Tag: oxen

  • ಜೋಡೆತ್ತುಗಳ ಬೆಲೆ ಹನ್ನೆರಡು ಲಕ್ಷ!

    ಜೋಡೆತ್ತುಗಳ ಬೆಲೆ ಹನ್ನೆರಡು ಲಕ್ಷ!

    ಚಿಕ್ಕೋಡಿ: ಕಳೆದ ಎರಡು ವರ್ಷದಿಂದ ನೆರೆ ಹಾಗೂ ಬರದ ಛಾಯೆಯಿಂದ ರೈತರು ಪಶು ಸಂಗೋಪನೆ ನಿರ್ವಹಣೆ ಕಷ್ಟ ಎಂದು ಕಂಗಾಲಾಗಿದ್ದಾರೆ. ಆದರೆ ಇಲ್ಲೊಬ ರೈತನ ಬಾಳಿನಲ್ಲಿ ಜೋಡಿ ಎತ್ತುಗಳೆ ಬೆಳಕಾಗಿವೆ. ಅಂದರೆ ರೈತ ತನ್ನ ಜೋಡೆತ್ತುಗಳನ್ನು ಬರೋಬ್ಬರಿ 12 ಲಕ್ಷ ರೂ.ಗೆ ಮಾರಾಟ ಮಾಡಿ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ.

    ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ಶುಕ್ರವಾರ ಉತ್ತರ ಕರ್ನಾಟಕದ ಪ್ರಸಿದ್ಧ ದನಗಳ ಸಂತೆ ನಡೆಯುತ್ತದೆ. ಈ ದನಗಳ ಸಂತೆಯಲ್ಲಿ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಖುಶಪ್ಪಾ ಕೆಂಪ್ಪಣ್ಣಾ ಹುಲೋಳ್ಳಿ ಅವರಿಗೆ ಸೇರಿದ್ದ ಜೋಡೆತ್ತುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ನಗರದ ದನಗಳ ಸಂತೆಯಲ್ಲಿ ಪಾಲ್ಗೊಂಡ ರಾಸುಗಳಲ್ಲಿ ಇದೇ ಅತ್ಯಂತ ದುಬಾರಿ ಜೋಡೆತ್ತು ಎನ್ನಲಾಗಿದೆ. ಹೀಗಾಗಿ ಈ ಜೋಡೆತ್ತುಗಳು ಸಂತೆಯಲ್ಲಿ ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಈ ಜೋಡೆತ್ತು ದೇಸಿ ತಳಿಯಾಗಿದ್ದು, ಎತ್ತರವಾಗಿ, ದಪ್ಪವಾಗಿ ಬೆಳೆದಿದ್ದವು. ಜೊತೆಗೆ ಈ ಜೋಡೆತ್ತು ಮುಂದೆ ತುಂಬಾ ಉಪಯೋಗದ ಕೆಲಸಕ್ಕೆ ಬರುತ್ತವೆ. ಹೀಗಾಗಿ ಈ ಜೋಡೆತ್ತುಗಳು ದುಬಾರಿ ಬೆಲೆಗೆ ಮಾರಾಟವಾಗಿವೆ.

    ಮಹಾರಾಷ್ಟ್ರದ ಪುಣೆ ಹತ್ತಿರದ ಹಳ್ಳಿಯೊಂದರ ರೈತ ಮಹಾದೇವ ನಂದೇಶ್ವರ ಎಂಬವರು ಬರೋಬ್ಬರಿ 12 ಲಕ್ಷ ರೂ.ಕೊಟ್ಟು ಈ ಜೋಡೆತ್ತುಗಳನ್ನು ಖರೀದಿ ಮಾಡಿದ್ದಾರೆ. ಈ ದುಬಾರಿ ಜೋಡೆತ್ತುಗಳನ್ನು ವೀಕ್ಷಿಸಲು ಜನರು ಸಂತೆಯಲ್ಲಿ ಮುಗಿಬಿದ್ದಿದ್ದರು. ಕೆಲವರಂತೂ ಜೋಡೆತ್ತುಗಳ ಮುಂದೆ ನಿಂತುಕೊಂಡು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

  • ಹುಲಿ ದಾಳಿಗೆ ರೈತ ಬಲಿ

    ಹುಲಿ ದಾಳಿಗೆ ರೈತ ಬಲಿ

    ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.

    ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ಮಾಡಿದೆ.

    ಎತ್ತುಗಳನ್ನು ಹೊಡೆದುಕೊಂಡು ಕಾಡಿನಲ್ಲಿ ಬರುತ್ತಿದ್ದ ಶಿವಮಾದಯ್ಯ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಭಯಗೊಂಡ ಎತ್ತುಗಳು ಓಡಿಹೋಗಿ ಮನೆ ಸೇರಿವೆ. ಶಿವಮಾದಯ್ಯ ಇಲ್ಲದೇ ಕೇವಲ ಎತ್ತುಗಳೇ ಬಂದಿರುವುದರಿಂದ ಗಾಬರಿಗೊಂಡ ಗ್ರಾಮಸ್ಥರು ರೈತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಕಾಡಿನಲ್ಲಿ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯನ ಶವ ಪತ್ತೆಯಾಗಿದೆ.

  • ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    – ಸಾವು ಮುಚ್ಚಿ ಹಾಕಲು ಯತ್ನಿಸಿದ ಜನ

    ಹಾವೇರಿ: ಉತ್ತರ ಕರ್ನಾಟಕದಲ್ಲಿ ಜಾನಪದ ಕ್ರೀಡೆ ಅಂದ್ರೆ ಅದು ಹೋರಿ ಓಡಿಸುವ ಸ್ಪರ್ದೆ. ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯನ್ನ ಮೀರಿಸುವಂತೆ ನಮ್ಮ ರಾಜ್ಯದಲ್ಲಿ ಹೋರಿ ಬೆದರಿಸವು ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯನ್ನ ನೋಡಲು ಬಂದ ಯುವಕನಿಗೆ ಹೋರಿ ತಿವಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ.

    ಮೃತ ಯುವಕನನ್ನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದ ನಿವಾಸಿ 19 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಬಿ.ಎಸ್ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಮಾಸಣಗಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನ ವೀಕ್ಷಣೆ ಮಾಡಲು ಬಂದಿದ್ದ. ಅರುಣ್ ಅಖಾಡದಲ್ಲಿ ನಿಂತಿದ್ದ. ಆ ವೇಳೆಯಲ್ಲಿ ಹೋರಿ ಅಡ್ಡಾ-ದಿಡ್ಡಿಯಾಗಿ ಓಡಿ ಬಂದು ಯುವಕನಿಗೆ ಕೊಂಬಿನಿಂದ ಬಲವಾಗಿ ತಿವಿದಿದೆ. ಬಲವಾಗಿ ತಿವಿದ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.

    ಕೊಬ್ಬರಿ ಹೋರಿಗಳನ್ನ ಸ್ಪರ್ಧೆಗಾಗಿ ಭರ್ಜರಿ ತಯಾರಿ ಮಾಡಿರುತ್ತಾರೆ. ಎತ್ತಿನ ಮಾಲೀಕ ಸ್ಪರ್ದೆಯಲ್ಲಿ ಭಾಗವಹಿಸೋ ಎತ್ತುಗಳನ್ನ ಕಟ್ಟು ಮಸ್ತಾಗಿ ಜನರ ಕೈಗೆ ಸಿಗದಂತೆ ಓಡುವ ಬಗ್ಗೆ ತರಬೇತಿ ನೀಡಿರುತ್ತಾರೆ. ಎತ್ತುಗಳನ್ನ ಹಿಡಿಯಲು ಪ್ರಯತ್ನಿಸೋ ವೇಳೆ ಎತ್ತು ಯಾರ ಕೈಗೂ ಸಿಗದಂತೆ ಓಡುವಾಗ ಕೆಲ ಸಣ್ಣಪುಟ್ಟ ಅವಾಂತರಗಳು ಸಂಭವಿಸುತ್ತವೆ. ಮಾಸಣಗಿ ಗ್ರಾಮದಲ್ಲಿ ಪ್ರಾರಂಭವಾದ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ಸಂಜೆ ವೇಳೆ ವೇಳೆ ಹೋರಿ ಬೆದರಿಸುವ ಸ್ಪರ್ಧೆ ರಂಗು ಪಡೆದಿತ್ತು. ಅಖಾಡದಲ್ಲಿ ಓಡಿ ಬಂದ ಹೋರಿ ಕೊಂಬಿನಿಂದ ತಿವಿದ್ದರಿಂದ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.

    ಇಂತಹ ಘಟನೆಗಳು ನಡೆಯಬಾರದು ಅನ್ನೋ ಉದ್ದೇಶಕ್ಕಾಗಿ ಜಿಲ್ಲಾಡಳಿತ ಈ ಸ್ಪರ್ಧೆಗಳಿಗೆ ಅನುಮತಿ ನೀಡಿರುವುದಿಲ್ಲ. ಜಾನಪದ ಕ್ರೀಡೆಯ ಅಭಿಮಾನಕ್ಕಾಗಿ ಗ್ರಾಮಸ್ಥರು ಹಾಗೂ ಯುವಕರು ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು. ಯುವಕ ಅರುಣ್ ಮೃತಪಟ್ಟ ವಿಷಯ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಅನುಮತಿ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ ಸಾವು-ನೋವುಗಳನ್ನ ತಪ್ಪಿಸಬಹುದಾಗಿದೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲೇ ಎತ್ತುಗಳ ಸಾವು

    ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲೇ ಎತ್ತುಗಳ ಸಾವು

    ಯಾದಗಿರಿ: ಮುಂಗಾರು ಮಳೆ ಪ್ರಾರಂಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಚುರಾಕಾಗಿ ಪ್ರಾರಂಭಿಸುವ ಮುನ್ನವೇ ವಿದ್ಯುತ್ ಸ್ಪರ್ಶದಿಂದ ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಯಾದಗಿರಿ ತಾಲೂಕಿನ ಗಣಾಪುರ ಗ್ರಾಮದಲ್ಲಿ ನಡೆದಿದೆ.

    ಗೂಡಸಾಬ್ ತನ್ನ ಜಮೀನಿನಲ್ಲಿ ಎತ್ತುಗಳ ನೇಗಿಲಿನಿಂದ ಭೂಮಿ ಹದ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ಕಳಚಿದ ಹರಿಯುತ್ತಿರುವ ವಿದ್ಯುತ್ ತಂತಿ ತಗುಲಿ ಎತ್ತುಗಳು ಸಾವನಪ್ಪಿವೆ.

    ರೈತ ಗೂಡಸಾಬ್ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಗುರಮಿಠಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಮಂಡ್ಯ: ಎತ್ತಿನಗಾಡಿ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎತ್ತುಗಳು ರಸ್ತೆಯಲ್ಲಿ ನರಳಾಡುತ್ತಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ಪಣಕನಹಳ್ಳಿ ಬಳಿ ಇಂದು ಬೆಳಗ್ಗೆ ಮಿನಿ ಬಸ್ ಮತ್ತು ಎತ್ತಿನಗಾಡಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎತ್ತಿನಗಾಡಿ ಮಾಲೀಕ ಹೊಳಲು ಗ್ರಾಮದ ಕೃಷ್ಣ ಗಾಯಗೊಂಡಿದ್ದಾರೆ. ಮೈಸೂರಿನ ಇಲವಾಲ ಮೂಲದವರು ಬೀಗರ ಊಟಕ್ಕೆಂದು ಹೊಳಲಿನ ದೇವಸ್ಥಾನಕ್ಕೆಂದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಸ್ಥಳದಲ್ಲಿದ್ದ ಜನರು ಗಾಯಾಳು ಕೃಷ್ಣ ಅವ್ರನ್ನ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲು ರವಾನಿಸಿದ್ರು. ಆದ್ರೆ ಎತ್ತುಗಳನ್ನು ಕರೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಎತ್ತುಗಳು ಅಲ್ಲಿಯೇ ನರಳುವಂತಾಗಿದೆ. ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=OxCoWc2NcIY