Tag: owner

  • ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಕರ್ನೂಲ್: ಮದುವೆಯಾಗು ಎಂದಿದ್ದಕ್ಕೆ ಗರ್ಭಿಣಿಯನ್ನ ಆಕೆಯ ಪ್ರಿಯತಮ ಕತ್ತು ಹಿಸುಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಡೋನ್ ಮಂಡಲ್ ನ ಎರಗುಂಟ್ಲಾದಲ್ಲಿ ನವೆಂಬರ್ 20ರಂದು ನಡೆದಿದೆ. ಮೃತ ಗರ್ಭಿಣಿಯನ್ನು ರಮಿಜಬಿ ಎಂದು ಗುರುತಿಸಲಾಗಿದ್ದು, ಈಕೆಯ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?: ಮೃತ ರಮಿಜಬಿಗೆ ಈ ಹಿಂದೆ ಮದುವೆಯಾಗಿದ್ದು, ತನ್ನ ಗಂಡನಿಂದ ವಿಚ್ಛೇದನ ಪಡೆದು, ಮಗ ಅಖಿಲ್ ಕುಮಾರ್ ಜೊತೆ ತಂದೆ-ತಾಯಿಯೊಂದಿಗೆ ವಾಸವಾಗಿದ್ದರು. ತವರು ಮನೆಯಲ್ಲಿ ವಾಸವಾಗಿದ್ದ ರಮಿಜಬಿಗೆ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ದೊರೆತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮಾಲೀಕನ ಮಗ ಶೇಖ್ ರಶೀದ್(22) ಜೊತೆ ಪ್ರೇಮಾಂಕುರವಾಗಿತ್ತು.

    ಕೆಲ ದಿನಗಳ ಬಳಿಕ ಅಂಗಡಿ ಮಾಲೀಕನ ಮಗ ಹಾಗೂ ನಾನು ಪ್ರೀತಿಸಿದ್ದು, ಆದ್ರೆ ಇದೀಗ ಆತ ತನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಹಿರಿಯರು ಮಧ್ಯಪ್ರವೇಶಿಸಿ ಪೊಲೀಸ್ ಕೇಸ್ ಇಲ್ಲದೆ ಮಾತುಕತೆ ಮೂಲಕ ಬಗೆಹರಿಸಿದ್ರು.

    ಹಿರಿಯರ ಜೊತೆ ಮಾತುಕತೆ ನಡೆಸಿದ ಬಳಿಕ ರಶೀದ್ ಆಕೆಯ ಜೊತೆ ಸಂಬಂಧ ಮುಂದುವರೆಸಿದ್ದ. ಪರಿಣಾಮ ರಮಿಜಬಿ ಗರ್ಭಿಣಿಯಾದ್ರು. ತಾನು ಗರ್ಭಿಣಿ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮಹಿಳೆ ಮತ್ತೆ ರಶೀದ್ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದರು. ಇದನ್ನೇ ಉಪಾಯವಾಗಿ ಬಳಸಿಕೊಂಡ ರಶೀದ್, ನಾವಿಬ್ಬರು ಖಂಡಿತವಾಗಿ ಚೆನ್ನಾಗಿ ಜೀವನ ನಡೆಸೋಣ. ಹೊಸ ಜೀವನ ಆರಂಭಿಸೋಣ ಅಂತೆಲ್ಲಾ ಪೀಠಿಕೆ ಹಾಕಿ ಕಳೆದ ತಿಂಗಳ 20ರಂದು ಆಕೆಯನ್ನು ಎರಗುಂಟ್ಲಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಅಲ್ಲೇ ಹೂತು ಹಾಕಿದ್ದಾನೆ.

    ಇತ್ತ ಮಗಳು ಕಾಣದಿರುವುದರಿಂದ ಆತಂಕಗೊಂಡ ತಾಯಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ, ರಶೀದ್‍ನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿ ತಪ್ಪೊಪ್ಪಿಕೊಂಡ ಒಂದು ವಾರದ ಹಿಂದೆ ಕೊಲೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹ ಹೊರತೆಗೆದು ಅಲ್ಲೇ ಶವಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಮಹಿಳೆ ಹೆತ್ತವರಾದ ಲಕ್ಷ್ಮೀ ದೇವಿ ಹಾಗೂ ಮಲ್ಲೇಶ್ ದಂಪತಿಗೆ ಹಸ್ತಾಂತರಿಸಿದ್ದಾರೆ.

  • ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ದಾವಣಗೆರೆ: ಜಿಎಸ್‍ ಟಿ ಹೆಸರಲ್ಲಿ ಉದ್ಯಮಿ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯವಾಗಿರೋ ಘಟನೆಯೊಂದು ನಡೆದಿರುವ ಬಗ್ಗೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ದಾವಣಗೆರೆಯ ಪೂಜಾರ್ ಪ್ರೋಸೆಸ್ ಕಂಪನಿಗೆ ಸೇರಿದ ಅಕೌಂಟ್ ನಿಂದ 24 ಲಕ್ಷ ರೂಪಾಯಿ ಹಣ ಮಾಯವಾಗಿದೆ. ಕಂಪನಿ ಮಾಲೀಕ ನಾಗರಾಜ್ ಕೆಲ ಚೆಕ್ ಗಳನ್ನು ಗ್ರಾಹಕರಿಗೆ ನೀಡಿದ್ರು. ಆದ್ರೆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಅಂತಾ ಗ್ರಾಹಕರು ಆರೋಪಿಸಿದ್ರು.

    ಮೊನ್ನೆ ಲಕ್ಷಾಂತರ ರೂಪಾಯಿ ಖಾತೆಯಲ್ಲಿತ್ತು. ಇದೀಗ ಝಿರೋ ಬ್ಯಾಲೆನ್ಸ್ ನಿಂದ ಆಘಾತಗೊಂಡು ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ರು. ನೀವು ಜಿಎಸ್ ಟಿ ಕಟ್ಟಿಲ್ಲ. ಅದಕ್ಕೆ ಬಹುಶಃ ಮುಟ್ಟುಗೋಲು ಹಾಕಿಕೊಂಡಿರಬಹುದು. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಅಂತಾ ಬ್ಯಾಂಕ್ ಆಫ್ ಇಂಡಿಯಾ ಸಮರ್ಥಿಸಿಕೊಂಡಿದೆ.

    ಈ ಕಡೆ ಜಿಎಸ್ ಟಿ ಆಫೀಸ್ ಗೆ ಹೋಗಿ ಕೇಳಿದ್ರೆ ನಾವು ಹಣ ಮುಟ್ಟುಗೋಲು ಹಾಕಿಕೊಳ್ಳುವಾಗ ಗ್ರಾಹಕರಿಗೆ ನೋಟಿಸ್ ಕೊಡ್ತಿವಿ. ಜಿಎಸ್ ಟಿ ಜಾರಿಗೆ ಬಂದಾಗಿನಿಂದ ಪ್ರತಿ ತಿಂಗಳು ತಪ್ಪದೆ ಜಿಎಸ್ ಟಿ ಕಟ್ಟಿಕೊಂಡು ಬಂದಿದ್ದಾರೆ. ಕಳೆದ ತಿಂಗಳು ಮಾತ್ರ ಸರ್ವರ್ ಬ್ಯುಸಿ ಇದ್ದುದರಿಂದ ಒಂದು ದಿನ ತಡವಾಯಿತು. ಅಲ್ಲದೆ 5 ಬಾರಿ ಪ್ರಯತ್ನ ಮಾಡಿದ್ರು ಟ್ರಾನ್ಷೇಷನ್ ಫೇಲ್ ಆಗುತ್ತಾ ಬಂದಿತು. ಕೊನೆಯ ಬಾರಿ ಕಳುಹಿಸಿದಾಗ ಸಕ್ಸಸ್ ಆಯ್ತು. ಆದ್ರೆ ಈಗ ನೋಡಿದ್ರೆ ನಮ್ಮ ಖಾತೆಯಲ್ಲಿ ಹಣವನ್ನು ಮುಟ್ಟುಗೋಲು ಆಗಿದೆ. ಇದು ಬ್ಯಾಂಕ್ ನವರ ಎಡವಟ್ಟೋ ಇಲ್ಲ ಜಿಎಸ್‍ಟಿ ಯವರ ಯಡವಟ್ಟೋ ಗೊತ್ತಿಲ್ಲ. ಬ್ಯಾಕ್ ನಲ್ಲಿ ಅಕೌಂಟ್ ಸ್ಟೇಟಸ್ ತೆಗೆಸಿದ್ರೆ ಜಿ ಎಸ್ ಟಿ ರಿಕವರಿ ಎಂದು ತೋರಿಸುತ್ತಿದೆ ಅಂತ ಹೇಳಿಕೆ ನೀಡಿದ್ದಾರೆ.

  • ಅರಮನೆ ನಗರಿಯಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆ

    ಅರಮನೆ ನಗರಿಯಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆ

    ಮೈಸೂರು: ಜನರೇ ಎಚ್ಚರ, ಮೈಸೂರಿನಲ್ಲಿ ಪ್ಲಾಸ್ಟಿಕ್ ಸಕ್ಕರೆ ಸರಬರಾಜಾಗುತ್ತಿದೆ. ಒಂದು ಕ್ಷಣ ಯಾಮಾರಿದರೂ ಪ್ಲಾಸ್ಟಿಕ್ ಸಕ್ಕರೆ ನಿಮ್ಮ ಹೊಟ್ಟೆ ಸೇರುತ್ತದೆ.

    ಮೈಸೂರು ಹೋಟೆಲೊಂದರ ಮಾಲೀಕ ಖರೀದಿಸಿದ್ದ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದೆ. ಖಿಲ್ಲೆ ಮೊಹಲ್ಲಾದಲ್ಲಿರುವ ಅನ್ನಪೂರ್ಣೇಶ್ವರಿ ಫುಡ್ ಪಾಯಿಂಟ್ ನ ಮಾಲೀಕ ಪ್ರಭುಸ್ವಾಮಿ ಸಂತೇಪೇಟೆಯ ಅಂಗಡಿಯಲ್ಲಿ ಖರೀದಿಸಿದ್ದ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಸಕ್ಕರೆ ದೊರೆತಿದೆ.

    ಹೋಟೆಲ್ ನಲ್ಲಿ ಎಂದಿನಂತೆ ಇಂದು ಕೂಡ ಟೀ ತಯಾರಿಸಲು ಪ್ರಭುಸ್ವಾಮಿ ಮುಂದಾದಾಗ ಎಷ್ಟೇ ಕುದಿಸಿದರೂ ಸಕ್ಕರೆ ಕರಗಲಿಲ್ಲ. ಇದನ್ನ ಕಂಡು ಕೂಲಂಕುಷವಾಗಿ ಪರಿಶೀಲಿಸಿದಾಗ ಇದು ಪ್ಲಾಸ್ಟಿಕ್ ಸಕ್ಕರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

  • 10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    ಕೊಪ್ಪಳ: ಎಂಆರ್ ಪಿ ದರಕ್ಕಿಂತ ಹೆಚ್ಚಿಗೆ ರೂ. ಪಡೆದು ಮದ್ಯ ಮಾರಾಟ ಮಾಡಿದ್ದಕ್ಕೆ ಗ್ರಾಹಕರು ಹಾಗೂ ಮಾರಾಟಗಾರ ನಡುವೆ ಮಾತಿನ ಚಕಮಕಿಯಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

    ಇಲ್ಲಿನ ಜುಲಾಯ್ ನಗರದಲ್ಲಿರೋ ಸರಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮಳಿಗೆಯಲ್ಲಿ ಎಂಆರ್ ಪಿ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಪಡೆದಿದ್ದಾರೆ. ಆಗ ಗ್ರಾಹಕರು ನೀವು ಎಂಆರ್ ಪಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಬೋರ್ಡ್ ಹಾಕಿದ್ದೀರಿ ಅಂತ ಜಗಳ ಆರಂಭಿಸಿದ್ದಾರೆ.

    ಆದ್ರೆ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದಾಗ ಮಳಿಗೆಯ ಮಾರಾಟಗಾರ ಶಾಸಕ ಇಕ್ಬಾಲ್ ಅನ್ಸಾರಿ, ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ 40 ರೂಪಾಯಿ ಹೆಚ್ಚಿಗೆ ಕೊಟ್ಟು ಕುಡಿಯುತ್ತೀರಿ.ನಮಗೆ 10 ರೂಪಾಯಿ ಕೊಡೋಕೆ ಕಿರಿಕ್ ಮಾಡುತ್ತೀರಿ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಕೂಡಾ ನಡೆದಿದೆ. ಬಳಿಕ ಗ್ರಾಹಕರು ಅಂಗಡಿ ಬಂದ್ ಮಾಡಿಸಿದ್ದಾರೆ.

  • 9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    ಬೆಂಗಳೂರು: ಲೀಸ್ ಗಿದ್ದವರ ಮನೆಗೆ ನುಗ್ಗಿ ಮನೆ ಮಾಲೀಕನ ಮಗ ಗರ್ಭಿಣಿ ಮೇಲೆ ಹಲ್ಲೆ ಮಾಡಿ ನಂತ್ರ ಮನೆ ಸಾಮಾನುಗಳನ್ನು ಹೊರಹಾಕಿದ ಘಟನೆಯೊಂದು ನಗರದಲ್ಲಿ ನಡೆದಿದೆ.

    ಈ ಘಟನೆ ಹೊಸಕೆರೆಹಳ್ಳಿಯ ಬಿಡಿಎ ಲೇಔಟ್ ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ, ಕೆಂಚಯ್ಯ, ಭವಾನಿ, ಚಲುವಯ್ಯ ಹಾಗೂ ಅನ್ನ ಪೂರ್ಣ ಇವರುಗಳನ್ನು ಬಂಧಿಸಿದ್ದಾರೆ.

    ಏನಿದು ಘಟನೆ?: ರವೀಶ್ ತನ್ನ ಪತ್ನಿ ಹಾಗೂ ಅಜ್ಜಿಯೊಂದಿಗೆ ಬಿಡಿಎ ಲೇ ಔಟ್ ನಲ್ಲಿ 10 ಲಕ್ಷ ರೂ. ಲೀಸ್ ಗೆ ಮನೆ ಪಡೆದಿದ್ದರು. ನಿನ್ನೆ 9 ತಿಂಗಳ ಗರ್ಭಿಣಿ ಲಕ್ಷ್ಮೀ ಹಾಗೂ ಆಕೆಯ ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ್ ತನ್ನ ಗ್ಯಾಂಗ್ ನೊಂದಿಗೆ ಮನೆಗೆ ನುಗ್ಗಿ ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮನೆಯ ಸಾಮಾನುಗಳನ್ನೆಲ್ಲಾ ಹೊರ ಹಾಕುವ ಮೂಲಕ ಗೂಂಡಾಗಿರಿ ಮೆರೆದಿದ್ದಾನೆ.

    ಹಲ್ಲೆಯಿಂದಾಗಿ ಲಕ್ಷ್ಮೀ ಮಾನಸಿಕವಾಗಿ ಕುಗ್ಗಿದ್ದು, ಗರ್ಭದಲ್ಲಿರೋ ಮಗುವಿನ ಹಾರ್ಟ್ ಬೀಟ್ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾನಿಂಗ್ ಮಾಡೋ ತನಕ ಏನನ್ನೂ ಹೇಳೋಕೆ ಆಗಲ್ಲ ಅಂತ ವೈದ್ಯರು ತಿಳಿಸಿದ್ದಾರೆ.

    ಘಟನೆ ಸಂಬಂಧ ರವೀಶ್ ಹಾಗೂ ಅವರ ಪತ್ನಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರೋ ಮನೆ ಮಾಲೀಕ ಬಸವೇಗೌಡನ ಪತ್ತೆಗೆ ಬಲೆ ಬೀಸಿದ್ದಾರೆ.

     

  • ಸಾಲ ವಾಪಸ್ ಕೊಡದ್ದಕ್ಕೆ ನಾಯಿ ಬಿಟ್ಟು ದಾಳಿ- ಕೊಡಗಿನಲ್ಲೊಬ್ಬ ಭಯಾನಕ ಮಾಲೀಕ

    ಸಾಲ ವಾಪಸ್ ಕೊಡದ್ದಕ್ಕೆ ನಾಯಿ ಬಿಟ್ಟು ದಾಳಿ- ಕೊಡಗಿನಲ್ಲೊಬ್ಬ ಭಯಾನಕ ಮಾಲೀಕ

    ಮಡಿಕೇರಿ: ಪಡೆದ ಸಾಲದ ಹಣ ಹಿಂದಿರುಗಿಸದ ತನ್ನ ಕಾರ್ಮಿಕನ ವಿರುದ್ಧ ಅಮಾನವೀಯವಾಗಿ ವರ್ತಿಸಿರೋ ಮಾಲೀಕನೋರ್ವ ಕಾರ್ಮಿಕನನ್ನು ಕಟ್ಟಿಹಾಕಿ ನಾಯಿಯಿಂದ ಕಚ್ಚಿಸಿರೋ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯ ಹರೀಶ್ ಎಂಬವರ ಮೇಲೆ ಮಾಲೀಕ ಕಿಶನ್ ನಾಯಿ ದಾಳಿ ನಡೆಸಿದ್ದಾರೆ.

    ಏನಿದು ಘಟನೆ?: ಕಳೆದ ಒಂದೂವರೆ ವರ್ಷಗಳಿಂದ ಹರೀಶ್ ರಾಜಾಪುರ ಗ್ರಾಮದ ಕಿಶನ್ ಎಂಬವರ ಮನೆಯಲ್ಲಿ ಕೂಲಿ ಕೆಲಸಮಾಡಿಕೊಂಡಿದ್ದರು. ತನ್ನ ಮಾಲೀಕನಿಂದ 4 ಸಾವಿರ ಹಣ ಸಾಲಪಡೆದಿದ್ದ ಹರೀಶ್ ಅದನ್ನು ವಾಪಸ್ ನೀಡದೆ ಕೆಲಸಕ್ಕೂ ಹೋಗದೆ ಕದ್ದು ಮುಚ್ಚಿ ಓಡಾಡುತ್ತಿದ್ದನಂತೆ. ಹಣ ನೀಡದೆ ಕೆಲಸಕ್ಕೂ ಬಾರದೆ ಇದ್ದ ಕಾರ್ಮಿಕನ ವಿರುದ್ಧ ತೀರಾ ಸಿಟ್ಟಿಗೆದ್ದಿದ್ದ ಮಾಲೀಕ ಕಿಶನ್ ಅಗಸ್ಟ್ 29ರಂದು ಬಾಳೆಲೆಯಲ್ಲಿ ಆತನನ್ನು ಕಂಡವನೆ ನೇರವಾಗಿ ತನ್ನ ಜೀಪಲ್ಲಿ ಕೂರಿಸಿಕೊಂಡು ಹೋಗಿ ಮನೆ ಬಳಿ ಅಮಾನವೀಯತೆ ಮೆರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಕಾರ್ಮಿಕ ಹರೀಶ್ ನನ್ನು ಕಟ್ಟಿಹಾಕಿ ತನ್ನ ಶೆಡ್ ನೊಳಗೆ ಕೂಡಿ ಹಾಕಿ ನಾಯಿಗಳನ್ನ ಛೂ ಬಿಟ್ಟು ಕಚ್ಚಿಸಿದ್ದಾನೆ. ಎರಡು ಮೂರು ನಾಯಿಗಳ ದಾಳಿಯಿಂದ ತಲೆ, ದೇಹ, ಕೈಕಾಲುಗಳು ತೀವ್ರ ಗಾಯಗಳಾಗರೋ ಹರೀಶ್ ಇದೀಗ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹರೀಶ್ ಆರೋಪಿಸಿದ್ದಾರೆ. ಆದ್ರೆ ಕಿಶನ್, `ತನಗೆ ಹರೀಶ್ 20 ಸಾವಿರ ಹಣ ಕೊಡೋಕೆ ಬಾಕಿಯಿದೆ. ಇಷ್ಟಿದ್ದರೂ ಆತ ಕದ್ದು ಮುಚ್ಚಿ ಓಡಾಡುತ್ತಿದ್ದ’ ಎಂದು ಪೊಲೀಸರಲ್ಲಿ ಹೇಳಿದ್ದಾರೆ.

    ಅದೇನೇ ಇರಲಿ ಮಾಲೀಕನ ಇಂತಹ ಅಮಾನವೀಯ ವರ್ತನೆ ಬಡ ಕಾರ್ಮಿಕನನ್ನು ಕಂಗಾಲುಗೊಳಿಸಿದ್ದು, ಇಷ್ಟೆಲ್ಲಾ ಆದ್ರೂ ನೊಂದ ಕಾರ್ಮಿಕನ ನೆರವಿಗೆ ಯಾವೊಂದು ಇಲಾಖೆಯೂ ಬಂದಿಲ್ಲ, ಆತನ ನೋವು ಕೇಳಿಲ್ಲ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರಷ್ಟೆ ಎಂದು ದಲಿತ ಸಂಘರ್ಷ ಸಮಿತಿ ಪ್ರಮುಖರು ಆರೋಪಿಸುತ್ತಿದ್ದು, ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.

    ಸದ್ಯ ಮಾಲೀಕ ಕಿಶನ್ ವಿರುದ್ಧ ಅಪಹರಣ, ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕಿಶನ್ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

  • ಊಟದ ಸಾಲಗಾರರ ಪಟ್ಟಿಯ ಕರಪತ್ರ ಹಂಚಿಕೆ: ಡಾಬಾ ಮಾಲೀಕನಿಗೆ ಥಳಿತ

    ಊಟದ ಸಾಲಗಾರರ ಪಟ್ಟಿಯ ಕರಪತ್ರ ಹಂಚಿಕೆ: ಡಾಬಾ ಮಾಲೀಕನಿಗೆ ಥಳಿತ

    ರಾಯಚೂರು: ಮಿನಿಡಾಬಾದಲ್ಲಿ ಊಟಮಾಡಿ ಉದ್ರಿ ಲೆಕ್ಕ ಬರೆಸಿ ಹಣಕೊಡದೆ ಸತಾಯಿಸುತ್ತಿದ್ದವರು ಡಾಬಾ ಮಾಲೀಕನಿಗೆ ಥಳಿಸಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ನಡೆದಿದೆ.

    ಮಿನಿಡಾಬಾ ಮಾಲೀಕ ಯಮನೂರಪ್ಪ ಬೇವೂರ್ ಹೆಸರಿನಲ್ಲಿ ಕಿಡಿಗೇಡಿಗಳು ಊಟ ಮಾಡಿ ದುಡ್ಡು ಕೊಡದವರ 54 ಮಂದಿ ಹೆಸರು ಇರುವ ಕರಪತ್ರ ಹಂಚಿದ್ದಾರೆ. ಯಮನೂರಪ್ಪನೇ ಕರಪತ್ರ ಹಂಚಿದ್ದಾನೆ ಅಂತ ತಿಳಿದು ಪಟ್ಟಿಯಲ್ಲಿ ಹೆಸರಿದ್ದವರು ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪನನ್ನ ಥಳಿಸಿದ್ದಾರೆ.

    ಕನಿಷ್ಠ ಓದಲು ಬಾರದ ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪ ಸಾಲ ಕೊಟ್ಟಿದ್ದು ಅಲ್ಲದೇ ಸಾಲಗಾರರಿಂದಲೇ ಥಳಿತಕ್ಕೆ ಒಳಗಾಗಿದ್ದಾರೆ.

    ಸಾಲಗಾರರ ಪಟ್ಟಿಯಲ್ಲಿ ಊರಿನ ಶ್ರೀಮಂತರು ಸೇರಿ ಎಲ್ಲಾ ವರ್ಗದ ಜನರ ಹೆಸರುಗಳಿವೆ. ತುರವಿಹಾಳ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ ಜನ ಅಲ್ಲೂ ಹಲ್ಲೆಗೆ ಮುಂದಾಗಿದ್ದಾರೆ. ಕೊನೆಗೆ ರಾಜಿ ಸಂಧಾನದ ಮೂಲಕ ಜಗಳ ಬಗೆಹರಿಸಲು ಪೊಲೀಸರು ಮುಂದಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.

  • ವಿಡಿಯೋ: ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ವಿಡಿಯೋ: ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಬಾರ್‍ನಲ್ಲಿ ಚೆನ್ನಾಗಿ ಕುಡಿದ ಪುಂಡರು ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಪಿಣ್ಯ 2ನೇ ಹಂತದ ಜೆಎಂಆರ್ ಬಾರ್ & ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ.

    ಮಚ್ಚು ಲಾಂಗ್‍ಗಳನ್ನು ಹಿಡಿದಿದ್ದ ಮೂವರು ಪುಂಡರು ದಾಂಧಲೆ ನಡೆಸಿದ್ದಾರೆ. ಬಾರ್ ಮಾಲೀಕರ ಮೇಲೆ ಮಚ್ಚು ಬೀಸಿದ್ದು ಮಾತ್ರವಲ್ಲದೇ ಬಾರ್‍ನಲ್ಲಿದ್ದ ಗ್ರಾಹಕರಿಗೂ ತೊಂದರೆ ನೀಡಿದ್ದಾರೆ.

     ಈ ಘಟನೆ ಮೇ 9 ರಂದು ನಡೆದಿದ್ದು, ಬಾರ್‍ನಲ್ಲಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಪುಂಡಾಟ ಸೆರೆಯಾಗಿದೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=5eKACMHIc5g

  • ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ.

    ವಾಷಿಂಗ್ಟನ್‍ನ ಬೆಲ್ಲಿಂಗ್‍ಹ್ಯಾಮ್ ನಿವಾಸಿಯಾದ 16 ವರ್ಷದ ಯುವತಿ ಮೇರಿ, ತನ್ನ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ 2 ವರ್ಷದ ಮುದ್ದು ನಾಯಿಮರಿ ಜೊತೆ ಐರಿಶ್ ಡ್ಯಾನ್ಸ್ ಸ್ಟೆಪ್ ಕಲಿಯುತ್ತಿರುವ ವಿಡಿಯೋವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯರೊಬ್ಬರು ಈ ನಾಯಿಗಾಗಿಯೇ ಕೊರಿಯಾಗ್ರಫಿ ಮಾಡಿದ ಸ್ಟೆಪ್ ಕಲಿಯುತ್ತಿದ್ದೇವೆ ಅಂತ ಮೇರಿ ತನ್ನ ಪೋಸ್ಟ್‍ನಲ್ಲಿ ಹೇಳಿದ್ದಾರೆ.

    ಸೀಕ್ರೆಟ್ ಎಂಬ ಹೆಸರಿನ ಈ ನಾಯಿ ಮಾಲಕಿಯೊಂದಿಗೆ ಯೋಗಾಭ್ಯಾಸ ಕೂಡ ಮಾಡಿರುವ ವೀಡಿಯೋಗಳನ್ನ ಮೇರಿ ಹಂಚಿಕೊಂಡಿದ್ದು ಈಗಾಗಲೇ ಈ ನಾಯಿಗೆ ಇನ್ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಮೇರಿಯ ಅಕೌಂಟನ್ನ ಫಾಲೋ ಮಾಡ್ತಿದ್ದಾರೆ.

    ಮೇರಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿ ಹೇಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನಿಟ್ಟು ಡ್ಯಾನ್ಸ್ ಕಲಿಯುತ್ತಿದೆ ಎಂಬುವುದನ್ನು ಗಮನಿಸಬಹುದು. ಈ ವೀಡಿಯೋವನ್ನು ಇದುವರೆಗೆ 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋಗೆ ಸಾಕಷ್ಟು ಜನ ಕಮೆಂಟ್‍ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಓ ಮೈ ಗಾಡ್ ನಾಯಿ ಎಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ ಅಂದ್ರೆ ಇನ್ನೂ ಕೆಲವರು ಇದು ನಿಜಕ್ಕೂ ಅದ್ಭುತವಾಗಿದೆ ಅಂತಾ ಹೇಳಿದ್ದಾರೆ.

    https://www.youtube.com/watch?v=ILmfmHevjBk