Tag: p susheela

  • ಖ್ಯಾತ ಗಾಯಕಿ ಪಿ. ಸುಶೀಲಾ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಖ್ಯಾತ ಗಾಯಕಿ ಪಿ. ಸುಶೀಲಾ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನ್ನಡದ ಹಲವು ಸಿನಿಮಾಗಳಿಗೆ ಹಾಡಿದ್ದ ಖ್ಯಾತ ಗಾಯಕಿ ಪಿ.ಸುಶೀಲಾರನ್ನು (P. Susheela) ಆಸ್ಪತ್ರೆಗೆ ದಾಖಲಿಸಲಾಗಿದೆ. 86 ವರ್ಷದ ಸುಶೀಲಾ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಆ.17ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಸಿನಿಮಾ ಕಥೆಗಳಿಗೆ ನನ್ನ ಊರು, ಯಕ್ಷಗಾನ ಪ್ರೇರಣೆ: ನಟ ರಿಷಬ್ ಶೆಟ್ಟಿ


    ನಿನ್ನೆ (ಆ.17) ಹೊಟ್ಟೆ ನೋವಿನ ನಿಮಿತ್ತ ಆಸ್ಪತ್ರೆಗೆ ಗಾಯಕಿಯನ್ನು ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆಯ ಬಳಿಕ ಪಿ.ಸುಶೀಲಾ ಅವರು ಆರೋಗ್ಯ ಸ್ಥಿರವಾಗಿದೆ. ನಾಳೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ.  ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ನಿರಾಳವಾಗಿದ್ದಾರೆ.

    ಅಂದಹಾಗೆ, ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಪಿ.ಸುಶೀಲಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ. ಇದೇನ ಸಭ್ಯತೆ ಇದೇನ ಸಂಸ್ಕೃತಿ, ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ, ಫಲಿಸಿತು ಒಲವಿನ ಪೂಜಾ ಫಲ, ಒಲವೇ ಜೀವನ ಸಾಕ್ಷಾತ್ಕಾರ, ನೀ ಬಂದು ನಿಂತಾಗ ಹೀಗೆ ಕನ್ನಡದಲ್ಲೇ 5000ಕ್ಕೂ ಹೆಚ್ಚು ಹಾಡುಗಳನ್ನು ಪಿ.ಸುಶೀಲಾ ಹಾಡಿದ್ದಾರೆ.