Tag: P.Jayachandran

  • ಗಾಯಕ ಪಿ.ಜಯಚಂದ್ರನ್‌ ಹಾಡಿದ್ದ ಕನ್ನಡದ ಸೂಪರ್‌ ಹಿಟ್‌ ಹಾಡುಗಳಿವು..

    ಗಾಯಕ ಪಿ.ಜಯಚಂದ್ರನ್‌ ಹಾಡಿದ್ದ ಕನ್ನಡದ ಸೂಪರ್‌ ಹಿಟ್‌ ಹಾಡುಗಳಿವು..

    ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ (P.Jayachandran) ಅವರು ಕನ್ನಡದಲ್ಲಿ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದಾರೆ.

    ಪ್ರಮುಖವಾಗಿ ಅಂಬರೀಶ್‌ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ..  ಕಮಲ ವದನ..’ ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ..’ ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ..’ ಮೊದಲಾದ ಸುಪ್ರಸಿದ್ಧ ಗೀತೆಗಳಿಗೆ ಅವರು ದನಿಯಾಗಿದ್ದರು. ಇದನ್ನೂ ಓದಿ: ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    ಮುನಿಯನ ಮದರಿ ಚಿತ್ರದ ‘ಕಾಲ್ಗೆಜ್ಜೆ ತಾಳಕೆ’, ಕಿಲಾಡಿಗಳು ಸಿನಿಮಾದ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು’ ಮತ್ತು ‘ಅಳುಕದೆ ಬಳುಕುತ’, ಸುವರ್ಣ ಸೇತುವೆ ಚಿತ್ರದ ‘ಸಾವಿರ ಹೂಗಳಲಿ’, ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ‘ಉಯ್ಯಾಲೆ ಆಡೋಣ ಬನ್ನಿರೋ’, ಗಣೇಶನ ಮದುವೆ ಚಿತ್ರದ ‘ಶ್ರೀದೇವಿ ಮಾಧವಿ ಕಣ್ಣೋಟ ಬೇಡ’ ಮತ್ತು ‘ಪ್ರೇಮದ ಶ್ರುತಿ ಮೀಟಿದೆ’, ರೈತರ ಮಕ್ಕಳು ಸಿನಿಮಾದ ‘ಮನಸು ಕಳೆಯಿತು’ ಮೊದಲಾದ ಗೀತೆಗಳನ್ನು ಹಾಡಿ ಕನ್ನಡಿಗರ ಮನಸೂರೆಗೊಂಡಿದ್ದಾರೆ.

    ಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ ಗುರುವಾರ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪುಟ್ಟಣ್ಣ ಕಣಗಾಲ್ ಅವರು ಒಮ್ಮೆ, ‘ಜಯಚಂದ್ರನ್ ಕನ್ನಡ ಮಾತೃಭಾಷೆಯವರಲ್ಲ ಎಂದು ಹೇಳಲು ಆಗುವುದೇ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಛತ್ತೀಸ್‌ಗಢ | ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು; 25 ಜನ ಸಿಲುಕಿರುವ ಶಂಕೆ

  • ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    – 16 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಗಾಯಕ

    ತಿರುವನಂತಪುರಂ: ಒಲವಿನ ಉಡುಗೊರೆ ಕೊಡಲೇನು ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗೀತೆಗಳನ್ನು ಹಾಡಿದ್ದ ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ (80) ನಿಧನರಾಗಿದ್ದಾರೆ.

    ಆರು ದಶಕಗಳಿಗೂ ಹೆಚ್ಚು ಕಾಲ ಮಲಯಾಳಿಗಳ ಹೃದಯಗಳನ್ನು ಸೂರೆಗೊಂಡಿದ್ದ ಹಿರಿಯ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (P.Jayachandran) ಅವರು. ತಮ್ಮ ಸುಪ್ರಸಿದ್ಧ ವೃತ್ತಿಜೀವನದುದ್ದಕ್ಕೂ, ಜಯಚಂದ್ರನ್ ಅವರು ಪ್ರೀತಿ, ಹಂಬಲ, ಭಕ್ತಿ ಮುಂತಾದ ಪ್ರತಿಯೊಂದು ಭಾವನೆಯನ್ನು ತಮ್ಮ ಭಾವಪೂರ್ಣ ಗಾಯನದ ಮೂಲಕ ಹೊಮ್ಮಿಸಿದ್ದಾರೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಬೆಂಕಿ ಅವಘಡದಿಂದ ತಪ್ಪಿಸಿಕೊಂಡ ನೋರಾ ಫತೇಹಿ

    ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ಧ್ವನಿಗಳಲ್ಲಿ ಒಂದಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಕಾಲಾತೀತ ಧ್ವನಿ ಮತ್ತು ಭಾವನಾತ್ಮಕ ಗಾಯನಗಳು ಅವರ ಹಾಡುಗಳಿಗೆ ಶಾಶ್ವತವಾದ ಮೋಡಿಯನ್ನು ನೀಡಿವೆ, ಕೇಳಿದ ನಂತರವೂ ಕೇಳುಗರ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

    ಮಂದಾರ ಪುಷ್ಪವು ನೀನು, ಭೂಮಿ ತಾಯಾಣೆ ನೀ ಇಷ್ಟ ಕಣೆ, ಹಿಂದೂಸ್ತಾನವು ಎಂದೂ ಮರೆಯದ, ಕನ್ನಡ ನಾಡಿನ ಕರಾವಳಿ, ನನ್ನವರು ಯಾರೂ ಇಲ್ಲ.. ಯಾರಿಗೆ ಯಾರೂ ಇಲ್ಲ, ಕಾಲ ಮತ್ತೊಮ್ಮೆ ನಮಗಾಗಿ ಬಂತು ಹೀಗೆ ಹಲವಾರು ಕನ್ನಡದ ಸುಪ್ರಿಸಿದ್ಧ ಗೀತೆಗಳನ್ನು ಹಾಡಿ ಜನಪ್ರಿಯತೆ ಗಳಿಸಿದ್ದರು. ಇದನ್ನೂ ಓದಿ: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ