Tag: Padarayanapur

  • ಪಾದರಾಯನಪುರಕ್ಕೆ ಗರುಡ ಟೀಂ ಎಂಟ್ರಿ

    ಪಾದರಾಯನಪುರಕ್ಕೆ ಗರುಡ ಟೀಂ ಎಂಟ್ರಿ

    ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಕೆಲ ಪುಂಡರು ಗಲಭೆ ನಡೆಸಿದ ಸಂಬಂಧ ಇದೀಗ ಏರಿಯಾಗೆ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಈ ಮೂಲಕ ಇನ್ಮುಂದೆ ಪಾದರಾಯನಪುರದಲ್ಲಿ ಯಾರೂ ಮಿಸುಕಾಡುವಂಗಿಲ್ಲ.

    ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತುಕೊಳ್ಳುತ್ತಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಟ್ಟಿದ್ದಾರೆ.

    ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ಒಟ್ಟಿನಲ್ಲಿ ಸದ್ಯ ಪಾದರಾಯನಪುರ ಸಂಪೂರ್ಣ ಖಾಕಿ ಮಯವಾಗಿದೆ.

    ಕ್ವಾರಂಟೈನ್ ಮಾಡಬೇಕಾಗಿದ್ದರೂ ನಾಪತ್ತೆಯಾಗಿದ್ದಾರೆ. 58 ಜನರ ಪೈಕಿ 33 ಜನರ ಕ್ವಾರಂಟೈನ್ ಮಾಡಬೇಕಿತ್ತು. 33 ಜನರಲ್ಲಿ ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕುವಂತಿಲ್ಲ. ಆರೋಗ್ಯ ಅಧಿಕಾರಿಗಳು ಬರುತ್ತಿಲ್ಲ. ಈಗ ಇಡೀ ಏರಿಯಾಕ್ಕೆ ಏರಿಯಾವೇ ಭಯದ ವಾತಾವರಣ ನಿರ್ಮಾಣವಾಗಿದೆ. ಮೃತ ಮಹಿಳೆಯ ಜನ ಸೆಕೆಂಡರಿ ಕಾಂಟ್ಯಾಕ್ಟ್ ಅಲ್ಲಿ ಇದ್ದ ಜನ ನಾಪತ್ತೆಯಾಗಿ ಕೊರೊನಾ ಹಬ್ಬುವ ಭೀತಿ ಹೆಚ್ಚಾಗಿದೆ.

    ಸದ್ಯ ಭಾನುವಾರ ರಾತ್ರಿ ಗಲಭೆ ನಡೆಸಿದ ಪುಂಡರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ದುಷ್ಕೃತ್ಯದಲ್ಲಿ ತೊಡಗಿರೋರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಿ: ಸಿಎಂಗೆ ಸಿದ್ದು ಒತ್ತಾಯ

    ದುಷ್ಕೃತ್ಯದಲ್ಲಿ ತೊಡಗಿರೋರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಿ: ಸಿಎಂಗೆ ಸಿದ್ದು ಒತ್ತಾಯ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಪಾದರಾಯನಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿಎಸ್‍ವೈ ಅವರನ್ನು ಒತ್ತಾಯಿಸಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಮಾಜಿ ಸಿಎಂ, ಪಾದರಾಯನಪುರದಲ್ಲಿ ನಡೆದಿರುವ ಗಲಭೆ ಅತ್ಯಂತ ದುರದೃಷ್ಟಕರ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಬೇಕಾದರೆ ಇಂತಹ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಬರೆದು  ಬಿಎಸ್‍ವೈ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ಕೊರೊನಾ ಸೋಂಕಿನಿಂದ ನಮ್ಮನ್ನು ರಕ್ಷಿಸಲು ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಆರೋಗ್ಯವನ್ನು ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಅವರಿಗೆ ಸಹಕರಿಸುವುದು ನಮ್ಮ ಕರ್ತವ್ಯ. ಗಾಳಿ ಸುದ್ದಿಯಿಂದ ಪ್ರಚೋದನೆಗೊಳಗಾಗದೆ ಜನ ಸಂಯಮದಿಂದ ವರ್ತಿಸಬೇಕೆಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ನಡೆದಿದ್ದನು..?
    ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು.

    ಈ ವೇಳೆ ಪುಂಟರು ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದ್ದಿದ್ದರಿಂದ ಪುಂಡರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಸದ್ಯ 60 ಮಂದಿಯನ್ನು ಬಂಧಿಸಲಾಗಿದೆ.

  • ಪಾದರಾಯನಪುರ ಪುಂಡರನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಆತಂಕ

    ಪಾದರಾಯನಪುರ ಪುಂಡರನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಆತಂಕ

    ಬೆಂಗಳೂರು: ಪಾದರಾಯನಪುರ ಪುಂಡರನ್ನು ಬಂಧಿಸಿರುವ ಪೊಲೀಸರಿಗೆ ಇದೀಗ ಕೊರೊನಾ ಆತಂಕ ಶುರುವಾಗಿದೆ.

    ಭಾನುವಾರ ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಬೇರೆಡೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಈ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕೊರೊನಾ ಸೋಂಕು ಶಂಕಿತರು ಭಾಗಿಯಾಗಿದ್ರು ಎನ್ನಲಾಗಿದ್ದು, ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಳಿಕ ರಾತ್ರಿಯೇ 54 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

    ಪುಂಡರ ಬಂಧನ ವೇಳೆ ಪೊಲೀಸರು ಅವರ ನೇರಸಂಪರ್ಕದಲ್ಲಿದ್ದರು. ಹಾಗಾಗಿ ನಮಗೆ ಕೊರೊನಾ ತಗುಲಿದೆಯಾ ಎಂಬ ಆತಂಕ ಪೊಲೀಸರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಕೆಲಸ ಮಾಡಿದ್ದ ಎಲ್ಲ ಸಿಬ್ಬಂದಿಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಕೊಂಡು ಮನೆಗೆ ತೆರಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಡ್ಯೂಟಿ ಮುಗಿದ ಬಳಿಕ ಸ್ಯಾನಿಟೈಸ್ ಮಾಡಿಕೊಳ್ಳದೇ ಮನೆಗಳಿಗೆ ತೆರಳಕೂಡದು ಎಂದು ಸೂಚಿಸಲಾಗಿದೆ.

  • ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಬೊಮ್ಮಾಯಿ

    ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಬೊಮ್ಮಾಯಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಕಠಿಒಣ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ ಈಗಾಗಲೇ 60 ಜನರನ್ನ ಬಂಧನ ಮಾಡಲಾಗಿದೆ. ಘಟನೆಯಾದ 3-4 ಗಂಟೆಯಲ್ಲಿ ಎಲ್ಲಾ ಪ್ರಮುಖರನ್ನ ಅರೆಸ್ಟ್ ಮಾಡಿದ್ದೇವೆ. ಪಾದರಾಯನಪುರದ ಘಟನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದೇವೆ ಎಂದರು.

    ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಾರ್ಯಾಚರಣೆ ಮಾಡಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸಿಎಂ ಪೊಲೀಸರಿಗೆ ಫ್ರೀ ಹ್ಯಾಂಟ್ ಕೊಟ್ಟಿದ್ದಾರೆ. ಹೀಗಾಗಿ ರಾತ್ರೋ ರಾತ್ರಿ ಕಾರ್ಯಾಚರಣೆ ಮಾಡಿದ್ದೇವೆ. ಇನ್ನೂ ಕಾರ್ಯಾಚರಣೆ ನಡೆದಿದೆ. ಎಲ್ಲರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಘಟನೆಯೇನು?:
    ಭಾನುವಾರ ರಾತ್ರಿ ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಪಾದರಾಯನಪುರದ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೊರೊನಾ ಸೋಂಕಿತರ ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರ ಜೀವ ರಕ್ಷಣೆಗೆ ಬಂದವರ ಮೇಲೆಯೇ ದಾಳಿ ನಡೆಸಿದ್ದಾರೆ. ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕರ್ತವ್ಯನಿರತ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಸುಮಾರು 50 ಜನರನ್ನು ರಾತ್ರಿಯೇ ಪೊಲೀಸರು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.

  • ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬೆಂಗಳೂರು: ರಾಜಧಾನಿಯ ಪಾದರಾಯನಪುರ ಮತ್ತು ಬಾಪೂಜಿ ನಗರದಲ್ಲಿ ಸೀಲ್‍ಡೌನ್ ಮಾಡಲಾಗಿದೆ. ಆದ್ರೆ ಈ ಎರಡೂ ಪ್ರದೇಶದಲ್ಲಿ ಹೆಸರಿಗೆ ಮಾತ್ರ ಸೀಲ್ ಆಯ್ತಾ ಪ್ರಶ್ನೆ ಹುಟ್ಟಿಕೊಂಡಿದೆ. ಸೀಲ್‍ಡೌನ್ ಆಗಿದ್ದರೂ ಜನರು ಮಾತ್ರ ಎಂದಿನಂತೆ ಕುಂಟು ನೆಪಗಳನ್ನು ಹೇಳುತ್ತಾ ಬಡವಾಣೆಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಉಚಿತ ಹಾಲು ಪಡೆಯಲು ಮುಗಿಬೀಳುತ್ತಿದ್ದಾರೆ.

    ಪಾದರಾಯನಪುರದ ವಾರ್ಡ್ ನಂಬರ್ 134, 135, 136 ಜನರು ಎಂದಿನಂತೆ ಮನೆಯಿಂದ ಹೊರ ಬರುತ್ತಿದ್ದಾರೆ. ಸೀಲ್‍ಡೌನ್ ಆಗಿದ್ರೂ ಜನರು ಮಾತ್ರ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿಲ್ಲ. ವಾಹನಗಳಲ್ಲಿ ಜನ ಹೊರಗೆ ಬಂದು ಬೆಂಗಳೂರಿನ ಬೇರೆ ಏರಿಯಾಗಳತ್ತ ಹೊರಟ್ಟಿದ್ದಾರೆ. ಇನ್ನು ಖಾಸಗಿ ವಾಹನಗಳು ಮತ್ತು ಆಟೋ ಚಾಲಕರು ಲಾಕ್‍ಡೌನ್ ಲಾಭ ಪಡೆಯಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದಾರೆ.

    ಇನ್ನು ಬಾಪೂಜಿ ನಗರದಲ್ಲಿ ಜನರು ಉಚಿತ ಹಾಲು ಪಡೆಯಲು ಬಂದು ಕ್ಯೂ ನಿಂತಿರುವ ದೃಶ್ಯಗಳು ಇಂದು ಬೆಳಗ್ಗೆ ಕಂಡುಬಂದವು. ಹಾಲು ಪಡೆಯಬೇಕೆಂದು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುತ್ತಿಲ್ಲ. ಬಾಪೂಜಿ ನಗರದ ಬಹುತೇಕರಿಗೆ ಉಚಿತ ಹಾಲು ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಪೋರೇಟರ್ ಅಜ್ಮಲ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಉಚಿತ ಹಾಲು ಕೊಡದೇ ಪ್ರತಿನಿತ್ಯ ಕಾರ್ಪೋರೇಟರ್ ಮೋಸ ಮಾಡುತ್ತಿದ್ದಾರೆ. ಉಚಿತ ಹಾಲು ಕಾರ್ಪೋರೇಟರ್ ಬೆಂಬಲಿಗರ ಪಾಲಾಗುತ್ತಿದೆ. ನಿನ್ನೆಯೂ ಇದೇ ರೀತಿ ಹಾಲು ನೀಡಲಿಲ್ಲ. ಇವತ್ತು ಇಷ್ಟು ಸಮಯ ಸರತಿಯಲ್ಲಿ ನಿಂತ್ರೂ ಹಾಲು ಸಿಗಲಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.