Tag: Oxford University

  • ಆಕ್ಸ್‌ಫರ್ಡ್‌ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್‌

    ಆಕ್ಸ್‌ಫರ್ಡ್‌ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್‌

    ಬೆಂಗಳೂರು: ಆಕ್ಸ್‌ಫರ್ಡ್‌ ವಿವಿಯ (Oxford University) ಬ್ಲಾಗ್‌ನಲ್ಲಿ ಕರ್ನಾಟಕದ (Karnataka) ಅಭಿವೃದ್ಧಿ ಮಾದರಿಯನ್ನು ಶ್ಲಾಘಿಸಲಾಗಿದೆ ಎಂದು ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ಇದರ ಅಸಲಿಯತ್ತನ್ನು ಸದನದಲ್ಲಿ ಆರ್‌ ಅಶೋಕ್ (R Ashok) ಬಯಲು ಮಾಡಿದ್ದಾರೆ.

    ಜೆಹೋಶ್ ಪಾಲ್ ವಿದೇಶಿ ಬ್ಲಾಗ್‌ನಲ್ಲಿ ಈ ಲೇಖನವನ್ನು ಬರೆದಿದ್ದಾರೆ. ಅರ್ಥಶಾಸ್ತ್ರಜ್ಞ ಎಂದು ಹೇಳಿಕೊಳ್ಳುವ ಇವರು ಸಿಎಂ ಸಿದ್ದರಾಮಯ್ಯ(CM Siddaramaiah) ಮತ್ತು ಪ್ರಿಯಾಂಕ್‌ ಖರ್ಗೆ (Priyank Kharge) ಕಚೇರಿಯಲ್ಲಿ ಕೆಲಸ ಮಾಡಿದ್ದರು. 2018 ರಲ್ಲಿ ಪ್ರಿಯಾಂಕ್ ಖರ್ಗೆ‌ಯವರ ಕಚೇರಿಯಲ್ಲಿ ಎರಡು ತಿಂಗಳಲ್ಲಿ ಕೆಲಸ ಮಾಡಿದ್ದ ಜೆಹೋಶ್ ಪಾಲ್ ನಂತರ 2024 ರಲ್ಲಿ ಸಿಎಂ ಕಚೇರಿಯಲ್ಲೂ ಜೆಹೋಶ್ ಪಾಲ್ ಕೆಲಸ ಮಾಡಿದ್ದರು ಎಂದು ತಿಳಿಸಿದರು.

    ವಿಶ್ವ ಸಂಸ್ಥೆಯ ಮುಖ್ಯಸ್ಥರೇ ರಾಜ್ಯಕ್ಕೆ ಬಂದು ರಾಜ್ಯದ ಅಭಿವೃದ್ಧಿ ಮಾದರಿ, ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ಆ ಬ್ಲಾಗ್‌ನಲ್ಲಿ ಉಲ್ಲೇಖವಾಗಿದೆ. ಈ ಲೇಖನವನ್ನು 2024 ರ ಮಾರ್ಚ್ 27 ರಂದು ಹ್ಯೂಮನ್ ರೈಟ್ಸ್ ಹಬ್ ಬ್ಲಾಗ್‌ಗೆ ಬರೆಯಲಾಗಿದೆ  ಎಂದು ಜೆಹೋಶ್ ಪಾಲ್ ಅವರ ಫೋಟೋವನ್ನು ಅಶೋಕ್‌ ಸದನದಲ್ಲಿ ಪ್ರದರ್ಶಿಸಿದರು.

    ಹೊಗಳುಭಟರಿಂದ ಆ ರೀತಿ ಸಿಎಂ ಬರೆಸಿಕೊಂಡು ಅದನ್ನು ರಾಜ್ಯಪಾಲರ ಭಾಷಣದಲ್ಲಿ ಹೊಗಳಿದ್ದೇ ದೊಡ್ಡ ಅಪಮಾನ ಎಂದು ಅಶೋಕ್‌ ಕೆಣಕಿದರು.

     

  • ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

    ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

    ಲಂಡನ್: ತಮಿಳುನಾಡಿನ (Tamil Nadu) ದೇವಸ್ಥಾನದಿಂದ ಕಳ್ಳತನವಾಗಿದ್ದ 500 ವರ್ಷಗಳಷ್ಟು ಹಳೆಯದಾದ ಸಂತ ತಿರುಮಂಕೈ ಆಳ್ವರ (Thirumangai Alvar) ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಬ್ರಿಟನ್‍ನ (Britain) ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ.

    ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ (Oxford University) ಕೌನ್ಸಿಲ್ ಅಶ್ಮೋಲಿಯನ್ ಮ್ಯೂಸಿಯಂನಿಂದ 15 ನೇ ಶತಮಾನದ ಸಂತ ತಿರುಮಂಕೈ ಆಳ್ವಾರ ಕಂಚಿನ ಶಿಲ್ಪವನ್ನು ಹಿಂದಿರುಗಿಸಲು ಭಾರತೀಯ ಹೈಕಮಿಷನ್‍ನ ಮನವಿಯನ್ನು ವಿಶ್ವವಿದ್ಯಾಲಯವು ಇಂದು ಒಪ್ಪಿಕೊಂಡಿದೆ. ಈ ನಿರ್ಧಾರವನ್ನು ಅನುಮೋದನೆಗಾಗಿ ಚಾರಿಟಿ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ ತಿಳಿಸಿದೆ. ಇದನ್ನೂ ಓದಿ: ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’; ಪರಿಸರ ತಜ್ಞ ಆರ್.ಕೆ.ನಾಯರ್‌ಗೆ ಸನ್ಮಾನ

    60 ಸೆಂ.ಮೀ ಎತ್ತರದ ಸಂತ ತಿರುಮಂಕೈ ಆಳ್ವರ ಪ್ರತಿಮೆಯನ್ನು ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ 1967 ರಲ್ಲಿ ಡಾ ಜೆ ಆರ್ ಬೆಲ್ಮಾಂಟ್ (1886-1981) ಎಂಬ ಸಂಗ್ರಾಹಕನ ಸಂಗ್ರಹದಿಂದ ಹರಾಜಿನಲ್ಲಿ ಆಕ್ಸ್‌ಫರ್ಡ್ ಪಡೆದುಕೊಂಡಿತ್ತು. ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕೆಲವು ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವು, 1967 ರಲ್ಲಿ ಈ ವಿಗ್ರಹವನ್ನು ಸದುದ್ದೇಶದಿಂದ ಇಲ್ಲಿ ಇರಿಸಿಕೊಂಡಿತ್ತು.

    ಕಳೆದ ವರ್ಷ ನವೆಂಬರ್‍ನಲ್ಲಿ ಸ್ವತಂತ್ರ ಸಂಶೋಧಕರೊಬ್ಬರು ಪುರಾತನ ಪ್ರತಿಮೆಯ ಮೂಲದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಭಾರತಕ್ಕೆ ಈ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಭಾರತ ಬ್ರಿಟನ್‍ಗೆ ವಿಗ್ರಹ ಮರಳಿಸುವಂತೆ ಮನವಿ ಮಾಡಿತ್ತು. ಕಳುವಾದ ಭಾರತೀಯ ಕಲಾಕೃತಿಗಳನ್ನು ಯುಕೆಯಿಂದ ಭಾರತಕ್ಕೆ ತಂದ ಹಲವಾರು ನಿದರ್ಶನಗಳಿವೆ. ಇದನ್ನೂ ಓದಿ: ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ?

  • ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

    ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಿ ದಾರಿಯಲ್ಲಿ ಸಾಗುತ್ತಿದೆಯೇ ಎಂಬ ವಿಚಾರದ ಕುರಿತು ಮಾತನಾಡಲು ಆಹ್ವಾನಿಸಿದ ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯದ (Oxford University) ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ತಿರಸ್ಕರಿಸಿದ್ದಾರೆ. ದೇಶದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಸ್ವಾತಂತ್ರ್ಯದ ನಂತರದ ಕಳೆದ ಏಳು ದಶಕಗಳಲ್ಲಿ ಭಾರತ ವಿವಿಧ ಸರ್ಕಾರಗಳಿಂದ ರೂಪುಗೊಂಡಿದೆ. ದೇಶವು ಅಭಿವೃದ್ಧಿಯ ಸರಿ ದಾರಿಯಲ್ಲಿ ಸಾಗುತ್ತಿದೆ. ಚುನಾಯಿತ ಪ್ರತಿನಿಧಿಯಾಗಿ, ಆಗುಹೋಗುಗಳನ್ನು ಪರಿಶೀಲಿಸಿ ಸಂಸತ್ತಿನ ಒಳಗೆ ಚರ್ಚಿಸುವುದು ಸೂಕ್ತ ನಡೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಲಂಡನ್‍ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆಸಿದ್ದು ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ (BJP) ಒತ್ತಾಯಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ವಿದೇಶ ಪ್ರವಾಸದಲ್ಲಿದ್ದಾಗ ಮೋದಿ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಎತ್ತಿಹಿಡಿದಿತ್ತು.

    ಲಂಡನ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge)‌ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ ಮತ್ತು ಪ್ರಶ್ನಿಸುವ ದ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮೇಲ್ಛಾವಣಿ ಕುಸಿತ – 8 ಮಂದಿ ದುರ್ಮರಣ

  • ಆಕ್ಸ್‌ಫರ್ಡ್‌ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮವಿಲ್ಲ

    ಆಕ್ಸ್‌ಫರ್ಡ್‌ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮವಿಲ್ಲ

    – 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ಪ್ರಯೋಗ
    – 56 ದಿನಗಳ ಕಾಲ ವೈರಸ್‌ ವಿರುದ್ಧ ಹೋರಾಟ

    ಲಂಡನ್‌: ಕೊರೊನಾ ವೈರಸ್‌ನಿಂದ ನಲುಗುತ್ತಿರುವ ವಿಶ್ವಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಲಸಿಕೆ ಸುರಕ್ಷಿತವಾಗಿದೆ.

    ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆಯ ಸುರಕ್ಷಿತವಾಗಿದೆ ಎಂದು ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್’‌ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

    1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್‌ ಯಶಸ್ವಿಯಾಗಿದ್ದು, ಈ ವೇಳೆ ಲಸಿಕೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ತಿಳಿಸಿದೆ.

    ಸ್ವಯಂಸೇವಕರ ಮೇಲೆ ನಡೆದ ಪ್ರಯೋಗದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಲಸಿಕೆ ನೀಡಿದ ಬಳಿಕ ಅವರ ದೇಹದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು(ಆಂಟಿಡಿಬಾಡಿಸ್‌) ಮತ್ತು ಟಿ- ಕೋಶಗಳು ಸೃಷ್ಟಿಯಾಗಿದೆ. ಪ್ರಯೋಗದಲ್ಲಿ 56 ದಿನಗಳ ಕಾಲ ಈ ಪ್ರತಿಕಾಯಗಳು ವೈರಸ್‌ ವಿರುದ್ಧ ಹೋರಾಡಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಸಂಶೋಧನೆಯ ಪ್ರಮುಖ ಲೇಖಕ ಆಂಡ್ರ್ಯೂ ಪೊಲಾರ್ಡ್ ಪ್ರತಿಕ್ರಿಯಿಸಿ, ಈ ಲಸಿಕೆ ಜನರನ್ನು ಎಷ್ಟು ಕಾಲದವರೆಗೆ ಕೊರೊನಾದಿಂದ ರಕ್ಷಿಸುತ್ತದೆ ಎನ್ನುವುದು ಇನ್ನು ದೃಢಪಟ್ಟಿಲ್ಲ. ಹೀಗಾಗಿ ಮತ್ತಷ್ಟ್ರು ಪ್ರಯೋಗಗಳು ನಡೆಯಬೇಕಿದೆ ಎಂದು ತಿಳಿಸಿದ್ದಾರೆ. ಈ ಲಸಿಕೆ ಬಗ್ಗೆ ಭಾರೀ ವಿಶ್ವಾಸ ಇಟ್ಟುಕೊಂಡಿರುವ ಇಂಗ್ಲೆಂಡ್‌ ಸರ್ಕಾರ 1 ಕೋಟಿ ಡೋಸ್‌ಗಳಿಗೆ ಈಗಾಗಲೇ ಆರ್ಡರ್‌ ಕೂಡ ನೀಡಿದೆ.

    ಎಲ್ಲರಿಗಿಂತ ಮೊದಲು ಹೇಗೆ?
    ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ತೀವ್ರತೆರನಾದ ಶ್ವಾಸಕೋಶದ ಸಮಸ್ಯೆ ತರಬಲ್ಲ ಸಾರ್ಸ್ (ಸಿವಿಯ‌ ಅಕ್ಯೂಟ್ ರೆಸ್ಪಿರೇಟರಿ ಸಿಂಡೋಮ್) ಹಾಗೂ ಎಂಇಆರ್‌ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡೋಮ್) ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಲ್ಲ ಕೊರೊನಾ ವೈರಸ್‌ ಬಂದಿದೆ. ಹೀಗಾಗಿ ಕೂಡಲೇ ತಂಡ ಕೋವಿಡ್‌ಗೆ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ಬೇರೆಯವರು ಲಸಿಕೆ ಕಂಡು ಹಿಡಿಯುವ ಪ್ರಯೋಗ ನಡೆಸುವುದಕ್ಕೆ ಮುನ್ನವೇ ಇವರು ವೈರಸ್‌ ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವ ಕಾರಣ ವಿಶ್ವದಲ್ಲಿ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

    ಹೈದರಬಾದಿನ ಭಾರತ್‌ ಬಯೋಟೆಕ್‌, ಚೀನಾದ ಸಿನೋವಾಕ್ ಬಯೋಟೆಕ್, ಚೀನಾ ಸರ್ಕಾರಿ ಸ್ವಾಮ್ಯದ ಸಿನೊಫಾರ್ಮ್ ಮತ್ತು ಅಮೆರಿಕಾದ ಬಯೋಟೆಕ್ ಸಂಸ್ಥೆ ಮೊಡೆರ್ನಾ ಸಹ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು ಕ್ಲಿನಿಕಲ್‌ ಪ್ರಯೋಗ ನಡೆಯುತ್ತಿದೆ.

  • ವರನಿಲ್ಲದೇ ತನ್ನನ್ನು ತಾನೇ ಮದುವೆ ಮಾಡಿಕೊಂಡ್ಳು!

    ವರನಿಲ್ಲದೇ ತನ್ನನ್ನು ತಾನೇ ಮದುವೆ ಮಾಡಿಕೊಂಡ್ಳು!

    ಉಗಾಂಡ: ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ಮದ್ವೆ ಮಾಡಿಕೊಂಡಿರುವ ಅಚ್ಚರಿಯ ಘಟನೆ ಉಗಾಂಡದಲ್ಲಿ ನಡೆದಿದೆ.

    32 ವರ್ಷದ ಲುಲು ಜೆಮಿಮಾ ತನ್ನನ್ನು ತಾನೇ ವರಿಸಿಕೊಂಡ ವಧು. ಜೆಮಿಮಾ ಅಂತಿಮವಾಗಿ ಪೋಷಕರ ಒತ್ತಡದಿಂದ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ, ಆಗಸ್ಟ್ 27 ರಂದು ಉಗಾಂಡಾದ  ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

    ಲುಲು ಮದುವೆಯಲ್ಲಿ ಗೌನ್ ಧರಿಸಿದ್ದು, ಸಾಂಪ್ರದಾಯಿಕ ವಿವಾಹ ಸಮಾರಂಭದಂತೆ ಮದುವೆಯಾದರು. ಮದುವೆಗೆ ಇಷ್ಟವಿಲ್ಲದಿದ್ದರೂ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ, ತನ್ನೊಂದಿಗೆ ತಾನು ಮದುವೆಯಾಗಲು ನಿಶ್ಚಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಲುಲು ಜೆಮಿಯಾ, 16 ವರ್ಷದಿಂದಲೇ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ ನನಗೆ ಇಷ್ಟವಿಲ್ಲದೇ ಇರುವುದರಿಂದ, ಮುಂದೂಡುತ್ತಾ ಬಂದಿದ್ದೆ. ಆದರೆ ಈಗ ಒತ್ತಡ ಹೆಚ್ಚಾಗಿದ್ದರಿಂದ, ನನ್ನ ಮದುವೆಯನ್ನು ನನ್ನೊಂದಿಗೆ ನಿಶ್ಚಯಿಸಿಕೊಂಡು ತಾನೇ ಮದುವೆ ಮಾಡಿಕೊಂಡಿದ್ದೇನೆ. ಈ ಬಗ್ಗೆ ಪೋಷಕರಿಬ್ಬರಿಗೂ ಬೇಸರವಿದ್ದು, ಅವರೊಂದಿಗೆ ಮಾತನಾಡಿ ಅವರನ್ನು ಸಮಾಧಾನ ಮಾಡುತ್ತೇನೆ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಮದುವೆಗೆ ಲುಲು ಜೆಮಿಯಾ ಕೇವಲ 2.62 ಡಾಲರ್(194.97 ರೂ.) ಖರ್ಚು ಮಾಡಿದ್ದಾಳೆ. ಜೆಮಿಯಾ ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸ್‍ನ್ನು ಬಾಡಿಗೆಗೆ ನೀಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಜೆಮಿಯಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv