Tag: Padarayanapura

  • ಪಾದರಾಯನಪುರದ ಪುಂಡರಿಗೆ ಷರತ್ತುಬದ್ಧ ಜಾಮೀನು

    ಪಾದರಾಯನಪುರದ ಪುಂಡರಿಗೆ ಷರತ್ತುಬದ್ಧ ಜಾಮೀನು

    ಬೆಂಗಳೂರು: ಪಾದರಾಯನಪುರಲ್ಲಿ ಪೊಲೀಸರ ಮೇಲೆ ಹಲ್ಲೆ ಎಸೆಗಿದ್ದ ಪ್ರಕರಣದ ಎಲ್ಲಾ 126 ಆರೋಪಿಗಳಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಎಲ್ಲ ಆರೋಪಿಗಳಿಗೂ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ನಡೆಸಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದರೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ ಎಲ್ಲರೂ ಕೋವಿಡ್-19 ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದರೆ ಜಾಮೀನು ರದ್ದುಗೊಳ್ಳುವುದಾಗಿ ಹೈಕೋರ್ಟ್ ಷರತ್ತು ವಿಧಿಸಿದೆ.

    ಆರೋಪಿಗಳು 1 ಲಕ್ಷ ರೂ. ಬಾಂಡ್, ಶ್ಯೂರಿಟಿ ಒದಗಿಸಬೇಕು ಎಂದು ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿದೆ.

    ಏನಿದು ಪ್ರಕರಣ:
    ಪಾದರಾಯನಪುರದಲ್ಲಿ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇರ್ಫಾನ್‍ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

    ಆರೋಪಿಗಳ ಪರ ವಕೀಲ ಇಸ್ಮಾಯಿಲ್ ಜಬೀವುಲ್ಲಾ ಅವರು ಕಕ್ಷಿದಾರರಿಗೆ ಜಾಮೀನು ನೀಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ವಿಚಾರಣೆ ನಡೆಸಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಇರ್ಫಾನ್ ಯಾರು?:
    ಕೆಎಫ್‍ಡಿಯ ಇರ್ಫಾನ್ ಕೇವಲ ಕೆಎಫ್‍ಡಿನಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್‍ಗೆ ನಿಂತು ಸೋತಿದ್ದ. ಈ ಮೂಲಕ ಎಸ್‍ಡಿಪಿಐನಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿತ್ತು.

  • ಮತ್ತೊಂದು ಪಾದರಾಯನಪುರ ಆಯ್ತಾ ಯಾದಗಿರಿ?

    ಮತ್ತೊಂದು ಪಾದರಾಯನಪುರ ಆಯ್ತಾ ಯಾದಗಿರಿ?

    – ಹೋಮ್ ಗಾರ್ಡ್ಸ್ ಗಳ ಮೇಲೆ ಡೆಡ್ಲಿ ಅಟ್ಯಾಕ್

    ಯಾದಗಿರಿ: ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಪುಂಡರು ಹಲ್ಲೆ ನಡೆಸಿದ್ದು ಗೊತ್ತೆಯಿದೆ. ಇದರ ಬೆನ್ನಲ್ಲೇ ಯಾದಗಿರಿ ಮತ್ತೊಂದು ಪಾದರಾಯನಪುರವಾಗಿ ಬಿಟ್ಟಿದಿಯಾ ಅನ್ನೋ ಅನುಮಾನ ಮೂಡಿದೆ. ಯಾದಗಿರಿ ಜಿಲ್ಲೆಯ ಪಿಕೆ ತಾಂಡದಲ್ಲಿ ಎಎಸ್‍ಐ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಚೆಕ್ ಪೋಸ್ಟ್ ಬಳಿ ಹೋಮ್ ಗಾರ್ಡ್ ಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

    ಮಹಾರಾಷ್ಟ್ರದಿಂದ ಕಾರ್ ನಲ್ಲಿ ಜಿಲ್ಲೆಗೆ ಬರಲು ಯತ್ನಿಸಿದ ಕುಟುಂಬವೊಂದನ್ನು ಹೋಮ್ ಗಾರ್ಡ್ ಗಳು ಯರಗೋಳ ಚೇಕ್ ಪೋಸ್ಟ್ ಬಳಿ ತಡೆದಿದ್ದಾರೆ. ಕಾರ್ ನಲ್ಲಿ ಓರ್ವ ಮಹಿಳೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ಜಿಲ್ಲಾಡಳಿತದಿಂದ ಅಂಬುಲೆನ್ಸ್ ಅಥವಾ ಸರ್ಕಾರಿ ಬಸ್ ಬರೋವರೆಗೆ ನೀವು ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಅಂತ ಹೋಮ್ ಗಾರ್ಡ್ ಗಳು ತಡೆದಿದ್ದಾರೆ. ಇದರಿಂದ ಕೋಪಗೊಂಡ ಮೃತ ಮಹಿಳೆಯ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ಬಾಲಕನ ಮೇಲೆಯೂ ಹಲ್ಲೆ ನಡೆಸಿದ್ದಾರೆ.

  • ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    – ಪೊಲೀಸರು ಏನ್ ಹೇಳಿದ್ರೂ ಡೋಂಟ್‍ಕೇರ್

    ಬೆಂಗಳೂರು: ಕೊರೊನಾ ಪ್ರಕರಣಗಳ ಪತ್ತೆ ದಿನೇ ದಿನೇ ಏರುತ್ತಿದ್ದರೂ ಪಾದರಾಯನಪುರದ ಜನ ಕ್ಯಾರೇ ಅಂತಿಲ್ಲ. ಭಯವಿಲ್ಲದೇ ಓಡಾಟ ಮಾಡುವ ಮೂಲಕ ಜನ ಇನ್ನೂ ಬುದ್ಧಿ ಕಲಿತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

    ಪಾದರಾಯನಪುರ ಪ್ರದೇಶದಲ್ಲಿ ತಳ್ಳೋ ಗಾಡಿ, ಬೈಕ್ ಹಾಗೂ ಆಟೋಗಳು ಸುಖಾ ಸುಮ್ಮನೆ ಸಂಚಾರ ಮಾಡುತ್ತಿವೆ. ಪೊಲೀಸರು ಏನು ವಾರ್ನಿಂಗ್ ಕೊಟ್ಟರೂ ಜನ ಕಿವಿಗೊಡುತ್ತಿಲ್ಲ. ಸೀಲ್‍ಡೌನ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಪಿಇ ಕಿಟ್ ಧರಿಸುತ್ತಿಲ್ಲ.

    ಇಷ್ಟು ಮಾತ್ರವಲ್ಲದೆ ಮೇ 24 ರಂದು ರಂಜಾನ್ ಹಬ್ಬ ಇದೆ. ರಂಜಾನ್ ಮುಗಿಯುವವರೆಗೂ ಟೆಸ್ಟ್ ಗೆ ಬರಲ್ಲ. ಉಪವಾಸ, ಜಾಗಣೆ ಆಚರಣೆಗಳಿವೆ. ಹೀಗಾಗಿ ರ್‍ಯಾಂಡಮ್ ಟೆಸ್ಟ್ ಗೆ ಸಹಕರಿಸಲ್ಲ. ಹಬ್ಬ ಮುಗಿಯೇ ಪರೀಕ್ಷೆಗೆ ಬರುತ್ತೇವೆ ಎಂದು ಜನ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

    ಇತ್ತ ದಿನೇ ದಿನೇ ರ್‍ಯಾಂಡಮ್ ಟೆಸ್ಟ್ ಗೆ ಬರುವವರ ಸಂಖ್ಯೆಯೂ ಇಳಿಕೆಯಾಗಿದೆ. ಕಳೆದ ಬಾರಿ ಹೋಟೆಲ್ ಕ್ವಾರಂಟೈನ್ ಗೆ ಕಿರಿಕ್ ಆಗಿತ್ತು. ಹೀಗಾಗಿ ಬಲವಂತವಾಗಿ ಕರೆ ತರುವುದು ಬೇಡ ಎಂದು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿಯುವಷ್ಟರಲ್ಲಿ ಮತ್ತಷ್ಟು ಪಾಸಿಟಿವ್ ಪತ್ತೆಯಾಗಬಹುದು ಎಂಬ ಆತಂಕ ಹುಟ್ಟಿದೆ.

  • ಪಾದರಾಯನಪುರದಲ್ಲಿ ಇಂದು ಮತ್ತೆ ಐದು ಕೊರೊನಾ ಪ್ರಕರಣ ಪತ್ತೆ

    ಪಾದರಾಯನಪುರದಲ್ಲಿ ಇಂದು ಮತ್ತೆ ಐದು ಕೊರೊನಾ ಪ್ರಕರಣ ಪತ್ತೆ

    ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ಐದು ಪ್ರಕರಣಗಳು ಪತ್ತೆಯಾಗಿವೆ.

    ಕ್ವಾರಂಟೈನ್ ಮಾಡಿದ್ದವರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 22 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಐವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ  ಮೂಲಕ ಪಾದರಾಯನಪುರ ಒಂದರಲ್ಲೇ ಈ ವರೆಗೆ 55 ಪ್ರಕರಣಗಳು ಪತ್ತೆಯಾದಂತಾಗಿವೆ ಎಂದು ಬಿಬಿಎಂಪಿ ಪಶ್ಚಿಮ ವಲಯದ
    ಜಂಟಿ ಆಯುಕ್ತ ಚಿದಾನಂದ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಇನ್ನೂ ಭಯಾನಕ ವಿಚಾರವೆಂದರೆ ರ್‍ಯಾಂಡಮ್ ಟೆಸ್ಟ್ ಮಾಡುವ ವೇಳೆ ಈ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಐದು ಜನ 3 ಕುಟುಂಬದವರು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕ್ವಾರಂಟೈನ್ ಮಾಡಿದ್ದರಿಂದ ರ್‍ಯಾಂಡಮ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದೇ ಕುಟುಂಬದ ಗಂಡ ಹೆಂಡತಿಗೆ ಸೋಂಕು ತಗುಲಿದ್ದು, ಅಲ್ಲದೆ ಒಂದೇ ಕುಟುಂಬದ 10 ವರ್ಷದ ಇಬ್ಬರು ಗಂಡು ಮಕ್ಕಳಿಗೆ ಸೋಂಕು ತಗುಲಿದೆ. ಮೂರು ವರ್ಷದ ಒಬ್ಬ ಹುಡುಗನಿಗೆ ಸೋಂಕು ತಗುಲಿದೆ.

    ರೋಗಿ ಸಂಖ್ಯೆ 554 ಹಾಗೂ 555 ಈ ಇಬ್ಬರಿಗೆ ರ್‍ಯಾಂಡಮ್ ಟೆಸ್ಟ್ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇವರ ಸಂಪರ್ಕ ಸಂಬಂಧ ಐದು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೀಗ ಇವರಿಗೆ ಸೊಂಕು ತಗುಲಿದೆ. ರೋಗಿ ಸಂಖ್ಯೆ 554 ರಿಂದ 4 ಜನಕ್ಕೆ ಹಾಗೂ ರೋಗಿ ಸಂಖ್ಯೆ 555 ರಿಂದ ಒಬ್ಬರಿಗೆ ಸೋಂಕು ತಗುಲಿದೆ.

  • ಸಮುದಾಯ ಪರೀಕ್ಷೆಯಲ್ಲಿ 7 ಮಂದಿಗೆ ಪಾಸಿಟಿವ್- ಸೋಂಕಿತರ ಮೊಬೈಲ್ ಸ್ವಿಚ್ಛ್ ಆಫ್

    ಸಮುದಾಯ ಪರೀಕ್ಷೆಯಲ್ಲಿ 7 ಮಂದಿಗೆ ಪಾಸಿಟಿವ್- ಸೋಂಕಿತರ ಮೊಬೈಲ್ ಸ್ವಿಚ್ಛ್ ಆಫ್

    – ಬೆಂಗಳೂರಿಗರೇ ಎಚ್ಚರ.. ಎಚ್ಚರ
    – ಏಳು ಜನರಿಗಾಗಿ ಶೋಧ

    ಬೆಂಗಳೂರು: ಪಾದರಾಯನಪುರದಲ್ಲಿ ನಡೆಸಿದ ಸಮುದಾಯದ ಪರೀಕ್ಷೆಯಲ್ಲಿ ಬರೋಬ್ಬರಿ 7 ಮಂದಿಯಲ್ಲಿ ಸೋಂಕು ಇರೋದು ಪತ್ತೆಯಾಗಿದೆ. ಆದ್ರೆ ಏಳು ಮಂದಿ ಸದ್ಯ ಎಲ್ಲಿದ್ದಾರೆ ಎಂಬ ವಿಚಾರವೇ ನಿಗೂಢವಾಗಿದೆ. ಪರೀಕ್ಷೆ ವೇಳೆ ನೀಡಿದ ಇವರ ಮೊಬೈಲ್ ನಂಬರ್ ಗಳು ಸ್ವಿಚ್ಛ್ ಆಫ್ ಆಗಿವೆ.

    ಏಳು ಮಂದಿಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿದ್ಯಾ ಎಂಬ ಅನುಮಾನ ಮೂಡುತ್ತಿದೆ. ಕೋವಿಡ್-19 ಪರೀಕ್ಷೆ ವೇಳೆ 261 ಮಂದಿ ಪೈಕಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬಾಗಲಕೋಟೆ, ಬೆಳಗಾವಿಯಂತೆ ಬೆಂಗಳೂರಿಗೂ ತಬ್ಲಿಘಿಗಳ ಕಾಟ ಶುರುವಾಗಿದೆ. 7 ಮಂದಿ ತಬ್ಲಿಘಿಗಳು ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡು ನಾಪತ್ತೆಯಾಗಿರೋದು ಮತ್ತಷ್ಟು ಆತಂಕ ಸೃಷ್ಟಿಸಿದೆ.

    ರೋಗಿ ನಂಬರ್ 860 ವಾರ್ಡ್ ಬಾಯ್ ವಾಸವಿದ್ದ ಬ್ಯಾಡರಹಳ್ಳಿಯ ರಸ್ತೆಯನ್ನ ಸೀಲ್‍ಡೌನ್ ಮಾಡಲಾಗಿದೆ. ಈತನ ಸ್ನೇಹಿತನು ಕೂಡ ಇಲ್ಲಿ ಓಡಾಡ್ತಿದ್ದ. ಇನ್ನು ವಾರ್ಡ್ ಬಾಯ್ ತಾನು ಮನೆಗೆ ಬಂದಿಲ್ಲ ಅಂತಾ ಹೇಳ್ತಿದ್ದು ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

  • ಕಾಂಪೌಂಡ್ ಹಾರಿದ ಮಹಿಳೆಯರು- ನಿರ್ದಾಕ್ಷಿಣ್ಯ ಕ್ರಮಕ್ಕೆ ಶ್ರೀರಾಮುಲು ಸೂಚನೆ

    ಕಾಂಪೌಂಡ್ ಹಾರಿದ ಮಹಿಳೆಯರು- ನಿರ್ದಾಕ್ಷಿಣ್ಯ ಕ್ರಮಕ್ಕೆ ಶ್ರೀರಾಮುಲು ಸೂಚನೆ

    – ಫೀಲ್ಡ್‌ಗಿಳಿದ ಗರುಡ ಟೀಮ್

    ಬೆಂಗಳೂರು: ಪಾದರಾಯನಪುರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಹಿಳೆಯರು ಕಾಂಪೌಂಡ್ ಹಾರಿ ಹೊರಗಡೆ ಹೋಗಿದ್ದಾರೆ. ಹೀಗಾಗಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಚಿವ ಶ್ರೀರಾಮುಲು ಸೂಚನೆ ನೀಡಿದ್ದಾರೆ.

    ಪಾದರಾಯನಪುರದಲ್ಲಿ ಕಾಂಪೌಂಡ್ ಹಾರಿ ಮಹಿಳೆಯರು ಹೊರಗೆ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಪಾದರಾಯನಪುರದಲ್ಲಿ ಕ್ವಾರಂಟೈನ್‍ನಲ್ಲಿರಬೇಕಾದ ಕೆಲ ಮಹಿಳೆಯರು ಹೊರ ಹೋದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ನಾಡಿನ ಜನರ ಆರೋಗ್ಯದ ವಿಷಯದಲ್ಲಿ ಆಟವಾಡುವ ಇಂತಹ ಘಟನೆ ಸಹಿಸಲು ಅಸಾಧ್ಯ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಮಾನ್ಯ. ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗುವುದು. ನಾಡಿನ ಜನತೆಯ ಆರೋಗ್ಯ ಕಾಪಾಡುವುದೇ ನಮ್ಮ ಮುಖ್ಯ ಧ್ಯೇಯ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಪಾದರಾಯನಪುರದಲ್ಲಿ ಸೀಲ್‍ಡೌನ್, ಲಾಕ್‍ಡೌನ್ ಇದ್ದರೂ ಮಹಿಳೆಯರು ಕೇರ್ ಮಾಡದೇ ಕಾಂಪೌಂಡ್ ಹಾರಿ ಬೇರೆ ಕಡೆ ಹೋಗಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮತ್ತು ಗಡುಡ ತಂಡ ಫೀಲ್ಡಿಗಿಳಿದು ಜನರ ಕಳ್ಳ ಮಾರ್ಗವನ್ನು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪಾದರಾಯನಪುರದ ವಿಜಯನಗರಕ್ಕೆ ಹೋಗಿದ್ದು, ಇಡೀ ರಸ್ತೆಯಲ್ಲಿ ಓಡಾಡಿದ್ದಾರೆ. ಹೀಗಾಗಿ ವಿಜಯನಗರಕ್ಕೂ ಕೊರೊನಾ ಹಬ್ಬುವ ಭೀತಿ ಎದುರಾಗಿದೆ

    ಪಾದರಾಯನಪುರದವನ್ನು ಸೀಲ್‍ಡೌನ್ ಮಾಡಲಾಗಿದ್ದು, ಏರಿಯಾದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಮಹಿಳೆಯರು ಪೊಲೀಸರ ಮಾತಿಗೂ ಬಲೆ ಕೊಡದೆ ಬ್ಯಾರಿಕೇಡ್ ದಾಟಲು ಯತ್ನಿಸಿದ್ದಾರೆ. ಆಗ ಪೊಲೀಸರು ಮಹಿಳೆಯರಿಗೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ. ಕೊನೆಗೆ ಮಹಿಳೆಯರು ಏಳು ಅಡಿ ಕಾಂಪೌಂಡ್ ಹಾರಿ ನಂತರ ರೈಲ್ವೇ ಹಳಿ ದಾಟಿ ವಿಜಯನಗರದ ಕಡೆ ಹೋಗಿದ್ದಾರೆ.

  • ಸೀಲ್‍ಡೌನ್ ಇದ್ರೂ ಡೋಂಟ್ ಕೇರ್ – ಪಾದರಾಯಪುರದಲ್ಲಿ 7 ಅಡಿ ಎತ್ತರದ ಕಾಂಪೌಂಡ್ ಹಾರಿದ ಮಹಿಳೆಯರು

    ಸೀಲ್‍ಡೌನ್ ಇದ್ರೂ ಡೋಂಟ್ ಕೇರ್ – ಪಾದರಾಯಪುರದಲ್ಲಿ 7 ಅಡಿ ಎತ್ತರದ ಕಾಂಪೌಂಡ್ ಹಾರಿದ ಮಹಿಳೆಯರು

    ಬೆಂಗಳೂರು: ಪಾದರಾಯನಪುರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಹಾಟ್‍ಸ್ಟಾಟ್ ಆಗುತ್ತಿದಿಯಾ ಎಂಬ ಆತಂಕ ಉಂಟಾಗಿದೆ. ಈ ಮದ್ಯೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಾದರಾಯನಪುರದಲ್ಲಿ ಮಹಿಳೆಯರು ಕಾಂಪೌಂಡ್ ಹಾರಿ ಹೋಗುತ್ತಿದ್ದಾರೆ.

    ಪಾದರಾಯನಪುರದಲ್ಲಿ ಸೀಲ್‍ಡೌನ್, ಲಾಕ್‍ಡೌನ್ ಇದ್ದರೂ ಮಹಿಳೆಯರು ಕೇರ್ ಮಾಡದೇ ಕಾಂಪೌಂಡ್ ಹಾರಿ ಬೇರೆ ಕಡೆ ಹೋಗುತ್ತಿದ್ದಾರೆ. ಪಾದರಾಯನಪುರದವನ್ನು ಸೀಲ್‍ಡೌನ್ ಮಾಡಲಾಗಿದ್ದು, ಏರಿಯಾದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಇಂದು ಮಹಿಳೆಯರು ಪೊಲೀಸರ ಮಾತಿಗೂ ಬಲೆ ಕೊಡದೆ ಬ್ಯಾರಿಕೇಡ್ ದಾಟಲು ಯತ್ನಿಸಿದ್ದಾರೆ. ಆಗ ಪೊಲೀಸರು ಮಹಿಳೆಯರಿಗೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ.

    ಕೊನೆಗೆ ಮಹಿಳೆಯರು ಏಳು ಅಡಿ ಕಾಂಪೌಂಡ್ ಹಾರಿ ನಂತರ ರೈಲ್ವೇ ಹಳಿ ದಾಟಿ ವಿಜಯನಗರದ ಕಡೆ ಹೋಗುತ್ತಿದ್ದಾರೆ. ಪೊಲೀಸರು ಮಹಿಳೆಯರಿಗೆ ಹಾರದಂತೆ ಎಚ್ಚರಿಸಿದ್ದಾರೆ. ಆದರೆ ಮಹಿಳೆಯರನ್ನು ಪೊಲೀಸರು ಮುಟ್ಟುವುದಿಲ್ಲ ಎಂಬುದನ್ನೇ ದುರಪಯೋಗ ಮಾಡಿಕೊಂಡ ಮಹಿಳೆಯರು ಕಾಂಪೌಂಡ್‍ ಹಾರಿ ಹೋಗಿದ್ದಾರೆ. ಸದ್ಯಕ್ಕೆ ಪೊಲೀಸರು ಪಾದರಾಯನಪುರದಲ್ಲಿ ಮಹಿಳಾ ಪೊಲೀಸ್ ನಿಯೋಜನೆ ಮುಂದಾಗಿದ್ದಾರೆ.

    ಪಾದರಾಯನಪುರಕ್ಕೆ ಆರೋಗ್ಯ ಇಲಾಖೆಯ ಅಸ್ತ್ರ:
    ಕೊರೊನಾ ಹಬ್ ಪಾದರಾಯನಪುರದಲ್ಲಿ ಇಂದು ಆರೋಗ್ಯ ಇಲಾಖೆ ಮೆಗಾ ಪ್ಲಾನ್ ಶುರು ಮಾಡುವ ಸಾಧ್ಯತೆಯಿದೆ. ಕೊರೊನಾ ರಣಕೇಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಪಾದರಾಯನಪುರದಲ್ಲೇ ಲ್ಯಾಬ್ ಸ್ಥಾಪಿಸಿ, ಮನೆ-ಮನೆ ಟೆಸ್ಟ್ ಮಾಡುವ ತಯಾರಿ ಮಾಡಿದೆ. ಆರೋಗ್ಯ ಸಮಸ್ಯೆ ಇದ್ದವರನ್ನ ಗುರುತಿಸಿ ಕೂಡಲೇ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೇ ಕೊರೊನಾ ಹಬ್ ಆಗಿರುವ 11 ನೇ ಕ್ರಾಸ್ ಮೇಲೆ ತೀವ್ರ ನಿಗಾವಹಿಸಲಾಗಿದೆ. ಹೀಗಾಗಿ 11ನೇ ಕ್ರಾಸಿನಲ್ಲಿ ಒಬ್ಬರನ್ನೂ ಬಿಡದೇ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಒಟ್ಟು 45 ಸಾವಿರ ಜನರಿದ್ದು, ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ.

  • ಆಪರೇಷನ್ ಪಾದರಾಯನಪುರ – ಬಿಬಿಎಂಪಿಯಿಂದ ಮಾಸ್ಟರ್‌ಪ್ಲ್ಯಾನ್!

    ಆಪರೇಷನ್ ಪಾದರಾಯನಪುರ – ಬಿಬಿಎಂಪಿಯಿಂದ ಮಾಸ್ಟರ್‌ಪ್ಲ್ಯಾನ್!

    ಬೆಂಗಳೂರು: ಪಾದರಾಯನಪುರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡಲು ಬಿಬಿಎಂಪಿ ಹೊಸ ಆಪರೇಷನ್‍ಗೆ ಪ್ಲಾನ್ ಮಾಡಿಕೊಂಡಿದೆ.

    ಪಾದಾರಾಯನಪುರದಲ್ಲಿ ಒಂದಲ್ಲ ಎರಡಲ್ಲ 42 ಪ್ರಕರಣಗಳಿದ್ದು, ಜನರು ಭಯಭೀತರಾಗಿದ್ದಾರೆ. ಇದರಿಂದ ಪಾದಾರಾಯನಪುರದಲ್ಲಿ ಕೊರೊನಾ ಕಟ್ಟಿಹಾಕಲೇಬೇಕು ಅಂತ ಆಪರೇಷನ್ ಪಾದರಾಯನಪುರದ ಬ್ಲೂಪ್ರಿಂಟ್ ಅನ್ನು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ರೆಡಿ ಮಾಡಿದೆ.

    ಪಾದರಾಯನಪುರದಲ್ಲಿರುವ 44 ಪ್ರಕರಣಗಳಲ್ಲಿ 24 ಪ್ರಕರಣ ತಬ್ಲಿಘಿಗಳಿಂದ ಹರಡಿದೆ. ಜೊತೆಗೆ ಸೀಲ್‍ಡೌನ್, ಕ್ವಾರಂಟೈನ್ ಮಾಡಿದ್ದ ರಸ್ತೆಯಲ್ಲಿ ಸಂಚಾರ ಮಾಡಿದವರಿಗೂ ಪಾಸಿಟಿವ್ ಬಂದಿದೆ. ಇದು ಮತ್ತೆ ಅತಿರೇಕಕ್ಕೆ ಹೋಗಬಾರದು, ಸಮುದಾಯಕ್ಕೆ ಬರಬಾರದು ಅಂತ ಬಿಬಿಎಂಪಿ ಅಧಿಕಾರಿಗಳು ಶನಿವಾರ ಸಭೆ ನಡೆಸಿದ್ದಾರೆ. ಅಲ್ಲದೇ ಕೊರೊನಾ ಕಂಟ್ರೋಲ್‍ಗೆ ಒಂದಿಷ್ಟು ಸೂತ್ರವನ್ನು ತಯಾರು ಮಾಡಿದ್ದಾರೆ.

    ಆಪರೇಷನ್ ಪಾದಾರಾಯನಪುರ:
    ಸೋಮವಾರ ಅಥವಾ ಮಂಗಳವಾರದಿಂದ ಆಪರೇಷನ್ ಪಾದಾರಾಯನಪುರವನ್ನು ಬಿಬಿಎಂಪಿ ಶುರು ಮಾಡಲಿದೆ. ಪಾದರಾಯನಪುರದ ಎಲ್ಲಾ ನಿವಾಸಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿ ಮನೆಗೆ ಹೋಗಿ ಸರ್ವೇ ನಡೆಸಿ, ಎಲ್ಲರ ಪರೀಕ್ಷೆಗೆ ಮಾಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ವಯಸ್ಸಾದವರು, ಗರ್ಭಿಣಿಯರು, ಮಕ್ಕಳ ಟೆಸ್ಟ್ ಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಜೆಜೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್ ಆರಂಭಿಸಲು ಚಿಂತನೆ ಮಾಡಲಾಗಿದೆ. ಇನ್ನೂ ನಾಪತ್ತೆಯಾದ ತಬ್ಲಿಘಿಗಳು, ಅವರ ಸಂಪರ್ಕಿತರಿಗಾಗಿ ಹುಡುಕಾಟ ಮಾಡಲಾಗುತ್ತದೆ.

    ಸದ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಈ ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಇಡೀ ಪಾದರಾಯನಪುರದ ಜನರ ಟೆಸ್ಟ್ ಗೆ ಬಿಬಿಎಂಪಿ ಮುಂದಾಗಿದ್ದು, ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಿಬಿಎಂಪಿ ಪ್ರಯತ್ನಿಸುತ್ತಿದೆ.

  • ಪಾದರಾಯನಪುರದಲ್ಲಿ ಮತ್ತೆ ಪುಂಡಾಟಿಕೆ – ಸೀಲ್‍ಡೌನ್ ಇದ್ರೂ ಜನ ಓಡಾಟ

    ಪಾದರಾಯನಪುರದಲ್ಲಿ ಮತ್ತೆ ಪುಂಡಾಟಿಕೆ – ಸೀಲ್‍ಡೌನ್ ಇದ್ರೂ ಜನ ಓಡಾಟ

    ಬೆಂಗಳೂರು: ಪಾದರಾಯನಪುರದಲ್ಲಿ ಮತ್ತೆ ಪುಂಡಾಟಿಕೆ ಶುರುವಾಗುತ್ತಿದಿಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಈ ಹಿಂದೆ ಪುಂಡಾಟಿಕೆ ನಡೆದಿದ್ದ ಜಾಗದಲ್ಲೇ ಮತ್ತೆ ಪೊಲೀಸರ ಜೊತೆ ಜನರು ವಾಗ್ವಾದ ಮಾಡುತ್ತಿದ್ದಾರೆ.

    ಪೊಲೀಸರು ಹಾಗೂ ಪಾದರಾಯನಪುರದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಕಾರಣಕ್ಕೂ ಒಳಗೆ, ಹೊರಗೆ ಹೋಗಲು ಬಿಡಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಜನರು ಗುಂಪು ಗುಂಪಾಗಿ ಬ್ಯಾರಿಕೇಡ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಯಾವುದೇ ಸಬೂಬು ಹೇಳಿದರೂ ಬಿಡದೇ ಎಲ್ಲರನ್ನೂ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

    ಪಾದರಾಯನಪುರದಲ್ಲಿ ಒಂದೇ ದಿನ ಏಳು ಸೋಂಕಿತರು ಪತ್ತೆಯಾದರೂ ಜನರು ಮಾತ್ರ ಕೇರ್ ಮಾಡದೆ ಸುಮ್ಮನೆ ಓಡಾಡುತ್ತಿದ್ದಾರೆ. ತುಂಬಾ ಕಠಿಣ ಸೀಲ್‍ಡೌನ್ ಅಂತ ಆರೋಗ್ಯ ಇಲಾಖೆ ಹೇಳಿದರೂ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು 11ನೇ ಕ್ರಾಸ್ ಒಳಗೆ ಯಾರಿಗೂ ಎಂಟ್ರಿ ಕೊಡುತ್ತಿಲ್ಲ. ಅಷ್ಟೇ ಅಲ್ಲದೇ ಯಾರೂ ಹೊರಗೆ ಬರದಂತೆ ಬ್ಯಾರಿಕೆಡ್ ಹಾಕಿ ತಡೆಯುತ್ತಿದ್ದಾರೆ.

    ಪಾದರಾಯನಪುರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಶುಕ್ರವಾರಕ್ಕಿಂತ ಇಂದು ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

  • ಬೆಂಗಳೂರಿನಲ್ಲಿ ಮತ್ತೊಬ್ಬ ಗರ್ಭಿಣಿಗೆ ಕೊರೊನಾ

    ಬೆಂಗಳೂರಿನಲ್ಲಿ ಮತ್ತೊಬ್ಬ ಗರ್ಭಿಣಿಗೆ ಕೊರೊನಾ

    -ಸಿಲಿಕಾನ್ ಸಿಟಿಯಲ್ಲಿ ಕೊರೊನಾಸುರನ ಅಬ್ಬರ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾಸುರ ಅಬ್ಬರಿಸುತ್ತಿದ್ದು, ಇಂದು ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಮಧ್ಯಾಹ್ನ ಪಾದರಾಯನಪುರದ ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ವ್ಯಾಪ್ತಿಯ ಮತ್ತೊಬ್ಬ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಂಗಳೂರಿನ ಒಟ್ಟು 16 ಮಂದಿಗೆ ಕೊರೊನಾ ಸೋಂಕು ತಗುಲಿದೆ.

    ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ (ರೋಗಿ 706)ಗೆ ಸಾಮೂಹಿಕ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಪತಿಯ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿದೆ.

    ಮಹಿಳೆ ಹೊಟ್ಟೆ ನೋವು ಎಂದು ನಗರದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಇದೀಗೆ ಮಹಿಳೆ ಕೊರೊನಾ ತಗುಲಿದ್ದು ದೃಢವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಯಿಂದ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.