Tag: ox

  • ಬರೋಬ್ಬರಿ 18 ಲಕ್ಷಕ್ಕೆ ವಿಜಯಪುರದ ಎತ್ತು ಮಾರಾಟ

    ಬರೋಬ್ಬರಿ 18 ಲಕ್ಷಕ್ಕೆ ವಿಜಯಪುರದ ಎತ್ತು ಮಾರಾಟ

    ವಿಜಯಪುರ: ದಾಖಲೆ ಪ್ರಮಾಣದ ಮೊತ್ತಕ್ಕೆ ಎತ್ತು (Ox) ಮಾರಾಟವಾದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಒಂದೇ ಎತ್ತು 18 ಲಕ್ಷ 1 ಸಾವಿರ ರೂ.ಗೆ ಮಾರಾಟವಾಗಿದೆ.

    ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಇದಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬವರ ಎತ್ತು ಈ ದಾಖಲೆ ಬರೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದು ಶಾಸಕರು: ನರೇಂದ್ರಸ್ವಾಮಿ

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಎಂಬವರು ಎತ್ತನ್ನು ಖರೀದಿಸಿದ್ದಾರೆ. ಎಲ್ಲರೂ ಹುಬ್ಬೇರಿಸೋ ಮೊತ್ತಕ್ಕೆ ಎತ್ತು ಮಾರಾಟವಾಗಿದ್ದು, ತೆರ ಬಂಡಿ ಎಳೆಯುವುದರಲ್ಲಿ ಈ ಎತ್ತು ಪ್ರಸಿದ್ಧಿಯಾಗಿತ್ತು. ಇದನ್ನೂ ಓದಿ: ಹರಿಯಾಣದಲ್ಲಿ ಹಳಿತಪ್ಪಿದ ಗೂಡ್ಸ್‌ರೈಲು – ಕಂಟೈನರ್ ಮಗುಚಿ ರೈಲು ಸಂಚಾರಕ್ಕೆ ಅಡ್ಡಿ

    ಉತ್ತರ ಕರ್ನಾಟಕ ಭಾಗದಲ್ಲಿ ತೆರಬಂಡಿ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಈ ಎತ್ತು ತಂದುಕೊಟ್ಟಿದೆ. ಹಿಂದೂಸ್ಥಾನ ಹೆಚ್‌ಪಿ ಎಂಬ ಹೆಸರಿನಿಂದ ಮಾಲೀಕರು ಈ ಎತ್ತನ್ನು ಕರೆಯುತ್ತಿದ್ದರು. ಇಲ್ಲಿವರೆಗೆ ಈ ಎತ್ತು 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದುಕೊಟ್ಟಿದೆ. ಇದನ್ನೂ ಓದಿ: ಓರ್ವ ಸಚಿವ, ಓರ್ವ ಶಾಸಕನಿಗೆ ಶೀಘ್ರವೇ ಶೋಕಾಸ್‌ ನೋಟಿಸ್‌

    ಐದೂವರೆ ಅಡಿ ಎತ್ತರವಿರೋ ಎತ್ತಿಗೆ ಮನೆಯವರು ನಿತ್ಯ ಪೌಷ್ಟಿಕಾಂಶ ಆಹಾರ ನೀಡುತ್ತಿದ್ದರು. ಹಾಲು, ದವಸ, ಧಾನ್ಯ ಆಹಾರವಾಗಿ ನೀಡುತ್ತಿದ್ದರು. ಈ ಎತ್ತು ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಬೀದರ್‌ | ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್‌ ಬಂದ್‌

  • 9.20 ಲಕ್ಷ ರೂ. ದಾಖಲೆ ಬೆಲೆಗೆ ʻಜಾಗ್ವಾರ್‌ʼ ಎತ್ತು ಮಾರಾಟ – ಮಂಡ್ಯದ ರೈತ ಫುಲ್‌ ಖುಷ್‌

    9.20 ಲಕ್ಷ ರೂ. ದಾಖಲೆ ಬೆಲೆಗೆ ʻಜಾಗ್ವಾರ್‌ʼ ಎತ್ತು ಮಾರಾಟ – ಮಂಡ್ಯದ ರೈತ ಫುಲ್‌ ಖುಷ್‌

    ಮಂಡ್ಯ: ಶ್ರೀರಂಗಪಟ್ಟಣ ಶ್ರೀನಿವಾಸ ಅಗ್ರಹಾರ ಗ್ರಾಮದ ರೈತ (Farmer) ನವೀನ್ ಸಾಕಿದ್ದ ಹಳ್ಳಿಕಾರ್ ತಳಿಯ ಒಂಟಿ ಎತ್ತು 9.20 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದು ರೈತ ನವೀನ್‌ ಹರ್ಷಗೊಂಡಿದ್ದಾರೆ.

    ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು (Ox) ತಮಿಳುನಾಡು (Tamilnadu) ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ 9.20 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ಇದನ್ನೂ ಓದಿ: ಇನ್‍ಸ್ಪೆಕ್ಟರ್, ಮೇಲಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸುಲಿಗೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕ್ರಮ

    ʻಜಾಗ್ವಾರ್‌ʼ ಹೆಸರಿನ ಈ ಎತ್ತು ಹೊರ ರಾಜ್ಯಗಳಲ್ಲೂ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿತ್ತು. ತಮಿಳುನಾಡಿನಲ್ಲೂ ಪ್ರಶಸ್ತಿ ಗೆದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ರೇಸ್‌ನಲ್ಲಿ ಕಣಕ್ಕಿಳಿದರೆ ಅಬ್ಬರಿಸುತ್ತಿದ್ದ ಜಾಗ್ವಾರ್‌ ವೇಗಕ್ಕೆ ಮನಸೋತ ತಮಿಳುನಾಡಿನ ವ್ಯಕ್ತಿ 9.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

    ಈ ಹಿಂದೆ ಶ್ರೀರಂಗಪಟ್ಟಣದ ನವೀನ್‌ ಮಂಡ್ಯದ ಇಂಡವಾಳು ಗ್ರಾಮದ ಅಜಿತ್ ಅವರಿಂದ 1.20 ಲಕ್ಷ ರೂ.ಗೆ ಈ ಎತ್ತನ್ನು ಖರೀದಿಸಿದ್ದರು. ಸದ್ಯ 9.20 ಲಕ್ಷಕ್ಕೆ ಮಾರಾಟವಾಗಿದ್ದು, ಬರೋಬ್ಬರಿ 8 ಲಕ್ಷ ರೂ. ಲಾಭ ಗಳಿಸಿದ್ದಾರೆ. ಎತ್ತು ದಾಖಲೆ ಬೆಲೆಗೆ ಮಾರಾಟವಾದ ಬಳಿಕ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ಬೀದರ್: ನರೇಗಾ (NREGA) ಬಿಲ್ ಪಾವತಿಸಲು ಲಂಚಕ್ಕೆ (Bribe) ಬೇಡಿಕೆಯನ್ನಿಟ್ಟ ಗ್ರಾಮ ಪಂಚಾಯತಿ ಅಧಿಕಾರಿಗೆ ನೀಡಲು ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು (Ox) ಲಂಚದ ರೂಪದಲ್ಲಿ ನೀಡಲು ರೈತ ಮುಂದಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ಹಣ ಮಾತ್ರ ಅಧಿಕಾರಿಗಳು ನೀಡಿದ್ದು, ಉಳಿದ 45 ಸಾವಿರ ಹಣ ನೀಡಲು ಗ್ರಾ.ಪಂ ಅಧಿಕಾರಿ (Grampanchayat Officer) ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತ ರೈತ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ 

    ರೈತ ತನ್ನ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್‌ಗೆ ಆಗಮಿಸಿದ್ದು, ಲಂಚದ ರೂಪದಲ್ಲಿ ಈ ಎರಡು ಎತ್ತುಗಳನ್ನು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದ್ದು, ಸುದ್ದಿ ತಿಳಿದು ತಾ.ಪಂ ಎಡಿ ಸಂತೋಷ್ ಚವ್ಹಾಣ್ ಸ್ಥಳಕ್ಕೆ ಬಂದು ರೈತನಿಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ರೈತನನ್ನು ಮನೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

  • ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    ವಿಜಯಪುರ: ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಎತ್ತು ಪ್ರಾಣಬಿಟ್ಟ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ನಡೆದಿದೆ.

    ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ನಡೆದಿದ್ದ ಕರಿ ಹರಿಯುವ ವೇಳೆ ಎತ್ತುಗಳ ಮೆರವಣಿಗೆ ವೇಳೆ ಈ ಅವಘಡ ನಡೆದಿದೆ. ಗ್ರಾಮದ ರೈತ ಸತೀಶ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳಲ್ಲಿ ಮೈಕ್‌ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ – ಇಂದಿನಿಂದ ಪೊಲೀಸ್‌ ಕಾರ್ಯಾಚರಣೆ

    ಕರಿ ಹರಿಯುವ ವೇಳೆ ಹಲಗೆ ಬಾರಿಸುವ ಶಬ್ದಕ್ಕೆ ಬೆದರಿದ ಎತ್ತು ಗ್ರಾಮದ ಹೊರಗೆ ಓಡಿದೆ. ಹೊರವಲಯದಲ್ಲಿರುವ ಭೀಮಾ ನದಿಗೆ ಬಿದ್ದ ಎತ್ತು ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿದೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

  • 8 ಲಕ್ಷ ಕೊಟ್ಟು ಎತ್ತು ತಂದ ಕಾಫಿನಾಡ ರೈತ- ಏನಿದರ ವಿಶೇಷತೆ..?

    8 ಲಕ್ಷ ಕೊಟ್ಟು ಎತ್ತು ತಂದ ಕಾಫಿನಾಡ ರೈತ- ಏನಿದರ ವಿಶೇಷತೆ..?

    ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದೇ ತಾಲೂಕಿನ ತೇಗೂರು ಗ್ರಾಮದ ರೈತ ಮಂಜುನಾಥ್ ಒಂದೇ ಒಂದು ಎತ್ತಿಗೆ 8 ಲಕ್ಷ ಹಣ ನೀಡಿ ತಂದು ಇದು ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಎಂದಿದ್ದಾರೆ.

    ನಾನು ಎಲ್ಲಿಗೆ ಹೋಗಿ ಜೋಡಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ಗೆದ್ದರೂ ಚಿಕ್ಕಮಗಳೂರು ಹೆಸರು ಬರುತ್ತೆ ಅದೇ ನಮ್ಮ ಹೆಮ್ಮೆ ಎಂದಿದ್ದಾರೆ. ಕಳೆದೊಂದು ವರ್ಷದ ಹಿಂದೆ ಈ ಎತ್ತು ಇದೇ ಮಂಜುನಾಥ್‍ಗೆ ಮಾರಾಟವಾಗಿತ್ತು. ಆದರೆ ಕೊಟ್ಟ ಅಡ್ವಾನ್ಸ್ ಕೂಡ ವಾಪಸ್ ಬರಲಿಲ್ಲ. ಮೋಸ ಮಾಡಿದರು. ಬಳಿಕ ಅದೇ ಎತ್ತನ್ನ ತರಬೇಕು ಎಂದು ಅಂದಿನಿಂದ ಹಠಕ್ಕೆ ಬಿದ್ದ ಮಂಜುನಾಥ್, 10 ಲಕ್ಷವಾದರೂ ಪರವಾಗಿಲ್ಲ ಅದೇ ಎತ್ತು ಬೇಕೆಂದು ಎಂಟು ಲಕ್ಷ ಕೊಟ್ಟು ತಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿದ್ದ ಈ ಎತ್ತನ್ನ ತರಲು ಹೋಗುವಾಗ 10 ಲಕ್ಷದೊಂದಿಗೆ ಹೋಗಿದ್ದರು. 10 ಲಕ್ಷವಾದರೂ ಎತ್ತನ್ನ ತಂದೇ ತರಬೇಕು ಅಂತ. ಆದರೆ ಮಾತಿಗೆ ಕೂತಾಗ 7 ಲಕ್ಷದ 78 ಸಾವಿರಕ್ಕೆ ಮಾತುಕಥೆ ಮಾಡಿ ತಂದಿದ್ದಾರೆ. ಎತ್ತನ್ನ ಚಿಕ್ಕಮಗಳೂರಿಗೆ ತರುವಷ್ಟರಲ್ಲಿ 8 ಲಕ್ಷ ಖರ್ಚಾಗಿದೆ.

    ಈ ಎತ್ತಿನ ವೇಗಕ್ಕೆ ಬೆಲೆಕಟ್ಟಲಾಗಲ್ಲ:
    ಈ ಎತ್ತು ಹಳ್ಳಿಕಾರ್ ತಳಿಯದ್ದು. ಭಾರತೀಯ ರಾಸುಗಳ ತಳಿಗಳಲ್ಲೇ ಈ ತಳಿ ಶ್ರೇಷ್ಠವಾದ ತಳಿ, ಕೆಲಸಕ್ಕೂ ಸೈ. ಓಟಕ್ಕೂ ಸೈ. ದಣಿವರಿಯದೆ ದುಡಿಯುವ ಈ ಜಾತಿಯ ರಾಸುಗಳಿಗೆ ಭಾರೀ ಡಿಮ್ಯಾಂಡ್. ಆದರೆ ಈ ತಳಿಯ ರಾಸು ಈ ರೀತಿ 8 ಲಕ್ಷಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಮಂಜುನಾಥ್, ಈ ರಾಸುವನ್ನ ಎಂಟು ಲಕ್ಷ ನೀಡಿ ತಂದಿರೋದು ದುಡ್ಸೋದಕ್ಕಲ್ಲ. ಬದಲಾಗಿ ರೇಸ್‍ಗಳಲ್ಲಿ ಓಡಿಸೋದಕ್ಕೆ. ಮಂಜುನಾಥ್‍ಗೆ ಜೋಡಿ ಎತ್ತಿನಗಾಡಿ ಸ್ಪರ್ಧೆ ಅಂದ್ರೆ ತುಂಬಾ ಇಷ್ಟ. ರಾಜ್ಯದಲ್ಲಿ ಎಲ್ಲೇ ಸ್ಪರ್ಧೆ ನಡೆದರೂ ಬಿಡುವುದಿಲ್ಲ. ಹೋಗಿ ಬರುತ್ತಾರೆ. ಹಾಗಾಗಿ ಎತ್ತಿನಗಾಡಿ ಸ್ಪರ್ಧೆಗೆಂದೇ ಮಂಜುನಾಥ್ ಈಗ 8 ಲಕ್ಷ ನೀಡಿ ಈ ರಾಸುವನ್ನ ತಂದು ಗಗನ್ ಎಂದು ಹೆಸರಿಟ್ಟಿದ್ದಾರೆ. ಊರಿನ ಜನ ತಮ್ಮ ಊರಿಗೆ ಬಂದ ನೂತನ ಅತಿಥಿಯ ಪಾದಪೂಜೆ ಮಾಡುವ ಮೂಲಕ ಊರಿಗೆ ಸ್ವಾಗತ ಕೋರಿದ್ದಾರೆ.

    ಗಗನ್ ಬುದ್ಧಿವಂತ ಎತ್ತು:
    ಈ ಗಗನ್ ಓಡೋದಕ್ಕೆ ನಿಂತರೆ ಕುದುರೆ-ಚಿರತೆ ಇದ್ದಂತೆ. ಈಗಾಗಲೇ ರಾಜ್ಯಾದ್ಯಂತ ಹತ್ತಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದೆ. ಅದಕ್ಕಾಗೇ ಮಂಜುನಾಥ್ ಈ ಎತ್ತಿಗೆ ಎಂಟು ಲಕ್ಷ ನೀಡಿ ತಂದಿದ್ದಾರೆ. ಈ ಎತ್ತು ಸ್ಪರ್ಧೆಗಳಲ್ಲಿ ನಂಬರ್ ಒನ್ ಹೋರಿ. ಎಡಕ್ಕೆ ಕಟ್ಟಿದರೂ ಸೈ. ಬಲಕ್ಕೆ ಕಟ್ಟಿದರೂ ಸೈ. ಓಡುವಾಗ ಬೇರೆ ಎತ್ತುಗಳ ಗಾಡಿ ಅಡ್ಡ ಬಂದರೂ ಕ್ಷಣಾರ್ಧದಲ್ಲಿ ಪಥ ಬದಲಿಸಿ ಗುರಿ ಮುಟ್ಟುತ್ತೆ. ಇದರ ಮುಂದೆ ಬೇರೆ ಯಾವ ಎತ್ತುಗಳು ಓಡಲಾರವು. ಓಡುವಾಗಲೂ ಅಡ್ಡದಿಡ್ಡಿ ಓಡಲ್ಲ. ಒಂದೇ ಲೈನಲ್ಲಿ ಚಿರತೆಯಂತೆ ಓಡುತ್ತೆ. ದೇಶದಲ್ಲೇ ಹಳ್ಳಿಕಾರ್ ತಳಿಯ ಎತ್ತು ಎಂಟು ಲಕ್ಷಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಲಕ್ಷಾಂತರ ರೂಪಾಯಿ ಹಣ ನೀಡಿ ಕಾರು ತಂದು ಶೆಡ್‍ನಲ್ಲಿ ನಿಲ್ಲಿಸುತ್ತೇವೆ. ಈ ಎತ್ತನ್ನ ನೋಡಲು ಡೈಲಿ 50 ಜನ ಮನೆಬಾಗಿಲಿಗೆ ಬರುತ್ತಾರೆ. ಇದು ಚಿಕ್ಕಮಗಳೂರಿನ ಹೆಮ್ಮೆ ಅಂತಾರೆ ಊರಿನ ಯುವಕರು.

  • ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಜೋಡಿ ಎತ್ತುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ನಿನ್ನೆ ರಾತ್ರಿ ಸಿಡಿಲು ಬಡಿದ ಹಿನ್ನೆಲೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಸಾವಿಗೀಡಾಗಿವೆ. ಗ್ರಾಮದ ರೈತ ನಿಂಗಪ್ಪ ಎಂಬವವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ.

    ಜಮೀನಿನಲ್ಲೇ ಗುಡಿಸಲು ಹಾಕಿಕೊಂಡಿದ್ದ ರೈತ ಕುಟುಂಬ, ಎತ್ತುಗಳಿಗೆ ಹೊಲದಲ್ಲಿ ಕೊಟ್ಟಿಗೆ ನಿರ್ಮಿಸಿದ್ದರು. ರಾತ್ರಿ ವೇಳೆ ಸಿಡಿಲು ಬಡಿದು ಎತ್ತುಗಳು ಸಾವನ್ನಪ್ಪಿದ್ದು, ರೈತ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರ Connecting People ಆಗಿದೆ: ಹೆಚ್. ವಿಶ್ವನಾಥ್

    ತಲಾ ಒಂದು ಲಕ್ಷ ಬೆಲೆ ಬಾಳುವ ಎರಡು ಎತ್ತುಗಳನ್ನ ಕಳೆದುಕೊಂಡು ರೈತ ನಿಂಗಪ್ಪ ಕಂಗಾಲಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಎತ್ತುಗಳು ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    – ವಾಪಸ್ ತಂದು ಎತ್ತಿನ ಬರ್ತ್ ಡೇ ಆಚರಿಸಿ ಸಂಭ್ರಮ

    ಧಾರವಾಡ: ಎತ್ತುಗಳು ಅಂದ್ರೆ ರೈತರ ಕೃಷಿಯ ಮೂಲ ಆಧಾರ. ಆದರೆ ಬರಗಾಲದಂತಹ ಪರಿಸ್ಥಿತಿಗಳು ಬಂದಾಗ ಅನೇಕ ರೈತರು ತಮ್ಮ ಎತ್ತುಗಳನ್ನು ಸಾಕಲು ಆಗದೇ ಬಂದಷ್ಟು ಬೆಲೆಗೆ ಮಾರಾಟ ಮಾಡಿ ಬಿಡ್ತಾರೆ. ಇಲ್ಲೊಬ್ಬ ರೈತ ಹಾಗೆಯೇ ಎರಡು ವರ್ಷಗಳ ಹಿಂದೆ ತನ್ನ ಎತ್ತನ್ನ ಮಾರಿದ್ದರು. ಅದಾದ ಕೆಲವೇ ದಿನಕ್ಕೆ ಆ ಎತ್ತು ವಧಾಲಯದ ಬಳಿ ಸಿಕ್ಕಿದೆ. ಇನ್ನೇನು ಬಲಿಯಾಗುತ್ತಿದ್ದ ಎತ್ತನ್ನು ರಕ್ಷಿಸಿದ ರೈತ, ಅದಕ್ಕೆ ದುಪ್ಪಟ್ಟು ಬೆಲೆ ನೀಡಿ ಮನೆಗೆ ಕರೆ ತಂದಿದ್ದಾರೆ. ಎತ್ತನ್ನು ಮರಳಿ ತಂದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

    ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ್ ಎತ್ತು ವಾಪಸ್ ತಂದ ರೈತ. ಎರಡು ವರ್ಷದ ಹಿಂದೆ ಭೀಕರ ಬರಗಾಲ ಬಂದಾಗ, ಎತ್ತನ್ನು ಸಾಕಲು ಕಷ್ಟವಾಗಿತ್ತು. ಎತ್ತನ್ನು ಪಕ್ಕದ ಊರಿನ ರೈತನಿಗೆ ಮಾರಿದ್ದರು. ಆದರೆ ಮಾರಾಟವಾದ ಎರಡು ವರ್ಷದ ಬಳಿಕ ಧಾರವಾಡ ಕಸಾಯಿ ಖಾನೆ ಪಕ್ಕ ಹಾದು ಹೋಗುವಾಗ ಎತ್ತೊಂದರ ಧ್ವನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಅದು ತಮ್ಮದೇ ಎತ್ತು ಎಂದು ಗುರುತಿಸಿದ್ದಾರೆ.

    ನಾಗಪ್ಪ 52 ಸಾವಿರ ರೂಪಾಯಿ ನೀಡಿ ಎತ್ತನ್ನು ಖರೀದಿ ಮಾಡಿದ್ದಾರೆ. ಸದ್ಯ ಮೈಲಾರಿ ಎಂಬ ಈ ಎತ್ತಿನ 19ನೇ ವರ್ಷದ ಜನ್ಮದಿನ ಆಚರಿಸಿ ಇಡೀ ಊರಿಗೆ ಊಟ ಹಾಕಿಸಿದ್ದಾರೆ.

  • ಅಕ್ರಮ ಗೋವು ಸಾಗಾಟ, ಮಾರಣಾಂತಿಕವಾಗಿ ಲಾರಿಯಲ್ಲಿ ತುಂಬಿದ ಕಟುಕರು- ಇಬ್ಬರ ಬಂಧನ

    ಅಕ್ರಮ ಗೋವು ಸಾಗಾಟ, ಮಾರಣಾಂತಿಕವಾಗಿ ಲಾರಿಯಲ್ಲಿ ತುಂಬಿದ ಕಟುಕರು- ಇಬ್ಬರ ಬಂಧನ

    – ಸಾಗಾಟದ ವೇಳೆ ಎರಡು ಗೋವುಗಳು ಸಾವು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅಕ್ರಮವಾಗಿ ಗೋವು ಸಾಗಾಟ ಮುಂದುವರಿದಿದೆ. ಅಮಾನವೀಯವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

    ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ ಮತ್ತು ಮೈಸೂರಿನ ರಾಘವೇಂದ್ರ ಬಂಧಿತ ಆರೋಪಿಗಳು. ಮಂಗಳೂರು ನೋಂದಣಿ ಸಂಖ್ಯೆಯ (ಕೆಎ-19 ಎ-1801) 10 ಚಕ್ರದ ಲಾರಿಯಲ್ಲಿ 18 ಗೋವುಗಳನ್ನು ಮಾರಣಾಂತಿಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು.

    ಸಾಗಾಟದ ವೇಳೆ ಎರಡು ಗೋವುಗಳು ಸಾವನ್ನಪ್ಪಿದ್ದು, ಉಳಿದ 16 ಗೋವುಗಳನ್ನು ರಕ್ಷಿಸಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ.ಕೆ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ತ್ರಾಸಿ ಮರವಂತೆಯ ಬಳಿ ಕಾರ್ಯಾಚರಣೆ ನಡೆಸಿದೆ. ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಓಡಿ ಹೋಗಿದ್ದಾರೆ. ಆಗ ಬೆನ್ನಟ್ಟಿ ಬಂಧಿಸಲಾಗಿದೆ. ಬಿಟ್ಟು ಹೋದ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.

    ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಅಕ್ರಮ ಗೋ ಸಾಗಾಟ ವಾಹನವು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.

  • ಅಗಲಿದ ರಾಮನಿಗೆ ಅದ್ಧೂರಿ ಮೆರವಣಿಗೆ, ಅಂತ್ಯಸಂಸ್ಕಾರ

    ಅಗಲಿದ ರಾಮನಿಗೆ ಅದ್ಧೂರಿ ಮೆರವಣಿಗೆ, ಅಂತ್ಯಸಂಸ್ಕಾರ

    ಹುಬ್ಬಳ್ಳಿ: ಗಣ್ಯ ವ್ಯಕ್ತಿಗಳು ನಿಧನರಾದಾಗ ಊರೆಲ್ಲಾ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಕಾರ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ರೈತ ಕುಟುಂಬ ಮನೆಯಲ್ಲಿ 27 ವರ್ಷಗಳ ಕಾಲ ಸಾಕಷ್ಟು ದುಡಿದ ಎತ್ತು ಸಾವನ್ನಪ್ಪಿದ ನಂತರ ಅದ್ಧೂರಿ ಮೆರವಣಿಗೆ ಮಾಡಿ ವಿಧಿ ವಿಧಾನದ ಮೂಲಕ ಅಂತ್ಯಕ್ರೀಯೆ ನೆರವೇರಿಸಿದೆ.

    ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಅವರ ಕುಟುಂಬ ತಮ್ಮ ಮನೆಯಲ್ಲಿಯೇ ಜನಸಿದ ಕರುವಿಗೆ ರಾಮ ಎಂದು ನಾಮಕರಣ ಮಾಡಿ ಪ್ರತಿವರ್ಷ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು. ಆದರೆ ಮನೆಯ ಮಗನಂತೆ ಜೋಪಾನ ಮಾಡಿ, 27 ವರ್ಷಗಳ ಕಾಲ ದುಡಿದ ರಾಮ ಇಂದು ಸಾವನ್ನಪ್ಪಿದ ಪರಿಣಾಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಹಲವು ವರ್ಷಗಳ ಕಾಲ ಮನೆಯ ಸದಸ್ಯನಾಗಿ ಜಮೀನಿನಲ್ಲಿ ದುಡಿದ ರಾಮ, ಸಾವನಪ್ಪಿದ ಪರಿಣಾಮ ರೈತನ ಕುಟುಂಬ ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಿ, ವಿಧಿ ವಿಧಾನಗಳ ಮೂಲಕ ರಾಮನ ಅಂತ್ಯ ಸಂಸ್ಕಾರ ನೆರವೇರಿಸಿ ಮೂಕಪ್ರಾಣಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.

    ಎತ್ತಿನ ಜೊತೆಗೆ ರೈತ ಕುಟುಂಬ ಉತ್ತಮ ಬಾಂಧವ್ಯ ಹೊಂದಿದ್ದನ್ನು ಕಂಡ ಗ್ರಾಮಸ್ಥರಲ್ಲಿಯೂ ರಾಮನ ಸಾವು ಶೋಕವನ್ನುಂಟು ಮಾಡಿದೆ. ಹೀಗಾಗಿ ರಾಮ ಎನ್ನುವ ಎತ್ತಿನ ಅಂತ್ಯಸಂಸ್ಕಾರದಲ್ಲಿ ಗ್ರಾಮಸ್ಥರೂ ಪಾಲ್ಗೊಂಡು ರಾಮ ಅಮರ್ ರಹೇ ಎಂದು ಘೋಷಣೆ ಕೂಗಿದ್ದು, ರೈತನಿಗೆ ಜಾನುವಾರುಗಳ ಮೇಲಿನ ಪ್ರೀತಿ ಅದೆಷ್ಟು ಗಾಢ ಎನ್ನುವುದನ್ನು ಸಾರಿಸಾರಿ ಹೇಳುವಂತಿತ್ತು.

  • ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿದೆ. ಪರಿಣಾಮ ಕೊಟ್ಟಿಗೆಯೊಳಗಿದ್ದ ಮೂರು ಮೇಕೆ ಸಾವನ್ನಪ್ಪಿವೆ. ಆಶ್ರಯವಾಗಿದ್ದ ಮನೆ ಮತ್ತು ಜೀವನಾಧಾರವಾಗಿದ್ದ ಮೇಕೆಗಳ ಸಾವಿನಿಂದ ರೈತ ಮಹಿಳೆ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.