Tag: owner

  • ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ  ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.

    crime

    ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    Live Tv
    [brid partner=56869869 player=32851 video=960834 autoplay=true]

  • 14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    ಚಿಕ್ಕಮಗಳೂರು: ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ (Labour) ಮೇಲೆ ತೋಟದ ಮಾಲೀಕ (Owner) ಹಲ್ಲೆ (Assault) ಮಾಡಿದ್ದು, ಇದರಿಂದ 2 ತಿಂಗಳ ಗರ್ಭಿಣಿಗೆ (Pregnant) ಗರ್ಭಪಾತವಾಗಿದೆ (Miscarriage) ಎಂದು ಕೂಲಿ ಕಾರ್ಮಿಕರು ತೋಟದ ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿ, ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.

    ಪುರ ಗ್ರಾಮದ ಜಗದೀಶ್ ಎಂಬವರ ತೋಟದಲ್ಲಿ ಆಲ್ದೂರು ಸಮೀಪದ 6-7 ಕುಟುಂಬಗಳು ಕಳೆದ 4-5 ತಿಂಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ, ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕುಟುಂಬಗಳ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನು ಮುಟ್ಟಿ ಮಾಲೀಕರ ಬಳಿಯೂ ಹೋಗಿತ್ತು. ಈ ವೇಳೆ ಮಾಲೀಕ ಮಕ್ಕಳ ಜಗಳ ಸುಮ್ಮನರ‍್ರೋ ಎಂದು ಹೇಳಿ ಸುಮ್ಮನಾಗಿದ್ದರೆ ಮುಗಿದೋಗುತ್ತಿತ್ತು. ಸಾಹುಕಾರರು ದೊಡ್ಡವರಾಗುತ್ತಿದ್ದರು. ಆದರೆ ಕಾರ್ಮಿಕರು ದೂರು ಹೇಳುತ್ತಿದ್ದಂತೆ ಏಕಾಏಕಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್

    ತೋಟದ ಮಾಲೀಕ ಜಗದೀಶ್ ತಮಗೆ ಹೊಡೆದಿರುವುದು ಮಾತ್ರವಲ್ಲದೇ 6 ಕುಟುಂಬದ 14 ಕಾರ್ಮಿಕರನ್ನು ಒಂದು ದಿನವಿಡೀ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ನೊಂದ ಕಾರ್ಮಿಕರು ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಮಿಕರ ಬಳಿ ಇದ್ದ ಮೊಬೈಲ್ ಅನ್ನೂ ಕೂಡ ಮಾಲೀಕ ಕಿತ್ತುಕೊಂಡಿದ್ದು, ಗರ್ಭಿಣಿಯೊಬ್ಬಳು ತನ್ನ ಫೋನ್ ಅನ್ನು ಕೊಡಲು ಹಿಂದೇಟು ಹಾಕಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

    ಮಾಲೀಕ 2 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆಗೆ ಗರ್ಭಪಾತವಾಗಿರುವುದಾಗಿ ಆಕೆಯ ತಾಯಿ ಗೀತಾ ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕ ಜಗದೀಶ್ ಹಾಗೂ ತಿಲಕ್ ಎಂಬವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 504(ಶಾಂತಿ ಭಂಗವನ್ನು ಮಾಡಲು ಉದ್ದೇಶಿಸುವುದಕ್ಕಾಗಿ ಉದ್ದೇಶ ಪೂರ್ವಕ ಅವಮಾನ), 323(ಸ್ವಯಿಚ್ಛೆಯಿಂದ ಗಾಯವನ್ನುಂಟುಮಾಡಿದ್ದಕ್ಕೆ ದಂಡನೆ), 342(ಅಕ್ರಮ ಬಂಧನಕ್ಕಾಗಿ ದಂಡನೆ) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    Live Tv
    [brid partner=56869869 player=32851 video=960834 autoplay=true]

  • ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಲಕ್ನೋ: ಎಸ್‍ಯುವಿ (SUV) ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಪೆಟ್ರೋಲ್ ಪಂಪ್ ಮಾಲೀಕನನ್ನು (Petrol Pump Owner) ಅಪರಿಹರಿಸಲು ಯತ್ನಿಸಿರುವ ಘಟನೆ ವಾರಣಾಸಿಯಲ್ಲಿ (Varanasi) ನಡೆದಿದೆ.

    ಗುರುವಾರ ರಾತ್ರಿ ಶಿವಪುರಿಯ (Shivpuri) ತರ್ನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಹನಕ್ಕೆ ಇಂಧನ ತುಂಬಿದ ನಂತರ ಆರೋಪಿಗಳು ಪೆಟ್ರೋಲ್ ಪಂಪ್ ಮಾಲೀಕರನನ್ನು ಅಪಹರಿಸಲು ಪ್ರಯತ್ನಿಸಿದರು. ಆದರೆ ಸಿಬ್ಬಂದಿ ಮಧ್ಯಪ್ರವೇಶಿಸಿದ ಹಿನ್ನೆಲೆ ಅವರ ಕಿಡ್ನ್ಯಾಪ್‍ ಪ್ಲಾನ್ ವಿಫಲವಾಯಿತು.  ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    ವೀಡಿಯೋದಲ್ಲಿ ಆರೋಪಿಯೊರ್ವ ಪೆಟ್ರೋಲ್ ಪಂಪ್ ಮಾಲೀಕರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮತ್ತಿಬ್ಬರು ಎಸ್‍ಯುವಿ ಕಾರನ್ನು ಚಾಲನೆ ಮಾಡುವಂತೆ ಮತ್ತೊಬ್ಬನಿಗೆ ಹೇಳುತ್ತಿರುತ್ತಾನೆ. ವಾಹನ ಸಮೀಪಕ್ಕೆ ಬರುತ್ತಿದ್ದಂತೆ ಆರೋಪಿ, ಪೆಟ್ರೋಲ್ ಪಂಪ್ ಮಾಲೀಕನನ್ನು ಕಾರಿನೊಳಗೆ ತಳ್ಳಲು ಪ್ರಯತ್ನಿಸುತ್ತಾನೆ. ಇದನ್ನೂ ಓದಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು

    ನಂತರ ಭದ್ರತಾ ಸಿಬ್ಬಂದಿ, ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದಾಗ ಅಲ್ಲಿಯೇ ಇದ್ದ ಗ್ರಾಹಕರು ಜಮಾಯಿಸುತ್ತಾರೆ. ಈ ವೇಳೆ ಗಾಬರಿಗೊಂಡ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಿ ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೃತ ಹೋರಿಗೆ ತಿಥಿ ಕಾರ್ಯ – ಶರವೇಗದ ಓಟಗಾರ ಹಠವಾದಿಗೆ ವಿದಾಯ

    ಮೃತ ಹೋರಿಗೆ ತಿಥಿ ಕಾರ್ಯ – ಶರವೇಗದ ಓಟಗಾರ ಹಠವಾದಿಗೆ ವಿದಾಯ

    ಹಾವೇರಿ: ಈ ‘ಹಠವಾದಿ’ಗೆ ಮನೆಯವರು, ಊರಿನವರು ಮಾತ್ರವಲ್ಲ ಸಾಕಷ್ಟು ಅಭಿಮಾನಿಗಳ ದಂಡೇ ಇದೆ. ಶರವೇಗದ ಓಟಕ್ಕೆ ಹೆಸರಾಗಿದ್ದ ಹಠವಾದಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಇದೀಗ ಮನೆಯವರು ಆತನಿಗೆ ತಿಥಿಕಾರ್ಯ ನೆರವೇರಿಸಿ, ಊರಿನವರು ಮತ್ತು ಅಭಿಮಾನಿಗಳಿಗೆ ತಿಥಿ ಊಟ ಹಾಕಿದ್ರು.

    ಹೌದು. ಹಾವೇರಿ (Haveri) ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಸುರೇಶ ಸೋಮನಕಟ್ಟಿ ಎಂಬ ರೈತ 18 ವರ್ಷಗಳ ಹಿಂದೆ ಶಿವಮೊಗ್ಗದಿಂದ ಹೋರಿಯೊಂದನ್ನು ತಂದಿದ್ರು. ತಂದ ವರ್ಷವೇ ಹೋರಿಯನ್ನು ಹೋರಿ (Bull) ಹಬ್ಬದ ಅಖಾಡಕ್ಕೆ ಬಿಡೋಕೆ ಶುರು ಮಾಡಿದ್ರು. ಹೋರಿಯ ಗತ್ತು, ದವಲತ್ತು, ಅದರ ಗುಣಗಳನ್ನು ನೋಡಿ ಅದಕ್ಕೆ ಹಠವಾದಿ ಅಂತ ಹೆಸರಿಟ್ಟರು. ಅಲ್ಲಿಂದ ಶುರುವಾದ ಹಠವಾದಿಯ ಶರವೇಗದ ಓಟ ಬಹುಮಾನ ಬಾಚಿಕೊಳ್ತಿದ್ದ. ಹೀಗಿದ್ದ ಹೋರಿ ಹಬ್ಬದ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಹಠವಾದಿಯ ಮೃತಪಟ್ಟು ನೆನ್ನೆಗೆ 5 ದಿನಗಳು ಕಳೆದಿದ್ದರಿಂದ ಮನುಷ್ಯರಿಗೆ ತಿಥಿ ಕಾರ್ಯ ಮಾಡುವಂತೆ ಹಠವಾದಿ ಹೋರಿಗೂ ತಿಥಿ ಕಾರ್ಯ ನೆರವೇರಿಸಿದ್ರು. ಇದನ್ನೂ ಓದಿ: ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ’

    ಮನುಷ್ಯರು ಕಾಲವಾದಾಗ ತಿಥಿ ಕಾರ್ಯ ಮಾಡುತ್ತಾರೆ. ಅದೇ ರೀತಿ ಹಠವಾದಿ ಹೋರಿ ಮೃತಪಟ್ಟ 5 ದಿನಗಳಾಗಿದ್ದು, ಮಾಲೀಕ ನೆಚ್ಚಿನ ಹೋರಿಗೆ ತಿಥಿ ಕಾರ್ಯ ನೆರವೇರಿಸಿದ್ರು. ತರಹೇವಾರಿ ಹಣ್ಣುಗಳು, ಸಿಹಿ ತಿನಿಸುಗಳು ಇಟ್ಟು ಗ್ರಾಮದಲ್ಲಿನ ಸ್ವಾಮೀಜಿಯನ್ನು ಕರೆಸಿ ಪೂಜೆ ನೆರವೇರಿಸಿದರು. ಹಠವಾದಿ ಹೆಸರಿನ ಹೋರಿ ಮನೆಗೆ ಬಂದಾಗಿಂದ ಮನೆಯವರಿಗೆ ಸಾಕಷ್ಟು ಒಳ್ಳೆಯದಾಗಿತ್ತಂತೆ. ಜಮೀನು, ಸೈಟ್ ಕೂಡ ಖರೀದಿ ಮಾಡಿದ್ದಾರಂತೆ.

    ಹಾವೇರಿ, ದಾವಣಗೆರೆ, ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಹಬ್ಬದ ಅಖಾಡದಲ್ಲಿ ಹಠವಾದಿ ದೊಡ್ಡ ಹೆಸರು ಮಾಡಿದ್ದರಿಂದ ಅಭಿಮಾನಿಗಳು (Followers) ಹೋರಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ಹೋರಿಗೆ ಪೂಜೆ ಸಲ್ಲಿಸಿ, ಗೋಧಿ ಹೂಗ್ಗಿಯ ಊಟ ಸವಿದು ಮನೆಯತ್ತ ಹೆಜ್ಜೆ ಹಾಕಿದ್ರು.

    Live Tv
    [brid partner=56869869 player=32851 video=960834 autoplay=true]

  • ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ಗಾಂಧೀನಗರ: ನಾನ್ ವೆಜ್ ಊಟ ಮಾಡಲು ಹೋಟೆಲ್ ಬಂದ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪದಡಿ ಹೋಟೆಲ್ ಮಾಲೀಕನನ್ನು (Hotel owner) ಪೊಲೀಸರು ಬಂಧಿಸಿದ್ದಾರೆ.

    ರೆಸ್ಟೋರೆಂಟ್ ಮಾಲೀಕನ ಈ ಕೃತ್ಯದ ಬಗ್ಗೆ ತಿಳಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್ (Restaurant) ಮೇಲೆ ದಾಳಿ ನಡೆಸಿದ ಪೊಲೀಸರು ಫ್ರಿಡ್ಜ್‌ನಲ್ಲಿದ್ದ (Fridge) 60 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸೂರತ್‍ನ(Surat) ಲಾಲ್‍ಗೇಟ್ ಪೊಲೀಸ್ ಠಾಣೆಯಲ್ಲಿ (Police Station) ರೆಸ್ಟೋರೆಂಟ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

    ಹೊಡಿಬಂಗ್ಲಾ (Hodibangla) ಪ್ರದೇಶದಲ್ಲಿರುವ ಈ ನಾನ್‍ವೆಜ್ ರೆಸ್ಟೋರೆಂಟ್‍ನಲ್ಲಿ ಮಾಂಸಾಹಾರ (Non-veg) ಹೆಸರಿನಲ್ಲಿ ದನದ ಮಾಂಸ ಬಡಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯ (Hindu Organisations) ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ತನಿಖೆ ಆರಂಭಿಸಿ ದೃಢಪಡಿಸಿಕೊಂಡು, ಈ ವಿಚಾರವನ್ನು ಲಾಲ್‍ಗೇಟ್(Lalgate) ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಹೆಂಡತಿ ಮಕ್ಕಳು ಮಲಗಿದ್ದಾಗಲೇ ವ್ಯಕ್ತಿಯ ಬರ್ಬರ ಹತ್ಯೆ

    ಸೆಪ್ಟೆಂಬರ್ 11 ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಫ್ರಿಡ್ಜ್‌ನಲ್ಲಿ 6 ಚೀಲಗಳಲ್ಲಿ ಇರಿಸಲಾಗಿದ್ದ 60 ಕಿಲೋಗ್ರಾಂಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡರು. ನಂತರ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ತಮ್ಮ ಸಮ್ಮುಖದಲ್ಲಿಯೇ ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡು ವಿಧಿ ವೈಜ್ಞಾನಿಕ ಪ್ರಯೋಗಾಲಯಕ್ಕೆ (Forensic Scientific Laboratory) ಪೊಲೀಸರು ಕಳುಹಿಸಿದ್ದಾರೆ.

    ಸೆಪ್ಟೆಂಬರ್ 14 ರಂದು ಎಫ್‍ಎಸ್‍ಎಲ್ ವರದಿಯನ್ನು ಸ್ವೀಕರಿಸಿದ ನಂತರ, ಅದು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಬಳಿಕ ಲಾಲ್‍ಗೇಟ್ ಠಾಣೆ ಪೊಲೀಸರು (Lalgate police station) ಪ್ರಕರಣ ದಾಖಲಿಸಿ ರೆಸ್ಟೋರೆಂಟ್ ಮಾಲೀಕ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್ ನನ್ನು ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಇದೀಗ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್‍ಗೆ ದನದ ಮಾಂಸ ಪೂರೈಸುತ್ತಿದ್ದ ಮತ್ತೋರ್ವ ಆರೋಪಿ ಅನ್ಸಾರ್ ತಲೆ ಮರೆಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ಹುಬ್ಬಳ್ಳಿ ಕಾರ್ಖಾನೆ ಬ್ಲಾಸ್ಟ್: ಮಾಲೀಕ ಬಂಧನ

    ಹುಬ್ಬಳ್ಳಿ ಕಾರ್ಖಾನೆ ಬ್ಲಾಸ್ಟ್: ಮಾಲೀಕ ಬಂಧನ

    ಹುಬ್ಬಳ್ಳಿ: ನಗರದ ತಾರಿಹಾಳ ಕೈಗಾರಿಕಾ ವಲಯದಲ್ಲಿ ಬರ್ತ್‍ಡೆ ಸ್ಪಾರ್ಕ್ ತಯಾರಿಕಾ ಘಟಕ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಫ್ಯಾಕ್ಟರಿಯ ಮಾಲೀಕ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ.

    ಅಬ್ದುಲ್ ಖಾದರ ಶೇಖ್‌ ಅಲಿಯಾಸ ಶಿರಟ್ಟಿ ಪೊಲೀಸರಿಗೆ ಶರಣಾಗಿರುವ ಫ್ಯಾಕ್ಟರಿ ಮಾಲೀಕ. ಯಾವುದೇ ಇಲಾಖೆ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಫ್ಯಾಕ್ಟರಿ ತೆರೆದು ನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಅಬ್ದುಲ್ ಖಾದರ್ ಘಟನೆ ನಡೆದ ದಿನದಿಂದ ತಲೆ ಮರೆಸಿಕೊಂಡಿದ್ದ.

    ಮಾಲೀಕ ಶೀಘ್ರವಾಗಿ ಬಂಧಿಸುವಂತೆ ಸಾರ್ವಜನಿಕ ಜೊತೆಗೆ ಶಾಸಕರ ಮತ್ತು ಸಚಿವ ಒತ್ತಡ ಪೊಲೀಸರಿಗಿತ್ತು. ಹೀಗಾಗಿ ತಲೆ ಮರೆಸಿಕೊಂಡಿದ್ದ ಅಬ್ದುಲ್‍ಗಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮೂರು ತಂಡವಾಗಿ ಹುಡುಕಾಟ ನಡೆಸಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್

    ಈ ಬಗ್ಗೆ ಧಾರವಾಡ ಎಸ್‍ಪಿ ಲೋಕೇಶ್ ಪ್ರತಿಕ್ರಿಯೆ ನೀಡಿದ್ದು, ಕಳೆದ ವಾರ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ನಡೆದಿತ್ತು. ತನಿಖೆ ಮಾಡಿದಾಗ ಸುಮಾರು ಪರವಾನಿಗೆ ಇಲ್ಲದೇ ಕೆಮಿಕಲ್ಸ್ ಅಲ್ಲಿ ಇಡಲಾಗಿತ್ತು. ಕಾರ್ಮಿಕರ ಜೀವ ಹಾನಿ ಆಗುವಂತೆ ಕಾರ್ಖಾನೆ ನಡೆಸುತ್ತಿದ್ದರು. ಯಾವುದೇ ಸೆಫ್ಟಿ ಇರಲಿಲ್ಲ. ಇದರಿಂದಾಗಿ ಗಾಯಾಳುಗಳಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ: ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಫ್ಯಾಕ್ಟರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಸಹ ಮಾಲೀಕ ಪತ್ತೆಯಾಗಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಅನಧಿಕೃತವಾಗಿ ಫ್ಯಾಕ್ಟರಿ ಆರಂಭಿಸಿ 3 ಜೀವಗಳನ್ನು ಬಲಿಪಡೆದು, ಇದೀಗ ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದೆ. ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್

    ಮೃತ ವಿಜಯಲಕ್ಷ್ಮಿ ಪತಿ ವೀರಭದ್ರ ದೂರಿನ ಆಧಾರದ ಮೇಲೆ ಐಪಿಸಿ 286, 337, 338, 304, ಎಕ್ಸ್‌ಪ್ಲೋಸಿವ್ ಆ್ಯಕ್ಟ್ 1908 ಅಡಿ ಕೇಸ್ ದಾಖಲಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ್‌ನನ್ನು ಈಗಾಗಲೇ ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ

    ಘಟನೆ ನಡೆದು 4 ದಿನಗಳಾದರೂ ಪ್ರಕರಣದ ಪ್ರಮುಖ ಆರೋಪಿ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್ ಇನ್ನೂ ಬಂಧನವಾಗಿಲ್ಲ. ಹೀಗಾಗಿ ಮೃತರ ಕುಟುಂಬಸ್ಥರು, ಗಾಯಾಳುಗಳ ಕುಟುಂಬಸ್ಥರು ಸೇರಿ ಫ್ಯಾಕ್ಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನ್ನ ಹಾಕಿದ ಮನೆಗೆ ದ್ರೋಹ ಬಗೆದ  – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಅನ್ನ ಹಾಕಿದ ಮನೆಗೆ ದ್ರೋಹ ಬಗೆದ – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಬೆಂಗಳೂರು: ಪ್ರೇಯಸಿಯನ್ನು ಪಡೆಯಬೇಕೆಂಬ ವ್ಯಾಮೋಹಕ್ಕೆ ಸ್ನೇಹಿತರ ಮಾತು ಕೇಳಿ ಮಾಲೀಕರ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ವ್ಯಕ್ತಿಯೋರ್ವ ಜೈಲು ಪಾಲಾಗಿದ್ದಾನೆ.

    ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಅಂಕಲ್ ಒಬ್ಬ, ಸ್ನೇಹಿತರಿಬ್ಬರ ಮಾತು ಕೇಳಿ ಆಸರೆಕೊಟ್ಟು ಅನ್ನ ಹಾಕುತ್ತಿದ ಮನೆ ಮಾಲೀಕರಿಗೆ ಉಂಡೆನಾಮ ಹಾಕಲು ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪೆಕ್ಸೆ

    ಹೌದು ಆರೋಪಿ ರಾಜೇಶ್ ಯಾಲಕ್ಕಿ ಕುಮಾರಸ್ವಾಮಿ ಲೇಔಟ್‍ನಲ್ಲಿ ರಾಜೇಶ್ವರಿ ಅವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದನು. ಎಂಟು ವರ್ಷದಿಂದ ಆರೋಪಿ ರಾಜೇಶ್ ಅನ್ನು ಹತ್ತಿರದಿಂದ ನೋಡಿದ್ದ ಮನೆ ಮಾಲೀಕರು ಒಳ್ಳೆಯವನು ಎಂಬ ಕಾರಣಕ್ಕೆ ಮನೆಯಲ್ಲಿಯೇ ಜಾಗಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆರೋಪಿ ರಾಜೇಶ್‍ಗೆ ಈಗಾಗಲೇ ಮದುವೆ ಆಗಿತ್ತು. ಆದರೂ ಅಮೂಲ್ಯ ಎಂಬ ಯುವತಿಯ ಪ್ರೀತಿಯ ಬಲೆಗೆ ಬಿದ್ದಿದ್ದನು.

    ಆರೋಪಿ ರಾಜೇಶ್ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಸ್ನೇಹಿತರಾದ ಪರಮೇಶ್ವರ್ ಹಾಗೂ ಮೇಘನಾ ಬಳಿ ಹೇಳಿಕೊಂಡಿದ್ದ. ಹೀಗಾಗಿ ಆರೋಪಿಯ ವೀಕ್ನೆಸ್ ತಿಳಿದುಕೊಂಡ ಸ್ನೇಹಿತರು ನಿನಗೆ ಅಮೂಲ್ಯ ಜೊತೆಗೆ ಮದುವೆ ಮಾಡಿಸುತ್ತೇವೆ. ಮನೆ ಮಾಲೀಕರ ಮನೆಯಲ್ಲಿರುವ ಒಡವೆಗಳನ್ನು ತಂದುಕೊಡು ಎಂದು ಹೇಳಿದ್ದರು. ಇದನ್ನೂ ಓದಿ: ಕೃಷ್ಣೆಯಿಂದ ಬಸವಸಾಗರ ಡ್ಯಾಮ್‍ಗೆ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಾದಗಿರಿಯಲ್ಲಿ ಮುಳುಗಡೆ ಭೀತಿ

    ಹೀಗಾಗಿ ಪ್ರೇಯಸಿ ಅಮೂಲ್ಯಳನ್ನು ಪಡೆದೆ ತಿರಬೇಕು ಎಂಬ ಗುಂಗಲ್ಲಿ ರಾಜೇಶ್, ಸ್ನೇಹಿತರ ತಾಳಕ್ಕೆ ತಕ್ಕಂತೆ ಕುಣಿದು, ಮಾಲೀಕರ ಮನೆಯಲ್ಲಿರುವ ಚಿನ್ನಾಭರಣವನ್ನು ಒಂದೋದಾಗಿ ಎಗ್ಗರಿಸಿದ್ದಾನೆ. ನಂತರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಚಿನ್ನಭರಣ ಧರಿಸಲು ನೋಡಿದಾಗ ಒಡವೆ ಕಳ್ಳತನ ಆಗಿರುವುದು ಮಾಲೀಕರಿಗೆ ತಿಳಿದುಬಂದಿದೆ. ಕಳ್ಳ ರಾಜೇಶ್ ನನ್ನ ವಿಚಾರಿಸಿದಾಗ ಆರೋಪಿ ರಾಜೇಶ್ ನ ಮತ್ತೊಂದು ಮುಖವಾಡ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಗದಗ: ಊಟದ ಬಿಲ್ ಕೇಳಿದಕ್ಕೆ ಕುಡಿದ ಮತ್ತಿನಲ್ಲಿ 6 ಜನ ಪುಂಡರು ಡಾಬಾ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ನಡೆದಿದೆ.

    ಶ್ರೀಶೈಲ ಕಳ್ಳಿಮಠ ಎಂಬವರಿಗೆ ಸೇರಿದ ಲಕ್ಕಿ ಡಾಬಾ ಪೀಸ್, ಪೀಸ್ ಆಗಿದೆ. ಮುಶಿಗೇರಿ ಗ್ರಾಮದ ಅರವಿಂದ್ ಅಂಗಡಿ ಹಾಗೂ ಸ್ನೇಹಿತರು ಸೇರಿ ದಾಂಧಲೆ ಮಾಡಿದ್ದಾರೆ. ಅರವಿಂದ್ ಅಂಗಡಿ ಬಾಗಲಕೋಟೆ ನವನಗರ ಠಾಣೆ ಪ್ರೋಫೆಷನಲ್ ಪಿಎಸ್ ಆಗಿ ಕೆಲಸ ಮಾಡುತ್ತಿದ್ದು, ಇವರ ಜೊತೆ ಆರ್ಮಿ ಯುವಕರು ಸಹ ಇದ್ದರು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ರಜೆಗೆಂದು ಊರಿಗೆ ಬಂದಿದ್ದ ಅರವಿಂದ್ ಅಂಗಡಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಆರ್ಮಿ ಯುವಕ ಹಾಗೂ ಇತರೆ 6 ಜನ ಸ್ನೇಹಿತರೊಂದಿಗೆ ಊಟಕ್ಕಾಗಿ ಡಾಬಾಗೆ ಬಂದಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದಕ್ಕೆ ನಾವು ಯಾರು ಅಂತ ತಿಳಿದಿದೆಯಾ? ನಮ್ಮನ್ನೇ ಬಿಲ್ ಕೇಳ್ತಿಯಾ ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ ಖ್ಯಾತೆ ತೆಗೆದಿದ್ದಾರೆ.

    ನೂರಾರು ರೂಪಾಯಿ ಕಡಿಮೆ ಕೊಡಿ. ಆದರೆ ಬಿಲ್ ಕೊಡಿ ಅಂದಿದಕ್ಕೆ ಬಾಟಲ್‍ನಿಂದ ಮಾಲೀಕ ಶ್ರೀಶೈಲನ ತಲೆಗೆ ಹೊಡೆದಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗುತ್ತಿ ಮಾಲೀಕನನ್ನು ಅಲ್ಲಿಯೇ ಇದ್ದ ಕೆಲಸಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಡಾಬಾದಲ್ಲಿರುವ ಫ್ರಿಜ್, ಕೌಂಟರ್, ಕಬಾಡ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಅನೇಕ ಪೀಠೋಪಕರಣಗಳನ್ನು ಒಡೆದುಹಾಕಿ ವಿಕೃತಿ ಮೆರೆದಿದ್ದಾರೆ. ಇವರ ಅಟ್ಟಹಾಸಕ್ಕೆ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ನಲುಗಿಹೋಗಿದ್ದಾರೆ. ಈ ಎಲ್ಲಾ ವೀಡಿಯೋ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Live Tv
    [brid partner=56869869 player=32851 video=960834 autoplay=true]

  • ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ನವದೆಹಲಿ: ನೆರೆಹೊರೆಯವರ ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ನಾಯಿ ಹಾಗೂ ಮೂವರಿಗೆ ಕಬ್ಬಿಣದ ರಾಡ್‍ನಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಘಟನೆಯಲ್ಲಿ ನಾಯಿ ಹಾಗೂ ಮೂವರು ವ್ಯಕ್ತಿ ಗಾಯಗೊಂಡಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಸೋಮವಾರ ಮುಂಜಾನೆ ಧರ್ಮವೀರ್ ದಹಿಯಾ ಓಡಾಡುತ್ತಿರುವ ವೇಳೆ ನೆರೆಮನೆಯ ರಕ್ಷಿತ್ ಅವರು ಸಾಕಿದ್ದ ನಾಯಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳುತ್ತಿರುವುದರಿಂದ ಕೋಪಗೊಂಡ ಧರ್ಮವೀರ್ ದಹಿಯಾ ನಾಯಿಯ ಮೇಲೆ ರಾಡ್‍ನಿಂದ ಹೊಡೆದಿದ್ದಾನೆ.

    ಈ ವೇಳೆ ನಾಯಿಯನ್ನು ರಕ್ಷಿಸಲು ಬಂದ ನಾಯಿಯ ಮಾಲೀಕನ ಮೇಲೂ ರಾಡ್‍ನಿಂದ ಹಲ್ಲೆ ನಡೆಸಿದ್ದಾನೆ. ನಂತರ ಆತನನ್ನು ತಡೆಯಲು ಬಂದ ಮತ್ತೋರ್ವ ವ್ಯಕ್ತಿ ಕೈಯನ್ನು ಕಚ್ಚಿ, ತಲೆಗೆ ಹೊಡೆದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ಸದ್ಯ ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ನಾಯಿಯ ಮಾಲೀಕ ರಕ್ಷಿತ್ ಹೇಳಿಕೆಯ ಮೇರೆಗೆ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]