Tag: P Rajiv

  • ಸಿದ್ದರಾಮಯ್ಯ ಸುಳ್ಳು ಹೇಳೋದರಲ್ಲಿ ನಿಸ್ಸೀಮರು: ಪಿ.ರಾಜೀವ್

    ಸಿದ್ದರಾಮಯ್ಯ ಸುಳ್ಳು ಹೇಳೋದರಲ್ಲಿ ನಿಸ್ಸೀಮರು: ಪಿ.ರಾಜೀವ್

    ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ SCP-TSP ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ ಅಂತ ಸಿದ್ದರಾಮಯ್ಯ ವಿರುದ್ಧ ಕುಡುಚಿ ಶಾಸಕ ಪಿ.ರಾಜೀವ್ ಆಕ್ರೋಶ ಹೊರಹಾಕಿದ್ದಾರೆ.

    SCP-TSP ಹಣವನ್ನು ಬಿಜೆಪಿ ಬೇರೆ ಕೆಲಸಕ್ಕೆ ಬಳಸಿಕೊಂಡಿದೆ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸುಳ್ಳು ಅಂಕಿ ಅಂಶಗಳು ಕೊಡುವುದರಲ್ಲಿ ನಿಶ್ನಾತೀತರು. ಅವರು ಕೊಡುವುದೇ ಸುಳ್ಳು ಅಂಕಿ ಅಂಶಗಳನ್ನು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ADGP

    SCP-TSP ಹಣ ಬೇರೆ ಕಡೆ ಬಳಸಿಕೊಳ್ಳಲು 7D ಯನ್ನು ಸೇರಿಸಿದ್ದೇ ಸಿದ್ದರಾಮಯ್ಯ ಸರ್ಕಾರ. ಹಣದ ಡೈವರ್ಷನ್ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ಬಿಜೆಪಿ SC-ST ಪರವಾಗಿಯೇ ಕೆಲಸ ಮಾಡುತ್ತಿದೆ. 28 ಸಾವಿರ ಕೋಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಖರ್ಚು ಮಾಡಿದೆ ಎಂದರು. 7D ದುರುಪಯೋಗ ಮಾಡಿಕೊಂಡಿದ್ದ ಅಪಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಅಂತ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ – ಮೈಸೂರಿನಲ್ಲಿ ಮನೆ ಮಾಲೀಕ, ಮೊಬೈಲ್ ಕೊಟ್ಟವರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದ್ರೆ ಅವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ: ಪಿ.ರಾಜೀವ್

    ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದ್ರೆ ಅವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ: ಪಿ.ರಾಜೀವ್

    ಚಿಕ್ಕೋಡಿ: ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದರೇ ಅಂಥವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ ಎಂದು ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಎಚ್ಚರಿಕೆ ನೀಡಿದ್ದಾರೆ.

    ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆ ಚುನಾವಣೆಯಲ್ಲಿ 13 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೆ ಕೇವಲ 4 ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ಆರು ಜನ ಪಕ್ಷೇತರರನ್ನು ಸೇರಿಸಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಶುರುವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಭಾರತೀಯ ಜನತಾ ಪಕ್ಷದ ಬಿ ಫಾರ್ಮ್ ಪಡೆದುಕೊಂಡು ಚುನಾಯಿತರಾಗಿರುವ ಅಭ್ಯರ್ಥಿಗಳ ತಂಟೆಗೆ ಯಾರಾದರೂ ಬಂದರೆ ಸುಮ್ಮನೆ ಬಿಡಲ್ಲ. ಕಸ ಹೊರಗೆ ಹಾಕಿದ ಹಾಗೆ ಹೊರಗೆ ಹಾಕುತ್ತೇನೆ. ಬಿಜೆಪಿಯಿಂದ ಬಿ ಫಾರಂ ಪಡೆದುಕೊಂಡು ಗೆಲುವನ್ನು ಸಾಧಿಸಿರುವ ಅಭ್ಯರ್ಥಿಗಳತ್ತ ಕೈ ಹಾಕಿದಾ ಅಂದರೆ ಕೈ ಹಾಕಿದವನ ಮನೆತನವನ್ನು ಒಳಗೆ ಹಾಕಲಿಲ್ಲ ಅಂದರೆ ನಾನು MLAನೇ ಅಲ್ಲ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ನನಗೆ ರಾಜಕಾರಣ ಮಾಡಲೇ ಬೇಕೆನ್ನುವ ಆಸೆ ಏನಿಲ್ಲ, ರಾಯಬಾಗ ತಾಲೂಕಿನಲ್ಲಿ ಶೇಖರಣೆಯಾಗಿರುವ ಕಸವನ್ನು ಗುಡಿಸುವ ರೀತಿ ಒದ್ದು ಹೊರಗೆ ಹಾಕ್ತೀನಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

  • ಕಾಂಗ್ರೆಸ್ ಅಧಿಕಾರ ಕಳ್ಕೊಂಡಾಗ್ಲೆಲ್ಲಾ ದೇಶದ ಆಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ: ಪಿ. ರಾಜೀವ್

    ಕಾಂಗ್ರೆಸ್ ಅಧಿಕಾರ ಕಳ್ಕೊಂಡಾಗ್ಲೆಲ್ಲಾ ದೇಶದ ಆಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ: ಪಿ. ರಾಜೀವ್

    ಶಿವಮೊಗ್ಗ: ಕಾಂಗ್ರಸ್ ಪಕ್ಷ ಅಧಿಕಾರ ಕಳೆದುಕೊಂಡಾಗೆಲ್ಲಾ ಅಮಾಯಕರ ಕೈಗೆ ಕಲ್ಲು ಕೊಡುವ ಕೆಲಸ ಮಾಡಿದೆ. ದೇಶದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ನಗರದ ಛೇಂಬರ್ಸ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರಬುದ್ಧರ ಜೊತೆ ಸಂವಾದ ಸಭೆಯಲ್ಲಿ ಪಿ. ರಾಜೀವ್ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಾಗೆಲ್ಲಾ ಅಮಾಯಕರ ಕೈಗೆ ಕಲ್ಲು ಕೊಡುವ ಕೆಲಸ ಮಾಡಿದೆ. ದೇಶದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ರಿಗೆ ಭಾರತ ದೇಶ ಅಂದರೆ ಸ್ವಾರ್ಥಕ್ಕಾಗಿ ಉಪಯೋಗಿಸುವ ಒಂದು ವಸ್ತುವಾಗಿದೆ. ಈ ಎರಡು ಪಕ್ಷಗಳು ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತವೆ. ಆದರೆ ಬಿಜೆಪಿ ಪಕ್ಷಕ್ಕೆ, ಬಿಜೆಪಿ ಕಾರ್ಯಕರ್ತರಿಗೆ ಭಾರತ ಅಂದರೆ ಸ್ವಾರ್ಥಕ್ಕಾಗಿ ಬಳಸುವ ವಸ್ತುವಲ್ಲ. ಬದಲಿಗೆ ಬಿಜೆಪಿ ಪಾಲಿಗೆ ಭಾರತ ದೇಶ ಪುಣ್ಯ ಭೂಮಿ, ಶ್ರದ್ಧಾ ಭೂಮಿ ಆಗಿದೆ ಎಂದರು.

    ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದಾರೆ. ಈ ಬಗ್ಗೆ ಕೆಲವು ಸ್ವಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಯ್ದೆ ಬಗ್ಗೆ ಇರುವ ಗೊಂದಲ ನಿವಾರಿಸುವ ಕೆಲಸ ಮಾಡಿ ಎಂದು ಶಾಸಕ ರಾಜೀವ್ ಕರೆ ಕೊಟ್ಟರು.

  • ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಬೆಳಗಾವಿ: ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ನಡೆದಿದೆ.

    ಅಧಿಕಾರಿಗಳಿಗೆ, ಜನರಿಗೆ ಅವಾಜ್ ಹಾಕಿ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ್ ಈಗ ಮತ್ತೊಮ್ಮೆ ರೈತರೊಬ್ಬರಿಗೆ ಆವಾಜ್ ಹಾಕಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಶ್ರಯ ಮನೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ನಮ್ಮ ಮನೆ ನೋಡೋಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದ ರೈತನಿಗೆ, “ಕಿಮ್ಮತ್ತು ಕೊಡ್ತೀನಿ ಅಷ್ಟೇ. ನಾನು ಎಂಎಲ್‍ಎ ನನ್ನನ್ನು ನೀನು ಮನೆಗೆ ಕರೆದುಕೊಂಡು ಹೋಗಬೇಕು. ಇಲ್ಲಿಂದ ನಡಿ… ನೀನು ಹೊಟ್ಟೆಗೆ ಏನು ತಿನ್ನುತ್ತೀಯ” ಎಂದು ನಿಂದಿಸಿದ್ದಾರೆ. “ಇಷ್ಟು ದಿನ ನಿಮ್ಮನ್ನು ನಾಯಿ ಇಟ್ಟ ಹಾಗೆ ಇಟ್ಟಿದ್ದರು. ನಿಮ್ಮ ಬಳಿ ಬರುತ್ತೇನೆ ಎಂದರೆ ಋಣ ಇಟ್ಟುಕೊ ನೀಚ ನನ್ನ ಮಗನೆ. ನನ್ನ ವಿರುದ್ಧ ಬಂದರೆ ಸೆಡ್ಡು ಹೊಡೆಯೋಕೆ ರೆಡಿ ಇದ್ದೀನಿ. ಪಿ ರಾಜೀವ್ ನನ್ನು ಹೆದರಿಸುವರು ಯಾರೂ ಇಲ್ಲ ಈ ತಾಲೂಕಿನಲ್ಲಿ” ಎಂದು ಆವಾಜ್ ಹಾಕಿದ್ದಾರೆ.

    ಶಾಸಕರು ಬಡವರಿಗಾಗಿ ಶ್ರಮಿಸಿ ಸರಿಯಾದ ಫಲಾನುಭವಿಗಳಿಗೆ ಮನೆ ಸಿಗಲಿ ಎಂದು ಕಷ್ಟಪಡುತ್ತಿದ್ದಾರೆ ಎಂದು ಜನರು ಅಂದುಕೊಂಡರೂ ಶಾಸಕರು ಈ ರೀತಿಯಾಗಿ ಆವಾಜ್ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.