Tag: P.S. Harsha

  • ‘ಕೊರೊನಾಗಿಂತಲೂ ಭಯಾನಕ ಪೊಲೀಸ್ ವೈರಸ್’

    ‘ಕೊರೊನಾಗಿಂತಲೂ ಭಯಾನಕ ಪೊಲೀಸ್ ವೈರಸ್’

    – ಆರೋಪಿಯ ವಿರುದ್ಧ ಎಫ್‍ಐಆರ್

    ಮಂಗಳೂರು: ಜಗತ್ತು ಕೊರೊನಾ ಎಂಬ ಮಹಾಮಾರಿಗೆ ನಲುಗಿ ಹೋಗಿದೆ. ವೈದ್ಯರು, ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ರಾತ್ರಿ ಹಗಲೆನ್ನದೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಮಂಗಳೂರಿನಲ್ಲಿ ಕೂಡ ಕಟ್ಟು ನಿಟ್ಟಾಗಿ ನಿಯಮ ಪಾಲಿಸುವಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

    ಆದರೆ ಇಂತಹ ಕೊರೊನಾ ವಾರಿಯರ್ಸ್ ಪೊಲೀಸರ ಬಗ್ಗೆ ಕಿಡಿಗೇಡಿಯೊಬ್ಬ ಕೀಳು ಮಟ್ಟದ ಪೋಸ್ಟ್ ಮಾಡಲಾಗಿದೆ. ಆರೋಪಿಯ ವಿರುದ್ಧ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೈಕಲ್ತೋ ಬಿಸಯಾ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷಾ ಅವರ ಫೋಟೋ ಬಳಸಿ, ”ಕೊರೊನಾಗಿಂದತಲೂ ಭಯಾನಕ ವೈರಸ್ ಮಂಗಳೂರು ಪೊಲೀಸರು. ಭಾರೀ ಸುದ್ದಿ ಮಾಡುತ್ತಿರುವ ಪೋಲೀ__ ವೈರಸ್” ಎಂದು ಪೋಸ್ಟ್ ಮಾಡಲಾಗಿದೆ.

    ಈ ಸಂಬಂಧ ವಿರುದ್ಧ ಮಂಗಳೂರಿನ ಪ್ರದೀಪ್ ಎಂಬವರು ಕಂಕನಾಡಿ ನಗರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಪೊಲೀಸ್ ಆಯುಕ್ತ ಹರ್ಷ

    ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಪೊಲೀಸ್ ಆಯುಕ್ತ ಹರ್ಷ

    ಮಂಗಳೂರು: ನಗರದಲ್ಲಿ ಡಿಸೆಂಬರ್ 18ರಂದು ನಡೆದ ಗೋಲಿಬಾರ್ ಹಾಗೂ ಗಲಭೆಗೆ ಸಂಬಂಧಿಸಿದ ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

    ಮಂಗಳೂರು ಗಲಭೆ ಸಂಬಂಧ ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಗಲಭೆಗೆ ಸಂಬಂಧಿಸಿದ ವಿಡಿಯೋಗಳನ್ನು ಅನುಕ್ರಮದಲ್ಲಿ ಹಾಗೂ ಸರಿಯಾದ ಸಂದರ್ಭಗಳೊಂದಿಗೆ ಹೊಂದಿಸಿ ನೋಡದಿದ್ದರೆ ನೈಜ ಚಿತ್ರಣವನ್ನು ಅರಿಯಲು ಸಾಧ್ಯವಾಗುವುದಿಲ್ಲ ಎಂದರು.

    ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.

    ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ. ಈಗಾಗಲೇ ಪೊಲೀಸರು ಗಲಭೆಯ ಎಲ್ಲಾ ವಿಡಿಯೋಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ. ಡಿಸೆಂಬರ್ 19ರಂದು ಮಂಗಳೂರು ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.