Tag: Padarasa

  • ಈ ವಾರದ ಸಿನಿಸಂತೆಗೆ `ಪಾದರಸ’ ಸಿನಿಮಾ ಎಂಟ್ರಿ!

    ಈ ವಾರದ ಸಿನಿಸಂತೆಗೆ `ಪಾದರಸ’ ಸಿನಿಮಾ ಎಂಟ್ರಿ!

    ಬೆಂಗಳೂರು: ಈ ವಾರದ ಸಿನಿಸಂತೆಗೆ `ಪಾದರಸ’ ಸಿನಿಮಾ ಎಂಟ್ರಿ ಕೊಡೋಕೆ ಸಜ್ಜಾಗಿದೆ. ಪಾದರದಂತಹ ಅಭಿನಯದಿಂದ ಖ್ಯಾತಿ ಆಗಿರುವ ನಟ ಸಂಚಾರಿ ವಿಜಯ್ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಪಾದರಸದ ಮೂಲಕ ಸರ್ಪ್ರೈಸ್ ಕೊಡೋಕೆ ರೆಡಿಯಾಗಿದ್ದಾರೆ.

    ತುಂಬಾ ಆ್ಯಕ್ಟಿವ್ ಆಗಿರೋ ವ್ಯಕ್ತಿಯನ್ನ ಏನ್ರಿ ಇವರು `ಪಾದರಸ’ದಂಥ ಮನುಷ್ಯ ಅಲ್ರೀ ಅಂತಾರೆ. ಇಂಥದ್ದೇ ವ್ಯಕ್ತಿತ್ವದ ಇಬ್ಬರು ಈ ವಾರ ಸ್ಯಾಂಡಲ್‍ವುಡ್ ಥಿಯೇಟರ್ ಗೆ ಆಗಮಿಸಲಿದ್ದಾರೆ. ಅವ್ರೇ ಸಂಚಾರಿ ವಿಜಯ್ ಮತ್ತು ನಿರಂಜನ್ ದೇಶಪಾಂಡೆ. ಇದನ್ನೂ ಓದಿ: ಸಂಚಾರಿ ವಿಜಯ್ ರಿಯಲ್ ಪಾದರಸ!

    ಸ್ನೇಹಿತರಿಬ್ಬರ ದಗಲ್ಬಾಜಿ ಕೆಲಸ ಹಾಗೂ ಹುಡುಗಿಯರ ಜೊತೆ ಲವ್ವಿ ಡವ್ವಿ, ಟ್ರೈಲರ್‍ನಲ್ಲಿ ಇದೆ. ಆದರೆ ರೋಗಗ್ರಸ್ಥ ಮನಸ್ಥಿತಿಯನ್ನೂ ಮೀರಿ ಮನುಷ್ಯನ ಆತ್ಮಸಾಕ್ಷಿಗೆ ಸಂಬಂಧಿಸಿದ ಸೂಕ್ಷ್ಮ ಎಳೆಯಿಂದ `ಪಾದರಸ’ ಚಿತ್ರ ತಯಾರಾಗಿದೆ. ಭರ್ಜರಿ ಎಂಟರ್ ಟೈನ್ಮೆಂಟ್ ಜೊತೆ ಕೊನೆಯಲ್ಲಿ ಸೆಂಟಿಮೆಂಟ್ ಚಿತ್ರದ ಹೈಲೈಟ್. ಇದು ಹೊಸ ನಿರ್ದೇಶಕ ಹೃಷಿಕೇಶ್ ಜಂಬಗಿ ಸಾರಥ್ಯದಲ್ಲಿ ಮೂಡಿಬಂದಿದೆ. ಇದನ್ನೂ ಓದಿ: ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

    ಸಂಚಾರಿ ವಿಜಯ್‍ಗೆ ಜೋಡಿಯಾಗಿ ವೈಷ್ಣವಿ ಮೆನನ್ ಮತ್ತು ಮನಸ್ವಿನಿ ಅಭಿನಯಿಸಿದ್ದಾರೆ. ಎಲ್ಲಾ ರೀತಿಯ ಸಾಂಗ್‍ಗಳಿರುವ ಒಂದು ಕಂಪ್ಲೀಟ್ ಆಲ್ಬಂ ಚಿತ್ರದಲ್ಲಿದ್ದು ಎಟಿ ರವೀಶ್ ಸಾಂಗ್ ಕಂಪೋಸ್ ಮಾಡಿದ್ದಾರೆ. ಇನ್ನು ಕೃಷ್ಣ, ಪ್ರಕಾಶ್, ನಿತೀಶ್ ಸ್ನೇಹಿತರು ಸೇರಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪಾದರಸ ಚಿತ್ರವನ್ನ ಜಯಣ್ಣ ವಿತರಿಸುತ್ತಿದ್ದು, ರಾಜ್ಯದ 100 ಚಿತ್ರಮಂದಿರಗಳಲ್ಲಿ ಇಂದು ತೆರೆ ಮೇಲೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸಿನ ‘ಪಾದರಸ’!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=JGCBJqzOa_I

    https://www.youtube.com/watch?v=x-qwgkhfLTA

  • ಸಂಚಾರಿ ವಿಜಯ್ ರಿಯಲ್ ಪಾದರಸ!

    ಸಂಚಾರಿ ವಿಜಯ್ ರಿಯಲ್ ಪಾದರಸ!

    ನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಹೀರೋ ಯಾರು ಅಂತೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕಾಡಿದರೆ ಅದರಲ್ಲಿ ಖಂಡಿತಾ ಸಂಚಾರಿ ವಿಜಯ್ ಹೆಸರೂ ಉತ್ತರವಾಗಿ ನಿಲ್ಲುತ್ತದೆ. ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದೇ ವಿಜಯ್ ಬಿಡುವಿಲ್ಲದಂತಾಗಿದ್ದಾರೆ. ಹೀಗೆ ಚೂರೂ ಬಿಡುವು ಸಿಗದಂತೆ ಬ್ಯುಸಿಯಾಗಿರೋ ಸಂಚಾರಿ ವಿಜಯ್ ಅವರ ಸದ್ಯದ ಬಹುನಿರೀಕ್ಷಿತ ಚಿತ್ರ ಪಾದರಸ!

    ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ ಈ ಚಿತ್ರ ಸೃಷ್ಟಿಸಿರೋ ಹವಾ ಸಣ್ಣದೇನಲ್ಲ. ಬಹುಶಃ ಸಾಲು ಸಾಲಾಗಿ ಚಿತ್ರಗಳನ್ನು ಮಾಡುತ್ತಾ ಸಾಗಿ ಬಂದಿರೋ ಸಂಚಾರಿ ವಿಜಯ್ ವೃತ್ತಿ ಬದುಕಿನಲ್ಲಿ ಪಾದರಸವೊಂದು ರಸಪೂರ್ಣ ಚಿತ್ರ. ಸದ್ಯ ಹಬ್ಬಿಕೊಂಡಿರೋ ಕ್ರೇಜ್ ನೋಡಿದರೆ ಈ ಚಿತ್ರ ಖಂಡಿತವಾಗಿಯೂ ಸಂಚಾರಿಯ ಪಾಲಿಗೆ ಮೈಲಿಗಲ್ಲಾಗಿ ದಾಖಲಾಗೋದು ಗ್ಯಾರಂಟಿ ಎಂಬಂತಿದೆ.

    ಯಾಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ನಟನೆಯ ವಿಚಾರದಲ್ಲಿ ಪಕ್ಕಾ ಪಾದರಸದಂತಿದ್ದರೂ ಕೂಡಾ ಅವರ ಸುತ್ತ ನಿಷ್ಕಾರಣವಾಗೊಂದು ಚೌಕಟ್ಟು ಸೃಷ್ಟಿಯಾಗಿತ್ತು. ಆದರೆ ಪಾದರಸದಲ್ಲಿ ಅವರ ಪ್ರತಿಭೆ ಮಗ್ಗುಲು ಬದಲಾಯಿಸಿ ಚೌಕಟ್ಟು ಮೀರಿ ಹರಿದಾಡಿದೆ. ಈ ಚಿತ್ರದ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಳ್ಳಲು ಅದೂ ಕೂಡಾ ಒಂದು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

    ಅಷ್ಟಕ್ಕೂ ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾತೃಗಳು ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಇರಾದೆಯಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹೃಷಿಕೇಶ್ ಜಂಬಗಿ ಕೂಡಾ ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ ಖುಷಿಯಲ್ಲಿದ್ದಾರೆ.

  • ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

    ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

    ಬೆಂಗಳೂರು: ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿರೋ ಪಾದರಸ ಚಿತ್ರ ಬಿಡುಗಡೆಯಾಗೋದು ಯಾವಾಗ..? ಈ ಚಿತ್ರದ ಟ್ರೇಲರ್ ನೋಡಿ ಥ್ರಿಲ್ ಆಗಿದ್ದವರನ್ನೆಲ್ಲ ಒತ್ತರಿಸಿಕೊಂಡು ಕಾಡಿದ್ದ ಪ್ರಶ್ನೆ ಇದೊಂದೇ. ಆಗಸ್ಟ್ ಹತ್ತರಂದು ಪಾದರಸ ರಿಲೀಸಾಗೋ ನಿರ್ಧಾರ ಹೊರ ಬೀಳುವ ಮೂಲಕ ಆ ಪ್ರಶ್ನೆಗೆ ಪರಿಹಾರ ಸಿಕ್ಕಿದೆ.

    ಹೃಶಿಕೇಶ್ ಜಂಬಗಿ ನಿರ್ದೇಶನದ ಈ ಚಿತ್ರ ಇಂಥಾದ್ದೊಂದು ವ್ಯಾಪಕ ಕುತೂಹಲ ಕೆರಳಿಸಿದ್ದು ಟ್ರೇಲರ್ ಮೂಲಕ. ಬಹುಶಃ ಸಂಚಾರಿ ವಿಜಯ್ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹಾಸ್ಯ ಪ್ರಧಾನ ಚಿತ್ರದಲ್ಲಿಯೂ ಘನ ಗಂಭೀರವಾದ ಪಾತ್ರವನ್ನೇ ಮಾಡಿದ್ದ ಸಂಚಾರಿ ವಿಜಯ್ ಏಕಾಏಕಿ ಪ್ಲೇಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಂಡರೆ ಯಾರಿಗಾದರೂ ಶಾಕ್ ಆಗದಿರಲು ಸಾಧ್ಯವೇ?

    ಈ ಕಾರಣದಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೇಲರ್ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ಸಂಚಲನ ಸೃಷ್ಟಿಸಿದೆ. ಇಡೀ ಚಿತ್ರದ ತುಂಬಾ ವಿಜಯ್ ಇದೇ ರೀತಿ ಪ್ಲೇ ಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಅವರ ಪಾತ್ರಕ್ಕೆ ಇನ್ನೂ ಒಂದಷ್ಟು ಶೇಡುಗಳಿವೆಯಾ ಅಂತೆಲ್ಲ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದರೆ, ಪೋಸ್ಟರುಗಳು ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿವೆ.

    ಇದೇ ರೀತಿ ಸಂಚಾರಿ ವಿಜಯ್ ಗೆಳೆಯನಾಗಿ ನಟಿಸಿರೋ ನಿರಂಜನ್ ದೇಶಪಾಂಡೆ ಕೂಡಾ ತಮ್ಮೊಳಗಿನ ಅಸಲೀ ನಟನನ್ನು ಈ ಚಿತ್ರದಲ್ಲಿ ಹೊರ ಹಾಕಿದ್ದಾರಂತೆ. ಈವರೆಗೂ ರೇಡಿಯೋ ಜಾಕಿ, ನಿರೂಪಕ ಮುಂತಾದ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ನಿರಂಜನ್ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕೂಡಾ ಪಾದರಸ ಅವರನ್ನು ನಟನಾಗಿ ನೆಲೆಯೂರಿಸುವ ಲಕ್ಷಣಗಳೂ ಇದ್ದಾವೆ.

    ಒಟ್ಟಾರೆಯಾಗಿ ನಿರ್ದೇಶಕ ಹೃಶಿಕೇಶ್ ಜಂಬಗಿ ಸಂಚಾರಿ ವಿಜಯ್ ಅವರ ಗೆಟಪ್ಪನ್ನೇ ಬದಲಿಸಿದ್ದಾರೆ. ಒಂದೆಡೆ ಟ್ರೇಲರ್ ಹವಾ, ಮತ್ತೊಂದೆಡೆ ಹಾಡುಗಳ ಹಾವಳಿಯೊಂದಿಗೇ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಪಾದರಸ ಥಿಯೇಟರುಗಳಲ್ಲಿ ಹರಿದಾಡಲು ವಾರಗಳಷ್ಟೇ ಬಾಕಿ ಉಳಿದಿವೆ.

    https://www.youtube.com/watch?v=q9_ZKAGpbOw

  • ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸಿನ ‘ಪಾದರಸ’!

    ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸಿನ ‘ಪಾದರಸ’!

    ಬೆಂಗಳೂರು: ಸಿನಿಮಾ ಅಂದರೇನು ಅಂತೊಂದು ಪ್ರಶ್ನೆ ಮುಂದಿಟ್ಟರೆ ಸಾವಿರ ಮಂದಿಯಿಂದ ಸಾವಿರ ಥರದ ವ್ಯಾಖ್ಯಾನಗಳು ಉತ್ಪತ್ತಿಯಾಗಬಹುದು. ಆದರೆ ಅದೆಲ್ಲದರ ಪ್ರಧಾನ ಸಾರ ಮನರಂಜನೆ. ತಮ್ಮ ದಿನನಿತ್ಯದ ಜಂಜಾಟದ ನಡುವೆ ನಿರಾಳವಾಗೋದಕ್ಕಾಗಿಯೇ ಥೇಟರಿಗೆ ಬರುವ ಪ್ರೇಕ್ಷಕರನ್ನು ಖುಷಿಗೊಳಿಸೋದನ್ನೇ ಮೂಲ ಮಂತ್ರವಾಗಿಸಿಕೊಂಡು ತಯಾರಾಗಿರೋ ಚಿತ್ರ ‘ಪಾದರಸ’.

    ಸಂಚಾರಿ ವಿಜಯ್ ನಟನೆಯ ಪಾದರಸ ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸು. ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಚಿತ್ರಗಳನ್ನು ಕೊಡಬೇಕೆಂಬ ಉದ್ದೇಶದಿಂದಲೇ ಅಸ್ತಿತ್ವ ಪಡೆದುಕೊಂಡಿರುವ ಈ ಸಂಸ್ಥೆಯ ಚೊಚ್ಚಲ ಕಾಣಿಕೆಯಾಗಿ ಪಾದರಸ ಚಿತ್ರ ರೂಪುಗೊಂಡಿದೆ.

    ಈ ಸಂಸ್ಥೆಯ ನಿರ್ಮಾತೃಗಳು ಸಂಚಾರಿ ವಿಜಯ್ ಅವರು ರಾಷ್ಟ್ರ ಪ್ರಶಸ್ತಿ ಪಡೆದ ಘಳಿಗೆಯಿಂದಲೂ ಅವರೊಂದಿಗೆ ಸಂಪರ್ಕದಲ್ಲಿದ್ದರಂತೆ. ಅವರಿಗೆಲ್ಲ ವಿಜಯ್ ಅವರ ನಟನೆಯ ಕಸುವೇನೆಂಬುದು ಗೊತ್ತಿತ್ತು. ಅದ್ಯಾವ ಪಾತ್ರವನ್ನೇ ಆದರೂ ನಿಭಾಯಿಸುವ ಛಾತಿಯಿರುವ ವಿಜಯ್ ಅವರನ್ನು ಡಿಫರೆಂಟಾದ ಗೆಟಪ್ಪಿನಲ್ಲಿ ಕಾಣಿಸುವಂತೆ ಮಾಡಬೇಕೆಂದು ಬಹು ಕಾಲದಿಂದಲೂ ಅಂದುಕೊಂಡಿದ್ದವರು ಪಾದರಸ ಚಿತ್ರದ ಮೂಲಕ ಅದನ್ನು ನನಸಾಗಿಸಿಕೊಂಡಿದ್ದಾರೆ.

    ನಾನು ಅವನಲ್ಲ ಅವಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಜಯ್ ಅವರನ್ನು ನೋಡಿರೋ ಪ್ರೇಕ್ಷಕರಿಗೆ ಪಾದರಸ ಖಂಡಿತವಾಗಿಯೂ ಸರ್ ಪ್ರೈಸ್ ಪ್ಯಾಕೇಜ್ ಎಂಬುದು ಚಿತ್ರ ತಂಡದ ಭರವಸೆ. ವಾರವಿಡೀ ಕೆಲಸ, ಸಂಸಾರ, ಜಂಜಾಟ ಅಂತ ನಜ್ಜುಗುಜ್ಜಾದ ಮನಸುಗಳ ತುಂಬಾ ಸಂಚಾರಿ ವಿಜಯ್ ಅಭಿನಯದ ಪಾದರಸ ಹರಿದಾಡಿ ಮುದ ನೀಡೋದು ಗ್ಯಾರೆಂಟಿ ಎಂಬ ನಂಬಿಕೆ ಚಿತ್ರ ತಂಡದ್ದು.

    https://www.youtube.com/watch?v=JGCBJqzOa_I

    https://www.youtube.com/watch?v=x-qwgkhfLTA