಿ ಕೋರ್ಟ್ ಮೆಟ್ಟಿಲು ಹತ್ತಿಸಲು ಸಹಾ ಪ್ಲಾನ್ ರೂಪಿಸಿದೆ. ಒಟ್ಟಾರೆ ಒಂದು ಕಡೆ ಸಿಎಂ ನಿವಾಸದ ಮುಂದೆ ಧರಣಿ, ಇನ್ನೊಂದು ಕೆಡೆ ನಿಯಮ ಮೀರಿದ ಬಿಜೆಪಿ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಗೆ ಸೂಚನೆ ನೀಡುವಂತೆ ಕೋರ್ಟ್ ಮೊರೆ ಹೋಗಲಾಗುತ್ತಿದೆ. ಹೀಗೆ ಪಾದಯಾತ್ರೆ ವಿರುದ್ಧ ಕಾನೂನು ಅಸ್ತ್ರ ಬಳಸಿದ ಸರ್ಕಾರದ ವಿರುದ್ಧ ಕಾನೂನಿನ ಪ್ರತ್ಯಾಸ್ತ್ರ ಬಳಸಲು ಕಾಂಗ್ರೆಸ್ ಮುಂದಾಗಿದೆ.

    ಒಟ್ಟಿನಲ್ಲಿ ಪಾದಯಾತ್ರೆ ವಿಷಯದಲ್ಲಿ ಕೋರ್ಟ್ ಚಾಟಿ ಬೀಸಿದಂತೆ ಈಗಲೂ ಚಾಟಿ ಬೀಸುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ.

  • ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಅಂದು ಡಿಕೆಶಿ ನೀನು ಸಭೆ ಮಾಡಬೇಡ, ಇಂದು ಇಬ್ಬರು ಸೇರಿ ಸಭೆ ಮಾಡೋಣ ಬಾ

    ಬೆಂಗಳೂರು: ಏ ಡಿಕೆ ನನ್ನ ಜಿಲ್ಲೆಯಲ್ಲಿ ನಾನಿಲ್ಲದಾಗ ಸಭೆ ಮಾಡಬೇಡ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಡಿ.ಕೆ.ಶಿವಕುಮಾರ್ ಜೊತೆಗೂಡಿ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಾರೆ.

    ಹೌದು. ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ವಾರ್ನ್ ಮಾಡಿ ಸಿದ್ದರಾಮಯ್ಯ ಸಭೆ ನಿಲ್ಲಿಸಿದ್ದರು. ಆದರೆ ಈಗ ಸಿದ್ದರಾಮಯ್ಯರಿಂದ ಭಾನುವಾರ ಹಾಗೂ ಸೋಮವಾರ ಮೇಕೆ ದಾಟು ಪಾದಯಾತ್ರೆ ಸಭೆ ನಡೆಯಲಿದೆ. ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ – ಕರ್ನಾಟಕದಿಂದ 1007.18 ಕೋಟಿ ರೂ. ಬಿಡುಗಡೆ

    ಭಾನುವಾರ ಚಾಮರಾಜನಗರದಲ್ಲಿ ಹಾಗೂ ಸೋಮವಾರ ಮೈಸೂರಿನಲ್ಲಿ ಮೇಕೆದಾಟು ಸಂಬಂಧ ಸಭೆ ನಡೆಸಲಿರುವ ಸಿದ್ದರಾಮಯ್ಯ ಜೊತೆಗೆ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದರೆ.

    ಬೆಳಗಾವಿ ಅದಿವೇಶನದ ಸಂದರ್ಭದಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ನಾಯಕರ ಸಭೆ ನಡೆಸಲು ಡಿಕೆಶಿ ಮುಂದಾಗಿದ್ದರು. ನಾನಿಲ್ಲದಾಗ ನನ್ನ ಜಿಲ್ಲೆಯಲ್ಲಿ ಸಭೆ ನಡೆಸಬಾರದು ಎಂದು ಸುವರ್ಣ ಸೌಧದ ಲಾಂಜ್‍ನಲ್ಲೇ ಡಿಕೆಶಿಗೆ ಸಿದ್ದರಾಮಯ್ಯ ವಾರ್ನ್ ಮಾಡಿದ್ದರು. ಸಿದ್ದರಾಮಯ್ಯ ಮಾತಿಗೆ ಸಭೆ ನಡೆಸದೇ ಡಿಕೆಶಿ ಸೈಲೆಂಟಾಗಿದ್ದರು. ಇದನ್ನೂ ಓದಿ: ಸಚಿವರಲ್ಲಿ ಯಾರು ಪಾಸ್? ಫೇಲ್?: ಎಕ್ಸಾಂ ನಡೆಸಲು ಬರ್ತಾರಂತೆ ಅಮಿತ್ ಶಾ

  • ಹಾನಗಲ್‍ನಿಂದ ಪಾದಯಾತ್ರೆಯಲ್ಲಿ ಬಂದ 76 ವರ್ಷದ ಭಕ್ತ

    ಹಾನಗಲ್‍ನಿಂದ ಪಾದಯಾತ್ರೆಯಲ್ಲಿ ಬಂದ 76 ವರ್ಷದ ಭಕ್ತ

    ಉಜಿರೆ: ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ 76 ವರ್ಷದ ಮಾಲತೇಶಗೊರಪಜ್ಜ ಪಾದಯಾತ್ರೆ ಮೂಲಕ ಶನಿವಾರ ಧರ್ಮಸ್ಥಳ ತಲುಪಿದ್ದಾರೆ. ಕಳೆದ 40 ವರ್ಷಗಳಿಂದ ಪ್ರತಿವರ್ಷ ಲಕ್ಷ ದೀಪೋತ್ಸವಕ್ಕೆ ಧರ್ಮಸ್ಥಳಕ್ಕೆ ಅವರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ.

    ನವೆಂಬರ್ 17 ರಂದು ಅವರು ಹಾನಗಲ್‍ನಿಂದ ಪಾದಯಾತ್ರೆ ಪ್ರಾರಂಭಿಸಿದ್ದರು. ಪಾದಯಾತ್ರೆಯಲ್ಲಿ ತನಗೆ ಎಲ್ಲರೂ ಸಹಕಾರ ನೀಡುತ್ತಾರೆ. ಪಾದಯಾತ್ರೆಯಿಂದ ತನ್ನ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಿದೆ. ಮಾನಸಿಕ ನೆಮ್ಮದಿ, ಶಾಂತಿ, ಸಂತೋಷ ಸಿಕ್ಕಿದೆ ಎಂದು ಅಭಿಮಾನದಿಂದ ಹೇಳುತ್ತಾರೆ ಮಾಲತೇಶಗೊರಪಜ್ಜ.