Tag: pada pooje

  • ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಕೆಎಂಎಫ್ ಅಧಿಕಾರಿ

    ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಕೆಎಂಎಫ್ ಅಧಿಕಾರಿ

    ಧಾರವಾಡ: ನಗರದ ಕೆಎಂಎಫ್ ಅಧಿಕಾರಿಯೊಬ್ಬರು ಕೊರೊನಾ ಸಂಕಷ್ಟದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಮೆಚ್ಚಿ, ಅವರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.

    ಧಾರವಾಡ ನಗರದ ಟೋಲ್‍ನಾಕಾದಲ್ಲಿ ಪ್ರತಿ ದಿನ 30ಕ್ಕೂ ಹೆಚ್ಚು ಪೌರಕಾರ್ಮಿಕರು ಈ ಕೊರೊನಾ ಸಮಯದಲ್ಲಿ ಕೂಡಾ ಬೆಳಗಿನ ಜಾವವೇ ಬಂದು ಕಸ ತೆಗೆದುಕೊಂಡು ಹೋಗುವುದು, ರಸ್ತೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿರುತ್ತಾರೆ. ಇದನ್ನ ಧಾರವಾಡ ಕೆಎಂಎಫ್‍ನ ಟೆಕ್ನಿಕಲ್ ಆಫಿಸರ್ ನಾಗಪ್ಪ ಅರಳೋದ ಅವರು ಕಳೆದ ಒಂದು ತಿಂಗಳಿಂದ ಗಮನಿಸುತ್ತಾ ಬಂದಿದ್ದರು. ಹೀಗಾಗಿ ಇಂದು ಈ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಗೆ ನಾಗಪ್ಪ ಅವರು ಪೌರಕಾರ್ಮಿಕರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.

    ವಿಜಯಪೂರದ ಇಂಚಗೇರಿ ಮಠದ ಭಕ್ತರು ಆಗಿರುವ ನಾಗಪ್ಪ, ಪ್ರತಿ ದಿನ ಮೂರು ಹೊತ್ತು ಧ್ಯಾನ ಮಾಡುತ್ತಿದ್ದಾರೆ. ಇಂಚಗೇರಿ ಮಠದ ಶ್ರೀಗಳು ಹೇಳಿದಂತೆ ಇಂದು ನಾಗಪ್ಪ ಅವರು ಈ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ್ದಷ್ಟೇ ಅಲ್ಲದೇ ಅವರಿಗೆ ತುಪ್ಪ ಹಾಗೂ ಪೇಡಾ ನೀಡಿ, ಜೊತೆಗೆ ದಿನಸಿ ಕಿಟ್ ಕೂಡಾ ಕೊಟ್ಟು ಗೌರವಿಸಿದ್ದಾರೆ. ಇದು ನಿಜವಾದ ಸನ್ಮಾನ ಎಂದು ಈ ಸಮಯದಲ್ಲಿ ಹೇಳಬಹುದು. ಯಾಕಂದರೆ ಜಗತ್ತೇ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ದಿನಗಳಲ್ಲಿ ಪೌರಕಾರ್ಮಿಕರು ಸಾರ್ವಜನಿಕರಿಗಾಗಿ ದುಡಿಯುತ್ತಿದ್ದಾರೆ. ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂದಿಗೆ ನಾಗಪ್ಪ ಅವರು ಪಾದಪೂಜೆ ಮಾಡಿ ಗೌರವಿಸಿದ್ದು ವಿಶೇಷ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕರ ಪಾದ ತೊಳೆದ ಮಂಜು!

    ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕರ ಪಾದ ತೊಳೆದ ಮಂಜು!

    ಹಾಸನ: ಇಂದು ಬಿಜೆಪಿ ಅಭ್ಯರ್ಥಿಯಾದ ಮಾಜಿ ಸಚಿವ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಯ ಪಾದ ತೊಳೆದು ಪೂಜೆ ಮಾಡಿದ್ದಾರೆ.

    ಈ ಹಿಂದೆ ಕುಂಭಮೇಳದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‍ನಲ್ಲಿ ಪೌರಕಾಮಿಕರ ಪಾದ ತೊಳೆದು ಪೂಜೆ ಮಾಡಿ ಸುದ್ದಿಯಾಗಿದ್ದರು. ಈಗ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಎ. ಮಂಜು ಅವರು ಇಂದು ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ, ಪೌರಕಾರ್ಮಿಕ ದಂಪತಿಯ ಪಾದ ತೊಳೆದು ಪೂಜೆ ಮಾಡಿ ಮೋದಿ ಅವರನ್ನು ಫಾಲೋ ಮಾಡಿದ್ದಾರೆ. ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದಪೂಜೆ – ವಿಡಿಯೋ ನೋಡಿ

    ಹಾಸನದ ನಿರ್ಮಾಲ ನಗರದಲ್ಲಿ ಚಂದ್ರು ಹಾಗೂ ಅಶ್ವಿನಿ ದಂಪತಿಯ ಕಾಲು ತೊಳೆದು ಎ.ಮಂಜು ಪೂಜೆ ಮಾಡಿದ್ದಾರೆ. ಪಾದ ತೊಳೆದ ನಂತರ, ನಾವು ಪೌರಕಾರ್ಮಿಕರ ಪಾದ ತೊಳೆದಿದ್ದ ಮೋದಿಯನ್ನು ಟಿವಿಯಲ್ಲಿ ಮಾತ್ರ ನೊಡಿದ್ದೇವು. ಅದರೇ ಇಂದು ಎ.ಮಂಜು ನಮ್ಮ ಮನೆಗೆ ಬಂದು ನಮ್ಮ ಪಾದ ತೊಳೆದಿದ್ದಾರೆ. ಮೊದಲು ಸ್ವಲ್ಪ ಮುಜುಗರವಾದರೂ ನಂತರ ಸಂತೋಷವಾಯಿತು ಎಂದ ಚಂದ್ರು ದಂಪತಿ ಪ್ರತಿಕ್ರಿಯಿಸಿದ್ದಾರೆ.