Tag: owner

  • ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅರೆಸ್ಟ್

    ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅರೆಸ್ಟ್

    ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಯುವತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮೋನಿಕಾ (24) ಬಂಧಿತ ಆರೋಪಿ. ಮೇ 10 ರಂದು ಕೆಂಗೇರಿ (Woman Murder Case Kengeri)  ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆಯ ಕೊಲೆ ನಡೆದಿತ್ತು.

    ಪ್ರಕರಣದ ವಿವರ: ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳಾಗಿದ್ದು, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಈ ವೇಳೆ ಆಕೆ ಪ್ರಿಯಕರನನ್ನೇ ತನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಗಿಟ್ಟಿಸಿದ್ದಳು. ಆದ್ರೆ ಒಬ್ಬಂಟಿಯಾಗಿ ವಾಸವಿದ್ದ ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ. ಇದನ್ನೂ ಓದಿ: ಭಾಗಮಂಡಲ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ – ಗ್ರಾಮಗಳಿಗೆ ನೆರೆ ಭೀತಿ ಇಲ್ಲ

    ಇತ್ತ ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಜೊತೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಾಗಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕಾ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು. ದಿವ್ಯಾ ಅತ್ತೆ ಮಾವ ಸಹ ಬೆಳಗಾದ್ರೆ ಕೆಲಸಕ್ಕೆ ಹೋಗುತ್ತಿದ್ದರು.

    ದಿವ್ಯಾ ಹಾಗೂ ಆಕೆಯ 2 ವರ್ಷದ ಮಗು ಮಾತ್ರ ಮನೆಯಲ್ಲಿರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿದ್ದಳು. ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕಸಿದುಕೊಂಡುತ್ತಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದರು.

  • ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

    ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

    ಬೆಂಗಳೂರು: ಅಪರಿಚಿತರು ಬಂದಾಗ ಸಾಕು ನಾಯಿಗಳು ಬೊಗಳುವುದು ಸಾಮಾನ್ಯ. ಅಂತೆಯೇ ನಾಯಿ ಬೊಗಳಿದ್ದಕ್ಕೆ (Dog Barking) ಪಕ್ಕದ ಮನೆಯವನು ಕಿರಿಕ್ ಮಾಡಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ್ದಾರೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಪೊಲೀಸರನ್ನೇ ಅಟ್ಟಾಡಿಸಿದ ರೈತರು

    ನಡೆದಿದ್ದೇನು..?: ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಸಾಕುತ್ತಿದ್ದಾರೆ. ಮಾರ್ಚ್ 7 ರಂದು ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು. ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ಅಟ್ಯಾಕ್ ಮಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದೆ.

    ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು.

    ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ.

  • ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

    ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಲಕ್ನೋ: ಹರಿದ ಶೂ ಕೊಟ್ಟನೆಂದು ಆರೋಪಿಸಿ ಅಂಗಡಿ ಮಾಲೀಕನಿಗೆ ವಕೀಲರೊಬ್ಬರು ನೋಟಿಸ್‌ ಕಳುಹಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜ್ಞಾನೇಂದ್ರ ಭನ್ ತ್ರಿಪಾಠಿಯವರು ಸಲ್ಮಾನ್ ಹುಸೇನ್ ಎಂಬವರಿಗೆ ಈ ನೋಟಿಸ್‌ ಕಳುಹಿಸಿದ್ದಾರೆ.

    ನೋಟಿಸ್‌ನಲ್ಲೇನಿದೆ..?: ತಮ್ಮ ಅಂಗಡಿಯಿಂದ ಖರೀದಿಸಿದ್ದ ಬೂಟುಗಳು ಹರಿದಿದ್ದರಿಂದ ತನ್ನ ಸೋದರಳಿಯನ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದು, ನಾನು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು ಎಂದು ನೋಟಿಸ್‌ನಲ್ಲಿ ತ್ರಿಪಾಠಿ ತಿಳಿಸಿದ್ದಾರೆ.

    ಏನಿದು ಘಟನೆ..?: ವೃತ್ತಿಯಲ್ಲಿ ವಕೀಲರಾಗಿರುವ ತ್ರಿಪಾಠಿಯವರು ಕಳೆದ ವರ್ಷ ನವೆಂಬರ್ 21 ರಂದು ಸಲ್ಮಾನ್ ಹುಸೇನ್ ಅವರ ಅಂಗಡಿಯಿಂದ ಶೂಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆರು ತಿಂಗಳ ವಾರಂಟಿಯೊಂದಿಗೆ ಪ್ರತಿಷ್ಠಿತ ಬ್ರಾಂಡ್‌ನ ಶೂಗಳು ಎಂದು ಅಂಗಡಿಯವನು ಹೇಳಿದ್ದಾನೆ. ಆದರೆ ಈ ಶೂಗಳು ಕೆಲವೇ ದಿನಗಳಲ್ಲಿ ಹರಿದುಹೋಗಿವೆ. ಈ ಕಾರಣದಿಂದ ತನ್ನ ಸೋದರಳಿಯನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತ್ರಿಪಾಠಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್‌ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಅಂಗಡಿ ಮಾಲೀಕನಿಗೆ ನೋಟಿಸ್:‌ ಜನವರಿ 19ರಂದು ಅಂಗಡಿಯವರಿಗೆ ನೋಟಿಸ್ ಕಳುಹಿಸಿದ್ದು (Lawyer Given Notice To shop Owner), ಅದರಲ್ಲಿ ಚಿಕಿತ್ಸೆಗೆ 2,100 ರೂ. ಖರ್ಚಾಗಿದ್ದು, ಖರೀದಿಸಿದ ಶೂಗೆ 1,200 ರೂ. ನೀಡಿದ್ದೇನೆ. ಹೀಗಾಗಿ ನನಗೆ 10 ಸಾವಿರ ನೀಡುವಂತೆ ತ್ರಿಪಾಠಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅಂಗಡಿ ಮಾಲೀಕ ಪರಿಹಾರ ನೀಡಲು ವಿಫಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

    ಆರೋಪ ನಿರಾಕರಿಸಿದ ಮಾಲೀಕ: ಇತ್ತ ಅಂಗಡಿಯ ಮಾಲೀಕ ಸಲ್ಮಾನ್ ಹುಸೇನ್ ಅವರು ತ್ರಿಪಾಠಿ ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೆ ಅವರು ಪ್ರತಿಷ್ಠಿತ ಬ್ರಾಂಡ್‌ನ ಶೂಗಳನ್ನು ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ತ್ರಿಪಾಠಿಯವರು 50% ರಿಯಾಯಿತಿಯಲ್ಲಿ ಶೂಗಳನ್ನು ಖರೀದಿಸಿದ್ದಾರೆ. ಆರು ತಿಂಗಳೊಳಗೆ ಶೂನ ಅಡಿಭಾಗವು ಹಾನಿಗೊಳಗಾಗುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಏನೂ ಆಗಿಲ್ಲ. ಅವರು ಬಲವಂತವಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ನನ್ನ ಮೇಲೆ ಅವರು ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

  • ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಚಂಡೀಗಢ: ಕಳ್ಳನೆಂದು ಶಂಕಿಸಿ ಥಳಿಸಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣರಾದ ತೋಟದ ಮಾಲೀಕ (Owner)  ಹಾಗೂ ಆತನ ಸಹಾಯಕನನ್ನು (Servant) ಗುರುಗ್ರಾಮ್ (Gurugram) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಘಾಟಾ ಗ್ರಾಮದ ಅಂಕಿತ್ ಹಾಗೂ ಆತನ ಸಹಾಯಕ ಮಧ್ಯಪ್ರದೇಶದ (Madhya Pradesh) ಸಾಗರ್ ಮೂಲದವನು ಎಂದು ತಿಳಿದು ಬಂದಿದೆ. ಆರೋಪಿಗಳ ವಿಚಾರಣೆ ವೇಳೆ, ತೋಟದಲ್ಲಿ ಆಗಾಗ ಕಳ್ಳತನವಾಗುತ್ತಿತ್ತು. ಹಾಗಾಗಿ ನಾನು ಮತ್ತು ನನ್ನ ಸಹಾಯಕ ಕಾವಲು ಆರಂಭಿಸಿದ್ದೆವು ಎಂದು ಅಂಕಿತ್ ಹೇಳಿದ್ದಾನೆ.ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ

    ಮಂಗಳವಾರ ತಡರಾತ್ರಿ ತೋಟದ ಬಳಿಗೆ ಬಂದಿದ್ದ ಇಬ್ಬರನ್ನು ಕಳ್ಳರೆಂದು ಶಂಕಿಸಿ ಮನೆಯಲ್ಲಿ ಕೂಡಿ ಹಾಕಿ ಆರೋಪಿಗಳು ಥಳಿಸಿದ್ದರು. ಥಳಿತಕ್ಕೊಳಗಾದ ಒಬ್ಬ ಬುಧವಾರ ಬೆಳಗ್ಗೆ ಮೃತಪಟ್ಟಿದ್ದ. ಮೃತಪಟ್ಟ ವ್ಯಕ್ತಿಯನ್ನು ಬಂಗಾಳ ಮೂಲದ ರಫಿಗುಲ್ ಹಾಗೂ ಗಾಯಗೊಂಡಿರುವ ಮತ್ತೊಬ್ಬನನ್ನು ಇಸ್ರುದ್ದೀನ್ ಎಂದು ಗುರುತಿಸಲಾಗಿದೆ.

    ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

  • ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು

    ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು

    ಲಕ್ನೋ: ಮೆಡಿಕಲ್ ಸ್ಟೋರ್ (Medical Store) ಮಾಲಿಕನೊಬ್ಬ (Owner) ಶಸ್ತ್ರಚಿಕಿತ್ಸೆ (Surgery) ನಡೆಸಿದ ಪರಿಣಾಮ ರೋಗಿ (Patient) ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರಪ್ರದೇಶದ ಖೇಜೂರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ರೆಹಮಾನ್ ಬಂಧಿತ ವ್ಯಕ್ತಿ. ಈತ ವೃಷಣದಲ್ಲಿ ಉಂಟಾಗುವ ಊತದ ಸಮಸ್ಯೆಯಿಂದ ಬಳಲುತ್ತಿದ್ದ ಮುನ್ನಾ ಗುಪ್ತಾಗೆ ಶಸ್ತ್ರಚಿಕಿತ್ಸೆ ನಡೆಸಿದ್ದ. ಆದರೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮುನ್ನಾ ಗುಪ್ತಾನ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ಅದಾದ ಬಳಿಕ ಮುನ್ನಾ ಗುಪ್ತಾನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

    ಘಟನೆಗೆ ಸಂಬಂಧಿಸಿದಂತೆ ಗುಪ್ತಾ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮುನ್ನಾ ಗುಪ್ತಾನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಧು ಪತ್ನಿಗೆ ಸ್ತನ ಕ್ಯಾನ್ಸರ್- ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಭಾವುಕ ಪತ್ರ

  • ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    ನವದೆಹಲಿ: 25 ವರ್ಷದ ಯುವತಿಯನ್ನು (Woman) ಕೊಲೆ ಮಾಡಿ, ಆಕೆಯ ಶವವನ್ನು ಫ್ರಿಜರ್‌ನಲ್ಲಿ (Freezer) ಬಚ್ಚಿಟ್ಟ ಘಟನೆ ನೈಋತ್ಯ ದೆಹಲಿಯ ನಜಾಫ್‍ಗಢನಲ್ಲಿರುವ ಢಾಬಾದಲ್ಲಿ ನಡೆದಿದೆ.

    ಮೃತ ಯುವತಿಯನ್ನು ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಢಾಬಾ ಮಾಲೀಕ (Owner) 2-3 ದಿನಗಳ ಹಿಂದೆ ಯುವತಿಯನ್ನು ಕೊಂದು, ಆಕೆಯ ಶವವನ್ನು ಢಾಬಾದ ಫ್ರಿಜರ್‌ನಲ್ಲಿ ಇರಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

    crime

    ಢಾಬಾದ ಮಾಲೀಕ ಸಾಹಿಲ್ ಗೆಹ್ಲೋಟ್ ಹಾಗೂ ಯುವತಿ ಸಂಬಂಧದಲ್ಲಿದ್ದರು. ಆದರೆ ಗೆಹ್ಲೋಟ್‌ಗೆ ಬೇರೊಬ್ಬ ಯುವತಿಯ ಜತೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಿಳಿದ ಗೆಹ್ಲೋಟ್‍ಗೆ ಹಾಗೂ ಯುವತಿಗೆ ಜಗಳ ನಡೆದಿದೆ.

    ಈ ವೇಳೆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಕೋಪಗೊಂಡ ಗೆಹ್ಲೋಟ್ ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲೇ ವಿಜಯೇಂದ್ರ ಆ್ಯಕ್ಟಿವ್; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಢಾಬಾ ಮಾಲೀಕ ಸಾಹಿಲ್ ಗೆಹ್ಲೋಟ್‍ನನ್ನು ಬಂಧಿಸಿದ್ದಾರೆ. ಕಳೆದ 3-4 ದಿನಗಳ ಹಿಂದೆ ಯುವತಿಯನ್ನು ಹತ್ಯೆಗೈಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಶೈಕ್ಷಣಿಕ ಸಾಧನೆಗೆ ಮಠಗಳೇ ಕಾರಣ – ಸರ್ಕಾರದ ಕೆಲಸವನ್ನ ಮಠಗಳೇ ಮಾಡ್ತಿವೆ ಎಂದ ಸಿಎಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ (Rented House) ಪಡೆಯುವವರು ಹುಷಾರಾಗಿರಬೇಕು ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ. ಲಕ್ಷ ಲಕ್ಷ ಹಣ ಅಡ್ವಾನ್ಸ್ ಪಡೆದಿದ್ದ ಮನೆ ಮಾಲೀಕ (Owner) ನಾಪತ್ತೆ ಆಗಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.

    ಬಿಲ್ಡಿಂಗ್ ಮಾಲೀಕರಾದ ಸೈಯದ್ ಇತ್ನೈನ್, ಸೈಯದ್ ಅಬ್ಬಾಸ್ ಎಸ್ಕೇಪ್ ಆದ ಮಾಲೀಕರು. ಆರ್.ಟಿ ನಗರದಲ್ಲಿ 3 ಕುಟುಂಬಗಳು, 10 ಲಕ್ಷ, 15 ಲಕ್ಷ, 12 ಲಕ್ಷ ಅಡ್ವಾನ್ಸ್ ಕೊಟ್ಟು ಲೀಸ್‍ಗೆ ಮನೆಯಲ್ಲಿದ್ದಾರೆ. ಈ 3 ಕುಟುಂಬಗಳು ಕಳೆದ ನಾಲ್ಕೈದು ವರ್ಷಗಳಿಂದ ಲೀಸ್‍ಗೆ ಇದ್ದಾರೆ. ಆದರೆ ಮನೆ ಮಾಲೀಕರು ಮಾತ್ರ ಎಲ್‍ಐಸಿ ಫೈನಾನ್ಸ್‌ನಲ್ಲಿ, ಈ ಬಿಲ್ಡಿಂಗ್ ಮೇಲೆ ಸಾಲ ಪಡೆದು, ಫೈನಾನ್ಸ್ ಅವರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

    ಇದೀಗ ಮನೆಗೆ ನೋಟಿಸ್ ಕೊಟ್ಟಿರುವ ಫೈನಾನ್ಸ್ ಕಂಪನಿ, ಹಣ ಕಟ್ಟದಿದ್ದರೇ ಬಿಲ್ಡಿಂಗ್‍ನ ವಶಪಡಿಸಿಕೊಳ್ಳುದಾಗಿ ಎಚ್ಚರಿಸಿದ್ದಾರೆ. ಇದರಿಂದ ಬಾಡಿಗೆದಾರರು ಹೆದರಿದ್ದು, ನಾವು ಅಡ್ವಾನ್ಸ್ ಹಣ ಕೊಟ್ಟು, ಬೀದಿಗೆ ಬರಬೇಕಾಗುತ್ತದೆ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

    ಸದ್ಯ ಸಾಲ ಸೂಲ ಮಾಡಿ, ಲಕ್ಷ ಲಕ್ಷ ಹಣ ಅಡ್ವಾನ್ಸ್ ಕೊಟ್ಟವರು ಇದೀಗ ಕಣ್ಣೀರು ಹಾಕುತ್ತಿದ್ದು, ಫೈನಾನ್ಸ್‌ನವರು ನಮ್ಮನ್ನ ಮನೆಯಿಂದ ಹೊರ ಹಾಕಿದರೇ, ನಮ್ ಗತಿ ಏನ್ ಅಂತ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಮನೆ ಮಾಲೀಕರ ವಿರುದ್ಧ ಬಾಡಿಗೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್‌ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಹಾಗೆ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಕು ಇರಿದ

    ಚಹಾಗೆ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಕು ಇರಿದ

    ತಿರುವನಂತಪುರಂ: ಚಹಾಕ್ಕೆ (Tea) ಸಕ್ಕರೆ (Sugar) ಹಾಕಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ (Hotel) ಮಾಲೀಕನಿಗೆ (Owner) ಚಾಕು ಇರಿದ ಘಟನೆ ಕೇರಳದ ಮಲಪ್ಪುರಂನ ತಾನೂರ್‌ನಲ್ಲಿ ನಡೆದಿದೆ.

    ಆರೋಪಿಯನ್ನು ಸುಬೈರ್ ಎಂದು ಗುರುತಿಸಲಾಗಿದ್ದು, ಈತ ತನೂರಿನ ಟಿಎ ಹೋಟೆಲ್‌ಗೆ ಚಹಾ ಕುಡಿಯಲು ಹೋಗಿದ್ದ. ಈ ವೇಳೆ ಹೋಟೆಲ್ ಸಿಬ್ಬಂದಿ ನೀಡಿದ್ದ ಚಹಾದಲ್ಲಿ ಸಕ್ಕರೆ ಸ್ವಲ್ಪ ಕಡಿಮೆ ಇತ್ತು. ಇದರಿಂದಾಗಿ ಸುಬೈರ್ ಹೋಟೆಲ್ ಮಾಲೀಕ ಮನಾಫ್‍ನೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಮನಾಫ್‍ಗೆ ಸುಬೈರ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಮಹಿಳಾ ಕಾರ್ಯಕರ್ತೆಯರು – ಇಬ್ಬರ ಬಂಧನ

    ತಕ್ಷಣ ಅಲ್ಲಿದ್ದ ಸಿಬ್ಬಂದಿ ಮನಾಫ್‍ನನ್ನು ಕೊಯಿಕ್ಕೋಡ್‍ನಲ್ಲಿರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮನಾಫ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡುಮ ಸುವೈರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ- ಜ. 9ಕ್ಕೆ ಅಧಿಕೃತ ಘೋಷಣೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    -ಹಣದ ಬ್ಯಾಗ್‍ನೊಂದಿಗೆ ರಾಜ್ಯಾದ್ಯಾಂತ ತೀರ್ಥಯಾತ್ರೆ
    -ಕಂತೆ ಕಂತೆ ನೋಟುಗಳೇ ಈತನ ತಲೆದಿಂಬು..!

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನನ್ನ ಕಾರಿನ ಚಾಲಕ 75 ಲಕ್ಷ ರೂಪಾಯಿ ಹಣದ ಸಮೇತ, ಕಾರು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ನಗರದ ಬ್ಯಾಟರಾಯನಪುರ (Batarayanpura) ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

    ಹೌದು, ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಹರೀಶ್ ಅವರ ಕಾರು ಚಾಲಕ ಸಂತೋಷ್ ಜೊತೆಗೆ ನಗರದ ಕಡೆಗೆ ಹೊರಟಿದ್ದರು. ಹೊರಡುವ ವೇಳೆ ವ್ಯವಹಾರ ಸಂಬಂಧ 75 ಲಕ್ಷ ರೂ. ಹಣದ ಬ್ಯಾಗ್ ಅನ್ನು ಕಾರಿನಲ್ಲಿಟ್ಟುಕೊಂಡು ಹೊರಟಿದ್ದರು. ಕಾರು ಬ್ಯಾಟರಾಯನಪುರದ ಬಳಿ ಬರುತ್ತಿದ್ದಂತೆ, ಮಾಲೀಕ ಹರೀಶ್ ಸಿಗರೇಟು ಸೇದುವುದಕ್ಕೆ ಅಂತಾ ಗಾಡಿ ನಿಲ್ಲಿಸಲು ಹೇಳಿ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

    ಇದೇ ಸಮಯಕ್ಕಾಗಿ ಕಾಯುತ್ತಿದ್ದ ಚಾಲಕ ಸಂತೋಷ್, ಕ್ಷಣಮಾತ್ರದಲ್ಲೇ ಪೋರ್ಡ್ ಕಾರಿನ ಸಮೇತ 75 ಲಕ್ಷ ಹಣ ರೂ. ದೋಚಿ ಎಸ್ಕೇಪ್ ಆಗಿದ್ದಾನೆ. ಹೀಗೆ ಹಣ ಜೊತೆಗೆ ಎಸ್ಕೇಪ್ ಆದ ಚಾಲಕ, ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಸುತ್ತಾಡಿ, ಯಾರಿಗೂ ಅನುಮಾನ ಬಾರದಂತೆ, ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ತಿಂದುಕೊಂಡು, ದೇವಸ್ಥಾನದ ಅವರಣದಲ್ಲೇ 75 ಲಕ್ಷ ರೂ. ಹಣದ ಬ್ಯಾಗ್ ತಲೆದಿಂಬು ಮಾಡಿಕೊಂಡು, ಯಾರಿಗೂ ಅನುಮಾನ ಬಾರದಂತೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಆರೋಪಿಯನ್ನು ಶೃಂಗೇರಿಯಲ್ಲಿ ಬಂಧಿಸಿ 72 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಾಮಾನ್ಯವಾಗಿ ಹಣ ಕಳೆದುಕೊಂಡ ಮರುಕ್ಷಣವೇ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ 75 ಲಕ್ಷ ರೂ. ಹಣವನ್ನು ತನ್ನ ಡ್ರೈವರ್ ಕಳ್ಳತನ ಮಾಡಿ ಎಸ್ಕೇಪ್ ಆಗಿರುವುದು ಕಣ್ಣಾರೆ ನೋಡಿದರೂ ಕೂಡ, ಉದ್ಯಮಿ ಹರೀಶ್ ಪೊಲೀಸರಿಗೆ ದೂರು ನೀಡಿಲ್ಲ. ಘಟನೆ ನಡೆದು 20 ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ ಹಿಂದಿನ ಸತ್ಯವೇನು ಎಂಬ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಉದ್ಯಮಿ ಮಾತ್ರ 75 ಲಕ್ಷ ರೂ. ಹಣದ ಮೂಲದ ಬಗ್ಗೆ ಸೂಕ್ತ ಉತ್ತರ ನೀಡಿಲ್ಲ. ಬದಲಿದೆ, ಡ್ರೈವರ್‌ನ ಪತ್ತೆ ಮಾಡುವುದಕ್ಕೆ ತಾನೇ ಪ್ರಯತ್ನ ಪಟ್ಟು ಕೊನೆಗೆ ದೂರು ನೀಡಿದ್ದಾರೆ. ಹೀಗಾಗಿ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲು ಐಟಿ ಇಲಾಖೆಗೆ ಬ್ಯಾಟರಾಯನಪುರ ಪೊಲೀಸರು, ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಯುವಜನತೆಗೆ ಕೇಂದ್ರ ಸರ್ಕಾರ 10 ಲಕ್ಷ ಉದ್ಯೋಗ ಒದಗಿಸುವ ಕೆಲಸ ಮಾಡ್ತಿದೆ – ಮೋದಿ

    ಪೊಲೀಸರಿಗೆ ಇರುವ ಮಾಹಿತಿ ಪ್ರಕಾರ, 75 ಲಕ್ಷ ರೂ. ಬ್ಲಾಕ್ ಮನಿ ಇರಬಹುದು ಅಂತಾ ಶಂಕಿಸಲಾಗಿದೆ. ಈ ವಿಚಾರ ತಿಳಿದೇ ಡ್ರೈವರ್ ಹಣವನ್ನು ದೋಚಿದ್ದ ಎನ್ನಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು, ನಂತವಷ್ಟೇ ಈ ಹೈಡ್ರಾಮದ ಆಸಲಿ ಕಹಾನಿ ತಿಳಿಯಬೇಕಿದೆ.

    Live Tv
    [brid partner=56869869 player=32851 video=960834 autoplay=true]