Tag: P.Vasu

  • ಸೆಪ್ಟೆಂಬರ್ 28ಕ್ಕೆ ‘ಚಂದ್ರಮುಖಿ-2’ ರಿಲೀಸ್ ಫಿಕ್ಸ್ : ಕಂಗನಾ-ಲಾರೆನ್ಸ್ ಸಿನಿಮಾ

    ಸೆಪ್ಟೆಂಬರ್ 28ಕ್ಕೆ ‘ಚಂದ್ರಮುಖಿ-2’ ರಿಲೀಸ್ ಫಿಕ್ಸ್ : ಕಂಗನಾ-ಲಾರೆನ್ಸ್ ಸಿನಿಮಾ

    ಖ್ಯಾತ ನಿರ್ದೇಶಕ ಕಂ ನಟ ರಾಘವ ಲಾರೆನ್ಸ್ (Raghava Laurence) ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಚಂದ್ರಮುಖಿ 2’ (Chandramukhi 2) ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹಾರರ್ ಕಾಮಿಡಿ ಸಿನಿಮಾ ಸೆಪ್ಟೆಂಬರ್ 19 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ‘ಚಂದ್ರಮುಖಿ 2’ ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ. ಅಂದ್ರೆ ಸೆಪ್ಟಂಬರ್ 28ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

    ಹಿರಿಯ ನಿರ್ದೇಶಕ ಪಿ.ವಾಸು (P. Vasu) ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ಅವರು ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲಿಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

    ಸುಭಾಷ್ ಕರಣ್ ಅವರು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ‘ಚಂದ್ರಮುಖಿ 2’ ಚಿತ್ರ ನಿರ್ಮಿಸಿದ್ದಾರೆ. ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಈ ಸಿನಿಮಾಗಿದೆ. ಕಂಗನಾ ರಣಾವತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಮುಂತಾದವರು ನಟಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಪಿ.ವಾಸು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ರಚಿತಾ ರಾಮ್ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ. ಇದೀಗ ಈ ಚಿತ್ರದ ಪ್ರಮುಖವಾದ ರಚಿತಾ ತಾತನ ಪಾತ್ರಕ್ಕೆ ಅನಂತನಾಗ್ ಆಗಮನವಾಗಿದೆ!

    ಈ ಚಿತ್ರದಲ್ಲಿ ತನಗೆ ಇದುವರೆಗೂ ಸಿಗದಂಥಾ ಪಾತ್ರವೊಂದು ಸಿಕ್ಕಿದೆ ಅಂತರ ರಚಿತಾ ಖುಷಿಗೊಂಡಿದ್ದಾರೆ. ಈ ಪಾತ್ರವನ್ನೇ ಅಷ್ಟು ಸೊಗಸಾಗಿ ರೂಪಿಸಿರೋ ವಾಸು ತಾತನ ಪಾತ್ರವನ್ನೂ ಕೂಡಾ ವಿಶೇಷವಾಗಿಯೇ ಕಟ್ಟಿದ್ದಾರಂತೆ. ಅಂದಹಾಗೆ ಈ ಪಾತ್ರವನ್ನು ವಾಸು ಅನಂತ್ ನಾಗ್ ಅವರನ್ನು ಮನಸಲ್ಲಿಟ್ಟುಕೊಂಡೇ ಸೃಷ್ಟಿಸಿದ್ದರು. ಇದನ್ನು ಅನಂತ್ ಕೂಡಾ ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

    ಈ ಚಿತ್ರದ ಮೂಲಕ ರಚಿತಾ ರಾಮ್ ಮೊದಲ ಸಲ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ವಾಸು ಎಲ್ಲ ತಯಾರಿಯನ್ನೂ ಮುಗಿಸಿಕೊಂಡಿದ್ದಾರೆ. ತಾರಾಗಣದ ಆಯ್ಕೆ ಕಾರ್ಯ ಕೂಡಾ ಅಂತಿಮ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews