Tag: owner

  • 3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    ಬಾಗಲಕೋಟೆ: ಜಿಲ್ಲೆಯ ಕೌಲ್ ಬಜಾರ್ ನಲ್ಲಿ ಬಾಡಿಗೆದಾರನ ಮಗುವನ್ನು ಅಪಹರಿಸಿರುವ ಆರೋಪವೊಂದು ಮನೆ ಮಾಲೀಕನ ವಿರುದ್ಧ ಕೇಳಿ ಬಂದಿದೆ.

    3 ವರ್ಷದ ರಿತಿಕಾ ಹಾಳಕೇರಿ ನಾಪತ್ತೆಯಾದ ಬಾಲಕಿ. ಈಕೆಯನ್ನು 50 ವರ್ಷದ ಶರಣಬಸಪ್ಪ ಎಂಬ ಮನೆ ಮಾಲೀಕನೇ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

    ಶುಕ್ರವಾರ ಸಂಜೆ ಆಟ ಆಡಿಸುವ ನೆಪದಲ್ಲಿ ಬಾಲಕಿ ರಿತಿಕಾಳನ್ನು ಶರಣಬಸಪ್ಪ ಕಿಡ್ನಾಪ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಶರಣಬಸಪ್ಪ ಬಾಗಲಕೋಟೆಯ ಹಳೆ ಬಸ್ ನಿಲ್ದಾಣದಲ್ಲಿ ತನ್ನ ಬೈಕ್ ಇಟ್ಟು ಎಸ್ಕೇಪ್ ಆಗಿದ್ದಾಗಿ ತಿಳಿದುಬಂದಿದೆ.

    ಸುದ್ದಿ ತಿಳಿದ ಬಾಗಲಕೋಟೆ ನಗರಠಾಣೆ ಪೊಲೀಸರು ತಡರಾತ್ರಿಯಿಂದ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ಹುಡುಕಾಟ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇತ್ತ ಬಾಲಕಿ ರಿತಿಕಾ ಕಿಡ್ನಾಪ್ ಆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ರಿತಿಕಾಳ ತಾಯಿ ದೀಪಾ ಹಾಲಕೇರಿ ತಮ್ಮ ಒಂದು ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು ಮೊದಲನೇ ಮಗು ರಿತಿಕಾಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    ಅಥೆನ್ಸ್: 18 ತಿಂಗಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಿಸುತ್ತಿರುವ ಘಟನೆ ಗ್ರೀಕ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    40 ವರ್ಷದ ಮಾಲೀಕ ನವೆಂಬರ್ 9, 2017ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಸಿಮೆಂಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಾಲೀಕ ಮೃತಪಟ್ಟ ಸ್ಥಳದಿಂದ ಅವರ ಮನೆಗೆ 12 ಕಿ.ಮೀ ದೂರವಿದ್ದು, ಆ ನಾಯಿ ಇಲ್ಲಿಯವರೆಗೆ ಹೇಗೆ ಪ್ರಯಾಣಿಸಿತು ಎಂದು ಸಾರ್ವಜನಿಕರು ಹಾಗೂ ಪ್ರಾಣಿ ಸಂರಕ್ಷಣಾ ತಜ್ಞರು ಗೊಂದಲಕ್ಕೊಳಗಾಗಿದ್ದಾರೆ.

    ನಾಯಿ ತನ್ನ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಟ್ಟು ಬರಲು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ ಸ್ಥಳೀಯರು ನಾಯಿಗಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲದೆ ಆ ನಾಯಿಗಾಗಿ ಕಂಬಳಿ ನೀಡಿ ಪ್ರತಿನಿತ್ಯ ನೀರು ಹಾಗೂ ಆಹಾರವನ್ನು ನೀಡುತ್ತಿದ್ದಾರೆ.

    ಮಾಲೀಕ ಮೃತಪಟ್ಟ ಸ್ಥಳದಲ್ಲಿ ಕೆಲ ಕುಟುಂಬದವರು ನಾಯಿಯನ್ನು ದತ್ತು ಪಡೆಯಲು ಮುಂದಾದರು. ಆದರೆ ಆ ನಾಯಿ ಬಿಸಿಲು – ಚಳಿ ಏನೇ ಇದ್ದರೂ ಸಹ ಆ ಜಾಗವನ್ನು ಬಿಡಲು ನಿರಾಕರಿಸುತ್ತಿದೆ. ಸ್ಥಳೀಯರು ಆ ನಾಯಿಯನ್ನು ‘ಗ್ರೀಕ್ ಹಚಿಕೋ’ ಎಂದು ಕರೆಯಲು ಪ್ರಾರಂಭಿಸಿದ್ದಾರೆ.

    https://www.youtube.com/watch?time_continue=79&v=UMu_XL8Mhbg

  • 1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಚಿಕ್ಕಮಗಳೂರು: ತೋಟದಲ್ಲಿದ್ದ ಹಂಚಿನ ರಾಶಿಯಲ್ಲಿ ಆಶ್ರಯ ಪಡೆದಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಒಂದು ಗಂಟೆಯ ಕಾರ್ಯಚರಣೆ ಬಳಿಕ ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.

    ಥಾಮಸ್ ಎಂಬವರ ತೋಟದ ಮನೆಯ ಹಂಚಿನ ರಾಶಿಯಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಕಾಳಿಂಗ ಸರ್ಪ ವಾಸವಿತ್ತು. ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಕಾಳಿಂಗ ಸರ್ಪವನ್ನು ನೋಡುತ್ತಿದ್ದರು.

    ಆಗಾಗ ಹೊರ ಬರುತ್ತಿದ್ದ ಕಾಳಿಂಗ ಸರ್ಪವನ್ನು ಕಂಡು ಕೆಲಸಗಾರರು ಗಾಬರಿಗೊಂಡಿದ್ದರು. ಅಲ್ಲದೆ ತೋಟದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ತೋಟದ ಮಾಲೀಕ ಸ್ನೇಕ್ ಹರೀಂದ್ರಾಗೆ ವಿಷಯ ತಿಳಿಸಿದ್ದರು.

    ಈ ವಿಷಯ ತಿಳಿದ ಸ್ಥಳಕ್ಕೆ ಬಂದ ಹರೀಂದ್ರ, ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು, ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಕಿಡ್ನಿ ಮಾರಿ 3 ಲಕ್ಷ ರೂ. ಹೂಡಿದ್ರು- ಮಗ್ಳ ಮದ್ವೆಗೆ ಹಣವಿಲ್ಲದೆ ಮಹಿಳೆ ಕಣ್ಣೀರು

    ಕಿಡ್ನಿ ಮಾರಿ 3 ಲಕ್ಷ ರೂ. ಹೂಡಿದ್ರು- ಮಗ್ಳ ಮದ್ವೆಗೆ ಹಣವಿಲ್ಲದೆ ಮಹಿಳೆ ಕಣ್ಣೀರು

    ಬೆಂಗಳೂರು: ಸಾವಿರಾರು ಮಂದಿ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮನ್ಸೂರ್ ಖಾನ್ ಸಾಹುಕಾರ ಆಗಿದ್ದಾನೆ. ಐಎಂಎನಲ್ಲಿ ಹೂಡಿಕೆ ಮಾಡಿದ ಬಹುತೇಕ ಮಂದಿಯದು ಒಂದೊಂದು ರೀತಿಯ ಕರುಣಾಜನಕ ಕಥೆಯಿದ್ದು ಈಗ ಹಣವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

    ಆರ್.ಟಿ ನಗರದ 49 ವರ್ಷದ ಫರೀದಾ ಬೇಗ್ ಎಂಬವರು ತಮ್ಮ ಕಿಡ್ನಿ ಮಾರಿ, ಸಂಪಾದಿಸಿದ್ದ 3 ಲಕ್ಷ ಹಣ ಮನ್ಸೂರ್ ಖಾನ್ ಕಂಪನಿಯಲ್ಲಿ ಹೂಡಿದ್ದರು. ಫರೀದಾ ಬೇಗ್ ಮೂರು ವರ್ಷದ ಹಿಂದೆ ಸಂಬಂಧಿಕರೊಬ್ಬರಿಗೆ ಕಿಡ್ನಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೂರು ಲಕ್ಷ ಹಣ ಪಡೆದಿದ್ದರು.

    ಫರೀದಾ ಬೇಗ್ ಆ ಹಣವನ್ನು ಇಬ್ಬರು ಪುತ್ರಿಯರ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಪರಿಚಿತ ವ್ಯಕ್ತಿಯೊಬ್ಬ ಐಎಂಎ ಕಂಪನಿಯ ಬಗ್ಗೆ ಹೇಳಿ, ಮಾಸಿಕ 10 ಸಾವಿರ ಬರುತ್ತೆ ಎಂದಿದ್ದರು.

    ನಾನು ಹಣವನ್ನು ಹಣವನ್ನು ಐಎಂಇನಲ್ಲಿ ಹಾಕುವ ವೇಳೆ ಕಿಡ್ನಿ ಪಡೆದ ಮಹಿಳೆ, ಈ ರೀತಿ ದುಡ್ಡು ಹಾಕಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಮಗಳ ಮದುವೆ ಖರ್ಚಿಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು, ಈಗ ಪರದಾಡ್ತಿದ್ದೇನೆ ಎಂದು ಫರೀದಾ ಬೇಗ್ ಕಣ್ಣೀರು ಹಾಕುತ್ತಿದ್ದಾರೆ.

  • ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಬೆಂಗಳೂರು: ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ ಎಂದು ಸಚಿವ ಜಮೀರ್ ಖಾನ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್ ಬಳಿ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.

    ಜಮೀರ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, ‘ಐಎಂಎ ಜ್ಯುವೆಲ್ಸ್ ಮಾಲೀಕ ಜನಾಬ್ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸಂದೇಶ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮಾಧ್ಯಮಗಳ ಮೂಲಕ ನಾನು ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಮನ್ಸೂರ್ ಖಾನ್ ಬನ್ನಿ ನೀವು ಭಯಪಡಬೇಡಿ. ನಿಮ್ಮೊಂದಿಗೆ ನಾವೇದ್ದೇವೆ, ಈ ಸರ್ಕಾರವಿದೆ. ಆಗಿದ್ದು ಆಗಿಹೋಯ್ತು. ನೀವು ಆಡಿಯೋದಲ್ಲಿ ಹೇಳಿರುವುದು ಸತ್ಯವಾದ್ರೆ ಮುಖಾಮುಖಿಯಾಗಿ ಕುಳಿತುಕೊಳ್ಳಿ, ನಿಮ್ಮ ಜೊತೆ ನಾವೇದ್ದೇವೆ. ನೀವು ಯಾರಿಗೆ ದುಡ್ಡು ಕೊಟ್ಟಿದ್ದೀರಾ ಅದನ್ನ ಹೇಳಿ. ಆ ದುಡ್ಡನ್ನು ರಿಕವರಿ ಮಾಡೋಣ ಅದನ್ನು ಬಡವರಿಗೆ ಹಂಚೋಣ. ನೀವು ಯಾವ ರಾಜಕಾರಣಿಗೆ ದುಡ್ಡು ಕೊಟ್ಟಿದ್ದೀರ ಎನ್ನುವುದ್ದನ್ನು ಹೇಳಿ. ಅದನ್ನು ರಿಕವರಿ ಮಾಡೋಣ, ಬಡವರ ದುಡ್ಡನ್ನು ಬಡವರಿಗೆ ಹಂಚೋಣ. ಮನ್ಸೂರ್ ಖಾನ್ ಬಂದು ಹೇಳಿದ್ರೆ ಎಲ್ಲಾ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

    https://twitter.com/BZZameerAhmed/status/1138504249271312390

  • ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ವಿಜಯಪುರ: ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಪರಿಣಾಮ ಬೇಕರಿ ಮಾಲೀಕ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಮಾಧವರಾವ್ ಚೌಧರಿ(35) ಮೃತ ದುರ್ದೈವಿ. ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ ಈ ಬೇಕರಿ ಇದ್ದು, ಮಾಧವರಾವ್ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬೇಕರಿಯೊಳಗಿದ್ದ ದೀಪದಿಂದ ಬೇಕರಿಯೊಳಗೆ ಬೆಂಕಿ ತಗುಲಿದೆ.

    ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾಧವರಾವ್ ರಾತ್ರಿ ಪೂಜೆ ಮಾಡಿ, ದೀಪ ಹಚ್ಚಿಟ್ಟು ತಾನೂ ಬೇಕರಿಯಲ್ಲೇ ಮಲಗಿದ್ದರು. ಬೇಕರಿ ಒಳಗಡೆ ಲಾಕ್ ಮಾಡಿ ಮಲಗಿದ್ದ ಮಾಧವರಾವ್ ಸಜೀವ ದಹನವಾಗಿದ್ದಾರೆ. ಬೆಳಗ್ಗಿನ ಜಾವ ಬೇಕರಿಯಿಂದ ಹೊಗೆ ಬರುತ್ತಿದ್ದುದನ್ನು ಕಂಡು ಸ್ಥಳೀಯರು ದೌಡಾಯಿಸಿದ್ದಾರೆ.

    ಬಳಿಕ ಸ್ಥಳೀಯರು ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಹೊರ ತೆಗೆದರು. ಆದರೆ ಅಷ್ಟರಲ್ಲೇ ಮಾಧವರಾವ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿ ಮಾಧವರಾವ್ ಈ ಅಂಗಡಿಯನ್ನು ಬಾಡಿಗೆ ಪಡೆದಿದ್ದರು.

    ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಬೆಂಗಳೂರು: ಸೀಬರ್ಡ್ ಟ್ರಾವೆಲ್ಸ್ ಮಾಲೀಕ ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೇ ತಿಂಗಳ 14ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟ್ರಾವೆಲ್ಸ್ ನವರ ದುರ್ವತೆಯನ್ನು ಪ್ರಶ್ನಿಸಲು ಪ್ರಯಾಣಿಕ ಭರತ್ ಕುಮಾರ್ ತೆರಳಿದಾಗ ಮಾಲೀಕ ನಾಗರಾಜ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಏನಿದು ಘಟನೆ?:
    ಪ್ರಯಾಣಿಕರು ಸೀಬರ್ಡ್ ಬಸ್ ನಲ್ಲಿ ಅಥಣಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದರು. ಈ ವೇಳೆ ತುಮಕೂರು ಬಳಿ ಬಸ್ ಅಪಘಾತಕ್ಕೆ ತುತ್ತಾಗಿತ್ತು. ಘಟನೆಯಿಂದ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ಬಹುತೇಕ ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಇದರಿಂದ ದಿಕ್ಕು ತೋಚದೆ ಪ್ರಯಾಣಿಕರು ಸಹಾಯಕ್ಕಾಗಿ ಬೆಂಗಳೂರಿನ ಸೀಬರ್ಡ್ ಟ್ರಾವೆಲ್ಸ್ ಗೆ ಕರೆ ಮಾಡಿದ್ದಾರೆ.

    ಆದರೆ ಟ್ರಾವೆಲ್ಸ್ ನವರು ಯಾವುದೇ ಸಹಾಯ ಮಾಡದೇ ಟ್ಯಾಕ್ಸಿ ಮಾಡಿಕೊಂಡು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಯಾಣಿಕರಿಗೆ ಗಾಯಗಳಾಗಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಯಾಣಿಕ ಭರತ್ ಕುಮಾರ್ ಎಂಬವರು ಟ್ರಾವೆಲ್ಸ್ ನವರ ದುರ್ವತನೆಯನ್ನು ಪ್ರಶ್ನಿಸೋದಕ್ಕೆ ಬೆಂಗಳೂರಿನ ಸೀಬರ್ಡ್ ಕಚೇರಿಗೆ ತೆರಳಿದ್ದಾರೆ. ಆಗ ಟ್ರಾವೆಲ್ಸ್ ಮಾಲೀಕ ನಾಗರಾಜ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

    ಈ ಹಿನ್ನೆಲೆಯಲ್ಲಿ ಭರತ್ ಸೀಬರ್ಡ್ ಟ್ರಾವೆಲ್ಸ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಚೆನ್ನೈ: ನಾಯಿ ತನ್ನನ್ನು ಸಾಕಿದ ಮನೆಯವರಿಗೆ ಸದಾ ನಿಷ್ಠೆ, ಪ್ರಾಮಾಣಿಕವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮಿಳುನಾಡಿನ ತಂಜಾವೂರಿನಲ್ಲಿ ತನ್ನ ಮಾಲೀಕನ ಪ್ರಾಣ ಉಳಿಸಿ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

    ಈ ಘಟನೆ ತಂಜಾವೂರ್ ಜಿಲ್ಲೆಯ ವೆಂಗರಯಾನಕುಡಿಕಾಡುನಲ್ಲಿ ಶನಿವಾರ ಮುಂಜಾನೆ ನಡೆದಿದೆ. ನಾಡು ರಸ್ತೆ ನಿವಾಸಿ ರೈತ ನಟರಾಜನ್ (50) ಅವರು ತಮ್ಮ ಸಾಕು ನಾಯಿ ಪಪ್ಪಿಯೊಂದಿಗೆ ಮುಂಜಾನೆ ತೋಟಕ್ಕೆ ವಾಕಿಂಗ್ ಹೋಗಿದ್ದಾರೆ.

    ನಾನು ನನ್ನ ಪಪ್ಪಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ 5 ಅಡಿ ಉದ್ದದ ಹಾವು ನನ್ನ ಮುಂದೆ ಇತ್ತು. ಹಾವನ್ನು ನೋಡಿದ ನಾನು ಭಯದಿಂದ ನಿಂತುಕೊಂಡು ನಿಧಾನವಾಗಿ ಹಿಂದಕ್ಕೆ ಹಜ್ಜೆ ಹಾಕುತ್ತಿದ್ದೆ. ಆಗ ಅದು ನನಗೆ ಕಚ್ಚಲು ಮುಂದಾಯಿತು. ಅಷ್ಟರಲ್ಲಿ ನನ್ನ ಪಪ್ಪಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಸಾಯಿಸಿತು. ಆದರೆ ದಾಳಿ ವೇಳೆ ಹಾವು ಕೂಡ ಪಪ್ಪಿ ಮೇಲೆ ಅನೇಕ ಬಾರಿ ಕಚ್ಚಿತ್ತು. ಇದರಿಂದ ಪಪ್ಪಿ ಅಸ್ವಸ್ಥಗೊಂಡಿತ್ತು. ತಕ್ಷಣ ಪಪ್ಪಿಯನ್ನು ಎತ್ತಿಕೊಂಡು ನಾನು ಚಿಕಿತ್ಸೆಗಾಗಿ ಮನೆ ಕಡೆ ಓಡಿ ಹೋದೆ. ಆದರೆ ವೈದ್ಯರು ಬರುವಷ್ಟರಲ್ಲಿ ಪಪ್ಪಿ ಮೃತಪಟ್ಟಿತ್ತು ಎಂದು ನಟರಾಜನ್ ಹೇಳಿ ಕಣ್ಣೀರಾಕಿದ್ದಾರೆ.

    ನಟರಾಜನ್ ಸುಮಾರು ನಾಲ್ಕು ವರ್ಷದಿಂದ ಈ ನಾಯಿಯನ್ನು ಸಾಕುತ್ತಿದ್ದು, ಪಪ್ಪಿ ಅವರ ಕುಟುಂಬದಲ್ಲಿ ಒಬ್ಬನಾಗಿತ್ತು. ನಟರಾಜನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ನಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಎಲ್ಲೆ ಹೋದರು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

  • ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.

    ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.

    ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.

  • ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ದೇಶದ ಸಾಫ್ಟ್ ವೇರ್ ಹಬ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳೆಷ್ಟು ಸೇಫ್ ಎನ್ನುವ ಅನುಮಾನ ಮೂಡಿದೆ. ಏಕೆಂದರೆ ಕುಡಿಯೋಕೆ ಪಿಜಿಯಲ್ಲಿ ಜಾಗ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

    ನಗರದ ಬೊಮ್ಮನಹಳ್ಳಿಯಲ್ಲಿರುವ ಗ್ರೀನ್ ಹಿಲ್ಸ್ ಲೇಡಿಸ್ ಪಿಜಿ ಮುಂದೆ ನಡೆದಿದೆ. ಕಳೆದ ಏಪ್ರಿಲ್ 3ರಂದು, ತಡರಾತ್ರಿ 1 ಗಂಟೆ ಸುಮಾರಿಗೆ ಬಂದ ಐದಾರು ಜನರ ತಂಡ, ಪಿಜಿಯೊಳಗೆ ಎಣ್ಣೆ ಹೊಡೆಯೋಕೆ ಒಂದು ರೂಮ್ ಬೇಕು ಎಂದು ಮಾಲೀಕ ಅನಿಲ್ ಕುಮಾರ್‍ಗೆ ಕಾಲ್ ಮಾಡಿದರು.

    ಮನೆಯಿಂದ ಹೊರಗೆ ಬಂದ ಅನಿಲ್ ಇದು ಲೇಡಿಸ್ ಪಿಜಿ, ಇಲ್ಲಿ ಹಾಗೆಲ್ಲಾ ಒಳಗೆ ಬಿಡಲ್ಲ ಎಂದು ಹೇಳಿದರು. ಇದೇ ವಿಚಾರವಾಗಿ ಕೆಲಕಾಲ ಮಾತುಕತೆಯೂ ನಡೆಯಿತು. ಈ ಮಾತುಕತೆಯ ನಡುವೆ ಮಾಲೀಕ ಅನಿಲ್ ಕುಮಾರ್, ಮತ್ತೊಬ್ಬ ಮಾಲೀಕ ಭಾಸ್ಕರ್ ರೆಡ್ಡಿಗೆ ಬೊಮ್ಮನಹಳ್ಳಿ ಮಂಜು ಅಂಡ್ ಗ್ಯಾಂಗ್ ದೊಣ್ಣೆ ಹಾಗೂ ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಬೊಮ್ಮನಹಳ್ಳಿ ಸುತ್ತಮುತ್ತಲಿನ ಈ ಏರಿಯಾದಲ್ಲಿ ಸಿಕ್ಕಾಪಟ್ಟೆ ಪಿಜಿಗಳಿದ್ದು, ಇಲ್ಲಿನ ಕೆಲ ರೌಡಿಗಳು, ಎಲ್ಲಾ ಪಿಜಿಗಳಿಂದ ತಿಂಗಳಿಗೆ ಇಷ್ಟು ಹಣ ಎಂದು ಹಫ್ತಾ ವಸೂಲಿ ಮಾಡುತ್ತಾರೆ. ಈ ಹಣ ಕೊಡಲು ಪಿಜಿ ಮಾಲೀಕ ನಿರಾಕರಿಸಿದರು. ಇದೇ ಕಾರಣಕ್ಕೆ ಕುಡಿಯೋ ನೆಪ ಮಾಡ್ಕೊಂಡು ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಲೀಕ ಭಾಸ್ಕರ್ ರೆಡ್ಡಿ ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಬಂಡೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಾರ ಕಳೆದರೂ, ಇಲ್ಲಿಯವರೆಗೂ ಯಾರನ್ನು ಕೂಡ ಅರೆಸ್ಟ್ ಮಾಡಿಲ್ಲ. ಇಲ್ಲಿ ಹೀಗೆ ದಾಂಧಲೆ ಮೆರೆದ ಹುಡುಗರ ಕಡೆಗೆ ಸ್ಥಳೀಯ ಶಾಸಕರೊಬ್ಬರ ಬಲಗೈ ಬಂಟನ ಸಪೋರ್ಟ್ ಇದೆ. ಆ ಕಾರಣಕ್ಕೆ ಪೊಲೀಸರು, ಅರೆಸ್ಟ್ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

    ಹಲ್ಲೆಗೊಳಗಾದ ಇಬ್ಬರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.