Tag: Padayatra

  • ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

    ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

    ಬೆಂಗಳೂರು: ಮುಡಾ ಹಗರಣದ (MUDA Scam) ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ. ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರುತ್ತಾರೆಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಸಲಹೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

    ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಗತ್ತಿಗೆ ವಾಸ್ತವ ಸ್ಥಿತಿ ತಿಳಿದಿದೆ. ಹೀಗಾಗಿ ಅವರು ಯಾವುದೇ ಆರೋಪಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ರಾಜ್ಯಪಾಲ ಕಚೇರಿ ದುರ್ಬಳಕೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ವಾಸ್ತವಿಕ ಸತ್ಯ ಸಂಗತಿ ದೇಶದ ಜನರಿಗೆ ಗೊತ್ತಿದೆ. ಈ ರೀತಿಯ ಆರೋಪ ಮಾಡುವುದರಿಂದ ಅವರು ಆರೋಪದಿಂದ ಮುಕ್ತ ಆಗಲು ಆಗುವುದಿಲ್ಲ. ಈ ರೀತಿಯ ಮಾತುಗಳಿಂದ ಅವರು ಬಚಾವ್ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಯನಾಡು ಭೂಕುಸಿತ; ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಟ್ಟದಲ್ಲಿ ಕಾವಲಾಗಿ ನಿಂತ ಗಜರಾಜ

  • ಬೆಂಗಳೂರುTo ನಂಜನಗೂಡು: ಕಾಲ್ನಡಿಗೆಯಲ್ಲಿ ನಟ ವಿಜಯ್ ಪಯಣ

    ಬೆಂಗಳೂರುTo ನಂಜನಗೂಡು: ಕಾಲ್ನಡಿಗೆಯಲ್ಲಿ ನಟ ವಿಜಯ್ ಪಯಣ

    ಟ ದುನಿಯಾ ವಿಜಯ್ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ. ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜೊತೆ ನಡೆದುಕೊಂಡೇ ನಂಜನಗೂಡು ತಲುಪಿದ್ದಾರೆ. ಹಗಲು ರಾತ್ರಿ ಲೆಕ್ಕಿಸದೇ ಪಾದಯಾತ್ರೆ ಮಾಡಿದ್ದಾರೆ ವಿಜಯ್.

    ಸದ್ಯ ಭೀಮ ಸಿನಿಮಾದ ಶೂಟಿಂಗ್ ಮುಗಿಸಿರುವ ವಿಜಯ್, ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.  ಈ ಹೊಸ ಚಿತ್ರಕ್ಕೆ ಮೊನ್ನೆಯಷ್ಟೇ ರಾಜ್ ಬಿ ಶೆಟ್ರಿ (Raj B Shetty) ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಲಿದ್ದಾರೆ. ಆ ಪಾತ್ರ ಏನು ಅನ್ನುವುದನ್ನು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಲಿದೆ.

    ದುನಿಯಾ ವಿಜಯ್ ಮತ್ತು ರಚಿತಾ ರಾಮ್ (Rachita Ram) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ಮುಹೂರ್ತವಾಗಿದೆ (Muhurta). ಇನ್ನೂ ಚಿತ್ರಕ್ಕೆ ಹೆಸರು ಇಟ್ಟಿಲ್ಲವಾದರೂ, ಈ ಕಾಂಬಿನೇಷನ್ ನ 2ನೇ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ (Monica Vijay) ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೋನಿಕಾ ಚಿತ್ರೋದ್ಯಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.

     

    ಈ ಸಿನಿಮಾವನ್ನು ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದರೆ,  ಜಡೇಶ್ ಕೆ.ಹಂಪಿ  ಅವರ ನಿರ್ದೇಶನವಿದೆ. ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ನಂತರ ಈ ಜೋಡಿ ಒಂದಾಗುತ್ತಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

  • ಬಿಲ್ಲವರಿಗೆ ಮೀಸಲಾತಿ ನೀಡಿ – ಬೃಹತ್ ಹಕ್ಕೋತ್ತಾಯ

    ಬಿಲ್ಲವರಿಗೆ ಮೀಸಲಾತಿ ನೀಡಿ – ಬೃಹತ್ ಹಕ್ಕೋತ್ತಾಯ

    ಮಂಗಳೂರು: ರಾಜ್ಯದಲ್ಲಿ ಈಗ ಮೀಸಲಾತಿ ವಿಚಾರವೇ ಹೆಚ್ಚು ಚರ್ಚೆಯಲ್ಲಿದೆ. ಇದೀಗ ಈಡಿಗ-ಬಿಲ್ಲವ (Billava) ಸಮುದಾಯವನ್ನು ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಕೇಳಿ ಬಂದಿದೆ. ಕರಾವಳಿಯಲ್ಲಿ ನಿರ್ಣಾಯಕ ಮತದಾರರಾಗಿರುವ ಬಿಲ್ಲವ ಸಮುದಾಯ ಈ ವಿಚಾರದಲ್ಲಿ ಚುನಾವಣೆ ಹೊತ್ತಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ನಡುವೆ ಸಮುದಾಯದ ಸ್ವಾಮೀಜಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪಾದಯಾತ್ರೆಗೂ (Padayatra) ತಯಾರಿ ಮಾಡಿಕೊಂಡಿದ್ದಾರೆ.

    ಕರಾವಳಿಯಲ್ಲಿ (Karavli) ಮೀಸಲಾತಿ ಹೆಸರಲ್ಲಿ ಬಿಲ್ಲವರು ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲೇ ಬಿಜೆಪಿ (BJP) ಸರ್ಕಾರದ ವಿರುದ್ಧ ತೊಡೆ ತಟ್ಟಲು ಈಡಿಗ-ಬಿಲ್ಲವ ಸಮುದಾಯ ಸಜ್ಜಾಗಿದ್ದು ಜನವರಿ ಅಂತ್ಯದಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದಕ್ಕೆ ನಿರ್ಧರಿಸಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಸಭೆ ಸೇರಿದ ಬಿಲ್ಲವ ಮುಖಂಡರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರ್ಣಾಯಕವಾಗಿರೋ ಬಿಲ್ಲವ ವೋಟ್ (Vote) ಬ್ಯಾಂಕ್ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಸಮಾವೇಶ ನಡೆಸುತ್ತಿದೆ. ರಾಜ್ಯದಲ್ಲಿ ಸುಮಾರು 75 ಲಕ್ಷದಷ್ಟಿರೋ ಈಡಿಗ-ಬಿಲ್ಲವ ಸಮುದಾಯ ಸುಮಾರು 26 ಪಂಗಡಗಳನ್ನು ಹೊಂದಿದೆ. ಸದ್ಯ ಪ್ರವರ್ಗ 2ಎ (2A) ಅಡಿ ಸೇರಿರೋ ಬಿಲ್ಲವ-ಈಡಿಗ ಸಮುದಾಯ ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಮಾಡಿದೆ. ಇದರ ಜೊತೆ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು, ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯವು ಇದೆ. ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ – ಪ್ರಸವದ ವೇಳೆ ಬಾಣಂತಿ, ಅವಳಿ ಶಿಶುಗಳು ಸಾವು

    ಈ ನಡುವೆ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕಲಬುರಗಿಯ ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಸುಮಾರು 658 ಕಿ.ಮೀ ದೂರದ ಪಾದಯಾತ್ರೆಯನ್ನು ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಜನವರಿ 6 ರಂದು ಈ ಪಾದಯಾತ್ರೆ ಆರಂಭವಾಗಲಿದ್ದು, ಒಟ್ಟು 35 ದಿನಗಳ ಕಾಲ ಈ ಪಾದಯಾತ್ರೆ ಸಾಗಲಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. 500 ಕೋಟಿ ರೂ. ಅನುದಾನ ಮೀಸಲಿರಿಸಿ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ಈಡಿಗ-ಬಿಲ್ಲವ ಸಮುದಾಯವನ್ನು ಪ್ರವರ್ಗ 1 ರಡಿ ಸೇರ್ಪಡೆಗೊಳಿಸಬೇಕು. ಚುನಾವಣೆ ಹೊತ್ತಲ್ಲಿ ಟಿಕೆಟ್ ನೀಡುವಲ್ಲಿ ಬಿಲ್ಲವರ ಕಡೆಗಣನೆ ಮಾಡುತಿದ್ದು ಹೀಗಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬುದು ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

    ನಾರಾಯಣ ಗುರು ಟ್ಯಾಬ್ಲೋ, ಪಠ್ಯ ಪುಸ್ತಕ ವಿವಾದದ ಬಳಿಕ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಬಿಜೆಪಿ ತುತ್ತಾಗಿತ್ತು. ಇದೀಗ ಕಳೆದ ಆರು ವರ್ಷಗಳ ಮಹಾ ಬೇಡಿಕೆಗೆ ಚುನಾವಣೆ ಹೊತ್ತಲ್ಲೇ ಮರುಜೀವ ಬಂದಿದ್ದು, ಬಿಜೆಪಿ ಇದನ್ನು ಹೇಗೆ ನಿಭಾಯಿಸುತ್ತೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಿಶ್ಚಿತ ಪಿಂಚಣಿಗೆ ಆಗ್ರಹಿಸಿ ಅನುದಾನಿತ ಶಾಲಾ, ಕಾಲೇಜು ನೌಕರರಿಂದ ಬೃಹತ್ ಪಾದಯಾತ್ರೆ

    ನಿಶ್ಚಿತ ಪಿಂಚಣಿಗೆ ಆಗ್ರಹಿಸಿ ಅನುದಾನಿತ ಶಾಲಾ, ಕಾಲೇಜು ನೌಕರರಿಂದ ಬೃಹತ್ ಪಾದಯಾತ್ರೆ

    – ಸಿದ್ದಗಂಗಾ ಶ್ರೀಗಳಿಂದ ಚಾಲನೆ
    – ದಾಬಸ್ ಪೇಟೆ ತಲುಪಿದ ಮೊದಲ ದಿನ ಕಾಲ್ನಡಿಗೆ ಹೋರಾಟ

    ತುಮಕೂರು: ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕರು (Teachers) ಹಾಗೂ ನೌಕರರಿಗೆ (Employees) ನಿಶ್ಚಿತ ಪಿಂಚಣಿ (Fixed Pension) ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ತುಮಕೂರು (Tumakuru) ಸಿದ್ದಗಂಗಾ ಮಠದಿಂದ (Siddaganga Mutt) ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೂ ನಡೆಸುತ್ತಿರುವ ಬೃಹತ್ ಪಾದಯಾತ್ರೆ, ಪ್ರತಿಭಟನೆಗೆ (Protest) ಶುಕ್ರವಾರ ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

    ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಕಾಲ್ನಡಿಗೆ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಶ್ರೀಗಳು, ಈಗಾಗಲೇ ನಿವೃತ್ತರಾಗಿರುವ ಎಷ್ಟೋ ಶಿಕ್ಷಕರು ಪಡಬಾರದ ಕಷ್ಟಗಳನ್ನು ಪಡುತ್ತಿರುವುದು ಅಂತ್ಯಂತ ನೋವು ತಂದಿದೆ. ಆದ್ದರಿಂದ ಸರ್ಕಾರ ಕೂಡಲೇ ಅನುದಾನಿತ ನೌಕರರ ನ್ಯಾಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಮಹಿಳೆಗೆ ಮಾಸ್ಕ್ ತೊಡಿಸಿದ ರಾಗಾ

    ಕಾಲ್ನಡಿಗೆ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5,000 ನೌಕರರು ಪಾಲ್ಗೊಂಡಿದ್ದು, ಪಾದಯಾತ್ರೆಯ ಮೊದಲ ದಿನ ದಾಬಸ್ ಪೇಟೆ ತಲುಪಿದೆ. ಶನಿವಾರ ಅರೆ ಬೆತ್ತಲೆಯಾಗಿ ಕಾಲ್ನಡಿಗೆ ಹೋರಾಟ ನಡೆಸುತ್ತೇವೆ ಎಂದು ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತು ರಾಜ ಮತ್ತಿಕೊಪ್ಪ, ಸಂಘಟನಾ ಕಾರ್ಯದರ್ಶಿ ಹೊಸದುರ್ಗ ಪ್ರಕಾಶ್ ಎನ್‌ಒ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಚಿಕ್ಕೋಡಿ: ಹನುಮಂತನ ಜಯಂತಿ ಹಿನ್ನಲೆ ಶಾಸಕ ಗಣೇಶ್ ಹುಕ್ಕೇರಿಯವರು ತಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಜಿಲ್ಲೆಯಿಂದ ಚಿಕ್ಕೋಡಿ ತೋರಣಹಳ್ಳಿಯ ಹನುಮಂತನ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಿದ್ದಾರೆ.

    Ganesh Hukkeri

    ರಾಮಭಕ್ತ, ಪವನ ಪುತ್ರ ಹನುಮಂತ ಜಯಂತಿ ಹಿನ್ನಲೆ ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಹನುಮಂತ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ಗಣೇಶ್ ಹುಕ್ಕೇರಿಯವರು ತಮ್ಮ ಅಪಾರವಾದ ಕಾರ್ಯಕರ್ತರ ಜೊತೆಗೆ ಚಿಕ್ಕೋಡಿಯ ಬಸವ ವೃತ್ತದಿಂದ ತೋರಣಹಳ್ಳಿಯ ಹನುಮಂತನ ದೇವಸ್ಥಾನವರೆ ಪಾದಯಾತ್ರೆ ಮಾಡಿ ಆಂಜನೇಯನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಪಾದಯಾತ್ರೆಯಲ್ಲಿ ಹನುಮಂತ ಭಕ್ತರು, ಗಣೇಶ್ ಹುಕ್ಕೇರಿ ಅವರ ಕಾರ್ಯಕರ್ತರು ಚಿಕ್ಕೋಡಿ ಪುರಸಭೆ ಸದಸ್ಯರು ಸೇರಿದಂತೆ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಜನರು ಭಾರೀ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಗಣೇಶ್ ಹುಕ್ಕೇರಿಯವರಿಗೆ ತೋರಣ ಹಳ್ಳಿಯ ಹನುಮಂತ ಎಂದರೆ ಅಪಾರವಾದ ಭಕ್ತಿ, ಶ್ರದ್ಧೆ. ಈ ಕಾರಣಕ್ಕಾಗಿ ಗಣೇಶ್ ಹುಕ್ಕೇರಿಯವರು ಇಲ್ಲಿನ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದಾರೆ.

    Ganesh Hukkeri

    ಪಾದಯಾತ್ರೆಯ ಉದ್ದಕೂ ಶ್ರೀರಾಮ ಜೈ…ಜೈ..ರಾಮ ಎನ್ನುವ ಘೋಷಣೆಗಳು ಮೊಳಗಿದವು. ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಸುಮಾರು 15 ಕಿ.ಮೀ. ವರೆಗೆ ಈ ಪಾದಯಾತ್ರೆ ನಡೆಯಿತು. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

  • ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ

    ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ

    ಯಾದಗಿರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ವಿಶೇಷ ವಿಕಲಚೇತನ ಅಭಿಮಾನಿಯಿಂದ ಅವರ ಸಮಾಧಿ ದರ್ಶನ ಪಡೆಯಲು ಯಾದಗಿರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದ್ದಾರೆ.

    ನಗರದ ವಡಿಗೇರಾ ತಾಲೂಕಿನ ಐಕೂರ್ ಗ್ರಾಮದ ವಿಶೇಷ ವಿಕಲಚೇತನ ರವಿಕುಮಾರ್ ಎಂಬುವವರು ಈ ಪಾದಯಾತ್ರೆ ಕೈಗೊಂಡಿದ್ದಾರೆ. ರವಿಯವರು ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅಪ್ಪು ಸಮಾಧಿ ದರ್ಶನ ಪಡೆಯಲು ಸುಮಾರು 500 ಕಿ.ಮೀ ಪ್ರಯಾಣ ಬೆಳೆಸಲಿದ್ದಾರೆ. ಅಭಿಮಾನಿಯು ಅಪ್ಪು ಪೋಟೋ ಕೈಯಲ್ಲಿ ಹಿಡಿದುಕೊಂಡು ಪಾದಯಾತ್ರೆ ಹೊರಟಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುನೀತ್ ಬದುಕಿದ್ದಾಗ ಭೇಟಿಯಾಗಲು ಆಗಿರಲಿಲ್ಲ. ಹಾಗಾಗಿ ಅವರ ಸಮಾಧಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತೇನೆ. ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ಸಹಾಯ ಮಾಡುವ ಗುಣ ಮೆಚ್ಚುವಂತದ್ದು, ಅವರು 100 ವರ್ಷ ಕಾಲ ಬಾಳಿ ಬದುಕಬೇಕಾಗಿತ್ತು. ಅವರ ಅಕಾಲಿಕ ಮರಣ ನನಗೆ ಬಹಳ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

    ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

    ಬೆಂಗಳೂರು: ಏನೇ ಅದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಅಲ್ಲ ದೇಶದಲ್ಲಿ ಹೋರಾಟ ಮಾಡಲಿ. ಮಂತ್ರಿ ನುಡಿಮುತ್ತುಗಳನ್ನಾಡಿದ್ದಾರೆ. ಸಿಎಂ ಬಿಜೆಪಿ ಅಧ್ಯಕ್ಷ, ಅಶೋಕ್ ಅವರ ಎಲ್ಲಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ಬಿಜೆಪಿ ಅವರ ಸಂಸ್ಕೃತಿ ಅನಾವಣರ ಆಗಿದೆ. ಅವರ ವಿಶ್ವರೂಪ ದರ್ಶನ ಆಗಿದೆ ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಸುಧಾಕರ್ ಮನವಿ ಮಾಡಿದ್ದಾರೆ. ಬಹಳ ಸಂತೋಷ. ಆದರೆ ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ. ಇದನ್ನೂ ಓದಿ: ರಾಮನಗರಕ್ಕೂ ಸಚಿವರಿಗೂ ಏನು ಸಂಬಂಧ? – ಡಿಕೆಶಿ ಪ್ರಶ್ನೆಗೆ ಉತ್ತರ ನೀಡಿದ ಅಶ್ವಥ್‌ ನಾರಾಯಣ್‌

    ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ?. ಜನರಿಗೆ ತೊಂದರೆ ಆಗ್ತಾ ಇದೆ ಮೊದಲು ಅದನ್ನು ನೋಡಿ. ಕೊರೊನಾ ಸ್ಫೋಟವಾದರೆ ಕಾಂಗ್ರೆಸ್ ಹೊಣೆ ಎಂದು ಸುಧಾಕರ್ ಹೇಳಿದ್ದಾರೆ. ಈಗಾಗಲೇ ನಮ್ಮ ವಿರುದ್ಧ ಕೇಸ್ ಕೂಡ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ ಏಕೆ ಅವರ ವಿರುದ್ಧ ಕೇಸ್ ಮಾಡಿಲ್ಲ? ಸಿಎಂ ವಿರುದ್ಧ ಕೇಸ್ ಹಾಕಲಿ ಮೊದಲು. ಸುಧಾಕರ್, ಏರ್​ಪೋರ್ಟ್​ನಲ್ಲಿ  ಹರಾಸ್‍ಮೆಂಟ್ ನಡಿತಾ ಇದೆ. ಊಟ ಹೋಟೆಲ್ ಎಲ್ಲಾ ಅಡ್ಜಸ್ಟ್​ಮೆಂಟ್​ ಮಾಡ್ಕೋತಾ ಇದ್ದಾರೆ ಮೊದಲು ಅದನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದರು.

    ರಿಪಬ್ಲಿಕ್ ಆಫ್ ರಾಮನಗರ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಜನ ಅಲ್ಲಿದ್ದಾರೆ. ಅವರು ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

  • ಜೆಡಿಎಸ್‍ನ ಮುಂದಿನ ನಡೆಯೇನು?

    ಜೆಡಿಎಸ್‍ನ ಮುಂದಿನ ನಡೆಯೇನು?

    ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದು ಹೋದ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲೀಗ ಮೌನ ಆವರಿಸಿದ್ದು, ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಶಾಸಕರ ಸಭೆ ನಡೆಯಲಿದೆ.

    ಅನಿರೀಕ್ಷಿತವಾಗಿ ಸಿಕ್ಕ ಅಧಿಕಾರ ಅಲ್ಪಾವಧಿಗೆ ಹೋಗಿದ್ದರಿಂದ ಈಗ ಗೌಡರ ಕುಟುಂಬದ ಚಿತ್ತ ಸಹಜವಾಗಿಯೇ ಪಕ್ಷ ಸಂಘಟನೆಯತ್ತ ಹೊರಳುವ ಸಾಧ್ಯತೆ ಇದೆ. ಲೋಕಸಭಾ ಸೋಲಿನ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಬಲವರ್ಧನೆಯ ಘೋಷಣೆ ಮಾಡಿದ್ದರು.

    ಆಗಸ್ಟ್ 20ರಿಂದ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ಜೆಡಿಎಸ್ ಪ್ರಾಬಲ್ಯ ಇರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದ್ದು, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಸಾಗಲಿದೆ.

    ಮುಂದಿನ ನಡೆಯೇನು..?
    ಮೊದಲಿಗೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾಗಿ ಪಾಠ ಕಲಿಸಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ರಾಜಕೀಯ ಜೀವನ ಮುಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವುದು ಅವರ ಮುಂದಿನ ಗುರಿಯಾಗಿದ್ದು, ತಾತ, ಅಪ್ಪ, ಮಗನಿಂದ ಜೆಡಿಎಸ್ ಪಾರ್ಟಿ ಉಳಿವಿಗೆ ಕೆಲಸ ಪ್ರಾರಂಭಿಸುವುದಾಗಿದೆ.

    ಆಗಸ್ಟ್ ತಿಂಗಳಿಂದಲೇ ದೇವೇಗೌಡರು ಪಕ್ಷ ಸಂಘಟನೆ ಕೆಲಸ ಶುರು ಮಾಡಲಿದ್ದು, ಮೊದಲಿಗೆ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಪಾದಯಾತ್ರೆ ಪ್ಲಾನ್ ಮಾಡಿದ್ದಾರೆ. ಮುಖ್ಯವಾಗಿ ಪಕ್ಷಕ್ಕೆ ದ್ರೋಹ ಬಗೆದ ಅತೃಪ್ತರನ್ನ ಉಪ ಚುನಾವಣೆಯಲ್ಲಿ ಸೋಲಿಸುವುದು ಗೌಡರ ಕುಟುಂಬದ ಮೊದಲ ಟಾರ್ಗೆಟ್ ಆಗಿದೆ ಎಂದು ಹೇಳಲಾಗುತ್ತಿದೆ.

  • ಸಿಎಂ ಎಚ್‍ಡಿಕೆಗಾಗಿ ಹರಕೆ ಹೊತ್ತಿದ್ದ ಮಂದಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

    ಸಿಎಂ ಎಚ್‍ಡಿಕೆಗಾಗಿ ಹರಕೆ ಹೊತ್ತಿದ್ದ ಮಂದಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

    ಚಿಕ್ಕಮಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದ ಜಿಲ್ಲೆಯ ಕಂಚೀಪುರ ಗ್ರಾಮದ ಹತ್ತು ಜನ 219 ಕಿ.ಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ.

    ಏಳು ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ ಮೂರು ದಿನ ಕಳೆದಿದ್ದು, ಪ್ರತಿ ರಾತ್ರಿ ದೇವಸ್ಥಾನಗಳಲ್ಲಿ ಆಶ್ರಯ ಪಡೆದು ಮುಂದೆ ಸಾಗುತ್ತಿದ್ದಾರೆ. ಸದ್ಯ ಇವರ ಪಾದಯಾತ್ರೆ ಚಿಕ್ಕಮಗಳೂರಿನಲ್ಲಿ ಸಾಗುತ್ತಿದೆ. ಕಾಲ್ನಡಿಗೆ ಮೂಲಕ ಸಾಗುತ್ತಿರುವ ಇವರು ಕುಮಾರಸ್ವಾಮಿಗೆ ಎಲ್ಲಾ ಸವಾಲುಗಳನ್ನ ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರಿಸುವ ಶಕ್ತಿ ನೀಡಲೆಂದು ಬೇಡಿಕೊಳ್ಳುತ್ತೇವೆ ಅಂತ ಅವರು ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೂ ಹಲವು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸಲೆಂದೇ ಬಿಜೆಪಿ ಹಲವು ಆರೋಪಗಳನ್ನ ಮಾಡುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೂಡ ಕುಮಾರಸ್ವಾಮಿ ಅವರಿಗೆ ತೊಂದರೆ ಕೊಡಲೆಂದೇ ಮಾಡುತ್ತಿರುವ ಹಿಡನ್ ಅಜೆಂಡಾ ಎಂದು ಅವರು ಆರೋಪಿಸಿದರು.

    ಕುಮಾರಸ್ವಾಮಿಯ ಅಪ್ಪಟ ಭಕ್ತರಂತೆ ಹತ್ತು ಜನರೂ ಎಚ್‍ಡಿಕೆಯ ಭಾವಚಿತ್ರವಿರುವ ಒಂದೇ ರೀತಿಯ ಟೀ ಶರ್ಟ್ ಧರಿಸಿಕೊಂಡು ಪಾದಯಾತ್ರೆ ತೆರಳುತ್ತಿದ್ದಾರೆ.

  • ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗ್ಳೂರು ರಕ್ಷಿಸಿ’ ಯಾತ್ರೆ

    ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗ್ಳೂರು ರಕ್ಷಿಸಿ’ ಯಾತ್ರೆ

    ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ.

    ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ.

    ಸಂಜೆ 4 ಗಂಟೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಯುಬಿ ಸಿಟಿ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳಲ್ಲಿ ಸಾಗಲಿದೆ. 14 ದಿನಗಳ ಕಾಲ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದ್ದು, ಬಿಜೆಪಿ ನಾಯಕರು ಕಾಲ್ನಡಿಗೆಯಲ್ಲಿ ಈ ಯಾತ್ರೆಗೆ ಪಾಲ್ಗೊಳ್ಳುತ್ತಾರೆ.

    ಪ್ರತಿದಿನ ಸುಮಾರು 3 ಕಿಲೋಮೀಟರ್ ನಡಿಗೆ ಇರಲಿದ್ದು, ಪಾದಯಾತ್ರೆಯಲ್ಲಿ ದಿನಂಪ್ರತಿ ಕೇಂದ್ರದ ಓರ್ವ ನಾಯಕ ಭಾಗಿಯಾಗಲಿದ್ದಾರೆ. ಮಾರ್ಚ್ 16ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭಕ್ಕೆ ಅಮಿತ್ ಶಾ ಭಾಗಿಯಾಗಲಿದ್ದಾರೆ.