Tag: owner

  • ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ

    ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ

    ಹಾಸನ: ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಿರುವ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಇದು ಜನರಿಗೆ ತಿಳಿದಿಲ್ಲ.

    ಇದೀಗ ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಕಳೆದ ವರ್ಷ ಹಳೇಬೀಡು ವ್ಯಾಪ್ತಿಯಲ್ಲಿ ಈ ಪ್ರಕರಣ 2021ರಲ್ಲಿ ದಾಖಲಾಗಿತ್ತು. ಈ ಹಿನ್ನೆಲೆ 2022ರ ಮೇ 26 ರಂದು ನ್ಯಾಯಾಲಯದಲ್ಲಿ ಸಿವಿಲ್ ಜೆಎಂಎಫ್‍ಸಿ ನ್ಯಾಯಾಧೀಶ ರಾದ ಸಿ.ಪ್ರಸನ್ನ ಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಾಧೀಶರು, ಅಪ್ರಾಪ್ತ ಬಾಲಕ ನಿಯಮ ಉಲ್ಲಂಘಿಸಿದ ಹಿನ್ನೆಲೆ 20 ಸಾವಿರ ರೂ. ದಂಡ ವಿಧಿಸುವ ಮೂಲಕ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್ 

    ಬೇಲೂರಿನಲ್ಲಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್ ಬಿದ್ದಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಬಾರಿ ದಂಡ ಬಿದ್ದ ಮೇಲೆ ತಂದೆ-ತಾಯಿಗಳು ಮಕ್ಕಳ ಕೈಗೆ ಸದ್ಯಕ್ಕೆ ವಾಹನಗಳನ್ನು ನೀಡುತ್ತಿಲ್ಲ.

    court order law

    ಈ ಕೇಸ್‍ಗೆ ಸಂಬಂಧಿಸಿದಂತೆ ಕಲಂ.184 ಅಡಿಯಲ್ಲಿ ಕೇಸ್ ದಾಖಲಿಸಿ ಚಾಲನೆ ಮಾಡುತ್ತಿದ್ದ ಬಾಲಕ ಅಜಾಗರೂಕತೆ, ಹೆಲ್ಮೆಟ್ ಇಲ್ಲದೆ ಚಾಲನೆ, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ್ದರಿಂದ ತಲಾ ಒಂದೊಂದು ಸಾವಿರದಂತೆ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲೀಕನಿಗೆ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯಲ್ಲಿ ವಿದ್ಯುಕ್ತ ಚಾಲನೆ 

  • ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ನ್ಯೂಯಾರ್ಕ್: ಸಾಮಾನ್ಯವಾಗಿ ನಾಯಿಗಳು ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ. ಆದರೆ ಅಮೇರಿಕಾದ ಸೌತ್ ಕೆರೊಲಿನಾದ ನಾಯಿಯೊಂದು ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಇನ್ನೂ ಜೀವಂತವಾಗಿದ್ದು, ಗಿನ್ನೆಸ್ ದಾಖಲೆ ಬರೆದಿದೆ.

     

    View this post on Instagram

     

    A post shared by Pebbles (@pebbles_since_2000)

    ಈ ಕುರಿತು ಶ್ವಾನದ ಮಾಲೀಕರು ನಾಯಿಯ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಾರ್ಚ್ 28, 2000 ರಂದು ಜನಿಸಿದ ಪೂಚ್ ಎಂಬ ಹೆಸರಿನ ನಾಯಿಯ ವಯಸ್ಸು 22 ವರ್ಷ. ಈ ಮುದ್ದಾದ ಟೋಬಿಕೀತ್ ಎಂಬ ಜಾತಿಯ ನಾಯಿಯು ಹಗಲಿನಲ್ಲಿ ಮಲಗಲು ಇಷ್ಟಪಡುತ್ತದೆ ಹಾಗೂ ರಾತ್ರಿಯಿಡೀ ಎಚ್ಚರವಾಗಿರುತ್ತದೆ ಎಂದು ಅದರ ಮಾಲೀಕ ಜೂಲಿ ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

     

    View this post on Instagram

     

    A post shared by Pebbles (@pebbles_since_2000)

    ಪೂಚ್ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಮ್ಮೊಂದಿಗಿದ್ದು, ಅವಳು ಯಾವಾಗಲೂ ನಮ್ಮ ಕುಟುಂಬದ ದಾರಿದೀಪವಾಗಿದ್ದಾಳೆ. ನಮ್ಮ ಜೀವನದಲ್ಲಿಯೇ ನಾವು ಅವಳನ್ನು ಮರೆಯೊದಕ್ಕೆ ಸಾಧ್ಯವಿಲ್ಲ ಎಂದು ಫೋಟೋಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಅಮೇರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಮನುಷ್ಯನ ಜೀವನದ 15 ವರ್ಷ ನಾಯಿ ಜೀವನದ 1 ವರ್ಷಕ್ಕೆ ಸಮನಾಗಿರುತ್ತದೆ. ನಾಯಿಗೆ ಎರಡು ವರ್ಷವು ಮನುಷ್ಯನಿಗೆ ಸುಮಾರು ಒಂಬತ್ತು ವರ್ಷಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.

     

  • ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ ಜೀವ ಬಿಟ್ಟ ಮುದ್ದಿನ ಶ್ವಾನ

    ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ ಜೀವ ಬಿಟ್ಟ ಮುದ್ದಿನ ಶ್ವಾನ

    ಕೋಲಾರ: ತನ್ನ ಯಜಮಾನನಿಗೆ ಪ್ರಾಣ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಅವರ ಮನೆಯಲ್ಲಿ ಸಾಕಿದ್ದ ನಾಯಿ. ಅಮೇರಿಕನ್ ಬುಲ್ ತಳಿಯ 3 ವರ್ಷದ ಹೆಣ್ಣು ಶ್ವಾನ ಇದಾಗಿದ್ದು ಮನೆಯ ಮಂದಿಯ ಅಕ್ಕರೆಯ ಮುದ್ದಿನ ಮಗುವಿನಂತಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

    ತೋಟದ ಮನೆ ಬಳಿ ಮಾಲೀಕ ವಿಲಾಸ್ ಮೊಬೈಲ್‍ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಈ ವೇಳೆ ನಾಯಿಯೂ ಸಹ ತನ್ನ ಯಜಮಾನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆ ಹೆಡೆ ಎತ್ತಿ, ಬುಸುಗುಟ್ಟಿ ನಿಂತು, ಇನ್ನೇನು ಕಚ್ಚಲು ಸಜ್ಜಾಗಿತ್ತು. ಅಪಾಯದ ಸುಳಿವು ಅರಿತ ಶ್ವಾನವು ತಕ್ಷಣವೇ ಮುನ್ನುಗ್ಗಿ ಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದು ಎಸೆದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

    ನಾಯಿಯೂ ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನ ದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿದಿದೆ. ಅಲ್ಲದೆ ಹಾವು ಅದರ ನಾಲಿಗೆ ಹಾಗೂ ಮುಖಕ್ಕೆ ಕಚ್ಚಿದೆ. ಇದರಿಂದ ಕೆರಳಿದ ಶ್ವಾನವು ನಾಗರನ ಕುತ್ತಿಗೆ ಸೀಳಿ ಕೊಂದು ಹಾಕಿದೆ. ಇದಾದ ಬಳಿಕ ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಶ್ವಾನವು ಮೃತಪಟ್ಟಿದೆ.

    ಇನ್ನೂ ಮನೆ ಮಾಲೀಕನ ಜೀವ ರಕ್ಷಣೆ ಮಾಡಿದ ಮುದ್ದಿನ ಶ್ವಾನದ ಮೃತದೇಹವನ್ನು ಮನೆಯಂಗಳದ ಬದಿಯಲ್ಲಿ ಅಂತ್ಯಕ್ರಿಯೆ ಮಾಡಿ ಪೂಜಿಸಲಾಗಿದೆ.

  • ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

    ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

    ನವದೆಹಲಿ: ನಾಯಿ ಬೊಗಳಿದ್ದಕ್ಕೆ ಹುಡುಗನೊಬ್ಬ 85 ವರ್ಷದ ವೃದ್ಧನ ಹತ್ಯೆಗೈದಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

    ಮಾರ್ಚ್ 18ರಂದು ನಜಾಫ್‍ಗಢದಲ್ಲಿ ನಡೆದ ಹೋಳಿ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, 17 ವರ್ಷದ ಹುಡುಗ ತನ್ನ ನೆರೆಮನೆಗೆ ಬಲವಂತವಾಗಿ ನುಗ್ಗಿದಾಗ ವೃದ್ಧ ದಂಪತಿ ಸಾಕಿದ್ದ ನಾಯಿ ಆತನನ್ನು ಕಂಡ ಬೊಗಳಿದೆ. ಇದರಿಂದ ಕೋಪಗೊಂಡ ಹುಡುಗ ನಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ನಾಯಿಯ ಮಾಲೀಕ ಅಶೋಕ್ ಕುಮಾರ್ ಅವರಿಗೆ ಲೋಹದ ರಾಡ್‍ನಿಂದ ಹುಡುಗ ಥಳಿಸಿದ್ದಾನೆ. ಇದರಿಂದ ತೀವ್ರವಾಗಿ ಅಶೋಕ್ ಅವರು ಗಾಯಗೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    crim

    ನಂತರ ಅಶೋಕ್ ಅವರ ಪತ್ನಿ ಮೀನಾ ನಡೆದ ಎಲ್ಲ ಘಟನೆಯನ್ನು ನಜಾಫ್‍ಗಢ ಪೊಲೀಸ್ ಠಾಣೆಯ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅಶೋಕ್ ಕುಮಾರ್ ಅವರನ್ನು ರಾವ್ ತುಲಾ ರಾಮ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

    ಆರಂಭದಲ್ಲಿ ಹುಡುಗನನ್ನು ಬಂಧಿಸಿದ್ದ ಪೊಲೀಸರು ಬಾಲಕ ಎಂಬ ಕಾರಣಕ್ಕೆ ಬಾಲನ್ಯಾಯ ಮಂಡಳಿಯಿಂದ ಬಿಡುಗಡೆಗೊಳಸಲಾಗಿತ್ತು. ಆದರೆ ಮಾರ್ಚ್ 20 ರಂದು ಗಾಯಗೊಂಡ ಅಶೋಕ್ ಅವರು ಮೃತಪಟ್ಟಿದ್ದು, ಹೀಗಾಗಿ ಮಾರ್ಚ್ 23 ರಂದು ಮತ್ತೊಮ್ಮೆ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಸದ್ಯ ಪೊಲೀಸರು ಮೃತ ವ್ಯಕ್ತಿಯ ಪತ್ನಿ ನೀಡಿದ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

  • ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಲಕ್ನೋ: ಬಿಲ್ ಪಾವತಿಸಲು ಹೇಳಿದ್ದಕ್ಕೆ ಬಾರ್ ಮಾಲೀಕನ ಕೈ ಹೆಬ್ಬೆರಳು ಕಚ್ಚಿದ ವಿಚಿತ್ರ ಘಟನೆಯೊಂದು ಮುಜಫ್ಪರ್ ನಗರದಲ್ಲಿ ನಡೆದಿದೆ.

    ಒಂದು ದಿನ ಸುನೀಲ್ ಕುಮಾರ್ ತನ್ನ ಗೆಳಯನೊಂದಿಗೆ ಬಾರ್‍ಗೆ ಹೋಗಿದ್ದಾನೆ. ಕಂಠಪೂರ್ತಿ ಕುಡಿದಿದ್ದಾರೆ. ಬಿಲ್ ಪಾವತಿ ಮಾಡಲು ಮಾಲೀಕ ತಿಳಿಸಿದಾಗ ಖ್ಯಾತೆ ತೆಗೆದಿದ್ದಾರೆ. ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಬಾರ್ ಮಾಲೀಕ ಅಶೋಕ್ ಕುಮಾರ್ ಜೊತೆಗೆ ಜಗಳ ಆರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ಹೋಗಿದೆ.  ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

    ಸಿಟ್ಟಿಗೆದ್ದ ಸುನೀಲ್ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ್ದಾನೆ. ಸುನೀಲ್ ಕುಮಾರ್ ಹಾಗೂ ಅವನ ಗೆಳೆಯನನ್ನು ಬಂಧಿಸಲಾಗಿದೆ. ಬಾರ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಮಾಡುತ್ತೇವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

  • ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!

    ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!

    ಬೆಂಗಳೂರು: ಮಾಲೀಕನ ಮೇಲಿನ ಸಿಟ್ಟಿಗೆ ಕಾರ್ಮಿಕನೊಬ್ಬ ವಿಮಾನದಲ್ಲಿ ಬಂದು ಕಳ್ಳತನ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕಳ್ಳ ಕಾರ್ಮಿಕ 2 ಲಕ್ಷ ಹಣ ದೋಚಿ ಪರಾರಿ ಆಗಿದ್ದಾನೆ. ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್ ದೇವ್ ಬಟ್ಟೆ ಶಾಪ್‍ನಲ್ಲಿ ಈ ಘಟನೆ ನಡೆದಿದೆ. ಕಳ್ಳತನ ಆರೋಪಿ ಐದು ವರ್ಷಗಳ ಹಿಂದೆ ಇದೇ ಅಂಗಡಿಯಲ್ಲಿ ಕೆಲಸಗಾರನಾಗಿದ್ದ ಎನ್ನಲಾಗಿದೆ.

    ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ದ ಇವನನ್ನ ಕೆಲಸದಿಂದ ತೆಗೆಯಲಾಗಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡಿದ್ದ ಆರೋಪಿ ಆಗಾಗ ಬಂದು ನೋಡಿ ಹೋಗ್ತಿದ್ದ. ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅಂಗಡಿ ಡ್ರಾಯರ್ ನಲ್ಲಿದ್ದ 2 ಲಕ್ಷ ನಗದು ಎತ್ತಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    ರಾಜಸ್ಥಾನದಿಂದ ಫ್ಲೈಟ್‍ನಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ವೀಡಿಯೋ ಶೇರ್ ಮಾಡಿದ ಶಿಕ್ಷಕನ ಬಂಧನ

  • ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಕಿಡಿಗೇಡಿಗಳಿಂದ ಬೆಂಕಿ

    ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಕಿಡಿಗೇಡಿಗಳಿಂದ ಬೆಂಕಿ

    ಹಾಸನ: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

    ರವಿ ಅವರ ಬೈಕ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದುಡಿದ ಹಣವನ್ನು ಕೂಡಿಟ್ಟು 2017 ರಲ್ಲಿ ರವಿ ಸ್ಕೂಟರ್ ಖರೀದಿಸಿದ್ದರು. ತಮ್ಮ ಸ್ಕೂಟರನ್ನು ರಾತ್ರಿ ವೇಳೆ ಮನೆಯ ಮುಂದೆಯೇ ನಿಲ್ಲಿಸುತ್ತಿದ್ದರು. ಇದನ್ನು ಗಮನಿಸಿದ್ದ ಯಾರೋ ಕಿಡಿಗೇಡಿಗಳು, ಮೊದಲು ಸ್ಕೂಟರ್‍ಗೆ ಪೆಟ್ರೋಲ್ ಸುರಿದು, ನಂತರ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ವಲಸಿಗರು ಸೊಸೆ ಇದ್ದಂತೆ, ಮನೆಯಲ್ಲಿ ಎಲ್ಲರ ವಿಶ್ವಾಸ ಗಳಿಸಬೇಕು: ಸುಧಾಕರ್

    ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರು ಎಂಬುದು ಗೊತ್ತಾಗಿಲ್ಲ. ಆದರೆ ಯಾರೋ ಸ್ಕೂಟರ್ ಮಾಲೀಕ ರವಿಗೆ ಆಗದವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರವಣಬೆಳಗೊಳದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಸಮಂತಾ, ನಾಗಚೈತನ್ಯ ವಿಚ್ಛೇದನ ಸ್ಟೋರಿಗೆ ಅಮೀರ್‌ ಖಾನ್‌ರನ್ನು ಎಳೆತಂದ ಕಂಗನಾ

  • ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಚಿಕ್ಕಬಳ್ಳಾಪುರ: ಮನೆಯ ಮಾಲೀಕ ಹಾಗೂ ಬಾಡಿಗೆದಾರನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆ ಮಾಲೀಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ನಗರದ ಎನ್.ಆರ್.ಬಡಾವಣೆಯ ನಿವೃತ್ತ ಇಂಜನಿಯರ್ 61 ವರ್ಷದ ಶಂಕರಾಚಾರಿ ಮೃತ ಮನೆ ಮಾಲೀಕ. ನಾರಾಯಣಸ್ವಾಮಿ ಕೊಲೆ ಮಾಡಿದ ಬಾಡಿಗೆದಾರ.

    ಮೃತ ಶಂಕರಾಚಾರಿಯವರದ್ದು ಒಂದು ಅಂತಸ್ತಿನ ಮನೆ ಇದ್ದು, ಕೆಳಭಾಗದ ಮನೆಯನ್ನು ನಾರಾಯಣಸ್ವಾಮಿ ಹಾಗೂ ಅರುಣಾ ದಂಪತಿಗೆ ಭೋಗ್ಯಕ್ಕೆ ನೀಡಿದ್ದರು. ಮನೆ ಮಾಲೀಕ ಶಂಕರಾಚಾರಿ ಮೊದಲ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಮನೆ ಮಾಲೀಕ ಶಂಕರಾಚಾರಿ ಹಾಗೂ ನಾರಾಯಣಸ್ವಾಮಿ ಕುಟುಂಬಗಳ ನಡುವಿನ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಸು ಮೂಡಿ ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿ ಭೋಗ್ಯದ ಅವಧಿ ಮುಗಿದ ಕೂಡಲೇ ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರಂತೆ.

    ಬೀಗದ ಕೈ ಸಂಬಂಧ ಕಲಾಟೆ
    ಮನೆಯ ಪಕ್ಕದಲ್ಲಿ ವಾಹನಗಳ ನಿಲುಗಡೆ ಶೆಡ್ ಇದ್ದು ಶೆಡ್ ನ ಬೀಗದ ಕೈ ಮನೆ ಮಾಲೀಕರ ಬಳಿ ಇತ್ತು. ಬೆಳಗ್ಗೆ ಎಷ್ಟು ಹೊತ್ತಾದರೂ ಶೆಡ್ ಬೀಗ ತೆಗೆಯಲ್ಲ ಬೀಗದ ಕೀ ಕೊಡುವಂತೆ ಶಂಕರಾಚಾರಿ ಜೊತೆ ನಾರಾಯಣಸ್ವಾಮಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆರು ಕೀ ಕೊಡಲ್ಲ ಅಂದಾಗ ಬಲವಂತವಾಗಿ ಕೀ ಕಸಿದುಕೊಳ್ಳಲು ಅರುಣಾ ಮುಂದಾಗಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರಾಚಾರಿ ಕೆಳಗೆ ಬಿದ್ದು, ತಲೆಗೆ ಗಾಯವಾಗಿದೆ.

    ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರಾಚಾರಿ ಮೃತಪಟ್ಟಿದ್ದಾರೆ. ಸದ್ಯ ಮನೆಯ ಬಾಡಿಗೆದಾರರಾದ ನಾರಾಯಣಸ್ವಾಮಿ ಹಾಗೂ ಅರುಣಾರನ್ನು ಕೊಲೆ ಪ್ರಕರಣದಡಿ ಚಿಂತಾಮಣಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಉಡುಪಿ: ರಾಜ್ಯಾದ್ಯಂತ ಅಕ್ಟೋಬರ್ 1ರಿಂದ ಥಿಯೇಟರ್‌ಗಳು ಓಪನ್ ಆಗಿ ಚಿತ್ರಗಳು ಪ್ರದರ್ಶನಕಾಣಲಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇನ್ನೊಂದು ವಾರ ಚಿತ್ರಮಂದಿರ ಓಪನ್ ಆಗಲ್ಲ. ಪಿತೃಪಕ್ಷ ಇರುವುದರಿಂದ ಥಿಯೇಟರ್‌ಗಳನ್ನು ಮತ್ತೆ ಓಪನ್ ಮಾಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಯಾವುದೇ ಚಿತ್ರಮಂದಿರಗಳನ್ನು ಓಪನ್ ಮಾಡದೆ ಇರಲು ತೀರ್ಮಾನಿಸಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಒಂದು ವಾರದ ನಂತರ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಉಡುಪಿಯ ಕಲ್ಪನಾ, ಅಲಂಕಾರ, ಆಶೀರ್ವಾದ್ ಸೇರಿದಂತೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಥಿಯೇಟರ್‌ಗಳು ಅಕ್ಟೋಬರ್ ಎಂಟರ ನಂತರ ತೆರೆದುಕೊಳ್ಳಲಿವೆ. ಇದನ್ನೂ ಓದಿ: ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್

    ಅಕ್ಟೋಬರ್ ಮೊದಲ ವಾರದಲ್ಲಿ ಪಿತೃಪಕ್ಷ ಇರುವುದರಿಂದ ಶುಭ ಕಾರ್ಯಗಳನ್ನು ಪಿತೃಪಕ್ಷದಲ್ಲಿ ಮಾಡೋದಿಲ್ಲ. 8 ನೇ ತಾರೀಖಿನಿಂದ ಥಿಯೇಟರ್‌ಗಳು ಓಪನ್ ಮಾಡಬೇಕು ಅಂದ್ರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಇದೆ. 5 ತಿಂಗಳಿಂದ ಥಿಯೇಟರ್ ಬಂದ್ ಇರುವುದರಿಂದ ಸೀಟುಗಳು ಕಾರ್ಪೆಟ್ ಗಳು, ಹಾಲ್, ಜಗಲಿ ಸ್ಕ್ರೀನ್ ಸೇರಿದಂತೆ ಥಿಯೇಟರ್‌ರೊಳಗೆ ಸಂಪೂರ್ಣ ಶುಚಿತ್ವ ಮಾಡಬೇಕಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭ 11 ತಿಂಗಳು ಥಿಯೇಟರ್ ಓಪನ್ ಆಗಿರಲಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ 40 ಸಾವಿರ ರುಪಾಯಿ ಖರ್ಚಾಗಿತ್ತು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಅಕ್ಟೋಬರ್ 1ಕ್ಕೆ ಯಾವುದು ದೊಡ್ಡ ಬಜೆಟ್‍ನ ಚಿತ್ರಗಳು, ದೊಡ್ಡ ಸ್ಟಾರ್ ಕಾಸ್ಟ ಚಿತ್ರಗಳು ರಿಲೀಸ್ ಇಲ್ಲ. ಪಿತೃಪಕ್ಷ ಈಗ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಒಳ್ಳೆ ದಿನಗಳು ಇರುವುದರಿಂದ ಆನಂತರ ಥಿಯೇಟರ್‌ಗಳನ್ನು ಓಪನ್ ಮಾಡುತ್ತೇವೆ. ಅನಾದಿಕಾಲದಿಂದ ಜನ ನಂಬಿಕೊಂಡು ಬಂದಿರುವುದರಿಂದ ದಿನಗಳು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ಸಮಸ್ಯೆಗಳು ಆಗದಿರಲಿ, ಒಳ್ಳೆ ಬ್ಯುಸಿನೆಸ್ ಆಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿ.ಎಸ್ ಹೊಳ್ಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ನಗರದ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿದು ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ.  ಇದನ್ನೂ ಓದಿ:ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    Metro Work

    ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಬಂದಿತ್ತು. ಆದರೆ ಈ ಒತ್ತಡಕ್ಕೆ ಮುಂಜಾನೆ 3 ಗಂಟೆಗೆ ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದು ಕೆಳಗೆ ಬಿದ್ದಿದೆ. ಇದರಿಂದ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    ಮಾಲೀಕ ಝಬೀ ಎಂಬವರಿಗೆ ಸೇರಿದ ಜಾಗ ಇದಾಗಿದ್ದು, ಘಟನೆ ಸಂಭವಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್